Tag: ರೆಮೋ ಡಿಸೋಜಾ

  • ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

    ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

    ಮುಂಬೈ: ಬಾಲಿವುಡ್ ನೃತ್ಯ ನಿರ್ದೇಶಕ ಚಲನಚಿತ್ರ ನಿರ್ಮಾಪಕ ರೆಮೋ ಡಿಸೋಜಾ ಅವರ ಸೋದರ ಮಾವ ಜೇಸನ್ ವಾಟ್ಕಿನ್ಸ್(42) ಮುಂಬೈನ ಮಿಲ್ಲತ್ ನಗರದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಜೇಸನ್ ವಾಟ್ಕಿನ್ಸ್ ಅವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅದು ತೀವ್ರವಾದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ

     

    View this post on Instagram

     

    A post shared by Remo Dsouza (@remodsouza)

    ಘಟನೆಯ ವೇಳೆ ಜೇಸನ್ ವಾಟ್ಕಿನ್ಸ್ ತಮ್ಮ ಫ್ಲಾಟ್‍ನಲ್ಲಿ ಒಬ್ಬಂಟಿಯಾಗಿದ್ದರು. ಅವರ ಪೋಷಕರು ಔಷಧಗಳನ್ನು ಖರೀದಿಸಲು ಹೊರಗೆ ಹೋಗಿದ್ದರು. ಮತ್ತೆ ಅವರು ಹಿಂತಿರುಗಿದಾಗ ನೇಣು ಬಿಗಿದಿರುವುದನ್ನು ಕಂಡಿದ್ದಾರೆ. ನಂತರ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಜೇಸನ್ ವಾಟ್ಕಿನ್ಸ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ವಾಟ್ಕಿನ್ಸ್ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


    =

  • 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ

    40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ

    ಮುಂಬೈ: ಬಾಲಿವುಡ್‍ನ ಫೇಮಸ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿಯ ಫೋಟೋ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರೆಮೋ ಹೆಂಡತಿ ಲಿಸೆಲ್ ಡಿಸೋಜಾ ಅವರು ಗುರುತು ಸಿಗದ ರೀತಿಯಲ್ಲಿ ಬದಲಾಗಿದ್ದಾರೆ.

     

    View this post on Instagram

     

    A post shared by Remo Dsouza (@remodsouza)

    ಲಿಸೆಲ್ ಬರೋಬ್ಬರಿ 105 ಕೆಜಿ ಇದ್ದರು. ಈಗ ಅವರು 65 ಕೆಜಿ ಆಗಿದ್ದಾರೆ. ಹೀಗೆ 40 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವುದು ಸಣ್ಣ ಮಾತಲ್ಲ. ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ತುಂಬ ಪರಿಶ್ರಮ ಬೇಕಾಗುತ್ತದೆ. ಈ ದೊಡ್ಡ ಹೋರಾಟ ನಡೆಯುವುದು ನಮ್ಮ ಮನಸ್ಸಿನ ಒಳಗೆ ಆಗಿದೆ. ಈ ರೀತಿ ಲಿಸೆಲ್ ಹೋರಾಡಿದ್ದನ್ನು ನಾನು ಕಂಡಿದ್ದೇನೆ. ಅಸಾಧ್ಯವಾಗಿದ್ದನ್ನು ಆಕೆ ಸಾಧಿಸಿ ತೋರಿಸಿದ್ದಾಳೆ. ಇದೆಲ್ಲವೂ ಮನಸ್ಸಿಗೆ ಸಂಬಂಧ ಪಟ್ಟಿದ್ದಾಗಿದೆ. ನೀನು ಸಾಧಿಸಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಆಗುತ್ತದೆ. ನೀನು ನನಗಿಂತಲೂ ಗಟ್ಟಿಯಾಗಿದ್ದೀಯ. ನನಗೆ ನೀನೇ ಸ್ಫೂರ್ತಿ ಎಂದು ಹೆಂಡತಿಗೆ ರೆಮೋ ಮೆಚ್ಚುಗೆ ಸೂಚಿಸಿ ಟ್ರಾನ್ಸ್ ಫಾರ್ಮೇಷನ್ ಫೋಟೋವನ್ನು ಹಂಚಿಕೊಂಡು ಪತ್ನಿಯ ಕುರಿತಾಗಿ ರೆಮೋ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‍ನಲ್ಲಿ ಬ್ರೋ ಗೌಡ ಫುಲ್ ಮಿಂಚಿಂಗ್

     

    View this post on Instagram

     

    A post shared by Remo Dsouza (@remodsouza)

    ಲಿಸೆಲ್ ಡಿಸೋಜಾ ಭಾರಿ ಪ್ರಮಾಣದಲ್ಲಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ಬದಲಾವಣೆ ಕಂಡು ಸ್ವತಃ ರಿಮೋ ಡಿಸೋಜಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೆಂಡತಿಯ ಈ ಬದ್ಧತೆ ಮತ್ತು ಪರಿಶ್ರಮಕ್ಕೆ ಅವರು ಹ್ಯಾಟ್ಸ್‍ಆಫ್ ಹೇಳಿದ್ದಾರೆ. ಲಿಸೆಲ್ ಅವರು ಪತಿ ನೀಡಿದ ಬೆಂಬಲಕ್ಕೆ ಲಿಸೆಲ್ ಧನ್ಯವಾದ ಹೇಳಿದ್ದಾರೆ. ಸದ್ಯ ರೆಮೋ ಪತ್ನಿಯ ಫೋಟೋಗಳು ವೈರಲ್ ಆಗುತ್ತಿದೆ. ಈ ಟ್ರಾನ್ಸ್ ಫಾರ್ಮೇಷನ್ ಹಿಂದಿನ ಸೀಕ್ರೆಟ್ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ.

  • ಬಾಲಿವುಡ್ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ

    ಬಾಲಿವುಡ್ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ

    ಮುಂಬೈ: ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜಾ ಅವರಿಗೆ ಇಂದು ಹೃದಯಾಘಾತವಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ.

    ಇಂದು ಮಧ್ಯಾಹ್ನ ಸುಮಾರು 2.30ಕ್ಕೆ ರೆಮೋ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿ ಅಂಜಿಯೋಪ್ಲಾಸ್ಟಿ ಸರ್ಜರಿ ನಡೆಸಿ ಬ್ಲಾಕೇಜ್ ತೆಗೆದು, ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಬಾಲಿವುಡ್ ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ರೆಮೋ ಬೇಗ ಗುಣಮಿಖರಾಗರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

    ರೆಮೋ ಡಿಸೋಜಾ ಮತ್ತು ಲಿಜೇಲ್ ದಂಪತಿಗೆ ಎರಡು ಗಂಡು ಮಕ್ಕಳಿವೆ. ರೆಮೋ ಅವರ ಶಸ್ತ್ರಚಿಕಿತ್ಸೆಯಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಆಪ್ತರು ಮಾಹಿತಿ ನೀಡಿದ್ದಾರೆ. ರೆಮೋ ಡಿಸೋಜಾ ನೃತ್ಯ ಸಂಯೋಜಕರಾಗಿದ್ದು, ಕೆಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯಾಗಿ ಕೆಲಸ ಮಾಡುತ್ತಿದ್ದಾರೆ.

    ರೆಮೋ ಸರ್ ಆರೋಗ್ಯವಾಗಿದ್ದು, ನಾವೆಲ್ಲ ಅವರ ಬಳಿಯಲ್ಲಿ ಇದ್ದೇವೆ. ಎದೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಹ ತಡಮಾಡದೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಯಾರು ಆತಂಕ್ಕೆ ಒಳಗಾಗೋದು ಬೇಡ ಎಂದು ನಟ, ನೃತ್ಯ ಸಂಯೋಜಕ ಧರ್ಮೇಂದ್ರ ಹೇಳಿದ್ದಾರೆ.