Tag: ರೆಬಾ ಮೋನಿಕಾ

  • ರಜನಿಕಾಂತ್ ನಟನೆಯ ಚಿತ್ರಕ್ಕೆ ‘ರತ್ನನ್ ಪ್ರಪಂಚ’ ನಟಿ ಎಂಟ್ರಿ

    ರಜನಿಕಾಂತ್ ನಟನೆಯ ಚಿತ್ರಕ್ಕೆ ‘ರತ್ನನ್ ಪ್ರಪಂಚ’ ನಟಿ ಎಂಟ್ರಿ

    ಜನಿಕಾಂತ್ (Rajanikanth) ನಟನೆಯ ಬಹುನಿರೀಕ್ಷಿತ ‘ಕೂಲಿ’ (Coolie) ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಶ್ರುತಿ ಹಾಸನ್ ನಂತರ ಕನ್ನಡದ ‘ರತ್ನನ್ ಪ್ರಪಂಚ’ ನಟಿ ರೆಬಾ ಮೋನಿಕಾ ಕೂಡ ಕೂಲಿ ಚಿತ್ರತಂಡ ಸೇರಿಕೊಂಡಿದ್ದಾರೆ.

    ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರಕ್ಕೆ ಸಲಾರ್ ಬ್ಯೂಟಿ ಶ್ರುತಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಕನ್ನಡದ ನಟಿ ರೆಬಾ ಮೋನಿಕಾ (Reba Monica) ಕೂಡ ಕೈಜೋಡಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:Kantara Chapter 1: ಮಳೆ ಅವಾಂತರದಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿದ ರಿಷಬ್ ಶೆಟ್ಟಿ

    ಈ ಸುದ್ದಿಗೆ ಪೂರಕವೆಂಬಂತೆ ನಟಿ ಕೂಡ ಹೊಸ ಸಿನಿಮಾದಲ್ಲಿ ಭಾಗಿಯಾಗಿದ್ದೇನೆ. ಈ ಚಿತ್ರ ತುಂಬಾನೇ ಸ್ಪೆಷಲ್ ನನಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿ ಎಂದು ನಟಿ ರೆಬಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಪರೋಕ್ಷವಾಗಿ ನಟಿ ‘ಕೂಲಿ’ ಚಿತ್ರದ ಬಗ್ಗೆ ಸುಳಿವು ನೀಡಿದ್ದರು. ಇನ್ನೂ ಈ ಸುದ್ದಿ ನಿಜನಾ? ಎಂದು ಚಿತ್ರತಂಡ ಕಡೆಯಿಂದ ಅಧಿಕೃತ ಘೋಷಣೆ ಮಾಡುವವರೆಗೂ ಕಾಯಬೇಕಿದೆ.

    ಅಂದಹಾಗೆ, ಕನ್ನಡದ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಡಾಲಿ ಧನಂಜಯಗೆ (Daali Dhananjay) ನಾಯಕಿಯಾಗಿ ರೆಬಾ ಮೋನಿಕಾ ನಟಿಸಿದ್ದರು. ಈ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ನಿರ್ಮಾಣ ಮಾಡಿತ್ತು.

  • ಕನ್ನಡಕ್ಕೂ ಬಂತು ಮಲಯಾಳಂ ಸೂಪರ್ ಹಿಟ್ ಚಿತ್ರ ಫೋರೆನ್ಸಿಕ್

    ಕನ್ನಡಕ್ಕೂ ಬಂತು ಮಲಯಾಳಂ ಸೂಪರ್ ಹಿಟ್ ಚಿತ್ರ ಫೋರೆನ್ಸಿಕ್

    ವಿಭಿನ್ನ ಕಥಾ ಹಂದರದ ಮೂಲಕ ಅಪಾರ ಪ್ರೇಕ್ಷಕರನ್ನು ತಲುಪಿದ್ದ ಮಲಯಾಳಂನ ಪೋರೆನ್ಸಿಕ್ ಸಿನಿಮಾ ಕನ್ನಡದಲ್ಲಿ ಬರುತ್ತಿದೆ. ಕನ್ನಡದ ಚಿತ್ರಕ್ಕೆ ‘ಅಂತಿಮಕ್ಷಣ’ ಎಂದು ಹೆಸರಿಡಲಾಗಿದೆ. ಹಾಗಂತ ಈ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿಲ್ಲ. ಮೂಲ ಸಿನಿಮಾವನ್ನು ಡಬ್ ಮಾಡಿ, ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ನಿರ್ಮಾಪಕರು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

     

    “ಸಿನಿಮಾ ನೋಡಿದಾಗ ನಾವೆಲ್ಲರೂ ಥ್ರಿಲ್ ಆದವು. ಇದು ಕನ್ನಡ ಬಲ್ಲ ಜನರಿಗೂ ತಲುಪಲಿ ಎನ್ನುವ ಉದ್ದೇಶದಿಂದ ಈ ಚಿತ್ರವನ್ನು ಡಬ್ ಮಾಡಿ, ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದಾರೆ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು.  ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

    ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಟೊವಿನೊ‌ ಥಾಮಸ್, ರೆಬಾ ಮೋನಿಕಾ, ಮಮತ ಮೋಹನದಾಸ್,‌ ಪ್ರತಾಪ್ ಪೋಪನ್ , ಜಿಜುಜಾನ್ ಮುಂತಾದವರಿದ್ದಾರೆ.