Tag: ರೇಖಾ ಕದಿರೇಶ್

  • ರೇಖಾ ಕದಿರೇಶ್ ಹತ್ಯೆ – ಮಾಸ್ಟರ್ ಮೈಂಡ್ ಅರೆಸ್ಟ್

    ರೇಖಾ ಕದಿರೇಶ್ ಹತ್ಯೆ – ಮಾಸ್ಟರ್ ಮೈಂಡ್ ಅರೆಸ್ಟ್

    ಬೆಂಗಳೂರು: ಮಾಜಿ ಬಿಜೆಪಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸೂತ್ರಧಾರನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಸೆಲ್ವರಾಜ್ ಪೂಬಾಳನ್ ಅಲಿಯಾಸ್ ಮಾಸ್ಟರ್ ಉರುಫ್ ಕ್ಯಾಪ್ಟನ್ ಬಂಧಿತ ಆರೋಪಿ. ಆರೋಪಿಯನ್ನು ಈಜಿಪುರದ ಸರ್ಕಾರಿ ಶಾಲೆಯ ಬಳಿ ಪೊಲೀಸರು ಬಂಧಿಸಿದ್ದಾರೆ.

    ಸೆಲ್ವರಾಜ್ ಪೀಟರ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ರೇಖಾ ಕೊಲೆ ಸಂಬಂಧ ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ. ರೇಖಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಲಾ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

    ರೇಖಾ ಕದಿರೇಶ್ ಹತ್ಯೆಗೆ ಹೋದಾಗ ಯಾರು ಏನೇನು ಮಾಡಬೇಕು? ಹತ್ಯೆ ಮಾಡಿದ ಬಳಿಕ ಆರೋಪಿಗಳು ಪರಾರಿಯಾಗಲು ಏನು ಮಾಡಬೇಕು ಎಂಬುದರ ಬಗ್ಗೆ ಪ್ಲಾನ್ ಕೊಟ್ಟಿದ್ದ. ಇದನ್ನೂ ಓದಿ: ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ

    ಐದು ಜನ ಆರೋಪಿಗಳು ಎರಡು ತಂಡಗಳಾಗಿ ಹೋಗಿ ಕೃತ್ಯ ಎಸಗಬೇಕು. ಪರಾರಿಯಾದ ಬಳಿಕ ಹಣಕಾಸಿನ ನೆರವು ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಆರೋಪಿಗಳಿಗೆ ಮಾಹಿತಿ ಕೊಟ್ಟ ವಿಚಾರ ತನಿಖೆಯ ವೇಳೆ ಬಹಿರಂಗವಾಗಿದೆ.

    ಈ ಹಿಂದೆ ಪೀಟರ್ ಮತ್ತು ಸೆಲ್ವರಾಜ್ ಮಾಸ್ಟರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಆರೋಪಿ ಸೆಲ್ವರಾಜ್ ಗೆ ಕಾಟನ್ ಪೇಟೆ, ಶ್ರೀರಾಮಪುರ, ಈಜಿಪುರ, ಆಸ್ಟಿನ್ ಟೌನ್ ನಲ್ಲಿ ನಡೆಯುವ ಕ್ರೈಮ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತಿತ್ತು.

  • ರೇಖಾ ಕದಿರೇಶ್ ಹತ್ಯೆ ಹಿಂದೆ ನಾದಿನಿ ಕೈವಾಡ? – ನಾದಿನಿ ಮಾಲಾ, ಮಗ ಅರುಳ್ ಅರೆಸ್ಟ್

    ರೇಖಾ ಕದಿರೇಶ್ ಹತ್ಯೆ ಹಿಂದೆ ನಾದಿನಿ ಕೈವಾಡ? – ನಾದಿನಿ ಮಾಲಾ, ಮಗ ಅರುಳ್ ಅರೆಸ್ಟ್

    ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ರೇಖಾ ಕೊಲೆಯಾದ ದಿನ ಕಣ್ಣೀರು ಹಾಕ್ತಿದ್ದ ನಾದಿನಿ ಮಾಲ ಮತ್ತು ಮಗ ಅರುಳನೇ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಗಳು ಅನ್ನೋ ಶಾಕಿಂಗ್ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ

    ವರಸೆಯಲ್ಲಿ ರೇಖಾ ಕದಿರೇಶ್‍ಗೆ ನಾದಿಯಾಗಬೇಕು. ರೇಖಾ ಕೊಲೆಯಾದ ದಿನ ಮಾಲಾ ಓವರ್ ಆಕ್ಟಿಂಗ್ ಮಾಡಿ ಕಣ್ಣೀರು ಹಾಕುವಾಗಲೇ ಪೊಲೀಸರಿಗೆ ಡೌಟ್ ಶುರುವಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಮಾಲಾ ಮೇಲೆ ಒಂದು ಕಣ್ಣಿಟ್ಟಿದ್ದರು. ಮೊದಲಿಗೆ ಕೊಲೆ ಮಾಡಿದ ಆರೋಪಿಗಳ ಬೆನ್ನು ಬಿದ್ದು ಪ್ರಮುಖ ಆರೋಪಿ ಪೀಟರ್ ಮತ್ತು ಸೂರ್ಯನಿಗೆ ಗುಂಟೇಟು ಹೊಡೆದು, ಮತ್ತೆ ಮೂವರು ಸೇರಿದಂತೆ ಒಟ್ಟು ಐವರನ್ನು ಬಂಧಿಸಿದ್ದರು. ಈ ಐವರ ವಿಚಾರಣೆ ವೇಳೆ ರೇಖಾ ಕದಿರೇಶ್ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್‍ಗಳು ಮಾಲ ಮತ್ತು ಮಾಲನ ಮಗ ಅರುಳ್ ಕೈವಾಡದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಛಲವಾದಿಪಾಳ್ಯದಲ್ಲಿ ಕದಿರೇಶ್ ಕಾರ್ಪೋರೇಟರ್ ಆಗಿದ್ದ ವೇಳೆ ಈಗ ಅರೆಸ್ಟ್ ಆಗಿರುವ ಪೀಟರ್, ಅರುಣ್, ಸೂರ್ಯ, ಸ್ಟೀಫನ್, ಪುರುಷೋತ್ತಮ ಸೇರಿದಂತೆ ಎಲ್ಲರು ಕೂಡ ಕದಿರೇಶ್ ಗೆ ತುಂಬಾ ಆಪ್ತರಾಗಿದ್ದರು. ಕದಿರೇಶ್ ಕೂಡ ಇವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅಕ್ಕ ಮಾಲಾ ಕೂಡ ಏರಿಯಾದಲ್ಲಿ ಹವಾ ಮೆಂಟೈನ್ ಮಾಡ್ಕೊಂಡಿದ್ಳು. ಆದರೆ ಕದಿರೇಶ್ ಕೊಲೆಯಾಗಿ, ರೇಖಾ ಕಾರ್ಪೋರೇಟರ್ ಆದಾಗ ಇವರೆಲ್ಲರನ್ನೂ ದೂರ ಇಟ್ಟಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಾಲಾ ಮತ್ತು ಮಗ ಅರುಳ್‍ಗೆ ಪೀಟರ್ ಸಾಥ್ ನೀಡಿದ್ದ. ರೇಖಾ ಬದುಕಿರೋ ತನಕ ನಮಗೆ ಉಳಿಗಾಲವಿಲ್ಲ. ಅವಳನ್ನ ಮುಗಿಸೋಕೆ ಪ್ಲಾನ್ ಮಾಡಿ, ಕೇಸು, ಜಾಮೀನು, ನಾವ್ ನೋಡ್ಕೋತಿವಿ ಅಂತಾ ಮಾಲ ಮತ್ತು ಮಗ ಆರುಳ್ ಹತ್ಯೆ ಗೆ ಡೀಲ್ ನೀಡಿದ್ದರು ಅಂತ ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ಪೋಷಕರು – ಮೃತದೇಹ ಹೊರತೆಗೆದು ಪರಿಶೀಲನೆ

    ತಮ್ಮನ ಹೆಂಡತಿಗೆ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದು ನಾದಿನಿ ಮಾಲ ಅಂತಾ ತಿಳಿದ ಸ್ಥಳೀಯರು ಶಾಕ್ ಆಗಿದ್ದಾರೆ. ಸದ್ಯ ರೇಖಾ ಕದಿರೇಶ್ ಹತ್ಯೆ ಪ್ರಕರಣ ದಲ್ಲಿ ಏಳು ಜನರ ಬಂಧನವಾಗಿದ್ದು, ಇನ್ನೂ ಯಾರ್ಯಾರು ಈ ಕೊಲೆಯ ಹಿಂದಿದ್ದಾರೆ ಅನ್ನೋದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ. ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

  • ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

    ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

    ಬೆಂಗಳೂರು: ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಇದೀಗ ಸ್ಫೋಟಕ ತಿರುವುದು ಪಡೆದುಕೊಂಡಿದ್ದು, ಹತ್ಯೆಯ ರಹಸ್ಯ ಬಯಲಾಗುತ್ತಿದೆ.

    ಪ್ರಕರಣ ಸಂಬಂಧ ಪೊಲೀಸರು ರೇಖಾ ಕದಿರೇಶ್ ಅತ್ತಿಗೆ ಮಾಲಾ, ಮಾಲಾ ಪುತ್ರ ಅರುಳ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪೀಟರ್, ರೇಖಾ ಕದಿರೇಶ್ ಹತ್ಯೆಗೆ 4 ತಿಂಗಳ ಟಾರ್ಗೆಟ್ ನೀಡಲಾಗಿತ್ತು. ಕೊಲೆಗೆ 4 ತಿಂಗಳಿಂದಲೇ ಹತ್ಯೆ ಮಾಡಲು ಪಾತಕಿಗಳು ತಯಾರಿ ಮಾಡಲಾಗಿತ್ತು. ಕೊಲೆ ಬಳಿಕ ತಪ್ಪಿಸಿಕೊಳ್ಳಲು ಗ್ಯಾಂಗ್ 20 ಲಕ್ಷ ರೂಪಾಯಿ ಕೇಳಿತ್ತು ಎಂದು ಪೊಲೀಸರ ಮುಂದೆ ಪಾತಕಿ ಪೀಟರ್ ಹೇಳಿದ್ದಾನೆ.

    ಮತ್ತೆ ಮೂವರ ಬಂಧನ:
    ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ಟೀಫನ್, ಅಜಯ್, ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಇವರು ಕೊಲೆ ನಡೆದಾಗ ಸ್ಥಳದಲ್ಲೇ ಇದ್ದ ಜನ ಅಡ್ಡಬರದಂತೆ ತಡೆದಿದ್ದರು. ಪೀಟರ್ ಹಾಗೂ ಸೂರ್ಯ ಚಾಕುವಿನಿಂದ ಇರಿಯುವ ವೇಳೆ ಈ ಮೂವರು ಅಲ್ಲೇ ಇದ್ದರು. ಅಲ್ಲದೆ ಪುರುಷೋತ್ತಮ್ ಸಿಸಿಟಿವಿಗಳನ್ನು ತಿರುಗಿಸಿ ಕೃತ್ಯಕ್ಕೆ ಸಹಕರಿಸಿದ್ದ.

    ಕೊಲೆಯ ಬಳಿಕ ಆಟೋ ಚಾಲಕ ಡಿಸೋಜಾ, ಹುಸ್ಕೂರಿಗೆ ಬಿಟ್ಟು ಬಂದಿದ್ದ. ಹೀಗಾಗಿ ಸದ್ಯ ಪೀಟರ್, ಸೂರ್ಯ ಎಸ್ಕೇಪ್‍ಗೆ ಸಹಕರಿಸಿದ್ದ ಆಟೋ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: 67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    ಚಪ್ಪಲಿ ಏಟು ತಿಂದಿದ್ದ ಪೀಟರ್:
    ಈ ಹಿಂದೆ ಆರೋಪಿ ಪೀಟರ್, ರೇಖಾ ಕದಿರೇಶ್ ಕೈಯಲ್ಲಿ ಚಪ್ಪಲಿ ಏಟು ತಿಂದಿದ್ದ. ರೇಖಾ ವೈಯಕ್ತಿಕ ಜೀವನದ ಬಗ್ಗೆ ಪೀಟರ್ ವದಂತಿ ಹಬ್ಬಿಸಿದ್ದ. ಇದೇ ಸಿಟ್ಟಲ್ಲಿ ಪೀಟರ್‍ಗೆ ಚಪ್ಪಲಿಯಿಂದ ರೇಖಾ ಬಾರಿಸಿದ್ದರು. ಆ ಬಳಿಕದಿಂದ ರೇಖಾಗೆ ಗೊತ್ತಾಗದಂತೆ ಏರಿಯಾದಲ್ಲಿ ವ್ಯವಹಾರಗಳಲ್ಲಿ ತಲೆಹಾಕ್ತಿದ್ದ. ಹೀಗಾಗಿ ಪೀಟರ್‍ನನ್ನು ರೇಖಾ ಕದಿರೇಶ್ ದೂರ ಇಟ್ಟಿದ್ದರು. ಗಾಂಜಾ ಕೇಸ್, ಗಲಾಟೆ ಕೇಸ್‍ನಲ್ಲಿ ರೇಖಾ, ಪೀಟರ್‍ಗೆ ಸಹಾಯ ಮಾಡುತ್ತಿರಲಿಲ್ಲ. ಇದೇ ಸಿಟ್ಟಲ್ಲಿ ಒಂದೂವರೆ ವರ್ಷದ ಹಿಂದೆ ಇಬ್ಬರ ಮಧ್ಯೆ ದ್ವೇಷ ಶುರುವಾಗಿತ್ತು.

    ಕಣ್ಣೀರಾಕಿದ್ದ ನಾದಿನಿ ವಶಕ್ಕೆ:
    ರೇಖಾ ಕದಿರೇಶ್ ಹತ್ಯೆಯ ದಿನ ಕಣ್ಣೀರು ಹಾಕಿದ್ದ ನಾದಿನಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಕದಿರೇಶ್ ನಾದಿನಿ ಮಾಲಾ, ಪುತ್ರ ಅರುಳ್ ನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ಮೇಲೆ ರೇಖಾ ಕದಿರೇಶ್ ಹತ್ಯೆಗೆ ಪಿತೂರಿ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ಪೋಷಕರು – ಮೃತದೇಹ ಹೊರತೆಗೆದು ಪರಿಶೀಲನೆ

    ರಾಜಕೀಯಕ್ಕಾಗಿ ಮಾಲಾ ಕುಟುಂಬ ನಾದಿನಿಗೆ ಸ್ಕೆಚ್ ಹಾಕಿತ್ತು. ಕಾರ್ಪೋರೇಟರ್ ಚುನಾವಣೆಯಲ್ಲಿ ನಿಲ್ಲಲು ಲೆಕ್ಕಾಚಾರ ಹಾಕಿದ್ದರು. ಆದರೆ ಸಹೋದರನ ಪತ್ನಿ ರೇಖಾ ಕದಿರೇಶ್ ಅಡ್ಡಿ ಎಂಬ ಲೆಕ್ಕಾಚಾರ ಇತ್ತು. ಹೀಗಾಗಿ ರೇಖಾ ಕದಿರೇಶ್ ಮುಗಿಸಿಬಿಟ್ಟರೆ ಸುಲಭ ಆಗುತ್ತೆ ಎಂಬ ದುರಾಸೆ ಅವರಲ್ಲಿತ್ತು. ಹೀಗಾಗಿ ಪೀಟರ್ ಮೂಲಕ ರೇಖಾ ಕದಿರೇಶ್ ಹತ್ಯೆಗೆ ಪಿತೂರಿ ನಡೆದಿತ್ತು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹತ್ಯೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ:
    ರೇಖಾ ಕದಿರೇಶ್ ಹತ್ಯೆಯ ದೃಶ್ಯಾವಳಿ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಾರ್ಪೋರೇಟರ್ ಕಚೇರಿ ಪಕ್ಕದಲ್ಲೇ ನೆಲಕ್ಕುರುಳಿಸಿ ಕೊಲೆ ಮಾಡಲಾಗಿದೆ. ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ರೇಖಾಗೆ ಚಾಕು, ಡ್ರ್ಯಾಗರ್‍ನಿಂದ ಇರಿದಿದ್ದರು. ಇತ್ತ ಕೊಲೆಗೆ ಅಡ್ಡಿ ಆಗದಂತೆ ಸ್ಟೀಫನ್ ಹಾಗೂ ಅಜಯ್ ರಕ್ಷಣೆಗೆ ನಿಂತಿದ್ದು, ಸದ್ಥಳಕ್ಕೆ ಬಂದವರ ಮೇಲೆ ಕುರ್ಚಿಯನ್ನು ಎಸೆದಿದ್ದರು. ಕೊಲೆಗೂ ಮೊದಲು ಆರೋಪಿ ಪುರುಷೋತ್ತಮ ಸಿಸಿಟಿವಿ ತಿರುಗಿಸಿದ್ದ.

  • ರೇಖಾ ಕದಿರೇಶ್ ಹತ್ಯೆ – ಆರೋಪಿಗಳ ಕಾಲಿಗೆ ಗುಂಡೇಟು, ಅರೆಸ್ಟ್

    ರೇಖಾ ಕದಿರೇಶ್ ಹತ್ಯೆ – ಆರೋಪಿಗಳ ಕಾಲಿಗೆ ಗುಂಡೇಟು, ಅರೆಸ್ಟ್

    ಬೆಂಗಳೂರು: ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿಲಾಗಿದೆ.

    ಪೀಟರ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯದ ಪೂಜಾ ಕಲ್ಯಾಣ ಮಂಟಪದ ಹಿಂಭಾಗ ಇಬ್ಬರ ಕಾಲಿಗೆ ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್ ಪೆಕ್ಟರ್ ಚಿದಾನಂದ ಗುಂಡು ಹೊಡೆದು ಬಂಧಿಸಿದ್ದಾರೆ. ಪೀಟರ್ ಬಲಗಾಲಿಗೆ ಗುಂಡು ಹೊಡೆದಿದ್ದರೆ ಸೂರ್ಯನ ಎಡಗಾಲಿಗೆ ಗುಂಡು ಬಿದ್ದಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪ್ರಕರಣದಲ್ಲಿ ಅನುಮಾನಿತರನ್ನು ಪಟ್ಟಿ ಮಾಡಲಾಗಿತ್ತು. ಪ್ರಮುಖ ಇಬ್ಬರು ಆರೋಪಿಗಳನ್ನು ಈಗ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೀಟರ್ ಮತ್ತು ಸೂರ್ಯ ಎಂಬಾತನ ಹೆಸರು ಕೇಳಿ ಬಂದಿತ್ತು. ಬಹಳಷ್ಟು ಶ್ರಮವಹಿಸಿ ನಮ್ಮ ಪೊಲೀಸರು ಆರೋಪಿಗಳನ್ನು ಹುಡುಕಾಡಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿತ್ತು. ಇವತ್ತು ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಆರೋಪಿಗಳು ಇರುವ ಸುಳಿವು ಸಿಕ್ಕಿತ್ತು. ಪೊಲೀಸರು ಬಂಧಿಸಲು ತೆರಳಿದ್ದಾಗ ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು ಎಂದು ವಿವರಿಸಿದರು.

    ಕೊಲೆ ಮಾಡಿ 800 ಎಕರೆ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಅವಿತುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ತೆರಳುತ್ತಿದ್ದಾಗ ಚಾಕುವಿನಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

  • ಎನ್.ಆರ್.ರಮೇಶ್‍ ಕನಸಲ್ಲೂ ನಾನೇ ಬರತ್ತೀನಿ ಅನ್ನಿಸುತ್ತೆ: ಜಮೀರ್ ಅಹ್ಮದ್ ತಿರುಗೇಟು

    ಎನ್.ಆರ್.ರಮೇಶ್‍ ಕನಸಲ್ಲೂ ನಾನೇ ಬರತ್ತೀನಿ ಅನ್ನಿಸುತ್ತೆ: ಜಮೀರ್ ಅಹ್ಮದ್ ತಿರುಗೇಟು

    – ಬಿಜೆಪಿಯೇ ಲೆಕ್ಕದಲ್ಲಿ ರೋಲ್‍ಕಾಲ್ ಎನ್.ಆರ್.ರಮೇಶ್ ಇಲ್ಲ
    – ರೇಖಾ ಕದಿರೇಶ್ ನನ್ನ ತಂಗಿಯಂತಿದ್ರು

    ಬೆಂಗಳೂರು: ಬಿಜೆಪಿ ನಾಯಕ ಎನ್.ಆರ್.ರಮೇಶ್ ಗೂ ಕನಸಲ್ಲೂ ನಾನೇ ಬರುತ್ತಿದ್ದೀನಿ ಅನ್ನಿಸುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಮಾಜಿ ಕಾರ್ಪೋರೇಟ್ ರೇಖಾ ಕದಿರೇಶ್ ಕೊಲೆಗೆ ಜಮೀರ್ ಅಹ್ಮದ್ ಖಾನ್ ಬೆಂಬಲ ಇದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದರು.

    ರೇಖಾ ಕದಿರೇಶ್ ಕೊಲೆಯ ವಿಷಯ ಕೇಳಿ ಶಾಕ್ ಆಯ್ತು. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು ರೇಖಾ ಅವರ ವಾರ್ಡ್ ನಲ್ಲಿದ್ರೆ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. 2018 ರಲ್ಲಿ ಗಂಡನನ್ನು ಕಳೆದುಕೊಂಡಿದ್ರು, ಇದೀಗ ಅವರ ಕೊಲೆಯಾಗಿದೆ. ನನ್ನ ತಂಗಿಯಂತಿದ್ದ ರೇಖಾ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣ ಇಲ್ಲದಂತಾಗಿದ್ದು, ಪೊಲೀಸರು ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದರು. ಇದನ್ನೂ ಓದಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

    ರೇಖಾ ಕದಿರೇಶ್ ಬಿಜೆಪಿ ಪಕ್ಷದವರು. ಆದ್ರೆ ಅವರ ಪಕ್ಷದವರೂ ಇಂದು ಯಾರೂ ಬಂದಿಲ್ಲ. ಎಲ್ಲಿಯೋ ಕುಳಿತು ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನದು ಚುನಾವಣೆ ವೇಳೆ ಮಾತ್ರ ರಾಜಕೀಯ. ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಎನ್.ಆರ್.ರಮೇಶ್ ಬಿಜೆಪಿ ಲೆಕ್ಕದಲ್ಲಿಲ್ಲ: ಬಿಜೆಪಿ ಮತ್ತು ಎನ್.ಆರ್.ರಮೇಶ್ ಗೂ ಕನಸಿನಲ್ಲಿಯೂ ನಾನೇ ಬರುತ್ತಿರಬೇಕು. ಏನೇ ಆದ್ರೂ ನನ್ನ ವಿರುದ್ಧವೇ ಆರೋಪ ಮಾಡ್ತಾರೆ. ಕದಿರೇಶ್ ಕೊಲೆ ನಡೆದಾಗಲೂ ಇದೇ ರೀತಿಯ ಆರೋಪಗಳನ್ನ ಮಾಡಿದ್ದರು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಅಂದ್ರೆ, ಈಗ ನಿಮ್ಮದೇ ಸರ್ಕಾರ ಇದೆ, ಮತ್ತೊಮ್ಮೆ ತನಿಖೆ ನಡೆಸಿ ಎಂದು ವಾಗ್ದಾಳಿ ನಡೆಸಿದರು.

    ಎನ್.ಆರ್.ರಮೇಶ್ ಅವರನ್ನು ಬಿಜೆಪಿ ಲೆಕ್ಕದಲ್ಲಿಯೇ ಇಟ್ಟುಕೊಂಡಿಲ್ಲ. ರಮೇಶ್ ಎಲ್ಲಿ ಏನು ಮಾಡುತ್ತಿದ್ದಾರೆ ಅನ್ನೋ ವಿಷಯ ಎಲ್ಲ ಗೊತ್ತು. ರೇಖಾ ನಿಮ್ಮದೇ ಪಕ್ಷದವರಾಗಿದ್ರೂ, ಇಲ್ಲಿಗೆ ಏಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದ ಜಮೀರ್ ಅಹ್ಮದ್, ನಿಮ್ಮ ರೋಲ್‍ಕಾಲ್ ವಿಷಯ ತಿಳಿದಿದೆ ಎಂದು ಆರೋಪಿಸಿದರು.

    ಎನ್.ಆರ್.ರಮೇಶ್ ಹೇಳಿದ್ದೇನು?:
    ರೇಖಾ ಕದಿರೇಶ್ ಕೊಲೆಗೆ ಚಾಮರಾಜಪೇಟೆ ಶಾಸಕ ಜಮೀರ್ ಆಹ್ಮದ್ ಖಾನ್ ಬೆಂಬಲ ಇದೆ. ಎರಡು ವರ್ಷದ ಹಿಂದೆ ಪತಿ ಕಳೆದುಕೊಂಡಿದ್ದರು. ಆದಾದನಂತರ ಸಹ ರೇಖಾ ಸಾರ್ವಜನಿಕವಾಗಿ ಬಹಳ ಕೆಲಸ ಮಾಡುತ್ತಿದ್ದರು. ನಿನ್ನೆ ಸಹ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸೋ ಕೆಲಸ ಮಾಡಿದ್ದರು. ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಯಾವ ರೀತಿಯ ಆಡಳಿತ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಇನ್ನೂ ಐದಾರು ತಿಂಗಳಿನಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಮತ್ತೆ ಚುನಾವಣೆಯಲ್ಲಿ ಅವರೆ ಗೆಲ್ತಾರೆ ಅನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು.

    ಜಮೀರ್ ಅವರು ಇದಕ್ಕೆ ಬೆಂಬಲ ಮಾಡಿರೋದು ಸತ್ಯ. ಕದಿರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರೋ ವ್ಯಕ್ತಿಯ ತನಿಖೆ ಸರಿಯಾಗಿ ನಡೆದಿದ್ರೆ ಮತ್ತೊಂದು ಜೀವ ಹೋಗುತ್ತಿರಲಿಲ್ಲ. ಅವತ್ತು ಸಿದ್ದರಾಮಯ್ಯನವರ ಸರ್ಕಾರ ಇತ್ತು. ಅತೂಶ್ ಅನ್ನುವ ವ್ಯಕ್ತಿಯ ಬಗ್ಗೆ ತನಿಖೆಯಾಗಬೇಕಿತ್ತು. ಜಮೀರ್ ಬೆಂಬಲದಿಂದ ತನಿಖೆಯಿಂದ ಅತೂಶ್ ತಪ್ಪಿಸಿಕೊಂಡಿದ್ದನು. ಈ ಕೊಲೆಗೂ ಆತನೇ ಕಾರಣ, ಅತೂಶ್ ನನ್ನು ವಿಚಾರಣೆಗೆ ಒಳಪಡಿಸಿದ್ರೆ ಎಲ್ಲ ಸತ್ಯ ಹೊರಬರಲಿದೆ ಎಂದು ಎನ್.ಆರ್.ರಮೇಶ್ ಹೇಳಿದ್ದರು.

  • ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಸೂಚನೆ: ಬೊಮ್ಮಾಯಿ

    ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಸೂಚನೆ: ಬೊಮ್ಮಾಯಿ

    ಹಾವೇರಿ: ಬೆಂಗಳೂರಿನಲ್ಲಿ ನಡೆದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ. ಹತ್ಯೆ ಯಾರು ಮಾಡಿದ್ದಾರೆ ಅವರು ಶೀಘ್ರದಲ್ಲಿ ಬಂಧನ ಆಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಇದೇ ವೇಳೆ ಮಾಜಿ ಸಚಿವ ಜಮೀರ್ ಅಹಮ್ಮದ್ ಮೇಲಿನ ಆರೋಪದ ಬಗ್ಗೆ ಗೊತ್ತಿಲ್ಲ. ಸಂಪೂರ್ಣ ತನಿಖೆ ನಡೆಯುತ್ತಿದೆ. ಹತ್ಯೆ ಮಾಡಿದ ಆರೋಪಿಯನ್ನ ಶೀಘ್ರದಲ್ಲಿ ಬಂಧನ ಆಗುತ್ತಾರೆ ಎಂದು ತಿಳಿಸಿದರು.

    ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಛಲವಾದಿಪಾಳ್ಯ ಕಾರ್ಪೊರೇಟ್ ಆಗಿದ್ದ ರೇಖಾ ಕದಿರೇಶ್ ಅವರನ್ನು ಸಹಚರರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ರೇಖಾ ಕದಿರೇಶ್ ಮನೆ ಮುಂದೆಯೇ ಇಂದು ಹಲ್ಲೆ ನಡೆದಿತ್ತು. ಮನೆಯ ಒಳಗಡೆ ಇದ್ದ ರೇಖಾ ಅವರನ್ನು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

    ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಹಾಡಹಗಲೇ ಕಾಟನ್‍ಪೇಟೆಯ ಅಂಜಿನಪ್ಪ ಗಾರ್ಡನ್ ನಲ್ಲಿ ಕೊಲೆ ಮಾಡಲಾಗಿತ್ತು.

  • ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

    ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

    ಬೆಂಗಳೂರು: ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಛಲವಾದಿಪಾಳ್ಯ ಕಾರ್ಪೊರೇಟ್ ಆಗಿದ್ದ ರೇಖಾ ಕದಿರೇಶ್ ಅವರನ್ನು ಸಹಚರರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ರೇಖಾ ಕದಿರೇಶ್ ಮನೆ ಮುಂದೆಯೇ ಇಂದು ಹಲ್ಲೆ ನಡೆದಿತ್ತು. ಮನೆಯ ಒಳಗಡೆ ಇದ್ದ ರೇಖಾ ಅವರನ್ನು ಹೊರಗೆ ಕರೆದು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆದಿತ್ತು. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ.

    ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಹಾಡಹಗಲೇ ಕಾಟನ್‍ಪೇಟೆಯ ಅಂಜಿನಪ್ಪ ಗಾರ್ಡನ್ ನಲ್ಲಿ ಕೊಲೆ ಮಾಡಲಾಗಿತ್ತು.