Tag: ರೂಪರ್ಟ್ ಮುರ್ಡೋಕ್

  • ಕೊನೆಯದ್ದು ಅಂತ 92ನೇ ವಯಸ್ಸಿನಲ್ಲಿ ಪ್ಲಾನ್‌ ಮಾಡಿದ್ದ 5ನೇ ಮದುವೆ ರದ್ದುಪಡಿಸಿದ ಮುರ್ಡೋಕ್

    ಕೊನೆಯದ್ದು ಅಂತ 92ನೇ ವಯಸ್ಸಿನಲ್ಲಿ ಪ್ಲಾನ್‌ ಮಾಡಿದ್ದ 5ನೇ ಮದುವೆ ರದ್ದುಪಡಿಸಿದ ಮುರ್ಡೋಕ್

    ನ್ಯೂಯಾರ್ಕ್‌: ಶತಕೋಟಿ ಉದ್ಯಮಿ, ಮಾಧ್ಯಮ ದೊರೆ 92 ವರ್ಷದ ರೂಪರ್ಟ್ ಮುರ್ಡೋಕ್ (Rupert Murdoch) 5ನೇ ಮದುವೆಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಿದ್ದಾರೆ.

    ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ (Jerry Hall) ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ (Ann Lesley Smith) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಉಳಿದ ಜೀವನ ಆಕೆಯೊಂದಿಗೆ ಕಳೆಯಲು ನಿರ್ಧರಿಸಿದ್ದರು. ಆದರೆ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಆದ ಒಂದೇ ವಾರದಲ್ಲಿ ಮದುವೆ ಪ್ಲಾನ್‌ ಕೈಬಿಟ್ಟಿದ್ದಾರೆ.

    ಕಳೆದ ತಿಂಗಳು ಮುರ್ಡೋಕ್‌ ಮದುವೆಯಾಗಲು ಉತ್ಸುಕರಾಗಿದ್ದರು. ಆದರೀಗ ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣಕ್ಕೆ ಮದುವೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ, ಅವರು ಅಹಿತಕರವಾಗಿದ್ದಾರೆ ಎಂದು ಮುರ್ಡೋಕ್ ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

    ಇತ್ತೀಚೆಗೆ ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಅವರು, ನಾನು ಪ್ರೀತಿಯಲ್ಲಿ ಬೀಳಲು ತುಂಬಾ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯದು ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಮುರ್ಡೋಕ್ ಹೇಳಿದ್ದರು. 

    ಫಾಕ್ಸ್ ನ್ಯೂಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಟ್ಯಾಬ್ಲಾಯ್ಡ್ ಪತ್ರಿಕೆ ದಿ ಸನ್ ಮಾಲೀಕರಾಗಿರುವ ಮುರ್ಡೋಕ್‌ ಮೊದಲ 3 ಪತ್ನಿಯರಿಂದ 6 ಮಕ್ಕಳನ್ನು ಪಡೆದಿದ್ದಾರೆ. 14 ವರ್ಷದ ಹಿಂದೆ ಸ್ಮಿತ್‌ ವಿಧವೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ವೇಳೆ ಸಂಕ್ಷಿಪ್ತ ಸಂವಾದ ನಡೆಸಿದ ಎರಡು ವಾರದ ಬಳಿಕ ಮುರ್ಡೋಕ್‌ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: 92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

    ಮಾಡಲ್‌ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್‌ ಮದುವೆಯಾಗಿ 6 ವರ್ಷ ಸಂಸಾರ ನಡೆಸಿ ಕಳೆದ ವರ್ಷ ಡಿವೋರ್ಸ್‌ ನೀಡಿದ್ದರು. ಹಾಲ್‌ಗೂ ಮುನ್ನ 1999 ರಿಂದ 2013ರ ವರೆಗೆ ವೆಂಡಿ ಡೆಂಗ್‌, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್‌, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್‌ ಜೊತೆ ಮುರ್ಡೋಕ್‌ ಜೀವನ ನಡೆಸಿದ್ದರು.

    ರೂಪರ್ಟ್ ಮುರ್ಡೋಕ್ ಫಾಕ್ಸ್‌ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್‌ ಬ್ರಾಡ್‌ಕಾಸ್ಟಿಂಗ್‌, ಫಾಕ್ಸ್‌ ಸ್ಪೋರ್ಟ್ಸ್‌, ಫಾಕ್ಸ್‌ ಬ್ಯುಸಿನೆಸ್‌ ಹಾಗೂ ಫಾಕ್ಸ್‌ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ.

  • 92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

    92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

    ನ್ಯೂಯಾರ್ಕ್‌: ಶತಕೋಟಿ ಉದ್ಯಮಿ, ಮಾಧ್ಯಮ ದೊರೆ 92 ವರ್ಷದ ರೂಪರ್ಟ್ ಮುರ್ಡೋಕ್ (Rupert Murdoch) ಐದನೇ ಮದುವೆಯಾಗಿದ್ದಾರೆ.

    ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ (Jerry Hall) ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ (Ann Lesley Smith)ಅವರೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ.

    ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರೀತಿಯಲ್ಲಿ ಬೀಳಲು ತುಂಬಾ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯದು ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಈ ಜೋಡಿ ಬೇಸಿಗೆಯಲ್ಲಿ ಮದುವೆಯಾಗಲು ನಿರ್ಧಾರ ಮಾಡಿದೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಮುರ್ಡೋಕ್ ಹೇಳಿದ್ದಾರೆ.

    ಫಾಕ್ಸ್ ನ್ಯೂಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಟ್ಯಾಬ್ಲಾಯ್ಡ್ ಪತ್ರಿಕೆ ದಿ ಸನ್ ಮಾಲೀಕರಾಗಿರುವ ಮುರ್ಡೋಕ್‌ ಮೊದಲ ಮೂರು ಪತ್ನಿಯರಿಂದ 6 ಮಕ್ಕಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಫಾಕ್ಸ್‌ಕಾನ್ ಸೇರಿದಂತೆ 18 ಹೂಡಿಕೆ ಪ್ರಸ್ತಾವನೆಗಳಿಗೆ ಎಸ್‌ಹೆಚ್ಎಲ್‌ಸಿಸಿ ಸಭೆಯಲ್ಲಿ ಅನುಮೋದನೆ

    14 ವರ್ಷದ ಹಿಂದೆ ಸ್ಮಿತ್‌ ವಿಧವೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ವೇಳೆ ಸಂಕ್ಷಿಪ್ತ ಸಂವಾದ ನಡೆಸಿದ ಎರಡು ವಾರದ ಬಳಿಕ ಮುರ್ಡೋಕ್‌ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು.

    ಮಾಡಲ್‌ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್‌ ಮದುವೆಯಾಗಿ ಆರು ವರ್ಷ ಸಂಸಾರ ನಡೆಸಿ ಕಳೆದ ವರ್ಷ ಡಿವೋರ್ಸ್‌ ನೀಡಿದ್ದರು. ಹಾಲ್‌ಗೂ ಮುನ್ನ 1999 ರಿಂದ 2013ರವರೆಗೆ ವೆಂಡಿ ಡೆಂಗ್‌, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್‌, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್‌ ಜೊತೆ ಮುರ್ಡೋಕ್‌ ಜೀವನ ನಡೆಸಿದ್ದರು.

    ರುಪೋರ್ಟ್‌ ಮುರ್ಡೋಕ್‌ ಫಾಕ್ಸ್‌ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್‌ ಬ್ರಾಡ್‌ಕಾಸ್ಟಿಂಗ್‌, ಫಾಕ್ಸ್‌ ಸ್ಪೋರ್ಟ್ಸ್‌, ಫಾಕ್ಸ್‌ ಬ್ಯುಸಿನೆಸ್‌ ಹಾಗೂ ಫಾಕ್ಸ್‌ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ.

  • 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    ಲಂಡನ್‌: 6 ವರ್ಷದ ಹಿಂದೆ ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ಇದೀಗ ತಮ್ಮ 4ನೇ ಪತ್ನಿ ನಟಿ ಜೆರ್ರಿ ಹಾಲ್‍ಗೆ ವಿಚ್ಛೇದನ ನೀಡುವ ಮೂಲಕ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.

    2016ರ ಮಾರ್ಚ್‍ನಲ್ಲಿ ಮಧ್ಯ ಲಂಡನ್‍ನಲ್ಲಿ ನಡೆದ ಸಮಾರಂಭದಲ್ಲಿ 91 ವರ್ಷದ ರೂಪರ್ಟ್ ಮುರ್ಡೋಕ್ 65 ವರ್ಷದ ಜೆರ್ರಿ ಹಾಲ್ ಅವರನ್ನು ಮದುವೆ ಆಗಿದ್ದರು. ಹಿಂದಿನ ವರ್ಷವಷ್ಟೇ ರೂಪರ್ಟ್ ಮುರ್ಡೋಕ್‍ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಇದೀಗ ಜೆರ್ರಿಗೆ ವಿಚ್ಛೇದನವನ್ನು ನೀಡಿದ್ದಾರೆ. ಯಾವ ಕಾರಣಕ್ಕಾಗಿ ವಿಚ್ಛೇದನ ನೀಡಿದ್ದಾರೆ ಎನ್ನುವ ವಿಷಯ ಇನ್ನೂ ಬಹಿರಂಗವಾಗಿಲ್ಲ. ಈ ವಿಚ್ಛೇದನದ ಬಗ್ಗೆ ಮುರ್ಡೋಕ್‍ನ ವಕ್ತಾರ ಬ್ರೈಸ್ ಟಾಮ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ರೂಪರ್ಟ್ ಮುರ್ಡೋಕ್ ಫ್ಯಾಕ್ಸ್ ನ್ಯೂಸ್ ಚಾನೆಲ್ ಹಾಗೂ ವಾಲ್ ಸ್ಟ್ರೀಟ್ ಜರ್ನಲ್‍ನ ನ್ಯೂಸ್ ಕಾರ್ಪ್ ಮಾಲೀಕತ್ವವನ್ನು ಹೊಂದಿದ್ದಾರೆ. ಮುರ್ಡೋಕ್ ನ್ಯೂಸ್ ಕಾರ್ಪ್ ಮತ್ತು ಫಾಕ್ಸ್ ಕಾರ್ಪ್ ಅನ್ನು ರೆನೋ, ನೆವಾಡಾ ಮೂಲದ ಫ್ಯಾಮಿಲಿ ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ. ಅದರಲ್ಲಿ ಶೇ. 40 ರಷ್ಟು ಷೇರನ್ನು ಹೊಂದಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಟ ಕೂಸು: ದಿನೇಶ್ ಗುಂಡೂರಾವ್

    ಮುರ್ಡೋಕ್ ಈವರೆಗೆ 3ಜನ ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಅವರಲ್ಲಿ ಮುರ್ಡೋಕ್ ಈ ಹಿಂದೆ ಉದ್ಯಮಿ ವೆಂಡಿ ಡೆಂಗ್ ಅವರನ್ನು ವಿವಾಹವಾದರು. ಅವರೊಂದಿಗೂ ಮದುವೆಯಾಗಿ 14 ವರ್ಷಗಳ ನಂತರ ಅಂದರೆ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಹಾಗೇ 1999ರಲ್ಲಿ ತಮ್ಮ ಎರಡನೇ ಪತ್ನಿ ಅನ್ನಾ ಮುರ್ಡೋಕ್ ಮಾನ್, ಸ್ಕಾಟಿಷ್ ಪತ್ರಕರ್ತೆಯಿಂದ ಬೇರ್ಪಟ್ಟಿದ್ದರು. ಅವರಿಗೂ 3 ಮಕ್ಕಳಿದ್ದಾರೆ. ಮೊದಲ ಪತ್ನಿ ಪೆಟ್ರೀಷಿಯಾ ಬೂಕರ್, ಮಾಜಿ ಫ್ಲೈಟ್ ಅಟೆಂಡೆಂಟ್‍ಗೆ ಮಗಳಿದ್ದು, 1966ರಲ್ಲಿ ವಿಚ್ಛೇದನ ಪಡೆದರು. ಇದನ್ನೂ ಓದಿ: ಶವದ ಮುಂದೆ ಕೋತಿ ಕಿರಿಕ್ – ಅಂತ್ಯ ಸಂಸ್ಕಾರಕ್ಕೆ ಬಿಡದೇ ಕಾಟ

    Live Tv