Tag: ರೇಂಜ್ ರೋವರ್

  • ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

    ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

    ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ಕೋಟಿ ರೂ. ಬೆಳೆಬಾಳುವ ರೇಂಜ್ ರೋವರ್ (Range Rover) ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿ.ಮುತ್ತಪ್ಪ ರೈ (Muthappa Rai) ಪುತ್ರ ಸೇರಿದಂತೆ 9 ಜನರ ವಿರುದ್ಧ ಸದಾಶಿವನಗರ ಪೊಲೀಸರು 188 ಪುಟಗಳ ಚಾರ್ಜ್‌ಶೀಟ್ (Chargesheet) ಸಲ್ಲಿಸಿದ್ದಾರೆ.

    2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ (Sadashiva Nagara) ಸಪ್ತಗಿರಿ ಅಪಾರ್ಟ್ಮೆಂಟ್‌ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ರೇಂಜ್ ರೋವರ್ ಕಾರನ್ನು ಆರೋಪಿಗಳು ಸುಟ್ಟುಹಾಕಿದ್ದರು. ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರಿಕ್ಕಿ ರೈ (Rikki Rai) ಸೂಚನೆಯಂತೆ ಕಾರು ಸುಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿದ ಸದಾಶಿವನಗರ ಪೊಲೀಸರು 33ನೇ ಎಸಿಎಂಎಂ ಕೋರ್ಟ್‌ಗೆ 188 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

    ದಿವಗಂತ ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮತ್ತು ಉದ್ಯಮಿ ಶ್ರೀನಿವಾಸ್ ನಾಯ್ಡು ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದರು. ಮುತ್ತಪ್ಪ ರೈ ಅವರ ನಿಧನದ ಬಳಿಕ ಶ್ರೀನಿವಾಸ್ ನಾಯ್ಡು ರೈ ಗ್ರೂಪಿನಿಂದ ಹೊರಬಂದಿದ್ದರು. ನಾಯ್ಡು ಹೊರ ಬಂದಿದಕ್ಕೆ ರಿಕ್ಕಿ ರೈ ದ್ವೇಷ ಸಾಧಿಸಿ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಈ ಘಟನೆ ನಡೆಯುವ 3 ತಿಂಗಳಿಗೂ ಮೊದಲು ರಿಕ್ಕಿ ರೈ ಶ್ರೀನಿವಾಸ್ ನಾಯ್ಡು ಅವರ ಕಾರನ್ನು ನೋಡಿ ನೈಸ್ ಕಾರ್ ಡ್ಯೂಡ್ ಎಂದು ಅದನ್ನು ಬೂದಿ ಮಾಡುವ ಸವಾಲು ಹಾಕಿದ್ದಾರೆ. ಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ಮೆರಿ. ಎಷ್ಟು ದಿನ ಈ ಕಾರಲ್ಲಿ ಓಡಾಡುತ್ತೀಯಾ ನೋಡುತ್ತೇನೆ. ಈ ಕಾರನ್ನು ಬೂದಿ ಮಾಡುತ್ತೇನೆ ಎಂದು ರಿಕ್ಕಿ ರೈ ನಾಯ್ಡು ಅವರಿಗೆ ವಾರ್ನಿಂಗ್ ಕೊಟ್ಟಿದ್ದ ಅಂಶಗಳಿವೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

    ರಿಕ್ಕಿ ವಾರ್ನಿಂಗ್‌ಗೆ ಶ್ರೀನಿವಾಸ್ ನಾಯ್ಡು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದರು. ಇದಾದ ನಂತರ ನಾರಾಯಣಸ್ವಾಮಿ ಎಂಬವರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ನಡೆದಿತ್ತು. ಆರೋಪಿಗಳ ಹೇಳಿಕೆ ಪ್ರಕಾರ ಆರೋಪಿ ನಾರಾಯಣ ಸ್ವಾಮಿ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದು, ಮೊದಲಿಗೆ ಶ್ರೀನಿವಾಸ್ ನಾಯ್ಡು ಅವರ ಸ್ನೇಹಿತ ಸುಪ್ರೀತ್‌ಗೂ ಹಲ್ಲೆ ನಡೆಸಿದ್ದಾರೆ. ಬಳಿಕ ಶ್ರೀನಿವಾಸ್ ನಾಯ್ಡು ಅವರ ಫ್ಲ್ಯಾಟ್‌ಗೂ ನುಗ್ಗಿ ಹಲ್ಲೆ ನಡೆಸುವ ಯತ್ನ ವಿಫಲವಾದ್ದರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

    ಮಧ್ಯರಾತ್ರಿ ಬುಲೆಟ್ ಮತ್ತು ಕಾರಿನಿಂದ ಎರಡು ಲೀಟರ್‌ನ ಎರಡು ಬಾಟಲ್‌ನಲ್ಲಿ ಪೆಟ್ರೋಲ್ ಎಳೆದು ಕಾರಿಗೆ ಸುರಿದಿದ್ದಾರೆ. ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ನಾರಾಯಣಸ್ವಾಮಿ, ಅಭಿನಂದನ್, ಮುನಿಯಪ್ಪ, ಗಣೇಶ್, ಶಶಾಂಕ್, ನಿರ್ಮಲ್, ರೋಹಿತ್, ರಾಕೇಶ್ ಹಾಗೂ ರಿಕ್ಕಿ ರೈ ಮೇಲೆ ಸದಾಶಿವ ನಗರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎ1 ಆರೋಪಿ ನಾರಾಯಣಸ್ವಾಮಿ ಹಾಗೂ ಎ8 ಆರೋಪಿ ರಿಕ್ಕಿ ರೈ ಹೇಳಿಕೆ ಇನ್ನೂ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ

  • ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

    ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

    ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ವಿಕ್ಕಿ ಕೌಶಲ್ ಕೂಡ ಒಬ್ಬರು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟ ಇದೀಗ ತನ್ನ ಹೊಸ ಗೆಳೆಯನನ್ನು ಪರಿಚಯಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಹೌದು. ಉರಿ ಖ್ಯಾತಿಯ ನಿರ್ದೇಶಕ ಆದಿತ್ಯಧರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಕ್ಕಿ ಕೌಶಲ್, ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ತಾವು ಜಿಮ್ ನಲ್ಲಿ ಬೆವರಿಳಿಸುತ್ತಿರುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ನಟನಿಗೆ ಹೊಸ ಗೆಳೆಯನೊಬ್ಬ ಸಿಕ್ಕಿದ್ದಾನೆ.

     

    View this post on Instagram

     

    A post shared by Vicky Kaushal (@vickykaushal09)

     

    ಅಂದಹಾಗೆ ವಿಕ್ಕಿ ಹೊಸ ಗೆಳೆಯ ಮತ್ಯಾರು ಅಲ್ಲ ದುಬಾರಿ ರೇಂಜ್ ರೋವರ್. ವಿಕ್ಕಿ ಹೊಸ ಕಾರನ್ನು ಖರೀದಿಸಿದ್ದು, ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ವಿಕ್ಕಿ ಹೊಸ ಪೋಸ್ಟ್ ಗೆ ಅಭಿಮಾನಿಗಳ ಜೊತೆಗೆ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಸಹ ಖುಷಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

    ಇತ್ತ ಉರಿ ನಿರ್ದೇಶಕ ಆದಿತ್ಯ ಧರ್ ಕಾಮೆಂಟ್ ಮಾಡಿ, ಶಾಟ್ ಗನ್! ಅಭಿನಂದನೆಗಳು ನನ್ನ ಸಹೋದರ. ಕಷ್ಟಪಟ್ಟು ಕೆಲಸ ಮಾಡಿ ಉತ್ತಮ ಸಕ್ಸಸ್ ಸಾಧಿಸಿದ್ದೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: “ಕಾರ್ ಪ್ಲೇಟ್ ನಂಬರ್ ಅವರೇ ಕಲ್ಲಿನಿಂದ ಜಜ್ಜಿದ್ರು, ಫೋಟೋ ತೆಗೆದವರನ್ನ ನಿಂದಿಸಿ ಅವಾಜ್ ಹಾಕಿದ್ರು”

  • ಅದೃಷ್ಟದ ಕಾರು ಬದಲಾಯಿಸಿದ ಸಿಎಂ ಎಚ್‍ಡಿಕೆ

    ಅದೃಷ್ಟದ ಕಾರು ಬದಲಾಯಿಸಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅದೃಷ್ಟದ ಕಾರು ಬದಲಾಯಿಸಿ ಹೊಸ ಕಾರಿನಲ್ಲಿ ಓಡಾಡುತ್ತಿದ್ದಾರೆ.

    ಹೌದು. ಇತ್ತೀಚೆಗೆ ಸಿಎಂ ಅವರ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರನ್ನು ದುರಸ್ಥಿಗೆ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕಳೆದ ಮೂರು ದಿನಗಳಿಂದ ಹೊಸ ಕಾರಿನಲ್ಲೇ ಓಡಾಟ ನಡೆಸುತ್ತಿದ್ದಾರೆ.

    ಹೊಸ ಕಾರು ಯಾವುದು?
    8 ತಿಂಗಳ ಹಿಂದೆ ಖರೀದಿಸಿರುವ ಲೆಕ್ಸಸ್ ಕಾರಿನಲ್ಲಿ ಮುಖ್ಯಮಂತ್ರಿಯವರು ಸಂಚರಿಸುತ್ತಿದ್ದಾರೆ. ಜಪಾನ್ ನಿಂದ ಇಂಡಿಯಾಕ್ಕೆ ಬಂದ ಮೊದಲ ಕಾರು ಇದಾಗಿದೆ. ಈ ಕಾರನ್ನು ಎಂಎಲ್‍ಸಿ ಫಾರೂಕ್ ಅವರು ಖರೀದಿಸಿದ್ದಾರೆ. ಇದೀಗ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ಅವರು ತಮ್ಮ ಅದೃಷ್ಟದ ಕಾರು ಬದಲಿಸಿ ಈ ಕಾರಿನಲ್ಲಿ ಸಂಚಾರ ಮಾಡುತ್ತಿದ್ದಾರೆ.

    ಕಾರಿನಲ್ಲಿ ಆಕಸ್ಮಿಕ ಬೆಂಕಿ:
    ಕಳೆದ ಬುಧವಾರ ಮಧ್ಯರಾತ್ರಿ ಶ್ರೀರಂಗಪಟ್ಟಣದ ಪೀಹಳ್ಳಿ ಸಮೀಪ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಆಪ್ತ ಸಿಬ್ಬಂದಿ ತಕ್ಷಣ ಸಿಎಂ ಅವರನ್ನು ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಕುಮಾರಸ್ವಾಮಿ ಪಾರಾಗಿದ್ದರು.

    ತಾನಿದ್ದ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಬೇರೊಂದು ಕಾರಿನಲ್ಲಿ ಕೆಆರ್ ಎಸ್‍ಗೆ ತೆರಳಿದ್ದರು. ಸಿಎಂ ಕುಮಾರಸ್ವಾಮಿ ಆಗಮಿಸಿದ್ದಕ್ಕೆ ಜನತೆ ಪಟಾಕಿ ಸಿಡಿಸಿದ್ದರು. ಆ ಪಟಾಕಿ ಕಿಡಿಯಿಂದ ರೇಂಜ್‍ರೋವರ್ ನಲ್ಲಿ ಬೆಂಕಿ ಕಾಣಿಸಿಕೊಳ್ತಾ? ಅಥವಾ ರೇಂಜ್‍ರೋವರ್ ನಲ್ಲಿ ತಾಂತ್ರಿಕ ದೋಷ ಇತ್ತ ಎಂಬ ಅನುಮಾನ ಮೂಡಿತ್ತು.

  • ರೇಂಜ್ ರೋವರ್ ಕೊಟ್ಟಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧನಂಜಯ್

    ರೇಂಜ್ ರೋವರ್ ಕೊಟ್ಟಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧನಂಜಯ್

    ಬೆಂಗಳೂರು: ಟಗರು ಚಿತ್ರದಲ್ಲಿನ ಡಾಲಿ ಪಾತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತರಾಗಿರುವ ನಟ ಧನಂಜಯ್ ರೇಂಜ್ ರೋವರ್ ಖರೀದಿಸಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    ಇತ್ತೀಚೆಗೆ ಧನಂಜಯ್ ಅವರು ಕೆಂಪು ಬಣ್ಣದ ಹೊಸ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಆ ಹೊಸ ಕಾರಿಗೆ ಪೂಜೆ ಮಾಡಿಸುತ್ತಿರುವ ಫೋಟೋವನ್ನು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ರೇಂಜ್ ರೋವರ್ ಕಾರ್ ಜೊತೆ ಧನಂಜಯ್ ಟಿವಿಎಸ್ ಎಕ್ಸ್ ಎಲ್ ಸೂಪರ್ ದ್ವಿಚಕ್ರ ವಾಹನವನ್ನು ಪೂಜೆ ಮಾಡಿಸಿದ್ದಾರೆ. ಈ ಫೋಟೋವನ್ನು ಧನಂಜಯ್ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, “ಒಂದು ಅಪ್ಪ ಕೊಡಿಸಿದ್ದು, ಟಿವಿಎಸ್ ಎಕ್ಸ್ ಎಲ್, ಇನ್ನೊಂದು ನೀವು ಕೊಟ್ಟಿದ್ದು ರೇಂಜ್ ರೋವರ್. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ” ಎಂದು ಪೋಸ್ಟ್ ಮಾಡಿದ್ದಾರೆ.

    ಧನಂಜಯ್ ಅವರು ತಮ್ಮ ಹೊಸ ಕಾರನ್ನು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಈ ಕಾರಿನ ನಂಬರ್ ಕೆಎ 05 ಟಿಎಸ್ 8241 ಆಗಿದ್ದು, ಧನಂಜಯ್ ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರು.

    ಧನಂಜಯ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ಯಜಮಾನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv