Tag: ರೇಖಾ ಗುಪ್ತಾ

  • ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    – ಹಲ್ಲೆ ಬಳಿಕ ರೇಖಾಗುಪ್ತಾ ಮೊದಲ ಫೋಟೋ ರಿಲೀಸ್
    – ರೇಖಾ ಗುಪ್ತಾಗೆ ಝೆಡ್ ಪ್ಲಸ್ ಭದ್ರತೆ

    ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ (CM Rekha Gupta) ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಯನ್ನು ಐದು ದಿನ ಪೊಲೀಸ್ ಕಸ್ಟಡಿಗೆ  (Police Custody) ನೀಡಿದೆ.

    ಈ ಕುರಿತು ಸಿವಿಲ್ ಲೈನ್ (C ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 109(1), 132 ಮತ್ತು 221ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬುಧವಾರವೇ (ಆ.20) ಆರೋಪಿಯನ್ನು ಬಂಧಿಸಲಾಗಿದೆ. ಗುರುವಾರ (ಆ.21) ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

    ಹಲ್ಲೆ ಬಳಿಕ ರೇಖಾ ಗುಪ್ತಾ ಮೊದಲ ಫೋಟೋ ರಿಲೀಸ್:
    ಬಿಜೆಪಿಯ 7 ಎಂಪಿಗಳು ಗುರುವಾರ (ಆ.21) ಸಿಎಂ ರೇಖಾ ಗುಪ್ತಾ ಅವರನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿದರು. ಈ ಕುರಿತು ಬಿಜೆಪಿ ಎಂಪಿ ಪ್ರವೀಣ್ ಖಂಡೇವಾಲಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸಿಎಂ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಮೊದಲಿನಂತೆಯೇ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹಲ್ಲೆ ಬಳಿಕ ಸಿಎಂ ರೇಖಾ ಗುಪ್ತಾ ಅವರ ಮೊದಲ ಫೋಟೋ ರಿಲೀಸ್ ಮಾಡಿದ್ದಾರೆ.

    ಸಿಎಂ ರೇಖಾ ಗುಪ್ತಾಗೆ ಝೆಡ್ ಶ್ರೇಣಿಯ ವಿಐಪಿ ಭದ್ರತೆ
    ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಅವರಿಗೆ `ಝೆಡ್’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿದೆ. ಗುಪ್ತಾ ಅವರ ಅಧಿಕೃತ ನಿವಾಸದಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್‌ನ ಭದ್ರತೆ ಒದಗಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ದೆಹಲಿ ಮುಖ್ಯಮಂತ್ರಿಯ ಭದ್ರತೆಯ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ವಹಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

    ದಿನದ 24 ಗಂಟೆಯೂ 22ರಿಂದ 25 ಸಶಸ್ತ್ರ ಕಮಾಂಡೊಗಳ ತಂಡವು ಮುಖ್ಯಮಂತ್ರಿಯ ಭದ್ರತೆಯಲ್ಲಿ ನಿರತವಾಗಿರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬಕ್ಕೂ ಇದೇ ಪಡೆಯು ಭದ್ರತೆಯನ್ನು ಒದಗಿಸುತ್ತಿದೆ.

    ಏನಿದು ಪ್ರಕರಣ?
    ಗುಜರಾತ್‌ನ ರಾಜ್‌ಕೋಟ್ ನಿವಾಸಿಯಾಗಿರುವ ಸಕಾರಿಯಾ ಬೆಳಗ್ಗೆ 7:30ಕ್ಕೆ ದೆಹಲಿ ಮುಖ್ಯಮಂತ್ರಿಗಳ ಕಚೇರಿ ಕೆಲಸಕ್ಕೆ ಬಂದಿದ್ದ. ಈತ ತಿಹಾರ್ ಜೈಲಿನಲ್ಲಿದ್ದ ತನ್ನ ಸಂಬಂಧಿಕರೊಬ್ಬರನ್ನ ಬಿಡುಗಡೆ ಮಾಡಿಸುವಂತೆ ಸಿಎಂಗೆ ಮನವಿ ಕೊಡಲು ಬಂದಿದ್ದ. ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ತಂದಿದ್ದ. ಮನವಿ ಕೊಡಲು ಬಂದಾಗ ಏಕಾಏಕಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ವ್ಯಕ್ತಿಯನ್ನ 41 ವರ್ಷದ ರಾಜೇಶ್ ಭಾಯಿ ಖಿಮ್ಜಿ ಭಾಯಿ ಸಕರಿಯಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಎಎಸ್ಪಿ ಕಾರಿಗೆ ಡಿಕ್ಕಿ – ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್

  • ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

    ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

    ನವದೆಹಲಿ: ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಸಾರ್ವಜನಿಕ ಕುಂದುಕೊರತೆ ಪರಿಹಾರ ಅಧಿವೇಶನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ, ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇದು ನನ್ನ ಮೇಲೆ ಮಾತ್ರವಲ್ಲ, ದೆಹಲಿ ಮತ್ತು ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಮಾಡಿದ ಹೇಡಿತನದ ಪ್ರಯತ್ನ ಎಂದು ಆರೋಪಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತೇನೆ ಎಂದು ತಿಳಿಸಿದ್ದಾರೆ.

    ಗುಜರಾತ್‌ನ ರಾಜ್‌ಕೋಟ್‌ನ ಸಕಾರಿಯಾ ರಾಜೇಶ್‌ಭಾಯ್ ಖಿಮ್ಜಿಭಾಯ್ ಎಂಬಾತ ಸಿಎಂಗೆ ಕಪಾಳಮೋಕ್ಷ ಮಾಡಿದ್ದ. ಅರ್ಜಿದಾರರ ಸೋಗಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗುವಾಗ, ಅವರ ಮೇಲೆ ಹಲ್ಲೆ ನಡೆಸಿದ್ದ.

    ಸಿಎಂಗೆ ಕಪಾಳಮೋಕ್ಷ ಮಾಡಿ ತಳ್ಳಿದ್ದಾನೆ. ನಂತರ ಅವರ ಭದ್ರತಾ ಸಿಬ್ಬಂದಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವ್ಯಕ್ತಿ ಹಲ್ಲೆ ಯಾಕೆ ನಡೆಸಿದ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

  • ದೆಹಲಿ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ – ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ.

    ದೆಹಲಿ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ – ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ.

    ನವದೆಹಲಿ: ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರವು 26 ವರ್ಷಗಳ ನಂತರ ದೆಹಲಿ ವಿಧಾನಸಭೆಯಲ್ಲಿ ತನ್ನ ಮೊದಲ ಬಜೆಟ್ (Delhi Budget) ಅನ್ನು ಮಂಗಳವಾರ ಮಂಡಿಸಿತು.

    2025-26 (FY26) ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ ದೆಹಲಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವೆ ರೇಖಾ ಗುಪ್ತಾ, ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ಪಾವತಿಸಲು ಸರ್ಕಾರ 5,100 ಕೋಟಿ ಹಣವನ್ನು ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.

    ಒಟ್ಟು 1 ಟ್ರಿಲಿಯನ್ ವೆಚ್ಚದಲ್ಲಿ, ದೆಹಲಿ ಬಜೆಟ್ 2025 ಹಿಂದಿನ ಬಜೆಟ್‌ಗಿಂತ ಶೇ. 31.5 ರಷ್ಟು ಹೆಚ್ಚಳ ಕಂಡಿದೆ. FY26 ರ ಬಂಡವಾಳ ವೆಚ್ಚವನ್ನು ದ್ವಿಗುಣಗೊಳಿಸಿ 28,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 2,144 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಗುಪ್ತಾ ಹೇಳಿದ್ದಾರೆ.

    ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದೆಹಲಿಯ ಜನರಿಗೆ ಈಗ 10 ಲಕ್ಷ ರೂ. ವಿಮಾ ರಕ್ಷಣೆ ಸಿಗಲಿದೆ. ಕೇಂದ್ರದ 5 ಲಕ್ಷ ರೂ. ವಿಮಾ ರಕ್ಷಣೆಯ ಜೊತೆಗೆ, ದೆಹಲಿಯ ಜನರಿಗೆ 5 ಲಕ್ಷ ಟಾಪ್-ಅಪ್ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

    ದೆಹಲಿ-ಎನ್‌ಸಿಆರ್ ಒಳಗೆ ಸಾರಿಗೆ ಸಂಪರ್ಕವನ್ನು ಸುಧಾರಿಸಲು ದೆಹಲಿ ಸರ್ಕಾರ 1,000 ಕೋಟಿ ರೂ. ಹಂಚಿಕೆ ಮಾಡಿದೆ. ಇದನ್ನು ಐತಿಹಾಸಿಕ ಬಜೆಟ್ ಎಂದು ಕರೆದ ಸಿಎಂ ಗುಪ್ತಾ, ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ಮತ್ತು ನೀರು ಸರಬರಾಜು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹತ್ತು ಕ್ಷೇತ್ರಗಳಿಗೆ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ.

  • ಮಹಿಳೆಯರ ಖಾತೆಗೆ 2,500 ರೂ. – ಇಂದು ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಸಿಗುತ್ತಾ ಗುಡ್‌‌ ನ್ಯೂಸ್?

    ಮಹಿಳೆಯರ ಖಾತೆಗೆ 2,500 ರೂ. – ಇಂದು ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಸಿಗುತ್ತಾ ಗುಡ್‌‌ ನ್ಯೂಸ್?

    – ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಸಿಎಂ ರೇಖಾ ಕೊಡ್ತಾರಾ ಗಿಫ್ಟ್?‌

    ನವದೆಹಲಿ: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) ಹಿನ್ನೆಲೆಯಲ್ಲಿ ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಬಂಪರ್‌ ಗಿಫ್ಟ್‌ ನೀಡುವ ಸಾಧ್ಯತೆ ಇದೆ.

    ಮಹಿಳೆಯರ ಖಾತೆಗೆ 2,500 ರೂ. ಹಾಕುವ ಬಗ್ಗೆ ಇಂದು ನಿರ್ಧಾರ ಆಗಬಹುದು ಎನ್ನಲಾಗಿದೆ. ಬೆಳಗ್ಗೆ 10 ಗಂಟೆಗೆ ಸಿಎಂ ರೇಖಾ ಗುಪ್ತಾ (Rekha Gupta) ಅವರು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆ – ಕೇಂದ್ರದ ಪ್ರಕ್ರಿಯೆ ವಿರುದ್ಧ ಹೋರಾಟಕ್ಕೆ ಕರೆ; ಕರ್ನಾಟಕ ಸೇರಿ 7 ರಾಜ್ಯದ ಸಿಎಂಗಳಿಗೆ ಸ್ಟಾಲಿನ್ ಪತ್ರ

    ಸಚಿವ ಸಂಪುಟ ಸಭೆಯಲ್ಲಿ ಮಹಿಳೆರ ಖಾತೆಗೆ ಹಣ ಹಾಕುವ ‘ಮಹಿಳಾ ಸಮೃದ್ಧಿ ಯೋಜನೆ’ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ನೀಡುವ ಬಗ್ಗೆ ತಿರ್ಮಾನ ಕೈಗೊಳ್ಳಬಹುದು ಎನ್ನಲಾಗಿದೆ.

    ಮಧ್ಯಾಹ್ನ 12 ಕ್ಕೆ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಮೊದಲ ಸಂಪುಟದಲ್ಲೇ ಮಹಿಳಾ ಸಮೃದ್ಧಿ ಯೋಜನೆಯ ಭರವಸೆಯನ್ನು ಬಿಜೆಪಿ ನೀಡಿತ್ತು. ಇದಲ್ಲದೇ ಹೋಳಿ, ದೀಪಾವಳಿಗೆ ಉಚಿತ ಸಿಲಿಂಡರ್ ಭರವಸೆಯನ್ನೂ ನೀಡಿತ್ತು. ಇದನ್ನೂ ಓದಿ: ಹರಿಯಾಣದಲ್ಲಿ ವಾಯುಪಡೆಯ ಜಾಗ್ವಾರ್ ಫೈಟರ್ ಜೆಟ್ ಪತನ – ಪೈಲಟ್ ಸೇಫ್‌

  • AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    * 14 ವರದಿಗಳನ್ನು ಮಂಡಿಸಲಿರುವ ಬಿಜೆಪಿ ಸರ್ಕಾರ

    ನವದೆಹಲಿ: ದೆಹಲಿಯ ಬಿಜೆಪಿ ಸರ್ಕಾರವು ಹಿಂದಿನ ಎಎಪಿ ಆಡಳಿತದ ಕಾರ್ಯಕ್ಷಮತೆಗೆ ಸಂಬಂಧಿಸಿದ 14 ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಿದೆ.

    ಆಪ್ ಸರ್ಕಾರದ ಹಗರಣಗಳು, ಶೀಷ್‌ ಮಹಲ್, ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸರ್ಕಾರ ವರದಿ ಮಂಡನೆ ಮಾಡಲಿದೆ.

    ಶೀಷ್‌ ಮಹಲ್ ನವೀಕರಣಕ್ಕೆ 8.62 ಕೋಟಿಗೆ ಮಂಜೂರು ಮಾಡಲಾಗಿದ್ದರೂ, ಅಂತಿಮವಾಗಿ 33.66 ಕೋಟಿ ರೂ. ಖರ್ಚು ಮಾಡಲಾಗಿತ್ತು. ಮೊಹಲ್ಲಾ‌ ಕ್ಲಿನಿಕ್ ಯೋಜನೆಗಳಲ್ಲಿ ಅಕ್ರಮದ ಶಂಕೆ ಇದೆ. ಈ ಬಗ್ಗೆ ಆಡಳಿತಾರೂಢ ಬಿಜೆಪಿ ಸರ್ಕಾರ ವರದಿ ಮಂಡಿಸಲಿದೆ.

    ಎಎಪಿ ‘ತಡೆಹಿಡಿದ’ ಸಿಎಜಿ ವರದಿಗಳಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ನಿರ್ಣಾಯಕ ಲೆಕ್ಕಪರಿಶೋಧನೆಗಳು ಮತ್ತು ಮೌಲ್ಯಮಾಪನಗಳು ಸೇರಿವೆ ಎನ್ನಲಾಗಿದೆ.

    * ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ (2021ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ)
    * ಆದಾಯ, ಆರ್ಥಿಕ, ಸಾಮಾಜಿಕ ಮತ್ತು ಸಾಮಾನ್ಯ ವಲಯಗಳು ಮತ್ತು ಸಾರ್ವಜನಿಕ ಉದ್ದಿಮೆಗಳು (2020ರ ಮಾರ್ಚ್ 31, ಮತ್ತು 2021 ಕ್ಕೆ ಕೊನೆಗೊಂಡ ವರ್ಷಗಳಿಗೆ)
    * ವಾಹನ ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ (2021ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ)
    * ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ (2021ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ)
    * ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ (2022ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ)
    * ಮದ್ಯ ಪೂರೈಕೆಯ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ
    * ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ (2023ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ)
    * ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳ ನಿರ್ವಹಣೆಯ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ
    * ದೆಹಲಿ ಸಾರಿಗೆ ನಿಗಮದ ಕಾರ್ಯನಿರ್ವಹಣೆಯ ಕುರಿತು ಕಾರ್ಯಕ್ಷಮತೆ ಲೆಕ್ಕಪರಿಶೋಧನಾ ವರದಿ

  • ಮತ್ತೆ ಅಚ್ಚರಿ ನೀಡಿದ ಮೋದಿ, ಶಾ ಜೋಡಿ – ರೇಖಾ ಗುಪ್ತಾ ಆಯ್ಕೆ ಹಿಂದಿದೆ ಭಾರೀ ಲೆಕ್ಕಾಚಾರ

    ಮತ್ತೆ ಅಚ್ಚರಿ ನೀಡಿದ ಮೋದಿ, ಶಾ ಜೋಡಿ – ರೇಖಾ ಗುಪ್ತಾ ಆಯ್ಕೆ ಹಿಂದಿದೆ ಭಾರೀ ಲೆಕ್ಕಾಚಾರ

    ನವದೆಹಲಿ: ಮತ್ತೆ ಬಿಜೆಪಿ ಹೈಕಮಾಂಡ್‌ (BJP High Command) ಅಚ್ಚರಿ ನೀಡಿದೆ. ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ (Rekha Gupta) ಅವರಿಗೆ ಮುಖ್ಯಮಂತ್ರಿ (Chief Minister) ಪಟ್ಟವನ್ನು ನೀಡಿದೆ.

    27 ವರ್ಷದ ಬಳಿಕ ದೆಹಲಿಯನ್ನು ಗೆದ್ದ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಮಾಧ್ಯಮಗಳಲ್ಲಿ ಹಲವಾರು ಹೆಸರುಗಳು ಹರಿದಾಡುತ್ತಿತ್ತು. ಆದರಲ್ಲೂ ಅರವಿಂದ ಕೇಜ್ರಿವಾಲ್‌ ಅವರನ್ನು ಸೋಲಿಸಿದ ಪರ್ವೇಶ್‌ ವರ್ಮಾ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಪ್ರತಿ ಬಾರಿ ಅಚ್ಚರಿ ನೀಡುವಂತೆ ಬಿಜೆಪಿ ಹೈಕಮಾಂಡ್‌ ದೆಹಲಿಯಲ್ಲಿ ಮೊದಲ ಬಾರಿ ಆಯ್ಕೆಯಾದ ರೇಖಾ ಗುಪ್ತಾ ಅವರಿಗೆ ಮಣೆ ಹಾಕಿದೆ.

    ದೆಹಲಿ ಚುನಾವಣೆಯಲ್ಲಿ ಸಂದರ್ಭದಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಹೆಸರನ್ನು ಪ್ರಕಟಿಸಿರಲಿಲ್ಲ.ಆಪ್‌ ದೆಹಲಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ ಎಂದೇ ಟೀಕಿಸಿತ್ತು. ಬಿಜೆಪಿ ಎಲ್ಲಾ ನಾಯಕರು ಸಂಘಟಿತವಾಗಿ ಹೋರಾಡಿದ್ದರು. ಅದರಲ್ಲೂ ಪೋಸ್ಟರ್‌ಗಳಲ್ಲಿ ಮೋದಿ ಮುಖವೇ ಕಾಣುತ್ತಿತ್ತು.

    ಈ ಹಿಂದೆ ಹಲವು ರಾಜ್ಯಗಳಲ್ಲಿ ಬಿಜೆಪಿ ಅಚ್ಚರಿಯ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಈ ಆಯ್ಕೆಯ ಪಟ್ಟಿಗೆ ಈಗ ರೇಖಾ ಗುಪ್ತಾ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

    ಬುಧವಾರ ನಡೆದ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ರೇಖಾ ಗುಪ್ತಾರನ್ನು ಆಯ್ಕೆ ಮಾಡಲಾಗಿದೆ. ಇಂದು ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ. ಇದಕ್ಕೆ ಪ್ರಧಾನಿ ಸೇರಿ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ನಿಜಲಿಂಗಪ್ಪ ರಾಜೀನಾಮೆಗೆ ಕಾರಣವಾಗಿದ್ದ ರಾಜ್ಯದ ಮೊದಲ ಲಾಕಪ್‍ಡೆತ್ ನಡೆದ ಸ್ಟೇಷನ್ ಇನ್ನೂ ನೆನಪು ಮಾತ್ರ!

    ಎಲ್ಲೆಲ್ಲಿ ಅಚ್ಚರಿ ಸಿಎಂ:
    ಯೋಗಿ ಅದಿತ್ಯನಾಥ್‌(ಉತ್ತರ ಪ್ರದೇಶ), ಬಸವರಾಜ ಬೊಮ್ಮಾಯಿ(ಕರ್ನಾಟಕ), ಭೂಪೇಂದ್ರ ಪಟೇಲ್(ಗುಜರಾತ್‌), ನಯಾಬ್‌ ಸಿಂಗ್‌ ಸೈನಿ(ಹರ್ಯಾಣ), ಭಜನ್‌ಲಾಲ್‌ ಶರ್ಮಾ(ರಾಜಸ್ಥಾನ), ಮೋಹನ್‌ ಯಾದವ್‌(ಮಧ್ಯಪ್ರದೇಶ), ಪುಷ್ಕರ್‌ ಸಿಂಗ್‌ ಧಾಮಿ(ಉತ್ತರಾಖಂಡ), ವಿಷ್ಣುದೇವ ಸಾಯಿ(ಛತ್ತೀಸ್‌ಗಢ).

    ರೇಖಾ ಆಯ್ಕೆಗೆ ಕಾರಣ ಏನು?
    ಪರ್ವೇಶ್‌ ಮಾಜಿ ಸಿಎಂ ಸಾಹಿಬ್‌ ಸಿಂಗ್‌ ವರ್ಮಾ ಅವರ ಮಗನಾಗಿದ್ದಾರೆ. ಅವರಿಗೆ ಸಿಎಂ ಪಟ್ಟ ನೀಡಿದರೆ ಕುಟುಂಬ ರಾಜಕಾರಣದ ಆರೋಪ ಬರುತ್ತಿತ್ತು. 27 ವರ್ಷದ ನಂತರ ಅಧಿಕಾರಕ್ಕೆ ಬಂದಿರುವುದರ ಜೊತೆ ಮೊದಲ ಸಲ ಶಾಸಕರಾಗಿರುವ ಕಾರಣ ಸದ್ಯ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಈ ಕಾರಣಕ್ಕೆ ಮೊದಲ ಬಾರಿಗೆ ಗೆದ್ದಿರುವ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

    ರೇಖಾಗುಪ್ತಾ ಪ್ರಬಲ ಬನಿಯಾ ಸಮುದಾಯಕ್ಕೆ ಸೇರಿದ ನಾಯಕಿಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಕೂಡಾ ಬನಿಯಾ ಸಮುದಾಯಕ್ಕೆ ಸೇರಿದ್ದರು. ಚುನಾವಣೆ ಸಮಯದಲ್ಲಿ ದೆಹಲಿ ಸಿಎಂ ಅತಿಶಿಯಾಗಿದ್ದರು. ಈಗ ರೇಖಾ ಅವರನ್ನು ಆಯ್ಕೆ ಮಾಡುವ ಮೂಲಕ ಮಹಿಳೆಗೆ ಆದ್ಯತೆ ನೀಡಲಾಗಿದೆ ಎಂಬ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ಇದನ್ನೂ ಓದಿ: ಮೂವರು ಆಪ್‌ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ – ದೆಹಲಿಯಲ್ಲಿ ಟ್ರಿಪಲ್‌ ಎಂಜಿನ್‌ ಸರ್ಕಾರ ಬರುತ್ತಾ?

    ದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳಲ್ಲಿ ಮಹಿಳಾ ಡಿಸಿಎಂಗಳಿದ್ದಾರೆ. ಆದರೆ ಎಲ್ಲೂ ಮಹಿಳಾ ಸಿಎಂ ಇರಲಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಷ್ಟ್ರ ರಾಜಧಾನಿಯಲ್ಲೇ ಮಹಿಳೆಗೆ ಪಟ್ಟಕಟ್ಟಿದೆ. ಓಬಿಸಿ ನಾಯಕರನ್ನು ಆಯ್ಕೆ ಮಾಡಿದರೆ ಬಿಜೆಪಿ ಮಾತ್ರವಲ್ಲದೇ ಇತರ ರಾಜ್ಯಗಳಲ್ಲಿ ತನ್ನ ಮತದಾರರನ್ನು ಬಲಪಡಿಸುವ ಗುರಿ ಹೊಂದಿದೆ.

    ಅಧಿಕಾರದಲ್ಲಿರುವ ಸರ್ಕಾರಗಳ ಪೈಕಿ ಸದ್ಯ ಪಶ್ಚಿಮ ಬಂಗಾಳದಲ್ಲಿರುವ ಮಮತಾ ಬ್ಯಾನರ್ಜಿ ಒಬ್ಬರೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ,  ದೇಶದಲ್ಲಿ ಎಲ್ಲಿಯೂ ಮಹಿಳಾ ಸಿಎಂ ಅಧಿಕಾರದಲ್ಲಿ ಇಲ್ಲ. ಟಿಎಂಸಿಗೆ ಮತ ನೀಡುವ ಮೂಲಕ ನಮ್ಮನ್ನು ಉಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದರು. ಆದರೆ ಮುಂದಿನ ಚುನಾವಣೆ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಲು ಸಾಧ್ಯವಾಗುವುದಿಲ್ಲ.