Tag: ರೆಸಿಪ್

  • ರಾತ್ರಿ ಮಿಕ್ಕಿರುವ ಅನ್ನದಲ್ಲಿ ಮಾಡಿ ಎಗ್ ಪುಲಾವ್

    ರಾತ್ರಿ ಮಿಕ್ಕಿರುವ ಅನ್ನದಲ್ಲಿ ಮಾಡಿ ಎಗ್ ಪುಲಾವ್

    ರಾತ್ರಿ ಉಳಿದ ಅನ್ನವನ್ನು ಏನು ಮಾಡುವುದು ಎಂದು ಯೋಚಿಸುತ್ತೇವೆ. ಸಾಮಾನ್ಯವಾಗಿ ಚಿತ್ರನ್ನ, ಪುಳಿಯೋಗರೆ ಮಾಡುತ್ತೇವೆ. ಆದರೆ ನಾವು ರಾತ್ರಿ ಊಟಾ ಮಾಡಿ ಮಿಕ್ಕಿರುವ ಅನ್ನದಲ್ಲಿ ರುಚಿ ರುಚಿಯಾದ ಎಗ್ ಪುಲಾವ್ ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ.

    ಬೇಕಾಗುವ ಸಾಮಗ್ರಿಗಳು:

    * ಅನ್ನ – 2 ಕಪ್
    * ಮೊಟ್ಟೆ- 2
    * ಈರುಳ್ಳಿ- 2
    * ಬೆಳ್ಳುಳ್ಳಿ- 1
    * ಟೊಮೇಟೊ – 2
    * ಹಸಿ ಮೆಣಸಿನಕಾಯಿ- 2
    * ಅವರೆ ಕಾಳು – ಅರ್ಧ ಕಪ್
    * ಅರಿಶಿಣ ಪುಡಿ- 1/2 ಟೀ ಸ್ಪೂನ್
    * ಖಾರದ ಪುಡಿ- 1 ಟೀ ಸ್ಪೂನ್
    * ಕರಿ ಮೆಣಸಿನ ಪುಡಿ – 1 ಟೀ ಸ್ಪೂನ್
    * ಗರಂ ಮಸಾಲ ಪುಡಿ- 1 ಟೀ ಸ್ಪೂನ್
    * ಉರಿದ ಎಳ್ಳಿನ ಪುಡಿ – 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 2 ಟೀ ಸ್ಪೂನ್

    ಮಾಡುವ ವಿಧಾನ:
    * ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕಿಕೊಂಡು ಹೊಂಬಣ್ಣ ಬರುವವರೆಗೆ ಉರಿಯಿರಿ.
    *ಮೊಟ್ಟೆಗಳನ್ನು ಹುಷಾರಾಗಿ ಒಡೆದು, ಬಾಣಲೆಗೆ ಹಾಕಿ. ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತ ಬೇಯಿಸಿ.

    *ಈಗ ಉಪ್ಪು, ಕರಿ ಮೆಣಸು, ಅರಿಶಿಣ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊ, ಅವರೆಕಾಳುಗಳನ್ನು ಹಾಕಿ 3-4 ನಿಮಿಷಗಳ ಕಾಲ ಬೇಯಿಸಿ.
    *ಈಗ ಈ ಮಿಶ್ರಣಕ್ಕೆ ಅನ್ನ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಬೇಯಿಸಿದ ಮೊಟ್ಟೆಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ.

    *ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ. ಈ ಖಾದ್ಯದ ಮೇಲೆ ಎಳ್ಳು ಪುಡಿಯನ್ನು ಚಿಮುಕಿಸಿದರೆ ರುಚಿಯಾದ ಮೊಟ್ಟೆ ಪುಲಾವ್ ಸಿದ್ಧವಾಗುತ್ತದೆ.