Tag: ರೆವಣ್ಣ

  • ದೇವೇಗೌಡ್ರು ರಾಜಕೀಯ ಸನ್ಯಾಸ ಸ್ವೀಕರಿಸಿಲ್ಲ, ಈಗ ಮಗ ಸ್ವೀಕರಿಸುತ್ತಾರಾ: ರೇವಣ್ಣಗೆ ಮೋದಿ ಟಾಂಗ್

    ದೇವೇಗೌಡ್ರು ರಾಜಕೀಯ ಸನ್ಯಾಸ ಸ್ವೀಕರಿಸಿಲ್ಲ, ಈಗ ಮಗ ಸ್ವೀಕರಿಸುತ್ತಾರಾ: ರೇವಣ್ಣಗೆ ಮೋದಿ ಟಾಂಗ್

    ಕೊಪ್ಪಳ: ಗಂಗಾವತಿಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.

    ಜನರನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಪ್ರಧಾನಿ ದೇವೇಗೌರಡರು ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದಿದ್ದರು. ಈಗ ಅವರು ಸನ್ಯಾಸತ್ವ ಸ್ವೀಕರಿಸಿದ್ರಾ ಎಂದು ಪ್ರಶ್ನಿಸಿದರು.

    ದೇವೇಗೌಡರು ಜನರಿಗಾಗಿ ರಾಜಕೀಯ ಮಾಡೋದನ್ನ ಬಿಟ್ಟು, ಕುಟುಂಬದವರಿಗೆ ಟಿಕೆಟ್ ಕೊಡುತ್ತಾ ಕುಳಿತ್ತಿದ್ದಾರೆ. ಹಾಗೆಯೇ ಅವರ ಮಗನೂ ಮೋದಿ ಮತ್ತೆ ಪ್ರಧಾನಿಯಾದರೆ ಸನ್ಯಾಸಿ ಆಗುತ್ತೇನೆ ಅಂದಿದ್ದಾರೆ. ಮುಂದೇ ಅವರು ಆಗ್ತಾರಾ ಇಲ್ಲ. ಬಹುಶಃ ಅವರು ತಮ್ಮ ಐಬಿ ವರದಿ ನೋಡಿದ್ದರೆ, ಮತ್ತೊಮ್ಮೆ ಈ ರೀತಿ ಮಾತನಾಡುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.

    ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆ ರಾಷ್ಟ್ರವಾದಿ ಹಾಗೂ ಪರಿವಾರವಾದಿಗಳ ಮಧ್ಯೆ ನಡೆಯುತ್ತಿದೆ. ಯಾರು ಗೆಲ್ಲಬೇಕು ಎನ್ನುವುದನ್ನು ಮತದಾರರು ನಿರ್ಧರಿಸಬೇಕು ಅಂತ ಮೋದಿ ಮನವಿ ಮಾಡಿದರು.

    ರೇವಣ್ಣ ಹೇಳಿದ್ದು ಏನು?
    ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ. ರೈತರ ಸಹಾಯ ಧನದ ಪಟ್ಟಿ ಕೇಂದ್ರಕ್ಕೆ ತಲುಪಿಲ್ಲ ಅಂದರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ. ರಾಜ್ಯದಿಂದ ಕೇಂದ್ರಕ್ಕೆ 15 ಲಕ್ಷ ರೈತರ ಪಟ್ಟಿ ಹೋಗಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ರೇವಣ್ಣ ಮೈಸೂರಿನಲ್ಲಿ ಗುರುವಾರ ತಿರುಗೇಟು ನೀಡಿದ್ದರು.