Tag: ರೆಸ್ಯೂಮ್

  • 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ವಾಷಿಂಗ್ಟನ್: ತಾಂತ್ರಿಕತೆ ಮುಂದುವರಿದಂತೆ ಯುವ ಸಮೂಹದಲ್ಲಿ ಉದ್ಯೋಗ ಹುಡುಕುವ ಪೈಪೋಟಿ ಹೆಚ್ಚಾಗಿದೆ. ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಯುವಕರು ತಮ್ಮೆಲ್ಲಾ ಕೌಶಲಗಳನ್ನು ಬಳಸಿ, ರೆಸ್ಯೋಮ್ ಅನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಕೆಲವರು ಪೇಪರ್ ರೆಸ್ಯೂಮ್ ಮಾಡ್ಕೊಂಡ್ರೆ ಇನ್ನೂ ಕೆಲವರು ಡಿಜಿಟಲ್ ಲಿಂಕ್‌ಗಳಲ್ಲೇ ಆಕರ್ಷಕ ರೆಸ್ಯೂಮ್‌ಗಳನ್ನು ಕ್ರಿಯೇಟ್ ಮಾಡಿಕೊಳ್ತಾರೆ.

    ಆದರೆ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಬಿಲ್‌ಗೇಟ್ಸ್ 48 ವರ್ಷಗಳ ಹಿಂದೆ ಸಿದ್ದಪಡಿಸಿದ್ದ ತಮ್ಮ ಮೊದಲ ರೆಸ್ಯೂಮ್ ಹಂಚಿಕೊಳ್ಳುವ ಮೂಲಕ ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಆತ್ಮವಿಶ್ವಾಸ ಮೂಡಿಸಿದ್ದಾರೆ. ಇದನ್ನೂ ಓದಿ: ಕಪಿಲ್ ದೇವ್ ನಂತರ 35 ವರ್ಷಗಳ ಬಳಿಕ ಭಾರತದ ನಾಯಕತ್ವ ಪಡೆದ ವೇಗಿ – ಬುಮ್ರಾ ಕ್ಯಾಪ್ಟನ್, ಪಂತ್ ವೈಸ್ ಕ್ಯಾಪ್ಟನ್

    68 ವರ್ಷ ವಯಸ್ಸಿನ ಬಿಲ್ ಗೇಟ್ಸ್ ತಮ್ಮ 48 ವರ್ಷಗಳ ಹಿಂದೆ ತಯಾರಿಸಿದ್ದ ವೃತ್ತಿಜೀವನದ ಆರಂಭದ ರೆಸ್ಯೂಮ್ ಲಿಂಕ್ಡ್ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ನೀವು ಇತ್ತೀಚೆಗೆ ಪದವಿ ಪಡೆದವರು, ಕಾಲೇಜು ಯುವಕ – ಯುವತಿಯರು ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದಿನ ರೆಸ್ಯೂಮ್‌ಗಿಂತ ಬಹಳ ಚೆನ್ನಾಗಿರುತ್ತೆ. ನಿಮ್ಮ ರೆಸ್ಯೂಮ್ ಬಹಳ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹಲವಾರು ಬಳಕೆದಾರರು ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಾಸ್ಟಾಲ್ಜಿಕ್ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಒಂದು ಪುಟದ ರೆಸ್ಯೂಮ್ ಅದ್ಭುತವಾಗಿದೆ. ನಾವೆಲ್ಲರೂ ಜೀವನದ ಪಯಣದಲ್ಲಿ ಹಿಂದಿರುಗಿ ನೋಡಲು ನಮ್ಮ ಹಿಂದಿನ ರೆಸ್ಯೂಮ್‌ಗಳ ನಕಲುಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆಯನ್ನೂ ಕಾಮೆಂಟ್‌ನಲ್ಲಿ ನೀಡಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ಅರೆಸ್ಟ್

    ಬಿಲ್‌ಗೇಟ್ಸ್ ಓದಿದ್ದೇನು?: ಬಿಲಿಯನರ್ ಬಿಲ್‌ಗೇಟ್ಸ್ ಹಾರ್ವರ್ಡ್ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿದ್ದಾಗ ಈ ರೆಸ್ಯೂಮ್ ಸಿದ್ಧಪಡಿಸಿಕೊಂಡಿದ್ದರು. ಕಾಲೇಜಿನಲ್ಲಿ ಆಪರೇಟಿಂಗ್ ಸಿಸ್ಟಂ ರಚನೆ, ಡೇಟಾಬೇಸ್ ನಿರ್ವಹಣೆ, ಕಂಪ್ಯೂಟರ್ ಗ್ರಾಫಿಕ್ಸ್ ಮುಂತಾದ ಕೋರ್ಸ್ಗಳನ್ನು ಅಧ್ಯಯನ ಮಾಡಿಕೊಂಡಿದ್ದರು ಎಂಬುದಾಗಿ ರೆಸ್ಯೂಮ್‌ನಲ್ಲಿ ಉಲ್ಲೇಖಿಸಲಾಗಿದೆ.

    Live Tv

  • ರೆಸ್ಯೂಮ್‍ನಲ್ಲಿ ಟೆಂಪ್ಲೇಟ್ ಫೋಟೋ ಎಡವಟ್ಟು – ಹುಡುಗಿ ಹುಡುಗನಾದ ಕಥೆ

    ರೆಸ್ಯೂಮ್‍ನಲ್ಲಿ ಟೆಂಪ್ಲೇಟ್ ಫೋಟೋ ಎಡವಟ್ಟು – ಹುಡುಗಿ ಹುಡುಗನಾದ ಕಥೆ

    ಹುಡುಗಿಯೊಬ್ಬಳು ಕೆಲಸಕ್ಕೆಂದು ಅರ್ಜಿಸಲ್ಲಿಸುವಾಗ ತನ್ನ ರೆಸ್ಯೂಮ್‍ನಲ್ಲಿ ಟೆಂಪ್ಲೇಟ್ ಫೋಟೋ ಹಾಕುವುದನ್ನು ಮರೆತು ಟ್ರೋಲ್ ಆಗಿದ್ದಾಳೆ.

    ಪ್ರತಿಯೊಬ್ಬರು ಕೆಲಸಕ್ಕೆ ಸೇರುವ ಮೊದಲು ರೆಸ್ಯೂಮ್‍ನ್ನು ರೆಡಿ ಮಾಡಿಕೊಂಡು ಅದರಲ್ಲಿ ಯಾವುದೇ ರೀತಿಯ ದೋಷಗಳಿರದೇ ಕೆಲಸಕ್ಕೆ ಸೇರುವ ಸಂಸ್ಥೆಗೆ ಕಳುಹಿಸುವುದು ಮುಖ್ಯವಾದ ಅಂಶ. ಆದರೆ ಇಲ್ಲೊಬ್ಬಳು ಹುಡುಗಿ ತನ್ನೆಲ್ಲ ಸವಿವರವನ್ನು ದಾಖಲಿಸಿ ಮೊದಲ ಪುಟದಲ್ಲಿ ತನ್ನ ಫೋಟೋ ಹಾಕುವ ಬದಲು ಟೆಂಪ್ಲೇಟ್‍ನಲ್ಲಿದ್ದ ಚಿತ್ರವನ್ನೇ ಹಾಕಿ ಪೇಚಿಗೆ ಸಿಲುಕಿಕೊಂಡಿದ್ದಾಳೆ.

    ಮರಿಸ್ಸಾ ಕೆಲಸಕ್ಕೆಂದು ರಿಸ್ಯೂಮ್ ಒಂದನ್ನು ತಯಾರಿಸಿದ್ದು ಅದರಲ್ಲಿ ತನ್ನೆಲ್ಲ ವಿವರವನ್ನು ಪೂರ್ತಿಯಾಗಿ ನಮೂದಿಸಿದ್ದಾಳೆ. ಆದರೆ ಮೊದಲ ಪುಟದಲ್ಲಿ ತನ್ನ ಛಾಯಚಿತ್ರದ ಬದಲು ಟೆಂಪ್ಲೇಟ್‍ನಲ್ಲಿದ್ದ ಹುಡುಗ ಡಾಕ್ಟರ್‍ನ ಚಿತ್ರವನ್ನೇ ಹಾಕಿ ಅರ್ಜಿ ಸಲ್ಲಿಸಿದ್ದಾಳೆ. ನಂತರ ತನ್ನ ತಪ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೀವು ನಿಮ್ಮ ಕೆಟ್ಟ ದಿನಗಳನ್ನು ಒಮ್ಮೆ ಯೋಚಿಸಿ. ನಾನೂ ರೆಸ್ಯೂಮ್‍ನಲ್ಲಿ ಟೆಂಪ್ಲೇಟ್ ಫೋಟೋವನ್ನು ಬದಲಾಯಿಸದೆ ಕಳುಹಿಸಿದ್ದೆ ಎಂದಿದ್ದಾಳೆ.

    ಮರಿಸ್ಸಾ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆ ನೆಟ್ಟಿಗರು ಆಕೆಯನ್ನು ಕಾಲೆಳೆದುಕೊಂಡಿದ್ದಾರೆ. ರೆಸ್ಯೂಮ್ ನೋಡಿದ ಹೆಚ್‍ಆರ್ ಒಮ್ಮೆ ಹುಡುಗಿ ಹುಡುಗನಾಗಿರುವ ಫೋಟೋ ನೋಡಿ ಗಲಿಬಿಲಿಯಾಗಿರಬಹುದು ಎಂದು ಒಬ್ಬ ಕಮೆಂಟ್ ಮಾಡಿದ್ದರೆ, ಇನ್ನೊಬ್ಬ ಈ ರೀತಿ ಆಗಬಾರದು, ನನಗೆ 10 ನಿಮಿಷ ನಗೆ ತಡೆಯಲು ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾನೆ.