Tag: ರೂಲ್ಸ್

  • ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಶಿಕ್ಷಣ ಇಲಾಖೆ ಸ್ಕೂಲ್ ಬ್ಯಾಗ್‍ನ ತೂಕ ಇಳಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ. ಕೆಜಿ ಗಟ್ಟಲೆ ಸ್ಕೂಲ್ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳ ದೈಹಿಕ  ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    1-10 ನೇ ತರಗತಿವರಗಿನ ಮಕ್ಕಳ ಬ್ಯಾಗ್ ತೂಕಕ್ಕೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ ಶೇ.10 ರಷ್ಟು ಮೀರುವಂತೆ ಇಲ್ಲ. 1-2 ತರಗತಿ ಮಕ್ಕಳಿಗೆ ಇನ್ನು ಮುಂದೆ ಹೋಂ ವರ್ಕ್ ಕೊಡುವಂತಿಲ್ಲ ಎಂದು ಹೇಳಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯವಾಗಿ ಆಗಬೇಕು. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೇ ನೀರಿನ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಆದೇಶ ನೀಡಿದೆ.

    ಸ್ಕೂಲ್ ಬ್ಯಾಗ್ ರೂಲ್ಸ್!
    1. ಹೊಸ ಆದೇಶದ ಅನ್ವಯ ಮಕ್ಕಳ ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ 10% ಮೀರುವಂತಿಲ್ಲ.
    2. 1-2 ತರಗತಿಗೆ ಇನ್ನುಂದೆ ಹೋಂ ವರ್ಕ್ ಕೊಡುವಂತಿಲ್ಲ.
    3. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯ.
    4. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೆ ನೀರಿನ ವ್ಯವಸ್ಥೆ ಮಾಡೋದು ಕಡ್ಡಾಯ.
    5. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು.
    6. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು.
    7. ಮುಂಚಿತವಾಗಿಯೇ ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತರಲು ಸೂಚನೆ ನೀಡುವುದು.
    8. ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಆದಷ್ಟು ಶಾಲೆಗಳಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಶಾಲೆ ಮಾಡಬೇಕು.

    ಹೊಸ ಆದೇಶದ ಅನ್ವಯ ಮಕ್ಕಳ ಶಾಲಾ ಬ್ಯಾಗ್ ತೂಕ ಹೀಗೆ ಇರಬೇಕು
    1. 2ನೇ ತರಗತಿ – 1.5 ರಿಂದ 2 ಕೆಜಿ.
    2. 3-5ನೇ ತರಗತಿ – 2 ರಿಂದ 3 ಕೆಜಿ
    3. 6-8ನೇ ತರಗತಿ – 3 ರಿಂದ 4 ಕೆಜಿ.
    4. 9-10ನೇ ತರಗತಿ – 4 ರಿಂದ 5 ಕೆಜಿ

    ಶಾಲಾ ಬ್ಯಾಗ್ ರಹಿತ ದಿನದ ಯಾವ ಚಟುವಟಿಕೆಗಳನ್ನು ಮಾಡಬೇಕು?
    1. ಕ್ಷೇತ್ರ ಸಂಚಾರ
    2. ವಾರ್ತಾಪತ್ರಿಕೆಗಳ ಚಟುವಟಿಕೆಗಳು
    3. ಗಣಿತ ವಿನೋದ, ಅಬ್ಯಾಕಸ್
    4. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು
    5. ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು
    6. ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವುದು, ಕರಕುಶಲತೆ
    7. ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ
    8. ಭಕ್ತಿಗೀತೆಗಳು ಮತ್ತು ದೇಶಭಕ್ತಿಗೀತೆಗಳ ಚಟುವಟಿಕೆ (ಕನ್ನಡ, ಹಿಂದಿ, ಇಂಗ್ಲೀಷ್)
    9. ಚಿತ್ರ ಓದುವಿಕೆ ಮತ್ತು ನಕ್ಷೆ ಓದುವಿಕೆ
    10. ಒಳಾಂಗಣ ಕ್ರೀಡೆಗಳು (ಹಾವು ಮತ್ತು ಏಣಿ, ಕೇರಂ ಬೋರ್ಡ್ ಇತ್ಯಾದಿ)
    11. ಹೊರಾಂಗಣ ಕ್ರೀಡೆಗಳು
    12. ದೃಕ್ ಶ್ರವಣ ಮಾಧ್ಯಮಗಳ ಚಟುವಟಿಕೆಗಳು/ ಶ್ಲೋಕಗಳನ್ನು ಪಠಿಸುವುದು
    13. ನೃತ್ಯ/ ಚರ್ಚಾಸ್ಪರ್ಧೆ/ ನಾಟಕ/ ಏಕಪಾತ್ರಾಭಿನಾಯ/ ಆಶುಭಾಷಣ ಸ್ಪರ್ಧೆಗಳು/ ಧ್ಯಾನ/ ಯೋಗಗಳ ಚಟುವಟಿಕೆ
    14. ಶಾಲಾ ಪರಿಸರಕ್ಕೆ ಅನುಗುಣವಾದ ಶೈಕ್ಷಣಿಕ ಚಟುವಟಿಕೆಗಳು.

  • ಪಾರ್ಕಿಂಗ್‌ನಲ್ಲೇ ಬೈಕ್ ಪಾರ್ಕ್ ಮಾಡಿದ್ರೂ ಟೋಯಿಂಗ್ ಕಾಟ- ಫೈನ್ ಕಟ್ಟದೆ ಮಹಿಳೆ ಅವಾಜ್

    ಪಾರ್ಕಿಂಗ್‌ನಲ್ಲೇ ಬೈಕ್ ಪಾರ್ಕ್ ಮಾಡಿದ್ರೂ ಟೋಯಿಂಗ್ ಕಾಟ- ಫೈನ್ ಕಟ್ಟದೆ ಮಹಿಳೆ ಅವಾಜ್

    ಬೆಂಗಳೂರು: ನಗರದ ಸೇಂಟ್ ಮಾರ್ಥಸ್ ರಸ್ತೆಯಲ್ಲಿ ವಾಹನ ಟೋಯಿಂಗ್ ಮಾಡಿದಾಗ ಫೈನ್ ಕಟ್ಟದೆ ರೂಲ್ಸ್ ಪ್ರಶ್ನಿಸಿ ಮಹಿಳೆಯೊಬ್ಬರು ಎಲ್ಲರಿಗೂ ಬೆವರಿಳಿಸಿದ್ದಾರೆ. ಪಾರ್ಕಿಂಗ್ ಪ್ಲೇಸ್ ನಲ್ಲಿ ದ್ವಿಚಕ್ರ ವಾಹನ ಪಾರ್ಕ್ ಮಾಡಿದರೂ ಟೋಯಿಂಗ್ ಮಾಡಿ ಕಾಟ ಕೊಡ್ತಿದ್ದ ಸಿಬ್ಬಂದಿಗೆ ಮಹಿಳೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಹಿಳೆ ಅವಾಜ್ ಹಾಕಿದ್ದಕ್ಕೆ ಟೋಯಿಂಗ್ ಮಾಡುವ ಸಿಬ್ಬಂದಿ ವಾಹನದೊಳಗೆ ಇರುವ ಗಾಡಿಯನ್ನು ಬಿಟ್ಟು ಹೋಗಿದ್ದಾರೆ. ಟ್ರಾಫಿಕ್ ಪೊಲೀಸ್ ಇಲ್ಲದೆ ಅನೌನ್ಸ್ ಮೆಂಟ್ ಮಾಡದೇ ಸಿಬ್ಬಂದಿ ಏಕಾಏಕಿ ವಾಹನವನ್ನು ಟೋಯಿಂಗ್ ಮಾಡಿ ಗಾಡಿಯಲ್ಲಿ ಎತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಮಹಿಳೆ ಗಾಡಿಗೆ ಅಡ್ಡಲಾಗಿ ನಿಂತು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದು ಪಾರ್ಕಿಂಗ್ ಪ್ಲೇಸ್, ಅದ್ಯಾಗೆ ಗಾಡಿಗಳನ್ನು ತಗೊಂಡು ಹೋಗುತ್ತೀರಾ?. ಅನೌನ್ಸ್ ಮಾಡಿದ್ದೀರಾ? ಟ್ರಾಫಿಕ್ ಪೊಲೀಸ್ ಎಲ್ಲಿ ಅಂತಾ ದ್ವಿಚಕ್ರ ವಾಹನ ಸವಾರರಾಗಿರುವ ಮಹಿಳೆಯಿಂದ ಟೋಯಿಂಗ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇದು ಸುಲಿಗೆ ಮಾಡುವ ತಂತ್ರ ಅಂತಾ ಜಗಳ ಕೂಡ ಮಾಡಿದ್ದಾರೆ.

    ಮಹಿಳೆ ಆವಾಜ್ ಹಾಕುತ್ತಿದ್ದಂತೆಯೇ ಚೈನ್ ಹಿಡಿದು ಮಹಿಳೆಗೆ ರೌಂಡಪ್ ಮಾಡಿ ಸಿಬ್ಬಂದಿ ಮತ್ತೆ ವಾಹನವನ್ನು ಟೋಯಿಂಗ್ ಮಾಡಲು ಸಿದ್ಧರಾದರು. ಕೊನೆಗೆ ಎಲ್ಲಾ ಮಹಿಳಾ ವಾಹನ ಸವಾರರು ಗಲಾಟೆ ಮಾಡಲು ಶುರು ಮಾಡಿದರು. ಮಹಿಳೆಯರ ಗಲಾಟೆಗೆ ಟೋಯಿಂಗ್ ಸಿಬ್ಬಂದಿ ವಾಹನ ಕೆಳಗಿಳಿಸಿದ್ದಾರೆ.

    ನಂತರ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಕೂಡ ಟೋಯಿಂಗ್ ಸಿಬ್ಬಂದಿಯನ್ನು ನಿಮ್ಮ ಲಿಮಿಟ್ಸ್ ಅಲ್ಲ ಇದು. ಯಾಕೆ ಬಂದ್ರಿ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂದು ಟೋಯಿಂಗ್ ಸಿಬ್ಬಂದಿ ತೆರೆಳಿದ್ದಾರೆ.

    https://www.youtube.com/watch?v=nlmg_vZJpZs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯತಮೆ ಹಾಕಿದ 22 ರೂಲ್ಸ್ ನೋಡಿ ದಂಗಾದ ಪ್ರೇಮಿ

    ಪ್ರಿಯತಮೆ ಹಾಕಿದ 22 ರೂಲ್ಸ್ ನೋಡಿ ದಂಗಾದ ಪ್ರೇಮಿ

    ಯುವತಿಯೊಬ್ಬಳು ತಾನು ಪ್ರೀತಿಸುವ ಗೆಳಯನಿಗಾಗಿ ಬರೋಬ್ಬರಿ 22 ನಿಯಮಗಳನ್ನು ಹಾಕಿ ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಳು. ಈಗ 22 ನಿಯಮಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಯೊವತಿಯೊಬ್ಬಳು ತನ್ನ ಪ್ರಿಯತಮನನ್ನು ಸಂಪೂರ್ಣ ಹತೋಟಿಗೆ ತಗೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ 22 ನಿಯಮಗಳನ್ನು ಟೈಪ್ ಮಾಡಿ ಅದರ ಫೋಟೋ ತೆಗೆದುಕೊಂಡು ಟ್ವೀಟ್ ಮಾಡಿದ್ದಾಳೆ. ಆದರೆ ಆ ಫೋಟೋ ವೈರಲ್ ಆಗುತ್ತಿದ್ದಂತೆ ಯುವತಿ ಖಾತೆಯಿಂದ ಟ್ವೀಟ್ ಡಿಲೀಟ್ ಮಾಡಿದ್ದಾಳೆ. ಆದರೆ ಬೇರೆಯವರು ಆ ಫೋಟೋವನ್ನು ಡೌನ್ ಲೋಡ್ ಮಾಡಿಕೊಂಡು ಅವರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    @kkeyes96 ಎಂಬ ಹೆಸರಿನ ಟ್ವೀಟ್ ಖಾತೆಯಿಂದ ಈ ಫೋಟೋ ಅಪ್ಲೋಡ್ ಆಗಿದೆ. ಸದ್ಯಕ್ಕೆ ಯುವತಿಯ ರೂಲ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನಿಯಮದ ಪಟ್ಟಿ
    1. ಬೇರೆ ಹುಡುಗಿಯ ಫೋನ್ ನಂಬರ್ ಇಟ್ಟುಕೊಳ್ಳವಂತಿಲ್ಲ.
    2. ಯಾವುದೇ ಸಾಮಾಜಿಕ ಜಾಲತಾಣದಲ್ಲಿ(ಇನ್ ಸ್ಟಾಗ್ರಾಂ, ಟ್ವಿಟರ್, ಇತ್ಯಾದಿ..)ಸಕ್ರಿಯವಾಗಿರುವಂತಿಲ್ಲ
    3. ನನ್ನ ಬಿಟ್ಟು ನೀನು ಹೋಂಡಾ ಬೈಕಿನಲ್ಲಿ ಹೋಗುವಂತಿಲ್ಲ.
    4. ಬೇರೆ ಹುಡುಗಿಯನ್ನು ನೋಡುವಂತಿಲ್ಲ.
    5. ವಾರಕ್ಕೆ ಎರಡು ದಿನಕ್ಕಿಂತ ಅಧಿಕವಾಗಿ ಸ್ನೇಹಿತರೊಂದಿಗೆ ಹೊರ ಹೋಗುವಂತಿಲ್ಲ.
    6. ನಾನು ಜೊತೆ ಇದ್ದಾಗ ಕುಡಿಯುವಂತಿಲ್ಲ.
    7. ನೀನಿದ್ದ ಸ್ಥಳಕ್ಕೆ ಹುಡುಗಿಯರು ಬರುತ್ತಿದ್ದರೆ ನೀನು ಹೋಗಬೇಕು.
    9. ಬೇರೆ ಹುಡುಗಿಯ ಜೊತೆ ಮಾತನಾಡುವಂತಿಲ್ಲ.

    ಈ ರೀತಿಯಾಗಿ ಅನೇಕ ನಿಯಮಗಳನ್ನು ಯುವತಿ ಹಾಕಿದ್ದಾಳೆ. ಈ ಪೋಸ್ಟ್ ನೋಡಿ ನೆಟ್ಟಿಗರು ಹುಡುಗನಿಗೆ ಇನ್ನೊಬ್ಬ ಹುಡುಗಿಯನ್ನು ಹುಡುಕು ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಕ್ರೇಜಿಯಾಗಿ ರಿಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv