Tag: ರೆಪೋ

  • RBI ಬೆನ್ನಲ್ಲೇ ಸಾಲದ ಬಡ್ಡಿದರ ಹೆಚ್ಚಿಸಿದ HDFC

    RBI ಬೆನ್ನಲ್ಲೇ ಸಾಲದ ಬಡ್ಡಿದರ ಹೆಚ್ಚಿಸಿದ HDFC

    ನವದೆಹಲಿ: ಹಣದುಬ್ಬರ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಸಾಲ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ (BPS) ಹೆಚ್ಚಿಸಿದ ಬೆನ್ನಲ್ಲೇ ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಸಹ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.

    ಹೆಚ್‌ಡಿಎಫ್‌ಸಿಯು ಕಳೆದ 5 ತಿಂಗಳಲ್ಲಿ 7ನೇ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ. ಈ ಕ್ರಮವು ಇಎಂಐ (EMI) ಪಾವತಿಯನ್ನೂ ಹೆಚ್ಚಿಸಲಿದ್ದು, ಅಕ್ಟೋಬರ್ 1 ರಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಇದನ್ನೂ ಓದಿ: ಗೃಹ, ವಾಹನ ಸಾಲ ಬಡ್ಡಿ ದರ ಏರಿಕೆ – ಸತತ 4ನೇ ಬಾರಿಗೆ RBI Repo Rate ಏರಿಕೆ

    ಆರ್‌ಬಿಐ ಸತತ 4ನೇ ಬಾರಿಗೆ 50 ಬೇಸಿಸ್ ಪಾಯಿಂಟ್ ರೆಪೋ ದರ ಏರಿಕೆ ಮಾಡಿದೆ. ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿಯು (MPC) ಮೂರು ದಿನಗಳ ಸಭೆ ನಡೆಸಿ ರೆಪೋ (Repo Rate) ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆಗಸ್ಟ್‌ನಲ್ಲಿ 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದ್ದರಿಂದ ರೆಪೋ ದರ ಶೇ.5.4ಕ್ಕೆ ಏರಿತ್ತು.

    ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (ಘಧಫ) ಶೇ.7.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಆದರೆ ಈಗ ಶೇ.7 ರಷ್ಟು ಅಭಿವೃದ್ಧಿಯಾಗಬಹುದು ಎಂದು ಅಂದಾಜಿಸಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‌ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ.

    Live Tv
    [brid partner=56869869 player=32851 video=960834 autoplay=true]