Tag: ರೀಲ್ಸ್

  • ದಸರಾ ಆನೆ ಬಳಿ ರೀಲ್ಸ್‌ ನಿಷೇಧ, ಕಮಾಂಡೋ ಕಾವಲು: ಈಶ್ವರ್ ಖಂಡ್ರೆ

    ದಸರಾ ಆನೆ ಬಳಿ ರೀಲ್ಸ್‌ ನಿಷೇಧ, ಕಮಾಂಡೋ ಕಾವಲು: ಈಶ್ವರ್ ಖಂಡ್ರೆ

    ಬೆಂಗಳೂರು: ದಸರಾ ಆನೆಗಳ (Dasara Elephants) ಬಳಿ ರೀಲ್ಸ್‌ ಮಾಡುವುದನ್ನು ಸಂಪೂರ್ಣ ನಿಷೇಧಿಸಿದ್ದು, ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ (Commando) ಬಳಕೆಗೆ ತಿಳಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ಮೈಸೂರು ಅರಮನೆಯಲ್ಲಿಂದು (Mysuru Palace) ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಭೋಜನ ಬಡಿಸಿದ ಬಳಿಕ ಮಾತನಾಡಿದ ಅವರು, ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ (Reels) ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯ. ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

     

    ಕಳೆದ 18ರಂದು ಮಹಿಳೆಯೊಬ್ಬರು ಸಿಬ್ಬಂದಿಯ ಕಣ್ತಪ್ಪಿಸಿ ರೀಲ್ಸ್ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯಲೋಪವಾಗಿದೆ ಎಂಬುದನ್ನು ಪುಷ್ಟೀಕರಿಸಿದ್ದು, ಅಧಿಕಾರಿ, ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: Chitradurga | ಸಮೀಕ್ಷೆ ಕಾರ್ಯಕ್ಕೆ ಗೈರು – 68 ಸಿಬ್ಬಂದಿಗೆ ನೋಟಿಸ್

    ಆನೆ ಪಳಗಿಸುವ ಕಲೆಯನ್ನು ವಂಶಪಾರಂಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳು ಪುಂಡಾನೆ, ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇಡೀ ದೇಶದಲ್ಲಿಯೇ ಆನೆಗಳನ್ನು ಪಳಗಿಸುವಲ್ಲಿ ಕರ್ನಾಟಕದ ಮಾವುತ ಮತ್ತು ಕಾವಾಡಿಗಳಿಗೆ ವಿಶೇಷ ಕೌಶಲ್ಯವಿದೆ. ಹೀಗಾಗಿಯೇ ನೆರೆಯ ಆಂಧ್ರಪ್ರದೇಶ, ಗೋವಾ ಮೊದಲಾದ ರಾಜ್ಯಗಳು ಸಹ ಕುಮ್ಕಿ ಆನೆಯ ಸಹಾಯಕ್ಕೆ ರಾಜ್ಯಕ್ಕೆ ಮನವಿ ಮಾಡುತ್ತವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ರಿಕೆಟ್‌ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ, ಕ್ರಿಕೆಟ್ ಗೆದ್ರೆ ಯುದ್ಧವೇ ಗೆದ್ದಂತಾಯ್ತಾ? – ಬಿ.ಕೆ ಹರಿಪ್ರಸಾದ್‌ ಪ್ರಶ್ನೆ

    ಮಾವುತರು ಮತ್ತು ಕಾವಾಡಿಗಳಿಗೆ ಆನೆಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ, ನಿಯಂತ್ರಿಸುವ, ಪಾಲನೆ ಹಾಗೂ ಪೋಷಣೆ ಮಾಡುವ ಕಲೆ ರಕ್ತಗತವಾಗಿ ಬಂದಿದೆ. ಈ ಕಲೆಯನ್ನು ಪಠ್ಯ ಪುಸ್ತಕದಿಂದ ಅಥವಾ ಶಾಲಾ-ಕಾಲೇಜಿನಲ್ಲಿ ಕಲಿ ಸಲುಸಾಧ್ಯವಿಲ್ಲ. ನಮ್ಮ ರಾಜ್ಯದ ಮಾವುತರು ಹಾಗೂ ಕಾವಾಡಿಗಳಿಗೆ ವಂಶಪಾರಂಪರ್ಯವಾಗಿ ಕೌಶಲ್ಯವಿದ್ದರೂ, ಅವರಿಗೆ ತಜ್ಞರಿಂದ ವೃತ್ತಿ ತರಬೇತಿಯನ್ನೂ ಕೊಡಿಸಲಾಗುತ್ತಿದ್ದು, ಇದು ಅವರ ನೈಪುಣ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾವುತರು, ಕಾವಾಡಿಗಳ ನ್ಯಾಯಯುತ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವ ಭರವಸೆ ನೀಡಿದರು. ಇದನ್ನೂ ಓದಿ: ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಸ್ನೇಹಮಯಿ ಆಕ್ಷೇಪ – ಅ.8ಕ್ಕೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ 8 ಬಾರಿ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಜನಮನ ಗೆದ್ದಿದ್ದ ಅರ್ಜುನ ಆನೆ ಹಾಸನ ಜಿಲ್ಲೆ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದು, ಸರ್ಕಾರ ಅರ್ಜುನ ಇದ್ದ ನಾಗರಹೊಳೆಯ ಬಳ್ಳೆ ಮತ್ತು ಯಸಳೂರಿನಲ್ಲಿ ಸ್ಮಾರಕ ನಿರ್ಮಿಸಿದೆ. ಈಗಾಗಲೇ ಬಳ್ಳೆಯ ಸ್ಮಾರಕವನ್ನು ಉದ್ಘಾಟಿಸಲಾಗಿದ್ದು, ಈ ತಿಂಗಳಲ್ಲಿ ಯಸಳೂರಿನಲ್ಲೂ ಅರ್ಜುನ ಆನೆ ಸ್ಮಾರಕ ಉದ್ಘಾಟಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಅವಾಂತರ – ಮಂಗಳವಾರ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

  • ಪರಮ ಸುಂದರಿಯಾದ ರಮ್ಯಾ!

    ಪರಮ ಸುಂದರಿಯಾದ ರಮ್ಯಾ!

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾರನ್ನು (Ramya) ಸಾರ್ವಕಾಲಿಕ ಸುಂದರಿ ಎಂದು ಹೊಗಳುವುದುಂಟು. ನಾಯಕಿಯಾಗಿ ಸ್ಟಾರ್‌ಡಂ ಹುಟ್ಟುಹಾಕಿರುವ ಅನಭಿಶಕ್ತ ನಟಿ. ಇದೀಗ ಚಿಕ್ಕದೊಂದು ರೀಲ್ಸ್ ಮಾಡುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಪರಮ ಸುಂದರಿ (Param Sundari) ಚಿತ್ರದ ಟ್ರೆಂಡಿಂಗ್ ಮ್ಯೂಸಿಕ್‌ಗೆ ರಮ್ಯಾ ಜಸ್ಟ್ ಒಂದು ಲುಕ್ ಕೊಟ್ಟಿದ್ದಾರೆ.

    ಅನೇಕ ವರ್ಷಗಳಿಂದ ರಮ್ಯಾ ಸಿನಿಮಾದಿಂದ ದೂರವಿದ್ದರೂ ಸಿನಿಮಾ ಅವರನ್ನು ಬಿಡುತ್ತಿಲ್ಲ. ಮೊದಲೆಲ್ಲಾ ಸುದ್ದಿಯನ್ನಷ್ಟೇ ಹಂಚಿಕೊಳ್ಳಲು ರಮ್ಯಾ ಸೋಶಿಯಲ್ ಮೀಡಿಯಾ ಬಳಸುತ್ತಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ರೀಲ್ಸ್‌ಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಹಾಸ್ಯನಟ ಚಿಕ್ಕಣ್ಣ ಮದ್ವೆ ನಿಶ್ಚಯ

     

    View this post on Instagram

     

    A post shared by Ramya|Divya Spandana (@divyaspandana)

    ರಮ್ಯಾ ಅಭಿಮಾನಿಗಳಿಗೆ ಈ ಬದಲಾವಣೆ ಇಷ್ಟವಾಗಿದೆ. ಮತ್ತೆ ಹದಿನೈದು ವರ್ಷದ ಹಿಂದಿನ ಚಾರ್ಮ್‌ಗೆ ಮರಳಿದ್ದಾರೆ ರಮ್ಯಾ. ಇದೀಗ ಟ್ರೆಂಡ್‌ನಲ್ಲಿರುವ ಪರಮ ಸುಂದರಿ ಮ್ಯೂಸಿಕ್‌ಗೆ ರಮ್ಯಾ ಸೀರೆಯುಟ್ಟು ಸಣ್ಣದೊಂದು ಝಲಕ್ ಕೊಟ್ಟಿದ್ದಾರೆ. ಅಷ್ಟಕ್ಕೇ ಲಕ್ಷಾಂತರ ವೀವ್ಸ್, ಲೈಕ್ಸ್, ಬಂದಿದೆ. ಅಭಿಮಾನಿಗಳು ನೀವೇ ನಿಜವಾದ ಪರಮ ಸುಂದರಿ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್

    ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್

    ಭುವನೇಶ್ವರ: ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಯೂಟ್ಯೂಬರ್ (YouTuber) ಕೊಚ್ಚಿಹೋದ ಘಟನೆ ಒಡಿಶಾದ (Odisha) ಕೊರಾಪುಟ್ (Koraput) ಜಿಲ್ಲೆಯಲ್ಲಿ ನಡೆದಿದೆ.

    ದುಡುಮಾ ಜಲಪಾತದಲ್ಲಿ (Duduma Waterfall) ಘಟನೆ ನಡೆದಿದೆ. ನೀರಿನಲ್ಲಿ ಸಿಲುಕಿ ಬೆರ್ಹಾಂಪುರ್‌ನ ಸಾಗರ್ ತುಡು (22) ಎಂಬ ಯೂಟ್ಯೂಬರ್ ನಾಪತ್ತೆಯಾಗಿದ್ದಾನೆ. ಸಾಗರ್ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಪ್ರಮುಖ ಪ್ರವಾಸಿ ತಾಣಗಳ ವೀಡಿಯೋಗಳನ್ನು ಚಿತ್ರೀಕರಿಸಲು ಬಂದಿದ್ದಾಗ ಘಟನೆ ಸಂಭವಿಸಿದೆ. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ – ಟ್ರಾಫಿಕ್‌ ಫೈನ್‌ ಕಟ್ಟೋ ಮುನ್ನ ಎಚ್ಚರವಾಗಿರಿ

    ಕಟಕ್‌ನಿಂದ ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಜೊತೆ ಕೊರಾಪುಟ್‌ಗೆ ಬಂದಿದ್ದ ಸಾಗರ್ ಜಲಪಾತದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ರೀಲ್ ರೆಕಾರ್ಡ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ಜಲಪಾತದಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಬಂಡೆಯ ಮೇಲೆ ನಿಂತಿದ್ದ ಸಾಗರ್ ಕೊಚ್ಚಿಹೋಗಿದ್ದಾನೆ. ನಾಪತ್ತೆಯಾಗಿರುವ ಸಾಗರ್‌ಗಾಗಿ ಅಗ್ನಿಶಾಮಕ ದಳ ರಕ್ಷಣಾ ಪಡೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ.  ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧ – BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11

  • ರೀಲ್ಸ್ ಹುಚ್ಚು – ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಸಾವು

    ರೀಲ್ಸ್ ಹುಚ್ಚು – ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಸಾವು

    ಹಾಸನ: ರೀಲ್ಸ್ ಮಾಡಲು ಹೋಗಿ ಟ್ರ‍್ಯಾಕ್ಟರ್ ಪಲ್ಟಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಬೆಟ್ಟದಲ್ಲಿ ನಡೆದಿದೆ.

    ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ರೀಲ್ಸ್ ಹುಚ್ಚಿಗೆ ಬಲಿಯಾದ ಯುವಕ. ರೀಲ್ಸ್ಗಾಗಿ ಕಿರಣ್ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ. ಈ ವೇಳೆ ಬೆಟ್ಟದ ತಿರುವಿನಲ್ಲಿ ವೇಗವಾಗಿ ಬಂದ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಬಿಜೆಪಿ ಕಾರ್ಯಕರ್ತರಿಂದ `ಧರ್ಮ ಉಳಿಸಿ ಯಾತ್ರೆ’


    ಪಲ್ಟಿಯಾದ ರಭಸಕ್ಕೆ ಕಿರಣ್ ಮೇಲೆಯೇ ಟ್ರ್ಯಾಕ್ಟರ್ ಉರುಳಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ಚಂಡೀಗಢ: ಮಗಳ ರೀಲ್ಸ್ (Reels) ಚಟದಿಂದ ಬೇಸತ್ತ ತಂದೆ ಟೆನ್ನಿಸ್ ಆಟಗಾರ್ತಿ (Tennis Player) ಮಗಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಗುರುಗ್ರಾಮದ (Gurugram) ಸುಶಾಂತ್ ಲೋಕ್‌ನಲ್ಲಿ ನಡೆದಿದೆ.

    ರಾಧಿಕಾ ಯಾದವ್ (25) ಮೃತ ಟೆನ್ನಿಸ್ ಆಟಗಾರ್ತಿ. ರಾಧಿಕ ಸುಶಾಂತ್ ಲೋಕ್‌ನ ಫೇಸ್-2 ನಿವಾಸಿಯಾಗಿದ್ದು, ರಾಜ್ಯಮಟ್ಟದ ಟೆನ್ನಿಸ್ ಆಟಗಾರ್ತಿಯಾಗಿದ್ದರು. ಅಲ್ಲದೇ ಹಲವಾರು ಸ್ಪರ್ಧೆಗಳಲ್ಲೂ ವಿಜೇತರಾಗಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ಮಗಳು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಚಟ ಬೆಳೆಸಿಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ತಂದೆ ಇಂದು ಮಧ್ಯಾಹ್ನದ ವೇಳೆಗೆ ರಾಧಿಕಾ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾರೆ. ಈ ಪೈಕಿ ಮೂರು ಗುಂಡುಗಳು ರಾಧಿಕಾಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ಸದ್ಯ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ಗುಂಡು ಹಾರಿಸಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!

  • ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ

    ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ

    ಬಳ್ಳಾರಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿಗೆ (Tungabhadra River) ಹಾರಿ ಯುವಕ ಹುಚ್ಚಾಟ ಮೆರೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ (Kampli) ಬಳಿ ನಡೆದಿದೆ.

    ರಿಲ್ಸ್‌ಗಾಗಿ (Reels) ಯುವಕ ಕಂಪ್ಲಿ ಸೇತುವೆಯಿಂದ ತುಂಗಭದ್ರಾ ನದಿಗೆ ಹಾರಿದ್ದಾನೆ. ಹರಿಯುವ ನದಿಯಲ್ಲಿ ಮೊಸಳೆ, ವಿಷ ಜಂತುಗಳು ತೇಲಿ ಬರುತ್ತಿವೆ. ಈಗಾಗಲೇ ಅಧಿಕಾರಿಗಳು ಅಪಾಯದ ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಇಂದಲ್ಲ, ನಾಳೆ ಸಿಎಂ ಆಗೇ ಆಗ್ತಾರೆ: ಶಾಸಕ ರಂಗನಾಥ್

    ಅಪಾಯದ ಅರಿವಿದ್ದರೂ ಸೇತುವೆ ಮೇಲಿನಿಂದ ಜಿಗಿದಿದ್ದಾನೆ. ರೀಲ್ಸ್‌ಗಾಗಿ ತುಂಗಭದ್ರಾ ನದಿಗೆ ಹಾರಿದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? – ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

    ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? – ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

    – ತಜ್ಞರ ತನಿಯಲ್ಲಿ ಅಚ್ಚರಿ ಅಂಶಗಳು ಬಯಲು

    ಬೆಂಗಳೂರು: ಹಾಗಿದ್ರೆ ಒಮ್ಮೆ ಈ ಸ್ಟೋರಿ ನೋಡಲೇಬೇಕು. ರಾಜ್ಯದಲ್ಲಿ ಹೆಚ್ಚಾಗ್ತಿರೋ ಹೃದಯಘಾತ ಪ್ರಕರಣಗಳಿಗೆ ಮೊಬೈಲ್ (Mobile) ಬಳಕೆ ಕೂಡ ಕಾರಣ ಅನ್ನೋ ಅಚ್ಚರಿಯ ಅಂಶ ತಜ್ಞರ ತನಿಖೆಯಲ್ಲಿ ಬಯಲಾಗಿದೆ.

    ಹೌದು. ರಾಜ್ಯದಲ್ಲಿ ಹೃದಯಘಾತ (Heart Attack) ಸಮಸ್ಯೆಗಳು ಹೆಚ್ಚಾಗುತ್ತಿರುವ ಸಂಬಂಧ ತಜ್ಞರ ತನಿಖೆಯಲ್ಲಿ ಅನೇಕ ಅಂಶಗಳು ಬಯಲಾಗಿವೆ. ನಿತ್ಯ ಜೀವನದ ಭಾಗವೆಂದೇ ಭಾವಿಸುವ ಅನೇಕ ಚಟುವಟಿಕೆಗಳು ಕೂಡ ನಿಮ್ಮ ಹೃದಯಕ್ಕೆ ಡೇಂಜರ್ ಅನ್ನೋ ಸತ್ಯ ಹೊರ ಬಿದ್ದಿದೆ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚಾಗಿರೋ ಮೊಬೈಲ್ ಗೀಳು (Mobile Addiction) ಕೂಡ ಇದಕ್ಕೆ ಕಾರಣ ಅನ್ನೋ ಶಾಕಿಂಗ್ ಅಂಶ ಬಯಲಾಗಿದ್ದು, ಹೆಚ್ಚು ಮೊಬೈಲ್ ಬಳಕೆದಾರರೇ ಬಿ ಕೇರ್ ಫುಲ್ ಅಂತಿದೆ ತಜ್ಞರ ವರದಿ. ಇದನ್ನೂ ಓದಿ: ಮಾಜಿ ಲವ್ವರ್‌ಗೆ ಅಶ್ಲೀಲ ಸಂದೇಶ – ರೇಣುಕಾಸ್ವಾಮಿ ಕೊಲೆ ಕೇಸ್‌ ಉಲ್ಲೇಖಿಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್‌

    ಹೌದು. ಇದು ಖುದ್ದು ಬಯಲಾಗಿರೋದು ತಜ್ಞರು ಇತ್ತೀಚಿಗೆ ರಾಜ್ಯದಲ್ಲಿ ನಡೆಸಿದ ತನಿಖೆಯಲ್ಲಿ. ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಸಂಬಂಧ ನಡೆದ ತನಿಖೆಯಲ್ಲಿ ಈ ಸತ್ಯ ಹೊರ ಬಿದ್ದಿದೆ. ಕೊವಿಡ್ ಪರಿಸ್ಥಿತಿ ಬಳಿಕ ಜನ ಹೆಚ್ಚು ಮೊಬೈಲ್ ಬಳಕೆ ಗೀಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸಾಮಾನ್ಯ ಜನರ ಜೀವನದ ಅಂಗವಾಗಿ ಬದಲಾಗಿದೆ. ಇದೇ ಅನೇಕರ ಹೃದಯದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ ಎಂದು ತಜ್ಞರ ವರದಿ ತಿಳಿಸಿದೆ. ಇದನ್ನೂ ಓದಿ: 100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

    ಹೆಚ್ಚು ಹೊತ್ತು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್, ವ್ಲಾಗ್‌ಗಳ ವೀಕ್ಷಣೆ ನಿತ್ಯ ಜನರ ಜೀವನದ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಜನರ ಮೊಬೈಲ್ ಗೀಳಿನಿಂದಾಗಿ ಅವರ ದೈಹಿಕ ಚಟುವಟಿಕೆ ಕುಂಠಿತವಾಗಲು ಕಾರಣವಾಗುತ್ತಿದೆ. ಮೊಬೈಲ್‌ಗೆ ಅಂಟಿಕೊಂಡಿರುವುದರಿಂದ ಹಾರ್ಟ್ ರೇಟ್ ವೇರಿ ಆಗ್ತಿದ್ದು ಹೃದಯಗಳ ಸಮಸ್ಯೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್‌ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಇನ್ನೂ ತಜ್ಣರ ಪ್ರಕಾರ ಕೋವಿಡ್ ಬಳಿಕ ಮೊಬೈಲ್ ಮೇಲೆ ಜನರ ಹೆಚ್ಚು ಅವಲಂಬನೆ ಆರಂಭವಾಗಿದೆ. ನಿತ್ಯ ಜೀವನದ ಬೋರ್ ಡಂ ಹೋಗಿಸುವುದಕ್ಕೆ ಸದಾ ಮೊಬೈಲ್‌ನಲ್ಲಿ ಕಳೆದು ಹೋಗುತ್ತಿದ್ದಾರೆ. ಅನೇಕರು ಸದಾ ಮೊಬೈಲ್ ಯೂಸ್ ಮಾಡುತ್ತಾ.. ಊಟ ತಿಂಡಿ ಮಾಡದೇ ನಿದ್ದೆ ಮಾಡದೇ ಒತ್ತಡದ ಬದುಕ್ತಿದ್ದಾರೆ. ಇದ್ರಿಂದ ಜನ ತಲೆನೋವು, ಸುಸ್ತು, ಹೃದಯ ಹೆವಿನೆಸ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಪರಿಣಾಮ ಅದೇ ರೆಡಿಯೇಷನ್ ಹೃದಯಕ್ಕೂ ಕುತ್ತು ತರುವ ಸಾಧ್ಯತೆ ಹೆಚ್ಚಾಗುತ್ತಿದೆ. ತಜ್ಞರ ವರದಿಯಲ್ಲಿಯೂ ಸ್ಕ್ರೀನ್ ಟೈಮ್ ಹೆಚ್ಚು ಬಳಕೆ ಹೃದಯಘಾತ ಹೆಚ್ಚಳಕ್ಕೆ ಕಾರಣ ಅನ್ನೋ ಬಗ್ಗೆ ಉಲ್ಲೇಖ ಮಾಡಲಾಗಿದೆ.

    ತಜ್ಞರ ವರದಿಯ ಪ್ರಮುಖ ಅಂಶಗಳು
    * ಮೊಬೈಲ್ ಬಳಕೆಯಿಂದ ಅಪಾಯ ಹೆಚ್ಚು
    * ಹಲವರು ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ
    * ಹೊರಗಡೆ ಎದ್ದು ಹೋಗೋದೇ ಇಲ್ಲ, 24 ಗಂಟೆ ಮೊಬೈಲ್‌ನಲ್ಲಿ ತಲ್ಲೀನರಾಗಿರುತ್ತಾರೆ
    * ಕಣ್ಣಿನ ರೆಟಿನಾಗೆ ಎಫೆಕ್ಟ್.. ತಲೆನೋವು, ತಲೆಸುತ್ತು ಬರುತ್ತದೆ
    * ಮೆಮೋರಿ ಲಾಸ್ ಆಗುವ ಸಾಧ್ಯತೆ ಕೂಡ ಇದೆ
    * ಬೇರೆಯವರ ಜೊತೆ ಬೆರೆಯುವುದಿಲ್ಲ, ಸಣ್ಣ-ಪುಟ್ಟ ಮಾತಿಗೂ ಸಿಡುಕುತ್ತಾರೆ
    * ಓದಿನ ಕಡೆಗೂ ಆಸಕ್ತಿ ಕಡಿಮೆ ಆಗುತ್ತದೆ
    * ಹೃದಯದ ಹತ್ತಿರ ಮೊಬೈಲ್ ಇಟ್ಟುಕೊಂಡರೆ ಡೇಂಜರ್
    * ಹಾರ್ಟ್ ರೇಟ್ ವೆರಿಯೆಬಿಲಿಟಿ ಆಗುವ ಸಾಧ್ಯತೆಗಳೂ ಇವೆ ಎಂದು ತಜ್ಞರ ವರದಿ ಹೇಳಿದೆ.

  • Tumakuru | ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕ್ – ಯುವತಿ ನೇಣಿಗೆ ಶರಣು

    Tumakuru | ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕ್ – ಯುವತಿ ನೇಣಿಗೆ ಶರಣು

    ತುಮಕೂರು: ಸ್ಟೇಟಸ್‌ಗೆ ರೀಲ್ಸ್ (Reels) ಅಪ್ಲೋಡ್ ಮಾಡಿದ ವಿಚಾರವಾಗಿ ಪ್ರೇಮಿಗಳ ನಡುವೆ ಜಗಳ ಉಂಟಾಗಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ (Tumakuru)  ನಡೆದಿದೆ.

    ಚೈತನ್ಯ (22) ನೇಣಿಗೆ ಶರಣಾದ ಯುವತಿ. ಸೋಮವಾರ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ತಾಯಿ ಜೊತೆ ವಾಸವಿದ್ದ ಚೈತನ್ಯ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಅಲ್ಲದೇ ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪಕ್ಕದ ಊರಿನ ವಿಜಯ್ ಹಾಗೂ ಚೈತನ್ಯ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನೂ ಓದಿ: ಸರ್ಕಾರ, ನಮ್ಮ ನಡುವಿನದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್

    ಸೋಮವಾರ ಚೈತನ್ಯ ರೀಲ್ಸ್‌ವೊಂದನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಿದ್ದಳು. ಇದೇ ವಿಚಾರವಾಗಿ ಪ್ರಶ್ನಿಸಲು ರಾತ್ರಿ ಚೈತನ್ಯ ಮನೆ ಬಳಿ ವಿಜಯ್ ಬಂದಿದ್ದ. ಆಗ ಚೈತನ್ಯ ತಾಯಿ ಸೌಭಾಗ್ಯಮ್ಮ ರೂಂನಲ್ಲಿ ಇದ್ದರು. ತಾಯಿ ಇದ್ದ ರೂಂ ಬಾಗಿಲಿನ ಚಿಲಕ ಹಾಕಿ ಕಿಟಕಿ ಬಳಿ ಇಬ್ಬರು ಜಗಳವಾಡಿದ್ದಾರೆ. ಆ ಬಳಿಕ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವಿಚಾರವನ್ನು ವಿಜಯ್ ಚೈತನ್ಯ ಸಂಬಂಧಿಗೆ ಕರೆ ಮಾಡಿ ತಿಳಿಸಿದ್ದಾನೆ. ಸಂಬಂಧಿ ಬಂದು ನೋಡಿದಾಗ ಚೈತನ್ಯ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜಮೀರ್ ಹೃದಯವಂತ ಸಚಿವ, ದಿಲ್‌ದಾರ್.. ಶ್ಹಾನ್‌ದಾರ್ ಮನುಷ್ಯ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಬ್ಯಾಟಿಂಗ್

    ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೈತನ್ಯ ಸಾವಿಗೆ ವಿಜಯ್ ಕುಮಾರ ಕಾರಣ ಎಂದು ದೂರು ದಾಖಲಾಗಿದ್ದು, ಪ್ರಿಯಕರ ವಿಜಯ್‌ನನ್ನು ತುಮಕೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತವಾಗಿರುವ ಪರಿಸ್ಥಿತಿ ಕಾಣುತ್ತಿದ್ದೇವೆ: ಶೋಭಾ ಕರಂದ್ಲಾಜೆ ಆರೋಪ

  • ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

    ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

    ಹುಬ್ಬಳ್ಳಿ/ಧಾರವಾಡ: ಸೋಷಿಯಲ್‌ ಮೀಡಿಯಾದಲ್ಲೀಗ (Social Media) ರೀಲ್ಸ್‌ ಹವಾ ಜಾಸ್ತಿಯಾಗಿದೆ. ಯುವಕ-ಯುವತಿಯರು ಟ್ರೆಂಡ್‌ ಸೃಷ್ಟಿಸಲು ಹೊಸ ಹೊಸ ಮಾರ್ಗ ಹುಡುಕುತ್ತಲೇ ಇರ್ತಾರೆ. ಬಹುಶಃ ಇದು ನಿಮ್ಮ ಗಮನಕ್ಕೂ ಬಂದಿರಬಹುದು. ನೀವು ಬಸ್ಸಿನಲ್ಲಿ ಕೂತಿರುತ್ತೀರಿ… ನಿಮ್ಮ ಹಿಂದಿನ ಸೀಟಿನಲ್ಲೊ ಪಕ್ಕದ ಸೀಟಿನಲ್ಲೊ ಯಾರೋ ಒಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಜೋರು ದನಿ ಇಟ್ಟುಕೊಂಡು ತುಣುಕು ಹಾಡೊ, ಕುಹಕ ನಗುವೊ, ವಿಚಿತ್ರ ಮಾತುಗಳನ್ನೂ ಕೇಳ್ತಿರ್ತಾನೆ. ಅದನ್ನ ಕೇಳಿಸಿಕೊಳ್ಳಲು ನಿಮಗೆ ಹಿಂಸೆಯೆನಿಸಬಹುದು. ಮನಸ್ಸಿಗೆ ಕಿರಿಕಿರಿ ಆಗಬಹುದು. ‘ಆಫ್ ಮಾಡಿ’ ಅಂತ ಜೋರು ಮಾಡುತ್ತೀರಿ… ಬೆಳಿಗ್ಗೆ ಕೆಲಸಕ್ಕೆ ಹೊರಟವರಿಗಂತೂ ಆ ದಿನ ದಿನಪೂರ್ತಿ ನಿರುತ್ಸಾಹ.

    ಈ ಹುಚ್ಚು ರೀಲ್ಸ್‌ ಕಾಟದಿಂದ ಇತ್ತೀಚೆಗೆ ಒಂದೆರಡು ಕ್ಷಣ ನಾವು ನಮ್ಮಷ್ಟಕ್ಕೆ ಕೂರಲು ಸಾಧ್ಯವಾಗುತ್ತಿಲ್ಲ. ಜೋರು ದನಿಯ ಹಿಂಸೆ, ತರಲೆ ಆಟಕ್ಕೆ ಬೇಸತ್ತು ಅವರೊಂದಿಗೆ ಜಗಳ ಮಾಡಲಾಗದೇ, ಅತ್ತ ಅದನ್ನು ಕೇಳಿಸಿಕೊಳ್ಳಲಾಗದೇ ಅಸಹನೆಯಿಂದ ಒದ್ದಾಡುವಂತಹ ಸ್ಥಿತಿ. ನಾವು ಕೇಳುವ ಹಾಡಿನ ತುಣುಕು, ಜೋಕು, ಹರಟೆ… ಇವೆಲ್ಲ ನಮ್ಮ ಖಾಸಗಿ ಸಂಗತಿಗಳು. ಅವು ನಮಗೆ ಮಾತ್ರ ಬೇಕಾದಂತಹವು, ಇಡೀ ಲೋಕಕ್ಕೆ ಅಲ್ಲ. ಅವು ನಮಗೆ ಮಾತ್ರ ಕೇಳಿಸಿದರೆ ಸಾಕು. ಆ ಹಾಡನ್ನೋ ಹರಟೆಯನ್ನೋ ಪಕ್ಕದವರು ಏಕೆ ಕೇಳಿಸಿಕೊಳ್ಳಬೇಕು? ಅದರಿಂದ ಅವರಿಗೆ ಕಿರಿಕಿರಿಯಾದ್ರೆ ಅವರು ನಮ್ಮ ಬಗ್ಗೆ ಏನಂದುಕೊಳ್ತಾರೊ? ಇಂತಹ ಸಣ್ಣಪುಟ್ಟ ಸೂಕ್ಷ್ಮಗಳನ್ನೂ ರೂಢಿಸಿಕೊಳ್ಳದಿದ್ದರೆ ಹೇಗೆ? ಇತ್ತೀಚೆಗಂತೂ ಇದು ಅತಿಯಾಗುತ್ತಿದೆ. ಹೀಗೆ ರೀಲ್ಸ್‌ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡ್ತಿದ್ದ ಹುಬ್ಬಳ್ಳಿ ಯುವಕನೊಬ್ಬನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

    ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಟಪಾನ್ಗುಚ್ಚಿ ಡಾನ್ಸ್‌ ಮಾಡ್ತಾ ಸಾರ್ವಜನಿಕರಿಗೆ ತೊಂದ್ರೆ ಕೊಡ್ತಿದ್ದ ಯುವಕನೊಬ್ಬನಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಬಳಿಕ ಎಚ್ಚೆತ್ತ ಯುವಕನಿಗೆ ತಪ್ಪಿನ ಅರಿವಾಗಿದ್ದು, ಕ್ಷಮೆ ಕೇಳಿದ್ದಾನೆ. ಇದನ್ನೂ ಓದಿ: ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

    ಹುಬ್ಬಳ್ಳಿ ದುರ್ಗದ ಬೈಲು ಮೂಲದ ನವೀನ್‌ ಉಪ್ಪಾರ್‌ ಇನ್ಮುಂದೆ ರೀಲ್ಸ್‌ ಮಾಡಲ್ಲ ಅಂತ ಹೇಳಿದ್ದಾನೆ. ನಾನು ಸಾರ್ವಜನಿಕ ಸ್ಥಳಗಳಲ್ಲಿ ಅಸಹ್ಯಕರ, ಫನ್ನಿ ಡಾನ್ಸ್‌ ಮಾಡಿ ತೊಂದ್ರೆ ಕೊಡ್ತಿದ್ದೆ. ನಮ್ಮ ಹುಬ್ಬಳ್ಳಿ ಟೌನ್‌ ಪೊಲೀಸರು ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದ್ರು. ಇನ್ಮುಂದೆ ನಾನು ಈ ರೀತಿ ನೃತ್ಯ ಮಾಡಲ್ಲ. ನೀವೂ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವನ್ನ ಹುಬ್ಬಳ್ಳಿ ನಗರ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನೀವು ಮಾಡುವ ಮನೋರಂಜನೆಗಳು ಸಾರ್ವಜನಿಕರಿಗೆ ಕಿರಿಕಿರಿ/ತೊಂದರೆ ಉಂಟುಮಾಡದಿರಲಿ ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

    ಇದು ಕೇವಲ ಹುಬ್ಬಳ್ಳಿಯ ಮಾರುಕಟ್ಟೆಯೊಂದರ ಸಮಸ್ಯೆಯಲ್ಲ. ಬಸ್ಸುಗಳಲ್ಲೂ ಈ ಬಗ್ಗೆ ಸೂಚನಾಫಲಕ ಹಾಕಿದರೂ ಅದನ್ನು ಪಾಲಿಸುವುದಿಲ್ಲ. ಕೆಲವೊಮ್ಮೆ ಬಸ್ ಕಂಡಕ್ಟರ್ ಕೂಡ ಜೋರಾಗಿ ರೀಲ್ಸ್ ನೋಡುತ್ತಾ ಕೂತಿರುವುದುಂಟು. ಗರಿಗರಿ ದಿರಿಸು ಧರಿಸಿ ಸುಶಿಕ್ಷಿತರಂತೆ, ಸಭ್ಯರಂತೆ ಕಾಣುವವರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ರೀಲ್ಸ್ ನೋಡುತ್ತಾ ಮೈಮರೆತಿರುತ್ತಾರೆ. ಯಾವ ಸಂದರ್ಭದಲ್ಲಿ, ಯಾವ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಅರಿತು, ಅದರಂತೆ ವರ್ತಿಸುವುದು ನಾಗರಿಕತೆಯ ಮೊದಲ ಪಾಠ. ಅದನ್ನು ಎಲ್ಲರೂ ಕಲಿಯಬೇಕಿದೆ.

  • ರೀಲ್ಸ್‌ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ಹುಚ್ಚಾಟ – ಬಿಸಿ ಮುಟ್ಟಿಸಿದ ಪೊಲೀಸರು

    ರೀಲ್ಸ್‌ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ಹುಚ್ಚಾಟ – ಬಿಸಿ ಮುಟ್ಟಿಸಿದ ಪೊಲೀಸರು

    ಬೆಂಗಳೂರು: ರಸ್ತೆ ಮಧ್ಯೆ ಚಯರ್‌ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್‌ (Reels) ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು (Bengaluru Police) ಬಿಸಿ ಮುಟ್ಟಿಸಿದ್ದಾರೆ.

    ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಕಿರಿಕ್‌ ಮಾಡಿದ್ದ. ನಂತರ ಆ ರೀಲ್ಸ್‌ ಅನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದ. ಇದನ್ನೂ ಓದಿ:ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು

     

    ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಪುಂಡನ ರೀಲ್ಸ್ ಗಮನಿಸಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದ ಅಡಿ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿದ್ದರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ಬೆಂಗಳೂರು ಪೊಲೀಸರು ಈಗ ಪುಂಡನ ರೀಲ್ಸ್‌ ಮತ್ತು ಬಂಧನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಮುಂದೆ ಯಾರಾದರೂ ಈ ರೀತಿ ಹುಚ್ಚಾಟ ಮಾಡಿದವರಿಗೆ ಬಿಸಿ ಮುಟ್ಟಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.