Tag: ರಿಷಿಕಾ ನಾಯಕ್‌

  • ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ ಸಾಥ್-‘ನಿದ್ರಾದೇವಿ Next door’ ಟೀಸರ್‌ ಔಟ್‌

    ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ ಸಾಥ್-‘ನಿದ್ರಾದೇವಿ Next door’ ಟೀಸರ್‌ ಔಟ್‌

    ನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯತ್ನಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ‘ನಿದ್ರಾದೇವಿ Next door’. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಅವರು ಪ್ರವೀರ್‌ ಶೆಟ್ಟಿ (Praveer Shetty) ನಟನೆಯ ‘ನಿದ್ರಾದೇವಿ Next door’ (Nidradevi Next Door) ಟೀಸರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭಕೋರಿದರು. ಇದನ್ನೂ ಓದಿ:BBK 11: ಕೊಟ್ಟ ಮಾತಿನಂತೆ ಹನುಮಂತನಿಗೆ ಗಿಫ್ಟ್ ಕಳುಹಿಸಿದ ಕಿಚ್ಚ

    ಶ್ರೀಮುರಳಿ ಮಾತನಾಡಿ, ನಿರ್ಮಾಪಕರಾದ ಜಯರಾಮ್ ದೇವಸಮುದ್ರ ತುಂಬಾ ಕಾಳಜಿ, ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಅವರಿಗೆ ಒಳ್ಳೆಯದು ಆಗಲಿ. ನಿಮ್ಮಂತಹ ನಿರ್ಮಾಪಕರು ಚಿತ್ರರಂಗಕ್ಕೆ ಬೇಕು. ನಾನು ಪ್ರವೀರ್ ಜಿಮ್ ಮೇಟ್ಸ್. ವರ್ಕೌಟ್ ಮಾಡುವಾಗ ಪ್ರವೀರ್ ಸಿನಿಮಾ ಬಗ್ಗೆಯೇ ಮಾತನಾಡುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ನಿಮ್ಮ ಕಣ್ಣಲ್ಲಿ ನಟನೆ ನೋಡಿದೆ. ಶೈನ್ (Shine Shetty) ಫ್ಯಾನ್ ನಾನು. ನೀವು ಚಿತ್ರದಲ್ಲಿ ಚೆನ್ನಾಗಿ ಕಾಣಿಸಿಕೊಂಡಿದ್ದೀರಾ ಎಂದು ಶೈನ್‌ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದರು. ಡೈರೆಕ್ಟರ್  ಸುರಾಗ್ ಏನೋ ವಿಷ್ಯ ಹೇಳುತ್ತಿರುವುದು ಗೊತ್ತಾಗುತ್ತಿದೆ. ಮ್ಯೂಸಿಕ್ ಕೂಡ ಟೀಸರ್‌ನಲ್ಲಿ ಚೆನ್ನಾಗಿದೆ ಎಂದರು.

    ನಟ ಪ್ರವೀರ್ ಶೆಟ್ಟಿ ಮಾತನಾಡಿ, ಸುರಾಗ್ ನನಗೂ ಎರಡು ವರ್ಷದ ಜರ್ನಿ ಇದೆ. ನಮ್ಮ ಸ್ಟೋರಿ ಇಟ್ಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಆದರೆ ಜಯರಾಮ್ ಸರ್ ರಿಸೀವ್ ಮಾಡಿದಷ್ಟು ಬೇರೆ ಯಾರು ರಿಸೀವ್ ಮಾಡಲಿಲ್ಲ. ಥ್ಯಾಂಕೂ ಸರ್. ಇದು ನಿಮ್ಮಿಂದ ಆಗಿರೋದು. ಬ್ಯೂಟಿಫುಲ್ ವಿಷ್ಯುವಲ್ಸ್ ಶೂಟ್ ಮಾಡಿದ್ದಾರೆ ನಮ್ಮ ಛಾಯಾಗ್ರಹಕರು, ಮ್ಯೂಸಿಕ್ ಕೂಡ ತುಂಬಾ ಚೆನ್ನಾಗಿದೆ. ರಿಷಿಕಾ ಅವರಿಂದ ತುಂಬಾ ಕಲಿಯುತ್ತಿದ್ದೇವೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

     

    View this post on Instagram

     

    A post shared by Praveer Shetty (@praveer.shettyy)

    ನಿರ್ದೇಶಕ ಸುರಾಗ್ ಮಾತನಾಡಿ, ಪ್ರವೀರ್ ನಾನು ಒಟ್ಟಿಗೆ ಸೇರಿದಾಗ ನಮ್ಮಿಬ್ಬರಿಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಅದು ನಮ್ಮಿಬ್ಬರಿಗೂ ಮ್ಯಾಚ್ ಆಯಿತು. ನಾನು ಏನು ಕಥೆ ,ಮಾಡಿಕೊಂಡಿದ್ದೇನೋ ಅದನ್ನು ಪ್ರವೀರ್ ಗೆ ಹೇಳಿದಾಗ ಅವರು ಖುಷಿಪಟ್ಟರು. ನಮ್ಮ ಟೆಕ್ನಿಕಲ್ ಟೀಮ್ ಈ ಚಿತ್ರಕ್ಕೆ ಸಾಕಷ್ಟು ಶ್ರಮಿಸಿದೆ. ಒಂದೊಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಜಯರಾಮ್ ಸರ್ ಒಳಗಡೆ ಒಬ್ಬ ನಿರ್ದೇಶಕರಿದ್ದಾರೆ. ಅವರಿಗೆ ಸಿನಿಮಾ ಟೆಸ್ಟ್ ತುಂಬಾ ಚೆನ್ನಾಗಿದೆ ಎಂದರು.

    ‘ನಿದ್ರಾದೇವಿ Next door’ ಟೀಸರ್ ಬಹಳ ಕುತೂಹಲ ಹೆಚ್ಚಿಸಿದೆ. ಟೀಸರ್ ನಲ್ಲಿ ಕಥೆ ಗಟ್ಟುರಟ್ಟು ಮಾಡದೇ ಟೀಸರ್ ಕಟ್ ಮಾಡಲಾಗಿದೆ. ಚೆಂದದ ಲವ್ ಸ್ಟೋರಿ, ನಿದ್ರೆ ಇಲ್ಲದ ವ್ಯಕ್ತಿಯ ಸುತ್ತ ಸಾಗುವ ಕಥಾಹಂದರ ಸಿನಿಮಾದಲ್ಲಿದೆ. ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕರಾದ ಜಯರಾಮ್ ದೇವಸಮುದ್ರ ಅವರು ತಮ್ಮ ಸುರಮ್ ಮೂವೀಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿದು, ಈ ಹಿಂದೆ ಇದೇ ಸಂಸ್ಥೆಯಲ್ಲಿ ʻರೇವ್ ಪಾರ್ಟಿʼ ಮತ್ತು ʻಎಂಗೇಜ್‌ಮೆಂಟ್‌’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಉಲ್ಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ.

  • ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲ್ಯಾಪ್

    ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲ್ಯಾಪ್

    ‘ಸೈರನ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರವೀರ್ ಶೆಟ್ಟಿ (Praveer Shetty) ಈಗ ಮತ್ತೊಂದು ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಅದರ ಮೊದಲ ಭಾಗವೆಂಬಂತೆ ಇಂದು ಬೆಂಗಳೂರಿನ ಬನಶಂಕರಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್  ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನದ ‘ನಿದ್ರಾದೇವಿ Next Door’ ಸಾಥ್ ಕೊಟ್ಟರು. ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಕನಸುಗಾರ ರವಿಚಂದ್ರನ್ (Ravichandran) ಇಡೀ ತಂಡಕ್ಕೆ ಶುಭ ಹಾರೈಸಿದರು.

    ಯುವ ಪ್ರತಿಭೆ ಸುರಾಗ್ ಸಾಗರ್ ‘ನಿದ್ರಾದೇವಿ Next Door’  ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ (Shine Shetty) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಿಷಿಕಾ ನಾಯಕ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮುಹೂರ್ತ ಸಮಾರಂಭದ ಬಳಿಕ ಮಾತನಾಡಿದ ನಿರ್ದೇಶಕ ಸುರಾಗ್ ಸಾಗರ್, ರವಿ ಸರ್ ನಮ್ಮ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದು ಖುಷಿ ಕೊಟ್ಟಿದೆ. ಅವರು ವಿಭಿನ್ನ ಟೈಟಲ್ ಮೂಲಕ ಬರುತ್ತಾರೆ. ನಮ್ಮ ಟೈಟಲ್ ಕೂಡ ವಿಭಿನ್ನವಾಗಿದೆ. ಇದು ಕಾಕತಾಳೀಯ. ಇಬ್ಬರು ನಿದ್ದೆ ಇಲ್ಲದರ ಜರ್ನಿ. ಅವ್ರಿಗೆ ಯಾಕೆ ನಿದ್ದೆ ಬರಲ್ಲ. ಇದಕ್ಕೆ ಪರಿಹಾರ ಏನು. ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಇದಕ್ಕೆಲ್ಲಾ ಸಿನಿಮಾ ನೋಡಬೇಕು ಎಂದರು. ಇದನ್ನೂ ಓದಿ:ಬಿಗ್ ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ ಟೀಸರ್ ಬಿಡುಗಡೆ


    ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ಪ್ರವೀಣ್ ಶೆಟ್ಟಿ ಅವರಿಗೋಸ್ಕರ್ ಈ ಪ್ರಾಜೆಕ್ಟ್‌ಗೆ ಹಣ ಹಾಕುತ್ತಿದ್ದೇನೆ. ಕಥೆ ಬಹಳ ಚೆನ್ನಾಗಿದೆ. ನನಗೆ ಸುರಾಗ್ ಕಥೆ ಹೇಳಿದಾಗ ಫಸ್ಟ್ ಇಂಪ್ರೆಷನ್‌ನಲ್ಲಿಯೇ ಇಷ್ಟವಾಯ್ತು. ಪ್ರತಿಯೊಬ್ಬರು ಲೈಫ್ ನಲ್ಲಿ ನಡೆಯುವ ಕೆಲ ಘಟನೆಗಳು ಜೀವನದಲ್ಲಿವೆ. ಕಾಮಿಡಿ ಜೊತೆಗೆ ಒಂದು ಸಂದೇಶ ಚಿತ್ರದಲ್ಲಿದೆ ಎಂದು ತಿಳಿಸಿದರು.

    ನಾಯಕ ಪ್ರವೀರ್ ಶೆಟ್ಟಿ (Praveer Shetty) ಮಾತನಾಡಿ, ನಿದ್ರೆ ಬರದಿರುವ ಹುಡುಗ ಏನೇನೂ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ:ಹದಿನಾರು ವರ್ಷಗಳ ನಂತರ ಜೊತೆಯಾದ ಪ್ರಭಾಸ್ ಜೊತೆ ಕಂಗನಾ

    ನಾಯಕಿ ರಿಷಿಕಾ ನಾಯಕ್ ಮಾತನಾಡಿ, ಎರಡು ವರ್ಷದ ಹಿಂದೆಯೇ ನನಗೆ ನಿರ್ದೇಶಕರು ಸಿನಿಮಾದ ಕಥೆ ಹೇಳಿದ್ದರು. ಆಗ ಪಾತ್ರ ಬೇರೆ ಇತ್ತು. ಈಗ ಪಾತ್ರ ಬೇರೆ ಇದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

    ಯುರೋಪ್‌ನ ಪ್ರೇಗ್ ಫಿಲ್ಮ್ ಸ್ಕೂಲ್‌ನಲ್ಲಿ ನಿರ್ದೇಶಕ ಪಟು ಕಲಿತಿರುವ ಸುರಾಗ್ ಸಾಗರ್ ಇದೀಗ ‘ನಿದ್ರಾದೇವಿ Next Door’  ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಗಳದಲ್ಲಿ ಇದ್ದಾರೆ.

    ರಾಜು ಬೋನಗಾನಿ, ಜಯರಾಮ್ ದೇವಸಮುದ್ರ ಜೊತೆಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತವಿದೆ. ಈ ತಿಂಗಳಾತ್ಯಂತಕ್ಕೆ ‘ನಿದ್ರಾದೇವಿ Next Door’ ತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.