Tag: ರೆಹಮ್‌ ಖಾನ್‌

  • ತನಗಿಂತ 13 ವರ್ಷ ಕಿರಿಯನೊಂದಿಗೆ 3ನೇ ಮದುವೆಯಾದ ಪಾಕ್‌ ಮಾಜಿ ಪ್ರಧಾನಿಯ ex-wife

    ತನಗಿಂತ 13 ವರ್ಷ ಕಿರಿಯನೊಂದಿಗೆ 3ನೇ ಮದುವೆಯಾದ ಪಾಕ್‌ ಮಾಜಿ ಪ್ರಧಾನಿಯ ex-wife

    ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಮಾಜಿ ಪತ್ನಿ ರೆಹಮ್‌ ಖಾನ್‌ (Reham Khan) ಮೂರನೇ ಮದುವೆಯಾಗಿದ್ದಾರೆ. ತನಗಿಂತ 13 ವರ್ಷ ಕಿರಿಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ (Mirza Bilal Baig) ಅವರನ್ನು ವಿವಾಹವಾಗಿರುವ ರೆಹಮ್‌ ಖಾನ್‌ ಹೇಳಿಕೊಂಡಿದ್ದಾರೆ. ಮಿರ್ಜಾ ಬಿಲಾಲ್‌ ಪೋಷಕರು ಮತ್ತು ನನ್ನ ಮಗ ನನ್ನ ವಕೀಲ್ ಆಶೀರ್ವಾದದೊಂದಿಗೆ ನಾವು ಸಿಯಾಟಲ್‌ನಲ್ಲಿ ವಿವಾಹವಾಗಿದ್ದೇವೆ ಎಂದು ರೆಹಮ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ರಾಜಧಾನಿಯಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್ ಸಾವು, ಹಲವರಿಗೆ ಗಾಯ

    ರೆಹಮ್‌ ಖಾನ್‌ಗೆ 49 ಹಾಗೂ ಮಿರ್ಜಾ ಬಿಲಾಲ್‌ಗೆ 36 ವಯಸ್ಸು. ಯುಎಸ್ ಮೂಲದ ಕಾರ್ಪೊರೇಟ್ ವೃತ್ತಿಪರ ಮತ್ತು ಮಾಜಿ ಮಾಡೆಲ್ ಮಿರ್ಜಾ ಬಿಲಾಲ್ ಬೇಗ್ ಅವರಿಗೂ ಇದು ಮೂರನೇ ವಿವಾಹವಾಗಿದೆ.

    1993ರಲ್ಲಿ ಇಜಾಜ್‌ ರೆಹಮಾನ್‌ ಅವರೊಂದಿಗೆ ರೆಹಮ್‌ ವಿವಾಹವಾಗಿದ್ದರು. ನಂತರ 2015 ರಲ್ಲಿ ರೆಹಮ್ ಖಾನ್, ಇಮ್ರಾನ್ ಖಾನ್ ಅವರೊಂದಿಗೆ ಇಸ್ಲಾಮಾಬಾದ್ ಮನೆಯಲ್ಲಿ ವಿವಾಹವಾಗಿದ್ದರು. ಆದರೆ 10 ತಿಂಗಳ ನಂತರ ಅವರಿಗೆ ವಿಚ್ಛೇದನ ನೀಡಿದರು. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

    ರೆಹಮ್ ಖಾನ್ 1973 ರಲ್ಲಿ ಲಿಬಿಯಾದ ಅಜ್ದಬಿಯಾದಲ್ಲಿ ಜನಿಸಿದರು. ಪಾಕಿಸ್ತಾನದಲ್ಲಿ ಅಧ್ಯಯನ ಮಾಡಿದ ನಂತರ, ಅವರು 90 ರ ದಶಕದ ಮಧ್ಯಭಾಗದಲ್ಲಿ BBC ಸೌತ್ ಟುಡೇಗೆ ಹವಾಮಾನ ನಿರೂಪಕಿಯಾಗಿ ಸೇರಿದರು. ನಂತರ UK ನಲ್ಲಿ ಪ್ರಸಾರ ಪತ್ರಕರ್ತರಾಗಿ ಕೆಲಸ ಮಾಡಿದರು. 2012 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ಟಿವಿ ಕಾರ್ಯಕ್ರಮಕ್ಕಾಗಿ ಸಂದರ್ಶನ ಮಾಡುವಾಗ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು: ಪತ್ನಿ ರೆಹಮ್ ಖಾನ್ ವ್ಯಂಗ್ಯ

    ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು: ಪತ್ನಿ ರೆಹಮ್ ಖಾನ್ ವ್ಯಂಗ್ಯ

    ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು ಎಂದು ಅವರ ಮಾಜಿ ಪತ್ನಿ ರೆಹಮ್ ಖಾನ್ ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಮ್ರಾನ್ ಖಾನ್ ಅವರು ಬಾಲಿವುಡ್‍ನ ದಿ ಕಪಿಲ್ ಶರ್ಮಾ ಶೋ ನಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಉತ್ತಮ ಬದಲಿಯಾಗಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಇಮ್ರಾನ್ ಅವರು ಭಾರತವನ್ನು ಖುದ್ದರ್ ಕ್ವಾಮ್ (ಬಹಳ ಸ್ವಾಭಿಮಾನದ ಜನರು) ಎಂದು ಹೊಗಳಿದ್ದರು. ಹೀಗಾಗಿ ಅವರು, ತಮ್ಮ ಮಾಜಿ ಪತಿಯನ್ನು ಲೇವಡಿ ಮಾಡಿದ್ದು, ಅವರು ಬಾಲಿವುಡ್‍ನಲ್ಲಿ ನಟಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ಭಾರತವು ಇಮ್ರಾನ್‍ಗೆ ಜಾಗವನ್ನು ನೀಡಬೇಕು ಅಂತ ನಾನು ಭಾವಿಸುತ್ತೇನೆ. ಅವರು ಬಹುಶಃ ಬಾಲಿವುಡ್‍ನಲ್ಲಿದ್ದರೆ ಅವರು ಆಸ್ಕರ್ ವಿಜೇತ ಪ್ರದರ್ಶನವನ್ನು ನೀಡುತ್ತಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ

    ಇಮ್ರಾನ್ ಅವರಿಗೆ ನಾಯಕ ಅಥವಾ ಖಳನಾಯಕನ ಪಾತ್ರವನ್ನು ನೀಡಬೇಕೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಅದು ಅವರ ಮೇಲೆ ಅವಲಂಬಿತವಾಗಿದೆ. ಬಾಲಿವುಡ್‍ನಲ್ಲಿ, ಹೀರೋಗಳು ವಿಲನ್ ಆಗುತ್ತಾರೆ. ವಿಲನ್‍ಗಳು ಹೆಚ್ಚು ಜನಪ್ರಿಯರಾಗುತ್ತಾರೆ. ಆದರೆ ಅವರಲ್ಲಿ ಹಾಸ್ಯ ಪ್ರತಿಭೆಯೂ ಇದೆ ಎಂದು ನಾನು ಭಾವಿಸುತ್ತೇನೆ. ಬೇರೇನೂ ಇಲ್ಲ, ಕಪಿಲ್ ಶರ್ಮಾ ಶೋನಲ್ಲಿ ಪಾಜಿ ಅವರ (ನವಜೋತ್ ಸಿಧು ಅವರ) ಸ್ಥಾನ ಖಾಲಿಯಾಗಿದೆ. ಹೀಗಾಗಿ ಅವರು ಸಿಧು ಅವರ ಹಾಗೇ ಶಾಯರಿ ಹೇಳುತ್ತಾ ಕುಳಿತುಕೊಳ್ಳಬಹುದು ಎಂದರು.

    ಇಮ್ರಾನ್ ಅವರು ಸಿಧು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಅವರೊಂದಿಗೆ ಸ್ವಲ್ಪ ಜಾಗ ಹಂಚಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದರು.

  • ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ಇಸ್ಲಾಮಾಬಾದ್: ನೀವು ಪ್ರಧಾನಿಯಾಗದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು ಎಂದು ರೆಹಮ್ ಖಾನ್ ಅವರು ತನ್ನ ಮಾಜಿ ಪತಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‌

    ಇಮ್ರಾನ್ ಖಾನ್ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸರಿಪಡಿಸಲು ದೇಶದ ಜನರು ಒಟ್ಟಾಗಿ ನಿಲ್ಲುವತ್ತ ಗಮನ ಹರಿಸಬೇಕು ಎಂದು ಇಮ್ರಾನ್‌ ಖಾನ್‌ ಮಾಜಿ ಪತ್ನಿ ರೆಹಮ್‌ ಖಾನ್‌ ಕರೆ ನೀಡಿದ್ದಾರೆ.

    ಇಮ್ರಾನ್‌ ಇತಿಹಾಸ. ನಯಾ ಪಾಕಿಸ್ತಾನ (ಹೊಸ ಪಾಕಿಸ್ತಾನ) ಬಿಟ್ಟು ಹೋಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ನಾವು ಒಟ್ಟಾಗಿ ನಿಲ್ಲುವತ್ತ ಗಮನಹರಿಸಬೇಕೆಂದು ನಾನು ಭಾವಿಸುತ್ತೇನೆ ಎಂದು ರೆಹಮ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

    ಇಮ್ರಾನ್‌ ಖಾನ್‌ ದೇಶವನ್ನುದ್ದೇಶಿಸಿ ಮಾತನಾಡುವಾಗ, ದೇವರ ದಯೆಯಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಖ್ಯಾತಿ, ಸಂಪತ್ತು ಏನೂ ಅಗತ್ಯವಿಲ್ಲ ಎಂದಿದ್ದಾರೆ. ಅವರಿಗೆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ರೆಹಮ್‌ ಖಾನ್‌ ಕುಟುಕಿದ್ದಾರೆ.

    ನನ್ನ ಬಾಲ್ಯದಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೆ ಹೋಗಿರುವುದನ್ನು ನೋಡಿದ್ದೇನೆ ಎಂಬ ಇಮ್ರಾನ್‌ ಖಾನ್‌ ಅವರ ಹೇಳಿಕೆಯನ್ನು ರೆಹಮ್‌ ಖಾನ್‌ ಸ್ವಾಗತಿಸಿದ್ದಾರೆ. ʼಹೌದು, ನೀವು ಪ್ರಧಾನಿಯಾಗದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು ಎಂದು ಖಾನ್‌ ವಿರುದ್ಧ ಟ್ವೀಟ್‌ ಮೂಲಕ ಚಾಟಿ ಬೀಸಿದ್ದಾರೆ.

    ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹುದ್ದೆಗೆ ಸಂಕಷ್ಟ ಎದುರಾಗಿದೆ. ಇಮ್ರಾನ್‌ ಖಾನ್‌ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯದ ಅಸ್ತ್ರ ಪ್ರಯೋಗಿಸಿವೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಖಾನ್‌ ಅವರನ್ನು ಒತ್ತಾಯಿಸಲಾಗುತ್ತಿದೆ.

    ರಾಜೀನಾಮೆ ನೀಡಲು ಇಮ್ರಾನ್‌ ಖಾನ್‌ ನಿರಾಕರಿಸಿದ್ದಾರೆ. ನಾನು 20 ವರ್ಷಗಳಿಂದ ಕ್ರಿಕೆಟ್ ಆಡಿದ್ದೇನೆ. ಹೀಗಾಗಿ ರಾಜಕೀಯದಲ್ಲೂ ಸಹ ಕೊನೆಯ ಎಸೆತದವರೆಗೂ ಆಡುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.