Tag: ರೆಟ್ರೋ ಲುಕ್

  • ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ:  ರೆಟ್ರೋ ಲುಕ್  ಫೋಟೋ ಲೀಕ್

    ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಸ್ಯಾಂಡಲ್‌ವುಡ್‌ನ (Sandalwood) ಕ್ರಿಯೆಟಿವ್ ಡೈರೆಕ್ಟರ್ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ`ಕೆಡಿ’ (Kd Film) ಸಿನಿಮಾದ ಫೋಟೋವೊಂದು ಲೀಕ್ ಆಗಿದೆ. ಸದ್ಯ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಡೆದಿದ್ದು, ಈ ಭಾಗದ ಶೂಟಿಂಗ್ ನಲ್ಲಿ ಧ್ರುವ ಸರ್ಜಾ ರೆಟ್ರೋ ಲುಕ್ (Retro Look) ನಲ್ಲಿ ಕಂಡಿದ್ದಾರೆ. ಅಭಿಮಾನಿಗಳ ಮಧ್ಯ ಧ್ರುವ ಕಾಣಿಸಿಕೊಂಡಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೆಟ್ರೋ ಲುಕ್ ನಲ್ಲಿ ಧ್ರುವ ಸಖತ್ ಆಗಿ ಕಾಣುತ್ತಾರೆ.

    ಕೆವಿಎನ್‌ ನಿರ್ಮಾಣದ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ ನಾನಾ ಕಾರಣಗಳಿಂದಾಗಿ  ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ರವಿಚಂದ್ರನ್ (Ravichandran) ಕೂಡ ಇದ್ದಾರೆ. ಮೊನ್ನೆಯಷ್ಟೇ ರವಿಚಂದ್ರನ್ ಅವರ `ಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಇದನ್ನೂ ಓದಿ:ಕೋಮಲ್ ಹುಟ್ಟುಹಬ್ಬಕ್ಕೆ ‘ರೋಲೆಕ್ಸ್’ ಪೋಸ್ಟರ್

    ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್‌, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ.

     

    1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಹ್ಲಿ ಸೇನೆಯ ನ್ಯೂಲುಕ್- ರೆಟ್ರೋ ಥೀಮ್ ಜೆರ್ಸಿಯಲ್ಲಿ ಟೀಂ ಇಂಡಿಯಾ

    ಕೊಹ್ಲಿ ಸೇನೆಯ ನ್ಯೂಲುಕ್- ರೆಟ್ರೋ ಥೀಮ್ ಜೆರ್ಸಿಯಲ್ಲಿ ಟೀಂ ಇಂಡಿಯಾ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಟೂರ್ನಿ ನವೆಂಬರ್ ಅಂತ್ಯದಲ್ಲಿ ಆರಂಭವಾಗಲಿದ್ದು, ಟೀಂ ಇಂಡಿಯಾ ಆಟಗಾರರು ಟೂರ್ನಿಯಲ್ಲಿ ರೆಟ್ರೋ ಥೀಮ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಪೋರ್ಟ್ಸ್ ಔಟ್ ಲುಕ್ ವರದಿ ಮಾಡಿದೆ.

    ಆಸೀಸ್ ವಿರುದ್ಧ ಟೂರ್ನಿಗಾಗಿ ಈಗಾಗಲೇ ದುಬೈನಿಂದ ಹೋರಾಟಿರುವ ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ನೆಟ್ ತರಬೇತಿ ಆರಂಭಿಸಲಿದ್ದಾರೆ. ಆಸೀಸ್ ಪ್ರವಾಸ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಹೊಸ ಪಿಪಿಇ ಕಿಟ್ ಧರಿಸಿ ಆಟಗಾರರು ಆಸೀಸ್ ಗೆ ಪ್ರಯಾಣಿಸಿದ ಫೋಟೋಗಳನ್ನು ಬಿಸಿಸಿಐ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇತ್ತ ಹೊಸ ಜೆರ್ಸಿ ರೆಟ್ರೋ ಥೀಮ್‍ನಲ್ಲಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರರು ಧರಿಸಿದ್ದ ಜೆರ್ಸಿಯ ಲುಕ್‍ಗೆ ಮೆರುಗು ನೀಡಿ 70 ದಶಕದ ಸ್ಫೂರ್ತಿಯೊಂದಿಗೆ ಹೊಸ ಜೆರ್ಸಿಯನ್ನು ಸಿದ್ಧಪಡಿಸಲಾಗಿದೆ. ನೀಲಿ ಬಣ್ಣದಲ್ಲಿದ್ದ ಜೆರ್ಸಿ ಕಡು ನೀಲಿಬಣ್ಣಕ್ಕೆ ಬದಲಾಗಿದ್ದು, ಭುಜದ ಭಾಗದಲ್ಲಿ ಮೊದಲು ಬಿಳಿ, ಕೆಂಪು, ಹಸಿರು, ನೀಲಿ ಬಣ್ಣಗಳ ಪಟ್ಟಿಗಳನ್ನು ಕಾಣಬಹುದಾಗಿದೆ. ಜೆರ್ಸಿಯ ಮೇಲೆ ಎಂಪಿಎಲ್ ಸ್ಪೋರ್ಟ್ಸ್ ಹೆಸರನ್ನು ಮುದ್ರಿಸಲಾಗಿದೆ. ಟೀಂ ಇಂಡಿಯಾ ಆಟಗಾರರಿಗೆ ಹೊಸ ಪ್ರಯೋಜಕತ್ವ ನೀಡುತ್ತಿರುವ ಎಂಪಿಎಲ್ ಸ್ಪೋರ್ಟ್ಸ್ ಹೊಸ ಕಿಟ್‍ಗಳನ್ನು ನೀಡುತ್ತಿದೆ.

    ಇದೇ ಟೂರ್ನಿಯಲ್ಲಿ ಆಸೀಸ್ ತಂಡ ಕೂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆಸೀಸ್‍ನ ಸ್ಥಳೀಯ ಅಂಶಗಳನ್ನು ಸಾರಿ ಹೇಳುವಂತೆ ಹೊಸ  ಜೆರ್ಸಿಯನ್ನು ವಿನ್ಯಾಸ ಮಾಡಲಾಗಿದೆ. ಅಲ್ಲದೇ 1868ರ ಕ್ರಿಕೆಟ್ ತಂಡದ ಕಥೆಯನ್ನು ಈ ಸಮವಸ್ತ್ರ ಹೇಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಟಿ20 ಸರಣಿಯಲ್ಲಿ ಆಸೀಸ್ ಪಡೆ ಹೊಸ ಜೆರ್ಸಿಯನ್ನು ಧರಿಸಲಿದೆ.

    ಐಪಿಎಲ್ ಟೂರ್ನಿಯಂತೆ ಸಂಪೂರ್ಣ ಬಯೋಸೆಕ್ಯೂರ್ ವಾತಾವರಣದಲ್ಲೇ ಟೂರ್ನಿ ನಡೆಯಲಿದೆ. ನ.27 ರಿಂದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆ ಬಳಿಕ ಟಿ20 ಹಾಗೂ ಟೆಸ್ಟ್ ಪಂದ್ಯಗಳು ನಡೆಯಲಿದೆ. ಟೂರ್ನಿಯ ವಿಶೇಷವಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಡಿಸೆಂಬರ್ 17 ರಂದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಇದಾಗಿದೆ.

    ಟಿ20 ತಂಡ: ಕೊಹ್ಲಿ, ಧವನ್, ಮಯಾಂಕ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಜಡೇಜಾ, ವಾಷಿಂಗ್ಟನ್ ಸುಂದರ್, ಚಹಲ್, ಬುಮ್ರಾ, ಶಮಿ, ಶೈನಿ, ದೀಪಕ್ ಚಹರ್, ನಟರಾಜನ್.

    ಏಕದಿನ ತಂಡ: ವಿರಾಟ್ ಕೊಹ್ಲಿ, ಧವನ್, ಶುಭ್‍ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್, ಜಡೇಜಾ, ಚಹಲ್, ಕುಲ್ದೀಪ್ ಯಾದವ್, ಬುಮ್ರಾ, ಶಮಿ, ಶೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್.

    ಟೆಸ್ಟ್ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಯಾಂಕ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಸ್ವರ ಪೂಜಾರಾ, ರಹಾನೆ, ಹನುಮ ವಿಹಾರಿ, ಶುಭ್‍ಮನ್ ಗೀಲ್, ವೃದ್ಧಿಮಾನ್ ಸಹಾ, ರಿಷಬ್ ಪಂತ್, ಬುಮ್ರಾ, ಶಮಿ, ಉಮೇಶ್ ಯಾದವ್, ಶೈನಿ, ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.