Tag: ರೂಪಾಯಿ

  • ಡಾಲರ್ ಮುಂದೆ ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಡಾಲರ್ ಮುಂದೆ ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಮುಂಬೈ: ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕವಾಗಿ ಕುಸಿತ ಕಂಡಿದೆ. ಇಂದು 36 ಪೈಸೆ ಇಳಿಕೆ ಕಂಡಿದ್ದು ಒಂದು ಡಾಲರ್ ಮುಂದೆ ರೂಪಾಯಿ ಮೌಲ್ಯ 78.29ಗೆ ವಿನಿಮಯವಾಗಿದೆ.

    ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಕಂಡಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 120.23 ಡಾಲರ್ (9,338 ರೂಪಾಯಿ) ಗಳಷ್ಟಾಗಿದ್ದು, ಶೇ.14ರಷ್ಟು ಏರಿಕೆಯಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಕಳೆದ ಶುಕ್ರವಾರ 19 ಪೈಸೆ ಇಳಿಕೆಯಾಗಿ 1 ಡಾಲರ್ ಬೆಲೆ 77.93 ರೂ. ಗಳಾಗಿತ್ತು. ಆದರೆ ಏಷ್ಯಾ ಹಾಗೂ ಯುರೋಪಿಯನ್ ಕರೆನ್ಸಿಯ ಮೌಲ್ಯ ಕುಸಿತವಾಗಿದ್ದರಿಂದ 77.70 ರೂ.ದಾಟಿಲ್ಲ. ಆದ್ದರಿಂದ ರೂಪಾಯಿ ಮೌಲ್ಯ 78 ರೂಪಾಯಿಗಿಂತಲೂ ಕಡಿಮೆಯಾಗಲು ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ಆರ್‌ಬಿಐ ನೋಡಬೇಕಿದೆ ಎಂದು ಆರ್‌ಬಿಐ ಖಜಾನೆ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಕಳೆದ ತಿಂಗಳು ರೂಪಾಯಿ ಮೌಲ್ಯ 51 ಪೈಸೆಯಷ್ಟು ಸಾರ್ವಕಾಲಿಕ ಕುಸಿತ ಕಂಡಿತ್ತು. ಅಲ್ಲದೆ ನಾಲ್ಕು ದಿನಗಳ ಹಿಂದೆಯೂ 13 ಪೈಸೆ ಇಳಿಕೆಯಾಗಿ 77.81ಕ್ಕೆ ತಲುಪಿತ್ತು. ಇದೀಗ ಮತ್ತೆ ಕುಸಿತವಾಗಿದೆ.

  • ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಮುಂಬೈ: ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ನಿರಂತರ ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿಯ ಮೌಲ್ಯ ಗುರುವಾರ ಅಮೆರಿಕನ್ ಡಾಲರ್ ಎದುರು 77.81ರಷ್ಟಕ್ಕೆ ಕುಸಿತವಾಗಿದೆ.

    ಬುಧವಾರ ರೂಪಾಯಿ ಮೌಲ್ಯ 77.68ರಷ್ಟು ಇದ್ದು, ದಿನದ ಅಂತರದ (ಇಂಟ್ರಾ ಡೇ) ದಾಖಲೆಯ ಕನಿಷ್ಠ ಮಟ್ಟ 13 ಪೈಸೆಯಷ್ಟು ಕುಸಿದಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 77.81ಕ್ಕೆ ತಲುಪಿದೆ. ಇದನ್ನೂ ಓದಿ: ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಮೇ 4 ರಂದು ನಡೆದ ನಿಗದಿತ ಸಭೆಯಲ್ಲಿ ಆರ್‌ಬಿಐ 40 ಬಿಪಿಎಸ್ ಹೆಚ್ಚಿಸಿದ್ದು, ಇದು ದರದ ಏರಿಕೆಗೆ ಕಾರಣವಾಗಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 123.43 ಡಾಲರ್ ಇದ್ದು, 0.12 ರಷ್ಟು ಕುಸಿದಿದೆ. ಇದನ್ನೂ ಓದಿ: ಕೋಮು ದ್ವೇಷಭಾಷಣ – ಓವೈಸಿ, ನೂಪುರ್ ಶರ್ಮಾ ವಿರುದ್ಧ FIR

    ದೇಶೀಯ ಈಕ್ವಿಟಿ ಮಾರುಕಟ್ಟೆಯ ಎದುರು 30 ಷೇರುಗಳ ಸೆನ್ಸೆಕ್ಸ್ 10.05 ಪಾಯಿಂಟ್ ಅಥವಾ 0.02 ರಷ್ಟು ಹೆಚ್ಚಿ 54,902.54 ರಲ್ಲಿ ವಹಿವಾಟು ನಡೆಸುತ್ತಿದೆ. ಆದರೆ ನಿಫ್ಟಿ 5.65 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಮುನ್ನಡೆ ಸಾಧಿಸಿ ಶೇಕಡಾ 0.03 ತಲುಪಿದೆ.

  • ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಮುಂಬೈ: ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು 51 ಪೈಸೆ ಇಳಿಕೆ ಕಂಡಿದ್ದು, ಒಂದು ಡಾಲರ್‌ ಮುಂದೆ ರೂಪಾಯಿ ಮೌಲ್ಯ 77.42 ವಿನಿಮಯವಾಗಿದೆ.

    ಹಣದುಬ್ಬರವನ್ನು ತಡೆಗಟ್ಟಲು ಅಮೆರಿಕ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಏರಿಕೆ ಮಾಡಿತ್ತು. ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬಿದ್ದಿದ್ದು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಕಳೆದ ಶುಕ್ರವಾರ ರೂಪಾಯಿ ಮೌಲ್ಯ 55 ಪೈಸೆ ಇಳಿಕೆ ಕಂಡು 76.90ಗೆ ಕೊನೆಯಾಗಿತ್ತು. ವಿದೇಶ ಬಂಡವಾಳದ ಹೊರ ಹರಿವು, ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.

    ರಷ್ಯಾ ಉಕ್ರೇನ್‌ ಯುದ್ಧದಿಂದ ತೈಲ ಬೆಲೆ ಏರಿಕೆಯಾಗಿದೆ. ಸೋಮವಾರ ಮತ್ತಷ್ಟು ದರ ಏರಿಕೆಯಾಗಿದ್ದು ಒಂದು ಬ್ಯಾರೆಲ್‌ ತೈಲದ ದರ 112.25 ಡಾಲರ್‌ಗೆ(8,690 ರೂ.) ಏರಿಕೆಯಾಗಿದೆ. ಇದನ್ನೂ ಓದಿ: ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಚೀನಾದಲ್ಲಿ ಕೊರೊನಾ ಲಾಕ್‌ಡೌನ್‌, ತೈಲ ಬೆಲೆ ಏರಿಕೆ, ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದ್ದು ಬಿಎಸ್‌ಇ ಸೆನ್ಸೆಕ್ಸ್‌ ಇಂದು 364.91 ಅಂಶ ಕುಸಿದಿದ್ದು 54,470 ರಲ್ಲಿ ಕೊನೆಯಾಗಿದೆ.

  • ರೂಪಾಯಿ ನೀಡಿ ರಷ್ಯಾದಿಂದ ತೈಲ ಖರೀದಿ ಮಾಡಲ್ಲ: ಕೇಂದ್ರ ಸರ್ಕಾರ

    ರೂಪಾಯಿ ನೀಡಿ ರಷ್ಯಾದಿಂದ ತೈಲ ಖರೀದಿ ಮಾಡಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ರಷ್ಯಾದ ಜೊತೆ ಕಚ್ಚಾ ತೈಲವನ್ನು ರೂಪಾಯಿ ಮೂಲಕ ಖರೀದಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಭಾರತದ ತೈಲ ಕಂಪನಿಗಳು ರೂಪಾಯಿ ಮೂಲಕ ಖರೀದಿಸುವ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಮತ್ತು ಯಾವುದೇ ಪ್ರಸ್ತಾಪ ಇಲ್ಲ. ರಷ್ಯಾ ಅಲ್ಲದೇ ಯಾವುದೇ ದೇಶಗಳಿಂದ ರೂಪಾಯಿ ನೀಡಿ ತೈಲ ಖರೀದಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ಉಕ್ರೇನ್‌ ಮೇಲೆ ಯುದ್ಧ ಆರಂಭ ಮಾಡಿದ್ದಕ್ಕೆ ಅಮೆರಿಕ, ಯುರೋಪ್‌ ದೇಶಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧವನ್ನು ಹೇರಿದೆ. ಹೀಗಾಗಿ ಭಾರತ ಮತ್ತು ರಷ್ಯಾ ಮಧ್ಯೆ ರೂಪಾಯಿ- ರುಬೆಲ್‌ ವ್ಯವಹಾರ ನಡೆಯಬಹುದು ಎಂದು ವರದಿಯಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ರೂಪಾಯಿ ಮೂಲಕ ತೈಲ ಖರೀದಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

  • ಕೊರೊನಾ ಟೈಮ್‍ನಲ್ಲಿ ಮದುವೆ ಕ್ಯಾನ್ಸಲ್ ಮಾಡಿದ್ರೆ ಸಿಗಲಿದೆ 10 ಲಕ್ಷ!

    ಕೊರೊನಾ ಟೈಮ್‍ನಲ್ಲಿ ಮದುವೆ ಕ್ಯಾನ್ಸಲ್ ಮಾಡಿದ್ರೆ ಸಿಗಲಿದೆ 10 ಲಕ್ಷ!

    ನವದೆಹಲಿ: ಕೊರೊನಾ, ಓಮಿಕ್ರಾನ್ ಸೋಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಟೈಮ್‍ನಲ್ಲಿ ಮದುವೆ ಕ್ಯಾನ್ಸಲ್ ಮಾಡಿಕೊಂಡರೇ 10 ಲಕ್ಷ ರೂಪಾಯಿ ಸಿಗಲಿದೆ.

    ರಾಜಧಾನಿ ದೆಹಲಿಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇದರ ಅಡಿಯಲ್ಲಿ ದೆಹಲಿಯಲ್ಲಿ ಮದುವೆ ಅಥವಾ ಯಾವುದೇ ರೀತಿಯ ಕಾರ್ಯಕ್ರಮಕ್ಕಾಗಿ 20 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಆರ್ಥಿಕ ನಷ್ಟದ ನಡುವೆಯೂ ಅನೇಕ ಜನರು ಮದುವೆಯನ್ನು ರದ್ದುಗೊಳಿಸಲು ಪ್ರಾರಂಭಿಸಿದ್ದಾರೆ. ಕೊರೊನಾ ಸಮಯದಲ್ಲಿ ಮದುವೆಯನ್ನು ರದ್ದುಗೊಳಿಸಿದರೆ ಈಗ ನೀವು 10 ಲಕ್ಷಗಳ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ.

    ಸಿಗಲಿದೆ ಮದುವೆಯ ವಿಮೆ : ಹೆಚ್ಚುತ್ತಿರುವ ಕೊರೊನಾ ಪ್ರಕರಣದ ದೃಷ್ಟಿಯಿಂದ, ಹೊಸ ಮಾರ್ಗಸೂಚಿಗಳಿಂದಾಗಿ, ಈ ವರ್ಷವೂ ಅನೇಕ ಮದುವೆಗಳನ್ನು ರದ್ದುಗೊಳಿಸಬಹುದು. ಅದೇ ಸಮಯದಲ್ಲಿ, ಬ್ಯಾಂಕ್ವೆಟ್ ಹಾಲ್, ಮದುವೆ ಹಾಲ್, ಫಾರ್ಮ್ ಹೌಸ್ ಇತ್ಯಾದಿಗಳ ಬುಕಿಂಗ್ ಲಕ್ಷಗಳಲ್ಲಿ ನಡೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ಬುಕಿಂಗ್ ಅನ್ನು ರದ್ದುಗೊಳಿಸಿದ ನಂತರ ಹಣವನ್ನು ಹಿಂತಿರುಗಿಸಲು ನಿರಾಕರಿಸುತ್ತಾರೆ. ಇಂತಹ ಸಂದರ್ಭಗಳನ್ನು ಎದುರಿಸಲು ದೇಶದ ಹಲವು ಕಂಪನಿಗಳು ವಿವಾಹ ವಿಮೆಯನ್ನು ನೀಡುತ್ತವೆ.

    ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ?: ನೀವು ಎಷ್ಟು ವಿಮೆ ಮಾಡಿದ್ದೀರಿ ಎಂಬುದರ ಆಧಾರದ ಮೇಲೆ ಮದುವೆಯ ವಿಮಾ ಮೊತ್ತವನ್ನು ನಿರ್ಧರಿಸಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಪ್ರಮುಖ ವಿಷಯವೆಂದರೆ ನೀವು ಮದುವೆಯ ದಿನಾಂಕವನ್ನು ಬದಲಾಯಿಸಿದ್ದರೂ ಸಹ, ನೀವು ಕ್ಲೈಮ್ ಅನ್ನು ಕ್ಲೈಮ್ ಮಾಡಬಹುದು. ಇದರಲ್ಲಿ, ನಿಮ್ಮ ವಿಮಾ ಮೊತ್ತದ 0.7 ಪ್ರತಿಶತದಿಂದ 2 ಪ್ರತಿಶತದವರೆಗೆ ಪ್ರೀಮಿಯಂ ಅನ್ನು ವಿಧಿಸಲಾಗುತ್ತದೆ. ಅಂದರೆ, ನೀವು 10 ಲಕ್ಷ ರೂಪಾಯಿಗಳ ವಿವಾಹ ವಿಮೆಯನ್ನು ಪಡೆದಿದ್ದರೆ, ನೀವು 7,500 ರಿಂದ 15,000 ರೂಪಾಯಿಗಳ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

    ಅದರ ಪ್ರಕ್ರಿಯೆ ಏನು?: ವಿಮೆಯನ್ನು ತೆಗೆದುಕೊಳ್ಳುವ ಮೊದಲು, ನೀವು ಮದುವೆಯ ವೆಚ್ಚದ ಬಗ್ಗೆ ಎಲ್ಲಾ ಮಾಹಿತಿಯನ್ನು ವಿಮಾ ಏಜೆನ್ಸಿಗೆ ನೀಡಬೇಕು.
    – ನಿಮಗೆ ನಷ್ಟವಾದ ತಕ್ಷಣ, ತಕ್ಷಣವೇ ನಿಮ್ಮ ವಿಮಾ ಕಂಪನಿಗೆ ತಿಳಿಸಿ.
    – ನಿಮ್ಮ ಯಾವುದೇ ವಸ್ತುಗಳು ಕಳ್ಳತನವಾಗಿದ್ದರೆ, ಅದರ ಬಗ್ಗೆ ಪೊಲೀಸರಿಗೆ ತಿಳಿಸಿ ಮತ್ತು ಎಫ್‍ಐಆರ್ ಪ್ರತಿಯನ್ನು ವಿಮಾ ಕಂಪನಿಗೆ ಹಸ್ತಾಂತರಿಸಿ.
    – ಕ್ಲೈಮ್ ಮಾಡಲು ಫಾರ್ಮ್ ಅನ್ನು ಭರ್ತಿ ಮಾಡಿ, ಕಂಪನಿಯೊಂದಿಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿ.
    – ನಿಮ್ಮ ವಿಮಾ ಕಂಪನಿಯು ತನ್ನ ತನಿಖೆಗಾಗಿ ಪ್ರತಿನಿಧಿಯನ್ನು ಕಳುಹಿಸುವ ಮೂಲಕ ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ, ನಂತರ ಹಕ್ಕು ಪಡೆದ ಹಣವನ್ನು ಮಾತ್ರ ಹಿಂತಿರುಗಿಸಲಾಗುತ್ತದೆ.
    – ನೀವು ಮಾಡಿದ ಕ್ಲೈಮ್ ನಿಜವೆಂದು ಸಾಬೀತಾದರೆ, ವಿಮಾ ಕಂಪನಿಯು ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸುತ್ತದೆ.
    – ತಪ್ಪಾಗಿದ್ದರೆ, ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ.
    – ವಿಮಾ ಕಂಪನಿಯು ನೇರವಾಗಿ ಮದುವೆಯ ಸ್ಥಳ ಅಥವಾ ಮಾರಾಟಗಾರರಿಗೆ ಮೊತ್ತವನ್ನು ನೀಡಬಹುದು.
    – ಯಾವುದೇ ರೀತಿಯಲ್ಲಿ ಪಾಲಿಸಿದಾರನು ಕ್ಲೈಮ್ ಮಾಡಿದ ಮೊತ್ತದಿಂದ ಸಂತೋಷವಾಗಿರದಿದ್ದರೆ, ಅವನು ನೇರವಾಗಿ ನ್ಯಾಯಾಲಯಕ್ಕೆ ಹೋಗಿ ತನ್ನ ಪ್ರಕರಣವನ್ನು ಇಟ್ಟುಕೊಳ್ಳಬಹುದು.
    – ಅಪಘಾತದ 30 ದಿನಗಳಲ್ಲಿ ಮದುವೆಯ ವಿಮೆ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲಾಗುತ್ತದೆ.

    ಇವುಗಳಿಗೆ ವಿಮೆ ಸಿಗಲಿದೆ: ಮುಂಗಡವಾಗಿ ಬುಕ್ ಮಾಡಿದ ಯಾವುದೇ ಹಾಲ್ ಅಥವಾ ರೆಸಾರ್ಟ್‍ಗೆ ಮುಂಗಡ ಹಣ, ಟ್ರಾವೆಲ್ ಏಜೆನ್ಸಿಗಳಿಗೆ ಮುಂಗಡ ಹಣವನ್ನು ನೀಡಲಾಗಿದೆ. ಮದುವೆಯ ಕಾರ್ಡ್‍ಗಳ ಮುದ್ರಣದಲ್ಲಿ ಪಾವತಿಸಿದ ಹಣ. ಅಲಂಕಾರ ಮತ್ತು ಸಂಗೀತಕ್ಕಾಗಿ ಪಾವತಿಸಿದ ಹಣ. ಮದುವೆಯ ಸ್ಥಳದ ಸೆಟ್‍ಗಳಲ್ಲಿ ಇತರ ಅಲಂಕಾರಗಳಿಗೆ ಪಾವತಿಸಿದ ಹಣಕ್ಕೆ ವಿಮೆ ಸಿಗಲಿದೆ.

  • ಚಲಾವಣೆಗೆ ಬರಲಿದೆ 20ರೂ. ನಾಣ್ಯ

    ಚಲಾವಣೆಗೆ ಬರಲಿದೆ 20ರೂ. ನಾಣ್ಯ

    ಸಾಂದರ್ಭಿಕ ಚಿತ್ರ

    ನವದೆಹಲಿ: 20 ರೂಪಾಯಿಯ 12 ಭುಜಾಕೃತಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಬುಧವಾರ ಕೇಂದ್ರ ಹಣಕಾಸು ಸಚಿವಾಲಯ ಘೋಷಣೆ ಮಾಡಿದೆ.

    20 ರೂಪಾಯಿ ಹೊಸ ನಾಣ್ಯದ 27 ಮಿ.ಮೀ ಇರಲಿದೆ. 20ರೂ. ನಾಣ್ಯದ ಹೊರ ಉಂಗುರವನ್ನು ಶೇ.65 ತಾಮ್ರ, ಶೇ.15 ಸತು ಮತ್ತು ಶೇ.20 ನಿಕ್ಕಲ್ ಬಳಸಿ ತಯಾರಿಸಲಾಗುತ್ತದೆ. ಇನ್ನೂ ಒಳ ಉಂಗುರ ಅಥವಾ ನಾಣ್ಯದ ಕೇಂದ್ರಭಾಗದಲ್ಲಿ ತಾಮ್ರ ಶೇ.75, ಸತು ಶೇ.20 ಹಾಗೂ ನಿಕ್ಕಲ್ ಶೇ.5 ರಷ್ಟು ಬಳಕೆ ಮಾಡಲಾಗುತ್ತದೆ.

    20 ರೂಪಾಯಿಯ ಒಂದು ನಾಣ್ಯ 8.54 ಗ್ರಾಂ ತೂಕ ಹೊಂದಿರುತ್ತದೆ. ಹೊಸ 20 ರೂ. ನಾಣ್ಯವು 10ರೂ. ನಾಣ್ಯಕ್ಕಿಂತ ವಿಭಿನ್ನವಾಗಿದ್ದು, ಈ ನಾಣ್ಯವೂ ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ.

    ನಾಣ್ಯದ ವಿಶೇಷತೆಗಳು?
    ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ ಮತ್ತು ಅಶೋಕನ “ಸತ್ಯಮೇವ ಜಯತೆ” ವಾಕ್ಯವನ್ನು ಇರಲಿದೆ. ಇನ್ನೂ ನಾಣ್ಯದ ಎಡಭಾಗದಲ್ಲಿ ‘ಭಾರತ್’ ಎಂದು ಹಿಂದಿ ಭಾಷೆಯಲ್ಲಿದ್ದು, ‘ಇಂಡಿಯಾ’ ಎಂದು ಇಂಗ್ಲೀಷ್ ನಲ್ಲಿ ಬಲಭಾಗದಲ್ಲಿ ಬರೆಯಲಾಗುತ್ತದೆ. ಇನ್ನೂ ನಾಣ್ಯದ ಹಿಂಭಾಗದಲ್ಲಿ ರೂಪಾಯ ಚಿಹ್ನೆಯ ಕೆಳಗೆ ನಾಣ್ಯದ ಮೌಲ್ಯವನ್ನು ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ದೇಶದ ಕೃಷಿ ಪ್ರಾಮುಖ್ಯತೆಯನ್ನು ಸಾರಲು ನಾಣ್ಯದ ಎಡಭಾಗದಲ್ಲಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರ ಸಹ ಇರಲಿದೆ.

    ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿ ಎಂದು ಬರೆಯಲಾಗಿದ್ದು, ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಸಹ ಟಂಕಿಸಲಾಗುತ್ತದೆ. ಮೊದಲ ಬಾರಿಗೆ 2009 ರ ಮಾರ್ಚ್ ನಲ್ಲಿ 10ರೂ. ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ನಂತರ 10 ವರ್ಷಗಳ ಬಳಿಕ ನೂತನ 20ರೂ. ನಾಣ್ಯ ಬಿಡುಗಡೆಯಾಗುತ್ತಿದೆ.

    20 ರೂ. ನಾಣ್ಯ ಘೋಷಣೆಯಾದರೂ ಸದ್ಯ ಚಲಾವಣೆಯಲ್ಲಿರುವ ಎಲ್ಲ ನಾಣ್ಯಗಳು ಚಲಾವಣೆಯಲ್ಲಿರುತ್ತದೆ ಎಂದು ಆರ್‌ಬಿಐ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರ್‌ಬಿಐ ಬಿಡುಗಡೆ ಮಾಡಲಿದೆ 350 ರೂ. ಮೌಲ್ಯದ ನಾಣ್ಯ!

    ಆರ್‌ಬಿಐ ಬಿಡುಗಡೆ ಮಾಡಲಿದೆ 350 ರೂ. ಮೌಲ್ಯದ ನಾಣ್ಯ!

    ನವದೆಹಲಿ: ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ವಿಶೇಷ ಸೂಚಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರ ತರುತ್ತಿದೆ.

    ಆರ್‌ಬಿಐ ನಾಣ್ಯದ ಕುರಿತು ವಿವರಣೆಗಳ ಬಗ್ಗೆ ಮಾಹಿತಿ ನೀಡಿದೆ. ನಾಣ್ಯದ ಸುತ್ತಳತೆ 44 ಮಿ.ಮೀ ಇದ್ದು, ಇದರ ತಯಾರಿಕೆಯಲ್ಲಿ ತವರ(05%), ತಾಮ್ರ(40%), ಬೆಳ್ಳಿ (50%), ಬಿಳಿ ಲೋಹ(5%) ಬಳಸಲಾಗಿದೆ ಎಂದು ತಿಳಿಸಿದೆ.

    ನಾಣ್ಯದ ಒಂದು ಮುಖ ಭಾಗದಲ್ಲಿ ಅಶೋಕ ಸ್ತಂಭದ ಚಿತ್ರವಿದ್ದು, ಅದರ ಕೆಳಗೆ ಸತ್ಯಮೇವ ಜಯತೆ ಘೋಷಣೆ, ಎಡ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ `ಭಾರತ’ ಎಂದು ಹಾಗೂ ಬಲ ಭಾಗದಲ್ಲಿ ಇಂಗ್ಲೀಷ್ ಭಾಷೆಯಲ್ಲಿ `ಇಂಡಿಯಾ’ ಬರೆಯಲಾಗಿರುತ್ತದೆ. ಅಶೋಕ ಸ್ತಂಭದ ಕೆಳಗೆ ರೂಪಾಯಿ ಲಾಂಛನ ಹಾಗೂ ನಾಣ್ಯದ ಮೌಲ್ಯವನ್ನು ತಿಳಿಸುವ ‘350’ ಚಿಹ್ನೆ ಇರುತ್ತದೆ ಎಂದು ತಿಳಿಸಿದೆ.

    ನಾಣ್ಯದ ಮತ್ತೊಂದು ಭಾಗದಲ್ಲಿ “ತಕ್ತ ಶ್ರೀ ಹರಿಮಂದಿರ್ ಜಿ ಪಟ್ನ ಸಾಹಿಬ್” ಚಿತ್ರ. ಮೇಲ್ಭಾಗದಲ್ಲಿ “ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶ ಉತ್ಸವ” ಎಂದು ದೇವನಾಗರಿ ಅಂಕಿ ಮತ್ತು ಕೆಳಗೆ ಇಂಗ್ಲೀಷ್ ನಲ್ಲಿ ಬರೆಯಲಾಗಿರುತ್ತದೆ. ಹಾಗೆಯೇ ಚಿತ್ರದ ಎಡ ಮತ್ತು ಬಲ ಭಾಗದಲ್ಲಿ `1666′, `2016′ ಎಂದು ನಮೂದಿಸಲಾಗಿರುತ್ತದೆ ಎಂದು ತಿಳಿಸಿದೆ.

    ಪ್ರಮುಖವಾಗಿ ನಾಣ್ಯ 34.65 ಗ್ರಾಂ ನಿಂದ 35.35 ಗ್ರಾಂ ತೂಕ ಹೊಂದಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

    1666 ಡಿಸೆಂಬರ್ 22ರಂದು ಪಾಟ್ನಾದಲ್ಲಿ ಜನಿಸಿದ್ದ ಗುರು ಗೋಬಿಂದ್ ಸಿಂಗ್ 1708 ಅಕ್ಟೋಬರ್ 8ರಂದು ಮಹಾರಾಷ್ಟ್ರದ ನಾಂದೇಡ್ ನಲ್ಲಿ ವಿಧಿವಶರಾಗಿದ್ದರು.