Tag: ರುದ್ರಭೂಮಿ

  • ಚಿತಾಗಾರ ಸಿಬ್ಬಂದಿ ನೆರವಿಗೆ ಬಂದ ನಟಿ ರಾಗಿಣಿ

    ಚಿತಾಗಾರ ಸಿಬ್ಬಂದಿ ನೆರವಿಗೆ ಬಂದ ನಟಿ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯ ತಾವು ಮಾಡುತ್ತಿರುವ ಸಮಾಜ ಸೇವೆಯಿಂದ ಸುದ್ದಿಯಾಗುತ್ತಿದ್ದಾರೆ. ಮನೆಯಿಲ್ಲದವರಿಗೆ, ಪೊಲೀಸರಿಗೆ, ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ನೀಡುವ ಮೂಲಕವಾಗಿ ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ನಿರಾಶ್ರಿತರು ಹಾಗೂ ಬಂದೋಬಸ್ತ್​ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದ ರಾಗಿಣಿ ಚಿತಾಗಾರ ಹಾಗೂ ರುದ್ರಭೂಮಿಯ ಕೆಲಸಗಾರರಿಗೆ ದಿನಸಿ ಕಿಟ್ ಹಂಚಿದ್ದಾರೆ. ರಾಗಿಣಿ ದ್ವಿವೇದಿ ಕಳೆದ ಲಾಕ್‍ಡೌನ್‍ನಲ್ಲೂ ನಿರಾಶ್ರಿತರಿಗೆ ಹಾಗೂ ಬಡವರಿಗೆ ದಿನಸಿ ಹಾಗೂ ಆಹಾರ ನೀಡುವ ಮೂಲಕ ನೆರವಾಗಿದ್ದರು. ಈಗಲೂ ಸಹ ನಟಿ ರಾಗಿಣಿ ಈ ಕೆಲಸವನ್ನು ಮುಂದುವರೆಸಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಸ್ಮಶಾನಕ್ಕೆ ಭೇಟಿ ಕೊಟ್ಟು ಅಲ್ಲಿ ಕೆಲಸ ಮಾಡುವವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನು ಚಿತಾಗಾರದಲ್ಲಿ ಕೆಲಸ ಮಾಡುವವರಿಗೆ ನೀಡಿದ್ದಾರೆ. ಸರ್ವಜ್ಞನಗರದ ಕಲ್ಲಹಳ್ಳಿ ರುದ್ರಭೂಮಿಗೆ ತೆರಳಿ ಅಲ್ಲಿ ನೆಲೆಸಿರುವ ಗುಂಡಿ ಅಗೆಯುವ ಕಾರ್ಮಿಕರು ಹಾಗೂ ಕುಟುಂಬದ ಮಹಿಳೆಯರನ್ನು ಭೇಟಿ ಮಾಡಿದ್ದಾರೆ ರಾಗಿಣಿ. ನಿರಾಶ್ರಿತರು ಹಾಗೂ ಬಂದೋಬಸ್ತ್​ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ನನ್ನ ಪ್ರಕಾರ ಚಿತಾಗಾರದಲ್ಲಿ ಕೆಲಸ ಮಾಡುವವರೇ ಗ್ರೇಟ್ ಕೊರೊನಾ ವಾರಿಯರ್ಸ್ ಇವರ ಕೆಲಸದ ಹಿಂದಿರುವ ನೋವನ್ನ ಯಾರೂ ಪರಿಗಣಿಸುವಿದೇ ಇಲ್ಲ. ಹಾಗೇ ಇವರಲ್ಲಿ ಅದೆಷ್ಟೋ ಜನರಿಗೆ ಸಂಬಳ ಹಾಗೂ ಊಟ ಕೂಡ ಸಿಗುತ್ತಿಲ್ಲ. ನಮ್ಮ ಕೈಲಾದಷ್ಟು ಅವರ ಒಂದು ತಿಂಗಳಿಗೆ ಆಗುಷ್ಟು ರೇಷನ್ ಸಹಾಯ ಮಾಡಿದ್ದೇವೆ. ಕಳೆದ ನಾಲ್ಕು ಪೀಳಿಗೆಯಿಂದಲೂ ಈ ಚಿತಾಗಾರದಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತನ್ನು ನೋಡದೇ ಇರುವ ಓರ್ವ ಮಹಿಳೆಯನ್ನು ಬೇಟಿ ಮಾಡಿದೆ. ಖುಷಿ ಆಯ್ತು. ಇವರಿಂದ ನಾವು ದಿನಾ ಕಲಿಯುವುದು ಬಹಳಷ್ಟಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ರಾಗಿಣಿ ಕೊರೊನಾ ಸಮಯದಲ್ಲಿ ಮಾಡುತ್ತಿರುವ ಈ ಸಹಾಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಗಿಣಿ ತಾವು ಮಾಡುತ್ತಿರುವ ಸಹಾಯವನ್ನು ಮುಮದುವರೆಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವಲ್ಲಿ ರಾಗಿಣಿ ತೊಡಗಿಸಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

  • ಕಾಯಂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ

    ಕಾಯಂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ

    ಧಾರವಾಡ: ತಾಲೂಕಿನ ಲಕಮಾಪುರ ಗ್ರಾಮಸ್ಥರಿಗೆ ಕಾಯಂ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಲಕಮಾಪುರ ಗ್ರಾಮದ ಅಲ್ಪಸಂಖ್ಯಾತರು, ಕುರುಬರು, ಉಪ್ಪಾರರು, ವಿಶ್ವಕರ್ಮರು, ಹಡಪದ ಜನಾಂಗದವರು ಹಾಗೂ ಮರಾಠಾ ಸಮುದಾಯದ ಜನ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ವಾದ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ ಬಂದ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸಿದರು.

    ಲಕಮಾಪುರ ಗ್ರಾಮದ ಸರ್ವೆ ನಂಬರ್ 5 ರಲ್ಲಿ ಅನಾದಿ ಕಾಲದಿಂದಲೂ ಶವ ಸಂಸ್ಕಾರ ಮಾಡುತ್ತ ಬರಲಾಗಿದೆ.  ಈ ಜಾಗವನ್ನು ವಿಜಯಲಕ್ಷ್ಮೀ ತಾನಾಜಿ ಪಾಟೀಲ ಎನ್ನುವವರು ಪರಬಾರೆ ಮಾಡಲು ತಯಾರಿ ನಡೆಸಿದ್ದು, ಗಮನಕ್ಕೆ ಬಂದಿದೆ. ಹೀಗೆ ಪರಬಾರೆ ಮಾಡಿದರೆ, ನಮ್ಮ ಸಮುದಾಯದ ಜನರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಅಡ್ಡಿಪಡಿಸಬಹುದು. ಹೀಗಾಗಿ ವಿಜಯಲಕ್ಷ್ಮೀ ಅವರಿಗೆ ಈ ಜಮೀನು ಪರಬಾರೆ ಮಾಡಲು ಅನುಮತಿ ನೀಡಬಾರದು. ಒಂದು ವೇಳೆ ಅವರಿಗೆ ಅನುಮತಿ ನೀಡಿದ್ದೇ ಆದಲ್ಲಿ ನಾವುಗಳು ರಸ್ತೆ ಬದಿ ಶವ ಸಂಸ್ಕಾರ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    15 ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಲಕಮಾಪುರ ಗ್ರಾಮಕ್ಕೆ ಕಾಯಂ ರುದ್ರಭೂಮಿ ನೀಡಲು 1994 ರಿಂದ ಮನವಿ ನೀಡುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಸಂಬಂಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ ಡಿಸಿ ಕಚೇರಿ ಎದುರೇ ಅನಿರ್ಧಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

  • ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಶವಸಂಸ್ಕಾರಕ್ಕೆ ಕ್ಯೂ

    ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಶವಸಂಸ್ಕಾರಕ್ಕೆ ಕ್ಯೂ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ರುದ್ರತಾಂಡವವಾಡುತ್ತಿದ್ದು, ದಿನೇ ದಿನೇ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಜೊತೆಗೆ ಸೋಂಕು ಇಲ್ಲದರ ಸಾವು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿನ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೂ ಜನರು ಕ್ಯೂ ನಿಂತಿದ್ದಾರೆ.

    ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ನೂಕು ನುಗ್ಗಲು ಉಂಟಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಮಾತ್ರವಲ್ಲ ಬೇರೆ ಬೇರೆ ಕಾಯಿಲೆಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ಜನಜಂಗುಳಿ ಉಂಟಾಗಿದೆ. ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ನೂರಾರು ಜನರು ತಮ್ಮ ತಮ್ಮ ಆಪ್ತರ ಶವವನ್ನು ಸುಡಲು ಕಾಯುತ್ತಿದ್ದಾರೆ.

    ಕೋವಿಡ್ ರೋಗಿಗಳು ಹೊರತುಪಡಿಸಿ ಒಂದೇ ಕ್ಷಣಕ್ಕೆ ಸುಮಾರು 60 ಶವಗಳನ್ನು ಏಕಕಾಲಕ್ಕೆ ಸ್ಮಶಾನದವರು ಸುಟ್ಟು ಹಾಕಿದ್ದಾರೆ. ಆದರೆ ಇವರು ಕೊರೊನಾದಿಂದ ಮೃತಪಟ್ಟವರಲ್ಲ. ಕೊರೊನಾ ಹೊರತುಪಡಿಸಿ ಬೇರೆ ಬೇರೆ ಕಾಯಿಲೆಗೆ ಮೃತಪಟ್ಟಿದ್ದಾರೆ.

    ಬೆಂಗಳೂರಲ್ಲಿ ಕೊರೊನಾ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಭಾನುವಾರ ಒಂದೇ ದಿನ 16 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೇವಲ 5 ದಿನದಲ್ಲಿ ಬೆಂಗಳೂರಲ್ಲಿ 50 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 30ಕ್ಕೆ ಬೆಂಗಳೂರಲ್ಲಿ ಕೊರೊನಾಗೆ 95 ಜನರು ಮೃತಪಟ್ಟಿದ್ದರು. ಆದರೆ ಜುಲೈ 5ಕ್ಕೆ ಕೊರೊನಾಗೆ ಬೆಂಗಳೂರಲ್ಲಿ 145 ಮಂದಿ ಬಲಿಯಾಗಿದ್ದಾರೆ. ಕೇವಲ ಐದೇ ದಿನದಲ್ಲಿ ಬೆಂಗಳೂರಲ್ಲಿ 50 ಮಂದಿ ಮೃತಪಟ್ಟಿದ್ದಾರೆ.