Tag: ರೂರ್ಕಿ ಚರ್ಚ್

  • ರೂರ್ಕಿ ಚರ್ಚ್ ದಾಳಿ- ಇನ್ನೂ ಬಂಧಿಯಾಗದ ಆರೋಪಿಗಳು

    ರೂರ್ಕಿ ಚರ್ಚ್ ದಾಳಿ- ಇನ್ನೂ ಬಂಧಿಯಾಗದ ಆರೋಪಿಗಳು

    ಡೆಹ್ರಾಡೂನ್: ಉತ್ತರಾಖಂಡದ ರೂರ್ಕಿಯಲ್ಲಿ ಗುಂಪೊಂದು ಚರ್ಚ್ ಧ್ವಂಸಗೊಳಿಸಿದ ಪ್ರಕರಣ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದರೂ ಇನ್ನೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.

    ಧಾರ್ಮಿಕ ಮತಾಂತರವನ್ನು ನಡೆಸಲಾಗುತ್ತಿದೆ ಎಂದು ಗುಂಪೊಂದು ಉತ್ತರಾಖಂಡದಲ್ಲಿದ್ದ ಚರ್ಚ್ ಧ್ವಂಸ ಮಾಡಲಾಯಿತು. ಈ ಕುರಿತು ಡಿಜಿಪಿ ಅಶೋಕ್ ಕುಮಾರ್, ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ್ದರು. ಆದರೆ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಇದನ್ನೂ ಓದಿ:  ತಿರುಪತಿಗೆಂದು ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ – ಯುವಕನಿಗೆ 5 ವರ್ಷ ಜೈಲು!

    ಆರೋಪಿಗಳ ಹುಡುಕಾಟದಲ್ಲಿ ಪೊಲೀಸ್ ತಂಡಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿವೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಯಶಸ್ಸನ್ನು ಕಂಡಿಲ್ಲ. ಒಟ್ಟು 150-200 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಪ್ರಮುಖ 8 ಆರೋಪಿಗಳನ್ನು ದೂರಿನಲ್ಲಿ ಹೆಸರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕಾರಣ ಏನೇ ಇದ್ದರೂ ಯಾರ ಮೇಲೆ ಹಲ್ಲೆ ಮಾಡುವುದು, ವಿಧ್ವಂಸಕ ಘಟನೆಗಳು ‘ಸ್ವೀಕಾರಾರ್ಹವಲ್ಲ’. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಹಿನ್ನೆಲೆ ಚರ್ಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಶೋಕ್ ಕುಮಾರ್ ಹೇಳಿದರು. ಇದನ್ನೂ ಓದಿ:  ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳ ಸಾಧ್ಯತೆಯನ್ನು ಪರಿಗಣಿಸಿ ಉತ್ತರಾಖಂಡ ಸರ್ಕಾರವು ಡಿಸೆಂಬರ್ 31 ರವರೆಗೆ ಎಲ್ಲ 13 ಜಿಲ್ಲೆಗಳ ಡಿಎಮ್‍ಗಳಿಗೆ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಮೂರು ತಿಂಗಳುಗಳ ಕಾಲ ಬಳಸಲು ಅಧಿಸೂಚನೆಯನ್ನು ಹೊರಡಿಸಿತು.

    ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆನಂದ್ ಬರ್ಧನ್ ನೀಡಿರುವ ಅಧಿಸೂಚನೆಯ ಪ್ರಕಾರ, ಈ ಹಿಂದೆ ಉತ್ತರಾಖಂಡದ ಕೆಲವು ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಭವಿಷ್ಯದಲ್ಲಿ ರಾಜ್ಯದ ಇತರ ಭಾಗಗಳಲ್ಲಿ ಇಂತಹ ಘಟನೆಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.