Tag: ರೆಸಿಪಿ

  • ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ ಬಾಯಿ ಚಪ್ಪರಿಸಿ

    ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ ಬಾಯಿ ಚಪ್ಪರಿಸಿ

    ರುಚಿಯಾದ ಆಹಾರ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಒಂದೊಂದು ಭಾಗಗಲ್ಲಿ ವಿಶೇಷ ಆಹಾರದ ರುಚಿಯನ್ನು ಒಮ್ಮೆಯಾದ್ರೂ ಸವಿಯಬೇಕು ಅಂತ ಪ್ರತಿಯೊಬ್ಬರು ಅಂದುಕೊಳ್ತಾರೆ. ಪ್ರತಿ ದಿನ ಚಿಕನ್‌, ಮಟನ್‌, ಫಿಶ್‌ ತಿಂದು ಬೇಜಾರಾಗಿದ್ರೆ ಕೊಡಗಿನ ಶೈಲಿಯ ಖಾರ ಖಾರವಾದ ಹಂದಿಕರಿ ಮಾಡಿ ಸವಿಯಿರಿ. ಅದು ಹೇಗಂತೀರಾ ಮುಂದೆ ಓದಿ..

    ಬೇಕಾಗುವ ಸಾಮಗ್ರಿಗಳು:
    * ಪೋರ್ಕ್ (ಹಂದಿ ಮಾಂಸ) 1 ಕೆಜಿ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ಅರಿಶಿಣ ಪುಡಿ- 1 ಟೀ ಸ್ಪೂನ್
    * ಖಾರದ ಪುಡಿ-2 ಟೀ ಸ್ಪೂನ್
    * ಕೊತ್ತಂಬರಿ ಪುಡಿ 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕರಿಬೇವು ಸ್ವಲ್ಪ
    * ಕೊತ್ತಂಬರಿ ಸೊಪ್ಪು
    * ಬೆಳ್ಳುಳ್ಳಿ-2
    * ಜೀರಿಗೆ ಪುಡಿ – 1ಟೀ ಸ್ಪೂನ್
    * ಮೆಂತೆ ಪುಡಿ- 1ಟೀ ಸ್ಪೂನ್
    * ಈರುಳ್ಳಿ – 2
    * ಶುಂಠಿ
    * ಹಸಿ ಮೆಣಸು 1ರಿಂದ2
    * ಕಾಳು ಮೆಣಸಿನ ಪುಡಿ 1 ಟೀ ಸ್ಪೂನ್
    * ನಿಂಬೆ ರಸ- 2 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್

    ಮಾಡುವ ವಿಧಾನ:
    * ಕೊತ್ತಂಬರಿ ಪುಡಿ ಹಾಗೂ ಖಾರದ ಪುಡಿ ಸ್ವಲ್ಪ ಕಾಫಿ ಹುಡಿ ಬಣ್ಣಕ್ಕೆ ಬರುವಷ್ಟು ಹೊತ್ತು ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕರಿಬೇವನ್ನು ಹಾಕಬೇಕು. ನಂತರ ಇದೇ ಪಾತ್ರೆಗೆ ಹಂದಿ ಮಾಂಸವನ್ನು ತೊಳೆದು ಹಾಕಿ ಅರಿಶಿಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಬೇಕು.
    * ಜೀರಿಗೆ ಪುಡಿ, ಮೆಂತೆ ಪುಡಿ, ಈರುಳ್ಳಿ, ಶುಂಠಿ, ಕಾಳು ಮೆಣಸಿನ ಪುಡಿ, ಹಸಿ ಮೆಣಸು, ನಿಂಬೆರಸ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ ಸ್ಪಲ್ಪ ಹೊತ್ತು ಬೇಯಿಸಬೇಕು.
    * ನಂತರ ಹುರಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ 45-50 ನಿಮಿಷ ಬೇಯಿಸಬೇಕು.
    * ನಂತರ 1 ಚಮಚ ನಿಂಬೆರಸ ಸೇರಿಸಿ, ಕೊತ್ತಂಬರಿಯನ್ನು ಹಾಕಿದರೆ ಹಂದಿ ಕರಿ ಕಡಬು ಅಥವಾ ಇಡ್ಲಿ ಜೊತೆ ಸವಿಯಲು ಸಿದ್ಧವಾಗುತ್ತದೆ.

  • ರುಚಿಕರ ಹಾಗೂ ಆರೋಗ್ಯಕರ ಬೀಟ್‌ರೂಟ್ ಸೂಪ್

    ರುಚಿಕರ ಹಾಗೂ ಆರೋಗ್ಯಕರ ಬೀಟ್‌ರೂಟ್ ಸೂಪ್

    ಬೀಟ್‌ರೂಟ್‌ಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಸಲಾಡ್ ರೂಪದಲ್ಲಿ, ಜ್ಯೂಸ್, ಗೊಜ್ಜು, ಸಾಂಬಾರು, ಪಲ್ಯ ಹೀಗೆ ನಾನಾ ರೂಪದಲ್ಲಿ ನಾವು ಬೀಟ್‌ರೂಟ್ ಸೇವನೆ ಮಾಡುತ್ತೇವೆ. ಬೀಟ್‌ರೂಟ್‌ಗಳಲ್ಲಿ ವಿಟಮಿನ್‌ಗಳು ಹಾಗೂ ಖನಿಜಾಂಶಗಳು ಹೇರಳವಾಗಿದ್ದು, ಅತ್ಯುತ್ತಮ ಆಹಾರ ಮೂಲ ಎನಿಸಿಕೊಂಡಿದೆ. ಪ್ರತಿನಿತ್ಯ ಬೀಟ್‌ರೂಟ್ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಬೀಟ್‌ರೂಟ್ ಸೂಪ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ಈ ರೆಸಿಪಿಯನ್ನು ಒಂದು ಬಾರಿ ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಬೀಟ್‌ರೂಟ್ – 1
    ಬೆಣ್ಣೆ – 1 ಚಮಚ
    ಬಿರಿಯಾನಿ ಎಲೆ – 1
    ಮೆಣಸು – ಒಂದು ಚಮಚ
    ಶುಂಠಿ- ಒಂದು ಸಣ್ಣ ತುಂಡು
    ಬೆಳ್ಳುಳ್ಳಿ – 3 ಎಸಳು
    ಈರುಳ್ಳಿ- 1
    ಕ್ಯಾರೆಟ್- 1
    ಕಾಳು ಮೆಣಸಿನ ಪುಡಿ- ಸ್ವಲ್ಪ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ತೊಳೆದು ಸಣ್ಣಗೆ ಕತ್ತರಿಸಿ.
    * ನಂತರ ಬೀಟ್‌ರೂಟ್ ಸಿಪ್ಪೆ ತೆಗೆದು ತೆಳುವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ.
    * ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದ ನಂತರ ಬಿರಿಯಾನಿ ಎಲೆ, ಕಾಳು ಮೆಣಸು, ಶುಂಠಿ, ಬೆಳ್ಳುಳ್ಳಿ ಚೆನ್ನಾಗಿ ಹಾಕಿ ಫ್ರೈ ಮಾಡಿ.
    * ಬೆಳ್ಳುಳ್ಳಿ ಸ್ವಲ್ಪ ಹುರಿದ ನಂತರ ಈರುಳ್ಳಿ ಮತ್ತು ಕ್ಯಾರೆಟ್ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.
    * ಬಳಿಕ ಹೆಚ್ಚಿದ ಬೀಟ್‌ರೂಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿಕೊಳ್ಳಿ.
    * ಈಗ ಒಂದು ಕಪ್ ನೀರು ಹಾಕಿ ಮತ್ತೆ ಮುಚ್ಚಿ, ಸ್ವಲ್ಪ ಸಮಯ ಕುದಿಸಿ. ಈಗ ಸ್ಟವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
    * ನಂತರ ಬಿರಿಯಾನಿ ಎಲೆ ತೆಗೆದು ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಸೇರಿಸಿ.
    * ಈಗ ಈ ಮಿಶ್ರಣವನ್ನು ಪ್ಯಾನ್‌ನಲ್ಲಿ ಒಂದರಿಂದ ಮೂರು ನಿಮಿಷಗಳ ಕಾಲ ಕುದಿಸಿ.
    * ನಂತರ ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ರುಚಿಕರ ಹಾಗೂ ಆರೋಗ್ಯಕರವಾದ ಬೀಟ್‌ರೂಟ್ ಸೂಪ್ ಸವಿಯಲು ಸಿದ್ಧ.

  • 20 ನಿಮಿಷದಲ್ಲೇ ಮಾಡ್ಬೋದು 7 ಲೇಯರ್‌ನ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

    20 ನಿಮಿಷದಲ್ಲೇ ಮಾಡ್ಬೋದು 7 ಲೇಯರ್‌ನ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

    ಆರೋಗ್ಯಕರ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವ ಕಷ್ಟ ತಾಯಂದಿರಿಗೇ ಗೊತ್ತು. ತರಕಾರಿಗಳನ್ನ ಅಡಗಿಸಿ ಬೇರೆ ಬೇರೆ ರೆಸಿಪಿಗಳನ್ನು ಮಾಡಿ ಮಕ್ಕಳಿಗೆ ತಿನ್ನಿಸುವ ಹೊತ್ತಿಗೆ ದಿನಕಳೆದಿರುತ್ತೆ. ಆದ್ರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಈ ಒಂದು ಸಮಸ್ಯೆಗೆ ಖಂಡಿತಾ ಪರಿಹಾರವಾಗುತ್ತೆ. ಕೇವಲ 20 ನಿಮಿಷಗಳಲ್ಲಿ ಮಾಡಬಹುದಾದ 7 ಲೇಯರ್ ಚಿಕನ್ ಟಾಕೋ (7 Layer Chicken Taco) ಮನೆಯಲ್ಲೇ ಟ್ರೈ ಮಾಡಬಹುದು. ನೀವು ಮಕ್ಕಳಿಗೆ ತಿನ್ನಸಬೇಕೆಂದಿರೋ ತರಕಾರಿಗಳನ್ನೂ ಇದರಲ್ಲಿ ಅಡಗಿಸಿ ನೀಡಿ. ಮಕ್ಕಳು ಇದನ್ನು ಖಂಡಿತವಾಗಿಯೂ ಕಣ್ಣು ಮುಚ್ಚಿ ನಾಲಿಗೆ ಚಪ್ಪರಿಸಿಕೊಂಡು ಸವಿಯುತ್ತಾರೆ. ಈ ಚಿಕನ್ ಟಾಕೋ ಹೇಗೆ ಮಾಡೋದು ಎಂಬುದನ್ನು ನೋಡೋಣ…

    Chicken Taco

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಚಿಕನ್ ಬ್ರೆಸ್ಟ್ – 4 (ಮೂಳೆ ರಹಿತ)
    ಹಸಿರು ಮೆಣಸಿನಕಾಯಿ – 1
    ಜೇನುತುಪ್ಪ – ಕಾಲು ಕಪ್
    ಹುಳಿ ಕ್ರೀಮ್ – 1 ಕಪ್
    ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಗಟ್ಟಿಯಾದ ಟಾಕೋ ಶೆಲ್‌ಗಳು – 10
    ಫ್ರೈ ಮಾಡಿದ ಬೀನ್ಸ್ – ಮುಕ್ಕಾಲು ಕಪ್ (ಸೌತೆಕಾಯಿ, ಕುಂಬಳಕಾಯಿ, ಪಾಲಕ್ ಸೊಪ್ಪು, ಕ್ಯಾಬೇಜ್, ಹುರುಳಿ ಹೀಗೆ ಹಲವು ಬೇಯಿಸಿದ ತರಕಾರಿಗಳನ್ನೂ ನೀವಿದರಲ್ಲಿ ಸೇರಿಸಬಹುದು)
    ತುರಿದ ಚೀಸ್ – ಅರ್ಧ ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ಸಣ್ಣಗೆ ಹೆಚ್ಚಿದ ಟೊಮೆಟೊ – 2
    ಸಣ್ಣಗೆ ಕತ್ತರಿಸಿದ ಆವಕಾಡೋ – 1

    Chicken Taco 1ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಬೇಯಿಸಿದ ಚಿಕನ್ ಬ್ರೆಸ್ಟ್ ಅನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟಿರಿ.
    * ಒಂದು ಬಟ್ಟಲಿನಲ್ಲಿ ಚೂರು ಮಾಡಿದ ಚಿಕನ್, ಹಸಿರು ಮೆಣಸಿನಕಾಯಿ, ಜೇನುತುಪ್ಪ, ಹುಳಿ ಕ್ರೀಮ್ ಮತ್ತು ಕರಿ ಮೆಣಸಿನಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಬೇಕಿಂಗ್ ಪ್ಯಾನ್ ತೆಗೆದುಕೊಂಡು, ಅದರಲ್ಲಿ ಟಾಕೋ ಶೆಲ್‌ಗಳನ್ನು ಇರಿಸಿ. ಪ್ರತಿ ಶೆಲ್‌ಗಳಲ್ಲಿ ಒಂದೊಂದು ಟೀಸ್ಪೂನ್‌ಗಳಷ್ಟು ಹೆಚ್ಚಿ, ಬೇಯಿಸಿದ ತರಕಾರಿಗಳನ್ನು ಹರಡಿ.
    * ಈಗ ತರಕಾರಿ ಮೇಲೆ ಚಿಕನ್ ಮಿಶ್ರಣವನ್ನು ಟಾಕೋ ಶೆಲ್‌ನ ಮುಕ್ಕಾಲು ಭಾಗದವರೆಗೆ ಬರುವಷ್ಟು ತುಂಬಿಕೊಳ್ಳಿ.
    * ಈಗ ಅದರ ಮೇಲೆ ಚೀಸ್ ಅನ್ನು ಸಿಂಪಡಿಸಿ.
    * ಬಳಿಕ ಪ್ಯಾನ್ ಅನ್ನು ಓವನ್‌ನಲ್ಲಿ ಇರಿಸಿ, ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಬಳಿಕ ಟಾಕೋಗಳ ಮೇಲೆ ಹುಳಿ ಕ್ರೀಮ್, ಕೊತ್ತಂಬರಿ ಸೊಪ್ಪು, ಟೊಮೆಟೊ ಹಾಗೂ ಆವಕಾಡೋ ಹರಡಿ.
    * ಇದೀಗ 7 ಲೇಯರ್ ಚಿಕನ್ ಟಾಕೋ ತಯಾರಾಗಿದ್ದು, ಇದನ್ನು ಬಿಸಿ ಬಿಸಿಯಾಗಿಯೇ ಸವಿಯಲು ಮಕ್ಕಳಿಗೆ ನೀಡಿ.

  • ಸಿಹಿ ಪ್ರಿಯರಿಗಾಗಿ ಮ್ಯಾಂಗೋ ರಸಗುಲ್ಲಾ ರೆಸಿಪಿ

    ಸಿಹಿ ಪ್ರಿಯರಿಗಾಗಿ ಮ್ಯಾಂಗೋ ರಸಗುಲ್ಲಾ ರೆಸಿಪಿ

    ಲವರಿಗೆ ಸಿಹಿ ಅಂದ್ರೆ ಪಂಚಪ್ರಾಣ. ಪ್ರತಿದಿನ ಊಟ, ತಿಂಡಿಯೊಂದಿಗೆ ಒಂದು ಬಗೆಯ ಸಿಹಿ ತಿನ್ನುವವರು ಇದ್ದಾರೆ. ಈಗ ಮಾವಿನ ಹಣ್ಣಿನ ಸೀಸನ್. ಈ ಸೀಸನ್ ಮುಗಿಯೋದ್ರೊಳಗೆ ಮಾವಿನ ಹಣ್ಣಿನ ನಾನಾ ರೀತಿಯ ಖಾದ್ಯಗಳನ್ನು ಮಾಡಿ ಸವಿಯಿರಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮ್ಯಾಂಗೋ ರಸಗುಲ್ಲಾ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ತಡ ಯಾಕೆ? ನೀವೂ ನಿಮ್ಮ ಮನೆಯಲ್ಲಿ ಈ ಸಿಹಿ ಖಾದ್ಯವನ್ನು ತಯಾರಿಸಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ಮಾವಿನ ಹಣ್ಣು – ಮೂರು
    ಹಾಲು – ಒಂದು ಲೀಟರ್
    ಸಕ್ಕರೆ – ಒಂದು ಕಪ್
    ನಿಂಬೆ ರಸ – 1 ಚಮಚ
    ಕೆನೆ ತೆಗೆದ ಹಾಲು – 1 ಕಪ್
    ಏಲಕ್ಕಿ ಪುಡಿ- ಅರ್ಧ ಚಮಚ
    ಗೋಡಂಬಿ- 1 ಹಿಡಿ

    ಮಾಡುವ ವಿಧಾನ:
    *ಮೊದಲಿಗೆ ಮಾವಿನ ಹಣ್ಣನ್ನು ತೆಗೆದುಕೊಂಡು ಪ್ಯೂರಿ ಮಾಡಿ. ಪ್ಯೂರಿಗೆ ಅರ್ಧ ಲೀಟರ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಉಂಡೆಗಳಾಗದಂತೆ ಚೆನ್ನಾಗಿ ಕಲಕಿ. ನಂತರ ಹಾಲನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಈ ವೇಳೆ ಹಾಲು ಒಡೆಯಲು ಪ್ರಾರಂಭಿಸುತ್ತದೆ.
    *ನಂತರ ಅದಕ್ಕೆ 7 ರಿಂದ 8 ಹನಿ ನಿಂಬೆ ರಸವನ್ನು ಸೇರಿಸಿ. ಹಾಲು ಒಡೆದು ಹೋಗುತ್ತದೆ. ಇದನ್ನು ಸೋಸಿಕೊಂಡು ಪಕ್ಕಕ್ಕೆ ಇರಿಸಿ. ಮಿಶ್ರಣದಲ್ಲಿ ಕೊಂಚವೂ ನೀರುಳಿಸದೆ ಚೆನ್ನಾಗಿ ಹಿಸುಕಿ.
    *ಈ ಮಿಶ್ರಣವು ಮೃದುವಾಗುವವರೆಗೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಮಿಶ್ರಣದೊಂದಿಗೆ ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇರಿಸಿ.
    *ಈಗ ಸಿರಪ್ ತಯಾರಿಸಲು, ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಸಕ್ಕರೆ ಮತ್ತು ನೀರು ಸೇರಿಸಿ ಚೆನ್ನಾಗಿ ಕುದಿಸಿ. ಸಕ್ಕರೆ ನೀರಿನಲ್ಲಿ ಸಂಪೂರ್ಣವಾಗಿ ಕರಗಬೇಕು. ಸ್ವಲ್ಪ ಸಕ್ಕರೆ ಪಾಕ ಆಗುವವರೆಗೆ ಕಾಯಿರಿ. ಬಳಿಕ ಈಗಾಗಲೇ ತಯಾರಿಸಿದ ಉಂಡೆಗಳನ್ನು ಸೇರಿಸಿ ಮುಚ್ಚಳವನ್ನು ಮುಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಕುದಿಸಿ.
    *ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ ಹಾಲನ್ನು ಸೇರಿಸಿ. ಸಣ್ಣ ಉರಿಯಲ್ಲಿ ಹಾಲನ್ನು ಕುದಿಸಿದ ನಂತರ, ಸಕ್ಕರೆಯನ್ನು ಸೇರಿಸಿ ಕರಗಿಸಿ. ಮಿಶ್ರಣವನ್ನು ಸಣ್ಣ ಉರಿಯಲ್ಲಿ ಕುದಿಸಿ ನಂತರ ಏಲಕ್ಕಿ ಪುಡಿಯನ್ನು ಸೇರಿಸಿ ಗ್ಯಾಸ್ ಆಫ್ ಮಾಡಿ.
    * ಕೊನೆಗೆ ಈ ಮಿಶ್ರಣಕ್ಕೆ ಮಾವಿನ ಪ್ಯೂರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸಕ್ಕರೆ ಪಾಕಕ್ಕೆ ಅದ್ದಿ. ತಣ್ಣಗಾದ ನಂತರ ರಸಗುಲ್ಲಾವನ್ನು ಫ್ರಿಜ್ ಒಳಗೆ ಇರಿಸಿ. ಇದಕ್ಕೆ ನುಣ್ಣಗೆ ಕತ್ತರಿಸಿದ ಗೋಡಂಬಿಯಿಂದ ಅಲಂಕರಿಸಿದರೆ, ರುಚಿಕರವಾದ ಮಾವಿನ ರಸಗುಲ್ಲಾ ಸಿದ್ಧ.

  • ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ ತಿಂದು ನೋಡಿ

    ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ ತಿಂದು ನೋಡಿ

    ಪನೀರ್ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಪನೀರ್‌ನಿಂದ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕ್ಕಳು ಪನೀರ್‌ನಿಂದ ತಯಾರಿಸಲ್ಪಟ್ಟ ತಿನಿಸುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಸ್ಟೈಲ್‌ನ ಪನೀರ್ ಭುರ್ಜಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದನ್ನು ಸ್ಯಾಂಡ್‌ವಿಚ್ ಒಳಗೆ ಅಥವಾ ಚಪಾತಿಗೆ ಸೈಡ್ ಡಿಶ್ ಆಗಿಯೂ ತಿನ್ನಬಹುದು. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಪನೀರ್ – 200 ಗ್ರಾಂ
    ಎಣ್ಣೆ – 1 ಚಮಚ
    ಜೀರಿಗೆ – ಕಾಲು ಚಮಚ
    ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಹೆಚ್ಚಿದ ಈರುಳ್ಳಿ – 1
    ಅರಶಿಣ ಪುಡಿ – ಕಾಲು ಚಮಚ
    ಗರಂ ಮಸಾಲ ಪುಡಿ – ಅರ್ಧ ಚಮಚ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಹೆಚ್ಚಿದ ಟೊಮೊಟೊ – 1
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿಗಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಹಸಿರು ಮೆಣಸಿನ ಕಾಯಿ, ಟೊಮೆಟೊ ಹಾಕಿಕೊಂಡು ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿಕೊಳ್ಳಬೇಕು.
    * ನಂತರ ಈ ಮಿಶ್ರಣಕ್ಕೆ ಅರಶಿಣ ಪುಡಿ, ಗರಂ ಮಸಾಲ, ಉಪ್ಪು ಹಾಗೂ ಸ್ವಲ್ಪ ನೀರನ್ನು ಸೇರಿಸಿಕೊಂಡು ಚನ್ನಾಗಿ ತಿರುವಿಕೊಳ್ಳಿ.
    * ಬಳಿಕ ಇದಕ್ಕೆ ತುರಿದ ಪನೀರ್ ಹಾಕಿಕೊಂಡು 5 ನಿಮಿಷಗಳ ಕಾಲ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಪನೀರ್‌ನೊಂದಿಗೆ ಸರಿಯಾಗಿ ಹೊಂದಿಕೊಳ್ಳಬೇಕು.
    * ಬಳಿಕ ಇದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಬಿಸಿಬಿಸಿ ಪನೀರ್ ಭುರ್ಜಿ ಸವಿಯಲು ಸಿದ್ಧ. ಪನೀರ್ ಭುರ್ಜಿ ಚಪಾತಿ, ಪರೋಟ ಅಥವಾ ಸ್ಯಾಂಡ್‌ವಿಚ್‌ಗೆ ಪರ್ಫೆಕ್ಟ್ ಕಾಂಬಿನೇಷನ್.

  • ಸಂಜೆ ಟೀ ಜೊತೆ ಸವಿಯಿರಿ ಕ್ರಿಸ್ಪಿ ಬೇಬಿಕಾರ್ನ್ ಫ್ರೈ

    ಸಂಜೆ ಟೀ ಜೊತೆ ಸವಿಯಿರಿ ಕ್ರಿಸ್ಪಿ ಬೇಬಿಕಾರ್ನ್ ಫ್ರೈ

    ಸಂಜೆ ಚಹಾದ ಜೊತೆ ಏನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ಕೆಲವರು ಬೇಕರಿ ತಿಂಡಿ ಸವಿಯಲು ಇಚ್ಛಿಸಿದರೇ ಇನ್ನೂ ಕೆಲವರೂ ಮನೆಯಲ್ಲೇ ಗರಿಗರಿಯಾದ ತಿಂಡಿಗಳನ್ನು ತಯಾರಿಸುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕ್ರಿಸ್ಪಿ ಬೇಬಿಕಾರ್ನ್ ಫ್ರೈ ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ತಿಂಡಿ ಇಷ್ಟವಾಗುತ್ತದೆ. ಹಾಗಿದ್ರೆ ತಡ ಯಾಕೆ? ಇಂದೇ ನೀವೂ ಈ ರೆಸಿಪಿಯನ್ನು ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿ:
    ಬೇಬಿ ಕಾರ್ನ್ – 1 ಬೌಲ್
    ಕಡಲೆ ಹಿಟ್ಟು – 1 ಬೌಲ್
    ಬ್ರೆಡ್ ಪೌಡರ್ – 1 ಬೌಲ್
    ಅಕ್ಕಿ ಹಿಟ್ಟು – 1 ಚಮಚ
    ಖಾರದ ಪುಡಿ – 1 ಚಮಚ
    ಕಾಳುಮೆಣಸಿನ ಪುಡಿ – ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಕಾಳುಮೆಣಸಿನ ಪುಡಿ, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ದಪ್ಪ ಮಿಶ್ರಣ ಮಾಡಿಕೊಳ್ಳಿ.
    * ಬಳಿಕ ಬೇಬಿಕಾರ್ನ್ ಪೀಸ್‌ಗಳನ್ನು ಕಡಲೆಹಿಟ್ಟಿನ ಮಿಶ್ರಣಕ್ಕೆ ಅದ್ದಿ ತೆಗೆದು ಬ್ರೆಡ್ ಪೌಡರ್ ಮೇಲೆ ಉರುಳಿಸಿ.
    * ಈಗ ಎಣ್ಣೆ ಕಾಯಲು ಇಟ್ಟು ಕಾದ ಬಳಿಕ ಅದಕ್ಕೆ ಮಿಶ್ರಣವುಳ್ಳ ಬೇಬಿಕಾರ್ನ್ ಹಾಕಿ ಎರಡೂ ಕಡೆ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.
    * ನಂತರ ಎಣ್ಣೆಯಿಂದ ಬೇಬಿಕಾರ್ನ್ ತೆಗೆದು ಪ್ಲೇಟ್‌ಗೆ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ.

  • ಟೇಸ್ಟಿ, ಸ್ಪೆಷಲ್ ಪ್ರಾನ್ಸ್ ಫ್ರೈಡ್‌ ರೈಸ್ ಮನೆಯಲ್ಲೇ ತಯಾರಿಸಿ

    ಟೇಸ್ಟಿ, ಸ್ಪೆಷಲ್ ಪ್ರಾನ್ಸ್ ಫ್ರೈಡ್‌ ರೈಸ್ ಮನೆಯಲ್ಲೇ ತಯಾರಿಸಿ

    ಫ್ರೈಡ್‌ ರೈಸ್ ಅಂದರೆ ನಿಮ್ಗೆ ಇಷ್ಟನಾ? ಚಿಕನ್, ಎಗ್ ಫ್ರೈಡ್‌ ರೈಸ್ ತಿಂದು ಬೇರೆ ವೆರೈಟಿ ಫ್ರೈಡ್‌ ರೈಸ್ ತಿನ್ನಬೇಕು ಅಂತಾ ಅಂದ್ಕೊಂಡಿದ್ರೆ, ಸ್ಪೆಷಲ್ ಆಗಿ ಸೀ ಫುಡ್‌ನಲ್ಲಿ ಫ್ರೈಡ್‌ನ ಟ್ರೈ ಮಾಡಿ. ಹೌದು, ನಾವಿವತ್ತು ಸಮುದ್ರದಲ್ಲಿ ಸಿಗುವ ಸಿಗಡಿ ಅಂದ್ರೆ ಪ್ರಾನ್ಸ್ ಫ್ರೈಡ್‌ ರೈಸ್ ಮಾಡೋದು ಹೇಗೆ ಅಂತಾ ಹೇಳಿ ಕೊಡ್ತೀವಿ. ನೀವು ಮನೆಯಲ್ಲೇ ಟ್ರೈ ಮಾಡಿ ಟೇಸ್ಟಿ ಪ್ರಾನ್ಸ್ ಫ್ರೈಡ್‌ ರೈಸ್.

    ಪ್ರಾನ್ಸ್ ಫ್ರೈಡ್‌ ರೈಸ್‌ಗೆ ಬೇಕಾಗುವ ಸಾಮಾಗ್ರಿಗಳು:
    ಸಿಗಡಿ – ಅರ್ಧ ಕೆಜಿ
    ಬಾಸ್ಮತಿ ಅಕ್ಕಿ – ಅರ್ಧ ಕೆಜಿ
    ಅರಿಸಿನ – ಅರ್ಧ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
    ಚಿಲ್ಲಿ ಪೇಸ್ಟ್ – 1 ಸ್ಪೂನ್
    ಕಾಳುಮೆಣಸಿನ ಪುಡಿ – ಅರ್ಧ ಸ್ಪೂನ್
    ಮೊಟ್ಟೆ – 2
    ಈರುಳ್ಳಿ – 2
    ಕ್ಯಾರೆಟ್ ತುರಿ – ಅರ್ಧ ಕಪ್
    ಬೀನ್ಸ್ – ಅರ್ಧ ಕಪ್
    ಕೊತ್ತಂಬರಿ ಪುಡಿ – 3 ಸ್ಪೂನ್
    ಕೊತ್ತಂಬರಿ ಸೊಪ್ಪು
    ಸೋಯಾ ಸಾಸ್ – 1 ಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ- ಸ್ವಲ್ಪ

    ಪ್ರಾನ್ಸ್ ಫ್ರೈಡ್‌ ರೈಸ್ ಮಾಡುವ ವಿಧಾನ:
    * ಮೊದಲು ಕ್ಯಾರೆಟ್ ಅನ್ನು ತುರಿದುಕೊಂಡು, ಬೀನ್ಸ್ ಅನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
    * ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ನೀರು ಸೇರಿಸಿ ಮತ್ತು 10 ನಿಮಿಷ ಬೇಯಿಸಿಕೊಳ್ಳಬೇಕು.
    * ನಂತರ ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
    * ಈಗ ಒಂದು ಬೌಲ್‌ಗೆ ಮೊಟ್ಟೆಗಳನ್ನು ಒಡೆದು ಹಾಕಿ, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
    * ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಮೊಟ್ಟೆಯನ್ನು ಆಮ್ಮೆಟ್ ಮಾಡಿ. ಆಮ್ಲೆಟ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
    * ಈಗ ಸಿಗಡಿ(ಪ್ರಾನ್ಸ್)ಗಳನ್ನು ಒಂದು ಬೌಲ್‌ಗೆ ಹಾಕಿ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ನೀರು ಸೇರಿಸಿ. ಸ್ವಲ್ಪ ಸಮಯದವರೆಗೆ ಅವುಗಳನ್ನು ಬೇಯಿಸಿ.
    * ಸಿಗಡಿ 90% ನೀರಿನಲ್ಲಿ ಬೇಯಬೇಕು.
    * ಬಳಿಕ ಬಾಸ್ಮತಿ ರೈಸ್‌ನಿಂದ ಉದುರುದುರಾದ ಅನ್ನ ಮಾಡಿಟ್ಟುಕೊಳ್ಳಬೇಕು.
    * ಈಗ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿಕೊಳ್ಳಬೇಕು.
    * ಎಣ್ಣೆ ಬಿಸಿಯಾದ ಮೇಲೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಸೇರಿಸಿ. ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು.
    * ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬೇಯಿಸಿಟ್ಟುಕೊಂಡ ಸಿಗಡಿಯನ್ನು ಸೇರಿಸಿಕೊಳ್ಳಬೇಕು.
    * ಜೊತೆಗೆ ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಉಪ್ಪು, ಮೆಣಸು ಪುಡಿ ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಇದಕ್ಕೆ ಮೊದಲೇ ಬೇಯಿಸಿದ ಕ್ಯಾರೆಟ್ ಮತ್ತು ಬೀನ್ಸ್ಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತರ ಬೇಯಿಸಿಟ್ಟುಕೊಂಡ ಅನ್ನ ಹಾಗೂ ಕತ್ತರಿಸಿಟ್ಟುಕೊಂಡ ಆಮ್ಲೆಟ್ ತುಂಡು ಸೇರಿಸಿ ಎಲ್ಲಾ ಮಿಕ್ಸ್ ಮಾಡಿಕೊಂಡು, ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬೇಕು.
    * ಈಗ ನಿಮ್ಮ ಮುಂದೆ ರುಚಿಯಾದ ಸಿಗಡಿ ಫ್ರೈಡ್‌ ರೈಸ್ ಸವಿಯಲು ಸಿದ್ದ.

  • ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡಿ ಈರುಳ್ಳಿ ಉತ್ತಪ್ಪ

    ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡಿ ಈರುಳ್ಳಿ ಉತ್ತಪ್ಪ

    ಕ್ಷಿಣ ಭಾರತದ ತಿನಿಸುಗಳ ಪೈಕಿ ಉತ್ತಪ್ಪ ಕೂಡ ಒಂದು. ಉಡುಪಿ, ಕರಾವಳಿಯಲ್ಲಿ ಮುಂಜಾನೆ ಈ ತಿಂಡಿಯನ್ನು ಹೆಚ್ಚಾಗಿ ಮಾಡುತ್ತಾರೆ. ದೋಸೆ ಅಥವಾ ಇಡ್ಲಿ ಹಿಟ್ಟಿನಿಂದ ಮಾಡುವ ಈ ಉತ್ತಪ್ಪ ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಈರುಳ್ಳಿ ಉತ್ತಪ್ಪ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ದೋಸೆ ಅಕ್ಕಿ – 2 ಕಪ್
    ಉದ್ದಿನ ಬೇಳೆ- ಅರ್ಧ ಕಪ್
    ಮೆಂತ್ಯೆ – 1 ಚಮಚ
    ಅವಲಕ್ಕಿ – 2 ಮುಷ್ಟಿ
    ಉಪ್ಪು – 2 ಚಮಚ
    ಸಣ್ಣದಾಗಿ ಹೆಚ್ಚಿದ ಈರುಳ್ಳಿ – 2
    ಹಸಿಮೆಣಸಿನಕಾಯಿ – 2 ರಿಂದ 3
    ಕರಿಬೇವಿನ ಎಲೆಗಳು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು, ಅದಕ್ಕೆ ಕರಿಬೇವು ಮತ್ತು ಮೆಂತ್ಯ ಬೀಜಗಳನ್ನು ಸೇರಿಸಿ 3 ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
    * ರುಬ್ಬುಲು 15 ನಿಮಿಷಗಳ ಮೊದಲು ಅವಲಕ್ಕಿ ನೆನೆಸಿಕೊಳ್ಳಿ. ನಂತರ ಎಲ್ಲಾ ಪದಾರ್ಥಗಳನ್ನು ಅಗತ್ಯವಿರುವ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
    * ಬಳಿಕ ಈ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಿ.
    * ಮರುದಿನ ಮುಂಜಾನೆ ಉತ್ತಪ್ಪ ಹಿಟ್ಟಿಗೆ ಉಪ್ಪನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ದೋಸೆ ತವಾ ಬಿಸಿಗಿಟ್ಟು ಅದರ ಮೇಲೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ. ಬಳಿಕ ತವಾ ಮಧ್ಯದಲ್ಲಿ ಉತ್ತಪ್ಪ ಹಿಟ್ಟನ್ನು ಸುರಿಯಿರಿ. ಇದನ್ನು ದೋಸೆ ರೀತಿ ಹರಡದೇ ಹಾಗೇ ಬೇಯಲು ಬಿಡಿ.
    * ಬಳಿಕ ದೋಸೆ ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸನ್ನು ಸಮವಾಗಿ ಹರಡಿ. ಅದನ್ನು 2 ನಿಮಿಷಗಳ ಕಾಲ ಬೇಯಲು ಬಿಡಿ.
    * ಈಗ ದೋಸೆಯನ್ನು ತಿರುವಿ ಹಾಕಿ ಇನ್ನೊಂದು ಬದಿಯನ್ನೂ ಬೇಯಿಸಿಕೊಳ್ಳಿ.
    * ಎರಡೂ ಕಡೆ ಚೆನ್ನಾಗಿ ಬೆಂದ ಬಳಿಕ ತವಾದಿಂದ ದೋಸೆ ತೆಗೆದು ಪ್ಲೇಟ್‌ಗೆ ಹಾಕಿ.
    * ಈರುಳ್ಳಿ ಉತ್ತಪ್ಪಕ್ಕೆ ಚಟ್ನಿ ಅಥವಾ ಸಾಂಬಾರ್ ಪರ್ಫೆಕ್ಟ್ ಕಾಂಬಿನೇಷನ್.

  • ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಿರಿ

    ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಿರಿ

    ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸುವುದು ಬಹಳ ಮುಖ್ಯ. ಕೆಲವರು ಬಿಸಿಲಿನ ದಾಹ ತೀರಿಸಿಕೊಳ್ಳಲು ಜ್ಯೂಸ್ ಅಥವಾ ಎಳನೀರು ಮೊರೆಹೋದರೇ ಇನ್ನೂ ಕೆಲವರು ಲಸ್ಸಿ ಕುಡಿಯುತ್ತಾರೆ. ಮೊಸರಿನಿಂದ ತಯಾರಿಸಲಾದ ಲಸ್ಸಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಬೇಸಿಗೆಯ ಶಾಖದಲ್ಲಿ ನಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಮಾವಿನ ಹಣ್ಣು – 2
    ಮೊಸರು – 1 ಕಪ್
    ಹಾಲು – ಅರ್ಧ ಕಪ್
    ಸಕ್ಕರೆ – 4 ಚಮಚ
    ಏಲಕ್ಕಿ ಪುಡಿ – ಅರ್ಧ ಚಮಚ
    ಐಸ್ ಕ್ಯೂಬ್ – 3
    ಸಣ್ಣದಾಗಿ ಹೆಚ್ಚಿದ ಡ್ರೈಫ್ರೂಟ್ಸ್‌ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆ ತೆಗೆದು ತಿರುಳನ್ನು ಒಂದು ಮಿಕ್ಸರ್ ಜಾರಿಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಮೊಸರು, ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಬಳಿಕ ಅದಕ್ಕೆ ಐಸ್‌ಕ್ಯೂಬ್ ಸೇರಿಸಿಕೊಂಡು ತಣ್ಣಗಾಗಲು ಬಿಡಿ.
    * ಈಗ ಅದಕ್ಕೆ ಹಾಲನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಒಂದು ಗ್ಲಾಸ್‌ಗೆ ವರ್ಗಾಯಿಸಿಕೊಳ್ಳಿ. ಬಳಿಕ ಅದರ ಮೇಲೆ ಹೆಚ್ಚಿದ ಡ್ರೈಫ್ರೂಟ್ಸ್‌ ಹಾಕಿದರೆ ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.

     

  • ಥಟ್ ಅಂತ ರೆಡಿ ಮಾಡಿ ವೆಜ್ ಕಟ್ಲೆಟ್

    ಥಟ್ ಅಂತ ರೆಡಿ ಮಾಡಿ ವೆಜ್ ಕಟ್ಲೆಟ್

    ಹೊರಗಡೆ ಫುಡ್ ತಿಂದು ಬೋರ್ ಆಗಿದ್ಯಾ ನಿಮಗೆ. ಮನೆಯಲ್ಲೇ ಏನಾದರೂ ಮಾಡಿ ತಿನ್ನಬೇಕು ಅಂತಾ ಅನ್ಕೊಂಡಿದಿರಾ? ಹಾಗಿದ್ರೆ ನಾವು ಇವತ್ತು ಗರಿಗರಿಯಾದ ವೆಜ್ ಕಟ್ಲೆಟ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡೋದು ಹೇಗೆ ಅಂತಾ ಹೇಳಿ ಕೊಡುತ್ತೇವೆ. ಗರಿಗರಿಯಾದ ವೆಜ್ ಕಟ್ಲೆಟ್(Veg Cutlet) ತಿಂದು ಬಾಯಿ ಚಪ್ಪರಿಸಿ.

    ಬೇಕಾಗಿರುವ ಸಾಮಗ್ರಿಗಳು:
    ಆಲೂಗಡ್ಡೆ – 2
    ಕ್ಯಾರೆಟ್ – ¼ ಕಪ್
    ಬೀನ್ಸ್ – ¼ ಕಪ್
    ಸ್ವೀಟ್ ಕಾರ್ನ್ – ¼ ಕಪ್
    ಬಟಾಣಿ – ½ ಕಪ್
    ಬೀಟ್ರೂಟ್ – ½ ಕಪ್
    ಬ್ರೆಡ್ ಕ್ರಂಬ್ಸ್ – ¼ ಕಪ್
    ಮೆಣಸಿನ ಪುಡಿ – ½ ಟೀಸ್ಪೂನ್
    ಜೀರಿಗೆ ಪುಡಿ – ¼ ಟೀಸ್ಪೂನ್
    ಗರಂ ಮಸಾಲಾ – ¼ ಟೀಸ್ಪೂನ್
    ಆಮ್ಚೂರ್ ಪುಡಿ – ½ ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಕಾರ್ನ್ ಫ್ಲೇಕ್ಸ್ – 1 ಕಪ್
    ಕಾರ್ನ್ ಹಿಟ್ಟು – 3 ಟೇಬಲ್ ಸ್ಪೂನ್
    ಮೈದಾ- 2 ಟೇಬಲ್ ಸ್ಪೂನ್
    ಪೆಪ್ಪರ್ ಪುಡಿ – ¼ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    * ಮೊದಲಿಗೆ, ಪ್ರೆಷರ್ ಕುಕ್ಕರ್‌ನಲ್ಲಿ 2 ಕಪ್ ನೀರು ಹಾಕಿ 2 ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಸ್ವೀಟ್ ಕಾರ್ನ್, ಬಟಾಣಿ, ಬೀಟ್ರೂಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ. 5 ಸೀಟಿಗಳಿಗೆ ಬೇಯಿಸಿ

    * ಇದು ತಣ್ಣಗಾದ ನಂತರ ತರಕಾರಿಗಳನ್ನು ಮ್ಯಾಶ್ ಮಾಡಿ.

    * ಬಳಿಕ ಬ್ರೆಡ್ ಕ್ರಂಬ್ಸ್‌ಗಳನ್ನು ಸೇರಿಸಿ. ಮೆಣಸಿನ ಪುಡಿ, ಜೀರಾ ಪುಡಿ, ಗರಂ ಮಸಾಲಾ, ಆಮ್ಚೂರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

    * ನಂತರ ಕಾರ್ನ್ ಹಿಟ್ಟು, ಮೈದಾ, ಪೆಪ್ಪರ್ ಮತ್ತು ಉಪ್ಪು ಸೇರಿಸಿ ಕಾರ್ನ್ ಫ್ಲೋರ್ ಬ್ಯಾಟರ್ ತಯಾರಿಸಿ.

    * ತರಕಾರಿ ಮಿಶ್ರಣವನ್ನು ತೆಗೆದುಕೊಂಡು ಸಿಲಿಂಡರಾಕಾರದ ಆಕಾರವನ್ನು ನೀಡಿ, ಕಾರ್ನ್ ಹಿಟ್ಟು ಬ್ಯಾಟರ್‌ನಲ್ಲಿ ಅದನ್ನು ಡಿಪ್ ಮಾಡಿ.

    * ನಂತರ ಬ್ರೆಡ್ ಕ್ರಂಬ್ಸ್‌ಗಳಿಂದ ಕೋಟ್ ಮಾಡಿ.

    * 15-20 ನಿಮಿಷಗಳ ಕಾಲ ಮೀಡಿಯಂ ಫ್ಲೇಮ್ ನಲ್ಲಿ ಎಣ್ಣೆಯಲ್ಲಿ ಫ್ರೈ ಮಾಡಿ. ಗೋಲ್ಡ್ ಬಣ್ಣ ಬಂದ ಮೇಲೆ ತೆಗೆಯಿರಿ.

    * ಗರಿಗರಿಯಾದ ವೆಚ್ ಕಟ್ಲೆಟ್ ಅನ್ನು ಟೊಮೆಟೊ ಸಾಸ್ ನೊಂದಿಗೆ ಸವಿಯಿರಿ.