Tag: ರಿಷಬ್ ಪಂತ್

  • ಮೊಹಾಲಿಯಲ್ಲೂ ಧೋನಿ ನೆನಪಿಸಿದ ಅಭಿಮಾನಿಗಳು!

    ಮೊಹಾಲಿಯಲ್ಲೂ ಧೋನಿ ನೆನಪಿಸಿದ ಅಭಿಮಾನಿಗಳು!

    ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು 2 ಏಕದಿನ ಪಂದ್ಯಗಳಿಗೆ ಧೋನಿ ಅವರಿಗೆ ವಿಶ್ರಾಂತಿ ನೀಡಿದ್ದರೂ ಕೂಡ, ಮೊಹಾಲಿ ಪಂದ್ಯದಲ್ಲಿ ಧೋನಿ ಧೋನಿ ಎಂದು ಕೂಗುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳು ನೆನಪಿಸಿದ್ದಾರೆ.

    ಪಂತ್ ವಿಕೆಟ್ ಮಾಡುವ ವೇಳೆ ಧೋನಿ ಎಂದು ಇಡೀ ಮೈದಾನದಲ್ಲಿ ಅಭಿಮಾನಿಗಳು ಕೂಗಿ ಅಭಿಮಾನ ಮೆರೆದಿದ್ದರು. ಪಂದ್ಯದಲ್ಲಿ ಆಸೀಸ್ ತಂಡ ಗೆಲ್ಲಲು ಪ್ರಮುಖರಾಗಿದ್ದ ಟರ್ನರ್ ವಿಕೆಟ್ ಪಡೆಯುವ ಅವಕಾಶ ಲಭಿಸಿತ್ತು. ಆದರೆ ಈ ಹಂತದಲ್ಲಿ ವಿಕೆಟ್ ಹಿಂದೆ ಎರಡೆರಡು ಬಾರಿ ಎಡವಿದ್ದ ಪಂತ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದರು.

    44ನೇ ಓವರ್ ಬೌಲ್ ಮಾಡಿದ್ದ ಚಹಲ್ ಲೇಗ್ ಸೈಡ್ ಬಾಲ್ ಎಸೆದು ವೈಡ್ ಮಾಡಿದ್ದರು. ಈ ವೇಳೆ ಸ್ಟಂಪ್ ಮಾಡುವ ಅವಕಾಶವನ್ನು 21 ವರ್ಷದ ಪಂತ್ ಮಿಸ್ ಮಾಡಿದ್ದರು. ಅಲ್ಲದೇ ಮತ್ತೊಂದು ಹಂತದಲ್ಲಿ 3ನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆಯೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ರಿಷಬ್ ಪಂತ್ ಇತ್ತೀಚೆಗಷ್ಟೇ ಬಿಸಿಸಿಐ ನೀಡಿದ್ದ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ 3 ಶ್ರೇಣಿ ಪಡೆದಿದ್ದರು. ಅಲ್ಲದೇ ಇಂಗ್ಲೆಂಡ್ ಹಾಗೂ ಆಸೀಸ್ ಟೂರ್ನಿಗಳಲ್ಲಿ ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಬ್ಯಾಟಿಂಗ್ ಅಲ್ಲದೇ ವಿಕೆಟ್ ಹಿಂದೆಯೂ ಉತ್ತಮ ಪ್ರದರ್ಶನ ನೀಡಿದ್ದ ರಿಷಬ್, ಅನುಭವಿ ಆಟಗಾರರ ದಿನೇಶ್ ಕಾರ್ತಿಕ್ ಇದ್ದ ಹೊರತಾಗಿಯೂ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದರು.

    https://twitter.com/Vidshots1/status/1104775666812243968

    ಅಂದಹಾಗೇ 2005 ಬಳಿಕ ಟೀಂ ಇಂಡಿಯಾ ಮೊದಲ ಬಾರಿಗೆ ಧೋನಿ ಆಡುವ 11ರ ಬಳಗದಲ್ಲಿ ಇಲ್ಲದೇ ಕಣಕ್ಕೆ ಇಳಿದಿದ್ದರು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ 54 ಏಕದಿನ ಪಂದ್ಯಗಳಲ್ಲಿಯೂ ಧೋನಿ ಆಡಿದ್ದರು. 2004 ರಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಆಸೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಆಡಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಸಿಸಿಐನಿಂದ ರಿಷಬ್ ಪಂತ್‍ಗೆ ಬಂಪರ್- ಧವನ್, ಭುವಿಗೆ ಡಿಮೋಷನ್!

    ಬಿಸಿಸಿಐನಿಂದ ರಿಷಬ್ ಪಂತ್‍ಗೆ ಬಂಪರ್- ಧವನ್, ಭುವಿಗೆ ಡಿಮೋಷನ್!

    ಮುಂಬೈ: 2019ರ ಅವಧಿಯಲ್ಲಿ ಹೊಸದಾಗಿ ಆಟಗಾರರ ವೇತನ ಶ್ರೇಣಿಯನ್ನು ನಿಗಧಿಪಡಿಸಿ ಬಿಸಿಸಿಐ ಬಿಡುಗಡೆ ಮಾಡಿದ್ದು, ಯುವ ಆಟಗಾರರ ರಿಷಬ್ ಪಂತ್‍ಗೆ ಎ ದರ್ಜೆಯ ಸ್ಥಾನ ನೀಡಲಾಗಿದೆ.

    ಬಿಸಿಸಿಐ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನವನ್ನು ಕಡಿಮೆ ಗೊಳಿಸಿ ಎ ಪ್ಲಸ್ ದರ್ಜೆಯಿಂದ ಎ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

    21 ವರ್ಷದ ರಿಷಬ್ ಪಂತ್ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದರು, ಪರಿಣಾಮ ಅವರಿಗೆ ಬಂಪರ್ ಅವಕಾಶ ಲಭಿಸಿದೆ. ಆದರೆ ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಧವನ್ ಹಾಗೂ ಟೆಸ್ಟ್ ಕ್ರಿಕೆಟ್‍ನಲ್ಲಿ ಭುವನೇಶ್ವರ್ ಹೆಚ್ಚು ಅವಕಾಶ ಪಡೆಯದ ಕಾರಣ ಅವರನ್ನು ಎ ದರ್ಜೆಯಲ್ಲಿ ಸ್ಥಾನದಲ್ಲಿರಸಲಾಗಿದೆ.

    ಕಳೆದ ವರ್ಷ ಹೊಸದಾಗಿ ಪರಿಚಯಿಸಲಾಗಿದ್ದ ವಾರ್ಷಿಕ 7 ಕೋಟಿ ರೂ. ಮೊತ್ತದ ಒಪ್ಪಂದದಲ್ಲಿ ನಾಯಕ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮುಂದುವರಿದ್ದಾರೆ. ಈ ಹೊಸ ಒಪ್ಪಂದ ಅಕ್ಟೋಬರ್ 1, 2018 ರಿಂದ ಸೆಪ್ಟೆಂಬರ್ 30, 2019ರವರೆಗೂ ಮುಂದುವರಿಯಲಿದೆ. ಇನ್ನು ಕನ್ನಡಿಗ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾರ್ಷಿಕ 3 ಕೋಟಿ ರೂ ಮೊತ್ತದ ಬಿ ಶ್ರೇಣಿಯಲ್ಲಿದ್ದಾರೆ. ಉಳಿದಂತೆ ಪಟ್ಟಿ ಇಂತಿದೆ.

    ಎ ಪ್ಲಸ್ ಶ್ರೇಣಿ (7 ಕೋಟಿ ರೂ.): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ.

    ಎ ಶ್ರೇಣಿ (5 ಕೋಟಿ ರೂ.): ಆರ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಧೋನಿ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲ್ಡೀಪ್ ಯಾದವ್, ರಿಷಬ್ ಪಂತ್.

    ಬಿ ಶ್ರೇಣಿ (3 ಕೋಟಿ ರೂ.): ಕೆಎಲ್ ರಾಹುಲ್, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ.

    ಸಿ ಶ್ರೇಣಿ (1 ಕೋಟಿ ರೂ.): ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಮನೀಷ್ ಪಾಂಡ್ಯ, ಹನುಮ ವಿಹಾರಿ, ಖಲೀಲ್ ಅಹ್ಮದ್, ವೃದ್ಧಿಮಾನ್ ಸಹಾ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹರ್ಭಜನ್ ಆಯ್ಕೆಯ ವಿಶ್ವಕಪ್ ತಂಡದಲ್ಲಿ ರಾಹುಲ್, ಪಂತ್‍ಗಿಲ್ಲ ಸ್ಥಾನ

    ಹರ್ಭಜನ್ ಆಯ್ಕೆಯ ವಿಶ್ವಕಪ್ ತಂಡದಲ್ಲಿ ರಾಹುಲ್, ಪಂತ್‍ಗಿಲ್ಲ ಸ್ಥಾನ

    ಮುಂಬೈ: 2019ರ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿರುವ ಟೀಂ ಇಂಡಿಯಾಗೆ 15 ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಕಾರ್ಯ ಪ್ರವೃತ್ತವಾಗಿದೆ. ಈ ವೇಳೆಯಲ್ಲೇ ಅನುಭವಿ ಆಟಗಾರ ಹರ್ಭಜನ್ ಸಿಂಗ್ ತಮ್ಮ ಕನಸಿನ ತಂಡದ ಆಯ್ಕೆ ಮಾಡಿ ಕುತೂಹಲ ಮೂಡಿಸಿದ್ದಾರೆ.

    ಹರ್ಭಜನ್ ಸಿಂಗ್ ಆಯ್ಕೆ ಮಾಡಿರುವ ತಂಡದಲ್ಲಿ ಪ್ರಮುಖವಾಗಿ ಉಮೇಶ್ ಯಾದವ್, ರವೀಂದ್ರ ಜಡೇಜಾ, ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಕನ್ನಡಿಗ ಕೆಎಲ್ ರಾಹುಲ್, ಯುವ ಆಟಗಾರ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿಲ್ಲ.

    ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಜಯ್ ಶಂಕರ್ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದರೆ, ಹಾರ್ದಿಕ್ ಪಾಂಡ್ಯ ಅಲೌಂಡರ್ ಸ್ಥಾನವನ್ನು ತುಂಬಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಕಳೆದ ಬಾರಿ ವಾತಾವರಣ ಹೆಚ್ಚು ಬಿಸಿಯಿಂದ ಕೂಡಿದ್ದು, ಪಿಚ್ ವರ್ತನೆಯ ಉದ್ದೇಶದಿಂದ ಜಡೇಜಾ ಆಯ್ಕೆ ಉತ್ತಮ ಹಾಗು ತಂಡಕ್ಕೆ ಮತ್ತೊಬ್ಬ ಅಲೌಂಡರ್ ಲಭ್ಯರಾಗಲಿದ್ದಾರೆ ಎಂದು ಹರ್ಭಜನ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ತಂಡ ಇಂತಿದೆ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಂಬಟಿ ರಾಯುಡು, ಎಂಎಸ್ ಧೋನಿ, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್, ಉಮೇಶ್ ಯಾದವ್, ವಿಜಯ್ ಶಂಕರ್. ಸಂಭನೀಯ: ರವೀಂದ್ರ ಜಡೇಜಾ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಿಷಬ್ ಪಂತ್ ಮುಡಿಗೆ ಐಸಿಸಿ ಉದಯೋನ್ಮುಖ ಆಟಗಾರ ಗರಿ

    ರಿಷಬ್ ಪಂತ್ ಮುಡಿಗೆ ಐಸಿಸಿ ಉದಯೋನ್ಮುಖ ಆಟಗಾರ ಗರಿ

    ದುಬೈ: ಪಾದಾರ್ಪಣೆ ಪಂದ್ಯದಲ್ಲೇ ಶತಕದ ಸಾಧನೆ ಮಾಡಿ ಭರವಸೆ ಮೂಡಿಸಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಐಸಿಸಿ ನೀಡುವ ವರ್ಷದ ಉದಯೋನ್ಮುಖ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ ಐಸಿಸಿ ಟೆಸ್ಟ್ ಕ್ರಿಕೆಟ್ ತಂಡದಲ್ಲಿಯೂ ರಿಷಬ್ ಪಂತ್ ಸ್ಥಾನ ಪಡೆದಿದ್ದಾರೆ.

    21 ವರ್ಷದ ರಿಷಬ್ ಪಂತ್ ರನ್ನು ಐಸಿಸಿ ಆಯ್ಕೆ ಸಮಿತಿಯ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಇಂಗ್ಲೆಂಡ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಟೀಂ ಇಂಡಿಯಾ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆಯುವ ಮೂಲಕ ದಾಖಲೆ ಸರಿಗಟ್ಟಿದ್ದರು. ಆಸೀಸ್ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿದ ಟೀಂ ಇಂಡಿಯಾ ಮೊದಲ ವಿಕೆಟ್ ಕೀಪರ್ ಕೂಡ ಆಗಿದ್ದಾರೆ.

    ರಿಷಬ್ ಇದುವರೆಗೂ ಆಡಿರುವ 9ನೇ ಟೆಸ್ಟ್ ಪಂದ್ಯಗಳ 15 ಇನ್ನಿಂಗ್ಸ್ ಗಳಲ್ಲಿ 2 ಶತಕ ಹಾಗೂ ಅರ್ಧ ಶತಕಗಳ ನೆರವಿನಿಂದ 696 ರನ್ ಸಿಡಿಸಿದ್ದಾರೆ. ಅಲ್ಲದೇ ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ 2 ಸ್ಟಪಿಂಗ್ ಹಾಗೂ 40 ಕ್ಯಾಚ್ ಪಡೆದಿದ್ದಾರೆ. ಉಳಿದಂತೆ 3 ಏಕದಿನ ಪಂದ್ಯಗಳಲ್ಲಿ 41 ರನ್, 3 ಕ್ಯಾಚ್ ಹಾಗೂ 8 ಟಿ20 ಪಂದ್ಯಗಳಿಂದ 114 ರನ್ ಸೇರಿದಂತೆ 2 ಕ್ಯಾಚ್ ಪಡೆದು ಮಿಂಚಿದ್ದಾರೆ. ಇದನ್ನು ಓದಿ: ನನ್ನ ಸಂತೋಷಕ್ಕೆ ನೀನು ಕಾರಣ: ಅಭಿಮಾನಿಗಳಿಗೆ ಗೆಳತಿಯನ್ನು ಪರಿಚಯಿಸಿದ ರಿಷಬ್ ಪಂತ್

    ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆ ಆಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಸಂತೋಷಕ್ಕೆ ನೀನು ಕಾರಣ: ಅಭಿಮಾನಿಗಳಿಗೆ ಗೆಳತಿಯನ್ನು ಪರಿಚಯಿಸಿದ ರಿಷಬ್ ಪಂತ್

    ನನ್ನ ಸಂತೋಷಕ್ಕೆ ನೀನು ಕಾರಣ: ಅಭಿಮಾನಿಗಳಿಗೆ ಗೆಳತಿಯನ್ನು ಪರಿಚಯಿಸಿದ ರಿಷಬ್ ಪಂತ್

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಹಿಂದುಗಡೆ ಮಾತನಾಡಿ ಅಭಿಮಾನಿಗಳನ್ನು ರಂಜಿಸಿದ್ದ 21 ವರ್ಷದ ಕೀಪರ್ ರಿಷಬ್ ಪಂತ್ ಈಗ ತನ್ನ ಗೆಳತಿಯನ್ನು ಮೊದಲ ಬಾರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

    ರಿಷಬ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಗೆಳತಿ ಇಶಾ ನೇಗಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ಗೆ “ನಾನು ನಿನ್ನನ್ನು ಸಂತೋಷ ಪಡಿಸುತ್ತೇನೆ. ಯಾಕೆಂದರೆ ನನ್ನ ಸಂತೋಷಕ್ಕೆ ನೀನು ಕಾರಣ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ: ಏಕದಿನ ಸರಣಿಯಿಂದ ರಿಷಬ್ ಪಂತ್ ಡ್ರಾಪ್ – ಕಾರಣ ಬಿಚ್ಚಿಟ್ಟ ರವಿಶಾಸ್ತ್ರಿ

    ರಿಷಬ್ ಪಂತ್ ಹಾಕಿದ ಫೋಟೋವನ್ನೇ ತನ್ನ ಖಾತೆಯಿಂದ ಪೋಸ್ಟ್ ಮಾಡಿರುವ ಇಶಾ ನೇಗಿ, ನನ್ನ ಮನುಷ್ಯ, ನನ್ನ ಆತ್ಮೀಯ, ನನ್ನ ಅತ್ಯುತ್ತಮ ಸ್ನೇಹಿತ, ನನ್ನ ಜೀವನದ ಪ್ರೀತಿ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/Bss2wWUBxpq/?utm_source=ig_embed

    ಯಾರು ಇಶಾ ನೇಗಿ?
    ಇಶಾ ದೆಹಲಿಯ ಪ್ರಸಿದ್ದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪದವಿ ಓದಿದ್ದು, ಈಗ ಡೆಹ್ರಾಡೂನ್ ನಲ್ಲಿರುವ ಸಿಜೆಎಂ ಕಾಲೇಜಿನಲ್ಲಿ ಸಾಹಿತ್ಯದ ಬಗ್ಗೆ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಇದನ್ನು ಓದಿ: ಸಿಕ್ಸರ್, ಕ್ಯಾಚ್ ಆಯ್ತು ಈಗ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ!

    ಇಲ್ಲಿಯವರೆಗೆ ರಿಷಬ್ ಪಂತ್ ಮತ್ತು ಇಶಾ ಇಬ್ಬರು ಪ್ರೇಮಿಗಳು ಎನ್ನುವುದು ಯಾರಿಗೆ ತಿಳಿದಿರಲಿಲ್ಲ. ಆದರೆ ಬುಧವಾರ ರಿಷಬ್ ಪಂತ್ ಫೋಟೋವನ್ನು ಶೇರ್ ಮಾಡಿದ ಬಳಿಕ ಇಶಾ ಈಗ ಕಾಲೇಜಿನನಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ಇಶಾ ನೋಡಲೆಂದೇ ಉಳಿದ ವಿದ್ಯಾರ್ಥಿಗಳು ತರಗತಿಯತ್ತ ಬರುತ್ತಿದ್ದಾರೆ. ತಮ್ಮ ಖಾತೆಯಲ್ಲಿ ನಾನು ಉದ್ಯಮಿಯಾಗಿದ್ದು, ಒಳಾಂಗಣ ವಿನ್ಯಾಸಕಿ ಎಂದು ಇಶಾ ಹೇಳಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ 58.33 ಸರಾಸರಿಯಲ್ಲಿ ಒಟ್ಟು 350 ರನ್ ಗಳಿಸಿದ್ದು, ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಸಿಡಿಸಿದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.

    ರಿಷಬ್ ಪಂತ್ ಆಸೀಸ್ ವಿರುದ್ಧದ ನಾಲ್ಕನೇಯ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾ ಪರ ದಾಖಲೆ ನಿರ್ಮಿಸಿದ್ದರು. ರಿಷಬ್ ಪಂತ್ ಅಜೇಯ 159 ರನ್(189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದರು. ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ತನ್ನ 9ನೇ ಪಂದ್ಯದಲ್ಲಿ ರಿಷಬ್ ಪಂತ್ 85 ಎಸೆತದಲ್ಲಿ 50 ರನ್(4 ಬೌಂಡರಿ), 137 ಎಸೆತದಲ್ಲಿ 100 ರನ್(8 ಬೌಂಡರಿ), 185 ಎಸೆತದಲ್ಲಿ 150 ರನ್(14 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಯಾಚ್, ರನ್ ಆಯ್ತು – ಐಸಿಸಿ ರ‍್ಯಾಂಕಿಂಗ್‌ನಲ್ಲೂ ಧೋನಿಯನ್ನು ಹಿಂದಿಕ್ಕಿದ ಪಂತ್

    ಕ್ಯಾಚ್, ರನ್ ಆಯ್ತು – ಐಸಿಸಿ ರ‍್ಯಾಂಕಿಂಗ್‌ನಲ್ಲೂ ಧೋನಿಯನ್ನು ಹಿಂದಿಕ್ಕಿದ ಪಂತ್

    ದುಬೈ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ಅಧಿಕ ಕ್ಯಾಚ್, ರನ್‍ಗಳಿಸಿ ದಾಖಲೆ ನಿರ್ಮಿಸಿದ್ದರು. ಸದ್ಯ ಆಡಿರುವ 9 ಟೆಸ್ಟ್ ಪಂದ್ಯದಲ್ಲಿ ಜೀವನ ಶ್ರೇಷ್ಠ ಶ್ರೇಯಾಂಕವನ್ನು ಪಡೆಯುವ ಮೂಲಕ ಧೋನಿಯನ್ನು ಹಿಂದಿಕ್ಕಿದ್ದಾರೆ.

    ಐಸಿಸಿ ಪ್ರಕಟಿಸಿರುವ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ರಿಷಬ್ ಪಂತ್ 17ನೇ ಸ್ಥಾನ ಪಡೆದಿದ್ದು, ಈ ಹಿಂದೆ ಟೀಂ ಇಂಡಿಯಾ ಪರ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ 19ನೇ ಶ್ರೇಯಾಂಕ ಪಡೆದಿದ್ದರು. ಸದ್ಯ 21 ಸ್ಥಾನಗಳಲ್ಲಿ ಮುಂಬಡ್ತಿ ಪಡೆದಿರುವ ರಿಷಬ್ ಜನವರಿ 8 ರಂದು ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ 673 ಅಂಕಗಳನ್ನು ಪಡೆದಿದ್ದಾರೆ.

    ಕಳೆದ 7 ಇನ್ನಿಂಗ್ಸ್ ಗಳಲ್ಲಿ ರಿಷಬ್ ಪಂತ್ 58.33 ಸರಾಸರಿಯಲ್ಲಿ 350 ರನ್ ಸಿಡಿಸಿ ಭಾರತದ ಪರ ಎರಡನೇ ಟಾಪ್ ರನ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದರು. ಅಲ್ಲದೇ ಸದ್ಯ 2 ಶತಕಗಳು ಹಾಗೂ 2 ಬಾರಿ 90 ಪ್ಲಸ್ ರನ್ ಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅಜೇಯ 159 ರನ್ ಗಳಿಸಿದ್ದ ಪಂತ್ ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಗಳಿಸಿದ ಹೆಚ್ಚು ರನ್ ಎಂಬ ದಾಖಲೆ ಬರೆದಿದ್ದರು. ಈ ಹಿಂದೆ ಧೋನಿ ಪಾಕಿಸ್ತಾನದ ವಿರುದ್ಧ 148 ರನ್ ಸಿಡಿಸಿದ್ದರು.

    ಉಳಿದಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 922 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದು, ಚೇತೇಶ್ವರ ಪೂಜಾರ 881 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಐಸಿಸಿ ಟಾಪ್ 5 ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಕದಿನ ಸರಣಿಯಿಂದ ರಿಷಬ್ ಪಂತ್ ಡ್ರಾಪ್ – ಕಾರಣ ಬಿಚ್ಚಿಟ್ಟ ರವಿಶಾಸ್ತ್ರಿ

    ಏಕದಿನ ಸರಣಿಯಿಂದ ರಿಷಬ್ ಪಂತ್ ಡ್ರಾಪ್ – ಕಾರಣ ಬಿಚ್ಚಿಟ್ಟ ರವಿಶಾಸ್ತ್ರಿ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತಮ ಪ್ರದರ್ಶನ ತೋರಿದ್ದರೂ, ಮುಂಬರುವ ಏಕದಿನ ಕ್ರಿಕೆಟ್ ಟೂರ್ನಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಕುರಿತು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.

    ರಿಷಬ್ ಪಂತ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು, ಪಂದ್ಯದ ಅಂತ್ಯದವರೆಗೂ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಟೀಂ ಇಂಡಿಯಾ ‘ಎ’ ತಂಡದಲ್ಲಿ ಅವಕಾಶ ನೀಡಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಫಿನಿಶಿಂಗ್ ನೀಡುವ ಬಗ್ಗೆ ಕಲಿಯಲು ಸಲಹೆ ನೀಡಲಾಗಿದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

    ಕಳೆದ ಜೂನ್ ತಿಂಗಳಿನಿಂದ ಪಂತ್ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದು ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದಲೇ ಅವರಿಗೆ ಕೆಲ ಸಮಯ ವಿಶ್ರಾಂತಿಯನ್ನು ನೀಡಲಾಗಿದೆ. ಸೂಕ್ತ ಸಮಯದಲ್ಲಿ ಪಂತ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ರವಿಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.

    ಟೀಂ ಇಂಡಿಯಾ ಏಕದಿನ ಸರಣಿಗೆ ದಿನೇಶ್ ಕಾರ್ತಿಕ್ ಕಮ್‍ಬ್ಯಾಕ್ ಮಾಡಿದ್ದು, ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಉತ್ತಮ ಪ್ರದರ್ಶನ ನೀಡಿದ್ದೇ ದಿನೇಶ್ ಆಯ್ಕೆಗೆ ಕಾರಣ ಎನ್ನಲಾಗಿದೆ. ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದ ಪಂತ್ ಅಕ್ರಮಣಕಾರಿ ಬ್ಯಾಟಿಂಗ್ ನಡೆಸಿದ್ದರು. ಅಲ್ಲದೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಪಂತ್ ಪರ ಬ್ಯಾಟ್ ಬೀಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಭ್ರಮದಲ್ಲಿ ರಿಷಬ್ ಪಂತ್ Kip-Up – ವಿಡಿಯೋ ವೈರಲ್

    ಸಂಭ್ರಮದಲ್ಲಿ ರಿಷಬ್ ಪಂತ್ Kip-Up – ವಿಡಿಯೋ ವೈರಲ್

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿರುವ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಆನ್ ಫೀಲ್ಡ್ ನಲ್ಲೇ ಕಿಪ್ ಅಪ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    2ನೇ ಟೆಸ್ಟ್ ಪಂದ್ಯದ ವೇಳೆ ರಿಷಬ್ ಪಂತ್ ಡ್ರಿಂಕ್ಸ್ ಬ್ರೇಕ್ ವೇಳೆ ವಿಶ್ರಾಂತಿಗಾಗಿ ಮೈದಾನದಲ್ಲೇ ಕೆಲ ಕ್ಷಣಗಳ ಕಾಲ ಮಲಗಿದ್ದರು. ಈ ವೇಳೆ ಏಕಾಏಕಿ ಕಿಪ್ ಅಪ್ ಮಾಡಿ ಎದ್ದು ನಿಂತಿದ್ದಾರೆ. ಈ ರೀತಿ ಕಿಪ್ ಅಪ್ ಮಾಡಬೇಕಾದರೆ ಅತ್ಯುತ್ತಮವಾದ ದೈಹಿಕ ಸಾಮರ್ಥ್ಯ ಹೊಂದಿದರೆ ಮಾತ್ರ ಸಾಧ್ಯವಾಗುತ್ತದೆ.

    ಪಂದ್ಯದ ಬಳಿಕ ಮಾತನಾಡಿದ ಪಂತ್, ನಾನು 90 ರನ್ ಗಳಿಸಿದ ವೇಳೆ ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ 92, 92 ರನ್ ಗಳಿಗೆ ಔಟಾಗಿದ್ದೆ. ಆದರೆ ಇಂದಿನ ಶತಕ ನನಗೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ. ಶತಕ ಸಂಭ್ರಮದ ವೇಳೆ ಆ ಕ್ಷಣದಲ್ಲಿ ಏನು ತೋಚಿದೆಯೋ ಅದನ್ನು ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನು ಓದಿ: 15 ವರ್ಷಗಳ ಹಿಂದಿನ `ದಿ ವಾಲ್’ ದ್ರಾವಿಡ್ ದಾಖಲೆ ಮುರಿದ ಪೂಜಾರ

    21 ವರ್ಷದ ರಿಷಬ್ ಪಂತ್ ಅಜೇಯ 159 ರನ್ (189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದು, ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಲ್ಲದೇ ಆಸೀಸ್ ನೆಲದಲ್ಲಿ ಪ್ರವಾಸಿ ವಿಕೆಟ್ ಕೀಪರ್ ಸಿಡಿಸಿದ 2ನೇ ಅಧಿಕ ಮೊತ್ತವಾಗಿದೆ. 2012ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 169 ರನ್ ಸಿಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಕ್ಸರ್, ಕ್ಯಾಚ್ ಆಯ್ತು ಈಗ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ!

    ಸಿಕ್ಸರ್, ಕ್ಯಾಚ್ ಆಯ್ತು ಈಗ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ!

    ಸಿಡ್ನಿ: ವಿಕೆಟ್ ಕೀಪರ್ ಆಗಿರುವ 21 ವರ್ಷದ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾ ಪರ ದಾಖಲೆ ನಿರ್ಮಿಸಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ರಿಷಬ್ ಪಂತ್ ಅಜೇಯ 159 ರನ್(189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ತಾನು ಆಡುತ್ತಿರುವ 9ನೇ ಪಂದ್ಯದಲ್ಲಿ ರಿಷಬ್ ಪಂತ್ 85 ಎಸೆತದಲ್ಲಿ 50 ರನ್(4 ಬೌಂಡರಿ), 137 ಎಸೆತದಲ್ಲಿ 100 ರನ್(8 ಬೌಂಡರಿ), 185 ಎಸೆತದಲ್ಲಿ 150 ರನ್(14 ಬೌಂಡರಿ, 1 ಸಿಕ್ಸರ್) ಹೊಡೆದಿದ್ದಾರೆ.

    ಮೊದಲ ದಿನ 90 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 303 ರನ್ ಗಳಿಸಿದ್ದ ಭಾರತ ಇಂದು 77.2 ಓವರ್ ಗಳಲ್ಲಿ 319 ರನ್ ಕಲೆಹಾಕಿತು. ಅಂತಿಮವಾಗಿ 167.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 622 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

    418 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಆಗಮಿಸಿದ ರವೀಂದ್ರ ಜಡೇಜಾ ಮತ್ತು ರಿಷಬ್ ಪಂತ್ 7ನೇ ವಿಕೆಟ್‍ಗೆ 174 ರನ್ ಗಳ ಅಮೂಲ್ಯ ಜೊತೆಯಾಟವಾಡಿ ಭಾರತವನ್ನು 600 ರನ್ ಗಳ ಗಡಿ ದಾಟಿಸಿದರು. 81 ರನ್(114 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದ ಜಡೇಜಾ ಲಿಯಾನ್ ಗೆ ಬೌಲ್ಡ್ ಆಗುವುದರೊಂದಿಗೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಚೇತೇಶ್ವರ ಪೂಜಾರ 193 ರನ್(373 ಎಸೆತ, 22 ಬೌಂಡರಿ), ಹನುಮ ವಿಹಾರಿ 42 ರನ್(96 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಇದನ್ನು ಓದಿ : ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

    ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ 114 ರನ್ ಹೊಡೆದಿದ್ದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

    ನಾಟಿಂಗ್ ಹ್ಯಾಮ್ ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ರಿಷಭ್ ಪಂತ್, ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದ ಮೊದಲ ಭಾರತದ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಎದುರಿಸಿದ 2ನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಬ್ ಪಂತ್ ಪಡೆದಿದ್ದರು. ಈ ಸಾಧನೆಯ ಮೂಲಕ ವಿಶ್ವ ಕ್ರಿಕೆಟ್ ಆಟಗಾರರ ಈ ಪಟ್ಟಿಯಲ್ಲಿ ರಿಷಬ್ 12ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದನ್ನು ಓದಿ : ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ರಿಷಭ್ ಪಂತ್ ದಾಖಲೆ

    ಒಟ್ಟು 8 ಟೆಸ್ಟ್ ಪಂದ್ಯಗಳ 14 ಇನ್ನಿಂಗ್ಸ್ ಗಳಲ್ಲಿ ರಿಷಬ್ ಪಂತ್ 537 ರನ್ ಹೊಡೆದು, 40 ಕ್ಯಾಚ್, 2 ಸ್ಟಂಪ್ ಔಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಲೆಡ್ಜಿಂಗ್ ಮಾಡಿದ್ದು ನೀವೇ ಅಲ್ವಾ – ರಿಷಬ್ ಪಂತ್‍ರನ್ನ ಸ್ವಾಗತಿಸಿದ ಆಸೀಸ್ ಪ್ರಧಾನಿ

    ಸ್ಲೆಡ್ಜಿಂಗ್ ಮಾಡಿದ್ದು ನೀವೇ ಅಲ್ವಾ – ರಿಷಬ್ ಪಂತ್‍ರನ್ನ ಸ್ವಾಗತಿಸಿದ ಆಸೀಸ್ ಪ್ರಧಾನಿ

    ಸಿಡ್ನಿ: ಹೊಸ ವರ್ಷಾಚರಣೆ ಹಾಗೂ ಸಿಡ್ನಿ ಟೆಸ್ಟ್ ಅಂಗವಾಗಿ ಟೀಂ ಇಂಡಿಯಾ ಆಟಗಾರರಿಗೆ ಆಸ್ಟ್ರೇಲಿಯಾ ಪ್ರಧಾನಿಗಳ ಸರ್ಕಾರಿ ನಿವಾಸದಲ್ಲಿ ಭೇಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್‍ರನ್ನು ಅಚ್ಚರಿ ರೀತಿಯಲ್ಲಿ ಸ್ವಾಗತಿಸಿ ಮಾತನಾಡಿದ್ದಾರೆ.

    ಆಸ್ಟ್ರೇಲಿಯಾ ಆಟಗಾರರು ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಟೀಂ ಇಂಡಿಯಾದ ಆಟಗಾರನ್ನು ಆಸೀಸ್ ಪ್ರಧಾನಿಗಳಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಅಂತೆಯೇ ತಂಡದ ಮ್ಯಾನೇಜರ್ ಸುನಿಲ್ ಸುಭ್ರಮಣ್ಯಂ ಅವರು ರಿಷಬ್ ಪಂತ್ ಅವರನ್ನು ಪ್ರಧಾನಿಗೆ ಪರಿಚಯಿಸಿದ್ದರು.

    https://twitter.com/nibraz88cricket/status/1080404697461084161

    ರಿಷಬ್ ಪಂತ್ ಹೆಸರು ಕೇಳುತ್ತಿದಂತೆ ಅಚ್ಚರಿಗೊಂಡವರಂತೆ ಕಂಡ ಪ್ರಧಾನಿಗಳು, ನೀವೇ ಅಲ್ವಾ ಸ್ಲೆಡ್ಜಿಂಗ್ ಮಾಡಿದ್ದು ಎಂದು ಪ್ರಶ್ನಿಸಿದರು. ಈ ವೇಳೆ ರಿಷಬ್ ಪ್ರಧಾನಿಗಳತ್ತ ನಗೆ ಬೀರಿದ್ದರು. ಬಳಿಕ ಮಾತನಾಡಿದ ಪ್ರಧಾನಿಗಳು, ರಿಷಬ್ ಅವರಿಗೆ ಸ್ವಾಗತ ಕೋರಿ ನಿಮ್ಮಂತ ಸ್ಪರ್ಧಾತ್ಮಕ ಆಟವನ್ನು ಇಷ್ಟಪಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೈನೆ ಹಾಗೂ ರಿಷಬ್ ಪಂತ್ ಪರಸ್ಪರ ಸ್ಲೆಡ್ಜಿಂಜ್ ನಡೆಸಿ ಕಾಲೆಳೆದುಕೊಂಡಿದ್ದರು. ಮೊದಲು ಆಸೀಸ್ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಧೋನಿ ಕಮ್ ಬ್ಯಾಕ್ ಮಾಡಿದ್ದನ್ನೇ ಆಸ್ತ್ರವಾಗಿಕೊಂಡಿದ್ದ ಪೈನೆ, ಬಿಗ್ ಬ್ಯಾಶ್ ಟೂರ್ನಿ ಆಡುವಂತೆ ಆಹ್ವಾನ ನೀಡಿದ್ದರು. ಅಲ್ಲದೇ ತಾನು ಪತ್ನಿಯೊಂದಿಗೆ ಸಿನಿಮಾ ಹೋದ ವೇಳೆ ಮಕ್ಕಳನ್ನು ನೋಡಿಕೊಂಡಿರು ಎಂದರು ಕಾಲೆಳೆದಿದ್ದರು. ಬಳಿಕ ಇದಕ್ಕೆ ಟಾಂಗ್ ನೀಡಿದ್ದ ರಿಷಬ್ ಪಂತ್, ಪೈನೆರನ್ನು ತಾತ್ಕಾಲಿಕ ನಾಯಕ ಎಂದು ಕರೆದು ತಿರುಗೇಟು ನೀಡಿದ್ದರು.

    ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಐತಿಹಾಸ ದಾಖಲೆ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv