Tag: ರೆಸ್ಟ್

  • ಸಿಎಂ ರೆಸಾರ್ಟ್ ವಾಸ್ತವ್ಯ ಬಗ್ಗೆ ಸಾ.ರಾ ಮಹೇಶ್ ಸ್ಪಷ್ಟನೆ

    ಸಿಎಂ ರೆಸಾರ್ಟ್ ವಾಸ್ತವ್ಯ ಬಗ್ಗೆ ಸಾ.ರಾ ಮಹೇಶ್ ಸ್ಪಷ್ಟನೆ

    ಮಡಿಕೇರಿ: ಭೀಕರ ಬರಗಾಲದ ನಡುವೆಯೇ ಸಿಎಂ ಕುಮಾರಸ್ವಾಮಿ ಮಡಿಕೇರಿಯಲ್ಲಿರುವ ಇಬ್ಬನಿ ರೆಸಾರ್ಟ್ ಗೆ ಹೋಗಿದ್ಯಾಕೆ? ಈ ಬಗ್ಗೆ ಜೆಡಿಎಸ್ ಸಚಿವರು ತಮ್ಮದೇ ವ್ಯಾಖ್ಯಾನ ಕೊಡುತ್ತಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಸಾರಾ ಮಹೇಶ್, ಮುಖ್ಯಮಂತ್ರಿ ಇರಬಹುದು, ಸಚಿವರೇ ಇರಬಹುದು. ಎಲ್ಲರಿಗೂ ತಮ್ಮದೇ ಆದ ಖಾಸಗಿ ಜೀವನ ಇರುತ್ತದೆ. ಒಮ್ಮೊಮ್ಮೆ ಯಂತ್ರಗಳು ಕೂಡಾ ಕೆಟ್ಟು ಹೋಗುತ್ತವೆ. ಅವಕ್ಕೂ ರೆಸ್ಟ್ ಬೇಕಾಗುತ್ತದೆ. ಹೀಗಾಗಿ ನಮಗೂ ವಿಶ್ರಾಂತಿ ಬೇಕಾಗುತ್ತದೆ. ಅದಕ್ಕಾಗಿ ಸಿಎಂ ಕುಮಾರಸ್ವಾಮಿ ಇಲ್ಲಿಗೆ ರೆಸ್ಟ್ ಗಾಗಿ ಬಂದಿದ್ದಾರೆ ಅಷ್ಟೆ ಎಂದರು.

    ಅವರ ಸೂಚನೆ ಮೇರೆಗೆ ಇಂದು ಮಡಿಕೇರಿಯಲ್ಲಿ ಸಭೆ ನಡೆಸುತ್ತಿದ್ದೇನೆ. ಮಡಿಕೇರಿ ವಾಸ್ತವ್ಯಕ್ಕೆ ಸುರಕ್ಷಿತ ಅಂತ ರಾಜ್ಯದ ಜನತೆಗೆ ತಿಳಿಸಲು ಮಾಜಿ ಸಿಎಂ ಮತ್ತು ಹಾಲಿ ಸಿಎಂ ಒಂದೇ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆಯಿಂದ ಎಂದಿನಂತೆ ಸರ್ಕಾರಿ ಕಾರ್ಯಕ್ರಮಗಳು ಶುರುವಾಗುತ್ತವೆ ಎಂದು ಸಾರಾ ಮಹೇಶ್ ತಿಳಿಸಿದ್ದಾರೆ.

    23ರ ನಂತರ ರಾಜ್ಯದಲ್ಲಿ ಗೇಮ್‍ಪ್ಲಾನ್ ಆಗಲಿದೆ ಎನ್ನೊ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸರ್ಕಾರ ರಚಿಸಿದ ದಿನದಿಂದಲೂ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಬಿಎಸ್‍ವೈ ಹೇಳಿಕೆಗೆ ತಿರುಗೇಟು ನೀಡಿದರು.

  • ಪ್ರಚಾರಕ್ಕೆ ಬ್ರೇಕ್- ಗಾಯಾಳು ಸ್ನೇಹಿತನನ್ನು ಭೇಟಿ ಮಾಡಿದ್ರು ದರ್ಶನ್

    ಪ್ರಚಾರಕ್ಕೆ ಬ್ರೇಕ್- ಗಾಯಾಳು ಸ್ನೇಹಿತನನ್ನು ಭೇಟಿ ಮಾಡಿದ್ರು ದರ್ಶನ್

    ಬೆಂಗಳೂರು: ನಟ ದರ್ಶನ್ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಪ್ರಚಾರಕ್ಕೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ತಮ್ಮ ಸ್ನೇಹಿತ ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದ್ದಾರೆ.

    ದರ್ಶನ್ ಅವರು ಮೂರು ದಿನಗಳ ಕಾಲ ಮಂಡ್ಯದಲ್ಲಿ ತಮ್ಮ ಪ್ರಚಾರವನ್ನು ರದ್ದು ಮಾಡಿ ಬೆಂಗಳೂರಿಗೆ ಬಂದಿದ್ದಾರೆ. ಸ್ನೇಹಿತ ವಿನೋದ್ ಪ್ರಭಾಕರ್ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದರು. ಈ ವಿಚಾರ ತಿಳಿದ ದರ್ಶನ್, ತಕ್ಷಣ ಹೋಗಿ ಗೆಳೆಯನ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ವೈದ್ಯರ ಸೂಚನೆಯಂತೆ ವಿಶ್ರಾಂತಿ ಪಡೆಯುವಂತೆ ಸಲಹೆ ಕೊಟ್ಟಿದ್ದಾರೆ.

    ನಟ ವಿನೋದ್ ಪ್ರಭಾಕರ್ ಅವರು ‘ವರದ’ ಸಿನಿಮಾದಲ್ಲಿ ಕೆಲವು ಸಾಹಸ ದೃಶ್ಯಗಳ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಓಡಿ ಬಂದು ಜಂಪ್ ಮಾಡುವಾಗ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಕಾಲಿನ ಮೂಳೆ ಮುರಿದಿದ್ದರಿಂದ 5 ವಾರಗಳ ಕಾಲ ಬೆಡ್‍ರೆಸ್ಟ್ ನಲ್ಲಿ ಇರುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

    ವೈದ್ಯರು ವಿಶಾಂತ್ರಿ ಪಡೆಯುವಂತೆ ಸೂಚಿಸಿದ್ದರೂ ತಮ್ಮಿಂದ ಚಿತ್ರತಂಡಕ್ಕೆ ತೊಂದರೆಯಾಗಬಾರದೆಂದು ಆ್ಯಕ್ಷನ್ ಶೂಟಿಂಗ್ ಬಿಟ್ಟು ಮಾತುಕತೆಯ ಚಿತ್ರೀಕರಣಕ್ಕೆ ಭಾಗಿಯಾಗಿದ್ದರು.

  • ರಾಧಿಕಾ ಕೆಜಿಎಫ್ ನೋಡಿಲ್ಲ – ರಾಕಿ ಭಾಯ್ ಸ್ಪಷ್ಟನೆ

    ರಾಧಿಕಾ ಕೆಜಿಎಫ್ ನೋಡಿಲ್ಲ – ರಾಕಿ ಭಾಯ್ ಸ್ಪಷ್ಟನೆ

    ಬೆಂಗಳೂರು: ಭಾರತದಾದ್ಯಂತ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾವನ್ನು ನೋಡಿ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಆದರೆ ಯಶ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ಕೆಜೆಎಫ್ ಸಿನಿಮಾವನ್ನು ನೋಡಿಲ್ಲ.

    ಹೌದು.. ನಟಿ ರಾಧಿಕಾ ಪಂಡಿತ್ ಇನ್ನೂ ಕೆಜಿಎಫ್ ಸಿನಿಮಾವನ್ನು ನೋಡಿಲ್ಲ. ಈ ಬಗ್ಗೆ ಯಶ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಜಿಎಫ್ ಸಿನಿಮಾವನ್ನು ಹೊಸ ಸೌಂಡ್‍ನಲ್ಲಿ ನೋಡುವುದಕ್ಕೆ ಓರಾಯನ್ ಮಾಲ್‍ ಗೆ ಹೋಗಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಯಶ್, ರಾಧಿಕಾ ಪಂಡಿತ್ ಇನ್ನೂ ಸಿನಿಮಾ ನೋಡಿಲ್ಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: 150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!

    ರಾಧಿಕಾ ಅವರಿಗೂ ಸಿನಿಮಾ ನೋಡಬೇಕೆಂಬ ಆಸೆ ಇದೆ. ಆದರೆ ನೋಡಲು ಸಾಧ್ಯವಾಗಿಲ್ಲ. ಎಲ್ಲರೂ ಇಷ್ಟೊಂದು ಇಷ್ಟ ಪಡುತ್ತಿದ್ದಾರೆ. ನಾನು ಸಿನಿಮಾ ನೋಡಲೇಬೇಕು ಎಂದು ಪ್ರತಿದಿನ ಕೇಳುತ್ತಿದ್ದಾರೆ. ಆದರೆ ರಾಧಿಕಾ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಯಾಕೆಂದರೆ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಧಿಕಾ ಸಿನಿಮಾ ನೋಡಲು ಆಗುವುದಿಲ್ಲ ಎಂದು ಯಶ್ ಅಭಿಮಾನಿಗಳ ಬಳಿ ಹೇಳಿದ್ದಾರೆ.

    ರಾಧಿಕಾ ಅವರು ಡಿಸೆಂಬರ್ 2 ಭಾನುವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ರಾಧಿಕಾ ಅವರು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಜೊತೆ ಹೊಸ ಜಗತ್ತಿನಲ್ಲಿ ಹೊಸ ಅನುಭವಗಳನ್ನ ಪಡೆಯುತ್ತಿದ್ದಾರೆ.

    ರಾಧಿಕಾಗೆ ಡಾಕ್ಟರ್ ರೆಸ್ಟ್ ಮಾಡಲು ಸೂಚಿಸಿದ್ದಾರೆ. ಆದರೂ ನಾನು ಸಿನಿಮಾ ನೋಡಬೇಕು ಎಂದು ಯಶ್ ಬಳಿ ತುಂಬಾ ಸಾರಿ ಹೇಳಿದ್ದಾರಂತೆ. ಆದರೆ ಡಾಕ್ಟರ್ ಸದ್ಯಕ್ಕೆ ಹೊರಗಡೆ ಹೋಗೋದು ಬೇಡ ಅಂತ ಕೆಜಿಎಫ್ ವೀಕ್ಷಣೆಗೆ ಬ್ರೇಕ್ ಹಾಕಿದ್ದಾರೆ. ಸದ್ಯದಲ್ಲೇ ತಾಯಿ, ಮಗು ಇಬ್ಬರು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv