Tag: ರಿಷಬ್ ಪಂತ್

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಿಷಬ್ ಪಂತ್

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಿಷಬ್ ಪಂತ್

    ತಿರುಪತಿ: ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ (Rishabh Pant) ಮತ್ತು ಅಕ್ಷರ್ ಪಟೇಲ್ (Axar Patel) ಇಂದು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ (Tirupati Balaji Temple) ಆಶೀರ್ವಾದ ಪಡೆದಿದ್ದಾರೆ.

    ಈ ಬಗ್ಗೆ ರಿಷಬ್, ದೇವಾಲಯದ ಶಕ್ತಿಯನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ದೇವಸ್ಥಾನದಿಂದ ಹೊರಬರಲು ಮನಸ್ಸಾಗಲಿಲ್ಲ. ನಂಬಲಾಗದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿ ಅಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ರಿಷಬ್ ಪಂತ್ ಕಳೆದ 2022ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳುಗಳಿಂದ ಕ್ರಿಕೆಟ್‍ನಿಂದ ದೂರ ಉಳಿದಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಕ್ರಿಕೆಟ್‍ಗೆ ಮರಳುವ ನಿರೀಕ್ಷೆ ಇದೆ.

    ವಿಶ್ವಕಪ್‍ಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಕೊನೆಯ ಕ್ಷಣದಲ್ಲಿ ಪಂದ್ಯಗಳಿಂದ ವಂಚಿತರಾದರು. ಅಕ್ಷರ್ ಅವರ ಸ್ಥಾನಕ್ಕೆ ಆರ್ ಅಶ್ವಿನ್ ಆಯ್ಕೆಯಾದರು. ಪ್ರಸ್ತುತ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಕ್ಷರ್ ಪಟೇಲ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಇನ್ನಿಂಗ್ಸ್‌ಗಳಿಂದ 50 ವಿಕೆಟ್ ಪಡೆದಿದ್ದಾರೆ. 54 ಏಕದಿನ ಪಂದ್ಯಗಳನ್ನು ಆಡಿ 59 ವಿಕೆಟ್ ಗಳಿಸಿದ್ದಾರೆ. 45 ಟಿ20 ಪಂದ್ಯಗಳಿಂದ 39 ವಿಕೆಟ್ ಉರುಳಿಸಿದ್ದಾರೆ.

    ರಿಷಬ್ ಪಂತ್ ಟೀಂ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳಿಂದ 2,271 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳು ಹಾಗೂ 5 ಶತಕಗಳು ಸೇರಿವೆ. 30 ಏಕದಿನ ಪಂದ್ಯಗಳಿಂದ 865 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧ ಶತಕಗಳು ಸೇರಿವೆ. 66 ಟಿ20 ಪಂದ್ಯಗಳಿಂದ 987 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳಿವೆ. ಇದನ್ನೂ ಓದಿ: World Cup 2023: ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಕ್ರಿಕೆಟ್‌ ದೇವರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಳ್ಳಾರಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ – ಅಭಿಮಾನಿಗಳಲ್ಲಿ ಸಂಭ್ರಮ

    ಬಳ್ಳಾರಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ – ಅಭಿಮಾನಿಗಳಲ್ಲಿ ಸಂಭ್ರಮ

    ಬೆಂಗಳೂರು: ತೀವ್ರ ಕಾರು ಅಪಘಾತದಿಂದ ಡಿಸೆಂಬರ್ 2022 ರಿಂದ ತಂಡದಿಂದ ಹೊರಗುಳಿದಿದ್ದ ಟೀಂ ಇಂಡಿಯಾ (Team India) ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ (Rishabh Pant) ಬಳ್ಳಾರಿಯಲ್ಲಿ (Ballari) ಬ್ಯಾಟ್ ಹಿಡಿದಿದ್ದಾರೆ.

    ಅಭಿಮಾನಿಯೊಬ್ಬರು ಪಂತ್ ಅವರ ಅಭ್ಯಾಸದ ವೇಳೆ ಬ್ಯಾಟಿಂಗ್ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಜು.21 ರಿಂದಲೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ಪಂತ್ ಬಳ್ಳಾರಿಯಲ್ಲಿ ಕ್ರಿಕೆಟ್ ಆಡಿದ್ದಾರೆ.

    ವೀಡಿಯೋದಲ್ಲಿ ಪಂತ್ ಬ್ಯಾಟ್ ಹಿಡಿದು ಕ್ರೀಸ್‍ಗೆ ಆಗಮಿಸಿದಾಗ ಸೇರಿದ್ದ ಅಭಿಮಾನಿಗಳು ಹರ್ಷೋದ್ಗಾರಗಳಿಂದ ಸಂಭ್ರಮಿಸಿದ್ದಾರೆ. ಆಟದ ವೇಳೆ ಅವರ ಬ್ಯಾಟಿಂಗ್ ಶೈಲಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯ ವಿಜಯನಗರದಲ್ಲಿರುವ ಜಿಂದಾಲ್ ಘಟಕದಲ್ಲಿ ಪಂತ್ ಬ್ಯಾಟ್ ಬೀಸಿದ್ದಾರೆ. ಪಂತ್ ಜೆಎಸ್‍ಡಬ್ಲ್ಯೂ ಸ್ಪೋಟ್ರ್ಸ್ ರಾಯಭಾರಿಯಾಗಿದ್ದಾರೆ. ಜಾಹೀರಾತು ಕಾರಣಕ್ಕೆ ಪಂತ್ ಬಳ್ಳಾರಿಗೆ ಬಂದಿದ್ದಾರೆ ಎನ್ನಲಾಗಿದೆ.

    ಪಂತ್ ಈ ವರ್ಷದ ಆರಂಭದಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ಅವರು ವ್ಯಾಯಾಮ ಮತ್ತು ಓಟದ ಅಭ್ಯಾಸದಲ್ಲಿ ತೊಡಗಿದ್ದಾರೆ.

    ಪಂತ್ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಭರತ್ ಮತ್ತು ಇಶಾನ್ ಕಿಶನ್ ತುಂಬಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಪಂತ್ ಅವರ ಅನುಪಸ್ಥಿತಿಯು ಟೀಂ ಇಂಡಿಯಾಕ್ಕೆ ಬಹಳಷ್ಟು ನಷ್ಟ ಉಂಟು ಮಾಡಿದೆ. ಈ ಬಾರಿಯ ವಿಶ್ವಕಪ್‍ನಲ್ಲಿ ರಾಹುಲ್ ಮೊದಲ ಆಯ್ಕೆಯ ವಿಕೆಟ್‍ಕೀಪರ್-ಬ್ಯಾಟ್ಸ್‍ಮನ್‍ನ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಪಂತ್ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಅವರ ಸಾಮಥ್ರ್ಯಗಳು ಮತ್ತು ಅನುಭವವು ಭರವಸೆಯನ್ನು ಒದಗಿಸಿದರೆ, ಎರಡನೇ ಆಯ್ಕೆ ಕೀಪರ್ ಆಗಿ ಇಶಾನ್ ಕಿಶನ್ ತಂಡದ ಭರವಸೆಯಾಗಿದ್ದಾರೆ.

    ಇಶಾನ್ ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಅವರು ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    ಮುಂಬೈ/ವಾಷಿಂಗ್ಟನ್‌: ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗರು (Cricketer) ಇತ್ತೀಚೆಗಷ್ಟೇ ಅನಾವರಣಗೊಂಡ ʻಥ್ರೆಡ್ಸ್‌ʼ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಷನ್‌ ʻಥ್ರೆಡ್ಸ್‌ʼ (Threads App) ಬಳಕೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

     

    Post by @rishabpant
    View on Threads

     

    ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ, ಟ್ವಿಟ್ಟರ್‌ಗೆ ಪ್ರಬಲ ಪೈಪೋಟಿ ನೀಡಲು ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊಸ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್ ‘ಥ್ರೆಡ್ಸ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಬಳಕೆದಾರರು ಈ ಹೊಸ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಲಾಗಿನ್‌ ಆಗುತ್ತಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಠಕ್ಕರ್ ಕೊಡಲು ಬಿಡುಗಡೆಯಾಯ್ತು ‘ಥ್ರೆಡ್ಸ್’ – 4 ಗಂಟೆಯಲ್ಲಿ 50 ಲಕ್ಷ ಸೈನ್ ಅಪ್

    ಥ್ರೆಡ್ಸ್ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಇದನ್ನು ಬಿಡುಗಡೆ ಮಾಡಿದ 4 ಗಂಟೆಗಳಲ್ಲಿ 50 ಲಕ್ಷ ಬಳಕೆದಾರರು ಸೈನ್ ಅಪ್ ಮಾಡಿದ್ದರು. ಇದೀಗ ಟೀಂ ಇಂಡಿಯಾದ ಸ್ಟಾರ್‌ ಆಟಗಾರರ ಟ್ವಿಟ್ಟರ್‌ ಬದಲಿಗೆ ಥ್ರೆಡ್ಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಟೀಂ ಇಂಡಿಯಾ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌, ಟ್ವಿಟ್ಟರ್‌ ಮುಖ್ಯಸ್ಥ ಎಲೋನ್‌ ಮಸ್ಕ್‌ಗೆ (Elon Musk) ಟಾಂಗ್‌ ಕೊಟ್ಟಿದ್ದಾರೆ.

    ಥ್ರೆಡ್ಸ್‌ಗೆ ಲಾಗಿನ್‌ ಆಗಿರುವ ಅಶ್ವಿನ್‌ ಎಲಾನ್‌ ಮಸ್ಕ್‌ ಸೇರಿಕೊಂಡಿದ್ದಾರಾ..? ಅವರಿನ್ನು ಸೇರಿಕೊಂಡಿಲ್ಲದಿದ್ದರೆ ಬೇಗನೆ ಸೇರುವುದು ಒಳ್ಳೆಯದು ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    ಮತ್ತೊಂದೆಡೆ ಭೀಕರ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್‌ ಸಹ ʻಥ್ರೆಡ್ಸ್‌ʼ ಬಳಕೆದಾರರ ಸಮೂಹಕ್ಕೆ ಸೇರಿಕೊಂಡು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಥ್ರೆಡ್ಸ್‌ ಸೇರಿರುವ ಎಲ್ಲರಿಗೂ ಸ್ವಾಗತ. ಪ್ರತಿಯೊಬ್ಬರು ಸಾಧ್ಯವಾದಷ್ಟು ಬೆಂಬಲಿಗರನ್ನು ಗಳಿಸಿ. ನಾವು ಇದನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಪ್ರಯತ್ನಿಸೋಣ ಎಂದು ಥ್ರೆಡ್ಸ್‌ ಪೋಸ್ಟ್‌ ಮೂಲಕ ಕರೆ ಕೊಟ್ಟಿದ್ದಾರೆ.

    ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ?
    ಥ್ರೆಡ್ಸ್‌ ಖಾತೆ ತೆರೆಯಬೇಕಾದರೆ ಇನ್ಸ್ಟಾಗ್ರಾಮ್‌ (Instagram) ಖಾತೆ ಬೇಕಾಗುತ್ತದೆ. ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಿದ ಕೂಡಲೇ ಇನ್‌ಸ್ಟಾದಿಂದ ಬಯೋ ಸೇರಿದಂತೆ ಫಾಲೋವರ್ಸ್‌ಗಳನ್ನು Import ಮಾಡಬೇಕಾ ಅಂತಾ ಕೇಳುತ್ತದೆ. ಬಳಕೆದಾರರು ಅನುಮತಿ ನೀಡಿದರೆ ಇನ್‌ಸ್ಟಾ ಬಯೋ ನಿಮ್ಮ ಪ್ರೊಫೈಲಿನಲ್ಲಿ ಬಂದಿರುತ್ತದೆ. ಇನ್‌ಸ್ಟಾ ಸ್ನೇಹಿತರ ಪೈಕಿ ಯಾರು ಥ್ರೆಡ್ಸ್‌ಗೆ ಜಾಯಿನ್‌ ಆಗಿದ್ದಾರೋ ಅವರನ್ನು ಇಲ್ಲಿ ಫಾಲೋ ಮಾಡಬಹುದು.

    ಥ್ರೆಡ್ಸ್‌ನಲ್ಲಿ ಎಲ್ಲಾ ಬಳಕೆದಾರರು 5 ನಿಮಿಷ ಉದ್ಧದ ವೀಡಿಯೋಗಳನ್ನು ಪೋಸ್ಟ್‌ ಮಾಡಬಹುದು. ನೀಲಿ ಬ್ಯಾಡ್ಜ್‌ ಇಲ್ಲದ ಟ್ವಿಟ್ಟರ್‌ ಬಳಕೆದಾರರು ಗರಿಷ್ಠ 2 ನಿಮಿಷ 20 ಸೆಕೆಂಡ್‌ ಉದ್ದದ ವೀಡಿಯೋ ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ.

    ಡ್ಸ್‌ನಲ್ಲಿ ಗರಿಷ್ಠ 500 ಪದಗಳನ್ನು ಬಳಸಿ ಪೋಸ್ಟ್‌ ಮಾಡಬಹುದು. ಟ್ವಿಟ್ಟರ್‌ನಲ್ಲಿ 280 ಪದಗಳಿಗೆ ಮಿತಿಯನ್ನು ನಿಗದಿ ಮಾಡಲಾಗಿದೆ. ಇನ್‌ಸ್ಟಾದಲ್ಲಿರುವ ಅಧಿಕೃತ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಇರುವಂತೆ ಇಲ್ಲೂ ಅದೇ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಅಟೋಮ್ಯಾಟಿಕ್‌ ಆಗಿ ಬಂದಿರುತ್ತದೆ. ಟ್ವಿಟ್ಟರ್‌ನಲ್ಲಿ ನೀಲಿ ಟಿಕ್‌ ಮಾರ್ಕ್‌ ಬೇಕಾದರೆ ದುಡ್ಡು ಪಾವತಿಸಬೇಕಾಗುತ್ತದೆ.

    ಸದ್ಯಕ್ಕೆ ಥ್ರೆಡ್ಸ್‌ನಲ್ಲಿ ಯಾವುದೇ ಜಾಹೀರಾತು ಪ್ರಕಟವಾಗುವುದಿಲ್ಲ. ಇನ್‌ಸ್ಟಾದಲ್ಲಿ ಯಾವೆಲ್ಲ ವಿಷಯಗಳಿಗೆ ಸೆನ್ಸರ್‌ ಮಾಡಲಾಗುತ್ತದೋ ಆ ಎಲ್ಲಾ ವಿಷಯಗಳನ್ನು ಇಲ್ಲೂ ಸೆನ್ಸರ್‌ ಮಾಡಲಾಗುತ್ತದೆ.

    ಥ್ರೆಡ್ಸ್‌ಗೆ ಒಮ್ಮೆ ಸೇರ್ಪಡೆಯಾದರೆ ಆ ಖಾತೆಯನ್ನು ಡಿಲೀಟ್‌ ಮಾಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಖಾತೆ ಡಿಲೀಟ್‌ ಮಾಡಬೇಕಾದರೆ ಇನ್‌ಸ್ಟಾ ಖಾತೆಯನ್ನೇ ಡಿಲೀಟ್‌ ಮಾಡಬೇಕಾಗುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಥ್ರೆಡ್ಸ್‌ ಖಾತೆಯನ್ನು ನಿಷ್ಕ್ರಿಯ ಮಾಡಬಹುದು. ಆದರೆ ಇನ್‌ಸ್ಟಾದ ಖಾತೆ ಡಿಲೀಟ್‌ ಮಾಡಿದರೆ ಮಾತ್ರ ಥ್ರೆಡ್ಸ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸಾಧ್ಯ ಎಂದು ಪ್ರೈವೆಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ.

    ಟ್ವಿಟ್ಟರ್‌ನಲ್ಲಿ ಬಳಕೆದಾರರು ಬೇರೆ ಟ್ವೀಟ್‌ ಲೈಕ್‌ ಮಾಡಿದರೆ ಅದು ಪ್ರತ್ಯೇಕ ಟ್ಯಾಬ್‌ನಲ್ಲಿ ಕಾಣುತ್ತದೆ. ಆದರೆ ಥ್ರೆಡ್ಸ್‌ನಲ್ಲಿ ಲೈಕ್‌ ಮಾಡಿದ್ದನ್ನು ನೋಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಪ್ರೊಫೈಲ್‌ ಫೋಟೋದ ಮೇಲ್ಭಾಗದಲ್ಲಿ ಇನ್‌ಸ್ಟಾಖಾತೆ ಕಾಣುತ್ತದೆ. ಇನ್‌ಸ್ಟಾ ಪ್ರೊಫೈಲ್‌ ಫೋಟೋದ ಕೆಳಭಾಗದಲ್ಲಿ ಥ್ರೆಡ್ಸ್‌ ಲಿಂಕ್‌ ಕಾಣುತ್ತದೆ. ಜೊತೆಗೆ ಥ್ರೆಡ್ಸ್‌ನಲ್ಲಿ ಫಾಲೋವರ್ಸ್‌ಗಳೊಂದಿಗೆ ಚಾಟ್‌ ಮಾಡುವ ಆಯ್ಕೆ ಇಲ್ಲ. ಬಳಕೆದಾರರ ಪ್ರೋಫೈಲ್‌ಗೆ ಹೋದ್ರೆ ಅದರಲ್ಲಿ ಇನ್ಸ್ಟಾಗ್ರಾಮ್‌ ಖಾತೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ನೇರವಾಗಿ ಇನ್ಸ್ಟಾ ತೆರೆದುಕೊಳ್ಳುತ್ತದೆ. ಅಲ್ಲೇ ಚಾಟ್‌ ಆಯ್ಕೆಯನ್ನು ಬಳಸಬೇಕಾಗುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 16 ನೇ ಆವೃತ್ತಿ ಮಾ.31 ರಂದು ಪ್ರಾರಂಭವಾಗಲಿದೆ. ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದ್ದು, ಟೂರ್ನಿಯ ಆರಂಭಕ್ಕೂ ಮುನ್ನ, ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯಲಿರುವ 5 ಆಟಗಾರ ಪಟ್ಟಿ ಇಲ್ಲಿದೆ.

    ಜಸ್ಪ್ರೀತ್ ಬುಮ್ರಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಬುಮ್ರಾ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬರುವ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ರಿಷಬ್ ಪಂತ್: ಕಾರು ಅಪಘಾತದಿಂದ ಪಂತ್, ತೀವ್ರಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

    ಜಾನಿ ಬೈರ್‍ಸ್ಟೋವ್: ಐಪಿಎಲ್ ಅತ್ಯಂತ ಪ್ರಭಾವಶಾಲಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಬೈರ್‍ಸ್ಟೋವ್ (Jonny Bairstow), ಕಾಲು ಮುರಿತದಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಪಂಜಾಬ್ ಕಿಂಗ್ಸ್ ಅವರ ಬದಲಿಗೆ ಮ್ಯಾಟ್ ಶಾರ್ಟ್ ಅವರನ್ನು ಆಯ್ಕೆಮಾಡಿಕೊಂಡಿದೆ.

    KKR

    ಕೈಲ್ ಜೆಮಿಸನ್: ಬೆನ್ನಿನ ಗಾಯದಿಂದ ಶಸ್ತ್ರಚಿಕಿತ್ಸೆಗೊಳಗಾದ ಜೆಮಿಸನ್ (Kyle Jamieson) ನಾಲ್ಕು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಸಿಎಸ್‍ಕೆ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

    ಶ್ರೇಯಸ್ ಅಯ್ಯರ್: ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ (Shreyas Iyer) ಹೊರಗುಳಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‍ನ ಇವರ ಸ್ಥಾನವನ್ನು ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವರನ್ನು ತುಂಬಲಿದ್ದಾರೆ. ಇದನ್ನೂ ಓದಿ: ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

  • RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    ಮುಂಬೈ: ಭೀಕರ ಕಾರು ಅಪಘಾತದಿಂದ ಗಾಯಗೊಂಡಿದ್ದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಷಬ್ (Rishabh Pant) ಪಂತ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಸೇರಿದಂತೆ ಹಲವು ಸ್ಟಾರ್ ಆಟಗಾರರು 2023ರ 16ನೇ ಆವೃತ್ತಿ ಐಪಿಎಲ್‌ನಿಂದ (IPL 2023) ಹೊರಗುಳಿದಿದ್ದಾರೆ. ಇದರಿಂದ ನೆಚ್ಚಿನ ತಂಡದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.

    Rishabh Pant 3

    ಯಾರೆಲ್ಲಾ ಐಪಿಎಲ್‌ನಿಂದ ಮಿಸ್ಸಿಂಗ್?:
    ರಿಷಬ್ ಪಂತ್: 2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ದೆಹಲಿಯಿಂದ ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಬ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರು ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿರುವುದರಿಂದ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಗೈರಾಗಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಗ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಜಸ್‌ಪ್ರೀತ್‌ ಬುಮ್ರಾ:
    ಬೆನ್ನು ನೋವಿನ ಸಮಸ್ಯೆಯಿಂದ ಈಗಷ್ಟೇ ಗುಣಮುಖರಾಗುತ್ತಿರುವ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಮುಂಬರುವ 2023ರ ಐಪಿಎಲ್ ಟೂರ್ನಿ ಹಾಗೂ 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಿಂದ ಬಹುತೇಕ ಹೊರ ಬಿದ್ದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಗಾಯಕ್ಕೆ ತುತ್ತಾಗಿದ್ದ ಜಸ್‌ಪ್ರೀತ್ ಬುಮ್ರಾ ಅವರು ನಿಗದಿತ ಸಮಯಕ್ಕೆ ಗುಣಮಖರಾಗುವಲ್ಲಿ ವಿಫಲರಾದರು. ಫೆಬ್ರವರಿ 16ರಂದು ಬುಮ್ರಾ ತಮ್ಮ ಫಿಟ್ನೆಸ್ ಸಾಬೀತುಪಡಿಸುವಲ್ಲಿ ವಿಫಲರಾದರು. ಆದ್ದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಿಂದಲೂ ಅವರು ಹೊರಗುಳಿಯಲಿದ್ದಾರೆ. ಜೊತೆಗೆ ಕಳೆದ ಹಲವು ವರ್ಷಗಳಿಂದ ಮುಂಬೈ ಫ್ರಾಂಚೈಸಿ ಜಸ್‌ಪ್ರೀತ್‌ ಬುಮ್ರಾ ಅವರ ಮೇಲೆ ಸಾಕಷ್ಟು ಅವಲಂಬಿಸಿದ್ದು, ಫ್ರಾಂಚೈಸಿಗೂ ಅಲಭ್ಯತೆಯ ಆತಂಕ ಎದುರಾಗಿದೆ.

    ಪ್ಯಾಟ್ ಕಮ್ಮಿನ್ಸ್:
    ಕೋಲ್ಕತ್ತಾ ನೈಟ್‌ರೈಡರ್ಸ್ (KKR) ಪ್ರಮುಖ ಆಟಗಾರನಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಸಹ 16ನೇ ಐಪಿಎಲ್ ಆವೃತ್ತಿಯಿಂದ ಹೊರಗುಳಿಯುತ್ತಿದ್ದಾರೆ. ತಮ್ಮ ತಾಯಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಅವರು ಸಿಡ್ನಿಗೆ ಮರಳಿದ್ದಾರೆ. ಇದನ್ನೂ ಓದಿ: ಬೆತ್‌ ಮೂನಿ ಭರ್ಜರಿ ಫಿಫ್ಟಿ – ಆಸ್ಟ್ರೇಲಿಯಾಗೆ 6ನೇ ಬಾರಿಗೆ ವಿಶ್ವಕಪ್‌ ಚಾಂಪಿಯನ್‌ ಕಿರೀಟ

    ಮಿಚೆಲ್ ಸ್ಟಾರ್ಕ್, ಸ್ಟೀವನ್ ಸ್ಮಿತ್:
    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಆಸ್ಟ್ರೇಲಿಯಾದ (Australia) ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ 2023ರ ಐಪಿಎಲ್ ಹರಾಜಿಗೆ ನೋಂದಣಿ ಮಾಡಿಕೊಳ್ಳದ ಕಾರಣ ಅವರು ಈ ಬಾರಿ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. ಕೈಬೆರಳು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್ಕ್ ಭಾರತದ ವಿರುದ್ಧ 3 ಮತ್ತು 4ನೇ ಟೆಸ್ಟ್ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ. ಆದ್ರೆ ಸ್ಟೀವನ್ ಸ್ಮಿತ್ ತಾವೇ ಈ ಬಾರಿ ಟಿ20 ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಲೆಕ್ಸ್ ಹೇಲ್ಸ್:
    ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ವೈಯಕ್ತಿಕ ಕೆಲಸದ ಒತ್ತಡಗಳಿಂದ 16ನೇ ಆವೃತ್ತಿ ಐಪಿಎಲ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೇಲ್ಸ್ 2022ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿಗೆ ಕಾರಣವಾಗಿದ್ದರು. ಇದನ್ನೂ ಓದಿ: ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

  • ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    ಭೋಪಾಲ್: ಭೀಕರ ರಸ್ತೆ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶೀಘ್ರ ಗುಣಮುಖರಾಗುವಂತೆ ಟೀಂ ಇಂಡಿಯಾ (Team India) ಆಟಗಾರರು ಸೋಮವಾರ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದಲ್ಲಿ (Ujjain Mahakaleswar Temple) ಪ್ರಾರ್ಥನೆ ಸಲ್ಲಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ ಜನವರಿ 24ರಂದು ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ (Ujjain Mahakaleswar Temple) ಭೇಟಿ ನೀಡಿ ಟೀಂ ಇಂಡಿಯಾ ಆಟಗಾರರು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್ ಯಾದವ್, ಸ್ಪಿನ್ ಬೌಲರ್ ಕುಲ್‌ದೀಪ್ ಯಾವದ್ ಹಾಗೂ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಸೋಮವಾರ ಬೆಳಗ್ಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ `ರಿಷಬ್ ಪಂತ್’ ಆದಷ್ಟು ಬೇಗ ಗುಣಮುಖರಾಗಿ ಟೀಂ ಇಂಡಿಯಾಕ್ಕೆ ಮರಳುವಂತೆ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಸಾಂಪ್ರದಾಯಿಕ ಧೋತಿ, ಅಂಗವಸ್ತ್ರ ಉಡುಗೆ ತೊಟ್ಟು ಮುಂಜಾನೆ ನಡೆದ ಶಿವನ `ಭಸ್ಮ ಆರತಿ’ಯಲ್ಲೂ (Bhasma Aarti) ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಬಳಿಕ ಹಾಕಿಯಲ್ಲೂ ಭಾರತಕ್ಕೆ ಕಂಟಕವಾದ ನ್ಯೂಜಿಲೆಂಡ್ – ಮರೆಯಲಾಗದ ಆ 3 ಸೋಲು

    ಈ ಕುರಿತು ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, `ರಿಷಬ್ ಪಂತ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸಿದ್ದೇವೆ. ಅವರ ಪುನರಾಗಮನ ನಮಗೆ ಬಹಳ ಮುಖ್ಯ. ನಾವು ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆದ್ದಿದ್ದೇವೆ. ಅವರ ವಿರುದ್ಧದ ಅಂತಿಮ ಪಂದ್ಯ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ರಿಷಬ್‌ಗೆ ಏನಾಗಿತ್ತು?: 2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    ಮುಂಬೈ: ಭೀಕರ ಕಾರು ಅಪಘಾತದಿಂದ (Car Accident) ಗಂಭೀರ ಗಾಯಗೊಂಡಿದ್ದ ಟೀಂ ಇಂಡಿಯಾ (Team India) ಕ್ರಿಕೆಟಿಗ ರಿಷಬ್ ಪಂತ್‌ಗೆ (Rishabh Pant) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

    ಮಂಗಳವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಅಪಘಾತದ ನಂತರ ತಮಗೆ ಸಹಾಯ ಮಾಡಿದ ಇಬ್ಬರು ಯುವಕರನ್ನ ಸ್ಮರಿಸಿದ್ದಾರೆ. ರಜತ್ ಕುಮಾರ್ ಮತ್ತು ನಿಶು ಕುಮಾರ್ ಚಿತ್ರವನ್ನ ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಪಂತ್ ಭಾವುಕ ಸಂದೇಶ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    `ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನ ಉತ್ಸಾಹ ಹೆಚ್ಚಿದೆ. ನಾನು ಪ್ರತಿದಿನ ಚೇತರಿಸಿಕೊಳ್ಳುತ್ತಿದ್ದೇನೆ. ಮುಂದಿನ ಸವಾಲುಗಳನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಈ ಕಷ್ಟದ ಸಮಯದಲ್ಲಿ ಸಿಕ್ಕ ನಿಮ್ಮ ಪ್ರೀತಿಯ ಮಾತುಗಳು, ಬೆಂಬಲಕ್ಕಾಗಿ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಹ ಆಟಗಾರನ ಗೆಳತಿಯೊಂದಿಗೆ ಪಾಕ್ ನಾಯಕ ಚಾಟಿಂಗ್ – ಹನಿಟ್ರ್ಯಾಪ್‍ಗೆ ಸಿಲುಕಿದ್ರಾ ಬಾಬರ್ ಅಜಮ್?

    `ನಾನು ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದೇ ಇರಬಹುದು. ಆದರೆ ನಾನು ಈ ಇಬ್ಬರು ವೀರರನ್ನು ಸ್ಮರಿಸಬೇಕು. ನನ್ನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದವರು ಇವರು. ಇವರಿಗೆ ನಾನು ಶಾಶ್ವತವಾಗಿ ಕೃತಜ್ಞನಾಗಿರುತ್ತೇನೆ. ಅಲ್ಲದೇ ನನ್ನ ಅಭಿಮಾನಿಗಳು, ನನ್ನ ತಂಡ ಸಹಪಾಠಿಗಳು ಚಿಕಿತ್ಸೆ ನೀಡಿದ ವೈದ್ಯರು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಿಮ್ಮೆಲ್ಲರನ್ನೂ ನಾನು ಮತ್ತೆ ಮೈದಾನದಲ್ಲಿ ನೋಡಲು ಎದುರುನೋಡುತ್ತಿದ್ದೇನೆ ಎಂದು ಭಾವುಕ ನುಡಿಗಳನ್ನ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

    ರಿಷಬ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಟ್ಟು ಬಿಡದೇ ರಿಷಬ್ ಪಂತ್‌ನ ಕಾಡುತ್ತಿರುವ ಊರ್ವಶಿ ರೌಟೇಲಾ: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಬಿಟ್ಟು ಬಿಡದೇ ರಿಷಬ್ ಪಂತ್‌ನ ಕಾಡುತ್ತಿರುವ ಊರ್ವಶಿ ರೌಟೇಲಾ: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಹುಭಾಷಾ ನಟಿಯಾಗಿ ಮಿಂಚ್ತಿರುವ ಊರ್ವಶಿ ರೌಟೇಲಾ (Uravashi Rautela) ಮತ್ತೆ ರಿಷಬ್ ಪಂತ್  (Rishab Pant) ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆಷ್ಟೇ ರಿಷಬ್ ಪಂತ್ ಅವರಿಗೆ ಕಾರು ಅಪಘಾತವಾಗಿತ್ತು. ಮುಂಬೈನ(Mumbai)  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಹಿಂದೆ ಊರ್ವಶಿ ಬಿದ್ದಿದ್ದಾರೆ. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ.

    ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಿಂಚ್ತಿರುವ ಊರ್ವಶಿ ಈಗ ಮತ್ತೆ ರಿಷಬ್ ಪಂತ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಪಾಡಿಗೆ ರಿಷಬ್ ಇದ್ದರೂ ಕೂಡ ಅವರಿಗೆ ಬಿಟ್ಟು ಬಿಡದೇ ಕಾಡ್ತಿದ್ದಾರೆ ನಟಿ ಊರ್ವಶಿ ರೌಟೇಲಾ. ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

    ಇತ್ತೀಚೆಗೆ ಇಬ್ಬರ ಮಧ್ಯೆ ಕಿತ್ತಾಟ ನಡೆಯುತ್ತಲೇ ಇತ್ತು. ಈಗ ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ. ಈಗಲೂ ಊರ್ವಶಿ ಅವರು ರಿಷಬ್ ಅವರನ್ನು ಹಿಂಬಾಲಿಸಿದಂತಿದೆ. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು. ಇದನ್ನೂ ಓದಿ: ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್‌ಗೆ ಬ್ರೇಕ್ ಹಾಕಿದ ಸರ್ಕಾರ

    ಕ್ರಿಕೆಟಿಗ ರಿಷಬ್ ಪಂತ್ (Rishab Pant) ಅವರಿಗೆ ಮುಂಬೈನ `ಕೋಕಿಲಾಬೇನ್ ಧೀರುಬಾಯ್ ಅಂಬಾನಿ’ (Kokilaben Dhirubhai Ambani Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯ ಫೋಟೋವನ್ನ ನಟಿ ಊರ್ವಶಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ನಟಿಯ ಈ ನಡೆಗೆ ಟೀಕೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಊರ್ವಶಿ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ನೆಟ್ಟಿಗರು ನಟಿಯ ವಿರುದ್ಧ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್ – ಪಂತ್‍ಗೆ ಒಲಿದ ನಾಯಕತ್ವ

    ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್ – ಪಂತ್‍ಗೆ ಒಲಿದ ನಾಯಕತ್ವ

    ಮುಂಬೈ: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ನಾಳೆಯಿಂದ ಆರಂಭವಾಗಬೇಕಾಗಿದ್ದ ಟಿ20 ಸರಣಿ ಆರಂಭಕ್ಕೂ ಮುನ್ನ ಗಾಯಾಳುವಾಗಿ ನಾಯಕ ಕೆ.ಎಲ್ ರಾಹುಲ್ ಸರಣಿಯಿಂದ ಹೊರಬಿದ್ದಿದ್ದಾರೆ.

    ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ತಂಡವನ್ನು ಮುನ್ನಡೆಸುವ ಹೊಣೆ ಕೆ.ಎಲ್ ರಾಹುಲ್‍ಗೆ ಹೊರಿಸಲಾಗಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನ ರಾಹುಲ್ ಗಾಯಾಳುವಾಗಿ ಸರಣಿಯಿಂದಲೇ ಹೊರ ನಡೆದಿದ್ದಾರೆ. ಇದನ್ನೂ ಓದಿ: ನೂತನ ದಾಖಲೆಯತ್ತ ಕಣ್ಣಿಟ್ಟ ಟೀಂ ಇಂಡಿಯಾ

    ರಾಹುಲ್ ಮತ್ತು ಕುಲ್‍ದೀಪ್ ಯಾದವ್ ಗಾಯಾಳುವಾಗಿರುವುದರಿಂದ ತಂಡದಿಂದ ಹೊರ ನಡೆದಿದ್ದು, ರಿಷಬ್ ಪಂತ್‍ಗೆ ನಾಯಕತ್ವ ನೀಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಮಿಥಾಲಿ ರಾಜ್

    ಈಗಾಗಲೇ ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ರಾಹುಲ್ ಗಾಯಾಳುವಾಗಿರುವುದರಿಂದ ಪಂತ್ ನಾಯಕನಾದರೆ, ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ.

  • ಶತಕ ವಂಚಿತ ಪಂತ್ – ಬೃಹತ್ ಮೊತ್ತದತ್ತ ಭಾರತ

    ಶತಕ ವಂಚಿತ ಪಂತ್ – ಬೃಹತ್ ಮೊತ್ತದತ್ತ ಭಾರತ

    ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮುನ್ನಡೆಯತ್ತ ಸಾಗಿದೆ. ಬ್ಯಾಟಿಂಗ್‍ನಲ್ಲಿ ಮಿಂಚಿದ ವಿಕೆಟ್ ಕೀಪರ್ ರಿಷಬ್ ಪಂತ್ ಶತಕದಂಚಿನಲ್ಲಿ ಔಟ್ ಆಗಿ ನಿರಾಸೆ ಅನುಭವಿಸಿದ್ದಾರೆ.

    ಕೊಹ್ಲಿಯ ನೂರನೇ ಟೆಸ್ಟ್‌ನ ಸಂಭ್ರಮದೊಂದಿಗೆ ಆಡಿದ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನದೊಂದಿಗೆ ಗಮನಸೆಳೆದರು. ದಿನದಾಟದ ಅಂತ್ಯಕ್ಕೆ ಭಾರತ 85 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 375 ರನ್ ಪೇರಿಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಇದನ್ನೂ ಓದಿ: ನೂರನೇ ಟೆಸ್ಟ್ ಪಂದ್ಯದಲ್ಲಿ ನೂತನ ಮೈಲಿಗಲ್ಲು ಬರೆದ ವಿರಾಟ್ ಕೊಹ್ಲಿ

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 51 ರನ್ (61 ಎಸೆತ) ಸೇರಿಸಿ ಬೇರ್ಪಟ್ಟಿತು. ರೋಹಿತ್ 29 ರನ್ (28 ಎಸೆತ, 6 ಬೌಂಡರಿ) ಮತ್ತು ಅಗರ್ವಾಲ್ 33 ರನ್ (49 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ಒಂದಾದ ಹನುಮ ವಿಹಾರಿ ಮತ್ತು ವಿರಾಟ್ ಕೊಹ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದರು. ಈ ಜೋಡಿ ಮೂರನೇ ವಿಕೆಟ್‍ಗೆ 90 ರನ್ (155 ಎಸೆತ) ಜೊತೆಯಾಟವಾಡಿ ಮಿಂಚಿತು.

    ವಿಹಾರಿ 58 ರನ್ (128 ಎಸೆತ, 5 ಬೌಂಡರಿ) ಅರ್ಧಶತಕ ಸಿಡಿಸಿ ಗಮನಸೆಳೆದರೆ, ಕೊಹ್ಲಿ 45 ರನ್ (76 ಎಸೆತ, 5 ಬೌಂಡರಿ) ಸಿಡಿಸಿ ಅರ್ಧಶತಕ ವಂಚಿತರಾದರು. ಇವರಿಬ್ಬರ ಬಳಿಕ ಭಾರತವನ್ನು ಆಧಾರಿಸಿದ್ದು, ರಿಷಬ್ ಪಂತ್, ತಮ್ಮ ಭರ್ಜರಿ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್‌ಗಳ ಮೂಲಕ ಲಂಕಾ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 27 ರನ್ (48 ಎಸೆತ, 3 ಬೌಂಡರಿ) ಬಾರಿಸಿ ಎಲ್‍ಬಿಡಬ್ಲ್ಯೂ ಆಗಿ ಔಟ್ ಆದರು. ಇದನ್ನೂ ಓದಿ: ಅಕ್ಷಯ್ ಹುಕ್ ಸ್ಟೆಪ್‌ಗೆ ಫೇಮಸ್ ಕ್ರಿಕೆಟಿಗರು ಫಿದಾ

    ಆ ಬಳಿಕ ಒಂದಾದ ಪಂತ್, ರವೀಂದ್ರ ಜಡೇಜಾ ಜೋಡಿ ಇನ್ನೊಂದು ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ನೆರವಾಯಿತು. 6 ನೇ ವಿಕೆಟ್‍ಗೆ 104 ರನ್ (118 ಎಸೆತ) ಕೊಳ್ಳೆ ಹೊಡೆದ ಈ ಜೋಡಿ ಲಂಕಾ ತಂಡಕ್ಕೆ ಕಾಟ ಕೊಟ್ಟಿತ್ತು. ಈ ವೇಳೆ ಇನ್ನೇನೂ ಶತಕದಂಚಿನಲ್ಲಿದ್ದ ಪಂತ್ 96 ರನ್ (97 ಎಸೆತ, 9 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡು ಶತಕ ವಂಚಿತರಾದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ ವಿಧಿವಶ

    ಮೊದಲ ದಿನದಾಟದಂತ್ಯಕ್ಕೆ ರವೀಂದ್ರ ಜಡೇಜಾ ಅಜೇಯ 45 ರನ್ (82 ಎಸೆತ, 5 ಬೌಂಡರಿ) ಮತ್ತು ಆರ್ ಅಶ್ವಿನ್ 10 ರನ್ (11 ಎಸೆತ, 2 ಬೌಂಡರಿ) ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.