Tag: ರಿಷಬ್ ಪಂತ್

  • ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

    ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

    ಲಂಡನ್: ಟೀಂ ಇಂಡಿಯಾದ ಆಟಗಾರರಾದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಮೇಲೆ ನಾಯಕ ವಿರಾಟ್ ಕೊಹ್ಲಿ ಕೋಪಗೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತ್ಯದಲ್ಲಿ ಲಾರ್ಡ್ಸ್ ಅಂಗಳ ವಿಚಿತ್ರ ಘಟನೆಗೆ ಸಾಕ್ಷಿಯಾಯ್ತು. ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಾಲ್ಕನಿಯಲ್ಲಿ ನಿಂತು ಮೈದಾನದಲ್ಲಿದ್ದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾಗೆ ಕೋಪದಿಂದ ಸಂದೇಶ ನೀಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

    ಇಬ್ಬರ ಮೇಲೆ ಕೋಪಗೊಂಡಿದ್ಯಾಕೆ?:
    ಪಂದ್ಯದ ಅಂತಿಮದಲ್ಲಿ ಬೆಳಕಿನ ಪ್ರಖರತೆ ಕಡಿಮೆಯಾದ ಪರಿಣಾಮ ಚೆಂಡು ಕಾಣಿಸುತ್ತಿರಲಿಲ್ಲ. ಆದ್ರೂ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಅಂಪೈರ್ ಗೆ ದೂರು ನೀಡದೇ ಆಟ ಮುಂದುವರಿಸಿದ್ದರು. ಇತ್ತ ಇದೇ ವೇಳೆ ಬೌಲರ್ ಹೊಸ ಬಾಲ್ ಕೇಳಿ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೋಪಗೊಂಡು ಇಬ್ಬರು ಆಟಗಾರರಿಗೆ ಇಷ್ಟು ಮಂದ ಬೆಳಕಿನಲ್ಲಿಯೇ ಹೇಗೆ ಅಡುತ್ತೀದೀರಾ? ಎಂದು ಸನ್ನೆ ಮೂಲಕ ಸಂದೇಶ ರವಾನಿಸಿದರು. ಇದಾದ ಬಳಿಕ ನಾಲ್ಕನೇ ದಿನದ ಆಟ ಅಂತ್ಯವಾಯ್ತು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

    https://twitter.com/vijayrulesonly/status/1426963080248840192

    ಬಾಲ್ ಟ್ಯಾಂಪರಿಂಗ್ ಆರೋಪ:
    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

  • ಪಂತ್ ಬಳಿಕ ದಯಾನಂದ್ ಗರಾನಿಗೆ ಕೊರೊನಾ ದೃಢ

    ಪಂತ್ ಬಳಿಕ ದಯಾನಂದ್ ಗರಾನಿಗೆ ಕೊರೊನಾ ದೃಢ

    – ಮೂವರು ಆಟಗಾರರು ಐಸೋಲೇಷನ್

    ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಕೀಪರ್ ರಿಷಭ್ ಪಂತ್ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ, ತಂಡದ ಥ್ರೋಡೌನ್ ತಜ್ಞ ದಯಾನಂದ್ ಗರಾನಿ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.

    ಇಂದು ಪಂತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಬಿಸಿಸಿಐ ದೃಢಪಡಿಸಿತ್ತು. ಆ ಬಳಿಕ ಇದೀಗ ಗರಾನಿ ಅವರಿಗೆ ಸೋಂಕು ತಗುಲಿರುವುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವೃದ್ಧಿಮಾನ್ ಸಹಾ ಸಹಿತ ಇನ್ನಿಬ್ಬರೂ ಆಟಗಾರು ಐಸೋಲೇಷನ್‍ಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ರಿಷಭ್ ಪಂತ್‍ಗೆ ಕೊರೊನಾ ಪಾಸಿಟಿವ್

    ಪಂತ್ ಕೊರೊನಾ ಸೋಂಕು ದೃಢಪಟ್ಟ ಬಳಿಕ ಗರಾನಿ ಅವರಿಗೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಲಾಯಿತು ಈ ವೇಳೆ ಇವರಿಗೆ ಪಾಸಿಟಿವ್ ಬಂದಿದೆ. ಆ ಬಳಿಕ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ನೆಟ್ ಬೌಲರ್ ಅಭಿಮನ್ಯು ಈಶ್ವರನ್ ಮತ್ತು ವೃದ್ಧಿಮಾನ್ ಸಹಾ ಅವರನ್ನು 10 ದಿನಗಳ ಕಾಲ ಐಸೋಲೇಷನ್‍ಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್ಟರ್‍ ನಲ್ಲಿ ಟ್ವೀಟ್ ಮಾಡಿದೆ.

    ಭಾರತ ತಂಡದ ಇತರ ಸದಸ್ಯರು ಗುರುವಾರ ಡರ್ಹಾಮ್‍ಗೆ ತೆರಳಿ ಬಳಿಕ ಅಭ್ಯಾಸ ಪಂದ್ಯವಾಡಲಿದ್ದಾರೆ. ಪಂತ್ ಮತ್ತು ಸಹಾ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ.

  • ಯಾವತ್ತು ಬಿಟ್ಟುಕೊಡಬೇಡಿ ಎಂದು ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಪಂತ್

    ಯಾವತ್ತು ಬಿಟ್ಟುಕೊಡಬೇಡಿ ಎಂದು ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಪಂತ್

    ಮುಂಬೈ: ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ದೇಶದ ಜನ ಈಗಾಗಲೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ನಾವು ಯಾವತ್ತು ಬಿಟ್ಟುಕೊಡುವುದುಬೇಡ ಎನ್ನುವ ಮೂಲಕ ಸೋಂಕಿತರಿಗೆ ಮತ್ತು ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ ಇನ್ನಷ್ಟು ಧೈರ್ಯ ತುಂಬಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪಂತ್, ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಕೊರೊನಾ ಸೋಂಕಿನ ವಿರುದ್ಧ ಜನ ಹೋರಾಡುತ್ತಿದ್ದಾರೆ. ಎಲ್ಲರೂ ಒಂದಾಗಿ ಹೋರಾಡೋಣ ಯಾವತ್ತು ಬಿಟ್ಟುಕೊಡುವುದು ಬೇಡ. ಎಲ್ಲರೂ ಒಂದಾಗೋಣ ಈ ಕಷ್ಟದ ಸಮಯವನ್ನು ಕಳೆಯೋಣ. ಜಾಗರೂಕತೆಯಿಂದ ಇರೋಣ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Rishabh Pant (@rishabpant)

    ಪಂತ್ ಈಗಾಗಲೇ ಕೊರೊನಾ ಲಸಿಕೆಯನ್ನು ಕೂಡ ಪಡೆದುಕೊಂಡಿದ್ದು, ಲಸಿಕೆ ಪಡೆದುಕೊಂಡ ವೇಳೆ ಎಲ್ಲರೂ ಆದಷ್ಟೂ ಬೇಗ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.

    ಪಂತ್ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗಾಗಿ ಆಯ್ಕೆಯಾಗಿರುವ 20 ಜನರ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಈಗಾಗಲೇ ತಯಾರಿಯನ್ನು ಆರಂಭಿಸಿದ್ದಾರೆ. ಟೆಸ್ಟ್ ಚಾಂಪಿಯನ್‍ಶಿಪ್ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಇಂಗ್ಲೆಂಡ್‍ನಲ್ಲಿ ಜೂನ್ 18ರಿಂದ ಆರಂಭಗೊಳ್ಳಲಿದೆ.

  • ರಿಷಭ್‍ಗೆ ಮೈದಾನದಲ್ಲೇ ಸಮಾಧಾನ ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

    ರಿಷಭ್‍ಗೆ ಮೈದಾನದಲ್ಲೇ ಸಮಾಧಾನ ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

    ಅಹಮದಾಬಾದ್: ಡೆಲ್ಲಿ ತಂಡದ ನಾಯಕ ರಿಷಭ್‍ ಪಂತ್ ಮೈದಾನದಲ್ಲೇ ಹತಾಶೆಯಾಗಿದ್ದನ್ನು ನೋಡಿದ ಕೊಹ್ಲಿ ಅವರನ್ನು ಸಮಾಧಾನ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.

    ಬೆಂಗಳೂರು ಹಾಗೂ ಡೆಲ್ಲಿ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯ ರೋಚಕತೆಯಿಂದ ಸಾಗಿ ಅಂತಿಮವಾಗಿ ಬೆಂಗಳೂರು ತಂಡ 1 ರನ್‍ನಿಂದ ಜಯ ಗಳಿಸಿತ್ತು. ಇತ್ತ ಗೆಲುವಿಗಾಗಿ ಅಂತಿಮ ಕ್ಷಣದ ವರೆಗೆ ಹೋರಾಡಿ ಗೆಲುವು ದಕ್ಕಿಸಿಕೊಳ್ಳಲಾಗದೆ ಡೆಲ್ಲಿ ತಂಡದ ನಾಯಕ ರಿಷಭ್‍ ಪಂತ್ ಮೈದಾನದಲ್ಲೇ ಹತಾಶೆಗೊಳಗಾದರು. ಇವರನ್ನು ಕಂಡ ಎದುರಾಳಿ ತಂಡದ ನಾಯಕ ವಿರಾಟ್ ಕೊಹ್ಲಿ, ಪಂತ್‍ರನ್ನು ಸಮಾಧಾನ ಮಾಡಿದ್ದಾರೆ.

    ಐಪಿಎಲ್‍ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ತಂಡ ಸೆಣಸಾಡಿದೆ. ಐಪಿಎಲ್‍ನ ಮೊದಲ ಸುತ್ತಿನ ಲೀಗ್ ಪಂದ್ಯದ ಬಳಿಕ ಇದೀಗ ಎರಡನೇ ಸುತ್ತಿನ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದೆ. ಕೊರೊನಾ ಮಧ್ಯೆ ನಡೆಯುತ್ತಿರುವ ಪಂದ್ಯಗಳು ಬಹಳ ರೋಚಕತೆಯಿಂದ ಸಾಗುತ್ತಿದ್ದು ಹಲವು ಪಂದ್ಯಗಳು ಕೊನೆಯ ಬಾಲ್ ವರೆಗೂ ಪಂದ್ಯದ ರೋಚಕತೆಯನ್ನು ಕಾಪಾಡಿಕೊಳ್ಳುತ್ತಿದೆ.

    ಡೆಲ್ಲಿ ತಂಡದ ಖಾಯಂ ನಾಯಕ ಶ್ರೇಯಸ್ಸ್ ಅಯ್ಯರ್ ಗಾಯದಿಂದಾಗಿ ಈ ಬಾರಿ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಪಂತ್. ತಂಡದ ಗೆಲುವಿಗಾಗಿ ಬಹಳ ಹೋರಾಟ ನಡೆಸುತ್ತಿದ್ದಾರೆ. ಡೆಲ್ಲಿ ಮತ್ತು ಬೆಂಗಳೂರು ನಡುವಿನ ಪಂದ್ಯಾಟದಲ್ಲಿ ಡೆಲ್ಲಿ ತಂಡ ಬಹಳ ಪೈಪೋಟಿ ನೀಡಿ ಕೊನೆಯಲ್ಲಿ ಒಂದು ರನ್‍ನಿಂದ ವಿರೋಚಿತ ಸೋಲು ಕಾಣಬೇಕಾಯಿತು.

    ಕೊನೆಯ ಬಾಲ್‍ನಲ್ಲಿ ಡೆಲ್ಲಿ ತಂಡಕ್ಕೆ 6 ರನ್‍ಗಳ ಅವಶ್ಯಕತೆ ಇತ್ತು. ಬ್ಯಾಟಿಂಗ್‍ನಲ್ಲಿ ಪಂತ್ ಮತ್ತು ಶಿಮ್ರಾನ್ ಹೆಟ್ಮಿಯರ್ ಇದ್ದರು. ಪಂತ್ ಸ್ಟೈಕ್‍ನಲ್ಲಿದ್ದರೂ ಕೂಡ ಅವರಿಂದ ಕೊನೆಯ ಬಾಲ್‍ನಲ್ಲಿ ಬೌಂಡರಿ ಹೊಡೆಯಲು ಮಾತ್ರ ಸಾಧ್ಯವಾಯಿತು. ಈ ಮೂಲಕ 1 ರನ್‍ಗಳ ಸೋಲು ಕಂಡಿತು.

    ಇದರಿಂದ ತುಂಬಾ ಬೇಸರಗೊಳಗಾದ ಪಂತ್‍ರನ್ನು ಕಂಡ ಕೊಹ್ಲಿ ಕೂಡಲೇ ಅವರ ಬಳಿ ಬಂದು ಅವರ ಬ್ಯಾಟಿಂಗ್ ಬಗ್ಗೆ ಹೊಗಳಿ ಅವರನ್ನು ಸಮಾಧಾನ ಪಡಿಸಿದರು. ಅದೇ ರೀತಿ ಇನ್ನೊಂದು ಬದಿಯಲ್ಲಿ ಕುಸಿದು ಕುಳಿತಿದ್ದ ಹೆಟ್ಮಿಯರ್ ಅವರ ಬಳಿ ಬಂದು ಅವರ ತಲೆ ಸವರಿ ಕೊಹ್ಲಿ ಸಮಾಧಾನ ಪಡಿಸಲು ಮುಂದಾದರು ಇದನ್ನು ಕಂಡ ಕ್ರೀಡಾಭಿಮಾನಿಗಳು ಕೊಹ್ಲಿಯ ಕ್ರೀಡಾ ಸ್ಪೂರ್ತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಪಂದ್ಯದ ಬಳಿಕ ಕೊಹ್ಲಿ ಹಾಗೂ ಪಂತ್ ಪಂದ್ಯದ ಕುರಿತು ಚರ್ಚೆನಡೆಸುತ್ತಿದ್ದರು. ಈ ವೀಡಿಯೋವನ್ನು ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿ ಹಾಗೂ ಬೆಂಗಳೂರು ಫ್ರಾಂಚೈಸಿಗಳು ಹಂಚಿಕೊಂಡಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಪಂದ್ಯದಲ್ಲಿ ಬೆಂಗಳೂರು ಗೆದ್ದಿರಬಹುದು. ಆದರೆ ಅಂತಿಮವಾಗಿ ಈ ವೀಡಿಯೋ ನೋಡಿದಾಗ ಇಲ್ಲಿ ಕ್ರಿಕೆಟ್ ಗೆದ್ದಿದೆ ಎಂದು ಅನಿಸುತ್ತಿದೆ ಎಂಬುದಾಗಿ ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.

    ಐಪಿಎಲ್‍ನಲ್ಲಿ ಬೇರೆ ಬೇರೆ ತಂಡದಲ್ಲಿ ಆಟಗಾರ ಕಾಣಿಸಿಕೊಂಡರೂ ಕೂಡ ಸೋಲು ಗೆಲುವು ಸಿಕ್ಕೊಡನೆ ಎದುರಾಳಿ ತಂಡದೊಂದಿಗೆ ಉತ್ತಮವಾಗಿ ಬೆರೆಯುವ ಮನೋಭಾವವನ್ನು ಕಂಡು ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.

  • ನಿಮ್ಮಿಂದ 1 ನಿಮಿಷ ತಡವಾಗಿದೆ, ನನಗೆ ದಂಡ ಹಾಕುವಂತಿಲ್ಲ – ಅಂಪೈರ್‍ ಗೆ ಪಂತ್ ಕಮೆಂಟ್

    ನಿಮ್ಮಿಂದ 1 ನಿಮಿಷ ತಡವಾಗಿದೆ, ನನಗೆ ದಂಡ ಹಾಕುವಂತಿಲ್ಲ – ಅಂಪೈರ್‍ ಗೆ ಪಂತ್ ಕಮೆಂಟ್

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ನಾಯಕ ರಿಷಬ್ ಪಂತ್ ಐಪಿಎಲ್‍ನಲ್ಲಿ ಕನಿಷ್ಠ-ಓವರ್ ರೇಟ್ ದಂಡದ ಬಗ್ಗೆ ಭಾರೀ ತಲೆ ಕೆಡಿಸಿಕೊಂಡಂತೆ ಕಂಡು ಬಂದಿದೆ. ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಪಂತ್, ಅಂಪೈರ್ ಒಂದು ನಿಮಿಷ ತಡೆದು ಬೌಲ್ ಮಾಡಿಸಿದ್ದಕ್ಕೆ ಈ ಒಂದು ನಿಮಿಷವನ್ನು ವ್ಯರ್ಥಮಾಡಿದ್ದು ನೀವು ನಾನಲ್ಲ ಎಂದು ಅಂಪೈರ್‍ ಗೆ ಹೇಳಿದ್ದಾರೆ

    14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮೊದಲು ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಭುಜದ ನೋವಿನಿಂದ ಐಪಿಎಲ್‍ನಿಂದ ದೂರ ಸರಿದಿದ್ದರು. ಅವರ ಬದಲಾಗಿ ಪಂತ್ ಅವರಿಗೆ ಡೆಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿತ್ತು. ನಾಯಕತ್ವದ ಹೊಣೆ ಹೊತ್ತಿರುವ ಪಂತ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು, ಮೊದಲ ಪಂದ್ಯವನ್ನು ಚೆನ್ನೈ ವಿರುದ್ಧ ಗೆದ್ದು ಬೀಗಿತ್ತು. ಅದರೆ ಎರಡನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಮುಗ್ಗರಿಸಿದೆ. ಆದರೂ ಕೂಡ ಪಂತ್ ನಾಯಕತ್ವಕ್ಕೆ ಮಾತ್ರ ಮೆಚ್ಚುಗೆ ವ್ಯಕ್ತವಾಗಿದೆ.

    ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆರ್ ಅಶ್ವಿನ್ ಬೌಲಿಂಗ್ ಬಂದಾಗ ಅಂಪೈರ್ 30 ಅಡಿ ದೂರದಲ್ಲಿ ಫೀಲ್ಡರ್‍ ಗಳು ನಿಂತಿದ್ದಾರ ಎಂದು ನೋಡುವುದಕ್ಕಾಗಿ ಅಶ್ವಿನ್ ಅವರನ್ನು ತಡೆದು ಪರಿಶೀಲನೆಗೆ ಇಳಿದಿದ್ದಾರೆ. ಇದನ್ನು ಗಮನಿಸಿದ ಪಂತ್ ಈ ಒಂದು ನಿಮಿಷವನ್ನು ನೀವು ವ್ಯರ್ಥ ಮಾಡಿರುವುದು. ಪಂದ್ಯ ಲೇಟ್ ಆಗಿದೆ ಎಂದು ನನಗೆ ದಂಡಹಾಕುವಂತಿಲ್ಲ ಎಂದು ಅಂಪೈರ್‍ ಗೆ ಸೂಚ್ಯವಾಗಿ ಹೇಳಿದ್ದಾರೆ. ಪಂತ್ ಮಾತು ಇದು ಸ್ಟಂಪ್ ಮೈಕ್‍ನಲ್ಲಿ ರೆಕಾರ್ಡ್ ಆಗಿದೆ. ಇದನ್ನು ಗಮನಿಸಿರುವ ಪಂತ್ ಅಭಿಮಾನಿಗಳು ಅವರ ಕ್ಯಾಪ್ಟನ್ಸಿಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಪಂತ್ ಈ ರೀತಿ ಹೇಳಲು ಕಾರಣ ಐಪಿಎಲ್‍ನ ನಿಯಮ. 14ನೇ ಆವೃತ್ತಿಯ ಐಪಿಎಲ್‍ನ ನಿಯಮದ ಪ್ರಕಾರ ಪಂದ್ಯ ಸರಿಯಾದ ಸಮಯಕ್ಕೆ ಮುಗಿಯಬೇಕು. ಇಲ್ಲದೆ ಹೋದರೆ ಕನಿಷ್ಠ-ಓವರ್ ರೇಟ್ ಅಪರಾಧದಗಳಿಗೆ ಸಂಬಂಧಿಸಿದಂತೆ, ಐಪಿಎಲ್ ನೀತಿ ಸಂಹಿತೆ ಅಡಿಯಲ್ಲಿ ತಂಡದ ನಾಯಕನಿಗೆ ದಂಡ ಹಾಕಲಾಗುತ್ತದೆ ಇದನ್ನು ತಪ್ಪಿಸುವ ಸಲುವಾಗಿ ಪಂತ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಚೆನ್ನೈ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಕನಿಷ್ಠ-ಓವರ್ ರೇಟ್ ಕಾಯ್ದುಕೊಳ್ಳಲು ವಿಫಲವಾಗಿದ್ದ ಚೆನ್ನೈ ತಂಡದ ನಾಯಕ ಎಂ.ಎಸ್ ಧೋನಿ ಅವರಿಗೆ 12 ಲಕ್ಷ ರೂಪಾಯಿ ದಂಡ ಬಿದ್ದಿತ್ತು. ಇದನ್ನು ಗಮನಿಸಿರುವ ಪಂತ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡದ ಆಟಗಾರರು ಬೇಗನೆ ಓವರ್ ಎಸೆದು ಮುಗಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.

  • ರಿಷಬ್ ಪಂತ್‍ಗೆ ಒಲಿದ ಡೆಲ್ಲಿ ಕ್ಯಾಪ್ಟನ್ ಪಟ್ಟ

    ರಿಷಬ್ ಪಂತ್‍ಗೆ ಒಲಿದ ಡೆಲ್ಲಿ ಕ್ಯಾಪ್ಟನ್ ಪಟ್ಟ

    ನವದೆಹಲಿ: 14ನೇ ಆವೃತ್ತಿಯ ಐಪಿಎಲ್‍ಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿದೆ. ಈ ನಡುವೆ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುವ ಭಾಗ್ಯ ಭಾರತ ತಂಡದ ಯುವ ವಿಕೆಟ್‍ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಅವರಿಗೆ ಒಲಿದು ಬಂದಿದೆ.

    ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಭಾರತ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಅವರು ಎಡಭುಜದ ನೋವಿಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು ಇದಾದ ಬಳಿಕ ಪರೀಕ್ಷಿಸಿದ ವೈದ್ಯರು ಅಯ್ಯರ್ ಅವರಿಗೆ 2 ತಿಂಗಳ ವಿಶ್ರಾಂತಿ ಬೇಕು ಎಂದಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್‍ನಿಂದ ಅಯ್ಯರ್ ಹೊರಗುಳಿದಿದ್ದಾರೆ. ಹಾಗಾಗಿ ಡೆಲ್ಲಿ ಫ್ರಾಂಚೈಸ್ 2021ರ ಐಪಿಎಲ್‍ನಲ್ಲಿ ಡೆಲ್ಲಿತಂಡವನ್ನು ರಿಷಬ್ ಪಂತ್ ಮುನ್ನಡೆಸಲಿದ್ದಾರೆ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.

    ಡೆಲ್ಲಿ ತಂಡದ ನಾಯಕನಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂತ್ ನಾನು ಡೆಲ್ಲಿಯಲ್ಲೇ ಹುಟ್ಟಿಬೆಳೆದವನು. 6 ವರ್ಷಗಳ ಹಿಂದೆ ಐಪಿಎಲ್ ಪಯಣವನ್ನು ಆರಂಭಿಸಿದೆ. ಆದರೆ ಆವತ್ತಿನಿಂದ ನನಗೆ ಡೆಲ್ಲಿ ತಂಡವನ್ನು ಮುನ್ನಡೆಸಬೇಕೆಂಬ ಕನಸಿತ್ತು. ಆ ಕನಸು ಇದೀಗ ನನಸಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

    23 ವರ್ಷದ ಪಂತ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಬ್ಯಾಟಿಂಗ್ ನಿರ್ವಹಿಸಿ ಭಾರತ ತಂಡಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು ತಂದುಕೊಟ್ಟಿದ್ದಾರೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಮತ್ತು ಏಕದಿನ ಸರಣಿಯಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

    ಡೆಲ್ಲಿ ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೇ ಇದ್ದು ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಟೀವ್ ಸ್ಮಿತ್, ಅಜಿಂಕ್ಯ ರಹಾನೆ ಮತ್ತು ಆರ್. ಅಶ್ವಿನ್ ನಡುವೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಪಂತ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದೆ.

    ಪಂತ್ ಈ ಮೊದಲು ರಣಜಿ ಪಂದ್ಯಗಳಲ್ಲಿ ಮತ್ತು ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವವಿದೆ. ಪಂತ್ ಹಾಗೂ ಇತರ ಪ್ರಮುಖ ಆಟಗಾರರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದು ತರಬೇತಿ ಆರಂಭಿಸಿದ್ದಾರೆ.

    ಕಳೆದ ವರ್ಷ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡ ಅಮೋಘ ನಿರ್ವಹಣೆ ತೋರಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‍ನಲ್ಲಿ ಮುಂಬೈ ವಿರುದ್ಧ ಮುಗ್ಗರಿಸಿತ್ತು. ಆದರೆ ಈ ಬಾರಿ ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಕಣಕ್ಕಿಳಿಯಲಿದ್ದು, ತಂಡ ಯಾವ ರೀತಿಯ ನಿರ್ವಹಣೆ ತೋರಲಿದೆ? ಪಂತ್ ಯಾವರೀತಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

    ಡೆಲ್ಲಿ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 10 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. 14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳಲ್ಲಿ ನಡೆಯಲಿದೆ.

  • ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್  ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಹೊಡೆದ ರಿವರ್ಸ್ ಸ್ಕೂಪ್ ಕಂಡು ಮಾಜಿ ಆಟಗಾರರು ಸಹಿತ ಕ್ರೀಡಾಭಿಮಾನಿಗಳು ದಂಗಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿದ್ದ ಭಾರತ ಅಹಮದಾಬಾದ್‍ನ ಮೋಟೆರಾ ಕ್ರೀಡಾಂಗಣದಲ್ಲಿ ಇದೇ ಹುರುಪಿನಲ್ಲಿ ಟಿ-20 ಪಂದ್ಯಕ್ಕೆ ಸಜ್ಜಾಗಿತ್ತು. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ ಇಳಿಯುತ್ತಿದ್ದಂತೆ ಪವರ್ ಪ್ಲೇ ಮುಗಿಯುವ ಮುನ್ನವೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು. ಈ ವೇಳೆ ಬ್ಯಾಟಿಂಗ್ ಇಳಿದ ಪಂತ್, ಜೊಫ್ರಾ ಆರ್ಚರ್ ಎಸೆದ 3ನೇ ಓವರ್‍ ನ ನಾಲ್ಕನೇ ಎಸೆತವನ್ನು ಆಕರ್ಷಕ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್‌ಗಟ್ಟಿದರು. ಇದನ್ನು ಕಂಡು ಮಾಜಿ ಆಟಗಾರರಾದ ವಿ.ವಿ.ಎಸ್ ಲಕ್ಷಣ್, ಯುವರಾಜ್ ಸಿಂಗ್, ಇಂಗ್ಲೆಂಡ್‍ನ ಕೆವಿನ್ ಪೀರ್ಟಸನ್ ಸಹಿತ ಹಲವು ಕ್ರಿಕೆಟಿಗರು ದಂಗಾಗಿದ್ದಾರೆ.

    ಪಂತ್ ಈ ಮೊದಲು ನಡೆದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇದೇ ರೀತಿಯ ಸಿಕ್ಸ್ ಅನ್ನು ಇಂಗ್ಲೆಂಡ್‍ನ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಬಾರಿಸಿ ಮಿಂಚಿದ್ದರು.

    ಪಂತ್ 23 ಎಸೆತಗಳಲ್ಲಿ 21ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿ ಬೆನ್‍ಸ್ಟೋಕ್ ಗೆ ವಿಕೆಟ್ ಒಪ್ಪಿಸಿದರು. ಭಾರತ ಅಂತಿಮವಾಗಿ 20 ಓವರ್‍ ಗಳಲ್ಲಿ 124 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್‍ಗೆ 125 ರನ್‍ಗಳ ಗುರಿ ನೀಡಿದೆ.

  • ಟೀಂ ಇಂಡಿಯಾಗೆ ಯಾರೂ ನೀಡದ ಜೀವಮಾನದ ಶ್ರೇಷ್ಠ ಕೊಡುಗೆ – ಪಂತ್‍ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ

    ಟೀಂ ಇಂಡಿಯಾಗೆ ಯಾರೂ ನೀಡದ ಜೀವಮಾನದ ಶ್ರೇಷ್ಠ ಕೊಡುಗೆ – ಪಂತ್‍ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಭಾರತ ತಂಡಕ್ಕೆ ಯಾರೂ ಕೂಡ ನೀಡದೇ ಇರುವಂತಹ ಜೀವಮಾನದ ಅತ್ಯಂತ ಶ್ರೇಷ್ಠವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ.

    ರಿಷಬ್ ಪಂತ್ ಕಳಪೆ ಫಾರ್ಮ್‍ನಲ್ಲಿ ಭಾರತ ತಂಡದಲ್ಲಿದ್ದಾಗ ಎಲ್ಲರೂ ಕೂಡ ದೂರುತಿದ್ದರು. ಆ ಬಳಿಕ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡು ಕಳೆದ ಎರಡು ಮೂರು ತಿಂಗಳಲ್ಲಿ ಭಾರತ ತಂಡದ ಆಧಾರ ಸ್ತಂಭವಾಗಿ ಅತ್ಯುತ್ತಮ ನಿರ್ವಾಹಣೆಯ ಮೂಲಕ ತಂಡಕ್ಕೆ ಯಾರೂ ನೀಡದೇ ಇರುವಂತಹ ಕೊಡುಗೆ ಕೊಟ್ಟಿದ್ದಾರೆ ಎಂದು ಶಾಸ್ತ್ರಿ ಗುಣಗಾನ ಮಾಡಿದ್ದಾರೆ.

    ಪಂತ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಿಡ್ನಿ ಮತ್ತು ಬ್ರಿಸ್ಬೇನ್ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ಆಧಾರವಾಗಿ 2-1 ರಿಂದ ಸರಣಿ ಗೆಲ್ಲಿಸಿಕೊಟ್ಟರೆ, ನಂತರ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮ್ಯಾನ್ ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ ಕೂಡ ಪಂತ್ ದಿಟ್ಟ ಬ್ಯಾಟಿಂಗ್ ಮುಂದುವರಿಸಿ ಅಮೋಘ ಶತಕ ಸಿಡಿಸಿ ಭಾರತಕ್ಕೆ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳುವಂತೆ ಮಾಡಿದ್ದರು.

    ಪಂತ್ ಅವರ ಬ್ಯಾಟಿಂಗ್ ಸಾಹಸದ ಬಗ್ಗೆ ಕೊಂಡಾಡಿರುವ ಶಾಸ್ತ್ರಿ, ಪಂತ್ ಅವರ ಬ್ಯಾಟಿಂಗ್ ಪರಾಕ್ರಮ ನೋಡುತ್ತಿದ್ದಾಗ ನನಗೆ ನನ್ನ ಹಿಂದಿನ ದಿನಗಳ ನೆನಪಾಗುತ್ತದೆ. ನಮ್ಮ ಜೀವನದ 21, 22 ಮತ್ತು 23ನೇ ವರ್ಷದಲ್ಲಿ ನಾವು ಕಾಣುವ ಯಶಸ್ಸು ನಮ್ಮ ಮುಂದಿನ ಜೀವನವನ್ನು ರೂಪಿಸುತ್ತದೆ. ಪಂತ್ ಕಳೆದ ಬಾರಿಯ ಐಪಿಎಲ್ ವೇಳೆ ತಮ್ಮ ಬ್ಯಾಟಿಂಗ್ ಲಯ ಕಳೆದುಕೊಂಡು ಎಲ್ಲರಿಂದ ಟೀಕೆಗೆ ಒಳಗಾಗಿದ್ದರು. ಆದರೆ ಭಾರತ ತಂಡಕ್ಕೆ ಮರಳಿದ ನಂತರ ತಮ್ಮ ದೇಹದ ತೂಕ ಇಳಿಸಿಕೊಂಡು ಶ್ರಮಪಟ್ಟು ತಮ್ಮ ನಿಜವಾದ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರ್ಪಡಿಸಿ, ಉತ್ತಮ ಫಾರ್ಮ್‍ಗೆ ಮರಳಿದ್ದಾರೆ. ಇದೀಗ ಅವರು ಯಾವ ರೀತಿ ಭಾರತ ತಂಡಕ್ಕೆ ಸಹಕಾರಿಯಾಗುತ್ತಿದ್ದಾರೆ ಎಂಬುದನ್ನು ವಿಶ್ವವೇ ಗಮನಿಸುತ್ತಿದೆ ಎಂದರು.

  • ಸ್ಪೈಡಿ ಜೊತೆ ಮೈದಾನಕ್ಕಿಳಿದ ರಿಷಬ್ ಪಂತ್

    ಸ್ಪೈಡಿ ಜೊತೆ ಮೈದಾನಕ್ಕಿಳಿದ ರಿಷಬ್ ಪಂತ್

    ಗಾಂಧಿನಗರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಗಾಗಿ  ಭಾರತ ತಂಡ ಅಹಮದಾಬಾದ್‍ನ ಮೊಟೆರಾ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾರತ ತಂಡದ ಎಲ್ಲಾ ಆಟಗಾರರೂ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದರೆ ರಿಷಬ್ ಪಂತ್ ಹೊಸ ಫ್ರೆಂಡ್ ಸ್ಪೈಡಿ ಜೊತೆ ಮೈದಾನದಲ್ಲಿ ಕಾಲ ಕಳೆದರು.

    ಪಂತ್ ಮೈದಾನದಲ್ಲಿ ಹೊಸ ಸ್ನೇಹಿತನೊಂದಿಗೆ ಕಾಲ ಕಳೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಫ್ರೆಂಡ್‍ನ ಪರಿಚಯ ಮಾಡಿದ್ದಾರೆ. ಹೊಸ ಸ್ನೇಹಿತನಾಗಿರುವುದು ಡ್ರೋನ್ ಕ್ಯಾಮೆರಾ ಅದರ ಹೆಸರು ಸ್ಪೈಡಿ ಎಂದಿರುವ ಪಂತ್ ನೆಟ್ ಪ್ರಾಕ್ಟೀಸ್ ವೇಳೆ ಕೆಲ ಹೊತ್ತು ಮೈದಾನದ ಮೇಲೆ ಹಾರಿಸಿ ಸಂತೋಷವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Rishabh Pant (@rishabpant)

    ಡ್ರೋನ್ ಕ್ಯಾಮೆರಾದಲ್ಲಿ ನೆಟ್‍ಪ್ರಾಕ್ಟೀಸ್‍ನ ಕೆಲ ದೃಶ್ಯಗಳನ್ನು ಪಂತ್ ಸೆರೆ ಹಿಡಿದಿದ್ದಾರೆ. ಕೆಲದಿನಗಳ ಹಿಂದೆ ಬಿಸಿಸಿಐ ಮೊಟೆರಾ ಅಂಗಳದ ಕೆಲ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದು ಕ್ರಿಕೆಟ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು.

    4 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ ಮತ್ತು ಇಂಗ್ಲೆಂಡ್ 1-1 ರಲ್ಲಿ ಸಮಬಲ ಸಾಧಿಸಿದೆ. 3ನೇ ಟೆಸ್ಟ್ ಪಂದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ಫೆಬ್ರವರಿ 24 ರಂದು ಪ್ರಾರಂಭಗೊಳ್ಳಲಿದೆ.

  • ಐಸಿಸಿಯ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ರಿಷಬ್ ಪಂತ್

    ಐಸಿಸಿಯ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ರಿಷಬ್ ಪಂತ್

    ಮುಂಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ಭಾರತ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್‍ಗೆ ನೀಡಿ ಗೌರವವಿಸಿದೆ.

    ಎಲ್ಲಾ ಅಂತರಾಷ್ಟ್ರೀಯ ಪಂದ್ಯಗಳನ್ನು ಗಮನಿಸಿ ಮಹಿಳಾ ಮತ್ತು ಪುರಷರ ತಂಡದಲ್ಲಿ ಅತ್ಯುತ್ತಮ ಆಟವಾಡಿ ತಂಡಕ್ಕೆ ಸಹಕಾರಿಯಾದ ಆಟಗಾರರಿಗೆ ಐಸಿಸಿಯು ತಿಂಗಳ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿಯೂ ಪ್ರಶಸ್ತಿಗಾಗಿ ಪುರುಷರ ವಿಭಾಗದಲ್ಲಿ ಭಾರತದ ರಿಷಬ್ ಪಂತ್, ಇಂಗ್ಲೆಂಡ್‍ನ ಜೋ ರೂಟ್ ಮತ್ತು ಐಲ್ರ್ಯಾಂಡ್‍ನ ಫೌಲ್ ಸ್ಟ್ರೀಲಿಂಗ್ ಅವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿತ್ತು. ಇದೀಗ ಐಸಿಸಿಯು ಫಲಿತಾಂಶವನ್ನು ಹೊರಹಾಕಿದ್ದು ಭಾರತದ ರಿಷಬ್ ಪಂತ್ ಮುಡಿಗೆ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ.

    ರಿಷಬ್ ಪಂತ್, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‍ನಲ್ಲಿ 97 ರನ್ ಗಳಿಸಿ ಪಂದ್ಯ ಡ್ರಾ ಆಗುವಂತೆ ಮಾಡಿದ್ದರು. ಬ್ರಿಸ್ಪೇನ್‍ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 97 ರನ್ ಗಳಿಸಿ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದರು.

    ಐಸಿಸಿಯ ಪ್ರಶಸ್ತಿ ಗೆದ್ದ ಬಳಿಕ ಈ ಕುರಿತು ಟ್ವೀಟ್ ಮಾಡಿದ ಪಂತ್, ಈ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲಲು ಕಾರಣರಾದ ನಮ್ಮ ತಂಡಕ್ಕೆ ಅರ್ಪಣೆ ಮಾಡುತ್ತೇನೆ. ನನಗೆ ಮತಹಾಕಿ ಪ್ರಶಸ್ತಿ ಗೆಲ್ಲುವಂತೆ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

    ಐಸಿಸಿಯ ಮಹಿಳಾ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಶಬನಮ್ ಇಸ್ಮಾಯಿಲ್ ತಿಂಗಳ ಆಟಗಾರ್ತಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಇಸ್ಮಾಯಿಲ್ ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು. ಇದೆ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 5 ವಿಕೆಟ್ ಕಿತ್ತು ತಂಡಕ್ಕೆ ಜಯ ತಂದುಕೊಟ್ಟಿದ್ದರು.