Tag: ರೇಟ್

  • ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ಬಾಗಲಕೋಟೆ: ಸಲೂನ್‍ವೊಂದರಲ್ಲಿ ತಲೆಗೆ ಕಲರ್ ಹಾಕೋದರ ರೇಟ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ನಗರದ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಾಗರ್ ಅವಟಿ (22) ಕೊಲೆಗೀಡಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಸಾಗರ್ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದನು. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್‍ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್‌ಗೆ ಕಲರ್ ಹಚ್ಚೋದಕ್ಕೆ 20 ರೂ. ಕೊಡೋದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಈ ವೇಳೆ ಜಗಳವು ತಾರಕಕ್ಕೇರಿದ್ದು ಸದಾಶಿವ ಅಲ್ಲೇ ಇದ್ದ ಕತ್ತರಿಯಿಂದ ಆತನಿಗೆ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಈ ಮೊದಲು ಸಾಗರ, ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ನಿನ್ನೆ ಕೂಡ ಕೆಲ ಹೊತ್ತು ಕ್ಷೌರಿಕನಿಗೆ ಆತ ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ವೇಳೆ ಕೂಡಲೇ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ಬೆಂಗಳೂರು: ಕೊರೊನಾ ವೈರಸ್‍ಗೆ ಈಗಾಗಲೇ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ. ಜೊತೆಗೆ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಎಫೆಕ್ಟ್‌ಗಳನ್ನು ಕಾಣುತ್ತಿದ್ದೇವೆ. ಆದರೆ ಈಗ ಈ ಕೊರೊನಾ ನಾನ್ ವೆಜ್ ಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಮಟನ್ ಮತ್ತು ಫಿಶ್ ಕೊಳ್ಳಂಗಿಲ್ಲ, ತಿನ್ನಂಗಿಲ್ಲವೆನ್ನುವಂತಾಗಿದೆ.

    ಯಾವುದೇ ಫುಡ್ ಸ್ಟ್ರೀಟ್‍ಗೆ, ನಾನ್ ವೆಜ್ ಹೊಟೇಲ್‍ಗೆ ಹೋದರೆ ಮೊದಲು ಬಹುತೇಕರು ಮಟನ್, ಫಿಶ್ ರೆಸಿಪಿಗಳನ್ನು ಆರ್ಡರ್ ಮಾಡುತ್ತಿದ್ದರು. ಅದರಲ್ಲೂ ಡಯಟ್ ಮಾಡೋರಿಗೆ, ಜಿಮ್‍ನಲ್ಲಿ ವರ್ಕೌಟ್ ಮಾಡೋರಿಗೆ ಮತ್ತು ಕೂಲ್ ಫುಡ್ ಇಷ್ಟ ಪಡುವವರಿಗೆ ಮಟನ್ ಅಚ್ಚುಮೆಚ್ಚು. ಇನ್ಮುಂದೆ ಫಿಶ್, ಮಟನ್ ತಿನ್ನೋ ಮುನ್ನ ಯೋಚಿಸಬೇಕಾಗಿದೆ.

    ಹೌದು..ಚಿಕನ್, ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತೆ ಅಂತ ಇತ್ತೀಚೆಗೆ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಈ ಫೇಕ್ ಸುದ್ದಿಗೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ. ಹೀಗಾಗಿ ಜನರು ಕೋಳಿ ಮಾಂಸ ತಿನ್ನುವುದನ್ನೇ ಬಿಡುತ್ತಿದ್ದಾರೆ. ಇದರಿಂದ ಚಿಕನ್ ಬೇಡಿಕೆ ಕಡಿಮೆಯಾಗಿದೆ. 130, 140 ಇದ್ದ ಚಿಕನ್ ರೇಟ್ 80, 90ಕ್ಕೆ ಇಳಿದಿದೆ. ಇದರಿಂದ ಮಟನ್ ಹಾಗೂ ಫಿಶ್ ರೇಟ್ ಹೆಚ್ಚಾಗಿದೆ.

    ಕಳೆದ ವಾರದ ಬೆಲೆ ಇವತ್ತಿನ ಬೆಲೆ ನೋಡೋದಾದ್ರೆ:
    ಕಳೆದ ವಾರ ಕೆ.ಜಿ ಮಟನ್‍ಗೆ 550 ರೂ ಇತ್ತು. ಆದರೆ ಇಂದು 700 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಕಳೆದ ವಾರ ಕೆ.ಜಿಗೆ 120ರೂ. ಇದ್ದ ಫಿಶ್ ಇಂದು 200 ರೂಪಾಯಿಗೆ ಜಿಗಿದಿದೆ.

    ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ಹಾಗೂ ಫಿಶ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800 ರೂ.ಗಳಿಗೆ ಏರಿಕೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಇದು ನಾನ್‍ವೆಜ್ ಪ್ರಿಯರಿಗೆ ಬೇಸರವನ್ನುಂಟು ಮಾಡಿದೆ ಎಂದು ನಾನ್ ವೆಜ್ ಪ್ರಿಯ ಮಹಮದ್ ಇದ್ರೀಸ್ ಚೌದ್ರೀ ಹೇಳಿದ್ದಾರೆ.

  • ಹಬ್ಬಕ್ಕೆ ಹೊರಟ ಪ್ರಯಾಣಿಕರಿಗೆ ಶಾಕ್ – ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು

    ಹಬ್ಬಕ್ಕೆ ಹೊರಟ ಪ್ರಯಾಣಿಕರಿಗೆ ಶಾಕ್ – ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು

    ಬೆಂಗಳೂರು: ಈಗಾಗಲೇ ನಾಡಿನೆಲ್ಲೆಡೆ ದಸರಾ ದರ್ಬಾರ್ ಜೋರಾಗಿದೆ. ಸೋಮವಾರ ಆಯುಧ ಪೂಜೆ, ನಾಡಿದ್ದು ವಿಜಯದಶಮಿ ಇದೆ. ಒಟ್ಟು ಮೂರು ದಿನ ಸಾಲು-ಸಾಲು ರಜೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿರುವ ಜನರು ತಮ್ಮ ತಮ್ಮ ಊರುಗಳತ್ತ ಹೊರಡಲು ರೆಡಿಯಾಗಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್‍ಗಳು ಹಗಲು ದರೋಡೆಗಿಳಿದಿವೆ.

    ಕೆಲವರು ರಜೆ ಇರುವುದರಿಂದ ಫ್ಯಾಮಿಲಿ ಸಮೇತ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋಗಲು ಸಿದ್ಧರಾಗಿದ್ದಾರೆ. ಆದರೆ ಖಾಸಗಿ ಬಸ್‍ಗಳ ಟಿಕೆಟ್ ರೇಟ್ ದುಪ್ಪಟ್ಟಾಗಿರುವುದರಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಇಷ್ಟು ದಿನ ಖಾಸಗಿ ಬಸ್‍ಗಳ ಟಿಕೆಟ್ ರೇಟ್ ಸಾಮಾನ್ಯವಾಗಿತ್ತು. ಆದರೆ ಶನಿವಾರ ರಾತ್ರಿಯಿಂದ ಬಸ್‍ಗಳ ಟಿಕೆಟ್ ರೇಟ್ ದುಬಾರಿಯಾಗಿದೆ.

    ಬಸ್‍ಗಳು ರೇಟ್: ಬೆಂಗಳೂರಿನಿಂದ ಮಂಗಳೂರಿಗೆ 600 ರೂ. ಇದ್ದ ಬಸ್ ದರ ಈಗ 1400 – 1500 ರೂ. ಆಗಿದೆ. ಉಡುಪಿಗೆ 700 ರೂ. ಇತ್ತು. ರಾತ್ರಿಯಿಂದ 1300-1700ರೂ. ಅಧಿಕವಾಗಿದೆ. ಇನ್ನೂ ಬೆಂಗಳೂರಿನಿಂದ ಶಿವಮೊಗ್ಗಗೆ 500 ರೂ. ಬಸ್ ರೇಟ್ ಇತ್ತು. ಇಂದಿನಿಂದ 1000-1600ರೂ. ಹೆಚ್ಚಾಗಿದೆ. ಬೀದರ್ ಗೆ 850 ರೂ.ಯಿಂದ 2000-2200ರೂ. ಆಗಿದೆ. ಬೆಳಗಾಂಗೆ 700 ರೂ. ಬಸ್ ರೇಟ್ ಇತ್ತು. ಈಗ 1000-1200ರೂ. ಆಗಿದೆ. ಬೆಂಗಳೂರು ಟು ಹೈದರಾಬಾದಿಗೆ 1400 ರೂ. ಇತ್ತು. ಇಂದು 1700 ರೂ. ಆಗಿದೆ.

    ಇನ್ನೂ ಮನೆಯವರೊಂದಿಗೆ ಹಬ್ಬ ಆಚರಿಸಬೇಕು ಅನ್ನೋದು ಪ್ರತಿ ಪ್ರಯಾಣಿಕರ ಆಸೆಯಾಗಿರುತ್ತದೆ. ಆದರೆ ಇದೆ ಅನಿವಾರ್ಯತೆಯನ್ನ ಖಾಸಗಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿಯವರ ಈ ಹಗಲು ದರೋಡೆಗೆ ಸರ್ಕಾರ, ಸಾರಿಗೆಯವರು ಬ್ರೇಕ್ ಹಾಕಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.