Tag: ರೂಂ

  • ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

    ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

    ಮಂಗಳೂರು: ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆ.ಎಸ್.ರಾವ್ ರೋಡ್ (K S Rao Road Mangaluru) ಬಳಿ ನಡೆದಿದೆ.

    ಮೃತರನ್ನು ದೇವೇಂದ್ರ(48), ನಿರ್ಮಲಾ(48), ಚೈತ್ರಾ(09) ಹಗೂ ಚೈತನ್ಯ (09) ಎಂದು ಗುರುತಿಸಲಾಗಿದೆ. ಕೆ.ಎಸ್.ರಾವ್ ರೋಡಿನ ಕರುಣಾ ಲಾಡ್ಜ್ ನಲ್ಲಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತರು ಮೈಸೂರು ಮೂಲದ ವಾಣಿವಿಲಾಸ ಬಡಾವಣೆ ನಿವಾಸಿಗಳಾಗಿದ್ದು, ಮಾ. 27ರಂದು ಮಂಗಳೂರಿನಲ್ಲಿ ಒಂದು ದಿನಕ್ಕಾಗಿ ರೂಂ ಬುಕ್ ಮಾಡಿದ್ದರು. ಬಳಿಕ ಅದನ್ನು ಎರಡು ದಿನಕ್ಕಾಗಿ ವಿಸ್ತರಣೆ ಮಾಡಿದ್ದರು. ಗುರುವಾರ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಇಂದು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ.

    ಸಾಲಬಾಧೆ, ಸಾಲ ತೀರಿಸಲಾಗದೇ ಸಾಲಗಾರರ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ; ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ – ತಿಂಗಳಲ್ಲಿ 2ನೇ ಘಟನೆ

    ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮದ್ವೆ ಮನೆಯಲ್ಲಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆ ದಂಗಾದ ಸಂಬಂಧಿಕರು!

    ಮದ್ವೆ ಮನೆಯಲ್ಲಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆ ದಂಗಾದ ಸಂಬಂಧಿಕರು!

    ಲಕ್ನೋ: ಮದುವೆಗೆ ಬಂದ ಅತಿಥಿಯೊಬ್ಬರು ಮದುವೆಮನೆಯ ರೂಮಿನಲ್ಲೇ ದೈಹಿಕ ಸಂಬಂಧ ಬೆಳೆಸುತ್ತಿದ್ದ ಘಟನೆ ಉತ್ತರಪ್ರದೇಶದ ಸೋನ್‍ಬದ್ರ ಜಿಲ್ಲೆಯ ಕೋತ್ವಾಲ್ ಗ್ರಾಮದಲ್ಲಿ ನಡೆದಿದೆ.

    ಮದುವೆಮನೆಯಲ್ಲಿ ಸಂಭ್ರಮ ವಾತವರಣವಿದ್ದು, ಎಲ್ಲರೂ ಮದುವೆ ಕೆಲಸಗಳಲ್ಲಿ ತೊಡಗಿದ್ದರು. ಮದುವೆಗೆ ಬಂದ ಮಕ್ಕಳು ಕೂಡ ಆಟವಾಡುತ್ತಾ ರೂಂವೊಂದರ ಬಾಗಿಲನ್ನು ತಟ್ಟುತ್ತಿದ್ದರು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಆಗ ಹಿರಿಯರು ಬಂದು ಬಾಗಿಲನ್ನು ಜೋರಾಗಿ ಒಡೆದು ಒಳಗೆ ಹೋದಾಗ ಒಂದು ಕ್ಷಣ ದಂಗಾಗಿ ಹೋದರು.

    ರೂಮಿನಲ್ಲಿ ಒಬ್ಬ ಯುವಕ ಹಾಗೂ ಯುವತಿ ದೈಹಿಕ ಸಂಬಂಧ ಬೆಳೆಸುವ ರೀತಿಯಲ್ಲಿ ಕಂಡು ಬಂದಿದ್ದಾರೆ. ಅವರ ಈ ವರ್ತನೆಯನ್ನು ಕಂಡು ಕುಟುಂಬದವರು ಹಾಗೂ ಗ್ರಾಮದವರು ಅವರನ್ನು ಹಿಡಿದು ಥಳಿಸಿದ್ದಾರೆ.

    ಯುವಕ ಹಾಗೂ ಯುವತಿ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ನಡುವೆ ಸಂಬಂಧಿಕರಿಗೆಂದೇ ಇರಿಸಿದ್ದ ರೂಮಿನಲ್ಲಿ ಇವರಿಬ್ಬರು ಹೋಗಿದ್ದಾರೆ. ಈ ಇಬ್ಬರು ರೂಮಿನೊಳಗೆ ಹೋಗುವುದನ್ನು ಗ್ರಾಮದ ಒಬ್ಬ ವ್ಯಕ್ತಿ ನೋಡಿದ್ದನು.

    ಇವರಿಬ್ಬರು ರೂಮಿನೊಳಗೆ ಹೋಗುವುದನ್ನು ಕಂಡ ವ್ಯಕ್ತಿಯೊಬ್ಬ ತನ್ನ ಜೊತೆ ಕೆಲವರನ್ನು ರೂಮಿನ ಬಳಿ ಕರೆದುಕೊಂಡು ಹೋಗಿದ್ದಾನೆ. ಡೋರ್ ಒಡೆದು ಸಂಬಂಧಿಕರು ಹಾಗೂ ಗ್ರಾಮಸ್ಥರು ರೂಮಿನೊಳಗೆ ಹೋದಾಗ ಯುವಕ ಹಾಗೂ ಯುವತಿ ಅಶ್ಲೀಲವಾಗಿ ಇದ್ದರು. ಈ ನಡುವೆ ಅಲ್ಲಿಗೆ ಬಂದ ಇಬ್ಬರ ಕುಟುಂಬದವರು ಅವರನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.

    ಆತ ನನ್ನನ್ನು ಬಲವಂತವಾಗಿ ರೂಮಿಗೆ ಕರೆದನು ಎಂದು ಯುವತಿ ಯುವಕನ ಮೇಲೆ ಆರೋಪಿಸಿದ್ದಾಳೆ. ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರನ್ನು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಹಿಡಿದು ಆತನಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಿ ಗ್ರಾಮಸ್ಥರನ್ನು ಶಾಂತಗೊಳಿಸಿದರು.

    ನಂತರ ಪೊಲೀಸರು ಯುವತಿಯನ್ನು ತನ್ನ ಕುಟುಂಬದವರಿಗೆ ಒಪ್ಪಿಸಿ, ಯುವಕನನ್ನು ಕೋತ್ವಾಲ್‍ಗೆ ಕರೆದುಕೊಂಡು ಹೋದರು. ಸದ್ಯ ಈ ಘಟನೆ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮುಸ್ಲಿಂ ಹುಡುಗನ ಜೊತೆ ಹಿಂದೂ ಹುಡುಗಿ – ರೂಂ ಕೊಡಲು ಒಪ್ಪದ ಲಾಡ್ಜ್ ಮಾಲೀಕರು

    ಮುಸ್ಲಿಂ ಹುಡುಗನ ಜೊತೆ ಹಿಂದೂ ಹುಡುಗಿ – ರೂಂ ಕೊಡಲು ಒಪ್ಪದ ಲಾಡ್ಜ್ ಮಾಲೀಕರು

    ಬೆಂಗಳೂರು: ಮುಸ್ಲಿಂ ಹುಡುಗನ ಜೊತೆ ನಗರಕ್ಕೆ ಬಂದಿದ್ದ ಯುವತಿಗೆ ನಗರದಲ್ಲಿ ಯಾವುದೇ ರೂಂಗಳನ್ನು ನೀಡದೇ ಲಾಡ್ಜ್ ಮಾಲೀಕರು ಹೊರ ಕಳುಹಿಸಿದ್ದಾರೆ.

    ನಗರದ ಜೆಸಿ ರಸ್ತೆಯಲ್ಲಿರುವ ಒಲಿವ್ ರೆಸಿಡೆನ್ಸಿ ಲಾಡ್ಜ್‍ನಲ್ಲಿ ಕೇರಳ ಮೂಲದ ಶಫೀಕ್ ಮತ್ತು ದಿವ್ಯ ಎಂಬವರು ರೂಂ ಬಾಡಿಗೆಗೆ ಕೇಳಿದ್ದರು. ಆದರೆ ಲಾಡ್ಜ್ ಮಾಲೀಕ ಶಿವಮಾದು ಸೇಫ್ಟಿ ವಿಚಾರವಾಗಿ ರೂಂ ನೀಡಲು ಹಿಂದೇಟು ಹಾಕಿದ್ದಾರೆ. ಇನ್ನೂ ಈ ಜೋಡಿ ತಾವಿಬ್ಬರು ಉದ್ಯೋಗದ ಸಂದರ್ಶನಕ್ಕಾಗಿ ಆಗಮಿಸಿದ್ದು, ತಮಗೆ ಮದುವೆಯಾಗಿದೆ ಎಂದು ಹೇಳಿಕೊಂಡಿದೆ.

    ಲಾಡ್ಜ್‍ನಲ್ಲಿ ನಮ್ಮ ಹೆಸರು ಕೇಳುತ್ತಿದ್ದಂತೆ ಲಾಡ್ಜ್ ಸಿಬ್ಬಂದಿ ನಮಗೆ ರೂಂ ನೀಡಿಲ್ಲ ಎಂದು ಜೋಡಿ ಆರೋಪಿಸಿದ್ದಾರೆ. ಆದರೆ ಶಫೀಕ್ ಮತ್ತು ದಿವ್ಯಾ ಬಳಿ ಮದುವೆಯಾಗಿರುದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಶಫೀಕ್ ಲಾಡ್ಜ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದು, ಗಲಾಟೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    https://youtu.be/w9iFZf4Eado