Tag: ರಿಷಭ್ ಪಂತ್

  • ರಿಷಭ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ – ಪಂತ್‌ ಒಂದು ಪಂದ್ಯದಿಂದ ಅಮಾನತು!

    ರಿಷಭ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ – ಪಂತ್‌ ಒಂದು ಪಂದ್ಯದಿಂದ ಅಮಾನತು!

    – ಪ್ಲೇ ಆಫ್‌ ಸಮೀಪದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರೀ ಆಘಾತ

    ನವದೆಹಲಿ: ಮೂರು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್‌ನಿಂದ (Slow Over Rate) ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ಗೆ (Rishabh Pant) ಐಪಿಎಲ್‌ ಮಂಡಳಿ ಬರೋಬ್ಬರಿ 30 ಲಕ್ಷ ರೂ. ದಂಡ ವಿಧಿಸಿದೆ. ಇದರೊಂದಿಗೆ ಒಂದು ಪಂದ್ಯದಿಂದ ರಿಷಭ್‌ ಪಂತ್‌ ಅವರನ್ನ ಅಮಾನತು ಮಾಡಲಾಗಿದೆ.

    ಸದ್ಯ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಪ್ಲೇ ಆಫ್‌ ಪ್ರವೇಶಿಸುವ ಸಮೀಪದಲ್ಲಿದೆ. ಮುಂದಿನ ಎರಡೂ ಪಂದ್ಯಗಳೂ ಡೆಲ್ಲಿ ತಂಡಕ್ಕೆ ನಿರ್ಣಾಯಕವಾಗಿದೆ. ಇಂತಹ ಹೊತ್ತಿನಲ್ಲೇ ನಾಯಕ ರಿಷಭ್‌ ಪಂತ್‌ ಅವರನ್ನ ಅಮಾನತುಗೊಳಿಸಿರುವುದು ಡೆಲ್ಲಿ ತಂಡಕ್ಕೆ ಭಾರೀ ಆಘಾತ ನೀಡಿದೆ. ಸೂಪರ್‌ ಸಂಡೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆರ್‌ಸಿಬಿ ವಿರುದ್ಧ ಸೆಣಸಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯಕ್ಕೆ ಪಂತ್‌ ಗೈರಾದರೆ, ಆರ್‌ಸಿಬಿಗೆ (RCB) ಇದು ವರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: IPL 2024: ಗೆದ್ದರೂ ಖುಷಿಯಿಲ್ಲ – ಶತಕ ಸಿಡಿಸಿ ಮೆರೆದಾಡಿದ ಗಿಲ್‌ಗೆ 24 ಲಕ್ಷ ರೂ. ದಂಡ!

    ದಂಡ ವಿಧಿಸಿದ್ದು ಏಕೆ?
    ಮೇ 7 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley Stadium) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಧಾನಗತಿಯ ಬೌಲಿಂಗ್‌ ನಡೆಸಿತ್ತು. ಇದಕ್ಕಾಗಿ ಪಂತ್‌ ಅವರಿಗೆ 30 ಲಕ್ಷ ರೂ. ದಂಡದೊಂದಿಗೆ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದ 11 ಸದಸ್ಯರಿಗೆ ತಲಾ 12 ಲಕ್ಷ ರೂ. ಅಥವಾ ಆಯಾ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ.

    30 ಲಕ್ಷ ದಂಡ ಯಾಕೆ?
    ಐಪಿಎಲ್‌ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. 3ನೇ ಬಾರಿಗೆ ದಂಡ ವಿಧಿಸಿದರೆ 30 ಲಕ್ಷ ದಂಡದೊಂದಿಗೆ ಒಂದು ಪಂದ್ಯದಿಂದ ನಾಯಕನನ್ನು ಅಮಾನತುಗೊಳಿಸಲಾಗುತ್ತದೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    ಪಂದ್ಯಕ್ಕೆ ಮೀಸಲಾದ ಸಮಯ ಎಷ್ಟು?
    ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. 2ನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

    ದಂಡ ಯಾಕೆ?
    ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

    ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ. ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!

  • ರಿಷಭ್‌ ಪಂತ್‌ ಮದುವೆಯಾಗ್ತೀರಾ? – ನೋ ಕಾಮೆಂಟ್ಸ್‌ ಎಂದು ಪಾಕ್‌ ಬೌಲರ್‌ ಹೊಗಳಿದ ಊರ್ವಶಿ ರೌಟೇಲಾ

    ರಿಷಭ್‌ ಪಂತ್‌ ಮದುವೆಯಾಗ್ತೀರಾ? – ನೋ ಕಾಮೆಂಟ್ಸ್‌ ಎಂದು ಪಾಕ್‌ ಬೌಲರ್‌ ಹೊಗಳಿದ ಊರ್ವಶಿ ರೌಟೇಲಾ

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಇದೀಗ ರಿಷಭ್‌ ಪಂತ್‌ ವಿಚಾರಕ್ಕೆ‌ ಮತ್ತೆ ಸುದ್ದಿಯಲ್ಲಿದ್ದಾರೆ. ಪಂತ್‌ ಅವರೊಂದಿಗೆ ಮದುವೆ ವಿಚಾರಕ್ಕೆ ನಟಿ ಕೊಟ್ಟ ಪ್ರತಿಕ್ರಿಯೆ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಕಾಲೆಳೆಯುವಂತೆ ಮಾಡಿದೆ.

    ಹೌದು. ಪಾಡ್‌ಕಾಸ್ಟ್‌ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ರೌಟೆಲಾ ಉತ್ತರ ನೀಡುತ್ತಿದ್ದರು. ಇದೇ ವೇಳೆ ಆಂಕರ್‌, ʻರಿಷಭ್‌ ಪಂತ್ (Rishabh Pant) ನಿಮ್ಮನ್ನು ತುಂಬಾ ಗೌರವಿಸುತ್ತಾರೆ, ತುಂಬಾ ಚೆನ್ನಾಗಿಯೂ ನೋಡಿಕೊಳ್ಳುತ್ತಾರೆ, ನೀವು ಅವರನ್ನು ಮದುವೆಯಾಗಬೇಕು ಅನ್ನೋದು ನಮ್ಮ ಬಯಕೆ, ಇದಕ್ಕೆ ಏನಂತೀರಾ?ʼ ಎಂದು ನೆಟ್ಟಿಗನ ಪ್ರಶ್ನೆಯೊಂದನ್ನು ಪ್ರಸ್ತಾಪಿಸಿದರು. ಆದ್ರೆ ಊರ್ವಶಿ ಇದಕ್ಕೆ ನೋ ಕಾಮೆಂಟ್ಸ್‌ ಎನ್ನುತ ಮುಂದಿನ ಪ್ರಶ್ನೆಗೆ ಸಾಗಿದರು.

    ಇದೇ ವೇಳೆ ಪಾಕಿಸ್ತಾನ ತಂಡದ ಸ್ಟಾರ್‌ ಬೌಲರ್‌ ನಸೀಮ್‌ ಶಾ (Naseem Shah) ಬಗ್ಗೆ ಕೇಳಿದಾಗ, ಖುಷಿಯಿಂದಲೇ ಉತ್ತರಿಸಿದ ಊರ್ವಶಿ ಹ್ಯಾಶ್‌ಟ್ಯಾಗ್ (ಟ್ರೆಂಡಿಂಗ್‌) ಬೌಲರ್‌ ಎಂದು ಹೇಳಿದರು. ಮುಂದುವರಿದು, ನಸೀಮ್‌ ಒಳ್ಳೆಯ ಬೌಲರ್‌ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಲ್ಲಂತೂ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ನಟಿ ನೀಡಿರುವ ಪ್ರತಿಕ್ರಿಯೆಗೆ ಸೋಶಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಟಿಯ ಕಾಲೆಳೆದಿದ್ದಾರೆ. ಇದನ್ನೂ ಓದಿ: ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟ ರಾಜಸ್ಥಾನ್‌ ರಾಯಲ್ಸ್‌ – ಧನ್ಯವಾದ ಹೇಳಿದ ಸುದೀಪ್‌

    ಹಿಂದೆಯೂ ಹಿಗ್ಗಾಮುಗ್ಗಾ ಟ್ರೋಲ್‌:
    2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಲಿಂಗ್‌ ಮಾಡುತ್ತಿದ್ದ ವೇಳೆ ನಸೀಮ್‌ ಶಾ, ಸಣ್ಣ ನಗೆ ಬೀರಿದ್ದ ವೀಡಿಯೋವನ್ನ ಊರ್ವಶಿ ರೌಟೇಲಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದರು. ಸಂದರ್ಶನದ ವೇಳೆ ಆಕೆ ಯಾರೂ ಅಂತಾನೇ ನನಗೆ ಗೊತ್ತಿಲ್ಲ ಎಂದು ನಸೀಮ್‌ ಶಾ ಊಹಾಪೋಹಗಳಿಗೆ ಬ್ರೇಕ್‌ ಹಾಕಿದ್ದರು. ಇದನ್ನೂ ಓದಿ:  ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ʻಐರಾವತʼಬೆಡಗಿ – ಊರ್ವಶಿ ರೌಟೇಲಾ ಕಾಲೆಳೆದ ಟ್ರೋಲ್‌ ಗೆಳೆಯರು

    ಊರ್ವಶಿಗೆ ಪಂತ್‌ ಜೊತೆ ಪ್ರೀತಿಯಿತ್ತಾ?
    ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಆದ್ರೆ ಇಬ್ಬರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದ್ರೆ ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಭ್‌ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಭ್‌ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

    14 ತಿಂಗಳ ಹಿಂದೆ ರಿಷಭ್‌ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿತ್ತು. ಆಗಲೂ ಊರ್ವಶಿ ಅವರು ರಿಷಭ್‌ ಅವರನ್ನು ಹಿಂಬಾಲಿಸಿದ್ದರು. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ಪಂತ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು.

  • ತಿಲಕ್‌‌, ಹಾರ್ದಿಕ್ ಹೋರಾಟ ವ್ಯರ್ಥ; ಡೆಲ್ಲಿಗೆ 10 ರನ್‌ಗಳ ಜಯ – ಮುಂಬೈ ಪ್ಲೇ ಆಫ್‌ ಹಾದಿ ಬಹುತೇಕ ಬಂದ್‌!

    ತಿಲಕ್‌‌, ಹಾರ್ದಿಕ್ ಹೋರಾಟ ವ್ಯರ್ಥ; ಡೆಲ್ಲಿಗೆ 10 ರನ್‌ಗಳ ಜಯ – ಮುಂಬೈ ಪ್ಲೇ ಆಫ್‌ ಹಾದಿ ಬಹುತೇಕ ಬಂದ್‌!

    ನವದೆಹಲಿ: ಕೊನೆಯವರೆಗೂ ಜಿದ್ದಾ-ಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 10 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ವಾಂಖೆಡೆ ಮೈದಾನದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 257 ರನ್‌ ಬಾರಿಸಿತ್ತು. 258 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ 10 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಗಿದೆ.

    ಕೊನೇ ಓವರ್‌ನಲ್ಲಿ ಕೈತಪ್ಪಿದ ಗೆಲುವು:
    ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 25 ರನ್‌ಗಳ ಅಗತ್ಯವಿತ್ತು. ಮುಕೇಶ್‌ ಕುಮಾರ್‌ ಬೌಲಿಂಗ್‌ ವೇಳೆ ತಿಲಕ್‌ ವರ್ಮಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲಿ 2 ರನ್‌ ಕದಿಯಲು ಯತ್ನಿಸಿ ತಿಲಕ್‌ ರನೌಟ್‌ಗೆ ತುತ್ತಾದರು. ಇದರೊಂದಿಗೆ ಮುಂಬೈ ತಂಡದ ಗೆಲುವಿನ ಕನಸೂ ಭಗ್ನವಾಯಿತು. ಕೊನೆಯವರೆಗೂ ಹೋರಾಡಿದ ಮುಂಬೈ 247 ರನ್‌ ಗಳಿಸಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಜಿ ನಾಯಕ ರೋಹಿತ್‌ ಶರ್ಮಾ 8 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು, ಈ ಬೆನ್ನಲ್ಲೇ 20 ರನ್‌ ಗಳಿಸಿ ಇಶಾನ್‌ ಕಿಶನ್‌ ಸಹ ಪೆವಿಲಿಯನ್‌ಗೆ ಮರಳಿದರು. ನಂತರ ಸ್ಪೋಟಕ ಬ್ಯಾಟಿಂಗ್‌ ಆರಂಭಿಸಿದ್ದ ಸೂರ್ಯಕುಮಾರ್‌ ಯಾದವ್‌ 13 ಎಸೆತಗಳಲ್ಲಿ 26 ರನ್‌ ಬಾರಿಸಿ ಔಟಾದರು. ಇದು ಮುಂಬೈ ತಂಡಕ್ಕೆ ಸೋಲಿನ ಭೀತಿ ಉಂಟುಮಾಡಿತ್ತು.

    ಮುಂಬೈ ಪರ ತಿಲಕ್‌ ವರ್ಮಾ 63 ರನ್‌ (32 ಎಸೆತ, 4 ಸಿಕ್ಸರ್‌, 4 ಬೌಂಡರಿ), ಹಾರ್ದಿಕ್‌ ಪಾಂಡ್ಯ 46 ರನ್‌ (24 ಎಸೆತ, 3 ಸಿಕ್ಸರ್‌, 4 ಬೌಂಡರಿ), ಟಿಮ್‌ ಡೇವಿಡ್‌ 37 ರನ್‌ (17 ಎಸೆತ, 3 ಸಿಕ್ಸರ್‌, 4 ಬೌಂಡರಿ), ಸೂರ್ಯಕುಮಾರ್‌ 26 ರನ್‌, ಇಶಾನ್‌ ಕಿಶನ್‌ 20 ರನ್‌, ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಮುಂಬೈ ವಿರೋಚಿತ ಸೋಲಿಗೆ ತುತ್ತಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌, ರಸಿಖ್‌ ಸಲಾಮ್‌ ತಲಾ 3 ವಿಕೆಟ್‌ ಕಿತ್ತರೆ, ಖಲೀಲ್‌ ಅಹ್ಮದ್‌ 2 ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆರಂಭಿಕರಾದ ಫ್ರೇಸರ್‌ ಮೆಕ್‌ಗಾರ್ಕ್‌ ಹಾಗೂ ಅಭಿಷೇಕ್ ಪೋರೆಲ್ ಆರಂಭದಿಂದಲೇ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದರು. ಮೊದಲ 2.4 ಓವರ್‌ಗಳಲ್ಲೇ ಡೆಲ್ಲಿ ತಂಡ 50 ರನ್‌ ಬಾರಿಸಿತ್ತು. ಆಸ್ಟ್ರೇಲಿಯಾ ಮೂಲದ ಯುವ ಸ್ಪೋಟಕ ಬ್ಯಾಟರ್ ಫ್ರೇಸರ್‌ ಮೆಗಾರ್ಕ್‌ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದ್ದು. ಒಂದಾದಮೇಲೊಂದು ಎಸೆತಗಳು ಸಿಕ್ಸರ್‌, ಬೌಂಡರಿಯ ಹಾದಿಯನ್ನೇ ಹಿಡಿಯುತ್ತಿದ್ದವು. ಇದರೊಂದಿಗೆ ಮೆಕ್‌ಗಾರ್ಕ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಡೆಲ್ಲಿ ಪವರ್‌ ಪ್ಲೇ ನಲ್ಲಿ 92 ರನ್ ಕಲೆಹಾಕಿತ್ತು. ಇದು ಐಪಿಎಲ್‌ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ ಪ್ಲೇನಲ್ಲಿ ಸಿಡಿಸಿದ ಗರಿಷ್ಠ ಸ್ಕೋರರ್‌ ಆಗಿತ್ತು.

    ಮೆಕ್‌ಗಾರ್ಕ್‌ ಹಾಗೂ ಅಭಿಷೇಕ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ ಬರೋಬ್ಬರಿ 114 ರನ್‌ ಸಿಡಿಸಿತ್ತು. ಮೆಕ್‌ಗಾರ್ಕ್‌ ಬಳಿಕ ಶಾಯ್‌ ಹೋಪ್‌, ರಿಷಭ್‌ ಪಂತ್‌, ಟ್ರಿಸ್ಟನ್‌ ಸ್ಟಬ್ಸ್‌ ಸಹ ಮುಂಬೈ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 257 ರನ್‌ ಸಿಡಿಸಿತ್ತು.

    ಡೆಲ್ಲಿ ಪರ ಮೆಕ್‌ಗಾರ್ಕ್‌ 84 ರನ್‌ (27 ಎಸೆತ, 11 ಬೌಂಡರಿ, 6 ಸಿಕ್ಸರ್‌), ಟ್ರಿಸ್ಟನ್‌ ಸ್ಟಬ್ಸ್‌ 48 ರನ್‌ (25 ಎಸೆತ, 6 ಬೌಂಡರಿ, 2 ಸಿಕ್ಸರ್‌), ಶಾಯ್‌ಹೋಪ್‌ 41 ರನ್‌ (17 ಎಸೆತ, 5 ಸಿಕ್ಸರ್‌), ರಿಷಭ್‌ ಪಂತ್‌ 29 ರನ್‌, ಅಕ್ಷರ್‌ ಪಟೇಲ್‌ 11 ರನ್‌ ಗಳಿಸಿದರು.

    ಮುಂಬೈ ಇಂಡಿಯನ್ಸ್‌ ಪರ ಲ್ಯೂಕ್ ವುಡ್, ಜಸ್ಪ್ರೀತ್‌ ಬುಮ್ರಾ, ಪಿಯೂಷ್‌ ಚಾವ್ಲಾ, ಮೊಹಮ್ಮದ್‌ ನಬಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ರನ್‌ ಏರಿದ್ದು ಹೇಗೆ?
    17 ಎಸೆತ – 50 ರನ್‌
    41 ಎಸೆತ – 100 ರನ್‌
    73 ಎಸೆತ – 150 ರನ್‌
    98 ಎಸೆತ – 200 ರನ್‌
    120 ಎಸೆತ – 257 ರನ್‌

  • IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    ನವದೆಹಲಿ: ರಶೀದ್ ಖಾನ್ ಅವರ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೇ ಓವರ್ ಥ್ರಿಲ್ಲಿಂಗ್?
    ಕೊನೇ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ರಶೀದ್ ಖಾನ್ ಮೊದಲ 2 ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದರು. 3-4ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದರು. 2 ಎಸೆತಗಳಲ್ಲಿ 11 ರನ್ ಬೇಕಿದ್ದಾಗಲೇ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು, ಇದರಿಂದ ಕೊನೇ ಕ್ಷಣದವರೆಗೂ ಗುಜರಾತ್‌ಗೆ ಗೆಲುವಿನ ಆಸೆ ಜೀವಂತವಾಗಿತ್ತು. ಆದ್ರೆ ಕೊನೇ ಎಸೆತದಲ್ಲಿ ಬೌಂಡರಿಗೆ ಯತ್ನಿಸಿದ ರಶೀದ್ ಖಾನ್ ಒಂದು ರನ್ ಕದಿಯುವಲ್ಲಿ ಮಾತ್ರ ಸಫಲರಾದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ಗಳ ರೋಚಕ ಗೆಲುವು ಸಿಕ್ಕಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಆರಂಭಿಸಿದ ಗುಜರಾತ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಕಲೆಹಾಕಿತ್ತು. ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಿತ್ತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು.

    ಟೈಟಾನ್ಸ್ ಪರ ಸಾಯಿ ಸುದರ್ಶನ್ 65 ರನ್ (39 ಎಸೆತ, 2 ಸಿಕ್ಸರ್, 7 ಬೌಂಡರಿ), ಡೇವಿಡ್ ಮಿಲ್ಲರ್ 55 ರನ್ (23 ಎಸೆತ, 3 ಸಿಕ್ಸರ್, 6 ಬೌಂಡರಿ), ವೃದ್ಧಿಮಾನ್ ಸಾಹಾ 39 ರನ್, ಶುಭಮನ್ ಗಿಲ್ 6 ರನ್, ಅಜ್ಮತುಲ್ಲಾ ಒಮರ್ಜಾಯ್ 1 ರನ್, ಎಂ. ಶಾರೂಖ್ ಖಾನ್ 8 ರನ್, ರಾಹುಲ್ ತೆವಾಟಿಯಾ 8 ರನ್, ಸಾಯಿ ಕಿಶೋರ್ 13 ರನ್, ರಶೀದ್ ಖಾನ್ 21 ರನ್ ಗಳಿಸಿದರು.

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಫೋಟಕ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ 200 ರನ್‌ಗಳ ಗಡಿ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ ರಿಷಭ್ ಪಂತ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕೊನೇ 10 ಎಸೆತಗಳಲ್ಲಿ ಸ್ಟಬ್ಸ್ ಮತ್ತು ಪಂತ್ ಜೋಡಿ ಬರೋಬ್ಬರಿ 51 ರನ್ ಚಚ್ಚಿತ್ತು. ಇದರಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೂ ಸೇರಿದ್ದವು.

    ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 88 ರನ್ (43 ಎಸೆತ, 8 ಸಿಕ್ಸರ್, 5 ಬೌಂಡರಿ), ಅಕ್ಷರ್ ಪಟೇಲ್ 66 ರನ್ (43 ಎಸೆತ, 4 ಸಿಕ್ಸರ್. 5 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 26 ರನ್ (2 ಸಿಕ್ಸರ್, 3 ಬೌಂಡರಿ), ಜೇಕ್ ಫ್ರೇಸರ್-ಮ್ಯಾಕ್‌ಗಾರ್ಕ್ 23 ರನ್, ಪೃಥ್ವಿ ಶಾ 11 ರನ್, ಶಾಯ್ ಹೋಪ್ 5 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಮಾರಕ ದಾಳಿ ನಡೆಸಿದ ಸಂದೀಪ್ ವಾರಿಯರ್ಸ್ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಸುಲಭ ತುತ್ತಾದ ಗುಜರಾತ್ – ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಅಮೋಘ ಜಯ; ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ!

    ಸುಲಭ ತುತ್ತಾದ ಗುಜರಾತ್ – ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಅಮೋಘ ಜಯ; ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ!

    – ತವರಿನಲ್ಲೇ ಗುಜರಾತ್‌ ಟೈಟಾನ್ಸ್‌ಗೆ ಹೀನಾಯ ಸೋಲು

    ಅಹಮದಾಬಾದ್: ಸಂಘಟಿತ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನದಿಂದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇದರೊಂದಿಗೆ 9ನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ -0.074 ನೆಟ್‌ ರನ್‌ರೇಟ್‌ ಮತ್ತು 6 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 17.3 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. 90 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 8.5 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 92 ರನ್ ಸಿಡಿಸಿ ಗೆಲುವು ಸಾಧಿಸಿತು.

    90 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟರ್‌ಗಳು ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾದರು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಅಬ್ಬರಿಸಿದ ಬ್ಯಾಟರ್‌ಗಳು ಪವರ್ ಪ್ಲೇ ಮುಗಿಯುವ ವೇಳೆಗೆ 67 ರನ್ ಬಾರಿಸಿದ್ದರು.

    ಆರಂಭಿಕ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮೊದಲ 10 ಎಸೆತಗಳಲ್ಲೇ 20 ರನ್ ಚಚ್ಚಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಪೃಥ್ವಿ ಶಾ ಸಹ 7 ರನ್‌ಗಳಿಗೆ ಔಟಾದರು. ಇದರಿಂದ ಗುಜರಾತ್ ಸಹ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಠಿಣ ಪೈಪೋಟಿ ನೀಡಲಿದೆ ಎಂದು ಭಾವಿಸಲಾಗಿತ್ತು. ಆದ್ರೆ ಅಭಿಷೇಕ್ ಪೋರೆಲ್, ಶಾಯ್ ಹೋಪ್, ರಿಷಭ್ ಪಂತ್ (Rishabh Pant) ಅವರ ಸ್ಫೋಟಕ ಪ್ರದರ್ಶನ ಡೆಲ್ಲಿ ತಂಡ ಸುಲಭ ಜಯ ಸಾಧಿಸುವಂತೆ ಮಾಡಿತು. ಡೆಲ್ಲಿ ಪರ ಅಭಿಷೇಕ್ ಪೋರೆಲ್ 7 ಎಸೆತಗಳಲ್ಲಿ 15 ರನ್, ಶಾಯ್ ಹೋಪ್ 19 ರನ್ ಗಳಿಸಿ ಔಟಾದರೆ, ರಿಷಭ್ ಪಂತ್ 16 ರನ್, ಸುಮಿತ್ ಕುಮಾರ್ 9 ರನ್ ಗಳಸಿ ಅಜೇಯರಾಗುಳಿದರು. ಗುಜರಾತ್‌ಟೈಟಾನ್ಸ್ ಪರ ಸಂದೀಪ್ ವಾರಿಯರ್ 2 ವಿಕೆಟ್ ಕಿತ್ತರೆ, ಸ್ಪೆನ್ಸರ್ ಜಾನ್ಸನ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಮೊದಲ 5 ಓವರ್‌ಗಳಲ್ಲೇ 30 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಭದ್ರವಾಗಿ ನೆಲೆಯೂರದೇ ಪೆವಿಲಿಯನ್ ಪರೇಡ್ ನಡೆಸಿದರು. ಈ ನಡುವೆ ರಶೀದ್ ಖಾನ್ ಅವರ ಸಾಧಾರಣ ಮೊತ್ತದ ಕೊಡುಗೆಯು ತಂಡವನ್ನು 90 ರನ್‌ಗಳ ಗಡಿ ತಲುಪುವಂತೆ ಮಾಡಿತು.

    ಗುಜರಾತ್ ಪರ ಏಕಾಂಗಿ ಹೋರಾಟ ನಡೆಸಿದ ರಶೀದ್ ಖಾನ್ 31 ರನ್ (24 ಎಸೆತ, 1 ಸಿಕ್ಸರ್, 2 ಬೌಂಡರಿ) ಗಳಿಸಿದರು. ಉಳಿದಂತೆ ವೃದ್ಧಿಮಾನ್ ಸಾಹಾ 2 ರನ್, ಶುಭಮನ್ ಗಿಲ್ 8 ರನ್, ಸಾಯಿ ಸುದರ್ಶನ್ 12 ರನ್, ಡೇವಿಡ್ ಮಿಲ್ಲರ್ 2 ರನ್, ಅಭಿನವ್ ಮನೋಹರ್ 8 ರನ್, ರಾಹುಲ್ ತೆವಾಟಿಯಾ 10 ರನ್, ಮೋಹಿತ್ ಶರ್ಮಾ 2 ರನ್, ನೂರ್ ಅಹ್ಮದ್ 1 ರನ್, ಸ್ಪೆನ್ಸರ್ ಜಾನ್ಸನ್ 1 ರನ್ ಗಳಿಸಿದರೆ, ಶಾರೂಖ್‌ಖಾನ್ ಶೂನ್ಯಕ್ಕೆ ನಿರ್ಗಮಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ 2.3 ಓವರ್‌ಗಳಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್ ಹಾಗೂ ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

  • IPL 2024: ಬಿದ್ದು ಎದ್ದು ಗೆದ್ದ ಪಂತ್‌ – ಐಪಿಎಲ್‌ನಲ್ಲಿ ರಿಷಭ್‌ ವಿಶೇಷ ಸಾಧನೆ

    IPL 2024: ಬಿದ್ದು ಎದ್ದು ಗೆದ್ದ ಪಂತ್‌ – ಐಪಿಎಲ್‌ನಲ್ಲಿ ರಿಷಭ್‌ ವಿಶೇಷ ಸಾಧನೆ

    ಲಕ್ನೋ: ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಸತತ 14 ತಿಂಗಳು ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ನಾಯಕ ರಿಷಭ್‌ ಪಂತ್‌ (Rishab Pant) ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿ ಕೊಹ್ಲಿ, ಶುಭಮನ್‌ ಗಿಲ್‌ ಅವರ ಎಲೈಟ್‌ ಪಟ್ಟಿ ಸೇರಿದ್ದಾರೆ.

    ಶುಕ್ರವಾರ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌ 9 ರನ್‌ ಗಳಿಸುವ ಮೂಲಕ ಐಪಿಎಲ್‌ನಲ್ಲಿ 3,000 ರನ್‌ ಪೂರೈಸಿದರು. ಅಲ್ಲದೇ ಐಪಿಎಲ್‌ನಲ್ಲಿ (IPL 2024) ಈ ವಿಶೇಷ ಸಾಧನೆ ಮಾಡಿದ 25ನೇ ಆಟಗಾರ ಸಹ ಎನಿಸಿಕೊಂಡರು. ಈ ಪಂದ್ಯದಲ್ಲಿ ಪಂತ್‌ ಒಟ್ಟು 41 ರನ್‌ (24 ಎಸೆತ, 4 ಬೌಂಡರಿ, 2 ಸಿಕ್ಸ್‌) ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಎಲೈಟ್‌ ಪಟ್ಟಿಗೆ ಪಂತ್‌:
    ಐಪಿಎಲ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡಿರುವ ರಿಷಭ್ ಪಂತ್, ಈ ಸಾಧನೆ ಮಾಡಿದ 25ನೇ ಆಟಗಾರನಾಗಿದ್ದಾರೆ. ಅಲ್ಲದೇ ರಿಷಬ್ ಪಂತ್ 26 ವರ್ಷ, 191 ದಿನಗಳಿದ್ದಾಗ 3 ಸಾವಿರ ರನ್‌ ಪೂರೈಸಿದ್ದು, ಈ ಸಾಧನೆ ಮಾಡಿದ ಭಾರತದ 3ನೇ ಕಿರಿಯ ಬ್ಯಾಟರ್ ಆಗಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ 26 ವರ್ಷ, 186 ದಿನಗಳಿದ್ದಾಗ, ನಂತರ ಶುಭಮಾನ್ ಗಿಲ್ 24 ವರ್ಷ, 215 ದಿನಗಳಿದ್ದಾಗ ಈ ಸಾಧನೆ ಮಾಡಿದ್ದರು.

    ಐಪಿಎಲ್‌ನಲ್ಲಿ ಪಂತ್‌ ಸಾಧನೆ ಏನು?
    ತಾವಾಡಿದ 104 ಪಂದ್ಯ, 103 ಇನ್ನಿಂಗ್ಸ್‌ಗಳಲ್ಲಿ ಪಂತ್‌ 3,032 ರನ್‌ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 17 ಅರ್ಧಶತಕಗಳೂ ಸೇರಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್‌ 128 ರನ್‌ ಆಗಿದೆ. ಇದರಲ್ಲಿ ಒಟ್ಟು 276 ಬೌಂಡರಿ ಹಾಗೂ 140 ಸಿಕ್ಸರ್‌ಗಳೂ ಸೇರಿವೆ. ಇದನ್ನೂ ಓದಿ: 4.3 ಕೋಟಿ ರೂ. ವಂಚನೆ – ಹಾರ್ದಿಕ್‌ ಪಾಂಡ್ಯ ಮಲಸಹೋದರ ಅರೆಸ್ಟ್‌!

    ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 167 ರನ್‌ ಗಳಿಸಿತ್ತು. 168 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಇನ್ನೂ 11 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 170 ರನ್‌ ಹೊಡೆದು ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.

  • ರಿಷಭ್‌ ಪಂತ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ

    ರಿಷಭ್‌ ಪಂತ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ

    ವಿಶಾಖಪಟ್ಟಣಂ: ಸತತ ಎರಡು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ನಾಯಕ ರಿಷಭ್‌ ಪಂತ್‌ಗೆ ಬಿಸಿಸಿಐ (BCCI) 24 ಲಕ್ಷ ರೂ. ದಂಡ ವಿಧಿಸಿದೆ.

    ರಿಷಭ್‌ ಪಂತ್‌ (Rishabh Pant) ಅವರಿಗೆ 24 ಲಕ್ಷ ರೂ. ದಂಡ ವಿಧಿಸಿದರೆ ತಂಡದ ಇಂಪ್ಯಾಕ್ಟ್‌ ಆಟಗಾರ ಅಭಿಷೇಕ್‌ ಸೇರಿದಂತೆ ಉಳಿದ ಆಟಗಾರರಿಗೆ 6 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಬುಧವಾರ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ ನಿಧಾನಗತಿಯ ಬೌಲಿಂಗ್‌ ಮಾಡಿದ್ದರೆ, ಮಾರ್ಚ್‌ 21 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ದದ ಪಂದ್ಯದಲ್ಲಿ ಡೆಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿತ್ತು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಕೋಲ್ಕತ್ತಾ 7 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 272 ರನ್ ಹೊಡೆದಿತ್ತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 17.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು. ಇದನ್ನೂ ಓದಿ: 2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು – ಐಪಿಎಲ್‌ ಇತಿಹಾಸದಲ್ಲಿ ಮತ್ತೊಂದು ವಿಶೇಷ ಸಾಧನೆ

    24 ಲಕ್ಷ ಯಾಕೆ?
    ಐಪಿಎಲ್‌ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ.

    ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ.

    ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಎರಡನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.  ಇದನ್ನೂ ಓದಿ: ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆ – ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆ?

    ದಂಡ ಯಾಕೆ?
    ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ.

    ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

    ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ.

    ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಶಿಸ್ತುಬದ್ಧವಾಗಿ ನಡೆದುಕೊಂಡ ತಂಡಕ್ಕೆ ಫೇರ್‌ ಪ್ಲೇ ಅಂಕಗಳನ್ನು ನೀಡಲಾಗುತ್ತದೆ. ಇಬ್ಬರು ಫೀಲ್ಡ್‌ ಅಂಪೈರ್‌ ಮತ್ತು ಮೂರನೇ ಅಂಪೈರ್‌ ಈ ಅಂಕವನ್ನು ತಂಡಗಳಿಗೆ ನೀಡುತ್ತಾರೆ.

     

  • ಟೀಂ ಇಂಡಿಯಾಕ್ಕೆ ಗುಡ್‌ನ್ಯೂಸ್ – ಮತ್ತೆ ಬ್ಯಾಟ್ ಹಿಡಿದು ಕ್ರೀಸ್‌ಗಿಳಿದ ರಿಷಬ್ ಪಂತ್

    ಟೀಂ ಇಂಡಿಯಾಕ್ಕೆ ಗುಡ್‌ನ್ಯೂಸ್ – ಮತ್ತೆ ಬ್ಯಾಟ್ ಹಿಡಿದು ಕ್ರೀಸ್‌ಗಿಳಿದ ರಿಷಬ್ ಪಂತ್

    ಕೋಲ್ಕತ್ತಾ: ಭೀಕರ ರಸ್ತೆ ಅಪಘಾತಕ್ಕೀಡಾಗಿ 11 ತಿಂಗಳ ಕಾಲ ಟೀಂ ಇಂಡಿಯಾದಿಂದ (Team India) ದೂರ ಉಳಿದಿದ್ದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ.

    ರಸ್ತೆ ಅಪಘಾತದ ಬಳಿಕ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದ ರಿಷಬ್ ಪಂತ್ ಗುರುವಾರ (ನ.9) ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ (Rishabh Pant Practice) ನಡೆಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ 

    ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್‌ನಲ್ಲಿಂದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಕಾಲಿಗೆ ಯಾವುದೇ ಪ್ಯಾಡ್‌ಗಳನ್ನ ಧರಿಸದೇ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು, 2024ರ ಐಪಿಎಲ್‌ ಟೂರ್ನಿಯಲ್ಲಿ ಕಣಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ.  ಬಳಿಕ ಮೈದಾನದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ರಿಷಬ್ ನಿಮ್ಮ ಫ್ಯೂಚರ್ ಇನ್ನಷ್ಟು ಬ್ರೈಟ್‌ ಆಗಲಿ, ಆದಷ್ಟು ಬೇಗ ಟೀಂ ಇಂಡಿಯಾಕ್ಕೆ ನಿಮ್ಮ ಬರುವಿಕೆಯನ್ನು ಎದುರು ನೋಡುತ್ತೇವೆ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಶುಭಕೋರಿದ್ದಾರೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ನಿರ್ದೇಶಕ ಸೌರವ್ ಗಂಗೂಲಿ ಸಹ ಉಪಸ್ಥಿತರಿದ್ದರು. ಇದನ್ನೂ ಓದಿ: ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

  • ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

    ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

    – ಲಕ್ನೋ ವಿರುದ್ಧ 5 ವಿಕೆಟ್ ಕಿತ್ತ ಆಕಾಶ್

    ಬೆಂಗಳೂರು: ಬಾಲ್ಯದಲ್ಲೇ ಲೆದರ್ ಬಾಲ್‍ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದರೆ ಮಾತ್ರ ಆತ ಮುಂದೆ ಸ್ಟಾರ್ ಆಟಗಾರನಾಗುತ್ತಾನೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಈ ನಂಬಿಕೆ ಸುಳ್ಳು, ಮನಸ್ಸಿದ್ದರೆ ಯಾವ ವಯಸ್ಸಿನಲ್ಲೂ ಅಭ್ಯಾಸ ಮಾಡಿದರೆ ಉತ್ತಮ ಆಟಗಾರನಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಕಾಶ್.

    ಕೆಲವು ವರ್ಷಗಳ ಹಿಂದೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಉತ್ತರಾಖಂಡ್ ಮೂಲದ ಯುವ ಎಂಜಿನಿಯರ್ ಆಕಾಶ್ ಮಧ್ವಾಲ್ (Akash Madhwal) ಈಗ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    2019ರಲ್ಲಿ ಮೊದಲ ಬಾರಿ ರೆಡ್ ಬಾಲ್ ಕ್ರಿಕೆಟ್ ಟ್ರಯಲ್ಸ್‍ನಲ್ಲಿ ಪಾಲ್ಗೊಂಡಿದ್ದ ಆಕಾಶ್, ಮೊದಲ ಪ್ರಯತ್ನದಲ್ಲೇ ಉತ್ತರಾಖಂಡ್ ತಂಡದ ಅಂದಿನ ಕೋಚ್ ವಸೀಮ್ ಜಾಫರ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. 24ನೇ ವಯಸ್ಸಿನವರೆಗೂ ಲೆದರ್ ಬಾಲ್ ಆಡಿರದ ಆಕಾಶ್, ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಎದುರು 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ದಾಖಲೆ ಸರಿಗಟ್ಟಿದ್ದರು.

    ಈ ಮೂಲಕ 16ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಅಸಾಧಾರಣ ಬೌಲಿಂಗ್ ಪ್ರದರ್ಶನದ ಬಲದಿಂದ ಮುಂಬೈ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಎಲ್‍ಎಸ್‍ಜಿ ಎದುರು 81 ರನ್‍ಗಳ ಜಯ ದಾಖಲಿಸಿದೆ.

    ಕೋಚ್ ಹೇಳೋದು ಏನು?
    ವಿಶಿಷ್ಟ ಬೌಲಿಂಗ್ ಶೈಲಿಯ ಆಕಾಶ್ ಅವರಲ್ಲಿ ವಿಶೇಷ ಸಾಮಥ್ರ್ಯವಿದೆ. ಹೀಗಾಗಿ 2019ರ ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯಕ್ಕೆ ಅವರನ್ನು ಅಂದಿನ ಕೋಚ್ ವಸೀಮ್ ಜಾಫರ್ ನೇರವಾಗಿ ಆಯ್ಕೆ ಮಾಡಿದ್ದರು. ಟೂರ್ನಿಯಲ್ಲಿ ಅವರು ರನ್ ನೀಡಿದರೂ ಬೌಲಿಂಗ್ ಮಾಡಿಸಿದ್ದೆ. ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಅವರ ಬೌಲಿಂಗ್ ಸುಧಾರಣೆಗೊಳ್ಳುತ್ತದೆ ಎಂದಿದ್ದೆ ಎಂದು ಮುಖ್ಯ ಕೋಚ್ ಮನೀಶ್ ಜಾ ಹೇಳಿದ್ದಾರೆ.

    ಆಕಾಶ್ ಟೆನಿಸ್ ಬಾಲ್ ಆಟಗಾರ ಹೀಗಾಗಿ ಅವರ ಬೌಲಿಂಗ್‍ನಲ್ಲಿ ವೇಗವಿತ್ತಾದರೂ ನೇರ ಮತ್ತು ನಿಖರತೆ ಇರಲಿಲ್ಲ. ಈ ನಡುವೆ ತಮ್ಮ ಬೌಲಿಂಗ್‍ನಲ್ಲಿ ಹಲವು ಪ್ರಯೋಗ ಕೂಡ ಮಾಡುತ್ತಿದ್ದರು. ಉತ್ತಮ ಸಾಮಥ್ರ್ಯ ಇರುವಾಗ ಸ್ಲೋ ಬಾಲ್ ಪ್ರಯತ್ನ ಯಾಕೆ ಎಂದಿದ್ದೆ. ಈಗ ಉತ್ತಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

    ಟೀಮ್ ಇಂಡಿಯಾ ವಿಕೆಟ್‍ಕೀಪರ್ ರಿಷಭ್ ಪಂತ್ (Rishabh Pant) ಅವರ ಉತ್ತರಾಖಂಡ್ ನಿವಾಸದ ಎದುರು ಮನೆಯಲ್ಲೇ ಆಕಾಶ್ ಮಧ್ವಾಲ್ ಕೂಡ ಇದ್ದಾರೆ. ಆಕಾಶ್ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, 2013ರಲ್ಲಿ ವೀರ ಮರಣ ಹೊಂದಿದ್ದಾರೆ. ಓದಿನಲ್ಲಿ ಬಹಳ ಚುರುಕಿದ್ದ ಆಕಾಶ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಕ್ರಿಕೆಟ್‍ನ್ನು ಕೇವಲ ಹವ್ಯಾಸವನ್ನಾಗಿ ತೆಗೆದುಕೊಂಡಿದ್ದ ಆಕಾಶ್ ಇಂದು ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

  • ರಿಷಭ್ ಪಂತ್ ತಂಡದ ಹೃದಯ, ಆತ್ಮವಿದ್ದಂತೆ: ಪಾಂಟಿಂಗ್

    ರಿಷಭ್ ಪಂತ್ ತಂಡದ ಹೃದಯ, ಆತ್ಮವಿದ್ದಂತೆ: ಪಾಂಟಿಂಗ್

    ನವದೆಹಲಿ: ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಹೃದಯ ಮತ್ತು ಆತ್ಮವಿದ್ದಂತೆ ಎಂದು ಕೋಚ್ ರಿಕ್ಕಿ ಪಾಂಟಿಂಗ್ (Ricky Ponting) ಹೇಳಿದ್ದಾರೆ.

    ಪಂತ್ ಅವರನ್ನು ನೆನಪಿಸಿಕೊಂಡ ಪಾಂಟಿಂಗ್, ಪ್ರತಿ ಪಂದ್ಯದಲ್ಲಿಯೂ ಡಗೌಟ್‍ನಲ್ಲಿ ನನ್ನ ಬಳಿಯೇ ಪಂತ್ ಕುಳಿತುಕೊಳ್ಳುತ್ತಿದ್ದರು. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಅವರನ್ನು ಸಾಧ್ಯವಾದಷ್ಟು ರೀತಿಯಲ್ಲಿ ತಂಡದ ಭಾಗವಾಗಿ ಮಾಡಲು ಬಯಸುತ್ತೇವೆ. ನಾವು ಅವರ ಸಂಖ್ಯೆಯನ್ನು ಜೆರ್ಸಿ ಅಥವಾ ಕ್ಯಾಪ್‍ಗಳ ಮೇಲೆ ಇರಲಿದೆ. ಅವರ ಅನುಪಸ್ಥಿತಿಯಲ್ಲಿಯೂ ಅವರು ನಮ್ಮ ನಾಯಕರಾಗಿತ್ತಾರೆ ಎಂದಿದ್ದಾರೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಅಪಘಾತದಿಂದಾಗಿ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಿಲ್ಲ. ಪಂತ್ ಗೈರಿನಲ್ಲಿ ತಂಡವನ್ನು ಡೆವಿಡ್ ವಾರ್ನರ್ (David Warner) ಮುನ್ನಡೆಸಲಿದ್ದಾರೆ. ಆದರೆ ವಾರ್ನರ್ ನಾಯಕತ್ವ ವಿಚಾರ ಇನ್ನೂ ಅಂತಿಮಗೊಳಿಸಿಲ್ಲ

    ಕಳೆದ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ 14 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ, ಐದನೇ ಸ್ಥಾನವನ್ನು ಪಡೆದಿತ್ತು. ಏ.1ರಂದು ಲಕ್ನೋದಲ್ಲಿ ನಡೆಯಲಿರುವ ಆರಂಭಿಕ ಐಪಿಎಲ್ (IPL) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ( Lucknow Super Giants) ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ