Tag: ರುದ್ರಾಕ್ಷಿ

  • ಧ್ರುವ ಸರ್ಜಾ ಮಕ್ಕಳ ನಾಮಕರಣದಲ್ಲಿ ಭಾಗಿಯಾದ ಸಂಜಯ್ ದತ್

    ಧ್ರುವ ಸರ್ಜಾ ಮಕ್ಕಳ ನಾಮಕರಣದಲ್ಲಿ ಭಾಗಿಯಾದ ಸಂಜಯ್ ದತ್

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಇಂದು ತಮ್ಮ ಇಬ್ಬರು ಮಕ್ಕಳ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಕ್ಕಳ ನಾಮಕರಣ ಸಮಾರಂಭಕ್ಕೆ ಸಾಕ್ಷಿಯಾಗಲು ಬಾಲಿವುಡ್ ನಿಂದ ಸಂಜಯ್ ದತ್ (Sanjay Dutt) ಆಗಮಿಸಿದ್ದರು. ಸಂಜಯ್ ಮತ್ತು ಧ್ರುವ ಕೆಡಿ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

    ಅಯೋಧ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಈ ಹೊತ್ತಿನಲ್ಲಿ ನಟ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.

    ಅಯೋಧ್ಯೆ ಬಾ;ಲರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಾಮಕರಣ ಶಾಸ್ತ್ರ ನಡೆದಿದ್ದು, ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ  ಇಟ್ಟಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷ.

    ಇಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡಿದ್ದರೆ, ಅನೇಕ ಮಹಿಳೆಯರು ಇಂದೇ ಹೆರಿಗೆ ಮಾಡಿಸುವಂತೆ ವೈದ್ಯರ ದುಂಬಾಲು ಬಿದ್ದಿರುವ ಘಟನೆಗಳು ನಡೆದಿವೆ. ರಾಮ ಮಂದಿರ ಉದ್ಘಾಟನೆ ದಿನವೇ ಹೆರಿಗೆ ಮಾಡಿಸಿಕೊಳ್ಳಲು ಹಲವರು ತಯಾರಿ ಕೂಡ ಮಾಡಿಕೊಂಡಿದ್ದರು. ಅಷ್ಟರ ಮಟ್ಟಿಗೆ ರಾಮ ಜನರ ಮನಸ್ಸಲ್ಲಿ ಬೇರೂರಿದ್ದಾನೆ.

  • ಮಗ ಮತ್ತು ಮಗಳಿಗೆ ಹೆಸರಿಟ್ಟ ನಟ ಧ್ರುವ ಸರ್ಜಾ: ಮೆಚ್ಚುವಂಥ ಹೆಸರು

    ಮಗ ಮತ್ತು ಮಗಳಿಗೆ ಹೆಸರಿಟ್ಟ ನಟ ಧ್ರುವ ಸರ್ಜಾ: ಮೆಚ್ಚುವಂಥ ಹೆಸರು

    ಯೋಧ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಈ ಹೊತ್ತಿನಲ್ಲಿ ನಟ ಧ್ರುವ ಸರ್ಜಾ (Dhruva Sarja) ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ (Rudrakshi) ಮತ್ತು ಮಗನಿಗೆ ಹಯಗ್ರೀವ (Hayagriva) ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.

    ಅಯೋಧ್ಯೆ ಬಾ;ಲರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಾಮಕರಣ ಶಾಸ್ತ್ರ ನಡೆದಿದ್ದು, ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ  ಇಟ್ಟಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷ.

    ಇಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡಿದ್ದರೆ, ಅನೇಕ ಮಹಿಳೆಯರು ಇಂದೇ ಹೆರಿಗೆ ಮಾಡಿಸುವಂತೆ ವೈದ್ಯರ ದುಂಬಾಲು ಬಿದ್ದಿರುವ ಘಟನೆಗಳು ನಡೆದಿವೆ. ರಾಮ ಮಂದಿರ ಉದ್ಘಾಟನೆ ದಿನವೇ ಹೆರಿಗೆ ಮಾಡಿಸಿಕೊಳ್ಳಲು ಹಲವರು ತಯಾರಿ ಕೂಡ ಮಾಡಿಕೊಂಡಿದ್ದರು. ಅಷ್ಟರ ಮಟ್ಟಿಗೆ ರಾಮ ಜನರ ಮನಸ್ಸಲ್ಲಿ ಬೇರೂರಿದ್ದಾನೆ.

  • ಪ್ರಧಾನಿ ಮೋದಿ ಕೈ ಸೇರಿದ ಅನುಪಮ್ ಖೇರ್ ತಾಯಿ ಕೊಟ್ಟ ರುದ್ರಾಕ್ಷಿ

    ಪ್ರಧಾನಿ ಮೋದಿ ಕೈ ಸೇರಿದ ಅನುಪಮ್ ಖೇರ್ ತಾಯಿ ಕೊಟ್ಟ ರುದ್ರಾಕ್ಷಿ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಂತರ ನಾನಾ ಕಾರಣಗಳಿಂದಾಗಿ ಬಾಲಿವುಡ್ ನಟ ಅನುಪಮ್ ಖೇರ್ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಅವರ ಆಧ್ಯಾತ್ಮಿಕ ಜೀವನದ ಬಗ್ಗೆ ಒಂದೊಂದೇ ಪುಟಗಳು ತೆರೆದುಕೊಳ್ಳುತ್ತಿವೆ. ಮೊನ್ನೆಯಷ್ಟೇ ಅನುಪಮ್ ಖೇರ್ ಮನೆಗೆ ಬಂದಿದ್ದ ಸ್ವಾಮಿಗಳು, ಅವರ ಮನೆಯಲ್ಲೇ ಪೂಜೆ ಸಲ್ಲಿಸಿ ಹೋಗಿದ್ದರು. ಇದನ್ನೂ ಓದಿ : ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′

    ಅಲ್ಲದೇ ಅನುಪಮ್ ಖೇರ್ ಅವರ ತಾಯಿ ಕೂಡ ಆಧ್ಯಾತ್ಮ ಜೀವ. ಶಿವನ ಆರಾಧಕರು. ಹಾಗಾಗಿ ಅವರು ವಿಶೇಷವಾದ ರುದ್ರಾಕ್ಷಿಯೊಂದನ್ನು ಖರೀದಿಸಿದ್ದಾರೆ. ಆ ರುದ್ರಾಕ್ಷಿ ಖರೀದಿಸಿದ್ದು ತಮ್ಮ ಕುಟುಂಬದ ಸದಸ್ಯರಿಗೆ ಕೊಡುವುದಕ್ಕೆ ಅಲ್ಲ, ಬದಲಾಗಿ ಮಗನ ಕೈಗೆ ಅದನ್ನು ಕೊಟ್ಟು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲು ವಿನಂತಿಸಿದ್ದಾರೆ. ಇದನ್ನೂ ಓದಿ:ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

    ತಾಯಿಯ ಆಸೆಯಂತೆ ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಅನುಪಮ್ ಖೇರ್, ತಾಯಿ ಕೊಟ್ಟ ರುದ್ರಾಕ್ಷಿ ಮಾಲೆಯನ್ನು ಪ್ರಧಾನಿಗೆ ನೀಡಿದ್ದಾರೆ. ಭೇಟಿ ವೇಳೆ ‘ದೇಶ, ದೇಶವಾಸಿಗಳನ್ನು ರಕ್ಷಿಸುತ್ತಿರುವ ನಿಮ್ಮ ರಕ್ಷಣೆಗೆ ಈ ರುದ್ರಾಕ್ಷಿ ಮಾಲೆಯನ್ನು ನನ್ನ ತಾಯಿ ಕಳುಹಿಸಿದ್ದಾರೆ. ಇದು ನಿಮ್ಮನ್ನು ಕಾಪಾಡುತ್ತದೆ ಎನ್ನುವುದು ನನ್ನ ತಾಯಿಯ ಅಚಲವಾದ ನಂಬಿಕೆ. ನಿಮಗೆ ಒಳ್ಳೆದಾಗುತ್ತದೆ’ ಎಂದು ಹಾರೈಸಿ ರುದ್ರಾಕ್ಷಿ ಮಾಲೆಯನ್ನು ಮೋದಿ ಅವರಿಗೆ ನೀಡಿದ್ದಾರೆ. ಇದನ್ನೂ ಓದಿ: ಡಾ.ರಾಜ್ ಮೊಮ್ಮಗಳ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್: ಗಂಗಾ ಪಾತ್ರದಲ್ಲಿ ಧನ್ಯ ಮಿಂಚಿಂಗ್

    MODi

    ರುದ್ರಾಕ್ಷಿ ಮಾಲೆಯನ್ನು ಸ್ವೀಕರಿಸಿದ ಪ್ರಧಾನಿ ಮೋದಿ ಅವರು, ‘ಈ ರುದ್ರಾಕ್ಷಿ ಮೂಲಕ ಮಾತಾಜಿ ಅವರ ಆಶೀರ್ವಾದ ನನಗೆ ಸಿಕ್ಕಂತಾಗಿದೆ. ಈ ದೇಶದ ಜನರು ಹೀಗೆ ನನ್ನ ರಕ್ಷಣೆಗೆ ನಿಂತಿದ್ದು ದೇಶಕ್ಕಾಗಿ ಮತ್ತಷ್ಟು ಕೆಲಸ ಮಾಡಲು ಹುಮ್ಮಸ್ಸು ತಂದಿದೆ’ ಎಂದಿದ್ದಾರೆ ಮೋದಿ.