Tag: ರೆಪೊ ದರ

  • ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ

    ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ತನ್ನ ರೆಪೊ ದರವನ್ನು ಶೇ.0.50 ಬೇಸಿಸ್‌ ಪಾಯಿಂಟ್‌  ಹೆಚ್ಚಿಸಿದೆ. ಈ ಮೂಲಕ ರೆಪೊ ದರ ಶೇ.5.40 ರಷ್ಟು ಹೆಚ್ಚಳವಾಗಿದೆ.

    ಏರುತ್ತಿರುವ ಹಣದುಬ್ಬರವನ್ನು ಸರಿಪಡಿಸಲು ಆರ್‌ಬಿಐ ಸತತ 3ನೇ ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಎಲ್ಲಾ 6 ಸದಸ್ಯರು ರೆಪೊ ದರ ಏರಿಕೆಗೆ ಒಮ್ಮತ ಸೂಚಿಸಿದ್ದಾರೆ. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದರಿಂದ ಗೃಹ, ವಾಹನ ಹಾಗೂ ಇರತ ಸಾಲಗಳ ಮೇಲಿನ ಬಡ್ಡಿ ದರ ಇನ್ನಷ್ಟು ಜಾಸ್ತಿಯಾಗಲಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಆರ್‌ಬಿಐ ರೆಪೊ ದರವನ್ನು ಮೇ ತಿಂಗಳಿನಲ್ಲಿ ಶೇ.0.40 ರಷ್ಟು ಹಾಗೂ ಜೂನ್‌ನಲ್ಲಿ ಶೇ.0.50 ರಷ್ಟು ಹೆಚ್ಚಿಸಿತ್ತು. ಇದೀಗ ಸತತ 3ನೇ ಬಾರಿ ಹೆಚ್ಚಿಸಿದ್ದು, ಈ ದರ 2019ರಿಂದ ನಡೆದ ಮೊದಲ ಅತಿದೊಡ್ಡ ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರೆಪೊ ದರ ಶೇ.4.40ಕ್ಕೆ ಹೆಚ್ಚಳ: ಆರ್‌ಬಿಐ ಗವರ್ನರ್‌ ಘೋಷಣೆ

    ರೆಪೊ ದರ ಶೇ.4.40ಕ್ಕೆ ಹೆಚ್ಚಳ: ಆರ್‌ಬಿಐ ಗವರ್ನರ್‌ ಘೋಷಣೆ

    ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೊ ದರದಲ್ಲಿ 40 ಬೇಸಿಸ್‌ ಪಾಯಿಂಟ್ಸ್‌ (ಮೂಲಾಂಶ) ಹೆಚ್ಚಳ ಮಾಡಿದ್ದು, ಶೇ. 4.40ಗೆ ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಘೋಷಿಸಿದ್ದಾರೆ.

    ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ, ಏರುತ್ತಿರುವ ಹಣದುಬ್ಬರ ನಿಯಂತ್ರಣದ ಉದ್ದೇಶದಿಂದ ರೆಪೊ ದರ ಹೆಚ್ಚಿಸಲು ನಿರ್ಧರಿಸಿದೆ ಎಂದು ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ

    RBI

    ನಗದು ಮೀಸಲು ಅನುಪಾತ (ಕ್ಯಾಶ್‌ ರಿಸರ್ವ್‌ ರೇಷಿಯೊ) ಬೇಡಿಕೆಯ 50 ಮೂಲಾಂಶ ಹೆಚ್ಚಿಸಲಾಗಿದ್ದು, ಶೇ. 4.5ಕ್ಕೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವರದಿಯನ್ನು ಉಲ್ಲೇಖಿಸಿದ ಶಕ್ತಿಕಾಂತ್‌ ದಾಸ್‌, ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಇದರಿಂದ ಸರಕು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಕೊರತೆ ಹೆಚ್ಚಾಗಿದೆ. ಸೂಕ್ತ ನಿರ್ಧಾರಗಳೊಂದಿಗೆ ಭಾರತ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ವೀಡಿಯೋ ಮಾಡುತ್ತಿದ್ದ ಯುವಕ- ರೈಲಿಗೆ ಸಿಲುಕಿ ಸಾವು

  • ಅಲ್ಪಾವಧಿ ಬಡ್ಡಿ ದರ ಯಥಾಸ್ಥಿತಿ, ಜಿಡಿಪಿ ಕುಸಿಯುವ ಮುನ್ಸೂಚನೆ

    ಅಲ್ಪಾವಧಿ ಬಡ್ಡಿ ದರ ಯಥಾಸ್ಥಿತಿ, ಜಿಡಿಪಿ ಕುಸಿಯುವ ಮುನ್ಸೂಚನೆ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಉಳಿಸಿಕೊಂಡಿದೆ.

    ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡ ಹಿನ್ನೆಲೆಯಲ್ಲಿ ಅಲ್ಪಾವಧಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವ ನಿರ್ಧಾರವನ್ನು ಆರ್‍ಬಿಐ ಕೈಗೊಂಡಿದೆ.

    ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವ ಐದು ಮಂದಿಯ ಸದಸ್ಯರು ಇರುವ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆ ಬುಧವಾರ ನಡೆಯಿತು. ಈ ಸಭೆಯಲ್ಲಿ ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್ ರೆಪೊ) ಶೇ.5.75, ಬ್ಯಾಂಕ್‍ಗಳಿಗೆ ಆರ್‍ಬಿಐ ನೀಡುವ ಸಾಲದ ಬಡ್ಡಿ ದರವನ್ನು (ರೆಪೊ) ಶೇ.6ರ ಮಟ್ಟದಲ್ಲೇ ಉಳಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಇದೇ ವೇಳೆ ವಾರ್ಷಿಕವಾಗಿ ಈ ಹಿಂದೆ ಅಂದಾಜಿಸಿದ್ದ ಜಿಡಿಪಿ ದರ ಶೇ.7.3ರ ಬದಲಾಗಿ ಈ ಶೇ.6.7ಕ್ಕೆ ಕುಸಿತವಾಗಬಹುದು ಎಂದು ಅಂದಾಜಿಸಿದೆ.

    ರೆಪೊ ದರ: ವಾಣಿಜ್ಯ ಬ್ಯಾಂಕುಗಳು ಆರ್‍ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರಿಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.

    ರಿವರ್ಸ್ ರೆಪೊ: ವಾಣಿಜ್ಯ ಬ್ಯಾಂಕುಗಳು ಆರ್‍ಬಿಐಯಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೊ ರೇಟ್. ಆರ್‍ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ ರೆಪೊ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‍ಬಿಐಗೆ ವರ್ಗಾಯಿಸುತ್ತದೆ.