Tag: ರೇಡ್

  • ಡ್ಯಾನ್ಸ್ ಬಾರ್ ಮೇಲೆ ರೇಡ್ – ಕಾರ್ಪೋರೇಷನ್ ಹಿರಿಯ ಅಧಿಕಾರಿಗಳು ಸೇರಿದಂತೆ 15 ಮಂದಿ ಬಂಧನ

    ಡ್ಯಾನ್ಸ್ ಬಾರ್ ಮೇಲೆ ರೇಡ್ – ಕಾರ್ಪೋರೇಷನ್ ಹಿರಿಯ ಅಧಿಕಾರಿಗಳು ಸೇರಿದಂತೆ 15 ಮಂದಿ ಬಂಧನ

    ಮುಂಬೈ: ದಕ್ಷಿಣ ಮುಂಬೈನ ಕೋಲಾಬಾದ ಡ್ಯಾನ್ಸ್ ಬಾರಿನಲ್ಲಿ ರೇಡ್ ಮಾಡಿ ಬ್ರಿಹನ್ಮುಂಬೈ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಹಿರಿಯ ಅಧಿಕಾರಿಯೂ ಸೇರಿದಂತೆ ಸುಮಾರು 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಕೋಲಾಬಾದ ಡ್ಯಾನ್ಸ್ ಬಾರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಸಿಬ್ಬಂದಿ ಮತ್ತು ಆರು ಗ್ರಾಹಕರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಡೆಪ್ಯುಟಿ ಪುರಸಭೆಯ ಆಯುಕ್ತ ಅಧಿಕಾರಿಗಳು ಸೇರಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಬಂಧಿತರಲ್ಲಿ ಒಬ್ಬ ಉದ್ಯಮಿ, ಸರ್ಕಾರಿ ಅಧಿಕಾರಿ ಮತ್ತು ಕೆಲವು ಉನ್ನತ ವ್ಯಕ್ತಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಐಪಿಸಿ ಸೆಕ್ಷನ್ ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ಮಹಾರಾಷ್ಟ್ರ ಹೋಟೆಲ್ ಕಾಯ್ದೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಬಂಧನಕ್ಕೊಳಗಾಗಿದ್ದ ಎಲ್ಲರಿಗೂ ಜಾಮೀನು ನೀಡಿದೆ.

  • ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

    ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

    ಬೆಂಗಳೂರು: ನಗರದ ಆಟೋ ಚಾಲಕನ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಸುಬ್ರಮಣಿಯ ಇಂಟ್ರೆಸ್ಟಿಂಗ್ ಕಹಾನಿ ಬಯಲಾಗಿದೆ.

    ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿತ್ತು. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿತ್ತು. ತನಿಖೆಯ ವೇಳೆ ಇಷ್ಟೊಂದು ಸಂಪತ್ತಿಗೆ ಅಮೆರಿಕ ಮಹಿಳೆ ಕಾರಣ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ರೋಚಕ ಕಥೆ:
    ಸುಬ್ರಮಣಿ ಕಳೆದ ಎಂಟು ವರ್ಷಗಳ ಹಿಂದೆ ಆಟೋ ಓಡಿಸಿಕೊಂಡಿದ್ದು, ವೈಟ್ ಫೀಲ್ಡ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಒಂದು ದಿನ ವಿದೇಶಿ ಮಹಿಳೆ  ವೈಟ್ ಫೀಲ್ಡ್ ಗೆ ಬಂದಿಳಿದಿದ್ದರು. ಈ ವೇಳೆ ಆಟೋ ಓಡಿಸುತ್ತಿದ್ದ ಸುಬ್ರಮಣಿ ಅವರನ್ನು ತನ್ನ ಆಟೋದಲ್ಲಿ ವಿಲ್ಲಾಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಚಾಲಕ ಸುಬ್ರಮಣಿ ತನ್ನ ಮಾತು, ನಡುವಳಿಕೆಯಿಂದ ಮಹಿಳೆಯ ಮನಗೆದ್ದಿದ್ದನು.

    ಇದಾದ ನಂತರ ಮಹಿಳೆಯ ಎಲ್ಲ ಕೆಲಸಗಳಿಗೂ ಇದೇ ಸುಬ್ರಮಣಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಏಕಾಂಗಿಯಾಗಿದ್ದ ವಿದೇಶಿ ಮಹಿಳೆಗೆ 80 ವರ್ಷ ವಯಸ್ಸಾಗಿರಬಹದು ಎಂದು ಸ್ಥಳೀಯರಿಂದ ಮಾಹಿತಿ ಲಭಿಸಿದೆ. ಈಗಲೂ ಎರಡು ಆಟೋಗಳನ್ನ ಬಾಡಿಗೆಗೆ ನೀಡಿರುವ ಸುಬ್ರಮಣಿ ಎರಡು ಕಾರುಗಳು ಹೊಂದಿದ್ದು, ಒಂದು ಕಾರು ಸ್ವಂತಕ್ಕೆ ಮತ್ತೊಂದು ಕಾರು ಬಾಡಿಗೆಗೆ ಬಿಟ್ಟಿದ್ದಾನೆ.

    ಆಟೋ ಚಾಲಕ ಸುಬ್ರಮಣಿ ಮತ್ತು ವಿದೇಶಿ ಮಹಿಳೆ 2013ರಲ್ಲಿ ವಿಲ್ಲಾ ಬಾಡಿಗೆಗೆ ಎಂದು ಬಂದಿದ್ದರು. ಸುಮಾರು ಎರಡು ವರ್ಷಗಳ ಕಾಲ ತಿಂಗಳಿಗೆ 30 ಸಾವಿರ ಬಾಡಿಗೆ ಕಟ್ಟುತ್ತಿದ್ದರು. ನಂತರ 2015ರಲ್ಲಿ ವಿಲ್ಲಾ ಖರೀದಿಗೆ ಇಬ್ಬರು ಮುಂದಾಗಿದ್ದಾರೆ. ಆ ವೇಳೆ 1 ಕೋಟಿ 60 ಲಕ್ಷಕ್ಕೆ ವಿಲ್ಲಾ ಖರೀದಿ ಮಾಡಿದ್ದಾರೆ. ಪ್ರತಿಹಂತದಲ್ಲೂ ಹತ್ತು ಲಕ್ಷದ ಚೆಕ್‍ಗಳ ಮೂಲಕ ಹಣ ನೀಡಿದ್ದಾರೆ. ಸುಬ್ರಮಣಿ ಮೊದಲಿಗೆ ಆಟೋ ಓಡಿಸುತ್ತಿದ್ದನು. ಈಗ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

    ವಿದೇಶಿ ಮಹಿಳೆ ಮದುವೆಯಾಗಿಲ್ಲ ಒಂಟಿಯಾಗಿದ್ದಾರೆ. ಅವರೇ ಹಣ ಕೊಟ್ಟು ವಿಲ್ಲಾ ಖರೀದಿ ಮಾಡಿದ್ದರು. ಮೊದಲ ಹಂತದಲ್ಲಿ ಸುಬ್ರಮಣಿ ವಾಸವಾಗಿದ್ದು, ಎರಡನೇ ಹಂತದಲ್ಲಿ ವಿದೇಶಿ ಮಹಿಳೆ ವಾಸವಾಗಿದ್ದಾರೆ. ವಿದೇಶಿ ಮಹಿಳೆ ಹೊರಗಡೆ ಓಡಾಡುವುದು ತುಂಬಾ ಕಡಿಮೆ. ಹೀಗಾಗಿ ಸುಬ್ರಮಣಿ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ.

    ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಸದ್ಯಕ್ಕೆ ವಿಲ್ಲಾ ಖರೀದಿ ಮಾಡಿದ್ದು ಯಾವಾಗ? ಎಷ್ಟು ಹಣಕ್ಕೆ ಖರೀದಿ ಮಾಡಿದ್ರು, ನಗದು ಅಥವಾ ಚೆಕ್ ಮೂಲಕ ಹಣ ನೀಡಿದ್ರಾ? ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

  • ರಾತ್ರೋರಾತ್ರಿ ದಾಳಿ – ಚೀಲ, ಬಾಕ್ಸ್‌ನಲ್ಲಿ ತುಂಬಿದ್ದ 10 ಲಕ್ಷ ಹಣ ಪತ್ತೆ

    ರಾತ್ರೋರಾತ್ರಿ ದಾಳಿ – ಚೀಲ, ಬಾಕ್ಸ್‌ನಲ್ಲಿ ತುಂಬಿದ್ದ 10 ಲಕ್ಷ ಹಣ ಪತ್ತೆ

    ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಸಂಬಂಧಿ ಹಾಗೂ ಆಪ್ತ ಕುಮಾರ್ ಮನೆ, ಕಚೇರಿ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 10 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹ ಹಾಗೂ ಹಂಚಿಕೆ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇರೆಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಚುನಾವಣಾ ವೀಕ್ಷಣಾಧಿಕಾರಿ, ಐಟಿ ಅಧಿಕಾರಿ ರೀಚಲ್, ತ್ಯಾಗರಾಜ್, ಪಾಲಯ್ಯ ನೇತೃತ್ವದ ತಂಡ ದಾಳಿ ಮಾಡಿ ಸುಮಾರು 10 ಲಕ್ಷದಷ್ಟು ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

    ಬುಧವಾರ ರಾತ್ರಿ ಸುಮಾರು 12 ಗಂಟೆಗೆ ದಾಳಿ ಮಾಡಿದ ಅಧಿಕಾರಿಗಳ ತಂಡ ಮನೆ ಹಾಗೂ ಕಚೇರಿಯ ಇಂಚಿಂಚು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಒಂದು ಚೀಲದಲ್ಲಿ ಮತದಾರರಿಗೆ ಹಂಚಲು ತುಂಬಿಸಲಾಗಿದೆ ಎನ್ನಲಾದ 2.5 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

    ಅಷ್ಟೇ ಅಲ್ಲದೇ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾಧಿಕಾರಿಗಳಿಂದ ಮತ್ತೊಂದು ಮನೆ ಪರಿಶೀಲನೆ ನಡೆಸಿದ ವೇಳೆ ಮತ್ತೊಂದು ಮನೆಯಲ್ಲಿ 7.5 ಲಕ್ಷ ಹಣವನ್ನ ವಶಕ್ಕೆ ಪಡೆಯಲಾಗಿದೆ. ಮುಂಜಾನೆಯವರೆಗೂ ಮತ್ತಷ್ಟು ಶೋಧ ಕಾರ್ಯವನ್ನ ಐಟಿ ಹಾಗೂ ಚುನಾವಣಾಧಿಕಾರಿಗಳು ಮುಂದುವರಿಸಿದ್ದರು.

  • ಪರಪ್ಪನ ಅಗ್ರಹಾರದ ಮೇಲೆ 300 ಪೊಲೀಸರಿಂದ ದಾಳಿ

    ಪರಪ್ಪನ ಅಗ್ರಹಾರದ ಮೇಲೆ 300 ಪೊಲೀಸರಿಂದ ದಾಳಿ

    ಬೆಂಗಳೂರು: ಲೋಕಸಭಾ ಚುನಾವಣೆ ಎಫೆಕ್ಟ್ ಪರಪ್ಪನ ಅಗ್ರಹಾರ ಜೈಲಿಗೂ ತಟ್ಟಿದ್ದು, ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಮೇಲೆ ಸುಮಾರು 300 ಪೊಲೀಸರು ದಾಳಿ ನಡೆಸಿದ್ದಾರೆ.

    ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಆಗ್ನೇಯ ವಿಭಾಗದ ಡಿಸಿಪಿ ಇಷಾ ಪಂಥ್ ಮತ್ತು ಕೇಂದ್ರ ವಿಭಾಗದ ದೇವರಾಜ್ ನೇತೃತ್ವದಲ್ಲಿ ಐವರು ಡಿಸಿಪಿ, ಎಸಿಪಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಒಟ್ಟು 300 ಪೊಲೀಸ್ ಸಿಬ್ಬಂದಿ ಕೈದಿಗಳ ತಪಾಸಣೆ ಮಾಡಲಾಗಿದ್ದು, ಈ ವೇಳೆ ಕೈದಿಗಳ ಬ್ಯಾರಕ್‍ನಲ್ಲಿ 250 ಗ್ರಾಂ ಗಾಂಜಾ, 70 ಮೊಬೈಲ್, ಸಿಮ್ ಕಾರ್ಡ್ ಗಳು ಸೇರಿ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೇ 20 ಸಾವಿರ ನಗದು, ಚಾಕು, ಕಟರ್ ಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕೆಲ ರೌಡಿಗಳು ಜೈಲಿನಿಂದ ಮತದಾರರ ಮೇಲೆ ಪ್ರಭಾವ ಬೀರಿದ್ದು, ಮತದಾರರನ್ನ ಆಪರೇಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದೇವೆ. 70 ಮೊಬೈಲ್ ವಶಕ್ಕೆ ಪಡೆದಿದ್ದೇವೆ. ಸ್ವಲ್ಪ ಪ್ರಮಾಣದ ಮಾದಕ ವಸ್ತು ಮತ್ತು ಗಾಂಜಾ ಕೂಡ ಸಿಕ್ಕಿದೆ. ಈ ಬಗ್ಗೆ ನಾವು ಕೇಸ್ ದಾಖಲು ಮಾಡುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

  • ಹೆಸರಿಗೆ ಮಾತ್ರ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್-ಸಿಸಿಬಿ ದಾಳಿಯಲ್ಲಿ 28 ಯುವತಿಯರ ರಕ್ಷಣೆ

    ಹೆಸರಿಗೆ ಮಾತ್ರ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್-ಸಿಸಿಬಿ ದಾಳಿಯಲ್ಲಿ 28 ಯುವತಿಯರ ರಕ್ಷಣೆ

    ಬೆಂಗಳೂರು: ಫ್ಯಾಮಿಲಿ ಬಾರ್ ಅಂಡ್ ರೆಸ್ಟೋರೆಂಟ್ ಎಂದು ಹೆಸರಿಟ್ಟುಕೊಂಡು ಅನಾಚಾರವನ್ನೇ ಬಂಡವಾಳ ಮಾಡಿಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ ನಡೆಸಿದೆ.

    ರಾಜಧಾನಿಯ ಹೃದಯ ಭಾಗ ಮೆಜೆಸ್ಟಿಕ್‍ನಲ್ಲಿರುವ ಪೋರ್ಟ್ ಆಫ್ ಪೆವಿಲಿಯನ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಭಾನುವಾರ ತಡರಾತ್ರಿ ಸಿಸಿಬಿ ಎಸಿಪಿ ಸುಬ್ರಮಣ್ಯ ಅಂಡ್ ಟೀಂ ದಿಢೀರ್ ದಾಳಿ ಮಾಡಿದ್ದಾರೆ. ಕಲರ್ ದುನಿಯಾದ ಆಸೆಗೆ ಬಿದ್ದು ಬಾರ್ ಮಾಲೀಕರ ಅಧೀನದಲ್ಲಿದ್ದ ಬೇರೆ ರಾಜ್ಯದ 28 ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.

    ಪೋರ್ಟ್ ಆಫ್ ಪೆವಿಲಿಯನ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಡಿಸ್ಕೋಥೆಕ್ ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿರುವ ಯುವತಿಯರನ್ನು ಗಿರಾಕಿಗಳ ಜೊತೆ ಕಪಲ್‍ಗಳ ರೀತಿಯಲ್ಲಿ ಕಳುಹಿಸಿಕೊಡುತ್ತಿದ್ದರು. ಯುವತಿಯರ ಬಳಿ ಗಿರಾಕಿಗಳ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿಸುತ್ತಿದ್ದರು.

    ಭಾನುವಾರ ರಾತ್ರಿ ವೀಕೆಂಡ್ ಆಗಿರುವ ಕಾರಣ ಸಾಕಷ್ಟು ಯುವತಿಯರನ್ನು ಇಟ್ಟುಕೊಂಡು ಅಶ್ಲೀಲ ನೃತ್ಯ ಮಾಡಿಸುವಾಗ ಸಿಸಿಬಿ ದಾಳಿ ಮಾಡಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮ್ಯಾನೇಜರ್ ಸುದೇಶ್ ಸೇರಿ ಒಟ್ಟು 80 ಮಂದಿಯನ್ನು ಬಂಧಿಸಿದ್ದಾರೆ. ಬಾರ್ ಮಾಲೀಕನ ಬಗ್ಗೆ ಈಗಾಗೇ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ ಬಾರ್ ಮಾಲೀಕರನ್ನು ವಶಕ್ಕೆ ಪಡೆದು ತನಿಖೆ ಮಾಡುವ ಸಾಧ್ಯತೆಗಳಿದೆ.

    ಸದ್ಯ ಆರೋಪಿಗಳೆಲ್ಲರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದು ತನಿಖೆ ಮಾಡುತ್ತಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ದಕ್ಷಿಣ ಕನ್ನಡದವಾಗಿದ್ದು ಮಾಲೀಕನ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ

    40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ

    ಬೆಂಗಳೂರು: ಒಂದು ಇಲಾಖೆಯಿಂದ ಐಟಿ ರೇಡ್ ಆದ ಮೇಲೆ ಅಧಿಕಾರಿಗಳು ನಮ್ಮನ್ನು ಎಲ್ಲ ರೀತಿಯಲ್ಲೂ ವಿಚಾರಣೆ ಮಾಡುತ್ತಾರೆ. ನಾನು ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದು ನಟ ಯಶ್ ಹೇಳಿದರು.

    ಐಟಿ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ಒಂದು ಇಲಾಖೆಯಿಂದ ಐಟಿ ರೇಡ್ ಆದ ಮೇಲೆ ಅಧಿಕಾರಿಗಳು ನಮ್ಮನ್ನು ಎಲ್ಲ ರೀತಿಯಲ್ಲೂ ವಿಚಾರಣೆ ಮಾಡುತ್ತಾರೆ. ನಮ್ಮ ಆದಾಯ, ಖರ್ಚು ಏನು? ಇದೇ ರೀತಿಯ ಅನೇಕ ವಿಷಯಗಳ ಬಗ್ಗೆ ಕೇಳುತ್ತಾರೆ. ನಾವು ಅದಕ್ಕೆ ಉತ್ತರ ಕೊಡಬೇಕು. ಇದೊಂದು ಪ್ರಕ್ರಿಯೆ ರೀತಿಯಲ್ಲಿ ನಡೆಯುತ್ತದೆ. ಇಂದು ಮಾತ್ರವಲ್ಲಿ ಇನ್ನೂ ಎರಡು ವರ್ಷ ನಡೆಯುತ್ತದೆ ಎಂದು ಹೇಳಿದರು.

    ನಾವು ಸಾಮಾಜದಲ್ಲಿ ಏನೇ ಮಾಡಿದರೂ ಅದು ನಿಮಗೆ ಗೊತ್ತಾಗುತ್ತದೆ. 7-8 ಜನರು ಒಟ್ಟಿಗೆ ಸೇರಿ ಕೆಲಸ ಮಾಡಿದಾಗ, ಅವರ ವ್ಯವಹಾರ ಏನು? ಅವರ ಜೊತೆ ನಿಮ್ಮ ವ್ಯವಹಾರ ಏನು ಇಂತಹ ಕೆಲವು ಪ್ರಶ್ನೆಗಳು ಇರುತ್ತವೆ. ಇದೊಂದು ಪ್ರಕ್ರಿಯೆಯಾಗಿದ್ದು, ಇದನ್ನು ಅರ್ಥಮಾಡಿಕೊಂಡು ಗೌರವದಿಂದ ಮಾಡಿಕೊಂಡು ಹೋಗೋಣ. ಐಟಿ ಇಲಾಖೆಯಲ್ಲಿ ಯಾವ ರೀತಿ ಪ್ರಕ್ರಿಯೆ ಇರುತ್ತದೆ ಎಂದು ಅಧಿಕಾರಿಗಳು ನಮಗೆ ಎಲ್ಲವನ್ನು ಹೇಳಿದ್ದಾರೆ ಎಂದು ಯಶ್ ತಿಳಿಸಿದರು.

    ಆಡಿಟರ್ ಮನೆಯ ಮೇಲೆ ಅಲ್ಲ, ಅವರ ಕಚೇರಿಯ ಮೇಲೆ ಐಟಿ ರೇಡ್ ಆಗಿದೆ ಅಷ್ಟೇ. ಅದು ಬಿಟ್ಟು ಬೇರೆ ನನಗೆ ಗೊತ್ತಿಲ್ಲ. ನಾನು ಜನವರಿ 8-9ರಂದು ನನ್ನ ಹುಟ್ಟುಹಬ್ಬವಿದೆ ಅಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಆದ್ದರಿಂದ ದಿನಾಂಕ 10 ರಂದು ಬರುತ್ತೇನೆ ಎಂದು ಕೇಳಿದ್ದೆ, ಅದಕ್ಕೆ ಅವರು 11 ರಂದು ಬನ್ನಿ ಎಂದು ಹೇಳಿದ್ದರು. ಆದ್ದರಿಂದ ಇಂದು ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಇನ್ನೂ 40 ಕೋಟಿ ಸಾಲದ ಬಗ್ಗೆ ಪ್ರಶ್ನೆ ಕೇಳಿದಾಗ, ನನಗೆ 40 ಕೋಟಿ ಸಾಲ ಯಾಕೆ ಕೊಡುತ್ತಾರೆ. ನನ್ನ ಪ್ರಕಾರ ನನಗೆ 15 ರಿಂದ 16 ಲೋನ್ ಇದೆ. 15-16 ಕೋಟಿ ಲೋನ್ ಕೊಡಬೇಕಾದರೆ, ತೆರಿಗೆ ಎಷ್ಟಿರಬೇಕು? ತೆರಿಗೆ ಕಟ್ಟಿಲ್ಲ ಅಂದರೆ ಯಾರಾದರೂ ಲೋನ್ ಕೊಡುತ್ತಾರಾ ಎನ್ನುವುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಗೊತ್ತಾದರೆ ಸಾಕು. ಸಾರ್ವಜನಿಕ ವ್ಯಕ್ತಿ ಎಂದಾಕ್ಷಣ ಇಷ್ಟಬಂದಂತೆ ಒಬ್ಬರ ಬಗ್ಗೆ ಮಾತನಾಡಿಕೊಂಡು, ತೇಜೋವಧೆ ಮಾಡಿಕೊಂಡು ಇದ್ದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರುವವರಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.

    ಇಂದು ಬೆಳಗ್ಗೆ ನಟ ಯಶ್ ತಮ್ಮ ತಾಯಿ ಪುಷ್ಪಾ ಅವರ ಜೊತೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಗುರುವಾರವಷ್ಟೇ ಆಡಿಟರ್ ಬಸವರಾಜ್ ಮನೆಯಲ್ಲಿ ತಲಾಶ್ ನಡೆದಿತ್ತು. ಇತ್ತ ನಿರ್ಮಾಪಕ ಜಯಣ್ಣ ಕೂಡಾ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    ಬೆಂಗಳೂರು: ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ವೇಳೆ 109 ಕೋಟಿಯಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದ್ದು, 2.85 ಕೋಟಿ ನಗದು ಸೇರಿದಂತೆ 11 ಕೋಟಿಯಷ್ಟು ಚಿನ್ನಾಭರಣ ಸೀಜ್ ಮಾಡಿದ್ದಾರೆ. ಈಗ ಈ ಐಟಿ ದಾಳಿಗೆ ಇಡಿ ಎಂಟ್ರಿಯಾದರೆ ನಟರಿಗೆ ಸಂಕಷ್ಟ ಗ್ಯಾರಂಟಿಯಾಗಿದೆ.

    ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸ್ಟಾರ್ ನಟರು ಮತ್ತು ನಿರ್ಮಾಪಕರು ಟ್ಯಾಕ್ಸ್ ಹೋಲ್ಡರ್ ಗಳಾದರೂ ತೆರಿಗೆ ವಂಚಿಸಿ ಆಸ್ತಿ ಮತ್ತು ಆದಾಯವನ್ನ ಮುಚ್ಚಿಟ್ಟಿರೋದನ್ನ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬ್ಯುಸಿನೆಸ್‍ನಲ್ಲಿ ಬಂದ ಆದಾಯ, ಥಿಯೇಟರ್ ಟಿಕೆಟ್‍ ನಲ್ಲಿ ವಂಚನೆ, ಆಡಿಯೊ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಗಳ ಅಕೌಂಟ್ಯಾಬಿಲಿಟಿ ಇಲ್ಲ ಅನ್ನೋದನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಈಗಾಗಲೇ ನೋಟಿಸ್ ಸಿದ್ಧ ಮಾಡಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಟರು ಮತ್ತು ನಿರ್ಮಾಪರಕರನ್ನ ವಿಚಾರಣೆಗೆ ಕರೆಯಲಿದೆ. ಇವತ್ತಿನಿಂದ ನಾಲ್ವರು ಸ್ಟಾರ್ ನಟರು ಮತ್ತು ನಿರ್ಮಾಪರಕು ಐಟಿ ಬಾಗಿಲು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲವೊಂದಿಷ್ಟು ಪ್ರಶ್ನೋತ್ತರಗಳನ್ನ ರೆಡಿ ಮಾಡಿಟ್ಟುಕೊಂಡಿರುವ ಅಧಿಕಾರಿಗಳು ಪ್ರತಿಯೊಂದು ಪ್ರಶ್ನೆಗೂ ಉತ್ತರ ಪಡೆಯಲಿದ್ದಾರೆ. ಉತ್ತರ ಸಮಂಜಸವಾಗಿಲ್ಲದಿದ್ದರೆ, ದಾಖಲಾತಿಗಳನ್ನ ಹಾಜರು ಪಡಿಸಬೇಕಾಗುತ್ತದೆ. 109 ಕೋಟಿಯ ಆದಾಯದ ಮೂಲ ಯಾವುದು, ತೆರಿಗೆಯಿಂದ ಈ ಆಸ್ತಿಯನ್ನ ಮುಚ್ಚಿಟ್ಟಿದ್ದೇಕೆ, ಥಿಯೇಟರ್ ಟಿಕೆಟ್‍ನಿಂದ ಹಿಡಿದು ಸ್ಯಾಟಲೈಟ್ ರೈಟ್ಸ್‍ವರೆಗೂ ಲೆಕ್ಕಪತ್ರಗಳು ಯಾಕಿಲ್ಲ? ತೆರಿಗೆ ವಂಚನೆ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದೀರಿ ತಾನೆ? ಇದಕ್ಕಾಗಿ ಪೆನಾಲ್ಟಿ ಎಷ್ಟಿದೆ ಗೊತ್ತಾ.? ಹೀಗೆ ಪ್ರಶ್ನೆಗಳ ಸುರಿಮಳೆಗೈದು ನಟರು ಮತ್ತು ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.

    ಬರೀ ಐಟಿ ವಿಚಾರಣೆಯಾದರೆ ಪರವಾಗಿಲ್ಲ. ತೆರಿಗೆ ಕಟ್ಟದಿದ್ದರೆ ಶೇ.100 ರಿಂದ 300ರಷ್ಟು ದಂಡ ಹಾಕಿ ಬಿಟ್ಟು ಕಳಿಸುತ್ತಾರೆ. 10 ಲಕ್ಷಕ್ಕಿಂತ ಹೆಚ್ಚಿನ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದರೆ ಅಂಥಾ ಪ್ರಕರಣಗಳನ್ನ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಬೇಕು. ಸ್ಟಾರ್ ನಟರ ಐಟಿ ದಾಳಿ ವೇಳೆ 109 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನ ಇಡಿಗೆ ವರ್ಗಾಯಿಸಲು ಐಟಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಒಮ್ಮೆ ಇಡಿ ಎಂಟ್ರಿಯಾದರೆ ನಟರು ಮತ್ತು ನಿರ್ಮಾಪಕರಿಗೆ ಸಂಕಷ್ಟ ಗ್ಯಾರಂಟಿಯಾಗಿದ್ದು, ವಿದೇಶಿ ವ್ಯವಹಾರ ಮತ್ತು ಮನಿ ಲಾಂಡ್ರಿಗ್ ಅಡಿ ಪ್ರಕರಣ ಕೈಗೆತ್ತಿಕೊಳ್ಳವ ಇಡಿ ಅಧಿಕಾರಿಗಳು ಎಫ್‍ಐಆರ್ ದಾಖಲು ಮಾಡಿಕೊಳ್ಳುತ್ತಾರೆ. ನಂತರ ಪ್ರತಿಯೊಬ್ಬರ ವಿಚಾರಣೆ ಮಾಡುತ್ತಾರೆ. ಹೀಗಾಗಿ ಐಟಿ ಮತ್ತು ಇಡಿ ಬಾಗಿಲುಗಳಿಗೆ ಪ್ರತಿ ದಿನ ಅಲೆಯಬೇಕಾದ ಪರಿಸ್ಥಿತಿ ನಟರು ಮತ್ತು ನಿರ್ಮಾಪಕರಿಗೆ ಬಂದೊದಗಿದೆ. ಅಗತ್ಯ ಬಿದ್ದರೆ ಅರೆಸ್ಟ್ ಮಾಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ.

    ಸ್ಟಾರ್ ನಟರ ಆದಾಯ ಮತ್ತು ತೆರಿಗೆ ನಡುವಿನ ವ್ಯತ್ಯಾಸವನ್ನ ಐಟಿ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈಗ ಮುಂದೆ ತನಿಖೆ ಯಾವ ರೀತಿ ಸವಾಲೊಡ್ಡುತ್ತದೆ ಅನ್ನೋದು ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇಡ್ ಆಗ್ತಿದ್ದಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು- ಶಿವಣ್ಣ

    ರೇಡ್ ಆಗ್ತಿದ್ದಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು- ಶಿವಣ್ಣ

    ಬೆಂಗಳೂರು: ರೇಡ್ ಆಗುತ್ತಿದ್ದಾಗ ಸ್ವಲ್ಪ ಬೇಜಾರ್ ಆಗುತ್ತಿತ್ತು, ಇರಿಟೇಟ್ ಆದರೂ ಸಹಕಾರ ನೀಡಬೇಕಿತ್ತು ಎಂದು ಐಟಿ ದಾಳಿಯ ಬಗ್ಗೆ ಶಿವರಾಜ್‍ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ಐಟಿ ರೇಡ್ ದಾಳಿ ನಂತರ ಮೊದಲ ಬಾರಿಗೆ ಮಾತನಾಡಿದ ಅವರು, “ಐಟಿ ರೇಡ್ ಆಗಿರುವ ಕಾರಣ ನನಗೆ ಗೊತ್ತಿಲ್ಲ. ಮೊದಲ ಬಾರಿ ನನ್ನ ಮನೆ ಮೇಲೆ ರೇಡ್ ಆಗಿದೆ. 84-85 ನಲ್ಲಿ ಚೆನ್ನೈ ನಲ್ಲಿದ್ದಾಗ ಒಮ್ಮೆ ರೇಡ್ ಆಗಿತ್ತು. ಆಗ ನಾನು ಅಲ್ಲಿ ಇನ್ಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದೆ. ರೇಡ್ ಆಗುತ್ತಿರುವಾಗ ಸ್ವಲ್ಪ ಬೇಜಾರ್ ಆಗುತ್ತಿತ್ತು. ಇರಿಟೇಟ್ ಆದರೂ ಸಹಕಾರ ನೀಡಬೇಕಿತ್ತು” ಎಂದು ಹೇಳಿದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ಹೈ ಬಜೆಟ್ ಚಿತ್ರಗಳ ವಿಚಾರಕ್ಕೆ ಮಾತನಾಡಿದ ಅವರು ಐಟಿ ಪೇಪರ್ ಎಲ್ಲಾ ಸರಿ ಇರತ್ತೆ. ಲೇಟ್ ಆದರೂ ಎಕ್ಟ್ರಾ ಕಟ್ಟಿರ್ತೀವಿ. ಪ್ರೊಡಕ್ಷನ್ ಖರ್ಚುಗಳು, ಹೊರದೇಶಗಳಿಗೆ ಹೋದ ಖರ್ಚುಗಳೂ ಇರುತ್ತೆ. ಹೈ ಬಜೆಟ್ ಚಿತ್ರ ಅಂದರೆ ಸಂಭಾವನೆ ಇಷ್ಟು ಅಂತ ಇರುತ್ತೆ. ಟಗರು, ವಿಲನ್, ಕೆಜಿಎಫ್, ಈಗ ನಟಸಾರ್ವಭೌಮ, ಕವಚ ಸಿನಿಮಾ ಬರುತ್ತಿದೆ ಎಂದು ತಿಳಿಸಿದರು.  ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

    ಎರಡು ದಿನ ವಾಕಿಂಗ್ ಹೋಗಿರಲಿಲ್ಲ. ನಾನು ಹಾಗೂ ಗೀತಾ ಡ್ರೈವ್ ಹೋಗುತ್ತೇವೆ. ಇಲ್ಲ ಅಂದರೆ ಸಿನಿಮಾಗೆ ಹೋಗುತ್ತಿದ್ದೀವಿ. ಮನೆ ತುಂಬ ದೊಡ್ಡದು ಇದ್ದ ಕಾರಣ ಹುಡುಕಲು ಸಮಯ ಹಿಡಿಯಿತು. ಸ್ವಲ್ಪ ಡಾಕ್ಯುಮೆಂಟ್ ತಗೆದುಕೊಂಡು ಹೋಗಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇನೆ ಅಂದರು.  ಇದನ್ನೂ ಓದಿ: ಸುದೀಪ್ ಮನೆಯಲ್ಲಿ ಐಟಿ ರೇಡ್ ಅಂತ್ಯ- ಬೆಳಗ್ಗೆ ತೆರಳಿದ ಬಳಿಕ ಮತ್ತೆ ಅಧಿಕಾರಿಗಳು ಆಗಮಿಸಿದ್ದು ಯಾಕೆ?

    ಗೀತಾ ಎಲೆಕ್ಷನ್ ಗೆ ನಿಂತಿದ್ದರಿಂದ ಅವರನ್ನು ಕೂಡ ವಿಚಾರಣೆ ಮಾಡಿದ್ದಾರೆ. ರೇಡ್ ಅಂದ ತಕ್ಷಣ ಅಭಿಮಾನಿಗಳಿಗೆ ಆತಂಕ ಇರತ್ತೆ. ಬೆಳಗ್ಗೆ ಮಲಗಿದಾಗ 5 ಗಂಟೆ ಆಗಿತ್ತು ಯಾರ ಬಳಿಯೂ ಮಾತಾಡಿಲ್ಲ ಎಂದು ಶಿವರಾಜ್‍ಕುಮಾರ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

    ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

    ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಸ್ಟಾರ್ ಗಳ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪುನೀತ್ ರಾಜ್ ಕುಮಾರ್ ಮನೆಯ ತಪಾಸಣೆ ಮುಗಿದಿದೆ.

    ಪ್ರತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು, ಸಂಪಾದಿಸಿದ್ದ, ಸಂಪಾದನೆ ಮಾಡುತ್ತಿರುವ ಲೆಕ್ಕವನ್ನೆಲ್ಲಾ ಕ್ರೋಢೀಕರಿಸುತ್ತಿದ್ದಾರೆ. ಸ್ಟಾರ್ ನಟರು ಕೇವಲ ಆಕ್ಟಿಂಗ್‍ನಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಆಕ್ಟರ್ ಕಮ್ ಬಿಸಿನೆಸ್‍ಮೆನ್‍ಗಳಾಗಿದ್ದೇ ಇವತ್ತಿನ ಐಟಿ ರೇಡ್‍ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ನಟ ಪುನೀತ್ ಮತ್ತು ಯಶ್ ಮನೆಯಲ್ಲಿ ದೊರೆತ ಆಸ್ತಿಯ ಲೆಕ್ಕಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಪುನೀತ್ ಹೆಸರಲ್ಲಿ 10 ಆಸ್ತಿ ಪತ್ತೆಯಾಗಿದೆ. ಗಾಂಧಿನಗರದ 6ನೇ ಕ್ರಾಸ್, ಹೆಣ್ಣೂರು, ಥಣಿಸಂದ್ರ, ಕೆಂಪಾಪುರ, ಚಿರಂಜೀವಿ ಲೇಔಟ್, ರಾಜಾಜಿನಗರದ 1ನೇ ಬ್ಲಾಕ್‍ನಲ್ಲಿ ಆಸ್ತಿ ಹೊಂದಿದ್ದು, ಕೆಂಪಾಪುರ, ಚಿರಂಜೀವಿ ಲೇಔಟ್‍ನಲ್ಲಿ 3, ಕೋರಮಂಗಲದಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಮಾಡಿದ್ದಾರೆ. ಇನ್ನೂ ಪಿಆರ್ ಕೆ ಪ್ರೊಡಕ್ಷನ್, ಪಿಆರ್ ಕೆ ಆಡಿಯೋ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಇಡೀ ವ್ಯವಹಾರದ ಬಗ್ಗೆ ಮಾಹಿತಿ ನೀಡಲು ನಟ ಪುನೀತ್ ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೋರಿದ್ದಾರೆ. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

    ಇತ್ತ ಯಶ್ ಮನೆಯಲ್ಲಿ 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450 ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಮ್ ಸರ ಪತ್ತೆಯಾಗಿವೆ. ಅಷ್ಟೇ ಅಲ್ಲದೇ 2 ಬ್ಯಾಂಕ್‍ಗಳಲ್ಲಿ 40 ಕೋಟಿ ಸಾಲ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. 8 ಬ್ಯಾಂಕ್ ಖಾತೆ ಹೊಂದಿರುವ ಯಶ್, ತಾಯಿ ಜೊತೆ 4 ಜಂಟಿ ಖಾತೆಯನ್ನು ಹೊಂದಿದ್ದಾರೆ. ಮಂಡ್ಯದಲ್ಲಿ 8 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಅಧಿಕಾರಿಗಳ ಪ್ರತಿ ಪ್ರಶ್ನೆಗೂ ಸಹನೆಯಿಂದ ಯಶ್ ತಾಯಿ ಉತ್ತರಿಸಿದ್ದಾರೆ ಐಟಿ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯಕ್ಕೆ ಇಬ್ಬರ ನಟರ ಆಸ್ತಿ ಮಾಹಿತಿ ಲಭ್ಯವಾಗಿದ್ದು, ಇನ್ನಿಬ್ಬರ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆಹಾಕಲಾಗುತ್ತಿದೆ. ನಟ ಪುನೀತ್ ರಾಜ್‍ಕುಮಾರ್ ಮನೆಯ ಮೇಲಿನ ಐಟಿ ರೇಡ್ ಮುಗಿದಿದ್ದು, ನಟ ಯಶ್, ಸುದೀಪ್ ಮತ್ತು ಶಿವರಾಜ್‍ಕುಮಾರ್ ಮನೆಯಲ್ಲಿ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    – 1984ರಲ್ಲಿಯೇ ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು
    – ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇವೆ

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಐಟಿ ರೇಡ್ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯವಾಗಿದ್ದು, ಈ ಬಗ್ಗೆ ಮೊದಲ ಬಾರಿಗೆ ನಟ ಪುನೀತ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತೆರಿಗೆ ಇಲಾಖೆ ಅವರು ಬಂದು ನಮ್ಮ ಮನೆಯನ್ನು ರೇಡ್ ಮಾಡಿದ್ದಾರೆ. ನಾವು ನಾಗರಿಕರಾಗಿ ಅವರಿಗೆ ಸಹಕರಿಸಬೇಕು. ಈಗ ರೇಡ್ ಮುಗಿದಿದ್ದು, ಅದರ ಪ್ರಕ್ರಿಯೆ ಇನ್ನೂ ಒಂದು ಗಂಟೆ ನಡೆಯುತ್ತದೆ. ನಾವು ಅವರಿಗೆ ಏನು ತೊಂದರೆ ಕೊಟ್ಟಿಲ್ಲ. ಅದೇ ರೀತಿ ಅವರು ಕೂಡ ನಮಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ. ತೆರಿಗೆ ಇಲಾಖೆಗೆ ನಾಗರಿಕರಾಗಿ ಸಹಕರಿಸಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂತಿಮ ಹಂತಕ್ಕೆ ತಲುಪಿದ ಪುನೀತ್, ಶಿವಣ್ಣ ಮನೆ ರೇಡ್

    ಯಾರೇ ಆಗಲಿ ಅವರ ಅಕೌಂಟ್ ವಿಚಾರದಲ್ಲಿ ವ್ಯತ್ಯಾಸ ಕಂಡು ಬಂದರೆ ತೆರಿಗೆ ಇಲಾಖೆ ಅವರು ರೇಡ್ ಮಾಡುತ್ತಾರೆ. ಅವರಿಗೆ ಬಂದಿದ್ದ ಮಾಹಿತಿ ಮೇರೆಗೆ ನಮ್ಮ ಮನೆಯ ಮೇಲೆ ರೇಡ್ ಮಾಡಿದ್ದಾರೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾವು ಸಂಪೂರ್ಣವಾಗಿ ಉತ್ತರ ಕೊಟ್ಟಿದ್ದೇವೆ. ನಮ್ಮ ಮನೆಯ ಮೇಲೆ 1984ರಲ್ಲಿ ಚೆನ್ನೈ, ಬೆಂಗಳೂರು ಮತ್ತು ನಮ್ಮ ಫಾರ್ಮ್ ಹೌಸ್ ನಲ್ಲಿ ನಡೆದಿತ್ತು. ಅದೇ ರೀತಿ ಈಗಲೂ ಮಾಡಿದ್ದಾರೆ ಅಷ್ಟೇ ಎಂದು ಪುನೀತ್ ಐಟಿ ದಾಳಿಯ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಇಂದು ಹುಬ್ಬಳ್ಳಿಯಲ್ಲಿ ಪುನೀತ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

    ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಮತ್ತು ಪವನ್ ವಡೆಯರ್ ಅವರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ. ಹೀಗಾಗಿ ಧ್ವನಿ ಸುರುಳಿ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಕಾರ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಹುಬ್ಬಳ್ಳಿಯ ಜನತೆ ಕಾದು ಕುಳಿತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv