Tag: ರೂಲ್ಸ್

  • ಲೇಡಿ ಸೂಪರ್ ಸ್ಟಾರ್ ನಯನತಾರಾ ಮೇಲೆ ಮುನಿಸಿಕೊಂಡ ತಮಿಳು ನಿರ್ಮಾಪಕರು

    ಲೇಡಿ ಸೂಪರ್ ಸ್ಟಾರ್ ನಯನತಾರಾ ಮೇಲೆ ಮುನಿಸಿಕೊಂಡ ತಮಿಳು ನಿರ್ಮಾಪಕರು

    ಮಿಳು ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ (Nayantara) ಮೇಲೆ ಅಲ್ಲಿನ ನಿರ್ಮಾಪಕರು ಕೋಪಗೊಂಡಿದ್ದಾರೆ. ತಮಗೊಂದು ಬೇರೆಯವರಿಗೊಂದು ರೂಲ್ಸ್ ಮಾಡಿಕೊಳ್ಳುವ ನಯನತಾರಾ ಅವರ ಇಬ್ಬಂದಿತನವನ್ನು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೋಪ ಎಲ್ಲಿಗೆ ತಿರುಗುತ್ತದೆಯೋ ಕಾದು ನೋಡಬೇಕಿದೆ. ಅಷ್ಟಕ್ಕೂ ನಯನತಾರಾ ಮೇಲೆ ನಿರ್ಮಾಪಕರು ಮುನಿಸಿಕೊಳ್ಳುವುದಕ್ಕೆ ಕಾರಣವಿದೆ.  ಆ ಕಾರಣವನ್ನು ಕೆಲವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

    ನಯನತಾರಾ ತಮ್ಮ ಬದುಕಿನಲ್ಲಿ ಒಂದು ಬದ್ಧತೆಯನ್ನು ಮಾಡಿಕೊಂಡಿದ್ದರು. ಅದನ್ನು ಈಗ ಅವರು ತಮ್ಮ ಗಂಡನಿಗಾಗಿ ಮುರಿದಿದ್ದಾರೆ. ಇದೇ ನಿರ್ಮಾಪಕರ ಕೋಪಕ್ಕೆ ಕಾರಣವಾಗಿದೆ. ನಯನತಾರಾ ಸಿನಿಮಾಗಳನ್ನು ಒಪ್ಪಿಕೊಂಡರೆ, ಅಲ್ಲೊಂದು ನಿಬಂಧನೆ ಹಾಕುತ್ತಿದ್ದರು. ತಮ್ಮ ಕೆಲಸ ಕೇವಲ ನಟಿಸುವುದು ಮಾತ್ರ. ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಅಗ್ರಿಮೆಂಟ್ ಹಾಕಿಕೊಳ್ಳುತ್ತಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರು ಅದನ್ನು ಮುರಿದಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಕನೆಕ್ಟ್’ (Connect) ಸಿನಿಮಾ ಇದೇ ತಿಂಗಳು 23ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ. ಈ ಕೆಲಸವೇ ನಿರ್ಮಾಪಕರನ್ನು ಕೆಣಕಿದೆ. ತಮಗೊಂದು ರೂಲ್ಸ್ ಬೇರೆಯವರಿಗೊಂದು ರೂಲ್ಸ್ ನಯನತಾರಾ ಮಾಡುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ತಮಿಳು ಸಿನಿಮಾ ರಂಗದಲ್ಲಿ ಈ ರೀತಿ ರೂಲ್ಸ್ (Rules) ಮಾಡಿಕೊಳ್ಳುವುದು ಹೊಸದೇನೂ ಅಲ್ಲ. ಅಜಿತ್ ಅವರು ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಜಿತ್ ಯಾವುದೇ ಸಿನಿಮಾದ ಪ್ರಮೋಷನ್ ಮಾಡುವುದಿಲ್ಲ. ನಟಿಸಿ ಹಿಂದಕ್ಕೆ ಸರಿದು ಬಿಡುತ್ತಾರೆ. ನಯನತಾರಾ ಇದನ್ನೇ ಪಾಲಿಸಿಕೊಂಡು ಬಂದಿದ್ದರು. ಆದರೆ, ಇದೀಗ ಗಂಡನ ಸಿನಿಮಾಗಾಗಿ ಆ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ಈ ನಡೆಯೇ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಗತ್ಯ ವಸ್ತು ಖರೀದಿಗೆ ಬಳಸಬಹುದು ವಾಹನ – ಒಂದೇ ದಿನಕ್ಕೆ ರೂಲ್ಸ್ ಚೇಂಜ್

    ಅಗತ್ಯ ವಸ್ತು ಖರೀದಿಗೆ ಬಳಸಬಹುದು ವಾಹನ – ಒಂದೇ ದಿನಕ್ಕೆ ರೂಲ್ಸ್ ಚೇಂಜ್

    ಬೆಂಗಳೂರು: ಸರ್ಕಾರದ ಕಠಿಣ ಲಾಕ್‍ಡೌನ್‍ನ ಎರಡನೇ ದಿನ ಆರಂಭವಾಗಿದ್ದು, ಅಗತ್ಯ ವಸ್ತು ಖರೀದಿಗೆ ವಾಹನ ಬಳಸಲು ಅವಕಾಶ ನೀಡಲಾಗಿದೆ.

    ಲಾಕ್‍ಡೌನ್‍ನ ಮೊದಲ ದಿನವೇ ನಿಯಮ ಬದಲಾಗಿದೆ. ದಿನಸಿ, ಹಣ್ಣು ಸೊಪ್ಪು ತರಕಾರಿ ಖರೀದಿಗೆ ವಾಹನ ಬಳಸಬಹುದು. ಆದರೆ ನಿಮ್ಮ ನಿಮ್ಮ ಏರಿಯಾಗಳಲ್ಲಷ್ಟೇ ಖರೀದಿಗೆ ಅವಕಾಶ ಇದೆ. ಅನಗತ್ಯವಾಗಿ ಏರಿಯಾದಿಂದ ಏರಿಯಾಗೆ ವಾಹನಗಳಲ್ಲಿ ಬರುವಂತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಹತ್ತಿರದ ಅಂಗಡಿಗೆ ತೆರಳಲು ಗಾಡಿ ಬಳಸಬಹುದು.

    ಅಗತ್ಯ ವಸ್ತು ಖರೀದಿಗೆ ವಾಹನ ಬಳಸಬಹುದು ಅಂತ ಅಡ್ಡಾಡಬೇಡಿ. ಯಾಕಂದರೆ ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಖಾಕಿ ಗಸ್ತು ತಿರುಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ಎಂದಿನಂತೆ ಚೆಕ್ಕಿಂಗ್ ನಡೆಯುತ್ತದೆ. ಅನಗತ್ಯವಾಗಿ ಓಡಾಡಿದ್ರೆ, ವಾಹನಗಳ ಸೀಜ್ ಆಗೋದು ಪಕ್ಕಾ ಆಗಿದೆ. ಹೀಗಾಗಿ ನೆಪ ಹೇಳಿಕೊಂಡು ತಿರುಗಾಡೋದು ಬಿಡಿ. ಮನೆಯಲ್ಲೇ ಇದ್ದು ಲಾಕ್‍ಡೌನ್‍ಗೆ ಸಹಕರಿಸಿ, ಕೊರೊನಾ ಚೈನ್ ಬ್ರೇಕ್ ಮಾಡಿ.

  • ಪ್ರಯಾಣಿಕರೇ, ಬಸ್‌ ಹತ್ತೋ ಮುನ್ನ ಕೊರೊನಾ ನಿಯಮಗಳನ್ನು ತಿಳಿದುಕೊಳ್ಳಿ

    ಪ್ರಯಾಣಿಕರೇ, ಬಸ್‌ ಹತ್ತೋ ಮುನ್ನ ಕೊರೊನಾ ನಿಯಮಗಳನ್ನು ತಿಳಿದುಕೊಳ್ಳಿ

    ಬೆಂಗಳೂರು: ಕೊರೊನಾ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ ಬಸ್ ಪ್ರಯಾಣಿಕರಿಗೆ ಮತ್ತೆ ಹಳೆಯ ನಿಯಮಗಳನ್ನು ಜಾರಿಗೆ ತಂದಿದೆ.

    ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿಲ್ಲ. ಇದರಿಂದ ಎತ್ತಚ್ಚ ರಾಜ್ಯ ಸರ್ಕಾರ ಈಗ ಟಫ್ ರೂಲ್ಸ್ ಗಳ ಮೊರೆ ಹೋಗಿದೆ. ಮಾಸ್ಕ್ ಧರಿಸದವರಿಗೆ ನಗರದಲ್ಲಿ ಸಾವಿರ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ತೀರ್ಮಾನ ಮಾಡಿದೆ. ಅಂತಯೇ ಬಸ್ ಪ್ರಯಾಣಿಕರಿಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

    ಕೊರೊನಾ ಕಂಟ್ರೋಲ್‍ಗೆ ಬಸ್‍ಗಳಲ್ಲಿ ಹಳೇ ರೂಲ್ಸ್ ಜಾರಿ ತಂದಿದೆ. ಜೊತೆಗೆ ಶೇ.50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ ಪಾಲಿಸಲೇಬೇಕು. ಮೊದಲಿದ್ದಂತೆ ಸೀಟ್ ಬಿಟ್ಟು ಸೀಟ್ ಕುಳಿತುಕೊಳ್ಳಬೇಕು. ಬಸ್‍ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಮಾಸ್ಕ್ ಕಡ್ಡಾಯ ಧರಿಸಬೇಕು. ಬಸ್‍ಗಳಲ್ಲಿ ನಿಂತು ಪ್ರಯಾಣ ಮಾಡುವುದಕ್ಕೆ ಇನ್ನೂ ಮುಂದೆ ಅವಕಾಶವಿರುವುದಿಲ್ಲ.

    ಸಾರಿಗೆ ವ್ಯವಸ್ಥೆಯಲ್ಲಿ ಶೇ. 50ರಷ್ಟು ಮಾತ್ರ ಸಂಚಾರಕ್ಕೆ ಅವಕಾಶ ಎಂಬ ಆದೇಶಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ ಬಸ್‍ಗಳು ಕಡಿಮೆ ಸಂಖ್ಯೆಯಲ್ಲಿ ಓಡಾಡುತ್ತಿವೆ. ಹೀಗಿರುವಾಗ ಸಿಕ್ಕ ಬಸ್ಸುಗಳಿಗೆ ಪ್ರಯಾಣ ಮಾಡಬೇಕು. ಈ ವೇಳೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಿರುತ್ತೆ. ಕೇವಲ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಅಂದ್ರೆ ಉಳಿದವರು ನಡೆದುಕೊಂಡು ಹೋಗಬೇಕಾ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತುಂಬಿದ ಬಸ್ಸುಗಳಲ್ಲಿ ಸಂಚಾರ ಮಾಡೋಕೆ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್‍ ಇಲ್ಲ ಎಂದ ಸರ್ಕಾರ- ಬಿಬಿಎಂಪಿ ವತಿಯಿಂದ ಟಫ್ ರೂಲ್ಸ್?

    ಲಾಕ್‍ಡೌನ್‍ ಇಲ್ಲ ಎಂದ ಸರ್ಕಾರ- ಬಿಬಿಎಂಪಿ ವತಿಯಿಂದ ಟಫ್ ರೂಲ್ಸ್?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಹಾಕಲು ಲಾಕ್‍ಡೌನ್ ಅಗತ್ಯ ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ ಸರ್ಕಾರ ಮತ್ತೆ ಲಾಕ್‍ಡೌನ್ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈಗ ಪಾಲಿಕೆ ಯಥಾಸ್ಥಿತಿಯಲ್ಲಿ ಕೊರೊನಾ ಕಟ್ಟಿ ಹಾಕಲು ಮುಂದಾಗಿದೆ.

    ಈಗಾಗಲೇ ಬಿಬಿಎಂ ಸಾಮಾಜಿಕ ಅಂತರ ಕಾಯಿರಿ, ಮಾಸ್ಕ್ ಬಳಸಿ ಎಂದು ಕಡ್ಡಾಯವಾಗಿ ತಿಳಿಸಿದೆ. ಈಗ ಕೊರೊನಾ ನಿಯಮವನ್ನು ಉಲ್ಲಂಘಿಸಿದರೆ 200 ರೂ ದಂಡ ಇದೆ. ತಪ್ಪುಗಳು ಹೆಚ್ಚಾಗುವ ಜಾಗಗಳಲ್ಲಿ ದಂಡದ ಪ್ರಮಾಣ 500 ರೂ. ಮಾಡಲು ಪಾಲಿಕೆ ಪ್ಲ್ಯಾನ್ ಮಾಡುತ್ತಿದೆ.

    ಇನ್ನೂ ಕೊರೊನಾ ನಿಯಮವನ್ನು ಉಲ್ಲಂಘಿಸಿದರೆ ಪೊಲೀಸ್ ಇಲಾಖೆ ಮೂಲಕವೇ ಎಫ್‍ಐಆರ್, ದಂಡಗಳ ಕಾರ್ಯಚರಣೆ ಮಾಡುವುದು. ಬಿಬಿಎಂಪಿಯ ಮಾರ್ಷಲ್ ಗಳ ಸೂಕ್ತ ಬಳಕೆ ಮಾಡಿಕೊಳ್ಳುವುದು.

    ಹೋಂ ಕ್ವಾರಂಟೈನ್, ಕೊರೊನಾ ರೋಗಿ ಅಪ್‍ಡೇಟ್, ಕೊರೊನಾ ನಿಯಮ ಉಲ್ಲಂಘಿಸುವವರ ಬಗ್ಗೆ ಮಾಹಿತಿ ಪಡೆಯಲು ಸ್ಥಳೀಯ ಎನ್‍ಜಿಓ ಹಾಗೂ ವ್ಯಕ್ತಿಗಳ ಬಳಕೆ ಮಾಡಿಕೊಳ್ಳುವುದು.

    ಮೊಬೈಲ್ ಆಪ್, ವಾಚ್ ಸಿಸ್ಟಂ, ನೆಟ್ ವರ್ಕ್ ಮೂಲಕ ಮಾಹಿತಿ ಕಲೆಹಾಕುವುದು. ಒಂದು ವೇಳೆ ಈ ನಿಯಮವನ್ನು ಬ್ರೇಕ್ ಮಾಡಿದವರಿಗೆ ಎಫ್‍ಐಆರ್ ಹಾಗೂ ಸಾಂಸ್ಥಿಕ ಕ್ವಾರಂಟೈನ್ ಇರಲಿದೆ. ಹೀಗೆ ಹತ್ತು ಹಲವು ಐಡಿಯಾಗಳನ್ನ ಬಿಬಿಎಂಪಿ ಸಜ್ಜು ಗೊಳಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜೊತೆ ಚರ್ಚೆ ಮಾತ್ರ ಬಾಕಿ ಉಳಿದಿದೆ.

  • ಸಾರ್ವಜನಿಕ, ಕೆಲಸದ ಸ್ಥಳಗಳಲ್ಲೂ ಕಠಿಣ ರೂಲ್ಸ್

    ಸಾರ್ವಜನಿಕ, ಕೆಲಸದ ಸ್ಥಳಗಳಲ್ಲೂ ಕಠಿಣ ರೂಲ್ಸ್

    ಬೆಂಗಳೂರು: ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಲಾಕ್‍ಡೌನ್ ಮೂರರಲ್ಲಿ ಹೆಚ್ಚುವರಿ ನಿರ್ಬಂಧಗಳಿದ್ದು, ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲೂ ರೂಲ್ಸ್ ಜಾರಿ ಮಾಡಲಾಗಿದೆ.

    ಕೊರೊನಾದ ಮೂರನೇ ಲಾಕ್‍ಡೌನ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಕಠಿಣ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಓಡಾಡಿದರೆ ಮಾಸ್ಕ್ ಧರಿಸಿರಲೇಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ರೂಲ್ಸ್:
    * ಮಾಸ್ಕ್ ಧರಿಸೋದು ಕಡ್ಡಾಯ
    * ಸಾಮಾಜಿಕ ಅಂತರ ಪಾಲನೆ (ಸಾರ್ವಜನಿಕ ಸ್ಥಳ, ಸಮೂಹ ಸಾರಿಗೆಗೆ ಅನ್ವಯ)
    * 5 ಅಥವಾ 5ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ.
    * ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
    * ಅಂತ್ಯಸಂಸ್ಕಾರ, ತಿಥಿಗಳಲ್ಲಿ 20 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
    * ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್-ಗುಟ್ಕಾ, ತಂಬಾಕು ನಿಷೇಧ
    * ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ

    ಇನ್ನೂ ಕೆಲಸದ ಸ್ಥಳಗಳಿಗೂ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು  ಪ್ರಕಟಿಸಿದೆ.

    ವರ್ಕ್ ಪ್ಲೇಸ್‍ಗಳಲ್ಲಿ ರೂಲ್ಸ್
    * ಗುಣಮಟ್ಟದ ಪರಿಶುದ್ಧತೆಗೆ ಪ್ರಾಶಸ್ತ್ಯ
    * ಮಾಸ್ಕ್ ಧರಿಸೋದು ಕಡ್ಡಾಯ
    * ಕೆಲಸದ ಸ್ಥಳ, ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯ
    * ಶಿಫ್ಟ್, ಊಟದ ವಿರಾಮದಲ್ಲಿ ಸಾಮಾಜಿಕ ಅಂತರ
    * ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ವಾಶ್, ಸ್ಯಾನಿಟೈಸರ್ ವ್ಯವಸ್ಥೆ (ಎಂಟ್ರಿ-ಎಕ್ಸಿಟ್, ಕಾಮನ್ ಪ್ಲೇಸ್‍ಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು)
    * ಕೆಲಸದ ಸ್ಥಳ, ಸಾಮಾನ್ಯ ಪ್ರದೇಶಗಳಲ್ಲಿ ಪದೇ ಪದೇ ಸ್ವಚ್ಛತೆ
    * ಎಲ್ಲಾ ಸಿಬ್ಬಂದಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ
    * ಅತಿಹೆಚ್ಚು ಜನ ಸೇರುವಂತೆ ಮೀಟಿಂಗ್ ಬೇಡ
    * ಕೊರೊನಾ ಗುಣಲಕ್ಷಣ ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಆಸ್ಪತ್ರೆ, ಕ್ವಾರಂಟೈನ್ ಸೆಂಟರ್‌ಗೆ ಶಿಫ್ಟ್ ಮಾಡಬೇಕು.

  • ಹೊಸ ವರ್ಷಾಚರಣೆಗೆ ಪೊಲೀಸರಿಂದ ನ್ಯೂ ರೂಲ್ಸ್

    ಹೊಸ ವರ್ಷಾಚರಣೆಗೆ ಪೊಲೀಸರಿಂದ ನ್ಯೂ ರೂಲ್ಸ್

    ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಆಯುಕ್ತರು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ.

    ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಪಾರ್ಟಿ ಆಯೋಜಿಸುವ ಸಂಘ ಸಂಸ್ಥೆಗಳಿಗೆ ಪೊಲೀಸ್ ಆಯುಕ್ತರು ಕೆಲ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.

    ಪೊಲೀಸ್ ಆಯುಕ್ತರು ನೀಡಿರುವ ಸೂಚನೆ:
    ಹೊಸ ವರ್ಷದ ದಿನ ಮಧ್ಯರಾತ್ರಿ 1 ಗಂಟೆಯೊಳಗೆ ಕಾರ್ಯಕ್ರಮವನ್ನು ಮುಗಿಸಬೇಕು. ಒಂದು ವೇಳೆ ರೆಸ್ಟೋರೆಂಟ್, ಬಾರ್‌ಗಳು ಹೆಚ್ಚುವರಿ ಸಮಯದವರೆಗೆ ಕಾರ್ಯಕ್ರಮ ನಡೆಸಬೇಕಾದರೆ, ಅವರು ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು. ಇನ್ನೂ ರೆಸ್ಟೋರೆಂಟ್ ಮತ್ತು ಬಾರ್‌ಗಳಲ್ಲಿ ಅಶ್ಲೀಲ, ಅರೆ ಬೆತ್ತಲೆ ಮತ್ತು ಬೆತ್ತಲೆ ನೃತ್ಯವನ್ನು ನಿಷೇಧಿಸಲಾಗಿದೆ.

    ಧ್ವನಿವರ್ಧಕ ಅಳವಡಿಸಲು ಪೊಲೀಸರ ಅನುಮತಿ ಕಡ್ಡಾಯ. ಮಹಿಳೆಯರು ಮತ್ತು ಯುವತಿಯರಿಗೆ ಬಲವಂತವಾಗಿ ಹೊಸ ವರ್ಷದ ಶುಭಶಯವನ್ನು ಕೋರಬಾರದು. ಮುಖ್ಯವಾಗಿ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಇನ್ನೂ ಪಟಾಕಿ ಹಾಗೂ ಸಿಡಿ ಮದ್ದು ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡಕೂಡದು ಎಂದು ಪೊಲೀಸರು ಸೂಚನೆ ಕೊಟ್ಟಿದ್ದಾರೆ.

  • ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

    ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

    ಬೆಂಗಳೂರು: ಟ್ರಾಫಿಕ್ ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

    ಪಿಎಸ್‍ಐ ನಂಜುಂಡ ಹಾಗೂ ಮಹಿಳಾ ಟ್ರಾಫಿಕ್ ಪೊಲೀಸ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಸೆಪ್ಟೆಂಬರ್ ಒಂದರಿಂದ ಕೆಲವೊಂದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಆದರೆ ಇಲ್ಲಿನ ಪೊಲೀಸರು ಮಾತ್ರ ಈಗಲೇ ದಂಡವನ್ನು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

    ಅಗಸ್ಟ್‍ನಲ್ಲಿಯೇ ಹೆಚ್ಚು ದಂಡ ಹಾಕಿದಕ್ಕೆ ದೇವಕಿ ಎಂಬವರು ಪಿಎಸ್‍ಐ ನಂಜುಂಡ ಎಂಬವರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಪಿಎಸ್‍ಐ ನಂಜುಂಡ ನೇರವಾಗಿ ಲೇಡಿ ಪೊಲೀಸ್‍ಗೆ ಅವಳನ್ನು ಸ್ಟೇಷನ್‍ಗೆ ಎಳೆದುಕೊಂಡು ಬಾ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೆ ಮಹಿಳಾ ಪೊಲೀಸ್ ದೇವಕಿ ಮೇಲೆ ಪರಚಿ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಪೊಲೀಸ್ ಹಾಗೂ ಮಹಿಳೆಯ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ದೇವಕಿ ಆರೋಪಿಸುತ್ತಿದ್ದಾರೆ. ಪೊಲೀಸರ ಈ ವರ್ತನೆಗೆ ನಾಗರಿಕರು ಕಿಡಿಕಾರಿದ್ದು, ಇದೇನಾ ನಿಮ್ಮ ಕಾರ್ಯವೈಖರಿ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    https://www.youtube.com/watch?v=Qq-UugAP79E

  • ರಾಮನಗರದಲ್ಲಿ ಹೆಲ್ಮೆಟ್ ಕಡ್ಡಾಯ – ತಪ್ಪಿದ್ರೆ ಹೊಸ ರೂಲ್ಸ್ ಪ್ರಕಾರ ದಂಡ

    ರಾಮನಗರದಲ್ಲಿ ಹೆಲ್ಮೆಟ್ ಕಡ್ಡಾಯ – ತಪ್ಪಿದ್ರೆ ಹೊಸ ರೂಲ್ಸ್ ಪ್ರಕಾರ ದಂಡ

    ರಾಮನಗರ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ದಿನನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆದು ಪ್ರಾಣಹಾನಿಯಾಗುತ್ತಲೇ ಇದೆ. ಆದರೆ ಇದೀಗ ಅಪಘಾತಗಳ ತಡೆ ಹಾಗೂ ಪ್ರಾಣಹಾನಿ ತಪ್ಪಿಸುವ ನಿಟ್ಟಿನಲ್ಲಿ ರಾಮನಗರ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿದ್ದು, ರೂಲ್ಸ್ ಬ್ರೇಕ್ ಮಾಡಿದವರಿಗೆ ಹೊಸ ರೂಲ್ಸ್ ಪ್ರಕಾರ ದಂಡ ವಿಧಿಸಲಾಗುತ್ತದೆ.

    ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಬೈಕ್ ಸವಾರರು ಮಾತ್ರವಲ್ಲ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ ಸಂಚಾರ ನಡೆಸಬೇಕಿದೆ. ನೂತನ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅನೂಪ್ ಶೆಟ್ಟಿಯವರು ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈವರೆಗೂ ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿದ್ದ ವಾಹನ ಸವಾರರಿಗೆ ಚಾಟಿ ಬೀಸಲು ದಂಡಾಸ್ತ್ರ ಪ್ರಯೋಗಿಸಿದ್ದಾರೆ. ಇದೀಗ ಕೊಪ್ಪಳದಲ್ಲಿ ಸಾಕಷ್ಟು ಅಕ್ರಮಗಳಿಗೆ ಬ್ರೇಕ್ ಹಾಕಿ ಉತ್ತಮ ಹೆಸರು ಗಳಿಸಿರುವ ಎಸ್‍ಪಿ ಅನೂಪ್ ಶೆಟ್ಟಿಯವರು ರಾಮನಗರದಲ್ಲೂ ಸಹ ಸಂಚಾರಿ ನಿಯಮಗಳ ಪಾಲನೆಗೆ ಖಡಕ್ ಆದೇಶ ನೀಡಿದ್ದಾರೆ. ಇದನ್ನೂ ಓದಿ:  ವಾಹನ ತಿದ್ದುಪಡಿ ಮಸೂದೆ ಪಾಸ್- ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ

    ಹೆಲ್ಮೆಟ್ ಕಡ್ಡಾಯವಾಗಿದ್ದರೂ ಸಹ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿರಲಿಲ್ಲ. ರೂಲ್ಸ್ ಬ್ರೇಕ್ ಮಾಡಿಕೊಂಡು ವಾಹನ ಸವಾರರು ಓಡಾಟ ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಶೇ.40 ರಷ್ಟು ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಪ್ರಾಣಹಾನಿ ತಪ್ಪಿಸುವ ದೃಷ್ಟಿಯಿಂದ ಹಾಗೂ ಸಂಚಾರಿ ನಿಯಮಗಳ ಪಾಲನೆಗಾಗಿ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದು ಎಸ್‍ಪಿ ಅನೂಪ್ ಎ.ಶೆಟ್ಟಿ ಅವರು ತಿಳಿಸಿದ್ದಾರೆ.

    ರಾಮನಗರ ಜಿಲ್ಲೆಯಾದ್ಯಂತ ಕಳೆದ 2013 ರಿಂದ ಇಲ್ಲಿಯ ತನಕ ರಸ್ತೆ ಅಪಘಾತದಲ್ಲಿ 300ಕ್ಕೂ ಹೆಚ್ಚು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳು ಲೆಕ್ಕವೇ ಇಲ್ಲದಂತಾಗಿದೆ. ಹೀಗಾಗಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

    ಸಂಚಾರಿ ನಿಯಮಗಳ ಪಾಲನೆ ಮಾಡದಿದ್ದಲ್ಲಿ ಹೊಸ ನಿಯಮದ ಪ್ರಕಾರ ದಂಡ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಸಂಚಾರಿ ಠಾಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ರಸ್ತೆಗಿಳಿದು ಕಾರ್ಯನಿರ್ವಹಿಸುವ ಮುನ್ನ ತಮ್ಮಲ್ಲಿನ ಹಣದ ಲೆಕ್ಕ ಕೊಡುವಂತೆ ಆಯಾ ಠಾಣೆಯ ಇನ್ಸ್‌ಪೆಕ್ಟರ್‌ಗಳು ಸೂಚನೆ ನೀಡಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದಾರೆ. ನೂತನ ಎಸ್‍ಪಿ ಅವರ ಕಾರ್ಯ ವೈಖರಿಯನ್ನ ಕೇಳಿ ತಿಳಿದವರು ಹೆಲ್ಮೆಟ್ ಕಡ್ಡಾಯಕ್ಕೆ ಸ್ವಾಗತ ಕೋರಿದ್ದಾರೆ ಎಂದು ಬೈಕ್ ಸವಾರರು ಹೇಳುತ್ತಿದ್ದಾರೆ.

  • ನೋ ಹೆಲ್ಮೆಟ್, ನೋ ಪೆಟ್ರೋಲ್- ಸಿಲಿಕಾನ್ ಸಿಟಿಯಲ್ಲಿ ಹೊಸ ರೂಲ್ಸ್

    ನೋ ಹೆಲ್ಮೆಟ್, ನೋ ಪೆಟ್ರೋಲ್- ಸಿಲಿಕಾನ್ ಸಿಟಿಯಲ್ಲಿ ಹೊಸ ರೂಲ್ಸ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ಎಂಬ ಹೊಸ ರೂಲ್ಸ್ ಜಾರಿಗೆ ತರಲು ಸಿದ್ಧತೆ ನಡೆದಿದೆ.

    ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಕಮಿಷನರ್, ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಶನಿವಾರ ಮತ್ತೊಮ್ಮೆ ಈ ವಿಚಾರವಾಗಿ ಮಾತುಕತೆ ನಡೆಸಿ ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ಸೋಮವಾರದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ನಿಯಮ ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ. ಬೆಂಗಳೂರಲ್ಲಿ ಬೈಕ್ ಅಪಘಾತದಿಂದ ಹೆಚ್ಚುತ್ತಿರುವ ಸಾವು-ನೋವು ತಡೆಗೆ ಈ ಹೊಸ ನಿಯಮವನ್ನು ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

  • ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.

    ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ  ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜಾಗೃತಿ ಮೂಡಿಸಲು ಕಾರಣವೇನು?:
    ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.

    ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.