Tag: ರೀಷ್ಮಾ

  • ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ವರ್ಷದ ಮೊದಲ ಹಬ್ಬ ಇದಾಗಿದ್ದು, ಎಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೀಗ ಸ್ಯಾಂಡಲ್‌ವುಲ್‌ನಲ್ಲೂ (Sandalwood) ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳು ಸಂಕ್ರಾಂತಿ ಹಬ್ಬವನ್ನು ಸಡಗರಿದಿಂದ ಆಚರಿಸಿದ್ದಾರೆ.

     

    View this post on Instagram

     

    A post shared by Rishab Shetty (@rishabshettyofficial)

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮನೆಯಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿದೆ. ಕುಂದಾಪುರದಲ್ಲಿ ಕುಟುಂಬದೊಂದಿಗೆ ಅದ್ಧೂರಿಯಾಗಿ ರಿಷಬ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಹಬ್ಬದ ಆಚರಣೆಯ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Shwetha Srivatsav (@shwethasrivatsav)

    ನಟಿ ಶ್ವೇತಾ ಶ್ರೀವಾಸ್ತವ್ ಅವರು ಮಗಳೊಂದಿಗೆ ಕಾರ್ಕಳದಲ್ಲಿ ಹಬ್ಬ ಆಚರಿಸಿದ್ದಾರೆ. ನನ್ನ ಅಜ್ಜನ ಊರು ಕಾರ್ಕಳ. ಸುಗ್ಗಿ ಸಂಭ್ರಮ ಶುರುವಾಗಿದೆ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ. ಯಶಸ್ಸು ಹಾಗೂ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by DU✨ (@divya_uruduga)

    ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಅವರು ‘ನಿನಗಾಗಿ’ ಸೀರಿಯಲ್ ಸೆಟ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.

    ಇನ್ನೂ ಧ್ರುವ ಸರ್ಜಾ ಫಾರಂ ಹೌಸ್‌ನಲ್ಲಿ ‘ಕೆಡಿ’ ಚಿತ್ರತಂಡ ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಡೈರೆಕ್ಟರ್ ಪ್ರೇಮ್, ರೀಷ್ಮಾ ನಾಣಯ್ಯ (Reeshma Nanaiah) ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಗೋವಿಗೆ ಪೂಜೆ ಮಾಡಿಸಿದ್ದಾರೆ.

  • UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

    UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಚಿತ್ರದ (UI) ವಾರ್ನರ್ (ಟ್ರೈಲರ್) ರಿಲೀಸ್ ಆಗಿದೆ. ಈ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದ್ದು, ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದೆ. ‘ಯುಐ’ ಚಿತ್ರ ಸೂಪರ್ ಸಿನಿಮಾದ ಮುಂದುವರೆದ ಭಾಗನಾ? ಎಂದು ಕೇಳಲಾದ ಪ್ರಶ್ನೆಗೆ ಇಂಟರೆಸ್ಟಿಂಗ್ ಆಗಿ ಉಪೇಂದ್ರ ಉತ್ತರ ನೀಡಿದ್ದಾರೆ.

    2010ರ ‘ಸೂಪರ್’ (Super) ಸಿನಿಮಾದಲ್ಲಿ 2035ಕ್ಕೆ ಭಾರತ ಹೇಗಿರುತ್ತೆ ಎಂದು ತೋರಿಸಿದ್ದೀರಿ. ಈಗೀನ ‘ಯುಐ’ (UI) ಚಿತ್ರ 2040ರಲ್ಲಿ ಭಾರತ ಹೇಗಿರುತ್ತದೆ ಎಂಬುದು ತೋರಿಸಲು ಹೊರಟಿದ್ದೀರಾ, ಹಾಗಾದ್ರೆ UI ಚಿತ್ರ ಈ ಹಿಂದಿನ ಸೂಪರ್’ ಸಿನಿಮಾದ ಭಾಗನಾ? ಎಂದು ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ, ನೀವು ಹೇಗೆ ಬೇಕಾದರೂ ಅಂದುಕೊಳ್ಳಬಹುದು ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ.

     

    ಆ ನಂತರ ಆ ಚಿತ್ರದ ಕಥೆಗೂ ‘ಯುಐ’ಗೂ ಯಾವುದೇ ಸಂಬಂಧವಿಲ್ಲ. ‘ಯುಐ’ ಎಲ್ಲದ್ದಕ್ಕಿಂತ ವಿಭಿನ್ನವಾಗಿರುತ್ತದೆ. ಸಿನಿಮಾದಲ್ಲಿ ಟ್ವಿಸ್ಟ್ ಸಾಕಷ್ಟು ಇರುತ್ತದೆ. ನಮ್ಮ ಸಿನಿಮಾ ಕಥೆ ನಿಮ್ಮ ಮೇಲೆ ಡಿಫೆಂಡ್ ಆಗಿದೆ. ನೀವು ಅರ್ಥ ಮಾಡಿಕೊಳ್ಳುವುದರ ಮೇಲಿದೆ. ಇಡೀ ಸಿನಿಮಾ ಬೇರೆ ಬೇರೆ ಟಾಪಿಕ್ ಇರುತ್ತದೆ ಎಂದು ಉಪೇಂದ್ರ ಮಾತನಾಡಿದ್ದಾರೆ.

    ಅಂದಹಾಗೆ, ‘ಯುಐ’ ಸಿನಿಮಾ ವಾರ್ನರ್ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಉಪ್ಪಿ ಫ್ಯಾನ್ಸ್‌ಗೆ ಸಿಹಿಸುದ್ದಿ- ಆ.16ರಂದು ಸಿಗಲಿದೆ ‌’ಯುಐ’ ಚಿತ್ರದ ಸರ್ಪ್ರೈಸ್

    ಉಪ್ಪಿ ಫ್ಯಾನ್ಸ್‌ಗೆ ಸಿಹಿಸುದ್ದಿ- ಆ.16ರಂದು ಸಿಗಲಿದೆ ‌’ಯುಐ’ ಚಿತ್ರದ ಸರ್ಪ್ರೈಸ್

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ (UI) ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯುಐ ಸಿನಿಮಾದ ಗುಡ್‌ ನ್ಯೂಸ್‌ ಕೊಡಲು ಮುಹೂರ್ತ ಫಿಕ್ಸ್‌ ಆಗಿದೆ.

    ಇದೇ ಆ.16ರಂದು ‘ಯುಐ’ ಸಿನಿಮಾ ಬಗ್ಗೆ ಅಭಿಮಾನಿಗಳು ಖುಷಿಪಡುವಂತಹ ಸುದ್ದಿ ಹೊರಬೀಳಲಿದೆ. ಚಿತ್ರದ ಬಗ್ಗೆ ಬಿಗ್‌ ಅನೌನ್ಸ್‌ಮೆಂಟ್‌ ಬಗ್ಗೆ ಎಂದು ಉಪೇಂದ್ರ ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಸಿನಿಮಾ ರಿಲೀಸ್ ಕುರಿತು ಮತ್ತು ಚಿತ್ರದ ಟ್ರೈಲರ್‌ ಬಗ್ಗೆ ಅಪ್‌ಡೇಟ್ ಸಿಗಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ.

     

    View this post on Instagram

     

    A post shared by Upendra Kumar (@nimmaupendra)

    ಟೈಟಲ್‌ನಲ್ಲೇ ವಿಭಿನ್ನತೆ ತೋರಿಸಿರುವ ನಟ ಉಪೇಂದ್ರ ಈ ಬಾರಿ ಕಲಿಯುಗದ ಕಥೆ ಹೇಳೋಕೆ ಹೊರಟಿದ್ದಾರೆ. ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ಇದನ್ನೂ ಓದಿ:ನಾಗಾರಾಧನೆ ವೇಳೆ ಭಾವೋದ್ವೇಗಕ್ಕೆ ಒಳಗಾದ ಹಿರಿಯ ನಟಿ ಜ್ಯೋತಿ

    ಈ ಚಿತ್ರವನ್ನು ಲಹರಿ ಸಂಸ್ಥೆ ಮತ್ತು ಕೆ ಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತವಿದೆ. ಅಂದಹಾಗೆ, ‘ಯುಐ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

  • ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್

    ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್

    ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸದ್ಯ `ಬಾನದಾರಿಯಲಿ’ (Banadariyali)  ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಗಣೇಶ್ ಕೀನ್ಯಾಗೆ ಹಾರಿದ್ದಾರೆ. ಈ ವೇಳೆ ಕಿನ್ಯಾ ಮಕ್ಕಳ ಜೊತೆ ಗಣೇಶ್ ಹೆಜ್ಜೆ ಹಾಕಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ದಿಲ್ ರಂಗೀಲಾ’ (Dilrangeela) ಮತ್ತು `99′ ಚಿತ್ರದ `ಬಾನದಾರಿಯಲಿ’ ನಂತರ ಮತ್ತೆ ಪ್ರೀತಂ ಗುಬ್ಬಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಆ್ಯಕ್ಷನ್ ಕಟ್ ಹೇಳಲಿ ಸಜ್ಜಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಭರ್ಜರಿ ಆಗಿ ನಡೆಯುತ್ತಿದ್ದು, ಈ ಸಿನಿಮಾದಮ ಶೂಟಿಂಗ್‌ಗಾಗಿ ಕಿನ್ಯಾಗೆ ಹಾರಿದ್ದಾರೆ. ಕೀನ್ಯಾ ಮಕ್ಕಳ ಜೊತೆ ಗಣೇಶ್ ಖುಷಿಯಿಂದ ಕುಣಿದಿದ್ದಾರೆ. ಈ ವೀಡಿಯೋಗೆ ಅಪಾರ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಇನ್ನೂ ಈ ಚಿತ್ರದಲ್ಲಿ ಗಣೇಶ್ ಭಿನ್ನ ಕಥೆ ಮತ್ತು ಪಾತ್ರದ ಮೂಲಕ ರಂಜಿಸಲು ರೆಡಿಯಾಗಿದ್ದಾರೆ. ಗಣೇಶ್‌ಗೆ ನಾಯಕಿಯರಾಗಿ ಕೊಡಗಿನ ಕುವರಿ ರೀಷ್ಮಾ ಮತ್ತು ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ.

    `ಗಾಳಿಪಟ 2′ (Galipata 2) ಚಿತ್ರದ ಸಕ್ಸಸ್ ನಂತರ `ಬಾನದಾರಿಯಲಿ’ ಈ ಚಿತ್ರದ ಮೂಲಕ ಗಣೇಶ್ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]