Tag: ರೇಣುಕಾಸ್ವಾಮಿ

  • ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಅಂತಾ ಆರೋಪಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ರು. ಕಳೆದ ಎರಡೂವರೆ ತಿಂಗಳಿನಿಂದ ವಾದ ಪ್ರತಿವಾದ ಅಲಿಸಿದ್ದ ಕೋರ್ಟ್, ದರ್ಶನ್ ಗೆ ಜೈಲಿನ ಮ್ಯಾನ್ಯುಯಲ್ (Jail Manual) ಪ್ರಕಾರ ಕನಿಷ್ಠ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಇಂದು ಈ ಸಂಬಂಧ ಅದೇಶ ನೀಡಿದ್ದು, ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ನೀಡಿಕೆಗೆ ಸೂಚನೆ ನೀಡಿದೆ.

    ತಿಂಗಳಿಗೆ ಒಂದು ಸಾರಿ ಹೊಸ ಕಂಬಳಿ ನೀಡುವಂತೆ ಸೂಚಿಸಿ ಇದೇ 31 ರಂದು ಚಾರ್ಜಸ್‌ಫ್ರೇಮ್‌ ಮಾಡೋದಾಗಿ ಸೂಚಿಸಿದೆ. ಇದೇ ವೇಳೆ ಮಾತಾಡಿದ ದರ್ಶನ್ ಪರ ವಕೀಲ ಸುನೀಲ್, ಇದು ಬರೇ ಹಾಸಿಗೆ ತಲೆ ದಿಂಬು ವಿಚಾರ ಅಲ್ಲ. ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಬೇಕು ಅಂತಾ ಕೋರ್ಟ್ ಅದೇಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಅದೇಶ ಉಲ್ಲಂಘನೆ ಮಾಡಿದ್ರು. ಹಾಗಾಗಿ ಕೋರ್ಟ್ ಇವತ್ತು ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ ಅಂತ ತಿಳಿಸಿದ್ರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಜೈಲು ಮ್ಯಾನ್ಯುಯಲ್ ಫಾಲೋ ಮಾಡಿ, ಕನಿಷ್ಠ ಸೌಲಭ್ಯ ನೀಡಿ ಅಂತಾ ಆದೇಶ ನೀಡಿದೆ. ದರ್ಶನ್‌ಗೆ ಹಳೇ ಚಾದರ್ ನೀಡಲಾಗಿದೆ. ತಿಂಗಳಿಗೆ ಒಮ್ಮೆ ಅದನ್ನು ಬದಲಾವಣೆ ಮಾಡಿ ಅಂತಾ ಹೇಳಿದೆ ಎಂದರು.

    ಇನ್ನೂ ಸರ್ಕಾರಿ ಪರ ವಕೀಲರು, ಟ್ರಯಲ್ ತಡ ಮಾಡ್ತಿದ್ದಾರೆ ಅಂತಾ ಆರೋಪ ಮಾಡಿದ್ರು. ಇದು ಸತ್ಯಕ್ಕೆ ದೂರವಾದ ವಿಚಾರ, ಸುಪ್ರೀಂ ಕೋರ್ಟ್ ಅದಷ್ಟು ಬೇಗ ಟ್ರಯಲ್ ಶುರು ಮಾಡಿ ಅಂತಾ ಹೇಳಿದೆ. ಹೊರತುಪಡಿಸಿ, ಇಷ್ಟೇ ದಿನದಲ್ಲಿ ಟ್ರಯಲ್ ಮಾಡಿ ಅಂತಾ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

  • ದರ್ಶನ್‌ಗೆ 40 ನಿಮಿಷ ಜೈಲಿನಲ್ಲಿ ವಾಕಿಂಗ್‌ಗೆ ಅವಕಾಶ

    ದರ್ಶನ್‌ಗೆ 40 ನಿಮಿಷ ಜೈಲಿನಲ್ಲಿ ವಾಕಿಂಗ್‌ಗೆ ಅವಕಾಶ

    – ದರ್ಶನ್‌ ವಾಕ್‌ ಮಾಡೋವಾಗ ಬೇರೆಯವರು ವಾಕ್‌ ಮಾಡುವಂತಿಲ್ಲ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ (Darshan) ಅವರಿಗೆ ಬೆಳಗ್ಗೆ ಮತ್ತು ಸಂಜೆ 40 ನಿಮಿಷ ವಾಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ.

    ಬ್ಯಾರಕ್‌ನ ಹೊರಭಾಗದ ಕಾರಿಡಾರ್‌ನಲ್ಲಿ ವಾಕ್ ಮಾಡಲು ಅನುಮತಿ ಸಿಕ್ಕಿದೆ. ಈ ಸಮಯದಲ್ಲಿ ಬೇರೆ ವಿಚಾರಣಾಧೀನಾ ಕೈದಿಗಳು ವಾಕ್ ಮಾಡುವಂತಿಲ್ಲ. ದರ್ಶನ್ ವಾಕ್ ಮುಗಿದ ನಂತರವಷ್ಟೇ ಇತರರು ವಾಕ್ ಮಾಡಬಹುದಾಗಿದೆ. ಇದನ್ನೂ ಓದಿ: ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

     

    ವಾಕಿಂಗ್ ಸೇರಿದಂತೆ ಸೆಲ್‌ನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಸಿಸಿಟಿವಿಯಲ್ಲಿ ದಾಖಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ ದರ್ಶನ್ ಸೆಲ್ ಬಳಿ ಕೆಲಸ ಮಾಡುವ ಎಲ್ಲಾ15 ಸಿಬ್ಬಂದಿ  ಕಡ್ಡಾಯವಾಗಿ ಬಾಡಿ ವಾರ್ನ್ ಕ್ಯಾಮರಾ ಹಾಕಿಕೊಂಡು ಕೆಲಸ ಮಾಡಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ.

    ಜೈಲಿನಲ್ಲಿರುವ ನಟ ದರ್ಶನ್‌ಗೆ ಕನಿಷ್ಠ ಸವಲತ್ತುಗಳನ್ನು ನೀಡುವಂತೆ ಕೋರ್ಟ್ ಸೂಚಿಸಿತ್ತು. ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ನನಗೆ ವಿಷ ಕೊಟ್ಟು ಬಿಡಿ. ನನಗೆ ಜೈಲು ಜೀವನ ಸಾಕಾಗಿದೆ. ಬಿಸಿಲು ನೋಡಿ ತಿಂಗಳಾಗಿದೆ. ಫಂಗಸ್ ಸಮಸ್ಯೆ ಆಗುತ್ತಿದೆ ಎಂದು ದರ್ಶನ್ ಗೋಗರೆದಿದ್ದರು.

  • ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

    ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ನಟ ದರ್ಶನ್‌ರನ್ನು (Darshan) ಭದ್ರತಾ ದೃಷ್ಟಿಯಿಂದ ಬಳ್ಳಾರಿ ಜೈಲಿಗೆ (Ballari Jail) ಶಿಫ್ಟ್ ಮಾಡುವಂತೆ ಹಾಗೂ ಹೆಚ್ಚುವರಿ ಹಾಸಿಗೆ, ದಿಂಬಿನ ಮನವಿ ಅರ್ಜಿ ವಿಚಾರಣೆಯನ್ನು ಸೆಷನ್ಸ್‌ ಕೋರ್ಟ್‌ ಬುಧವಾರ ಸಂಜೆ 4 ಗಂಟೆಗೆ ಮುಂದೂಡಿಕೆ ಮಾಡಿದೆ.

    ದರ್ಶನ್‌ರನ್ನು ಬಳ್ಳಾರಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ ಸರ್ಕಾರಿ ವಕೀಲರ ವಾದಕ್ಕೆ ದರ್ಶನ್ ಪರ ವಕೀಲ ಸಂದೀಪ್ ಚೌಟಾ ಆಕ್ಷೇಪಣೆ ಸಲ್ಲಿಸಿದರು. ಶೀಘ್ರದಲ್ಲೇ ಟ್ರಯಲ್ ಪ್ರಾರಂಭವಾಗಲಿದ್ದು ಪದೇ ಪದೇ ಬಳ್ಳಾರಿಯಿಂದ ಆರೋಪಿ ಕರೆತರಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದನ್ನೂ ಓದಿ: ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ – ಜಾಮೀನು ಅರ್ಜಿ ವಜಾ

    5 ಸಾವಿರ ಪುಟಗಳ ಚಾರ್ಜ್ ಶೀಟ್‌ ಸಲ್ಲಿಕೆಯಾಗಿದ್ದು ಪ್ರಕರಣದಲ್ಲಿ 272 ಸಾಕ್ಷಿಗಳಿದ್ದಾರೆ. ಹೀಗಿರುವಾಗ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ (Video Conference) ವಿಚಾರಣೆ ಹೇಗೆ ಮಾಡಲಾಗುತ್ತದೆ? ವಿಡಿಯೋ ಕಾನ್ಫರೆನ್ಸ್‌ ಮೂಲಕ ವರ್ಷಾನುಗಟ್ಟಲೇ ಮಾಡಲು ಸಾಧ್ಯವಿಲ್ಲ. ಕೆಲವು ಅಂಶಗಳನ್ನು ಕೋರ್ಟ್‌ನಲ್ಲಿ ಕೇಳಬೇಕಾಗುತ್ತದೆ ಎಂದು ಹೇಳಿದರು.

    ಜೈಲಾಧಿಕಾರಿಗಳು ಮ್ಯಾನ್ಯುಯಲ್ ಪ್ರಕಾರ ಎಲ್ಲವನ್ನೂ ನೀಡಲಾಗಿದೆ. ಒಬ್ಬರಿಗೆ ಕೊಟ್ಟರೆ 3 ಸಾವಿರ ಆರೋಪಿಗಳಿಗೂ ನೀಡಬೇಕಾಗುತ್ತದೆ ಎಂದು ಮತ್ತೋರ್ವ ವಕೀಲ ಸುನೀಲ್ ಕೂಡ ವಾದಿಸಿದರು. ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಲು ಮುಂದಾದಾಗ ಕೋರ್ಟ್ ನಾಳೆ ಸಂಜೆ 4 ಗಂಟೆಗೆ ವಿಚಾರಣೆ ಮುಂದೂಡಿಕೆ ಮಾಡಿತು.

  • ನಟ ದರ್ಶನ್ ಬಳ್ಳಾರಿ ಜೈಲಿನ ಶಿಫ್ಟ್ ಭವಿಷ್ಯ ಇಂದು ನಿರ್ಧಾರ

    ನಟ ದರ್ಶನ್ ಬಳ್ಳಾರಿ ಜೈಲಿನ ಶಿಫ್ಟ್ ಭವಿಷ್ಯ ಇಂದು ನಿರ್ಧಾರ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ (Darshan) ಸೇರಿದಂತೆ ಐವರು ಆರೋಪಿಗಳ ಜೈಲು ಸ್ಥಳಾಂತರ ಕೋರಿರುವ ಅರ್ಜಿ ಇಂದು (ಶನಿವಾರ) ವಿಚಾರಣೆಗೆ ಬರಲಿದೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಂದ ಬೇರೆ ಜೈಲುಗಳಿಗೆ ಸ್ಥಳಾಂತರ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಸಿಸಿಎಚ್ 57ನೇ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

    ಆರೋಪಿಗಳು ಜಾಮೀನು ಪಡೆಯುವಾಗ ಯಾವ ಯಾವ ಜೈಲಿನಲ್ಲಿ ಇದ್ದರೋ ಅದೇ ಜೈಲಿಗೆ ಶಿಫ್ಟ್ ಮಾಡಬೇಕು. ಜೈಲಿನ ಭದ್ರತೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಇಂದು ಆರೋಪಿಗಳ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆಯಾಗಲಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರ ಮಾಡದಂತೆ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ದರ್ಶನ್‌ ನೋಡಲು ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ

    ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್‌ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಪ್ರದೂಷ್ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಉಳಿದ ನಾಲ್ವರು ಆರೋಪಿಗಳ ಪರ ಇಂದು ಆಕ್ಷೇಪಣೆ ಸಲ್ಲಿಕೆಯಾಗಲಿದೆ.

    ಶೀಘ್ರದಲ್ಲೇ ಟ್ರಯಲ್ ಶುರುವಾಗಲಿದ್ದು, ಟ್ರಯಲ್ ಶುರುವಾದಲ್ಲಿ ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಬೇಕು. ಬಳ್ಳಾರಿ ಮತ್ತು ಇತರೆ ಜೈಲುಗಳಿಗೆ ಶಿಫ್ಟ್ ಮಾಡಿದರೆ ಕರೆ ತರುವುದು ಕಷ್ಟವಾಗುತ್ತೆ. ಆದ್ದರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಿಸುವಂತೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡನೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

  • ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

    ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

    ರೇಣುಕಾಸ್ವಾಮಿ (Renukaswamy) ಕೊಲೆ ಆರೋಪಿ ದರ್ಶನ್ (Darshan) ಸದ್ಯಕ್ಕೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದಾರೆ. ಸೆಕ್ಯೂರಿಟಿ ಕಾರಣದಿಂದ ಅವರನ್ನ ಬಳ್ಳಾರಿ ಜೈಲಿಗೆ (Ballari Jail) ಕಳುಹಿಸಲು ಈಗಾಗಲೇ ನ್ಯಾಯಾಲಯಕ್ಕೆ ಜೈಲಧಿಕಾರಿಗಳು ಮನವಿ ಮಾಡಿಕೊಂಡಿದ್ದರು.

    ಶನಿವಾರ (ಆಗಸ್ಟ್ 23) ವಿಚಾರಣೆ ನಡೆದಿದ್ದು ಆಕ್ಷೇಪಣೆ ಅರ್ಜಿ ಸಲ್ಲಿಸೋದಕ್ಕೂ ಆರೋಪಿ ಪರ ವಕೀಲರಿಗೆ ಕೋರ್ಟ್ ಅವಕಾಶ ನೀಡಿತ್ತು. ಇದೀಗ ಶನಿವಾರ ನಡೆದ ವಿಚಾರಣೆಯಲ್ಲಿ ಬೇರೆ ಜೈಲಿಗೆ ದರ್ಶನ್ ವರ್ಗಾವಣೆ ವಿಚಾರವನ್ನು ನ್ಯಾಯಾಲಯವು ಮುಂದೂಡಿಕೆ ಮಾಡಿದೆ. ದರ್ಶನ್ ಪರ ವಕೀಲರು ಸಮಯಾವಕಾಶ ಕೇಳಿದ್ದು ಇದೇ ಆಗಸ್ಟ್ 30ಕ್ಕೆ ವರ್ಗಾವಣೆ ಕುರಿತ ವಿಚಾರಣೆ ನಡೆಯಲಿದೆ.

    ಕೊಲೆ ಆರೋಪಿಗಳಾದ ದರ್ಶನ್, ಪವಿತ್ರಾ ಹಾಗೂ ಒಟ್ಟೂ ಏಳು ಆರೋಪಿಗಳನ್ನು 57ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ಹಾಜರಾಗಿದ್ದರು.

     

    ಕೋರ್ಟ್ ಹಾಲ್ ನಂ 64ರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸಲಾಗಿತ್ತು. ಪ್ರದೂಷ್ ಪರ ವಕೀಲರಿಂದ ಮಾತ್ರ ವರ್ಗಾವಣೆಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿದೆ. ಇನ್ನುಳಿದ ಆರೋಪಿಗಳ ಪರವಾಗಿ ಆಗಸ್ಟ್ 30ರ ವರೆಗೆ ವಕೀಲರು ಸಮಯಾವಕಾಶ ಕೇಳಿಕೊಂಡಿದ್ದರು. ಹೀಗಾಗಿ ಅಲ್ಲಿಯವರೆಗೂ ಆರೋಪಿಗಳು ಪರಪ್ಪನ ಅಗ್ರಹಾರದಲ್ಲೇ ಇರ್ತಾರೆ. ಜೊತೆಗೆ ಆರೋಪಿಗಳ ನ್ಯಾಯಾಂಗ ಬಂಧನವೂ ಸಪ್ಟೆಂಬರ್ 9ರ ತನಕವೂ ವಿಸ್ತರಣೆ ಆಗಿದೆ. ಇದನ್ನೂ ಓದಿ: ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ತಿರುಗೇಟು: ಪುಷ್ಪಮ್ಮ ಹೇಳಿದ್ದೇನು?

    ಪವಿತ್ರಾ ಗೌಡ ಪರ ವಕೀಲರಿಂದ ಸ್ಯಾಟುಚರಿ(ಶಾಸನ ಬದ್ಧ) ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಚಾರ್ಜ್ಶೀಟ್ ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಬಿಎನ್‌ಎಸ್‌ಎಸ್ ಅಡಿಯಲ್ಲಿ ಮಾಡಬೇಕಿತ್ತು. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಪವಿತ್ರಾ ಪರ ವಕೀಲ ಬಾಲನ್ ಮನವಿ ಮಾಡಿದ್ದಾರೆ.

    ಈ ವಿಚಾರಣೆಯನ್ನೂ ಆಗಸ್ಟ್ 30ಕ್ಕೆ ನ್ಯಾಯಾಲಯ ಮುಂದೂಡಿಕೆ ಮಾಡಿದೆ. ಸಪ್ಟೆಂಬರ್ ಸೆಪ್ಟೆಂಬರ್ 9 ರಂದು ಎಲ್ಲಾ ಆರೋಪಿಗಳನ್ನ ಮತ್ತೆ ಹಾಜರು ಪಡಿಸಲು ಕೋರ್ಟ್ ಸೂಚಿಸಿದೆ. ಹೀಗೆ ಆಗಸ್ಟ್ 30ರವರೆಗೂ ದರ್ಶನ್ ಹಾಗೂ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಲ್ಲೇ ಇರಲಿದ್ದಾರೆ.

  • ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್‍ರನ್ನು (Darshan) ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡಲು ಜೈಲಾಧಿಕಾರಿಗಳಿಂದ ಒತ್ತಡ ಬರುತ್ತಿದೆ. ಹೀಗಾಗಿಯೇ ಕೋರ್ಟ್ ಮೊರೆ ಹೋಗಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ದರ್ಶನ್‍ರನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಲು ವಕೀಲರು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಅರೆಸ್ಟ್ ಆದ ದಿನವೇ ವಕೀಲರು ದರ್ಶನ್ ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಕಡೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

    ಟ್ರಯಲ್ ಶುರುವಾದರೆ ಬೇರೆ ಜಿಲ್ಲೆಗಳಿಂದ ಕರೆದುಕೊಂಡು ಬರುವುದು ಕಷ್ಟವಾಗಲಿದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ವಕೀಲ ಸುನೀಲ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಎಸ್‍ಪಿಪಿ ಮುಖಾಂತರ ಜೈಲಾಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡ್ತಾರಾ ವಕೀಲರು ಕಾದು ನೋಡಬೇಕಿದೆ. ಹಾಗೇನಾದ್ರೂ ಅರ್ಜಿ ಸಲ್ಲಿಕೆ ಮಾಡಿದ್ರೆ ನಮ್ಮ ವಾದವನ್ನು ಪರಿಗಣಿಸಿ ಅಂತಾ ಮನವಿ ಮಾಡುವ ಸಾಧ್ಯತೆ ಇದೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ರೆ ಓಡಾಟ ಕಷ್ಟವಾಗುತ್ತೆ. ಟ್ರಯಲ್ ಇದ್ದಾಗೆಲ್ಲಾ ಕರೆತರೋದು ಕಷ್ಟವಾಗುತ್ತೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಲ್ಲೇ ಉಳಿಸುವಂತೆ ವಾದ ಮಂಡನೆ ಸಾಧ್ಯತೆ ಇದೆ. ಇದನ್ನೂ ಓದಿ: ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

    ಪರಪ್ಪನ ಅಗ್ರಹಾರ ಜೈಲಿಗೆ ಇಂದು (ಆ.18) ಜೈಲು ಎಡಿಜಿಪಿ ಬಿ.ದಯಾನಂದ್ ಭೇಟಿ ನೀಡಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್‍ನಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪವಿತ್ರಗೌಡ ಹೋದ ಮೇಲೆ ಮೊದಲ ಬಾರಿಗೆ ದಯಾನಂದ್ ಭೇಟಿ ನೀಡುತ್ತಿದ್ದಾರೆ.

    ಈ ಹಿಂದೆ ದರ್ಶನ್ ಜೈಲಿನಲ್ಲಿರುವ ರೌಡಿಗಳ ಜೊತೆ ಸಂಪರ್ಕ ಪಡೆದು ರಾಜನಂತೆ ಇದ್ದ ವಿಡಿಯೋ ವೈರಲ್ ಆಗಿತ್ತು. ಮಾದ್ಯಮಗಳಲ್ಲಿ ದರ್ಶನ್‍ಗೆ ಜೈಲಿನಲ್ಲಿ ರಾಜಾಥಿತ್ಯ ನೀಡುತ್ತಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ದರ್ಶನ್‍ರನ್ನು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಜಾಮೀನು ಪಡೆದು ಹೊರಗಡೆ ಬಂದಿದ್ದರು. ಸುಪ್ರೀಕೋರ್ಟ್‍ನಲ್ಲಿ ಆರೋಪಿಗಳ ಬೇಲ್ ಕ್ಯಾನ್ಸಲ್ ಆದ ಕಾರಣ ಮತ್ತೆ ಏಳು ಜನರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಮತ್ತೆ ಜೈಲಿನಲ್ಲಿ ದರ್ಶನ್ ತನ್ನ ಪ್ರಭಾವ ಬಳಸಿ ತನಗೆ ಬೇಕಾಗುವ ರೀತಿ ವ್ಯವಸ್ಥೆ ಮಾಡಿಕೊಳ್ಳ ಬಹುದೆಂದು ದಯಾನಂದ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ಮಾಡಿ ಖಡಕ್ ಎಚ್ಚರಿಕೆ ನೀಡಲಿದ್ದಾರೆಂದು ತಿಳಿದು ಬಂದಿದೆ.

    ರಾಜಾತಿಥ್ಯದ ವಿಚಾರವಾಗಿ ಸುಪ್ರೀಂಕೋರ್ಟ್ ಚಾಟಿ ಬೀಸಿರುವುದರಿಂದ ಜೈಲು ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ದರ್ಶನ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜೈಲಿನಲ್ಲಿ ಅವರಿಗೆ ಯಾವುದೇ ವಿಐಪಿ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ದರ್ಶನ್ ಮಾತ್ರವಲ್ಲದೇ ಅವರ ಪೂರ್ತಿ ಗ್ಯಾಂಗ್ ಮೇಲೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ. ದಿನದ 24 ಗಂಟೆ ಕೂಡ ನಾಲ್ಕು ಗೋಡೆ ಮಧ್ಯೆಯೇ ಕಾಲ ಕಳೆಯಬೇಕಿದೆ. ಕಾರಿಡಾರ್‍ನಲ್ಲಿ ವಾಕ್ ಮಾಡಲು ಕೂಡ ಅನುಮತಿ ಇಲ್ಲ. ದರ್ಶನ್ ಇರುವ ಕೊಠಡಿಗೆ ಸಿಬ್ಬಂದಿ ಊಟ, ತಿಂಡಿ ಪೂರೈಸುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ. ಖಾಲಿ ಕೂರಬೇಕು, ಇಲ್ಲವೇ ಪುಸ್ತಕ ಓದಲು ಮಾತ್ರ ಅವಕಾಶ ಇದೆ. ಜೊತೆಗೆ ಕರ್ತವ್ಯ ನಿರತ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಸಿಬ್ಬಂದಿ ಕೂಡ ದರ್ಶನ್ ಬಳಿ ಮಾತಾಡುವ ಹಾಗಿಲ್ಲ. ಜೈಲಿನಲ್ಲಿ ದರ್ಶನ್‍ಗೆ ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಇದನ್ನೂ ಓದಿ: ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

  • ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    – ಮೆಡಿಕಲ್‌ ಕಂಡಿಷನ್ ಬೇಲ್‌ ಪಡೆದು ಸರ್ಜರಿಯನ್ನೇ ಮಾಡಿಸಲಿಲ್ಲ
    – ಜಾಮೀನಿನ ಸ್ವಾತಂತ್ರ್ಯ ದುರುಪಯೋಗ; ಕೋರ್ಟ್‌ ತೀವ್ರ ಆಕ್ಷೇಪ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ-2 ದರ್ಶನ್, ಎ-1 ಪವಿತ್ರಾಗೌಡ (Darshan And Pavithra Gowda) ಸೇರಿದಂತೆ, 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕೊಟ್ಟಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಎಲ್ಲಾ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಅಂತ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.

    ಐವರು ಆರೋಪಿಗಳಿಗೆ ಠಾಣೆಯಲ್ಲೇ ವೈದ್ಯಕೀಯ ಪರೀಕ್ಷೆ (Medical test) ನಡೆಸಿದರು. ಈ ವೇಳೆ, ಬೆನ್ನು ನೋವಿದೆ ಅಂತ ದರ್ಶನ್ ಹೇಳಿದ್ರು, ಒತ್ತಡದಿಂದ ಬಿಪಿ ಹೆಚ್ಚಾಗಿದೆ ಅಂತ ಡಾಕ್ಟರ್ ಹೇಳಿದರು ಅಂತ ತಿಳಿದುಬಂದಿದೆ. ವೈದ್ಯಕೀಯ ತಪಾಸಣೆ ಬಳಿಕ ಡಿಗ್ಯಾಂಗ್‌ನ ಐವರು ಆರೋಪಿಗಳನ್ನು ಕೋರಮಂಗಲದಲ್ಲಿರುವ ಜಡ್ಜ್‌ ನಿವಾಸದ ಎದುರು ಹಾಜರುಪಡಿಸಿ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

    ಇನ್ನೂ ಮುಖ್ಯವಾಗಿ ನೋಡೊದಾದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆಯೂ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ. ಕೊಲೆ ಕೇಸಲ್ಲಿ ದರ್ಶನ್ ಪಾತ್ರವೇನು? ಅಂತ ವಿವರವಾಗಿ ಹೇಳಿದೆ. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌

    ದರ್ಶನ್‌ ಪಾತ್ರದ ಬಗ್ಗೆ ಕೋರ್ಟ್‌ ಹೇಳಿದ್ದೇನು?
    ಈ ಕೊಲೆ ಹಠಾತ್ ಪ್ರಚೋದನೆ ಅಥವಾ ಭಾವನೆಗಳು ಸ್ಫೋಟಗೊಂಡು ಮಾಡಿರುವ ಪ್ರಕರಣ ಅಲ್ಲ. ಪುರಾವೆಗಳನ್ನ ನೋಡಿದಾಗ ಇದು, ಪೂರ್ವಯೋಜಿತ, ಸಂಘಟಿತ ಅಪರಾಧವನ್ನ ಸೂಚಿಸುತ್ತೆ. ಈ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದರೂ ಸಿಸಿಟಿವಿ ದೃಶ್ಯ ನಾಶವಾಗಿದೆ. ಅಲ್ಲದೇ ಇನ್ನಿತರ ಆರೋಪಿಗಳನ್ನ ಶರಣಾಗಲು ಹೇಳಿ ತನಿಖಾ ಹಾದಿ ತಪ್ಪಿಸಲು ಪ್ರಭಾವ ಬಳಸಿದ್ದಾರೆ.

    ಇದಕ್ಕೆ ದರ್ಶನ್‌ ಪರ ವಕೀಲರು ಜಾಮೀನು ದುರುಪಯೋಗ ಪಡೆಸಿಕೊಂಡಿಲ್ಲ ಅಂದಿದ್ದಾರೆ ಹೇಳಿದ್ದಕ್ಕೆ ಗರಂ ಆದ ನ್ಯಾಯಪೀಠ, ದರ್ಶನ್ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ದರ್ಶನ್ ಎ10 – ಎ14ಗೆ ಶರಣಾಗುವಂತೆ ಹೇಳಿದ್ದಾರೆ. ಇದಕ್ಕಾಗಿ ದರ್ಶನ್ ಹಣ ಪಾವತಿ ಮಾಡಿದ್ದಾರೆ. ಜಾಮೀನು ಪಡೆದ ಬಳಿಕ ಸಾಕ್ಷಿಧಾರರ ಜೊತೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡಿದ್ದಾರೆ, ಪವಿತ್ರಾಗೌಡ ಮನೆಯ ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಲಾಗಿದೆ ಎಂದು ಕೋರ್ಟ್‌ ದರ್ಶನ್‌ ಪಾತ್ರದ ಬಗ್ಗ ಹೇಳಿದೆ. ಇದನ್ನೂ ಓದಿ: 3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌

    ಅಲ್ಲದೇ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸಿರೋ ಸುಪ್ರೀಂ ಕೋರ್ಟ್ 4 ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಿದೆ. ವೈದ್ಯಕೀಯ ಆಧಾರದಡಿ ಕೊಟ್ಟಿರೋ ಜಾಮೀನಿಗೂ ಆಕ್ಷೇಪ ಎತ್ತಿದೆ. ಸುಪ್ರೀಂ ಕೋರ್ಟ್ ಯಾವ್ಯಾವ ಅಂಶಗಳನ್ನ ಪ್ರಮುಖವಾಗಿ ಪರಿಗಣಿಸಿದೆ. ಅವುಗಳನ್ನ ನೋಡೊದಾದ್ರೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಯಾವ್ಯಾವ ಆಯಾಮದಲ್ಲಿ ಸುಪ್ರೀಂ ಆದೇಶ?
    1. ಪ್ರಕರಣದ ಸ್ವರೂಪ ಮತ್ತು ತೀವ್ರತೆ
    2. ಸಾಕ್ಷ್ಯನಾಶ & ಸಾಕ್ಷಿಗಳ ಮೇಲೆ ಪ್ರಭಾವ ಸಾಧ್ಯತೆ
    3. ಸುಳ್ಳು ವೈದ್ಯಕೀಯ ಕಾರಣಗಳನ್ನ ನೀಡಿ ಪಡೆದ ಜಾಮೀನು
    4. ವಸ್ತುನಿಷ್ಠ ವಿಚಾರಗಳನ್ನ ಪರಿಗಣಿಸದೇ ಹೈಕೋರ್ಟ್ ನೀಡಿದ ಜಾಮೀನು ಆದೇಶ

    ವೈದ್ಯಕೀಯ ಕಾರಣದಡಿ ಕೊಟ್ಟ ಜಾಮೀನಿಗೆ ಆಕ್ಷೇಪ ಏನು..?
    * ಡಿ.13ಕ್ಕೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಮೆಡಿಕಲ್ ಕಂಡಿಷನ್ ಎಂದು ಹೇಳಿತ್ತು.
    * ಜಾಮೀನು ಪಡೆದ ನಂತರದ ದರ್ಶನ್ ನಡವಳಿಕೆ ದಾರಿತಪ್ಪಿಸುವ, ಉತ್ರ್ಪೇಕ್ಷಿತ ರೀತಿಯಲ್ಲಿತ್ತು.
    * ಡಿಸ್ಚಾರ್ಜ್ ರಿಪೋರ್ಟ್‌ನಲ್ಲಿ ಡಯಾಬಿಟಿಸ್, ಬಿಪಿ, ಹೃದ್ರೋಗ ಸಮಸ್ಯೆ & ಭವಿಷ್ಯದಲ್ಲಿ ಸರ್ಜರಿ ಬೇಕಾಗಬಹುದು ಎಂದಿತ್ತು.
    * ಆದರೆ, ಇದರಲ್ಲಿ ಎಲ್ಲೂ ಸರ್ಜರಿ ತಕ್ಷಣ ಅಗತ್ಯವಿದೆ, ಜೀವಕ್ಕೆ ಕುತ್ತಾಗಲಿದೆ ಎಂದು ಹೇಳಿರಲಿಲ್ಲ
    * ಹೀಗಾಗಿ, ಮೆಡಿಕಲ್ ಗ್ರೌಂಡಲ್ಲಿ ಜಾಮೀನು ಅಗತ್ಯವಿರಲಿಲ್ಲ.
    * ಹೈಕೋರ್ಟ್‌ನಲ್ಲಿ ಹೇಳಿದ್ದಕ್ಕೆ ವಿರುದ್ಧವಾಗಿ ದರ್ಶನ್ ಹಲವು ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡರು.
    * ಹೈಪ್ರೊಫೈಲ್ ಸೋಷಿಯಲ್ ಇವೆಂಟ್‌ಗಳಲ್ಲಿ ಪೂರ್ಣ ಆರೋಗ್ಯಯುತರಾಗಿರುವಂತೆ ಭಾಗಿಯಾದ್ರು.
    * ಜೈಲ್‌ನಿಂದ ಬಿಡುಗಡೆ ಬಳಿಕ ಸರ್ಜರಿಯೂ ಮಾಡಿಸಲಿಲ್ಲ.
    * ಸುಳ್ಳು ಮೆಡಿಕಲ್ ಕಾರಣಗಳನ್ನ ನೀಡಿ ದರ್ಶನ್ ಜಾಮೀನಿನ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡರು ಎಂದು ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

  • ದರ್ಶನ್ ಅರೆಸ್ಟ್‌ನಿಂದ ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು? ಟೈಮ್‌ಲೈನ್ ಹೀಗಿದೆ

    ದರ್ಶನ್ ಅರೆಸ್ಟ್‌ನಿಂದ ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು? ಟೈಮ್‌ಲೈನ್ ಹೀಗಿದೆ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ನೀಡಿರುವ ಜಾಮೀನು ರದ್ದುಪಡಿಸಬೇಕೋ ಅಥವಾ ಮುಂದುವರಿಸಬೇಕೋ ಎಂಬುದರ ಕುರಿತು ಸುಪ್ರೀಂ ಕೋರ್ಟ್ (Supreme Court) ಇಂದು (ಗುರುವಾರ) ಮಹತ್ವದ ತೀರ್ಪು ನೀಡಲಿದೆ.

    ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ.ಜೆ.ಬಿ ಪರ್ದಿವಾಲಾ ಮತ್ತು ನ್ಯಾ.ಆರ್ ಮಹದೇವನ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು. ಜಾಮೀನು ರದ್ದತಿ ಮೇಲ್ಮನವಿ ತೀರ್ಪು ಇಂದು ಪ್ರಕಟಗೊಳ್ಳಲಿದೆ.

    ರೇಣುಕಾಸ್ವಾಮಿ ಕೊಲೆ, ದರ್ಶನ್ ಅರೆಸ್ಟ್‌ನಿಂದ ಹಿಡಿದು ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು ಎಂಬುದರ ಕುರಿತು ಕಂಪ್ಲೀಟ್ ಟೈಮ್‌ಲೈನ್ ಈ ಕೆಳಗೆ ನೀಡಲಾಗಿದೆ.

    ಜೂನ್ 8 ಶನಿವಾರ
    *ಬೆಳಗ್ಗೆ 11 ಗಂಟೆ ಸುಮಾರಿಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕಿಡ್ನಾಪ್
    *ಬೆಂಗಳೂರಿನ ಆರ್‌ಆರ್ ನಗರ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ.
    *ನಟ ದರ್ಶನ್, ಪವಿತ್ರಾ ಗ್ಯಾಂಗ್‌ನಿಂದ ನಡೆದಿದ್ದ ಹಲ್ಲೆ, ಕೊಲೆ

    ಜೂನ್ 9 ಭಾನುವಾರ
    *ಬೆಳಗ್ಗೆ 8 ಗಂಟೆಗೆ ಸುಮನಹಳ್ಳಿ ರಾಜಕಾಲುವೆ ಬಳಿ ಶವ ಪತ್ತೆ
    *ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸೆಕ್ಯೂರಿಟಿ ಗಾರ್ಡ್
    *ಅಪರಿಚಿತ ಶವದ ಬಗ್ಗೆ ಸೆಕ್ಯೂರಿಟಿ ಗಾರ್ಡ್‌ನಿಂದ ದೂರು ಪಡೆದು ಪೊಲೀಸರ ತನಿಖೆ.

    ಜೂನ್ 10 ಸೋಮವಾರ
    *ನಾಲ್ವರು ಆರೋಪಿಗಳು ಪೊಲೀಸರಿಗೆ ಸರೆಂಡರ್.
    *ರಾಘವೇಂದ್ರ, ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಸರೆಂಡರ್
    *ಬಳಿಕ ಸೋಮವಾರ ರಾತ್ರಿ ಕೊಲೆ ಕೇಸ್ ಗೆ ಮೇಜರ್ ಟ್ವಿಸ್ಟ್ ಕೊಟ್ಟ ಆರೋಪಿ ಹೇಳಿಕೆ
    *ನಟ ದರ್ಶನ್ ಹಾಗೂ ಪವಿತ್ರಾಗೌಡ ಹೆಸರು ಬಾಯ್ಬಿಟ್ಟ ಆರೋಪಿಗಳು

    ಜೂನ್ 11 ಮಂಗಳವಾರ
    *ದರ್ಶನ್ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅಂಡ್ ಎಸಿಪಿ ಚಂದನ್ ನೇತೃತ್ವದ ತಂಡ ಮೈಸೂರಿಗೆ ದೌಡು
    *ಹೋಟೇಲ್‌ನಿಂದ ದರ್ಶನ್ ವಶಕ್ಕೆ ಪಡೆದು ಕರೆತಂದ ಪೊಲೀಸರು
    *ನಂತರ ಆರ್‌ಆರ್ ನಗರ ಮನೆಯಿಂದ ಪವಿತ್ರಾಗೌಡ ಕಸ್ಟಡಿಗೆ
    *ಬಳಿಕ ನಟ ದರ್ಶನ್ ಹಾಗೂ ಪವಿತ್ರಾಗೌಡ ಬಂಧನ
    *ಆರೋಪಿಗಳನ್ನ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು
    *ಜೂನ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಪೊಲೀಸರು.

    ಜೂನ್ 15 ಶನಿವಾರ
    *ಕೋರ್ಟ್‌ಗೆ ಪುನಃ ಆರೋಪಿಗಳು ಹಾಜರುಪಡಿಸಿದ ಪೊಲೀಸರು.
    *ಜೂನ್ 20ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ.

    ಜೂನ್ 20 ಗುರುವಾರ
    *ಜೂನ್ 20ರಂದು ಸಂಜೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು
    *ದರ್ಶನ್ ಸೇರಿ ನಾಲ್ವರನ್ನ ಎರಡು ದಿನ ಕಸ್ಟಡಿಗೆ ಪಡೆದ ಪೊಲೀಸರು
    *ಜೂನ್ 22ರವರೆಗೆ ಪೊಲೀಸ್ ಕಸ್ಟಡಿಗೆ

    ಜೂನ್ 22 ಶನಿವಾರ
    *ಜೂನ್ 22ರಂದು ಎಸಿಎಂಎಂ ಕೋರ್ಟ್‌ಗೆ ದರ್ಶನ್ ಸೇರಿ ನಾಲ್ವರನ್ನ ಹಾಜರು
    *ವಿಚಾರಣೆ ನಡೆಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್.
    *2024 ಸೆಪ್ಟೆಂಬರ್ 3ರಂದು ಚಾರ್ಜ್ ಶೀಟ್ ಸಲ್ಲಿಕೆ
    *24ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ
    *ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್
    *3991 ಪುಟಗಳು, 7 ಸಂಪುಟ, 200ಕ್ಕೂ ಹೆಚ್ಚು ವಿಟ್ನೆಸ್ ಇರುವ ಚಾರ್ಜ್ ಶೀಟ್

    2024 ಸೆಪ್ಟೆಂಬರ್ 21
    *ಜಾಮೀನು ಕೋರಿ ದರ್ಶನ್ ಅರ್ಜಿ
    *ಸಿಟಿ ಸಿವಿಲ್ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ

    2024 ಅಕ್ಟೋಬರ್ 14
    *ದರ್ಶನ್, ಪವಿತ್ರಗೌಡ ಜಾಮೀನು ಅರ್ಜಿ ವಜಾ
    *57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಜಾಮೀನು ವಜಾ
    *ನಂತರ ಅನಾರೋಗ್ಯ ಕಾರಣ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ
    *ರಾಜ್ಯ ಸರ್ಕಾರದ ಪರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್ ವಾದ
    *ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ

    2024 ಅಕ್ಟೋಬರ್ 30
    *ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು
    *ಅನಾರೋಗ್ಯ ನಿಮಿತ್ತ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್
    *ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಸಲುವಾಗಿ ಮಧ್ಯಂತರ ಜಾಮೀನು
    *ಅಕ್ಟೋಬರ್ 30 ರಂದು ಸಂಜೆ 6 ಗಂಟೆಗೆ ಬಳ್ಳಾರಿ ಜೈಲಿನಿಂದ ದರ್ಶನ್ ರಿಲೀಸ್
    *131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಬಿಡುಗಡೆ

    ನವೆಂಬರ್ 1
    *ಬಿಜಿಎಸ್ ಆಸ್ಪತ್ರೆಗೆ ದರ್ಶನ್ ದಾಖಲು

    2024 ಡಿಸೆಂಬರ್ 13
    *ದರ್ಶನ್‌ಗೆ ರೆಗ್ಯುಲರ್ ಬೇಲ್ ಮಂಜೂರು
    *ಹೈಕೋರ್ಟ್‌ನಿಂದ ದರ್ಶನ್, ಪವಿತ್ರಾಗೌಡಗೆ ಜಾಮೀನು ಮಂಜೂರು

    2025 ಜನವರಿ 6
    *ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನು ರದ್ದತಿ ಕೋರಿ ಮೇಲ್ಮನವಿ

    ಜನವರಿ 10
    *ಸುಪ್ರೀಂಕೋರ್ಟ್‌ನಲ್ಲಿ ಕೇಸ್ ರಿಜಿಸ್ಟರ್
    *ನಟ ದರ್ಶನ್, ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಪ್ರದೂಷ್, ಜಗದೀಶ್, ಅನುಕುಮಾರ್ ಜಾಮೀನು ರದ್ದತಿ ಕೋರಿ ಮೇಲ್ಮನವಿ
    *ಏಳು ಆರೋಪಿಗಳ ಜಾಮೀನು ರದ್ದತಿ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್
    *ನ್ಯಾ.ಜೆಬಿ ಪರ್ದಿವಾಲಾ, ನ್ಯಾ ಆರ್ ಮಹದೇವನ್ ಅವರ ಪೀಠದಲ್ಲಿ ನಡೆದ ವಿಚಾರಣೆ

    ಜುಲೈ 24
    *ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
    *ರಾಜ್ಯ ಸರ್ಕಾರ ಪರವಾಗಿ ಸಿದ್ದಾರ್ಥ ಲೂತ್ರಾ ವಾದ
    *ದರ್ಶನ್ ಪರವಾಗಿ ಸಿದ್ದಾರ್ಥ ದವೆ ವಾದ

  • ಗುರುವಾರ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

    ಗುರುವಾರ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಆರೋಪಿಗಳಾದ ನಟ ದರ್ಶನ್‌ (Darshan), ಪವಿತ್ರಾಗೌಡ ಸೇರಿ ಇತರ ಆರೋಪಿಗಳಿಗೆ ಹೈಕೋರ್ಟ್ (High Court) ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂಬುದು ಗುರುವಾರ ತೀರ್ಮಾನವಾಗಲಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ (Pavithra Gowda) ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆದಿತ್ತು. ವಾದ, ಪ್ರತಿವಾದ ಆಲಿಸಿದ್ದ ಪೀಠ ಆದೇಶವನ್ನು ಕಾಯ್ದಿರಿಸಿತ್ತು. ಇದನ್ನೂ ಓದಿ: ಅಪಹರಣಕ್ಕೆ ಸೂಚನೆ ನೀಡಿಲ್ಲ, ಯಾವುದೇ ಪುರಾವೆ ಇಲ್ಲ ಜಾಮೀನು ರದ್ದು ಮಾಡ್ಬೇಡಿ: ದರ್ಶನ್‌ ವಾದ ಏನು?

    ಜುಲೈ 24 ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ಪವಿತ್ರಾ ಗೌಡ, ದರ್ಶನ್‌ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ

    ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ. ಜಾಮೀನು ನೀಡಲು ಹೇಗಾದ್ರೂ ಒಂದು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ.  ಹೈಕೋರ್ಟ್‌ ಸೂಕ್ತವಾಗಿ ತನ್ನ ವಿವೇಚನೆ ಬಳಸಿಲ್ಲ ಎಂದು ನ್ಯಾ.ಪಾರ್ದಿವಾಲ ಅಭಿಪ್ರಾಯಪಟ್ಟಿದ್ದರು.

  • `ಡಿ’ ಫ್ಯಾನ್ಸ್ ವಿರುದ್ಧ ದೂರು ಕೊಡಲು ಮುಂದಾದ ರಮ್ಯಾ; ಪತಿ ಪರ ಕಾನೂನು ಸಮರಕ್ಕಿಳಿದ ವಿಜಯಲಕ್ಷ್ಮಿ

    `ಡಿ’ ಫ್ಯಾನ್ಸ್ ವಿರುದ್ಧ ದೂರು ಕೊಡಲು ಮುಂದಾದ ರಮ್ಯಾ; ಪತಿ ಪರ ಕಾನೂನು ಸಮರಕ್ಕಿಳಿದ ವಿಜಯಲಕ್ಷ್ಮಿ

    – ಮೋಹಕ ತಾರೆ ವಿರುದ್ಧ ದೂರು

    ರೇಣುಕಾಸ್ವಾಮಿಗೆ (Renukaswamy) ನ್ಯಾಯ ಸಿಗಲಿದೆ ಎಂಬ ನಟಿ ರಮ್ಯಾ (Ramya) ಪೋಸ್ಟ್‌ಗೆ ದರ್ಶನ್ ಅಭಿಮಾನಿಗಳು (Darshan Fans) ಅಶ್ಲೀಲವಾಗಿ ಮೆಸೇಜ್, ಕಾಮೆಂಟ್ಸ್‌ಗಳನ್ನು ಹಾಕುತ್ತಿರುವ ಕುರಿತು ರಮ್ಯಾ ದೂರು ನೀಡುವುದಾಗಿ ಹೇಳಿದ ಬೆನ್ನಲ್ಲೇ ಪತಿ ಪರವಾಗಿ ವಿಜಯಲಕ್ಷ್ಮಿ (Vijayalakshmi Darshan) ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

    ಕೋರ್ಟ್ ಅಲ್ಲಿ ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ಆಗಲೇ ದರ್ಶನ್ ಅನ್ನು ದೋಷಿ ಎಂದು ಹೇಳುತ್ತಿದ್ದಾರೆ. ಕೋರ್ಟ್ ಅಲ್ಲಿ ಇರುವ ಪ್ರಕರಣಕ್ಕೆ ರಮ್ಯಾ ಕಾಮೆಂಟ್ ಮಾಡಿದ್ದು ಸರಿಯಲ್ಲ. ರಮ್ಯಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಮ್ಯಾ ವಿರುದ್ಧ `ಡಿ’ ಫ್ಯಾನ್ಸ್‌ನಿಂದ ಕೆಟ್ಟ ಕಾಮೆಂಟ್ಸ್; ಕಾನೂನು ಹೋರಾಟಕ್ಕೆ ಮುಂದಾದ ಮೋಹಕ ತಾರೆ

    ಇನ್ಸ್ಟಾಗ್ರಾಂನಲ್ಲಿ ರಮ್ಯಾ ದರ್ಶನ್ ವಿರುದ್ಧ ಪೋಸ್ಟ್ ಹಾಕಿ ರೇಣುಕಾಸ್ವಾಮಿಗೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆ ಇಂದು ಮಧ್ಯಾಹ್ನದ ವೇಳೆಗೆ ವಿಜಯಲಕ್ಷ್ಮಿ ನಟಿ ರಮ್ಯಾ ವಿರುದ್ಧ ದೂರು ನೀಡಲಿದ್ದಾರೆ. ಇದನ್ನೂ ಓದಿ: ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕೆಂಡಕಾರಿದ್ದಾರೆ. ದರ್ಶನ್ ಫ್ಯಾನ್ಸ್ ಸೋಗಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ರಮ್ಯಾ ಬಹಿರಂಗೊಳಿಸಿದ್ದಾರೆ. ರೇಣುಕಾಸ್ವಾಮಿ ಕಳುಹಿಸಿದ ಸಂದೇಶಕ್ಕೂ, ಡಿಬಾಸ್ ಫ್ಯಾನ್ಸ್ ಕಳುಹಿಸುತ್ತಿರುವ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀ-ದ್ವೇಷಿ ಮನೋಭಾವದವರು. ಇಂತವರಿಂದಲೇ ಹೆಣ್ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಅಂತ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಪಬ್ಲಿಕ್ ಟಿವಿ ಜೊತೆ ಮಾತಾಡಿ, ದರ್ಶನ್ ಫ್ಯಾನ್ಸ್ ವಿರುದ್ಧ ದೂರು ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪರಿಶಿಷ್ಟರ 11.8 ಸಾವಿರ ಕೋಟಿಯನ್ನು `ಗ್ಯಾರಂಟಿ’ಗಾಗಿ ದೋಚಲು ಕಾಂಗ್ರೆಸ್ ಮುಂದಾಗಿದೆ: ಅಶೋಕ್ ಕಿಡಿ