Tag: ರೆಹಮಾನ್ ಖಾನ್

  • ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ಸಭೆ- ಪಕ್ಷ ವಿರೋಧಿ ಹೇಳಿಕೆ ಸಾಕ್ಷ್ಯ ಸಂಗ್ರಹಿಸಲು ತೀರ್ಮಾನ

    ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ಸಭೆ- ಪಕ್ಷ ವಿರೋಧಿ ಹೇಳಿಕೆ ಸಾಕ್ಷ್ಯ ಸಂಗ್ರಹಿಸಲು ತೀರ್ಮಾನ

    – ಒಂದಾಗಿ ಹೋದ್ರೆ ಅಧಿಕಾರಕ್ಕೆ ಬರ್ತಿವಿ, ಕಚ್ಚಾಟ ಇದ್ದರೆ ಬಿಜೆಪಿಗೆ ಲಾಭ

    ಬೆಂಗಳೂರು: ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಮಾಡಿದವರ ಕುರಿತು ಇಂದು ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ಸಭೆ ನಡೆಸಿದೆ. ಕೆಪಿಸಿಸಿ ಶಿಸ್ತು ಸಮಿತಿ ಸಭೆ ಕರೆದ ಅಧ್ಯಕ್ಷ ರೆಹಮಾನ್ ಖಾನ್ ವರ್ಚ್ಯೂವಲ್ ಸಭೆ ನಡೆಸಿದ್ದು, ಪಕ್ಷ ವಿರೋಧಿ ಹೇಳಿಕೆ ಸಾಕ್ಷ್ಯ ಸಂಗ್ರಹಿಸಲು ತೀರ್ಮಾನ ಮಾಡಲಾಗಿದೆ.

    ರೆಹಮಾನ್ ಖಾನ್, ಕೋಳಿವಾಡ, ರಾಣೀಸತೀಶ್, ಮಲ್ಲಜಮ್ಮ ಧನಂಜಯ, ನಿವೇದಿತಾ ಆಳ್ವ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಸಂಘಟನೆಗೆ ಮಾರಕ ಹೇಳಿಕೆ ಕೊಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಭಾಗವಾಗಿ ಶಾಸಕರುಗಳ ಹೇಳಿಕೆಯ ಸಾಕ್ಷ್ಯ ಸಂಗ್ರಹಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಕ್ಷ್ಯ ಸಿಕ್ಕ ನಂತರ ನೋಟೀಸ್ ನೀಡಿ ಕ್ಲಾರಿಫಿಕೇಷನ್ ಕೇಳುವ ಬಗ್ಗೆ ಇಂದಿನ ತೀರ್ಮಾನಿಸಲಾಗಿದೆ. ಸಾಕ್ಷ್ಯ ಸಂಗ್ರಹವಾಗುತ್ತಿದ್ದಂತೆ ಮುಂದಿನ ಸಭೆ ನಡೆಸಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದವರಿಗೆ ನೋಟಿಸ್ ಜಾರಿಗೆ ನಿರ್ಧಾರ ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಒಟ್ಟು 8 ಶಾಸಕರಿಂದ ಮುಂದಿನ ಸಿಎಂ ಹೇಳಿಕೆ ನೀಡಿದ್ದರು. ಸಭೆ ಬಳಿಕ ಮಾರನಾಡಿದ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರಹೆಮಾನ್ ಖಾನ್ ಪಕ್ಷದಲ್ಲಿ ಮುಂದಿನ ಸಿಎಂ ಹೇಳಿಕೆ ಸಂಬಂಧ ನಾವು ಸುಮೋಟು ಕೇಸ್ ತೆಗೆದುಕೊಂಡಿದ್ದೇವೆ, ಸುರ್ಜೇವಾಲಾ ಸಹ ಮಾತನಾಡಬೇಡಿ ಎಂದು ಹೇಳಿದ್ದಾರೆ.

    ಅವರ ಹೇಳಿಕೆ ಆಧರಿಸಿ ಸುಮೋಟು ತೆಗೆದುಕೊಂಡಿದ್ದೇವೆ. ನಮ್ಮ ಬಳಿ ಯಾವುದೇ ದಾಖಲೆ ಇರಲಿಲ್ಲ. ವೀಡಿಯೋ ಕ್ಲಿಪ್ ಇರಲಿಲ್ಲ, ಪೇಪರ್ ಕಟ್ಟಿಂಗ್ಸ್ ಸಹ ಇರಲಿಲ್ಲ. ಇಂದು ಶಿಸ್ತು ಸಮಿತಿ ಸಭೆ ನಡೆಸಿದ್ದೇವೆ. ಇತ್ತೀಚೆಗೆ ಕೆಲ ಶಾಸಕರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಸಿಎಂ ಹೇಳಿಕೆ ಶಿಸ್ತು ಉಲ್ಲಂಘನೆ ಆಗಿದೆ.ಇದರ ಬಗ್ಗೆ ಸುಧೀರ್ಘ ಚರ್ಚೆ ಆಗಿದೆ. ಶಾಸಕರು ಏನು ಹೇಳಿಕೆ ಕೊಟ್ಟಿರುವುದರ ಬಗ್ಗೆ ಮಾಹಿತಿ ಬೇಕಿದೆ. ದಾಖಲೆ ಕಲೆ ಹಾಕಬೇಕಿದೆ. ಹೀಗಾಗಿ ಮುಂದಿನ ವಾರಕ್ಕೆ ಸಭೆ ಮುಂದೂಡಿಕೆ ಆಗಿದೆ. ಮುಂದಿನ ಸಿಎಂ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾರಕ ಶಿಸ್ತು ಉಲ್ಲಂಘನೆ. ಈ ಹಿಂದೆ ಆರ್‍ಆರ್ ನಗರ ಉಪಚುನಾವಣೆಯಲ್ಲಿ ಕೆಲವರ ಕೊಟ್ಟ ಹೇಳಿಕೆ ಬಗ್ಗೆ ಸಹ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:  ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ

    ಸಾರ್ವಜನಿಕವಾಗಿ ಹೇಳಿಕೆ ಕೊಡುವ ಅಧಿಕಾರ ಶಾಸಕರಿಗಿಲ್ಲ ಏನೇ ಇದ್ದರು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ. ಮುಂದಿನ ಸಿಎಂ ಯಾರು ಎಂದು ಹೇಳಕ್ಕೆ ನಿಮಗೆ ಅಧಿಕಾರ ಇಲ್ಲ.ನೀವು ಕೆಪಿಸಿಸಿ ಗೆ ಹೋಗಿ ಅಧ್ಯಕ್ಷರಿಗೆ ಹೇಳಿ. ಎಐಸಿಸಿಗೆ ಹೋಗಿ ಅಧ್ಯಕ್ಷರಿಗೆ ತಿಳಿಸಿ. ಪಕ್ಷಕ್ಕೆ ಬಂದ ಮೇಲೆ ಪಕ್ಷದ ಸಂಪ್ರದಾಯ ನಾವು ಅನುಸರಿಸಬೇಕು. ಕಾಂಗ್ರೆಸ್ ಪಕ್ಷ ಬೆಳೆದಿದ್ದೆ ಶಿಸ್ತಿನಿಂದ. ಪಕ್ಷದಿಂದ ನಾವು ನಮ್ಮಿಂದ ಪಕ್ಷ ಅಲ್ಲ.ಇದನ್ನ ಲೀಡರ್ಸ್ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುಡುಗಿಯರ ಮೇಕಪ್ ಕಿಟ್‍ನಲ್ಲಿ ಇರಲೇಬೇಕಾದ 5 ಬ್ಯೂಟಿ ಪ್ರೊಡಕ್ಟ್‌ಗಳು

    ನಾಯಕರನ್ನ ಕಾರ್ಯಕರ್ತರು ನೋಡುತ್ತಿದ್ದಾರೆ. ಹೀಗಾಗಿ ಸಮಸ್ಯೆ ಆಗಬಾರದು. ನಾವು ಒಂದಾಗಿ ಹೋದ್ರೆ ಅಧಿಕಾರಕ್ಕೆ ಬರ್ತಿವಿ. ನಮ್ಮಲ್ಲಿಯೇ ಕಚ್ಚಾಟ ಇದ್ದರೆ ಬಿಜೆಪಿಗೆ ಲಾಭ ಆಗುತ್ತೆ. ನಿನ್ನೆ ಕೋಳಿವಾಡ ಸಹ ಇದನ್ನೇ ಹೇಳಿದ್ದಾರೆ. ಪಕ್ಷ ಮುಖ್ಯ, ಶಿಸ್ತು ಮುಖ್ಯ, ಪಕ್ಷಕ್ಕೆ ಶಿಸ್ತಿನ ಇತಿಹಾಸ ಇದೆ.ನೆಹರು ಪಟೇಲ್ ಶಿಸ್ತಿನಿಂದ ಇದ್ದರು, ಅವರಿಂದಲೇ ಈ ಪಕ್ಷ ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

  • ಜಮೀರ್, ರೆಹಮಾನ್ ಹೆಸ್ರು ಪ್ರಸ್ತಾಪವಾಗಿದ್ದರೂ ವಶಕ್ಕೆ ಪಡೆದಿಲ್ಲ ಯಾಕೆ?

    ಜಮೀರ್, ರೆಹಮಾನ್ ಹೆಸ್ರು ಪ್ರಸ್ತಾಪವಾಗಿದ್ದರೂ ವಶಕ್ಕೆ ಪಡೆದಿಲ್ಲ ಯಾಕೆ?

    ಬೆಂಗಳೂರು: ಐಎಂಎ ಕೇಸಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಶದ ಹಿಂದೆ ರಾಜಕೀಯ ಥಳಕು ಹಾಕಿತ್ತಾ ಎಂಬ ಅನುಮಾನವೊಂದು ಕಾಡುತ್ತಿದೆ. ಯಾಕಂದ್ರೆ ಜುಲೈ 19ರಂದು ನೋಟಿಸ್ ನೀಡಿದೆ. ಆದರೆ ಅದಕ್ಕೂ ಮೊದಲೇ ರೋಷನ್ ಬೇಗ್ ಅವರನ್ನು ಎಸ್‍ಐಟಿ ವಶಕ್ಕೆ ಪಡೆದಿದ್ಯಾಕೆ ಅನ್ನೋ ಪ್ರಶ್ನೆ ಎದ್ದಿದೆ.

    ರೋಷನ್ ಬೇಗ್ ಅವರು ಹೊರ ರಾಜ್ಯ ಅಥವಾ ವಿದೇಶ ಪ್ರವಾಸಕ್ಕೆ ನಿರ್ಬಂಧ ಇತ್ತಾ. ಐಎಂಎ ಕೇಸ್ ನಲ್ಲಿ ಈಗಾಗಲೇ ಜಮೀರ್ ಅಹಮ್ಮದ್, ರೆಹಮಾನ್ ಖಾನ್ ಹೆಸರು ಪ್ರಸ್ತಾಪ ಆಗಿದ್ದರೂ ಕೂಡ ಅವರನ್ನು ಯಾಕೆ ಎಸ್‍ಐಟಿ ವಶಕ್ಕೆ ಪಡೆದಿಲ್ಲ ಎಂಬುದರ ಕುರಿತು ಇದೀಗ ಭಾರೀ ಚರ್ಚೆಯಾಗುತ್ತಿದೆ.

    ಗುರುವಾರ ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರೋಷನ್ ಬೇಗ್ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

    ರೋಷನ್ ಬೇಗ್ ಅವರು ಇತ್ತೀಚೆಗಷ್ಟೇ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಒಂದು ಮೂಲದ ಪ್ರಕಾರ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸರ್ಕಾರದ ಪರ ಮತಚಲಾಯಿಸಿ ಎಂದು ಕೇಳಿಕೊಂಡಿದ್ದರು. ಒಂದು ವೇಳೆ ಬೇಗ್ ಇದಕ್ಕೆ ಒಪ್ಪಿಕೊಳ್ಳುತ್ತಿದ್ದರೆ ಅವರಿಗೆ ಈ ವಿಚಾರಣೆಯಿಂದ ಮುಕ್ತಿ ಸಿಗುವ ಸಾಧ್ಯತೆಗಳಿತ್ತು. ಆದರೆ ಆ ಡೀಲ್ ಅನ್ನು ಬ್ರೇಕ್ ಮಾಡಿ ಬೇಗ್ ಮುಂಬೈಗೆ ಹೊರಟಿದ್ದರು. ಹೀಗಾಗಿ ಅವರನ್ನು ಎಸ್‍ಐಟಿ ವಶಕ್ಕೆ ಪಡೆದಿದೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ಐಎಂಎ ಕೇಸ್ ನಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಶದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

    ಎಸ್‍ಐಟಿ ಮುಂದಿವೆ 8 ಪ್ರಶ್ನೆಗಳು:
    1. ರೋಷನ್ ಬೇಗ್ ಆರೋಪಿಯೋ..? ಸಾಕ್ಷಿದಾರನೋ..?
    2. ರೋಷನ್ ಬೇಗ್‍ಗೆ ಹೊರ ರಾಜ್ಯ, ದೇಶ ಪ್ರವಾಸ ನಿರ್ಬಂಧವಿತ್ತಾ…?
    3. ವಿಚಾರಣೆಗೆ ಹಾಜರಾಗಲು ಬೇಗ್‍ಗೆ ಕಾಲಾವಕಾಶ ನೀಡಿದ್ರಾ…?
    4. ಜುಲೈ 19ರಂದು ಕಾಲಾವಕಾಶ ನೀಡಿಯೂ ವಶಕ್ಕೆ ಪಡೆದಿದ್ದು ಏಕೆ…?
    5. ಕಾಲಾವಕಾಶ ನೀಡಿದ ಹಿಂಬರಹದಲ್ಲಿ ಹೊರರಾಜ್ಯ ಪ್ರಯಾಣ ಉಲ್ಲೇಖ ಇರಲಿಲ್ಲವಾ..?
    6. ಮನ್ಸೂರ್ ಅಲಿಖಾನ್ ಹೆಸರಿಸಿದ ಉಳಿದವರಿಗೆ ನೋಟೀಸ್ ನೀಡಿಲ್ಲ ಏಕೆ…?
    7. ಬೇಗ್ ತರಹನೇ ಜಮೀರ್, ರೆಹಮಾನ್ ಖಾನ್ ವಶಕ್ಕೆ ಏಕೆ ಪಡೆದಿರಲಿಲ್ಲ….?
    8. ಬೇಗ್ ರೀತಿಯೇ ಬೇರೆಯವರಿಗ್ಯಾಕೆ ನೋಟಿಸ್ ನೀಡಲಿಲ್ಲ

  • ಮನ್ಸೂರ್ ಖಾನ್ ಜೊತೆ ಸಂಬಂಧವಿಲ್ಲ – ರೆಹಮಾನ್ ಖಾನ್ ಸ್ಪಷ್ಟನೆ

    ಮನ್ಸೂರ್ ಖಾನ್ ಜೊತೆ ಸಂಬಂಧವಿಲ್ಲ – ರೆಹಮಾನ್ ಖಾನ್ ಸ್ಪಷ್ಟನೆ

    ಬೆಂಗಳೂರು: ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಯಾಕೆ ನನ್ನ ಹೆಸರು ಹೇಳಿದ್ದಾನೋ ಗೊತ್ತಿಲ್ಲ. ವೈಯಕ್ತಿಕವಾಗಿ ಆ ವ್ಯಕ್ತಿ ಜೊತೆ ನಂಗೆ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

    ಭಾನುವಾರ ವಿಡಿಯೋ ರಿಲೀಸ್ ಮಾಡಿದ್ದ ಮನ್ಸೂರ್ ಖಾನ್, ರೆಹಮಾನ್ ಖಾನ್ ಹೆಸರನ್ನ ಪ್ರಸ್ತಾಪಿಸಿದ್ದನು. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೆಹಮಾನ್, ನನಗೂ ಅವನಿಗೂ ಏನೂ ಸಂಬಂಧವಿಲ್ಲ. ಒಂದು ಬಾರಿ ನಾನಿದ್ದಲ್ಲಿಗೆ ರೋಷನ್ ಬೇಗ್ ಅವರು ಭೇಟಿಯಾಗಲೆಂದು ಕರೆದುಕೊಂಡು ಬಂದಿದ್ದರು ಅಷ್ಟೇ ಎಂದು ತಿಳಿಸಿದರು.

    ಐಎಂಎ ಕಂಪನಿ ಸರಿಯಿಲ್ಲ ಎಂದು ಜನಕ್ಕೆ ಹೇಳುತ್ತಿದ್ದೆವು. ಅದಕ್ಕೆ ನನ್ನ ಹೆಸರು ಬಳಸಿರಬಹುದು. ಲಂಚ ಕೊಟ್ಟು ಐಎಂಎ ಕಟ್ಟಬೇಕು ಎಂದು ಹೇಳಿದವರು ಯಾರು? ಮನ್ಸೂರ್ ಭಾರತಕ್ಕೆ ಬರಲಿ, ಪೊಲೀಸ್ ರಕ್ಷಣೆ ಕೊಡುತ್ತಾರೆ. ಎಸ್‍ಐಟಿ ಪೊಲೀಸರ ತನಿಖೆ ವೇಳೆ ವಿಚಾರಣೆಗೆ ಕರೆದರೆ ನಾನು ಹೋಗ್ತೀನಿ ಎಂದು ತಿಳಿಸಿದರು.

    ಮನ್ಸೂರ್ ಖಾನ್ ಎಲ್ಲಿದ್ದರೂ ವಾಪಸ್ಸು ಬಾ, ಜನರಿಗೆ ಎಷ್ಟು ಹಣ ಕೊಡೋಕೆ ಸಾಧ್ಯನೋ ಅಷ್ಟು ಹಣ ವಾಪಸ್ಸು ಕೊಡು ಎಂದು ಇದೇ ವೇಳೆ ರೆಹಮಾನ್ ಖಾನ್ ಮನವಿ ಮಾಡಿದ್ದಾರೆ.