Tag: ರೀ- ರಿಲೀಸ್

  • ಅಂಬಿ ಹುಟ್ಟು ಹಬ್ಬಕ್ಕೆ ‘ಅಂತ’ ರೀ ರಿಲೀಸ್

    ಅಂಬಿ ಹುಟ್ಟು ಹಬ್ಬಕ್ಕೆ ‘ಅಂತ’ ರೀ ರಿಲೀಸ್

    ರೆಬೆಲ್ ಸ್ಟಾರ್ ಅಂಬರೀಶ್ (Ambarish) ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ‘ಅಂತ’ (Antha) ಸಿನಿಮಾವನ್ನು ಅವರ ಹುಟ್ಟು ಹಬ್ಬದ ದಿನದಂದು ಮರು ಬಿಡುಗಡೆ (Re Release) ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತ್ಯುತ್ತಮ ತಂತ್ರಜ್ಞಾನದ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರಗು ತುಂಬಿದ್ದು, ಹಲವು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    ಮೇ 29 ಅಂಬರೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಉಡುಗೊರೆ ಎನ್ನುವಂತೆ ಚಿತ್ರವನ್ನು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿದ್ದು 1981ರಲ್ಲಿ, ಇದೀಗ ಅದೇ ಚಿತ್ರವನ್ನು ಕಲರ್ ಸ್ಕೋಪ್ ಮಾಡಿ, 5.1 ಸೌಂಡ್ ವ್ಯವಸ್ಥೆಯನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಎಚ್.ಕೆ ಅನಂತ್ ರಾವ್ ಅವರ ಸರಣಿಯ ಕಥೆಗಳನ್ನು ಆಧರಿಸಿ ತಯಾರಾದ ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು (Rajendra Singh Babu) ನಿರ್ದೇಶಕರು. ಆರಂಭದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಯಾರೂ ಮನಸ್ಸು ಮಾಡಲಿಲ್ಲ. ಕೊನೆಗೆ ಕೈ ಹಿಡಿದದ್ದು ಎಚ್.ಎನ್. ಮಾರುತಿ ಹಾಗೂ ವೇಣು ಗೋಪಾಲ್. ಸೆನ್ಸಾರ್ ಮಂಡಳಿಯ ವಿಪರೀತ ತೊಂದರೆ ನಡುವೆಯೂ ಸಿನಿಮಾ ರಿಲೀಸ್ ಆಗಿತ್ತು.

  • ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ-ಎಂಟ್ರಿ: ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

    ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ-ಎಂಟ್ರಿ: ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

    ರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನಟನೆಯ `ಜೇಮ್ಸ್’ ಸಿನಿಮಾ ಅಪ್ಪು ಹುಟ್ಟಿದ ಹಬ್ಬದೆಂದೇ ತೆರೆಗೆ ಅಬ್ಬರಿಸಿತ್ತು. ಪುನೀತ್ ಕಡೆಯ ಚಿತ್ರವನ್ನ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದಲ್ಲದೇ ಯಶಸ್ವಿ ಪ್ರದರ್ಶನ ಕಂಡಿತ್ತು. ಅಪ್ಪು ಅಭಿಮಾನಿಗಳು `ಜೇಮ್ಸ್’ ಚಿತ್ರಕ್ಕೆ ಎಮೋಷನಲಿ ಕನೆಕ್ಟ್ ಆಗಿದ್ರು. ಈಗ ಅಪ್ಪು ಫ್ಯಾನ್ಸ್ಗೆ ಚಿತ್ರತಂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪುನೀತ್ ಧ್ವನಿಯಲ್ಲೇ ಇಂದು ಜೇಮ್ಸ್ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ.

    ಚೇತನ್‌ ಕುಮಾರ್‌ ನಿರ್ದೇಶನದ ಪುನೀತ್‌ ನಟನೆಯ ಕಡೆಯ ಚಿತ್ರವನ್ನು ಜೇಮ್ಸ್ ಜಾತ್ರೆಯಾಗಿ ಮಾಡಿದ್ರು. ಈ ಮೂಲಕ ಅಪ್ಪು ಮೇಲಿನ ಅಭಿಮಾನವನ್ನ ತೋರಿಸಿದ್ರು ಅಭಿಮಾನಿ ದೇವರುಗಳು. ಜೇಮ್ಸ್ ಚಿತ್ರ ನೋಡಿ ಇಷ್ಟಪಟ್ಟಿದ್ದ ಫ್ಯಾನ್ಸ್ಗೆ ಅಪ್ಪು ಧ್ವನಿ ಇರಬೇಕಿತ್ತು ಎಂಬ ಕೊರಗಿತ್ತು. ಇದೀಗ ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಜೋಡಿಯಾಗಿ ಮಿಂಚಲು ರೆಡಿಯಾದ್ರು ಡಾಲಿ-ಅಮೃತಾ: `ಹೊಯ್ಸಳ’ನಾಗಿ ಡಾಲಿ ಅಬ್ಬರ!

    `ಜೇಮ್ಸ್’ನಲ್ಲಿ ಪುನೀತ್ ಭಾಗದ ಚಿತ್ರೀಕರಣವಾಗಿದ್ರು, ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಆಗಿರಲಿಲ್ಲ. ನಂತರ ಪುನೀತ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಅವರೇ ಧ್ವನಿ ನೀಡಿದ್ರು. ಆದರೆ ಪುನೀತ್ ಧ್ವನಿಯನ್ನು ಅಳವಡಿಸಲು ಚಿತ್ರತಂಡ ಪ್ರಯತ್ನ ಮುಂದುವರೆಸಿತ್ತು. ಈಗ ಯಶಸ್ವಿಯಾಗಿ ರಾಜ್ಯದ 65 ಚಿತ್ರಮಂದಿರಗಳಲ್ಲಿ ತೆರೆಗೆ ಅಬ್ಬರಿಸುತ್ತಿದೆ. ಈಗಾಗಲೇ ಅನುಪಮಾ ಚಿತ್ರಮಂದಿರದಲ್ಲಿ ಮೊದಲ ಫ್ಯಾನ್ಸ್‌ ಶೋ ಆಯೋಜಿಸಲಾಗಿದ್ದು, ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಪುನೀತ್ ಧ್ವನಿಯಲ್ಲೇ ಚಿತ್ರವನ್ನ ನೋಡಬಹುದಾಗಿದೆ.

    ಆಧುನಿಕ ತಂತ್ರಜ್ಞಾನದಿಂದ ಜೇಮ್ಸ್ ರೀ-ರಿಲೀಸ್ ಆಗಿದ್ದು, ಸದ್ಯದಲ್ಲೇ ಚಿತ್ರ 50ನೇ ದಿನವನ್ನ ಪೂರೈಸಲಿದೆ. ಕಡೆಗೂ ಅಪ್ಪು ವಾಯ್ಸ್ ಕೇಳಿ ಥ್ರಿಲ್ ಆಗಿರೋ ಫ್ಯಾನ್ಸ್ ಪ್ರೇಕ್ಷಕರಿಗೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅಪ್ಪು ವಾಯ್ಸ್ ಕೇಳಿ ಥಿಯೇಟರ್‌ನಲ್ಲಿ ಸಂಭ್ರಮಿಸಿ ಸಿನಿಮಾ ನೋಡ್ತಿದ್ದಾರೆ.

  • ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

    ಅರ್ಜುನ್ ಸರ್ಜಾ, ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ರೀ ರಿಲೀಸ್!

    ಬೆಂಗಳೂರು: ಮೀಟೂ ಆರೋಪದ ಮೂಲಕವೇ ಸುದ್ದಿಯಾಗಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅಭಿನಯದ ವಿಸ್ಮಯ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ.

    ಹೌದು, ನಟಿ ಶೃತಿ ಹರಿಹರನ್ ಅವರು ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎನ್ನುವ ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಗಾಂಧಿ ನಗರದಲ್ಲಿ ಸದ್ದು ಮಾಡಿತ್ತು.

    2017ರ ಜುಲೈ 27ರಂದು ತೆರೆಕಂಡ ವಿಸ್ಮಯ ಸಿನೆಮಾ, ಪ್ರೇಕ್ಷರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಸರ್ಜಾ ಸಖತ್ ಖದರ್ ತೋರಿದ್ದರೆ, ಅವರ ಪತ್ನಿಯಾಗಿ ನಟಿ ಶೃತಿ ಹರಿಹರನ್ ಅಭಿನಯಿಸಿದ್ದರು.

    ಮೀಟೂ ಆರೋಪದಿಂದಾಗಿ ವಿಸ್ಮಯ ಚಿತ್ರ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಹಾಗೂ ವಿತರಕರು ಸಿನಿಮಾವನ್ನು ಮತ್ತೆ ರೀ ರೀಲಿಸ್ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ಚಿತ್ರ ನಿರ್ಮಾಪಕ ಉಮೇಶ್ ಮಾತನಾಡಿ, ರಾಜ್ಯೋತ್ಸವದ ನಂತರ ವಿಸ್ಮಯ ಚಿತ್ರವನ್ನು ರೀ ರಿಲೀಸ್ ಮಾಡುತ್ತೇನೆ. ಹೀಗಾಗಲೇ ಎಲ್ಲಾ ವಿತರಕರು ನಮ್ಮನ್ನು ಬಲವಂತ ಮಾಡುತ್ತಿದ್ದು ಅವರ ಆಸಕ್ತಿ ಮೇರೆಗೆ ಮತ್ತೊಮ್ಮೆ ತೆರೆಮೇಲೆ ವಿಸ್ಮಯ ಚಿತ್ರ ಮೂಡಿಬರಲಿದೆ. ಈ ಬಗ್ಗೆ ಎಲ್ಲಾ ಚಿತ್ರಮಂದಿರಗಳ ಜೊತೆ ವಿತರಕರು ಸಂಪರ್ಕ ಮಾಡುತ್ತಿದ್ದಾರೆ. ಚಿತ್ರ ರಿಲೀಸ್‍ಗೆ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಆಗಲಿ ಯಾವುದೇ ಸಂಬಂಧವಿಲ್ಲ. ಚಿತ್ರ ರೀ ರಿಲೀಸ್‍ಗೆ ಯಾವುದೇ ಅಡ್ಡಿ ಇಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

    ಇದೇ ವೇಳೆ ನಟ ಚೇತನ್ ಬಗ್ಗೆ ಮಾತನಾಡಿ, ಕನ್ನಡ ಇಂಡಸ್ಟ್ರೀಸ್‍ನಲ್ಲಿ ವಿಸ್ಮಯ ನನ್ನ ಮೊದಲನೇ ಸಿನೆಮಾ ಆಗಿದ್ದು, ಅರುಣ್ ವೈದ್ಯನಾಥನ್ ಅವರು ಅಮೆರಿಕದಿಂದ ಬಂದು ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ಚಿತ್ರೀಕರಣದ ವೇಳೆ ಖಳನಾಯಕರ ಪಾತ್ರಕ್ಕೆ ಸ್ಥಳೀಯ ಸಹ ನಿರ್ದೇಶಕರ ಸೂಚನೆ ಮೇರೆಗೆ ನಟ ಚೇತನ್ ಹಾಗೂ ಜೆಕೆ ಅವರನ್ನು ಆಯ್ಕೆಮಾಡಿಕೊಂಡು, ಚೇತನ್ ಅವರನ್ನು ಅಶೋಕ ಹೋಟೆಲ್‍ನಲ್ಲಿ ಭೇಟಿಯಾಗಿ ಮಾತನಾಡಿದ್ದೇವು. ಆದರೆ ಚೇತನ್ ರ ಸಮಯದ ಅಭಾವದಿಂದ ನಿರ್ದೇಶಕರು ಜೆಕೆಯವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ‘ನಾಗರಹಾವು’ ಸಿನಿಮಾ ರೀ ರಿಲೀಸ್- ಅಭಿಮಾನಿಗಳಿಂದ ವಿಷ್ಣುದಾದಾಗೆ ಭರ್ಜರಿ ಸ್ವಾಗತ!

    ‘ನಾಗರಹಾವು’ ಸಿನಿಮಾ ರೀ ರಿಲೀಸ್- ಅಭಿಮಾನಿಗಳಿಂದ ವಿಷ್ಣುದಾದಾಗೆ ಭರ್ಜರಿ ಸ್ವಾಗತ!

    ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರ ಇಂದು ಮತ್ತೆ ತೆರೆಗೆ ಬಂದಿದೆ. ಧ್ವನಿ ವಿನ್ಯಾಸ, ಸಿನಿಮಾ ಸ್ಕೋಪ್ ಮೂಲಕ ಚಿತ್ರ ರೀ- ರಿಲೀಸ್ ಆಗಿದೆ. ರಾಜ್ಯಾದ್ಯಂತ ವಿಷ್ಣುವರ್ಧನ್ ಅಭಿಮಾನಿಗಳು ಭರ್ಜರಿಯಿಂದ ಚಿತ್ರವನ್ನು ಸ್ವಾಗತಿಸಿದ್ದಾರೆ.

    ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನವೀನ ತಂತ್ರಜ್ಞಾನದೊಂದಿಗೆ ತೆರೆಗೆ ತಂದಿದ್ದಾರೆ.

    ನಾಗರಹಾವು ಚಿತ್ರ ಮರು ಬಿಡುಗಡೆ ಹಿನ್ನೆಲೆಯಲ್ಲಿ ಬಾಗಲಕೋಟೆಯ ಕೃಷ್ಣಾ ಥೇಟರ್ ಆವರಣದಲ್ಲಿ ವಿಷ್ಣು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಂಭ್ರಮ ಮನೆ ಮಾಡಿದೆ. 70ರ ದಶಕದಲ್ಲಿ ನಾಗರ ಹಾವು ಚಿತ್ರ ತೆರೆಕಂಡಿತ್ತು. ಈಗ ಡಾ. ವಿಷ್ಣು ಸೇನಾ ಕಾರ್ಯಕರ್ತರ ಸಂಭ್ರಮಾಚರಣೆ ಮಾಡುತ್ತಿದ್ದು, ದಿವಗಂತ ವಿಷ್ಣುವರ್ಧನ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ವಿಷ್ಣು ಭಾವಚಿತ್ರವಿರುವ ಕೇಕ್ ಕಟ್ ಮಾಡಿ, ಸಿಹಿ ಹಂಚಿ ರಾಮಾಚಾರಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ದಾವಣಗೆರೆಯಲ್ಲೂ ವಿಷ್ಟು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ನಗರದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಅಭಿಮಾನಿಗಳು 20 ಅಡಿ ಎತ್ತರದ ವಿಷ್ಣು ಕಟೌಟ್ ಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದ್ರು. ಕಟೌಟ್ ಗೆ ಕೊಡಗಳಲ್ಲಿ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ವಿಷ್ಣುವರ್ಧನ್ ಅಭಿಮಾನಿಯೊಬ್ಬ ಆಕರ್ಷಕ ಉಡುಗೆ ತೊಟ್ಟು ಅಭಿಮಾನಿಗಳನ್ನು ರಂಜಿಸಿದ್ರು. ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಡೈಲಾಗ್ ಹೇಳಿ ನಾಗರಹಾವು ಚಿತ್ರ ನೂರು ದಿನಗಳು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ರಾಯಚೂರಿನಲ್ಲೂ ಆಧುನಿಕ ತಂತ್ರಜ್ಞಾನದ ಮೆರಗಿನೊಂದಿಗೆ ಬಿಡುಗಡೆಯಾದ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನಾಗರಹಾವುಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ನಗರದ ಎಸ್ ಎನ್ ಟಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡಯಾಗಿದ್ದು, ಚಿತ್ರದ ಪೋಸ್ಟರ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ವಿಷ್ಣುವರ್ಧನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿನಿಮಾ ಮರು ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸಿದ್ದಾರೆ. ತೆಂಗಿನಕಾಯಿ ಹೊಡೆಯುವ ಮೂಲಕ ಸಿನಿಮಾ ಶತದಿನ ಆಚರಿಸಬೇಕು ಎಂದು ಹಾರೈಸಿದ್ದಾರೆ.

    ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ ನಾಗರಹಾವು ಚಿತ್ರ ತೆರೆಕಂಡಿದೆ. ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ಸಂಭ್ರಮಾಚರಣೆ ಮನೆ ಮಾಡಿದೆ. ದಿವಗಂತ ವಿಷ್ಣುವರ್ಧನ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಡಾ. ವಿಷ್ಣುವರ್ಧನ್ ಕಟೌಟ್ ಗೆ ಬೃಹತ್ ಗಾತ್ರದ ಹಾರ ಹಾಕಿ ರಾಮಾಚಾರಿ ಶಿಷ್ಯಂದಿರು ಅಭಿಮಾನ ಮೆರೆದಿದ್ದಾರೆ. ಸ್ಟೇಷನ್ ರಸ್ತೆಯಲ್ಲಿರುವ ರೂಪಂ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮ ಮಾಡುತ್ತಿದ್ದಾರೆ.

    ತುಮಕೂರು ಜಿಲ್ಲೆಯಲ್ಲೂ ಕೂಡಾ ಡಾ. ವಿಷ್ಣುವರ್ದನ್ ಅಭಿನಯದ ನಾಗರಹಾವು ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗೆಡೆಯಾಗಿದೆ. ತುಮಕೂರು ನಗರದ ಮಾರುತಿ ಚಿತ್ರಮಂದಿರದಲ್ಲಿ ನಾಗರಹಾವು ಬಿಡುಗಡೆಯಾಗಿದೆ. ವಿಷ್ಣು ಅಭಿಮಾನಿಗಳು ವರ್ಣಮಯ ಚಿತ್ರ ನೋಡಿ ಫುಲ್ ಖುಷ್ ಆಗಿದ್ದಾರೆ. ಸಾಹಸ ಸಿಂಹರ ಕಟೌಟ್ ತಯಾರಿಸಿ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ಅಲ್ಲದೇ ಕ್ಷೀರಾಭಿಷೇಕ ಮಾಡಿ ಅನ್ನಸಂತರ್ಪಣೆ ನೇರವೇರಿಸಿ ವಿಷ್ಣು ಅಭಿಮಾನಿಗಳು ಸಂಭ್ರಮಿಸಿದ್ದಾರೆ.