Tag: ರಿಸೆಪ್ಷನ್

  • ನಟ ನಿಹಾಲ್- ರಿಷಿಕಾ ಶರ್ಮಾ ಅದ್ದೂರಿ ರಿಸೆಪ್ಷನ್ ಫೋಟೋಗಳು

    ನಟ ನಿಹಾಲ್- ರಿಷಿಕಾ ಶರ್ಮಾ ಅದ್ದೂರಿ ರಿಸೆಪ್ಷನ್ ಫೋಟೋಗಳು

    `ಟ್ರಂಕ್’ ಮತ್ತು `ವಿಜಯಾನಂದ’ ಚಿತ್ರ ಖ್ಯಾತಿಯ ನಟ ನಿಹಾಲ್ (Actor Nihal)  ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ (Director Rishika Sharma) ಅವರು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಗ್ರ್ಯಾಂಡ್ ರಿಸೆಪ್ಷನ್ (Grand Reception) ಫೋಟೋಗಳು ನಟ ನಿಹಾಲ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನವದಂಪತಿ ಫೋಟೋಗಳು ಸದ್ದು ಮಾಡ್ತಿದೆ.

    ಸ್ಯಾಂಡಲ್ವುಡ್ (Sandalwood) ನಟ ನಿಹಾಲ್- ರಿಷಿಕಾ ಶರ್ಮಾ ಮದುವೆ (ಫೆ.15)ರಂದು ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿತ್ತು. ಕುಟುಂಬಸ್ಥರು ಮತ್ತು ಆಪ್ತರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನಿಹಾಲ್ ಮತ್ತು ರಿಷಿಕಾ ಅವರದ್ದು ಪಕ್ಕಾ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. 9 ವರ್ಷಗಳ ಪ್ರೀತಿಯನ್ನು ಕುಟುಂಬಸ್ಥರಿಗೆ ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದಾರೆ.

    ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಜಿ.ವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ. ನಿರ್ದೇಶನದ ಕಡೆ ಹೆಚ್ಚಿನ ಒಲವಿದ್ದ ಕಾರಣ `ಟ್ರಂಕ್ ಮತ್ತು `ವಿಜಯಾನಂದ’ ಸಿನಿಮಾವನ್ನು ರಿಷಿಕಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳಿಗೆ ನಿಹಾಲ್ ನಾಯಕನಾಗಿ ಮಿಂಚಿದ್ದರು.

    ಇದೀಗ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರ ಧಾರವಾಡದಲ್ಲಿ (Dharwad) ಫೆ.17ರಂದು ವಿಜಯಾನಂದ ನಟ ನಿಹಾಲ್-ರಿಷಿಕಾ ರಿಸೆಪ್ಷನ್ ಅದ್ದೂರಿಯಾಗಿ ನಡೆದಿದೆ. ರಿಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಿಹಾಲ್ ಕಂದು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. ರೆಟ್ರೋ ಲುಕ್‌ನಲ್ಲಿ ಕೂಡ ಈ ಜೋಡಿ ಮಿಂಚಿದ್ದಾರೆ.

    ನಿಹಾಲ್-ರಿಷಿಕಾ ಶರ್ಮಾ ದಂಪತಿಯ ಸುಂದರ ಫೋಟೋಶೂಟ್‌ಗಳು `ಯುವ ಆರ್ಟ್ಸ್ ಸ್ಟುಡಿಯೋಸ್‌’ನ (Yuva Art Studio’s) ರೂವಾರಿ ಹರ್ಷದ್ ಉದಯ್ ಕಾಮತ್ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹರ್ಷದ್ ಅವರ ಕ್ಯಾಮೆರಾ ಕೈಚಳಕಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಡ್ರೆಸ್‍ನಲ್ಲಿ ಬಂದು ಲಸಿಕೆ ಹಾಕಿಸಿಕೊಂಡ ವಧು

    ಮದುವೆ ಡ್ರೆಸ್‍ನಲ್ಲಿ ಬಂದು ಲಸಿಕೆ ಹಾಕಿಸಿಕೊಂಡ ವಧು

    ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಮದುವೆ ಸಮಾರಂಭಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಕೊರೊನಾದಿಂದ ಎಷ್ಟೋ ಮದುವೆಗಳು ರದ್ದುಗೊಂಡಿದೆ ಇನ್ನೂ ಕೆಲವು ಮದುವೆಗಳನ್ನು ಮುಂದೂಡಿದ್ದಾರೆ.

    ಅಮೆರಿಕದ ಬಾಲ್ಟಿಮೋರ್ ಸಾರಾ ಸ್ಟಡ್ಲಿ ತನ್ನ ವಿವಾಹದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದಳು. ಆದರೆ ಕೋವಿಡ್-19 ನಿಯಮಗಳಿಂದಾಗಿ ವಿಜೃಂಭಣೆಯಿಂದ ನಡೆಯಬೇಕದ್ದ ಸಾರಾ ಸ್ಟಡ್ಲಿ ಮದುವೆ ಬಹಳ ಸರಳವಾಗಿ ನಡೆಯಿತು. ಮದುವೆ ರಿಸೆಪ್ಷನ್ ರದ್ದುಗೊಳಿಸಲಾಗಿತ್ತು. ಹೀಗಾಗಿ ಮದುವೆ ವೇಳೆ ಧರಿಸಬೇಕಿದ್ದ ಡ್ರಸ್‍ನನ್ನು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ದಿನದಂದು ಧರಿಸಲು ಪ್ಲಾನ್ ಮಾಡಿದ್ದಳು.

    ಅದರಂತೆ ಭಾನುವಾರ ಮದುವೆಯ ಗೌನ್ ಧರಿಸಿ ಕ್ಲಿನಿಕ್‍ಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಂಡಿದ್ದಾಳೆ. ಈ ಫೋಟೋವನ್ನು ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸಿಸ್ಟಮ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಗೆ ವಧು ಬಂದಿದ್ದಾರೆ. ಎಂ ಮತ್ತು ಟಿ ಬ್ಯಾಂಕ್ ಸ್ಟೇಡಿಯಂನ ವ್ಯಾಕ್ಸಿನ್ ಸೈಟಿನಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್‍ನಿಂದ ರದ್ದಾದ ಮದುವೆಯ ರಿಸೆಪ್ಷನ್ ಗೌನ್ ಧರಿಸಿ ಲಸಿಕೆ ಪಡೆದಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಹಾಕಿಕೊಂಡಿದೆ.

  • ಸೈನಾ, ಕಶ್ಯಪ್ ರಾಯಲ್ ರಿಸೆಪ್ಷನ್ – ದಕ್ಷಿಣ ಭಾರತದ ನಟರು ಭಾಗಿ

    ಸೈನಾ, ಕಶ್ಯಪ್ ರಾಯಲ್ ರಿಸೆಪ್ಷನ್ – ದಕ್ಷಿಣ ಭಾರತದ ನಟರು ಭಾಗಿ

    ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ಮುಂಬೈನಲ್ಲಿ ಶುಕ್ರವಾರ ನೆರವೇರಿದೆ. ಮುಂಬೈನಲ್ಲಿ ಸಿಂಪಲ್ ಆಗಿ ಮದ್ವೆಯಾದ ಸೈನಾ ಹೈದರಾಬಾದ್‍ನಲ್ಲಿ ರಾಯಲ್ ರಿಸೆಪ್ಷನ್ ಮಾಡಿಕೊಂಡಿದ್ದು ದಕ್ಷಿಣದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಭಾನುವಾರ ಹೈದರಾಬಾದ್‍ನ ಪಂಚತಾರಾ ಹೊಟೇಲ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಆರತಕ್ಷತೆಯಲ್ಲಿ ತೆಲುಗು ನಟ ನಾಗಾರ್ಜುನ್ ಹಾಗೂ ರಕುಲ್ ಪ್ರೀತ್ ಭಾಗಿಯಾಗಿ ನವದಂಪತಿಗೆ ಶುಭಾಶಯ ಕೋರಿದ್ದಾರೆ.

    ಸೈನಾ ಹಾಗೂ ಕಶ್ಯಪ್ ತಮ್ಮ ಆರತಕ್ಷತೆ ವೇಳೆ ಸಬ್ಯಾಸಾಚಿ ಅವರು ವಿನ್ಯಾಸ ಮಾಡಿದ್ದ ಉಡುಪನ್ನು ಧರಿಸಿದ್ದರು. ಸೈನಾ ನೀಲಿ ಬಣ್ಣದ ಲೆಹೆಂಗಾ ಧರಿಸಿ ಅದಕ್ಕೆ ಬ್ಲೂ ಕಲರ್ ಡೈಮಂಡ್ ನೆಕ್ಲೇಸ್ ಧರಿಸಿದ್ದರೆ ಅವರ ಪತಿ ಕಶ್ಯಪ್ ಕೂಡ ಆರತಕ್ಷತೆಯಲ್ಲಿ ಬ್ಲೂ ಶೇರ್ವಾನಿ ತೊಟ್ಟು ಅದಕ್ಕೆ ಮುತ್ತಿನ ಹಾರ ಹಾಕಿದ್ದರು.

    ಆರತಕ್ಷತೆಯಲ್ಲಿ ಸೈನಾ ಹಾಗೂ ಕಶ್ಯಪ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ನಾಗಾರ್ಜುನ್ ಹಾಗೂ ರಕುಲ್ ಪ್ರೀತ್ ಹೊರತಾಗಿ ಸೈನಾ ಹಾಗೂ ಕಶ್ಯಪ್ ಅವರ ಸಂಬಂಧಿಕರು ಹಾಗೂ ಕುಟುಂಬಸ್ಥರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

    ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ 10 ವರ್ಷಗಳಿಂದ ರಿಲೇಶನ್‍ಶಿಪ್‍ನಲ್ಲಿದ್ದರು. ಸೈನಾ ಅವರು ತಮ್ಮ ಟ್ವಿಟ್ಟರಿನಲ್ಲಿ ಮದುವೆಯ ಫೋಟೋ ಹಂಚಿಕೊಂಡು `ನನ್ನ ಜೀವನದ ಅತ್ಯುತ್ತಮ ಮ್ಯಾಚ್’ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

    ಈ ಹಿಂದೆ ಸೈನಾ, ಕಶ್ಯಪ್ ಮದುವೆ ಹೈದರಾಬಾದ್‍ನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸೈನಾ, ಕಶ್ಯಪ್ ಕೈಹಿಡಿದಿದ್ದು, ಸಮಾರಂಭದಲ್ಲಿ ಆಪ್ತ ವಲಯದ ಸ್ನೇಹಿತರು ಸೇರಿದಂತೆ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv