Tag: ರಿಷಭ್ ಪಂತ್

  • ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

    ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

    ಲಂಡನ್: ನಾಟಿಂಗ್ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‍ರನ್ನು ನಿಂದಿಸಿದ್ದ ಸ್ಟುವರ್ಟ್ ಬ್ರಾಡ್‍ಗೆ ಕೊಹ್ಲಿ ಆನ್ ಫೀಲ್ಡ್ ನಲ್ಲೇ ತಿರುಗೇಟು ನೀಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಪಂತ್ ಪಾದಾರ್ಪಣೆ ಮಾಡಿದ್ದು, ಮೊದಲ ಇನ್ನಿಂಗ್ಸ್ ನ 92 ನೇ ಓವರ್ ನಲ್ಲಿ 26 ರನ್ ಗಳಿಸಿದ್ದ ಪಂತ್ ಔಟಾಗಿದ್ದರು. ಈ ವೇಳೆ ಪೆವಿಲಿಯನ್ ನತ್ತ ನಡೆದಿದ್ದ ಪಂತ್ ಬಳಿ ಬಂದ ಸ್ಟುವರ್ಟ್ ಬ್ರಾಡ್ ನಿಂದಿಸಿದ್ದರು. ಈ ದೃಶ್ಯಗಳು ವೀಡಿಯೋದಲ್ಲಿ ಕೂಡ ಸೆರೆಯಾಗಿತ್ತು. ಸದ್ಯ ಪಂತ್ ರನ್ನು ನಿಂದಿಸಿದ್ದ ಬ್ರಾಡ್‍ಗೆ ಅದೇ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡಿದ್ದಾರೆ. ಕೊಹ್ಲಿ ಮಾತಿಗೆ ಬ್ರಾಡ್ ಉತ್ತರವನ್ನು ಸಹ ನೀಡಿದ್ದು, ಇಬ್ಬರ ನಡುವಿನ ಸಂಭಾಷಣೆಯ ವೀಡಿಯೋ ವೈರಲ್ ಆಗಿದೆ.

    ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ವಿರುದ್ಧ ಕ್ರಮಕೈಗೊಂಡಿದ್ದ ಐಸಿಸಿ, ನಿಯಮ 2.2.7 ರ ಉಲ್ಲಂಘನೆ ಎಂದು ತೀರ್ಮಾನಿಸಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಬ್ರಾಡ್ ವರ್ತನೆ ವಿರುದ್ಧ ಗರಂ ಆಗಿದ್ದ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಕೂಡ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಘಟನೆಯನ್ನು ನೆನಪು ಮಾಡಿ ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದಿದ್ದರು.

    ಉಳಿದಂತೆ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ರನ್ ಖಾತೆ ತೆರೆದಿದ್ದ ಪಂತ್ ದಾಖಲೆ ಬರೆದಿದ್ದರು. ಅಲ್ಲದೇ ಮೊದಲ ಟೆಸ್ಟ್‍ನಲ್ಲೇ ವಿಕೆಟ್ ಕೀಪಿಂಗ್ ನಲ್ಲಿ 7 ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.

    ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಸಿದ್ದು, ಇನ್ನುಳಿದ 2 ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್ ವಿರುದ್ಧ ದ 4ನೇ ಟೆಸ್ಟ್ ಪಂದ್ಯ ಸೌಥಾಂಪ್ಟನ್‍ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ಆಗಸ್ಟ್ 30 ರಂದು ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/rocktheworld62/status/1032146978619027456?

  • ರಿಷಭ್ ಪಂತ್ ನಿಂದಿಸಿ ದಂಡ ತೆತ್ತ ಸ್ಟುವರ್ಟ್ ಬ್ರಾಡ್ – ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದ ಅಭಿಮಾನಿಗಳು!

    ರಿಷಭ್ ಪಂತ್ ನಿಂದಿಸಿ ದಂಡ ತೆತ್ತ ಸ್ಟುವರ್ಟ್ ಬ್ರಾಡ್ – ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದ ಅಭಿಮಾನಿಗಳು!

    ಲಂಡನ್: ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಯುವ ಆಟಗಾರ ರಿಷಭ್ ಪಂತ್‍ರನ್ನು ಆನ್‍ಫೀಲ್ಡ್ ನಲ್ಲಿ ನಿಂದಿಸಿದ ಕಾರಣ ಐಸಿಸಿ ಇಂಗ್ಲೆಂಡ್ ಬೌಲರ್ ಬ್ರಾಡ್‍ಗೆ ದಂಡ ವಿಧಿಸಿದೆ.

    ನಾಟಿಂಗ್ ಹ್ಯಾಮ್ ಟೆಸ್ಟ್ ನ ಭಾರತದ ಮೊದಲ ಇನ್ನಿಂಗ್ಸ್ 92 ನೇ ಓವರ್ ವೇಳೆ ಸ್ಟುವರ್ಟ್ ಬ್ರಾಡ್ ಅನುಚಿತವಾಗಿ ಅನುಚಿತವಾಗಿ ವರ್ತಿಸಿ ನಿಂದನೆ ಮಾಡಿದ್ದರು. ಬ್ರಾಡ್ ವರ್ತನೆ ಐಸಿಸಿ ನಿಯಮ 2.2.7 ರ ನಿಯಮ ಉಲ್ಲಂಘನೆ ಎಂದು ತೀರ್ಮಾನಿಸಿದ ಪಂದ್ಯದ ರೆಫರಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ.

    ಬ್ರಾಡ್ ವರ್ತನೆ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಸಹ ಗರಂ ಆಗಿದ್ದು, ಈ ಹಿಂದೆ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಗಳ ಘಟನೆಯನ್ನು ನೆನಪು ಮಾಡಿ ಕಾಲೆಳೆದಿದ್ದಾರೆ.

    ಸಂಭಾವಿತರ ಕ್ರೀಡೆ ಎಂದು ಹೆಸರು ಪಡೆದಿರುವ ಕ್ರಿಕೆಟ್‍ಗೆ ಕೆಲ ದಿನಗಳ ಹಿಂದೆಯಷ್ಟೇ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹೊಸ ತಿದ್ದುಪಡಿ ತಂದು ಮತ್ತಷ್ಟು ಕಠಿಣ ಶಿಕ್ಷೆ ನೀಡಲು ಮುಂದಾಗಿತ್ತು. ಇದರ ಅನ್ವಯ ಹೊಸ ತಿದ್ದುಪಡಿಗಳನ್ನು ಜಾರಿಗೆ ಮಾಡಿ ಮೋಸದಾಟ, ಬಾಲ್ ಟ್ಯಾಂಪರಿಂಗ್, ವೈಯಕ್ತಿಕ ನಿಂದನೆ ಕೃತ್ಯಗಳನ್ನು ಲೆವೆಲ್ 2 ಮತ್ತು 3 ಅಪರಾಧಗಳ ಅಡಿ ಎಂದು ಪರಿಗಣಿಸಿತ್ತು. ಅಲ್ಲದೇ ಅಶ್ಲೀಲ ಪದ ಬಳಕೆ, ಅಂಪೈರ್ ತೀರ್ಮಾನಕ್ಕೆ ವಿರೋಧ ಕೃತ್ಯಗಳನ್ನು ಲೆವೆಲ್ 1 ಅಪರಾಧ ಅಡಿ ಹಾಗೂ ವಿಶೇಷವಾಗಿ ಬಾಲ್ ಟ್ಯಾಂಪರಿಂಗ್ ಮಾಡಿದರೆ ಲೆವೆಲ್ 3 ಅಡಿ ಶಿಕ್ಷೆ ವಿಧಿಸುವ ಅವಕಾಶ ನೀಡಿತ್ತು. ತಿದ್ದುಪಡಿ ನಿಯಮಗಳ ಅನ್ವಯ ಲೆವೆಲ್ 3ರ ಕೃತ್ಯಗಳಿಗೆ 8 ಋಣಾತ್ಮಕ ಅಂಕಗಳಿಂದ 12 ಅಂಕಗಳಿಗೆ ಹೆಚ್ಚಿಸಿತ್ತು. ಅಲ್ಲದೇ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧಕ್ಕೆ ಸಮಾನಾಗಿರುವಂತೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/rocktheworld62/status/1032146978619027456

  • ನಾಟಿಂಗ್ ಹ್ಯಾಮ್ ವಿಜಯ ಘೋಷಕ್ಕೆ ಇನ್ನೊಂದೇ ವಿಕೆಟ್ ಬಾಕಿ

    ನಾಟಿಂಗ್ ಹ್ಯಾಮ್ ವಿಜಯ ಘೋಷಕ್ಕೆ ಇನ್ನೊಂದೇ ವಿಕೆಟ್ ಬಾಕಿ

    – ಒಂದೇ ಪಂದ್ಯದಲ್ಲಿ ರಿಷಭ್, ರಾಹುಲ್ ದಾಖಲೆ

    ಲಂಡನ್: ನಾಟಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸಿದ್ದು, ಗೆಲುವಿಗೆ ಒಂದು ವಿಕೆಟ್ ಅಷ್ಟೇ ಬಾಕಿ ಇದೆ.

    ಅಂತಿಮ ಇನ್ನಿಂಗ್ಸ್ ನಲ್ಲಿ 521 ರನ್‍ಗಳ ಬೃಹತ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ನಾಲ್ಕನೇ ದಿನದಾಂತ್ಯಕ್ಕೆ 102 ಓವರ್‍ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಅಲ್ಲದೆ ಇನ್ನು ಒಂದು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ 210 ರನ್ ಗಳಿಸಬೇಕಿದೆ.

    ಪಂದ್ಯದಲ್ಲಿ ಟೀಂ ಇಂಡಿಯಾ ಪರ ರಿಷಬ್, ಕೆಎಲ್ ರಾಹುಲ್ ಹೊಸದೊಂದು ದಾಖಲೆ ಬರೆದಿದ್ದಾರೆ. ಕೆಎಲ್ ರಾಹುಲ್ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರಿಷಭ್ ಪಂತ್ ಎರಡೂ ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 7,6 ಕ್ಯಾಚ್ ಹಿಡಿಯುವ ಮೂಲಕ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಇಬ್ಬರ ದಾಖಲೆಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಹೊರತಾಗಿ ನಿರ್ಮಾಣವಾಗಿರುವುದು ವಿಶೇಷವಾಗಿದೆ.

    ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 3 ಕ್ಯಾಚ್ ಹಾಗೂ 2ನೇ ಇನ್ನಿಂಗ್ಸ್ 4 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಆಟಗಾರರಿಗೆ ರಾಹುಲ್ ಸಾಥ್ ನೀಡಿದರು. ಇಂಗ್ಲೆಂಡ್ ವಿರುದ್ಧ ಪಂದ್ಯವೊಂದರಲ್ಲಿ ಟೀಂ ಇಂಡಿಯಾ ಆಟಗಾರರ ಪಡೆದಿರುವ ಅಧಿಕ ಕ್ಯಾಚ್ ಎಂಬ ಹೆಗ್ಗಳಿಕೆಯನ್ನು ರಾಹುಲ್ ಪಡೆದಿದ್ದಾರೆ. ಇದಕ್ಕೂ ಮೊದಲು ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ರಿಷಭ್ ಪಂತ್ ಮೊದಲ ಇನ್ನಿಂಗ್ಸ್ ನಲ್ಲಿ 5 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ 29 ಒವರ್ ಗಳಲ್ಲಿ 85 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಇಶಾಂತ್ ಶರ್ಮಾ 2, ಮಹಮ್ಮದ್ ಶಮಿ ಹಾಗೂ ಪಾಂಡ್ಯ ತಲಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಿಷಭ್ ಪಂತ್ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ 5 ಕ್ಯಾಚ್ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರಿಷಭ್ ಪಂತ್ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್, ಕೀಟನ್ ಜೆನ್ನಿಂಗ್ಸ್, ಒಲೀ ಪೋಪ್, ಕ್ರಿಸ್ ವೋಕ್ಸ್ ಮತ್ತು ಅದಿಲ್ ರಶೀದ್ ಕ್ಯಾಚ್ ಪಡೆದು ಮಿಂಚಿದರು. ಈ ಹಿಂದೆ ಟೀಂ ಇಂಡಿಯಾದ ನರೇನ್ ತಮ್ಹಾನೆ (1955), ಕಿರಣ್ ಮೋರೆ (1986), ನಮನ್ ಓಜಾ (2015) ತಂಡದ ಪರ ಈ ಸಾಧನೆ ಮಾಡಿದ್ದರು. ಉಳಿದಂತೆ ನಾನಾ ಜೋಶಿ (1951), ಚಂದ್ರಕಾಂತ್ ಪಟಾನ್ಕರ್ (1955) ಪಾದಾರ್ಪಣೆ ಪಂದ್ಯದಲ್ಲಿ 4 ಕ್ಯಾಚ್ ಪಡೆದಿದ್ದರು.

    ವಿಶೇಷವೆಂದರೆ ಪಾದಾರ್ಪಣೆ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 5 ಕ್ಯಾಚ್ ಪಡೆದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಭ್ ಪಂತ್ ಪಡೆದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ರಿಷಭ್ ಎದುರಿಸಿದ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದಿದ್ದರು. ಅಲ್ಲದೇ ಸಿಕ್ಸರ್ ಮೂಲಕ ರನ್ ಖಾತೆ ತೆರೆದ ಟೀಂ ಇಂಡಿಯಾ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 51 ಎಸೆತ ಎದುರಿಸಿದ ರಿಷಭ್ ಪಂತ್ 24 ರನ್ ಗಳಿಸಿ ಔಟಾಗಿದ್ದರು.

    ಪಾಂಡ್ಯ 5 ವಿಕೆಟ್: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕೇವಲ 29 ಎಸೆತಗಳನ್ನು ಎಸೆದು 5 ವಿಕೆಟ್ ಪಡೆದ ಹಾರ್ದಿಕ್, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಟೀಂ ಇಂಡಿಯಾ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 2006 ಹಭರ್ಜನ್ ಸಿಂಗ್ ಸಿಂಗ್ ಕೇವಲ 27 ಎಸೆತಗಳನ್ನು ಹಾಕಿ 5 ವಿಕೆಟ್ ಪಡೆದಿದ್ದರು.

    ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಪಾಂಡ್ಯ ಹಲವು ವಿಮರ್ಶೆಗಳನ್ನು ಎದುರಿಸಿದ್ದರು. ಸದ್ಯ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ವಿಮರ್ಶಕರಿಗೆ ತಿರುಗೇಟು ನೀಡಿದ್ದಾರೆ. ಪಾಂಡ್ಯ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 161 ರನ್ ಗಳಿಗೆ ಅಲೌಟ್ ಆಯಿತು. ಉಳಿದಂತೆ ಟೀಂ ಇಂಡಿಯಾ ಪರ ಜಸ್‍ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ್ದು, 292 ರನ್ ಮುನ್ನಡೆ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ರಿಷಭ್ ಪಂತ್ ದಾಖಲೆ – ವೀಡಿಯೋ ನೋಡಿ

    ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ರಿಷಭ್ ಪಂತ್ ದಾಖಲೆ – ವೀಡಿಯೋ ನೋಡಿ

    ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿರುವ ರಿಷಭ್ ಪಂತ್, ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದ ಮೊದಲ ಭಾರತದ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದಿದ್ದಾರೆ.

    ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲಿ ಎದುರಿಸಿದ 2ನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಭ್ ಪಂತ್ ಪಡೆದರು. ವಿಶ್ವ ಕ್ರಿಕೆಟ್ ಆಟಗಾರರ ಈ ಪಟ್ಟಿಯಲ್ಲಿ ರಿಷಭ್ 12ನೇ ಆಟಗಾರ ಎನಿಸಿಕೊಂಡಿದ್ದಾರೆ.

    https://twitter.com/1stAxiom/status/1030874179191623680

    ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ನಲ್ಲಿ ದಿನೇಶ್ ಕಾರ್ತಿಕ್ ನೀರಸ ಪ್ರದರ್ಶನ ನೀಡಿದ ಕಾರಣದಿಂದ 20 ವರ್ಷದ ರಿಷಭ್ ಪಂತ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಭಾರತದ 291ನೇ ಟೆಸ್ಟ್ ಆಟಗಾರ ಎನಿಸಿಕೊಂಡರು.

    ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಗೆ 18 ಆಟಗಾರರ ಬೃಹತ್ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದರು. ಧೋನಿ ಬಳಿಕ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಸಮರ್ಥ ಕೀಪರ್ ಹಾಗೂ ಬ್ಯಾಟ್ಸ್ ಮನ್ ಕೊರತೆಯನ್ನು ಎದುರಿಸುತ್ತಿದೆ. ಸದ್ಯ ರಿಷಭ್ ಪಂತ್ ವಿಕೆಟ್ ಕೀಪರ್ ಸ್ಥಾನ ಪಡೆದಿದ್ದು ಉತ್ತಮ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿದ್ದರಾ ಎಂಬುವುದನ್ನು ಕಾದು ನೋಡಬೇಕಿದೆ. ಸದ್ಯ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿದೆ. ರಿಷಭ್ ಪಂತ್ 22 ರನ್ (4 ಬೌಂಡರಿ, 1 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ.

  • ಟೀಂ ಇಂಡಿಯಾದಲ್ಲಿ ಯಾರ ಸ್ಥಾನವೂ ಖಾಯಂ ಅಲ್ಲ: ಕೊಹ್ಲಿ

    ಟೀಂ ಇಂಡಿಯಾದಲ್ಲಿ ಯಾರ ಸ್ಥಾನವೂ ಖಾಯಂ ಅಲ್ಲ: ಕೊಹ್ಲಿ

    ಲಂಡನ್: ಪಂದ್ಯದಲ್ಲಿ ಜಯಗಳಿಸುವುದು ನಮ್ಮ ಗುರಿ. ಅದ್ದರಿಂದ ಇಲ್ಲಿ ಯಾವುದೇ ಆಟಗಾರರ ವೃತ್ತಿ ಜೀವನ ಮುಖ್ಯವಾಗುವುದಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಹ್ಲಿ, ತಂಡದ ಆಟಗಾರರ ಸ್ಥಾನದ ಬದಲಾವಣೆ ಕುರಿತು ಕೇಳಿ ಬರುತ್ತಿರುವ ಟೀಕೆಗಳಿಗೆ ಖಡಕ್ ಮಾತಿನ ಮೂಲಕ ಉತ್ತರ ನೀಡಿದ್ದಾರೆ.

    ತಂಡದಲ್ಲಿ ಯಾರು ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಈ ಕುರಿತು ನಾನು ತಂಡದ ಯಾವುದೇ ಆಟಗಾರನ ಭವಿಷ್ಯ ಅಥವಾ ಫಾರ್ಮ್ ಕುರಿತು ಯೋಚನೆ ಮಾಡುತ್ತಿಲ್ಲ. ಆಟಗಾರರ ಸಮಯ ಬಂದಾಗ ಉತ್ತಮ ಪ್ರದರ್ಶನ ನೀಡಬೇಕು. ಅದ್ದರಿಂದ ಇಂತಹ ಆರೋಪಗಳನ್ನು ತಂಡದಿಂದ ಹೊರಗುಳಿದಿರುವವರು ಹೇಳುತ್ತಾರೆ ಎಂದು ತಿಳಿಸಿದರು.

    ಈಗಾಗಲೇ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದು, ಇಂದು ನಾಟಿಂಗ್ ಹ್ಯಾಮ್ ನಲ್ಲಿ ನಡೆಯುವ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಒತ್ತಡವನ್ನು ಎದುರಿಸುತ್ತಿದೆ. ನಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಿಂದ ಕೊಕ್ ನೀಡಲಾಗಿದ್ದು, ರಿಷಭ್ ಪಂತ್ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬೌಲಿಂಗ್ ನಲ್ಲಿ ಕುಲ್‍ದೀಪ್ ಯಾದವ್ ಸ್ಥಾನದಲ್ಲಿ ವೇಗಿ ಜಸ್‍ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿದ್ದಾರೆ.

    ಇದುವರೆಗೂ ಕೊಹ್ಲಿ ನಾಯಕತ್ವದಲ್ಲಿ 37 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಯಾವುದೇ ಟೆಸ್ಟ್ ಪಂದ್ಯದ ಬಳಿಕ ಮತ್ತೊಂದು ಪಂದ್ಯಕ್ಕೆ ತಂಡವನ್ನು ಮುಂದುವರಿಸಿಲ್ಲ. ಅದ್ದರಿಂದ ತಂಡದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬ ಟೀಕೆಗಳು ವಿಶ್ಲೇಷಕರಿಂದ ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಕೊನೆ ಸ್ಥಾನದಲ್ಲಿ ಹೊರಬಿದ್ದ ತಂಡ ಎನಿಸಿಕೊಂಡರೂ ತಂಡದ ಯುವ ಆಟಗಾರ ರಿಷಭ್ ಪಂತ್ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ ಅರ್ಧ ಶತಕ (44 ಎಸೆತ, 64 ರನ್) ಸಿಡಿಸಿ ಮಿಂಚಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಸಹ ಪಡೆದರು. ಇನ್ನು ಟೂರ್ನಿಯಲ್ಲಿ ಒಟ್ಟಾರೆ 684 ರನ್ ಸಿಡಿಸಿದ ಪಂತ್ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ ಈ ಹಿಂದೆ ಕೆಕೆಆರ್ ಪರ 2014 ರಲ್ಲಿ ರಾಬಿನ್ ಉತ್ತಪ್ಪ (660 ರನ್) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪಂತ್ ದಾಖಲೆಯನ್ನು ಮುರಿಯುವ ಅವಕಾಶವಿತ್ತು. ಆದರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ಟೂರ್ನಿಯಲ್ಲಿ ಒಟ್ಟಾರೆ 659 ರನ್ ಗಳೊಂದಿಗೆ ರಾಹುಲ್ ಈ ಐಪಿಎಲ್ ಆವೃತ್ತಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

    20 ವರ್ಷದ ಪಂತ್ ಟೂರ್ನಿಯಲ್ಲಿ 52.61 ಸರಾಸರಿ ಹಾಗೂ 173.60 ಸ್ಟ್ರೈಕ್ ರೇಟ್ ನಲ್ಲಿ 684 ರನ್ ಸಿಡಿಸಿದ್ದು, ಇದರಲ್ಲಿ 5 ಅರ್ಧ ಶತಕ ಹಾಗೂ ದಾಖಲೆಯ ಅಜೇಯ 128 ರನ್ ಗಳ ಶತಕವೂ ಸೇರಿದೆ. ಅಲ್ಲದೇ ಈ ಟೂರ್ನಿಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಪಂತ್ ಹೊಂದಿದ್ದು, ಒಟ್ಟಾರೆ 37 ಸಿಕ್ಸರ್ ಸಿಡಿಸಿದ್ದಾರೆ.

    ಡೆಲ್ಲಿ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ತಂಡದವನ್ನು ಪ್ಲೇ ಆಫ್ ನಿಂದ ದೂರ ಮಾಡಿತ್ತು. ಇದರಲ್ಲಿ 64 ರನ್ ಸಿಡಿಸಿ ಪಂತ್ ತಂಡದ ಗೆಲುವಿಗೆ ಕಾರಣರಾಗಿದ್ದರು.

  • ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಡೆಲ್ಲಿ ತಂಡದ ಯುವ ಆಟಗಾರ ರಿಷಭ್ ಪಂತ್ ದಾಖಲೆ ಶತಕ ಸಿಡಿಸಿದ್ದು, ಐಪಿಎಲ್ ನ 50 ನೇ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಫಿರೋಜ್ ಶಾ ಕೋಟ್ಲಾ ಮೈಧಾನದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ ರಿಷಭ್ 63 ಎಸೆತಗಳಲ್ಲಿ 128 ರನ್ (15 ಬೌಂಡರಿ, 7 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ವಿಶೇಷವಾಗಿ ಇನ್ನಿಂಗ್ಸ್ ನ ಕೊನೆಯ ಓವರ್ ಎಸೆದ ಭುವನೇಶ್ವರ್ ಬೌಲಿಂಗ್ ನಲ್ಲಿ 26 ರನ್ ಸಿಡಿಸಿದರು.

    ಈ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಿಷಭ್ ಐಪಿಎಲ್ ನಲ್ಲಿ ಶತಕ ಗಳಿಸಿದ 31 ಆಟಗಾರ ಹಾಗೂ ಭಾರತದ 13ನೇ ಆಟಗಾರ ಎನಿಸಿಕೊಂಡರು. ಅಲ್ಲದೇ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಕೂಡ ಆಗಿದ್ದಾರೆ. ಅಲ್ಲದೇ ಭಾರತದ ಪರ ಐಪಿಎಲ್ ನಲ್ಲಿ ಆತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ರಿಷಬ್ ಶತಕ ನಡುವೆಯೂ ಹೈದರಾಬಾದ್ ತಂಡ ಪಂದ್ಯದಲ್ಲಿ ಗೆಲುವು ಪಡೆಯಿತು.

    ಭಾರತೀಯ ಆಟಗಾರರ ಪೈಕಿ ಕಿಂಗ್ಸ್ ಇಲೆವನ್ ಪಂಜಾಬ್‍ನ ಮುರಳಿ ವಿಜಯ್ 128 ರನ್ ಗಳಿಸಿದ್ದರೆ, ಈ ಹಿಂದೆ ಪಂಜಾಬ್ ಪರ ಆಡಿದ್ದ ಸೆಹ್ವಾಗ್ 122 ರನ್ ಹೊಡೆದಿದ್ದರು.

    ಈ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕೀ ಬೌಲರ್ ಎಂದೇ ಕರೆಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ರಷೀದ್ ಖಾನ್ ಬೌಲಿಂಗ್ ನಲ್ಲೇ ಅತೀ ರನ್ ಸಿಡಿಸಿದ ಪಂತ್ ಬ್ಯಾಟಿಂಗ್ ಹಲವು ಅಭಿಮಾನಿಗಳು ಫಿದಾ ಆಗಿದ್ದಾರೆ. ಐಪಿಎಲ್ ನಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿರುವ ಪಂತ್ 1 ಸಾವಿರ ರನ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಮನೀಶ್ ಪಾಂಡೆ ಆರ್‌ಸಿಬಿ ಪರ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ಟೂರ್ನಿಯ 11 ಪಂದ್ಯಗಳಲ್ಲಿ 521 ರನ್ ಗಳಿಸಿರುವ ಪಂತ್ ಪಂಜಾಬ್ ಕೆಎಲ್ ರಾಹುಲ್ ಜೊತೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ.