Tag: ರುತುರಾಜ್‌ ಗಾಯಕ್ವಾಡ್‌

  • ಚೆನ್ನೈ ತಂಡದಿಂದ ರುತುರಾಜ್‌ ಔಟ್‌ – ತಲಾ ಮತ್ತೆ ಕ್ಯಾಪ್ಟನ್‌

    ಚೆನ್ನೈ ತಂಡದಿಂದ ರುತುರಾಜ್‌ ಔಟ್‌ – ತಲಾ ಮತ್ತೆ ಕ್ಯಾಪ್ಟನ್‌

    ಚೆನ್ನೈ: ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಉಸಿರಾಗಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತೆ ಸಿಎಸ್‌ಕೆ ತಂಡದ ನಾಯಕನಾಗಿ ಕಂಬ್ಯಾಕ್‌ ಮಾಡಿದ್ದಾರೆ.

    ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹಾಲಿ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರು ಮೊಣಕೈ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇಡೀ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ 9 ಪಂದ್ಯಗಳಿಗೆ ಎಂ.ಎಸ್‌ ಧೋನಿ ಅವರೇ ನಾಯಕತ್ವ ವಹಿಸಲಿದ್ದಾರೆ ಎಂದು ಮುಖ್ಯಕೋಚ್‌ ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿದ್ದಾರೆ. ನಾಳೆ (ಏ.11) ಕೋಲ್ಕತ್ತಾ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಸರದಿಯ 6ನೇ ಪಂದ್ಯವನ್ನಾಡಲಿದೆ. ಇದನ್ನೂ ಓದಿ: 2028 Olympics | 128 ವರ್ಷಗಳ ಬಳಿಕ ಕ್ರಿಕೆಟ್‌ – ಒಲಿಂಪಿಕ್ಸ್‌ನಲ್ಲಿ 6 ತಂಡಗಳ ಸ್ಪರ್ಧೆ

    MS Dhoni 1

    ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ತುಷಾರ್‌ ದೇಶ್‌ಪಾಂಡೆ ಅವರ ಬೌಲಿಂಗ್‌ನಲ್ಲಿ ಚೆಂಡು ರುತುರಾಜ್‌ ಅವರ ಬಲ ಮೊಣಕೈಗೆ ಬಲವಾಗಿ ಬಡಿದಿತ್ತು. ಈ ವೇಳೆ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ರುತುರಾಜ್‌ ತಂಡಕ್ಕಾಗಿ ಬ್ಯಾಟಿಂಗ್‌ ಮುಂದುವರಿಸಿದ್ದರು. ಆದ್ರೆ ಆ ಪಂದ್ಯದಲ್ಲಿ ಸಿಎಸ್‌ಕೆ ಸೋಲು ಕಂಡಿತು. ಇನ್ನೂ ಏಪ್ರಿಲ್‌ 8ರಂದು ಪಂಬಾಜ್‌ ಕಿಂಗ್ಸ್‌ (Punjab Kings) ವಿರುದ್ಧದ ಪಂದ್ಯದಲ್ಲಿಯೂ ರುತುರಾಜ್‌ ಬ್ಯಾಟಿಂಗ್‌ ವೈಫಲ್ಯ ಎದುರಿದರು. ಇದೀಗ ಮೊಣಕೈ ಗಾಯದ ಸಮಸ್ಯೆ ಉಲ್ಬಣಗೊಂಡಿದ್ದು, ಪ್ರಸ್ತುತ ಐಪಿಎಲ್‌ ಟೂರ್ನಿಯಿಂದಲೇ ಅವರು ಹೊರಗುಳಿಯಲಿದ್ದಾರೆ ಎಂದು ಸಿಎಸ್‌ಕೆ ಮುಖ್ಯಕೋಚ್‌ ತಿಳಿಸಿದ್ದಾರೆ. ಇದನ್ನೂ ಓದಿ: IPL 2025 | ಜಿಟಿ ವಿರುದ್ಧ ಸೋಲಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

    2023ರ ಆವೃತ್ತಿಯಲ್ಲಿ ಸಿಎಸ್‌ಕೆ ಎಂ.ಎಸ್‌ ಧೋನಿ ನಾಯಕತ್ವದಲ್ಲಿ 5ನೇ ಬಾರಿಗೆ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಆ ಬಳಿಕ ಧೋನಿ ತಮ್ಮ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. 2024ರ ಆವೃತ್ತಿಯಿಂದ ರುತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ 5 ಪಂದ್ಯಗಳನ್ನಾಡಿರುವ ಸಿಎಸ್‌ಕೆ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದನ್ನೂ ಓದಿ: IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

  • IPL 2025 | ಸಿಎಸ್‌ಕೆ ತಂಡಕ್ಕೆ ಮತ್ತೆ ಲೆಜೆಂಡ್‌ ಮಹಿ ಕ್ಯಾಪ್ಟನ್‌?

    IPL 2025 | ಸಿಎಸ್‌ಕೆ ತಂಡಕ್ಕೆ ಮತ್ತೆ ಲೆಜೆಂಡ್‌ ಮಹಿ ಕ್ಯಾಪ್ಟನ್‌?

    ಚೆನ್ನೈ: ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೀವಾಳ ಎಂ.ಎಸ್‌ ಧೋನಿ (MS Dhoni) ಮತ್ತೆ ಸಿಎಸ್‌ಕೆ ತಂಡಕ್ಕೆ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

    ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಮಹಿ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಹಾಲಿ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ ಅವರು ಮುಂಗೈ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಪಂದ್ಯಕ್ಕೆ ಅವರ ಲಭ್ಯತೆ ಬಗ್ಗೆ ಖಚಿತವಾಗಿಲ್ಲ. ಹಾಗಾಗಿ ಧೋನಿ ಅವರೇ ನಾಯಕತ್ವದ ಹೊಣೆ ಹೊರಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

    ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ತುಷಾರ್‌ ದೇಶ್‌ಪಾಂಡೆ ಅವರ ಬೌಲಿಂಗ್‌ನಲ್ಲಿ ಚೆಂಡು ರುತುರಾಜ್‌ ಅವರ ಬಲಭಾಗದ ಮುಂಗೈಗೆ ಬಡಿದಿತ್ತು. ಈ ವೇಳೆ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು, ಆದಾಗ್ಯೂ ರುತುರಾಜ್‌ ಬ್ಯಾಟಿಂಗ್‌ ಮುಂದುವರಿಸಿದ್ದರು. ಸದ್ಯ ಅವರು ಪಂದ್ಯದಲ್ಲಿ ಮುಂದುವರಿಯುವ ಸಾಧ್ಯತೆಗಳು ಕಡಿಮೆ ಇದೆ. ಪ್ಲೇಯಿಂಗ್‌-11 ಪ್ರಕಟಿಸುವ ಮುನ್ನ ರುತುರಾಜ್‌ ಲಭ್ಯತೆಯ ಬಗ್ಗೆ ತಿಳಿಸಲಾಗುತ್ತದೆ. ಒಂದು ವೇಳೆ ಅಲಭ್ಯರಾದ್ರೆ ಎಂ.ಎಸ್‌ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಬ್ಯಾಟಿಂಗ್‌ ಕೋಚ್‌ ಮೈಕ್‌ ಹಸ್ಸಿ ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

    2023ರ ಆವೃತ್ತಿಯಲ್ಲಿ ಸಿಎಸ್‌ಕೆ ಎಂ.ಎಸ್‌ ಧೋನಿ ನಾಯಕತ್ವದಲ್ಲೇ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಆ ಬಳಿಕ ಧೋನಿ ತಮ್ಮ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. 2024ರ ಆವೃತ್ತಿಯಿಂದ ರುತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಸದ್ಯ ಪ್ರಸಕ್ತ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನಾಡಿರುವ ಸಿಎಸ್‌ಕೆ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದನ್ನೂ ಓದಿ: ನೆಟ್ ಪ್ರ್ಯಾಕ್ಟೀಸ್‌ ವೇಳೆ ಹೆಲಿಕಾಪ್ಟರ್ ಶಾಟ್ ಹೊಡೆದ ಧೋನಿ

  • IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

    IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

    – 20 ಲಕ್ಷಕ್ಕೆ ಬಿಕರಿಯಾಗಿದ್ದ ಪಥಿರಣ ಈಗ 13 ಕೋಟಿ ಒಡೆಯ

    ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಉಸಿರು ಆಗಿರುವ ಲೆಜೆಂಡ್‌ ಕ್ರಿಕೆಟಿಗ ಎಂ.ಎಸ್‌ ಧೋನಿ (MS Dhoni) 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಯಲ್ಲಿ ಮುಂದುವರಿಯುವುದು ಪಕ್ಕಾ ಆಗಿದೆ. ನಿರೀಕ್ಷೆಯಂತೆ ಎಂ.ಎಸ್‌ ಧೋನಿ ಅವರನ್ನ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಸಿಎಸ್‌ಕೆ ಫ್ರಾಂಚೈಸಿ ಉಳಿಸಿಕೊಂಡಿದ್ದು, ಧೋನಿ ಅಭಿಮಾನಿಗಳು ಫುಲ್‌ಖುಷ್‌ ಆಗಿದ್ದಾರೆ.

    ನಾಯಕ ರುತುರಾಜ್‌, ಜಡ್ಡುಗೆ ಬಂಪರ್‌:
    2024ರ ಐಪಿಎಲ್‌ ಆವೃತ್ತಿಯಲ್ಲಿ ಅಲ್ಪ ಮೊತ್ತಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ಸಿಎಸ್‌ಕೆ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಮತೀಶ ಪಥಿರಣ, ಶಿವಂ ದುಬೆ, ರವೀಂದ್ರ ಜಡೇಜಾ (Ravindra Jadeja) ಅವರ ಸಂಭಾವನೆಯಲ್ಲಿ ಭಾರಿ ಏರಿಕೆ ಕಂಡಿದೆ.

    ನಿರೀಕ್ಷೆಗೂ ಮೀರಿದಂತೆ ನಾಯಕ ರುತುರಾಜ್‌ ಗಾಯಕ್ವಾಡ್‌ ಹಾಗೂ ರವೀಂದ್ರ ಜಡೇಜಾ ಅವರನ್ನು ತಲಾ 18 ಕೋಟಿ ರೂ.ಗಳಿಗೆ ಚೆನ್ನೈ ತಂಡ ಉಳಿಸಿಕೊಂಡಿದೆ. ಇನ್ನುಳಿದಂತೆ ಮತೀಶ ಪಥಿರಣ 13 ಕೋಟಿ ರೂ., ಶಿವಂ ದುಬೆ 12 ಕೋಟಿ ರೂ.ಗೆ ರಿಟೇನ್‌ ಆದ್ರೆ, ಎಂ.ಎಸ್‌ ಧೋನಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಕೇವಲ 4 ಕೋಟಿ ರೂ.ಗಳಿಗೆ ರೀಟೇನ್‌ ಆಗಿದ್ದಾರೆ.

    ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ನಾಯಕ ರುತುರಾಜ್‌ 6 ಕೋಟಿ ರೂ., ಮತೀಶ ಪಥಿರಣ 20 ಲಕ್ಷ ರೂ., ರವೀಂದ್ರ ಜಡೇಜಾ 16 ಕೋಟಿ ರೂ., ಶಿವಂ ದುಬೆ 4 ಕೋಟಿ ರೂ. ಹಾಗೂ ಎಂ.ಎಸ್‌ ಧೋನಿ 12 ಕೋಟಿ ರೂ. ಸಂಭಾವನೆ ಪಡೆದಿದ್ದರು.

    ಯಾರ ಸಂಭಾವನೆ ಎಷ್ಟು?
    * ರುತುರಾಜ್‌ ಗಾಯಕ್ವಾಡ್‌ – 18 ಕೋಟಿ ರೂ.
    * ರವೀಂದ್ರ ಜಡೇಜಾ – 18 ಕೋಟಿ ರೂ.
    * ಮತೀಶ ಪಥಿರಣ – 13 ಕೋಟಿ ರೂ.
    * ಶಿವಂ ದುಬೆ – 12 ಕೋಟಿ ರೂ.
    * ಎಂ.ಎಸ್‌ ಧೋನಿ – 4 ಕೋಟಿ ರೂ. (ಅನ್‌ಕ್ಯಾಪ್ಡ್‌ ಪ್ಲೇಯರ್‌)

    ಮಹಿ ಏಕೆ ಅನ್‌ಕ್ಯಾಪ್ಡ್‌ ಪ್ಲೇಯರ್‌?
    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

    ಮುಂದಿನ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ.

  • 2025ರ ಐಪಿಎಲ್‌ನಲ್ಲೂ ಮಹಿ ಅಖಾಡಕ್ಕಿಳಿಯೋದು ಫಿಕ್ಸ್‌ – ಸುಳಿವು ಕೊಟ್ಟ ರೈನಾ

    2025ರ ಐಪಿಎಲ್‌ನಲ್ಲೂ ಮಹಿ ಅಖಾಡಕ್ಕಿಳಿಯೋದು ಫಿಕ್ಸ್‌ – ಸುಳಿವು ಕೊಟ್ಟ ರೈನಾ

    ಚೆನ್ನೈ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಆವೃತ್ತಿಯು ಮೆಗಾ ಹರಾಜಿಗೂ ಮುನ್ನವೇ ಭಾರೀ ಕುತೂಹಲ ಹೆಚ್ಚಿಸಿದೆ. ಏಕೆಂದರೆ ಮೂರು ವರ್ಷಗಳ ಬಳಿಕ ಮೆಗಾ ಹರಾಜು ನಡೆಯುತ್ತಿದ್ದು, ಬಲಿಷ್ಠ ಆಟಗಾರರು ಯಾವ ತಂಡವನ್ನು ಸೇರಲಿದ್ದಾರೆ ಅನ್ನೋ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ 2025ರ ಐಪಿಎಲ್‌ನಲ್ಲಿ ಎಂ.ಎಸ್‌ ಧೋನಿ (MS Dhoni) ಕಣಕ್ಕಿಳಿಯುವ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಸುಳಿವು ಕೊಟ್ಟಿದ್ದಾರೆ.

    ಹೌದು. ಸಿಎಸ್‌ಕೆ ತಂಡದ ನಾಯಕ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಮಹಿ ಮತ್ತೊಂದು ಆವೃತ್ತಿಗೆ ಚೆನ್ನೈ ತಂಡದ ಕೈ ಹಿಡಿಯಬೇಕೆಂದು ಬಯಸಿದ್ದಾರೆ. ಜೊತೆಗೆ ರುತುರಾಜ್‌ಗೆ ಇನ್ನಷ್ಟು ನಾಯಕತ್ವದ ಗುಣಗಳನ್ನು ಕಲಿಸಬೇಕಿದೆ ಆದ್ದರಿಂದ ಧೋನಿ ಮುಂದಿನ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ಪರ ಆಡಲಿದ್ದಾರೆ ಎಂದು‌ ಸಿಎಸ್‌ಕೆ ತಂಡದ ಮಾಜಿ ಬ್ಯಾಟರ್‌ ಸುರೇಶ್‌ ರೈನಾ ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ

    ಸ್ಫೋರ್ಟ್ಸ್‌ ಟಾಕ್‌ ಜೊತೆಗೆ ಮಾತನಾಡಿದ ಸುರೇಶ್‌ ರೈನಾ (Suresh Raina), ಐಪಿಎಲ್‌ನಲ್ಲಿ ಧೋನಿ ಅವರ ಪಾಲಿಗೆ ಮತ್ತೊಂದು ಸೀಸನ್‌ ಉಳಿದಿರುವಂತೆ ಕಾಣುತ್ತಿದೆ. ಕಳೆದ ವರ್ಷ ಅವರು ಹೇಗೆ ಬ್ಯಾಟಿಂಗ್‌ ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ 2025ರ ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

    ಕಳೆದ ವರ್ಷ ಆರ್‌ಸಿಬಿ (RCB) ವಿರುದ್ಧ ನಾಕೌಟ್‌ ಪಂದ್ಯದಲ್ಲಿ ಸೋತ ನಂತರ ರುತುರಾಜ್‌ ಮತ್ತೊಂದು ವರ್ಷ ಧೋನಿ ಸಿಎಸ್‌ಕೆ (CSK) ತಂಡಕ್ಕೆ ಬೇಕು ಅಂತ ಕೇಳಿಕೊಂಡಿದ್ದರು. ಈಗಾಗಲೇ ರುತುರಾಜ್ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದರೂ, ಇನ್ನಷ್ಟು ತಿಳಿಯುವ ಅವಶ್ಯಕತೆಯಿದೆ ಎಂದು ರೈನಾ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: Paris 2024 Paralympics | ಭಾರತಕ್ಕೆ ಡಬಲ್‌ ಧಮಾಕ – ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ ಶೂಟರ್ಸ್‌

    2024ರ ಐಪಿಎಲ್‌ಗೂ ಮುನ್ನ ಎಂ.ಎಸ್‌ ಧೋನಿ ಅವರು ಸಿಎಸ್‌ಕೆ ನಾಯಕತ್ವ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು. ಕಳೆದ ವರ್ಷ ಐಪಿಎಲ್‌ನಲ್ಲಿ ಮೊಣಕಾಲು ಗಾಯದ ಸಮಸ್ಯೆಗೆ ತುತ್ತಾಗಿದ್ದ ಮಹಿ, ಫಿನಿಶರ್‌ ಪಾತ್ರದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದರು. 14 ಪಂದ್ಯಗಳಿಂದ 220.25 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 161 ರನ್‌ ಗಳಿಸಿದ್ದರು. ಆದ್ರೆ 2025ರ ಐಪಿಎಲ್‌ನಲ್ಲಿ ಧೋನಿಯನ್ನು ಉಳಿಸಿಕೊಳ್ಳುವುದು, ಬಿಡುವುದು ಬಿಸಿಸಿಐ (BCCI) ನಿಗದಿಪಡಿಸುವ ನಿಯಮದ ಮೇಲೆ ನಿರ್ಧಾರವಾಗಿದೆ. ಆದ್ದರಿಂದ ಧೋನಿ ಅವರನ್ನು ಮೆಗಾ ಹರಾಜಿನಲ್ಲಿ ಬಿಡ್‌ ಮಾಡಬೇಕೇ ಅಥವಾ ರಿಟೇನ್‌ ಮಾಡಿಕೊಳ್ಳಬೇಕೆ ಎಂಬ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸಿಎಸ್‌ಕೆ ಫ್ರಾಂಚೈಸಿ ಹೇಳಿದೆ.

    ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗ್ತಾರಾ ಮಹಿ?
    ಐಪಿಎಲ್‌ ನಿಯಮದ ಪ್ರಕಾರ, ಯಾವುದೇ ರಾಷ್ಟ್ರೀಯ ತಂಡದ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ 5 ವರ್ಷ ಮುಕ್ತಾಯಗೊಂಡು, ಐಪಿಎಲ್‌ನಲ್ಲಿ ಭಾಗವಹಿಸಿದರೆ, ಅವರನ್ನ ಅನ್‌ಕ್ಯಾಪ್ಡ್‌ ಪ್ಲೇಯರ್‌ (ಹೊಸಬರು) ಅಂತ ಪರಿಗಣಿಸಲಾಗುತ್ತದೆ. ಧೋನಿ ಅವರು 2020ರ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. 2025ರ ಆಗಸ್ಟ್‌ 15ಕೆ 5 ವರ್ಷ ಪೂರ್ಣಗೊಳ್ಳಲಿದೆ. ಒಂದು ವೇಳೆ ಮುಂದಿನ ವರ್ಷ ಜೂನ್‌, ಜುಲೈನಲ್ಲೇ ಐಪಿಎಲ್ ನಡೆದರೆ, ಅದು ಧೋನಿ ಅವರಿಗೂ ಲಾಭವಾಗಲಿದೆ. ಏಕೆಂದರೆ ಧೋನಿ ಅವರು ಪ್ರಸ್ತುತ ಒಂದು ಆವೃತ್ತಿಗೆ 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಪರಿಗಣಿಸಿದರೆ, ಸುಮಾರು 4 ಕೋಟಿ ರೂ. ಅಷ್ಟೇ ಸಂಭಾವನೆ ಸಿಗಲಿದೆ ಎಂದು ಫ್ರಾಂಚೈಸಿ ಮೂಲಗಳಿಂದ ತಿಳಿದುಬಂದಿದೆ.

  • 134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌ – ಭಾರತಕ್ಕೆ ಜಯದ ʻಅಭಿಷೇಕʼ

    134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌ – ಭಾರತಕ್ಕೆ ಜಯದ ʻಅಭಿಷೇಕʼ

    ಹರಾರೆ: ಅಭಿಷೇಕ್‌ ಶರ್ಮಾ (Abhishek Sharma) ಸ್ಫೋಟಕ ಶತಕ, ರುತುರಾಜ್‌ ಗಾಯಕ್ವಾಡ್‌ , ರಿಂಕು ಸಿಂಗ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು (Team India) ಜಿಂಬಾಬ್ವೆ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಇಲ್ಲಿನ ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    ಚೇಸಿಂಗ್‌ ಆರಂಭಿಸಿದ ಜಿಂಬಾಬ್ವೆ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2ನೇ ವಿಕೆಟ್‌ಗೆ 15 ಎಸೆತಗಳಲ್ಲಿ 36 ರನ್‌ಗಳ ಸ್ಫೋಟಕ ಜೊತೆಯಾಟ ನಂತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ವಿಫಲರಾದರು. ಅವೇಶ್‌ ಖಾನ್‌, ಮುಕೇಶ್‌ ಕುಮಾರ್‌ (Mukesh Kumar) ಬೌಲಿಂಗ್‌ ಪ್ರಹಾರಕ್ಕೆ ಜಿಂಬಾಬ್ವೆ ಬ್ಯಾಟರ್‌ಗಳು ಮಕಾಡೆ ಮಲಗಿದರು. ಅಂತಿಮವಾಗಿ ಭಾರತ 100 ರನ್‌ಗಳ ಗೆಲುವು ಸಾಧಿಸಿತು.

    ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 43 ರನ್‌, ಬ್ರಿಯಾನ್ ಬೆನೆಟ್ (Brian Bennett) 26 ರನ್‌, ಲ್ಯೂಕ್ ಜೊಂಗ್ವೆ 33 ರನ್‌ ಗಳಿಸಿದರು. ಇನ್ನೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮುಕೇಶ್‌ ಕುಮಾರ್‌ ಮತ್ತು ಅವೇಶ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರೆ, ರವಿ ಬಿಷ್ಣೋಯಿ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಪ್ಲ್ಯಾನ್‌!

    ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ, 234 ರನ್‌ ಬಾರಿಸಿತ್ತು. ಐಪಿಎಲ್‌ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನಾಡುತ್ತಿರುವ ಪಂಜಾಬ್‌ ಮೂಲದ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಮೊದಲ 33 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್‌, 7 ಬೌಂಡರಿಗಳೂ ಸೇರಿವೆ.

    ಮಿಂಚಿದ ರಿಂಕು, ರುತು:
    ಇತ್ತ ಅಭಿಷೇಕ್‌ ಶರ್ಮಾ ಶತಕ ಸಿಡಿಸಿ ಪೆವಿಲಿಯನ್‌ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌ ಜೋಡಿ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್‌ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್‌ 47 ಎಸೆತಗಳಲ್ಲಿ 77 ರನ್‌ (1 ಸಿಕ್ಸರ್‌, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್‌ ಸ್ಫೋಟಕ 48 ರನ್‌ (22 ಎಸೆತ, 5 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್‌ ಗಿಲ್‌ 2 ರನ್‌ ಗಳಿಸಿದರು.

  • ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    – ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದ ಭಾರತ

    ಹರಾರೆ: ಟೀಂ ಇಂಡಿಯಾದ ಯುವ ಬ್ಯಾಟರ್‌ ಅಭಿಷೇಕ್‌ ಶರ್ಮಾ (Abhishek Sharma) ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆಗಿ ಭಾರೀ ಟೀಕೆಗೆ ಗುರಿಯಾಗಿದ್ದ ಅಭಿ, ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ.

    ಇಲ್ಲಿನ ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ (Team India) 10 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ಬಳಿಕ ಅಭಿಷೇಕ್‌ ಶರ್ಮಾ ಅವರ ಸ್ಪೋಟಕ ಶತಕ ಹಾಗೂ ರುತುರಾಜ್‌ ಗಾಯಕ್ವಾಡ್‌ ಅವರ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿದೆ.

    ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
    ಐಪಿಎಲ್‌ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನಾಡುತ್ತಿರುವ ಪಂಜಾಬ್‌ ಮೂಲದ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ 33 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್‌, 7 ಬೌಂಡರಿಗಳೂ ಸೇರಿವೆ.

    ಶತಕ ವೀರರ ಎಲೈಟ್‌ ಪಟ್ಟಿಗೆ ಅಭಿ:
    ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲೇ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ ಕಡಿಮೆ ಎಸೆತಗಳಲ್ಲಿ ಶತಕ ಪೂರೈಸಿದ ದಿಗ್ಗರ ಎಲೈಟ್‌ ಪಟ್ಟಿ ಸೇರಿದ್ದಾರೆ. ಆರನ್‌ ಫಿಂಚ್‌, ಕ್ರಿಸ್‌ಗೇಲ್‌, ಕೊಲಿನ್‌ ಮನ್ರೋ, ರವೀಂದರ್‌ಪಾಲ್‌ ಸಿಂಗ್‌, ಜೋಶ್‌ ಇಂಗ್ಲಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಈವರೆಗೆ 47 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರಾಗಿದ್ದರು. ಇದೀಗ ಈ ದಿಗ್ಗಜರ ಪಟ್ಟಿಗೆ ಅಭಿಷೇಕ್‌ ಶರ್ಮಾ ಸೇರ್ಪಡೆಗೊಂಡಿದ್ದಾರೆ.

    ಜಿಂಬಾಬ್ವೆಗೆ 235 ರನ್‌ ಗುರಿ:
    ಜಿಂಬಾಬ್ವೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 234 ರನ್‌ ಬಾರಿಸಿದ್ದು, ಎದುರಾಳಿ ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದೆ.

    ಮಿಂಚಿದ ರಿಂಕು, ರುತು:
    ಇತ್ತ ಅಭಿಷೇಕ್‌ ಶರ್ಮಾ ಶತಕ ಸಿಡಿಸಿ ಪೆವಿಲಿಯನ್‌ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌ ಜೋಡಿ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್‌ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್‌ 47 ಎಸೆತಗಳಲ್ಲಿ 77 ರನ್‌ (1 ಸಿಕ್ಸರ್‌, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್‌ ಸ್ಫೋಟಕ 48 ರನ್‌ (22 ಎಸೆತ, 5 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್‌ ಗಿಲ್‌ 2 ರನ್‌ ಗಳಿಸಿದರು.

  • ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

    ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

    ಚೆನ್ನೈ: ನಾಯಕ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಡೇರಿಲ್‌ ಮಿಚೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (CSK vs SRH) ವಿರುದ್ಧ 78 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ 18.5 ಓವರ್‌ಗಳಲ್ಲೇ 134 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

    ಚೇಸಿಂಗ್‌ ಆರಂಭಿಸಿದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ಸಿಕ್ಸರ್‌-ಬೌಂಡರಿ ಸಿಡಿಸುತ್ತಿದ್ದ ಅಗ್ರ ಕ್ರಮಾಂಕದ ಟಾಪ್‌ ಬ್ಯಾಟರ್ಸ್‌ಗಳು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಇದು ಚೆನ್ನೈ ತಂಡಕ್ಕೆ ಲಾಭವಾಯಿತು. ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಏಡನ್‌ ಮಾರ್ಕ್ರಮ್‌ ಬ್ಯಾಕ್‌ ಟು ಬ್ಯಾಕ್‌ ಪೆವಿಲಿಯನ್‌ ಪರೇಡ್‌ ನಡೆಸಿದರು. ಹಾಗಾಗಿ ಸಹಜವಾಗಿಯೇ ಗೆಲುವು ಚೆನ್ನೈ ತಂಡದ ಪಾಲಾಯಿತು.

    ಸನ್‌ ರೈಸರ್ಸ್‌ ತಂಡದ ಪರ ಟ್ರಾವಿಸ್‌ ಹೆಡ್‌ (Travis Head) 13 ರನ್‌, ಅಭಿಷೇಕ್‌ ಶರ್ಮಾ 15 ರನ್‌, ಏಡನ್‌ ಮಾರ್ಕ್ರಮ್‌ 32 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 15 ರನ್‌, ಹೆನ್ರಿಕ್‌ ಕ್ಲಾಸೆನ್‌ 20 ರನ್‌, ಅಬ್ದುಲ್‌ ಸಮದ್‌ 19 ರನ್‌, ಪ್ಯಾಟ್‌ ಕಮ್ಮಿನ್ಸ್‌ 5 ರನ್‌, ಶಹಬಾಜ್‌ 7 ರನ್‌, ಜಯದೇವ್‌ ಉನದ್ಕಟ್‌ 1 ರನ್‌ ಗಳಿಸಿದ್ರೆ, ಭುವನೇಶ್ವರ್‌ ಕುಮಾರ್‌ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ ಮತ್ತೊಬ್ಬೆ ಬೌಲಿಂಗ್‌ ಪಿಚ್‌ನಲ್ಲಿ ರನ್‌ ಹೊಳೆ ಹರಿಸಿತ್ತು. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿತ್ತು. ಆರಂಭಿಕ ಅಜಿಂಕ್ಯಾ ರಹಾನೆ 9 ರನ್‌ಗಳಿಗೆ ವಿಕೆಟ್‌ ಕೈ ಚೆಲ್ಲಿದರೂ ಇತರ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ಕೊನೇ ಓವರ್‌ನಲ್ಲಿ ಕೈತಪ್ಪಿದ ಶತಕ:
    ಆರಂಭಿಕನಾಗಿ ಕಣಕ್ಕಿಳಿದಿದ್ದ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ ಗಳಿಸಿದ್ದರು. ಇಂದು ತಮ್ಮ 2ನೇ ಐಪಿಎಲ್‌ ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಆದ್ರೆ 20ನೇ ಓವರ್‌ನ 2ನೇ ಎಸೆತದಲ್ಲೇ ಸಿಕ್ಸರ್‌ ಸಿಡಿಸಲು ಯತ್ನಿಸಿ ಬೌಂಡರಿ ಲೈನ್‌ ಬಳಿಕ ಕ್ಯಾಚ್‌ಗೆ ತುತ್ತಾದರು.

    ಸಿಎಸ್‌ಕೆ ಪರ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ (3 ಸಿಕ್ಸರ್‌, 10 ಬೌಂಡರಿ), ಡೇರಿಲ್‌ ಮಿಚೆಲ್‌ 52 ರನ್‌ (32 ಎಸೆತ, 7 ಬೌಂಡರಿ, 1 ಸಿಕ್ಸರ್‌), ಶಿವಂ ದುಬೆ 39 ರನ್‌ (20 ಎಸೆತ, 4 ಸಿಕ್ಸರ್‌, 1 ಬೌಂಡರಿ), ಅಜಿಂಕ್ಯಾ ರಹಾನೆ 9 ರನ್‌, ಎಂ.ಎಸ್‌ ಧೋನಿ 5 ರನ್‌ ಗಳಿಸಿದರು.

    ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌, ಟಿ ನಟರಾಜನ್‌ ಹಾಗೂ ಜಯದೇವ್‌ ಉನಾದ್ಕಟ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ನಾಮಕಾವಸ್ಥೆಗೆ ನಾಯಕ ಆದ್ರಾ ರುತುರಾಜ್‌ – ನಾಯಕತ್ವದ ಬಗ್ಗೆ ಸೆಹ್ವಾಗ್‌ ಹೇಳಿದ್ದೇನು?

    ನಾಮಕಾವಸ್ಥೆಗೆ ನಾಯಕ ಆದ್ರಾ ರುತುರಾಜ್‌ – ನಾಯಕತ್ವದ ಬಗ್ಗೆ ಸೆಹ್ವಾಗ್‌ ಹೇಳಿದ್ದೇನು?

    ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ (IPL 2024) ಟೂರ್ನಿ ಅದ್ಧೂರಿಯಾಗಿ ಚಾಲನೆಗೊಂಡಿದ್ದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲುವಿನ ಖಾತೆ ತೆರೆದಿದೆ. ನೂತನ ನಾಯಕ ರುತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರ ನೇತೃತ್ವದಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದೆ. ಆದ್ರೆ ಪಂದ್ಯದ ಬಳಿಕ ರುತುರಾಜ್‌ ನಾಮಕಾವಸ್ಥೆಗೆ ಮಾತ್ರ ನಾಯಕನಾದ್ರಾ ಅನ್ನೋ ಪ್ರಶ್ನೆ ಎದ್ದಿದೆ.

    ಟಾಸ್‌ ಸೋತು ಆರ್‌ಸಿಬಿ ವಿರುದ್ಧ ಮೊದಲು ಸಿಎಸ್‌ಕೆ ಫೀಲ್ಡಿಂಗ್‌ (Field) ಮಾಡಿತು. ಈ ವೇಳೆ ರುತುರಾಜ್‌ ನಾಯಕನಾಗಿದ್ದರೂ, ಎಂ.ಎಸ್‌ ಧೋನಿ ಅವರ ಮೇಲೆ ಕ್ಯಾಮೆರಾ ಹೆಚ್ಚು ಫೋಕಸ್‌ ಆಗಿತ್ತು. ರುತುರಾಜ್‌ ಬೌಲರ್‌ಗಳೊಂದಿಗೆ ಹಾಗೂ ಫೀಲ್ಡಿಂಗ್‌ ಸೆಟ್‌ ಮಾಡುತ್ತಿದ್ದ ದೃಶ್ಯ ಕೆಲವು ವೇಳೆ ಕಂಡುಬಂದರೂ ಧೋನಿ (MS Dhoni) ಫೀಲ್ಡಿಂಗ್‌ ಸೆಟ್‌ ಮಾಡುತ್ತಿದ್ದಾಗ ಮಾತ್ರ ಅವರನ್ನು ಹೆಚ್ಚಾಗಿ ತೋರಿಸಲಾಗುತ್ತಿತ್ತು.

    ಈ ವೇಳೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ (Virender Sehwag), ದಯವಿಟ್ಟು ರುತುರಾಜ್‌ ಅವರ ಮುಖವನ್ನು ತೋರಿಸು ಗುರು ಅವರು ತಂಡದ ನಾಯಕ, ಕ್ಯಾಮೆರಾ ಮ್ಯಾನ್‌ ಧೋನಿಯ ಮುಖವನ್ನ ಮಾತ್ರ ತೋರಿಸ್ತಿದ್ದಾರೆ ಅಂತಾ ಹೇಳಿದ್ದಾರೆ. ಸೆಹ್ವಾಗ್‌ ಅವರ ಈ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: IPL 2024: ತವರಿನಲ್ಲಿ ರಾಯಲ್‌ ಆಗಿ ಚಾಲೆಂಜ್‌ ಗೆದ್ದ ಚೆನ್ನೈ – 6 ವಿಕೆಟ್‌ಗಳ ಜಯ, ಸಿಎಸ್‌ಕೆ ಶುಭಾರಂಭ

    ರುತುರಾಜ್‌ ನಾಯಕತ್ವ ಹೊಗಳಿದ ಪಠಾಣ್‌:
    ಆರ್‌ಸಿಬಿ ವಿರುದ್ಧ ಚೆನ್ನೈ ಗೆಲುವು ಸಾಧಿಸುತ್ತಿದ್ದಂತೆ ಇರ್ಫಾನ್‌ ಪಠಾಣ್‌, ರುತುರಾಜ್‌ ಅವರ ನಾಯತ್ವವನ್ನು ಹೊಗಳಿದ್ದಾರೆ. ಮೊದಲ 26 ಎಸೆತಗಳ ನಂತರ ಸಿಎಸ್‌ಕೆ ಬ್ರಿಲಿಯಂಟ್ ಕಮ್ ಬ್ಯಾಕ್ ಮಾಡಿತು. ಒತ್ತಡದ ಸಮಯದಲ್ಲಿ ರುತುರಾಜ್ ಬೌಲಿಂಗ್ ಬದಲಾವಣೆ ಮಾಡುತ್ತಿದ್ದ ರೀತಿ ಆಕರ್ಷಕವಾಗಿತ್ತು ಎಂದು ಕೊಂಡಾಡಿದ್ದಾರೆ.

    ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ (RCB) 173 ರನ್‌ ಗಳಿತ್ತು. 174 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌‌ ಕಿಂಗ್ಸ್‌ ತಂಡ 18.4 ಓವರ್‌ಗಳಲ್ಲಿ 176 ರನ್‌ ಬಾರಿ 17ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಇದನ್ನೂ ಓದಿ: IPL 2024: 21 ರನ್‌ ಬಾರಿಸಿದ್ರೂ ಎರಡೆರಡು ದಾಖಲೆ ಬರೆದ ಕಿಂಗ್‌ ಕೊಹ್ಲಿ!