Tag: ರುಚಿಕಾ ಕಪೂರ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಭಾರತದ ಅರ್ಜುನ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಭಾರತದ ಅರ್ಜುನ

    ಮುಂಬೈ: ಹಿಂದಿಯ ಮಹಾಭಾರತ ಧಾರಾವಾಹಿಯ ಅರ್ಜುನ ಪಾತ್ರದ ಶಾಹೀರ್ ಶೇಖ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

     

    View this post on Instagram

     

    A post shared by Ruchikaa Kapoor (@ruchikaakapoor)

    ಶಾಹೀರ್ ಶೇಖ್ ಅವರು ನಿರ್ಮಾಪಕಿ ಏಕ್ತಾ ಕಪೂರ್ ಅವರ ಪ್ರೊಡಕ್ಷನ್ ಹೌಸ್‍ನಲ್ಲಿ ಕೆಲಸ ಮಾಡುವ ರುಚಿಕಾ ಕಪೂರ್ ಕೈ ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಈ ಜೋಡಿ ವಿವಾಹವಾಗಿದ್ದು, ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ರಿಜಿಸ್ಟರ್ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

     

    View this post on Instagram

     

    A post shared by Ruchikaa Kapoor (@ruchikaakapoor)

    2021ರ ಜೂನ್ ತಿಂಗಳಲ್ಲಿ ಜಮ್ಮುವಿನಲ್ಲಿರುವ ಶಾಹೀರ್ ಅವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಇವರಿಬ್ಬರ ವಿವಾಹ ನಡೆಯಲಿದ್ದು, ಮುಂಬೈನ ರುಚಿಕಾ ಮನೆಯಲ್ಲಿ ಸಹ ಮದುವೆ ಶಾಸ್ತ್ರಗಳು ನಡೆಯಲಿವೆ. ಇದೀಗ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

     

    View this post on Instagram

     

    A post shared by Shaheer Sheikh (@shaheernsheikh)

    ರುಚಿಕಾ ಯಾರು?
    ರುಚಿಕಾ ಕಪೂರ್ ಅವರು ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್‍ನಲ್ಲಿ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಏಕ್ತಾ ಕಪೂರ್ ಅವರ ಬಹುಮುಖ್ಯವಾದ ಶೋಗಳಲ್ಲಿ ರುಚಿಕಾ ಕೆಲಸ ಮಾಡಿದ್ದಾರೆ. ಶಾಹೀರ್ ಶೇಖ್ ಹಾಗೂ ರುಚಿತಾ ಅನೇಕ ಪ್ರಾಜೆಕ್ಟ್ ಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಸ್ನೇಹ ಮೂಡಿದ್ದು, ಬಳಿಕ ಪ್ರೀತಿಗೆ ತಿರುಗಿದೆ. ಇದೀಗ ವಿವಾಹವಾಗಿದ್ದಾರೆ.

    ಇಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದು, ನಾವು ಮೊದಲು ಸ್ನೇಹಿತೆರಾಗಿದ್ದೆವು, ಬಳಿಕ ಪ್ರೀತಿಯಾಯಿತು. ನನಗೆ ಇಷ್ಟವಾಗುವ ಸಂಗಾತಿ ಸಿಕ್ಕಿರೋದು ಖುಷಿ ವಿಷಯ. ಅವಳೊಂದಿಗೆ ಮುಂದಿನ ಜೀವನ ನಡೆಸಲು ಉತ್ಸುಕದಿಂದಿದ್ದೇನೆ ಎಂದು ಶಾಹೀರ್ ಶೇಖ್ ಹೇಲಿಕೊಂಡಿದ್ದಾರೆ. ಅದೇ ರೀತಿ ರುಚಿಕಾ ಕಪೂರ್ ಸಹ ಸಂತಸ ವ್ಯಕ್ತಪಡಿಸಿದ್ದು, ಶಾಹೀರ್ ಶೇಖ್ ಸರಳತೆ, ಮಾನವೀಯತೆ ತುಂಬಾ ಇಷ್ಟ ಆಯಿತು. ಈ ರೀತಿಯ ಒಳ್ಳೆಯ ಗುಣ ಇರೋರು ಸಿಗೋದು ಅಪರೂಪ. ನಾವಿಬ್ಬರೂ ಬೇರೆ ಬೇರೆ ಹಿನ್ನಲೆಯಿಂದ ಬಂದವರು. ಆದರೂ ನಮ್ಮಲ್ಲಿರುವ ವ್ಯತ್ಯಾಸಗಳ ಕುರಿತು ಯೋಚಿಸದೆ ಈ ನಿರ್ಧಾರಕ್ಕೆ ಬಂದೆವು ಎಂದಿದ್ದಾರೆ.