Tag: ರಿಷಬ್ ಪಂತ್

  • ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

    ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

    ಹೈದರಾಬಾದ್: ನಿಕೋಲಸ್ ಪೂರನ್ ಬೆಂಕಿ ಬ್ಯಾಟಿಂಗ್‌ಗೆ ಸನ್‌ರೈಸರ್ಸ್‌ ಬರ್ನ್‌ ಆಗಿದೆ. ಹೈದರಾಬಾದ್‌ ವಿರುದ್ಧ ಲಕ್ನೋ 5 ವಿಕೆಟ್‌ಗಳ (SRH vs LSG) ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿತು. ಲಕ್ನೋ ಸೂಪರ್‌ ಜೈಂಟ್ಸ್‌ 16.1 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಪ್ಯಾಟ್‌ ಕಮ್ಮಿನ್ಸ್‌ ಪಡೆ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಅಬ್ಬರಿಸಿದಂತೆ ಕಾಣಲಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಟ್ರಾವಿಸ್‌ ಹೆಡ್‌ ಆರಂಭಿಕ ಆಟ ಭರವಸೆ ಮೂಡಿಸಿತ್ತು. ಆದರೆ, ಅವರಿಗೆ ಸಾಥ್‌ ನೀಡುವಲ್ಲಿ ಇತರೆ ಬ್ಯಾಟರ್‌ಗಳು ವಿಫಲರಾದರು. ಹೆಡ್‌ 28 ಬಾಲ್‌ಗೆ 5 ಫೋರ್‌, 3 ಸಿಕ್ಸರ್‌ಗಳೊಂದಿಗೆ 47 ರನ್‌ ಗಳಿಸಿ ಔಟಾದರು. ಇದಕ್ಕೂ ಮುನ್ನ ಅಭಿಷೇಕ್‌ ಶರ್ಮಾ (6), ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್‌ ಕಿಶನ್‌ ಸೊನ್ನೆ ಸುತ್ತಿ ನಿರ್ಗಮಿಸಿದ್ದು, ನಿರಾಸೆ ಮೂಡಿಸಿತು.

    ನಿತೀಶ್ ಕುಮಾರ್ ರೆಡ್ಡಿ 32, ಹೆನ್ರಿಕ್ ಕ್ಲಾಸೆನ್ 26, ಅನಿಕೇತ್ ವರ್ಮಾ 36, ಪ್ಯಾಟ್ ಕಮ್ಮಿನ್ಸ್ 18, ಹರ್ಷಲ್ ಪಟೇಲ್ 12 ರನ್‌ ಗಳಿಸಿದರು. ಲಕ್ನೋ ಪರ ಶಾರ್ದೂಲ್ ಠಾಕೂರ್ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಆವೇಶ್ ಖಾನ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್‌, ಪ್ರಿನ್ಸ್ ಯಾದವ್ ತಲಾ 1 ವಿಕೆಟ್‌ ಕಿತ್ತರು.

    ಹೈದರಾಬಾದ್‌ ನೀಡಿದ 191 ರನ್‌ ಗುರಿ ಬೆನ್ನತ್ತಿದ ಲಕ್ನೋಗೆ 4 ರನ್‌ ಇರುವಾಗಲೇ ಐಡೆನ್ ಮಾರ್ಕ್ರಾಮ್ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದ್ದು, ಆರಂಭಿಕ ಆಘಾತ ನೀಡಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ ತಂಡದ ಗೆಲುವನ್ನು ಖಚಿತಪಡಿಸಿತು. ಮಾರ್ಷ್‌ 31 ಬಾಲ್‌ಗೆ 52 ರನ್‌ (7 ಫೋರ್‌, 2 ಸಿಕ್ಸರ್)‌ ಸಿಡಿಸಿ ತಂಡಕ್ಕೆ ನೆರವಾದರು. ಪೂರನ್‌ ಹೊಡಿಬಡಿ ಆಟದಿಂದ ಗಮನ ಸೆಳೆದರು. ಕೇವಲ 26 ಬಾಲ್‌ಗೆ 6 ಫೋರ್‌ ಮತ್ತು 6 ಸಿಕ್ಸರ್‌ನೊಂದಿಗೆ 70 ರನ್‌ ಕಲೆಹಾಕಿ ಅಬ್ಬರಿಸಿದರು.

    ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದ ಕ್ಯಾಪ್ಟನ್‌ ರಿಷಬ್‌ ಪಂತ್‌ (15) ಇಂದು ಸಾಮಾಧಾನಕರ ಆಟ ಆಡದರು. ಡೇವಿಡ್ ಮಿಲ್ಲರ್ 13, ಅಬ್ದುಲ್ ಸಮದ್ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

  • IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

    IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

    ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌-2025ರ ಆವೃತ್ತಿಗಾಗಿ ಟೀಂ ಇಂಡಿಯಾ ಆಟಗಾರ ರಿಷಬ್‌ ಪಂತ್‌ (Rishabh Pant) ಅವರನ್ನು ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

    ಕೆ.ಎಲ್‌ ರಾಹುಲ್‌ (KL Rahul) ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ವಿಂಡೀಸ್‌ನ ಸ್ಫೋಟಕ ಆಟಗಾರ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವದ ಹೊಣೆ ನೀಡಲಾಗುತ್ತದೆ ಎಂಬ ವದಂತಿ ಹರಿದಾಡಿತ್ತು. ಆದ್ರೆ ವದಂತಿಗಳಿಗೆ ಬ್ರೇಕ್‌ ಹಾಕಿರುವ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಅವರು, ರಿಷಬ್‌ ಅವರಿಗೆ ನಾಯಕತ್ವದ ಹೊಣೆ ನೀಡಿದ್ದಾರೆ. ರಿಷಬ್‌ಗೆ ಜೆರ್ಸಿ ವಿತರಿಸಿದ ಫೋಟೋದೊಂದಿಗೆ ಮಾಹಿತಿಯನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ಇತಿಹಾಸದಲ್ಲೇ ದಾಖಲೆ ಬೆಲೆಗೆ ಹರಾಜು:
    2025ರ ಐಪಿಎಲ್‌ (IPL 2025) ಆವೃತ್ತಿಗೆ ನಡೆದ ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಬೆಲೆಗೆ ಹರಾಜಾದರು. 20.50 ಕೋಟಿ ರೂ.ವರೆಗೆ ಲಕ್ನೋ ತಂಡ ಬಿಡ್‌ ಮಾಡಿತ್ತು. ಈ ವೇಳೆ ಡೆಲ್ಲಿ ತಂಡ ಆರ್‌ಟಿಎಂ ಆಯ್ಕೆಗೆ ಮುಂದಾಯಿತು. ಪಂತ್‌ ಬಿಟ್ಟುಕೊಡದಿರಲು ಪಟ್ಟು ಹಿಡಿದ ಸಂಜೀವ್‌ ಗೋಯೆಂಕಾ ಏಕಾಏಕಿ 27 ಕೋಟಿ ರೂ.ಗಳಿಗೆ ಬೆಲೆ ಏರಿಸಿದರು. ದುಬಾರಿ ಬೆಲೆಗೆ ಪಂತ್‌ರನ್ನ ಖರೀದಿಸಲು ಡೆಲ್ಲಿ ಫ್ರಾಂಚೈಸಿ ಹಿಂದೆ ಸರಿಯಿತು. ಹಾಗಾಗಿ ಪಂತ್‌ 27 ಕೋಟಿ ರೂ.ಗಳಿಗೆ ಲಕ್ನೋ ತಂಡದ ಪಾಲಾದರು.

    ಅತಿಹೆಚ್ಚು ರನ್‌ ಗಳಿಸಿದ 22ನೇ ಆಟಗಾರ:
    ಐಪಿಎಲ್‌ ವೃತ್ತಿ ಜೀವನದಲ್ಲಿ ಈವರೆಗೆ 111 ಪಂದ್ಯಗಳನ್ನಾಡಿರುವ ರಿಷಬ್‌‌ ಪಂತ್‌ 3,248 ರನ್‌ ಗಳಿಸಿದ್ದಾರೆ. ಇದರಲ್ಲಿ 18 ಅರ್ಧಶತಕ ಹಾಗೂ 1 ಶತಕವೂ ಸೇರಿದೆ. ಈ ಮೂಲಕ ಅತಿಹೆಚ್ಚು ರನ್‌ ಗಳಿಸಿದ 22ನೇ ಆಟಗಾರನಾಗಿದ್ದಾರೆ. ಇದನ್ನೂ ಓದಿ: Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    2022ರಲ್ಲಿ ಐಪಿಎಲ್‌ಗೆ ಫ್ರಾಂಚೈಸಿ ಪದಾರ್ಪಣೆ:
    ಇನ್ನೂ 2022ರ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿ ಆರಂಭದ 2 ಆವೃತ್ತಿಗಳಲ್ಲಿ (2022, 2023) ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. 2024ರ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಲಕ್ನೊ ತಂಡ ಹೊರಬಿದ್ದಿತು. ಹೀಗಾಗಿ ನಾಯಕತ್ವ ಬದಲಿಸುವ ತೀರ್ಮಾನಕ್ಕೆ ಸಂಜೀವ್‌ ಗೋಯೆಂಕಾ ಮುಂದಾದರು. ಇದನ್ನೂ ಓದಿ: ಸದ್ದಿಲ್ಲದೇ ಸಪ್ತಪದಿ ತುಳಿದ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್ ಚೋಪ್ರಾ

  • ಆಸೀಸ್‌ಗೆ ರಿಷಬ್‌ ʻಪಂಚ್‌ʼ – ಭಾರತಕ್ಕೆ 145 ರನ್‌ಗಳ ಮುನ್ನಡೆ

    ಆಸೀಸ್‌ಗೆ ರಿಷಬ್‌ ʻಪಂಚ್‌ʼ – ಭಾರತಕ್ಕೆ 145 ರನ್‌ಗಳ ಮುನ್ನಡೆ

    ಸಿಡ್ನಿ: ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (BGT Test Series) ಅಂತಿಮ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ವೇಗಿಗಳು ಹಿಡಿತ ಸಾಧಿಸಿದ್ದಾರೆ.

    ಮತ್ತೊಂದೆಡೆ ರಿಷಬ್‌ ಪಂತ್‌ (Rishabh Pant) ಅವರ ಸಿಡಿಲಬ್ಬರದ ಅರ್ಧಶತಕ ಬ್ಯಾಟಿಂಗ್‌ ನೆರವಿನಿಂದ ದಿನಾಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿರುವ ಭಾರತ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ಮೊದಲ ದಿನದ ಅಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿತು. ಇಂದು 2ನೇ ದಿನದ ಆಟ ಆರಂಭಿಸಿದ ಆಸೀಸ್‌ 181 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ 4 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ದಿನದ ಅಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದೆ. ಈ ಮೂಲಕ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ರಿಷಬ್‌ ಸ್ಫೋಟಕ ಫಿಫ್ಟಿ – ವಿಶೇಷ ಸಾಧನೆ:
    ಸಂಕಷ್ಟದಲ್ಲಿದ್ದ ಭಾರತಕ್ಕೆ ರಿಷಬ್‌ ಪಂತ್‌ ಅವರ ಸ್ಫೋಟಕ ಅರ್ಧಶತಕ ಬಲ ತುಂಬಿದೆ. ಆಸೀಸ್‌ ಬೌಲರ್‌ಗಳನ್ನು ಚೆಂಡಾಡಿದ ಪಂತ್‌‌ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವೇಗಿಗಳ ಅಬ್ಬರಕ್ಕೆ ಆಸಿಸ್‌ ತತ್ತರ; 181 ರನ್‌ಗಳಿಗೆ ಆಲೌಟ್‌

    ಹೌದು. 2022ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಪಂತ್‌, ಇದೀಗ ಆಸೀಸ್‌ ವಿರುದ್ಧ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ನಂ.1 ಹಾಗೂ ನಂ.2 ಭಾರತೀಯ ಬ್ಯಾಟರ್‌ ರಿಷಬ್‌ ಪಂತ್‌ ಅವರೇ ಆಗಿದ್ದಾರೆ. 1982ರಲ್ಲಿ ಪಾಕ್‌ ವಿರುದ್ಧ ಕಪಿಲ್‌ ದೇವ್‌ (30 ಎಸೆತ), 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಶಾರ್ದೂಲ್‌ ಠಾಕೂರ್‌ (31 ಎಸೆತ), 2024ರಲ್ಲಿ ಬಾಂಗ್ಲಾ ವಿರುದ್ಧ ಯಶಸ್ವಿ ಜೈಸ್ವಾಲ್‌ (31 ಎಸೆತ) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.

    ಇನ್ನುಳಿದಂತೆ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ 22ರನ್‌, ಕೆ.ಎಲ್‌ ರಾಹುಲ್‌ ಮತ್ತು ಶುಭಮನ್‌ ಗಿಲ್‌ ತಲಾ 13 ರನ್‌, ವಿರಾಟ್‌ ಕೊಹ್ಲಿ 6 ರನ್‌, ನಿತೀಶ್‌ ರೆಡ್ಡಿ 4 ರನ್‌ ಗಳಿಸಿದರು. ರವೀಂದ್ರ ಜಡೇಜಾ ಅಜೇಯ 8 ರನ್‌, ವಾಷಿಂಗ್ಟನ್‌ ಸುಂದರ್‌ ಅಜೇಯ 6 ರನ್‌ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ಬೊಲ್ಯಾಂಡ್‌ ಬೊಂಬಾಟ್‌ ಬೌಲಿಂಗ್‌:
    ಇದೇ ಚೊಚ್ಚಲ ಟೆಸ್ಟ್‌ ಸರಣಿಯನ್ನಾಡುತ್ತಿರುವ ಸ್ಕಾಟ್‌ ಬೊಲ್ಯಾಂಡ್‌ ಅಂತಿಮ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸಿದ್ದಾರೆ. 2ನೇ ದಿನದ ಅಂತ್ಯಕ್ಕೆ 13 ಓವರ್‌ಗಳಲ್ಲಿ 42 ರನ್‌ ಬಿಟ್ಟುಕೊಟ್ಟ ಬೊಲ್ಯಾಂಡ್‌ 4 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌, ಬಿಯು ವೆಬ್‌ಸ್ಟರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ:  ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

  • ICC Test Ranking | ಆರಕ್ಕೇರಿದ ಪಂತ್, ಟಾಪ್‌-20 ಪಟ್ಟಿಯಿಂದಲೂ ಕೊಹ್ಲಿ ಔಟ್‌

    ICC Test Ranking | ಆರಕ್ಕೇರಿದ ಪಂತ್, ಟಾಪ್‌-20 ಪಟ್ಟಿಯಿಂದಲೂ ಕೊಹ್ಲಿ ಔಟ್‌

    ಮುಂಬೈ: ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಐಸಿಸಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ (ICC Test Ranking) 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

    ಇನ್ನೂ 3ನೇ ಸ್ಥಾನದಲ್ಲಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal) 4ನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರೆ, 8 ಸ್ಥಾನ ಕುಸಿತ ಕಂಡಿರುವ ವಿರಾಟ್‌ ಕೊಹ್ಲಿ (Virat Kohli) ಕಳೆದ 10 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಟಾಪ್‌-20 ರ‍್ಯಾಂಕ್‌ನಿಂದಲೇ ಹೊರಬಿದ್ದಿದ್ದಾರೆ. 750 ರೇಟಿಂಗ್ಸ್‌ ಪಡೆದಿರುವ ರಿಷಬ್‌ ಪಂತ್‌ 5 ಸ್ಥಾನಗಳಲ್ಲಿ ಏರಿಕೆ ಕಂಡು 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನೂ 3ನೇ ಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್‌ 777 ರೇಟಿಂಗ್ಸ್‌ನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದ್ರೆ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ವಿರಾಟ್‌ 655 ರೇಟಿಂಗ್ಸ್‌ನೊಂದಿಗೆ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದನ್ನೂ ಓದಿ: WTC Points Table | ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ – ಆಸೀಸ್‌ಗೆ ಅಗ್ರಸ್ಥಾನ

    ಬಿದ್ದು ಎದ್ದು ಗೆದ್ದ ಪಂತ್‌:
    2022 ಡಿಸೆಂಬರ್‌ 31ರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಪಂಥ್‌ ಬದುಕುಳಿದಿದ್ದೇ ಪವಾಡವಾಗಿತ್ತು. ಅವರ ಸ್ಥಿತಿ ನೋಡಿ ಪಂತ್‌ಗೆ ಮುಂದೆ ನಡೆದಾಡಲು ಆಗಬಹುದೇ ಎಂಬ ಸಂದೇಹವೂ ಕೆಲವರಲ್ಲಿ ಮೂಡಿತ್ತು. ಛಲಬಿಡದ ಪಂತ್‌ ನಿರೀಕ್ಷೆ ಮೀರಿ ಚೇತರಿಸಿಕೊಂಡರು. ಒಂದೂವರೆ ವರ್ಷ ಆಗುವುದರೊಳಗೆ ಕ್ರೀಡಾಂಗಣಕ್ಕೆ ಮರಳಿದರು. 2024ರ ಐಪಿಎಲ್‌ ಟೂರ್ನಿಮೂಲಕ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಿದ ಪಂತ್‌ ಬಳಿಕ ಟೀಂ ಇಂಡಿಯಾ ಪರವಾಗಿ ಪ್ರತಿನಿಧಿಸಿದ್ದು ಟಿ20 ವಿಶ್ವಕಪ್‌ನಲ್ಲಿ. ಆ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಅಡಿದರು. ಪುನರಾಗಮನದ ಬಳಿಕ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಸರಣಿ ಆಡಿದರು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    ನ್ಯೂಜಿಲೆಂಡ್‌ ವಿರುದ್ಧ ನಡೆದ 3ನೇ ಟೆಸ್ಟ್‌ನ 2ನೇ ದಿನ ಮೊದಲ ಇನಿಂಗ್ಸ್‌ನಲ್ಲಿ ಪಂತ್ ಆಡಲು ಕಣಕ್ಕಿಳಿದಾಗ, ಭಾರತ ಸಂಕಷ್ಟದಲ್ಲಿತ್ತು. ಆಗ ಎದುರಾಳಿಗಳ ಅಸ್ತ್ರ ಆಜಾಜ್ ಪಟೇಲ್ ಅವರನ್ನೂ ಲೆಕ್ಕಿಸಲಿಲ್ಲ. ಅವರ 60 ರನ್‌ಗಳ ನೆರವಿನಿಂದ ಭಾರತಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು. 2ನೇ ಇನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ಕಿವೀಸ್‌ 147 ರನ್‌ಗಳ ಸಣ್ಣ ಗುರಿ ನೀಡಿತ್ತು. ಆದ್ರೆ ಭಾರತ 18 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇಂಥ ಪರಿಸ್ಥಿತಿಯಲ್ಲೂ ಬೌಲರ್‌ಗಳನ್ನು ಬೆಂಡೆತ್ತಲು ಪಂತ್‌ ಮುಂದಾದರು. ಇದರಿಂದ ಭಾರತದ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಅರ್ಧಶತಕ ಗಳಿಸಿದ್ದ ಪಂತ್‌ ವಿವಾದಾತ್ಮಕ ಡಿಆರ್‌ಎಸ್‌ ತೀರ್ಪಿಗೆ ಔಟಾದರು. ಪಂತ್‌ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಉಳಿದ ಆಟಗಾರರು ಬ್ಯಾಕ್‌ ಟು ಬ್ಯಾಕ್‌ ಪೆವಿಲಿಯನ್‌ ಸೇರಿಕೊಂಡರು.

  • IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕ ರಿಷಬ್ ಪಂತ್ (Rishabh Pant) ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ. ಐಪಿಎಲ್‌ನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡಕ್ಕೆ ರಿಷಬ್‌ ಪಂತ್‌ ಕ್ಯಾಪ್ಟನ್‌ ಆಗ್ತಾರಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

    2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೆಗಾ ಹರಾಜಿನ ಮೊದಲು ಪಂತ್ ತಂಡಕ್ಕೆ ಆದ್ಯತೆಯ ಧಾರಣ ಎಂದು DC ಸಹ-ಮಾಲೀಕ ಪಾರ್ಥ್ ಜಿಂದಾಲ್ ಈ ಹಿಂದೆ ಭರವಸೆ ನೀಡಿದ್ದರು. ತಮ್ಮ ಫ್ರಾಂಚೈಸಿ ಖಂಡಿತವಾಗಿಯೂ ಪಂತ್‌ ಅವರನ್ನು ಉಳಿಸಿಕೊಳ್ಳುತ್ತದೆ ಎಂದಿದ್ದರು. ಅದರೆ, ಈಗ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    DC ಫ್ರಾಂಚೈಸಿ, ಪಂತ್ ಅವರನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ. ಆದರೆ, JSW ಮತ್ತು GMR ಐಪಿಎಲ್‌ಗಾಗಿ ಜವಾಬ್ದಾರಿಗಳನ್ನು ವಿಭಜಿಸುವುದರಿಂದ ಬದಲಾವಣೆ ಆಗಬಹುದು ಎನ್ನಲಾಗಿದೆ. GMR ಮತ್ತು JSW ತಲಾ ಎರಡು ವರ್ಷಗಳ ಕಾಲ ದೆಹಲಿ ಕ್ಯಾಪಿಟಲ್ಸ್ ಅನ್ನು ನಿರ್ವಹಿಸುತ್ತವೆ ಎಂದು ಘೋಷಿಸಿದ ನಂತರ ಈ ಚರ್ಚೆ ಹುಟ್ಟುಕೊಂಡಿದೆ.

    ಒಪ್ಪಂದದ ಪ್ರಕಾರ, GMR 2025 ಮತ್ತು 2026ರ ಐಪಿಎಲ್‌ ಋತುಗಳಿಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಅನ್ನು ನಿರ್ವಹಿಸುತ್ತದೆ. ಈ ಬದಲಾವಣೆಗಳಿಗೆ ಅನುಗುಣವಾಗಿ, ವೇಣುಗೋಪಾಲ್ ರಾವ್ ಮತ್ತು ಹೇಮಂಗ್ ಬದಾನಿ ಅವರನ್ನು ಕ್ರಮವಾಗಿ ಕ್ರಿಕೆಟ್ ನಿರ್ದೇಶಕ ಮತ್ತು ಡಿಸಿ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್‌ ಆರೋಪ

    ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿದಂತೆ ಇತರ ಐಪಿಎಲ್ ತಂಡಗಳು ಪಂತ್ ಅವರನ್ನು ನಾಯಕನನ್ನಾಗಿ ಮಾಡಲು ಆಸಕ್ತಿ ತೋರಿಸಿವೆ. ಇದು ಅವರ ಧಾರಣೆಗೆ ಕರೆ ತೆಗೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ ಮತ್ತಷ್ಟು ಒತ್ತಡವನ್ನು ಉಂಟುಮಾಡುತ್ತದೆ.

  • ಕ್ರಿಕೆಟಿಗ ರಿಷಬ್ ಪಂತ್ ಕುರಿತು ಸ್ಪಷ್ಟನೆ ನೀಡಿದ ನಟಿ ಊರ್ವಶಿ

    ಕ್ರಿಕೆಟಿಗ ರಿಷಬ್ ಪಂತ್ ಕುರಿತು ಸ್ಪಷ್ಟನೆ ನೀಡಿದ ನಟಿ ಊರ್ವಶಿ

    ಟಿ ಊರ್ವಶಿ ರೌಟೇಲಾ (Uravashi Rautela) ಮತ್ತು ರಿಷಬ್ ಪಂತ್  (Rishab Pant) ವಿಚಾರ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ರಿಷಬ್ ಪಂತ್ ಹೈಟ್ ಬಗ್ಗೆ ಊರ್ವಶಿ ಟೀಕೆ ಮಾಡಿದ್ದರು. ಇದಕ್ಕೆ ಪಂತ್ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಟೀಕೆಯ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅದು ಜಾಹೀರಾತು ಒಂದರ ಡೈಲಾಗ್. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಷಬ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಎಂದಿದ್ದಾರೆ.

    ಜಾಹೀರಾತುವೊಂದರಲ್ಲಿ ತನ್ನೊಂದಿಗೆ ಸ್ನೇಹದಲ್ಲಿದ್ದವರ ಹೈಟ್ ಬಗ್ಗೆ ಟೀಕಿಸಿರುವ ಊರ್ವಶಿ, ಕ್ರಿಕೆಟಿಗನೊಬ್ಬನ ಹೈಟ್ ನನ್ನ ಎದೆಮುಟ್ಟುವಷ್ಟೂ ಇಲ್ಲ ಎಂದು ಪರೋಕ್ಷವಾಗಿ ಕುಳ್ಳ ಎಂದಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಊರ್ವಶಿಯನ್ನೂ ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಹಿಂದೆ ರಿಷಬ್ ಪಂತ್ ಅವರಿಗೆ ಕಾರು ಅಪಘಾತವಾಗಿತ್ತು. ಮುಂಬೈನ(Mumbai)  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಹಿಂದೆಯೂ ಊರ್ವಶಿ ಬಿದ್ದಿದ್ದರು. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ. ಜೊತೆಗೆ ಊರ್ವಶಿಯನ್ನು ತರಾಟೆಗೆ ತೆಗೆದುಕೊಂಡದ್ದರು.

    ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಯಿತು. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

     

    ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿತ್ತು. ಆಗಲೂ ಊರ್ವಶಿ ಅವರು ರಿಷಬ್ ಅವರನ್ನು ಹಿಂಬಾಲಿಸಿದ್ದರು. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು.

  • ಕ್ರಿಕೆಟಿಗ ರಿಷಬ್ ಪಂತ್ ಹೈಟ್ ಬಗ್ಗೆ ಕಾಮೆಂಟ್ ಮಾಡಿದ ನಟಿ ಊರ್ವಶಿ

    ಕ್ರಿಕೆಟಿಗ ರಿಷಬ್ ಪಂತ್ ಹೈಟ್ ಬಗ್ಗೆ ಕಾಮೆಂಟ್ ಮಾಡಿದ ನಟಿ ಊರ್ವಶಿ

    ಟಿ ಊರ್ವಶಿ ರೌಟೇಲಾ (Uravashi Rautela) ಮತ್ತೆ ರಿಷಬ್ ಪಂತ್  (Rishab Pant) ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ತನ್ನೊಂದಿಗೆ ಸ್ನೇಹದಲ್ಲಿದ್ದವರ ಹೈಟ್ ಬಗ್ಗೆ ಟೀಕಿಸಿರುವ ಊರ್ವಶಿ, ಕ್ರಿಕೆಟಿಗನೊಬ್ಬನ ಹೈಟ್ ನನ್ನ ಎದೆಮುಟ್ಟುವಷ್ಟೂ ಇಲ್ಲ ಎಂದು ಪರೋಕ್ಷವಾಗಿ ಕುಳ್ಳ ಎಂದಿದ್ದಾರೆ. ಊರ್ವಶಿ ವಿಚಾರವಾಗಿ ಪಂತ್ ಸುಮ್ಮನಿದ್ದರೂ, ಊರ್ವಶಿ ಮಾತ್ರ ಸುಮ್ಮನಿರುವಂತೆ ಕಾಣುತ್ತಿಲ್ಲ.

    ಈ ಹಿಂದೆ ರಿಷಬ್ ಪಂತ್ ಅವರಿಗೆ ಕಾರು ಅಪಘಾತವಾಗಿತ್ತು. ಮುಂಬೈನ(Mumbai)  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಹಿಂದೆಯೂ ಊರ್ವಶಿ ಬಿದ್ದಿದ್ದರು. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ. ಜೊತೆಗೆ ಊರ್ವಶಿಯನ್ನು ತರಾಟೆಗೆ ತೆಗೆದುಕೊಂಡದ್ದರು.

    ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಯಿತು. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

     

    ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿತ್ತು. ಆಗಲೂ ಊರ್ವಶಿ ಅವರು ರಿಷಬ್ ಅವರನ್ನು ಹಿಂಬಾಲಿಸಿದ್ದರು. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು.

  • IPL 2024: ಮಹಿ ಬ್ಯಾಟಿಂಗ್‌ ಕಿಚ್ಚಿಗೂ ಬೆಚ್ಚದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 20 ರನ್‌ಗಳ ಜಯ

    IPL 2024: ಮಹಿ ಬ್ಯಾಟಿಂಗ್‌ ಕಿಚ್ಚಿಗೂ ಬೆಚ್ಚದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 20 ರನ್‌ಗಳ ಜಯ

    – ಕೊನೇ ಓವರ್‌ನಲ್ಲಿ  20 ರನ್‌ ಚಚ್ಚಿದ ಮಹಿ
    – ಪುಟಿದೆದ್ದ ಪಂತ್‌ – ವಾರ್ನರ್‌, ಶಾ ಬ್ಯಾಟಿಂಗ್‌ಗೆ ಕಂಗಾಲಾದ ಸಿಎಸ್‌ಕೆ

    ವಿಶಾಖಪಟ್ಟಣಂ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ಮಿಂಚಿನ ಬ್ಯಾಟಿಂಗ್‌ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2024ರ ಐಪಿಎಲ್‌ ಆವೃತ್ತಿಯಲ್ಲಿ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ತಂಡ ಗೆಲುವಿನ ಖಾತೆ ತೆರೆದಿದೆ.

    ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿತ್ತು. 192 ರನ್‌ಗಳ ಗುರಿ ಪಡೆ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 171 ರನ್‌ ಬಾರಿಸಿ ಸೋಲೊಪ್ಪಿಕೊಂಡಿತು.

    ಡೆಲ್ಲಿ ಕ್ಯಾಪಿಟಲ್ಸ್‌, ಸಿಎಸ್‌ಕೆ ನಡುವಿನ ಪಂದ್ಯ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಡೆವಿಡ್ ವಾರ್ನರ್ , ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಅಬ್ಬರ, ಪತಿರಾಣ ಅದ್ಬುತ ಕ್ಯಾಚ್‌, 42ನೇ ವಯಸ್ಸಿನಲ್ಲೂ ಚಿರಯುವಕನಂತೆ ಮಹಿ ಸಿಕ್ಸರ್‌ ಬೌಂಡರಿ ಆಟ ಇವೆಲ್ಲವೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಕೊನೇ ಓವರ್‌ನಲ್ಲಿ ಸಿಕ್ಸರ್‌-ಬೌಂಡರಿ ಚಚ್ಚಿದ ಮಹಿ ಒಂದೇ ಓವರ್‌ನಲ್ಲಿ 20 ರನ್‌ ಸಿಡಿಸಿದರು.

    ಆರಂಭದಲ್ಲೇ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ್ದು ಸಿಎಸ್‌ಕೆ ತಂಡದ ಸೋಲಿಗೆ ಕಾರಣವಾಯಿತು. ಮೊದಲ 2.5 ಓವರ್‌ಗಳಲ್ಲೇ ಕೇವಲ 7 ರನ್‌ಗಳಿಗೆ 2 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ಡೇರಿಲ್‌ ಮಿಚೆಲ್‌, ಅಜಿಂಕ್ಯಾ ರಹಾನೆ ಸ್ಫೋಟಕ ಬ್ಯಾಟಿಂಗ್‌ನಿಂದ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರೂ ವಿಫಲವಾಯಿತು.

    ಸಿಎಸ್‌ಕೆ ಪರ‌ ನಾಯಕ ರುತುರಾಜ್‌ 1 ರನ್‌, ರಚಿನ್‌ ರವಿಂದ್ರ 12 ಎಸೆತಗಳಲ್ಲಿ 2 ರನ್‌, ಅಜಿಂಕ್ಯಾ ರಹಾನ್‌ 45 ರನ್‌, ಡೇರಿಲ್‌ ಮಿಚೆಲ್‌ 34 ರನ್‌, ಶಿವಂ ದುಬೆ 18 ರನ್‌, ರವೀಂದ್ರ ಜಡೇಜಾ 21 ರನ್‌ ಗಳಿಸಿದರೆ, 231 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಎಂ,ಎಸ್‌ ಧೋನಿ 16 ಎಸೆತಗಳಲ್ಲಿ 37 ರನ್‌ ಬಾರಿಸಿದರು.

    ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಡೆಲ್ಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್‌ ಶುರು ಮಾಡಿದ ಡೆಲ್ಲಿ ತಂಡ ಸಿಎಸ್‌ಕೆ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಮೊದಲ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಡೇವಿಡ್‌ ವಾರ್ನರ್‌ ಜೋಡಿ 9.3 ಓವರ್‌ಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿತ್ತು. ಇದು ಡೆಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಸ್ಫೋಟಕ ಬ್ಯಾಟಿಂಗ್‌ ಮೂಲಕ ಅರ್ಧಶತಕ ಸಿಡಿಸಿದ್ದ ವಾರ್ನರ್‌ ಮತ್ತೊಂದು ಸ್ಫೋಟಕ ಹೊಡೆತಕ್ಕೆ ಮುಂದಾಗಿ ಮಥೀಶ ಪತಿರಾಣಗೆ ಕ್ಯಾಚ್ ನೀಡಿದರು.

    ಡೇವಿಡ್ ವಾರ್ನರ್ 35 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಪೃಥ್ವಿ ಶಾ ವಿಕೆಟ್ ಪತನಗೊಂಡಿತು ಕೇವಲ 27 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 43 ರನ್ ಸಿಡಿಸಿ ಶಾ ಔಟಾದರು. ಬಳಿಕ ಕಣಕ್ಕಿಳಿದ ನಾಯಕ ರಿಷಬ್ ಪಂತ್ ಬ್ಯಾಟಿಂಗ್ ಸಹ ಡೆಲ್ಲಿ ತಂಡದ ಕೈಹಿಡಿಯಿತು. 14 ದಿನಗಳ ಬಳಿಕ ಐಪಿಎಲ್‌ ಅಂಗಳದಲ್ಲಿ ಆಡುತ್ತಿರುವ ಪಂತ್‌ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪಂತ್ 31 ಎಸೆತದಲ್ಲಿ 51 ರನ್ (3 ಸಿಕ್ಸರ್‌, 4 ಬೌಂಡರಿ) ಸಿಡಿಸಿದರು.

    ಆರಂಭಿಕರು ಹಾಗೂ ಪಂತ್‌ ವಿಕೆಟ್‌ ಕಳೆದುಕೊಂಡ ಬಳಿಕ ಡೆಲ್ಲಿ ತಂಡದ ರನ್‌ ವೇಗದ ಗತಿಯೂ ಕಡಿಮೆಯಾಯಿತು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಬ್ಬರದಿಂದ ಡೆಲ್ಲಿ 191 ರನ್‌ಗಳ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.

    ಸಿಎಸ್‌ಕೆ ಪರ ಅದ್ಭುತ ಕ್ಯಾಚ್ ಹಿಡಿದ ಮಥೀಶ ಪತಿರಾಣ 3 ವಿಕೆಟ್ ಕಬಳಿಸಿ ಮಿಂಚಿದರು. ರವೀಂದ್ರ ಜಡೇಜಾ ಹಾಗೂ ಮುಸ್ತಫಿಜೂರ್‌ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಐಪಿಎಲ್‍ಗೆ ರಿಷಬ್ ಪಂತ್ ಫಿಟ್ – ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಲ್ಲಿ ಸಂಭ್ರಮ

    ಐಪಿಎಲ್‍ಗೆ ರಿಷಬ್ ಪಂತ್ ಫಿಟ್ – ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಲ್ಲಿ ಸಂಭ್ರಮ

    ನವದೆಹಲಿ: ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ರಿಷಬ್ ಪಂತ್‍ಗೆ (Rishabh Pant) 2024ರ ಐಪಿಎಲ್‍ಗೂ ಮುನ್ನವೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy) ಫಿಟ್‍ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡಿದೆ. ಈ ಮೂಲಕ ಐಪಿಎಲ್ 2024ರಲ್ಲಿ (IPL 2024) ಆಡಲು ಅವರು ಅರ್ಹರಾಗಿದ್ದಾರೆ.

    ಈ ವರ್ಷದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಈ ಬಾರಿಯ ಐಪಿಎಲ್‍ನಲ್ಲಿ ಆಡಲಿದ್ದಾರೆ ಎಂದು ಹೇಳಿಕೊಂಡಿತ್ತು. ಬಳಿಕ ಪಂತ್ ಅವರ ಫಿಟ್‍ನೆಸ್ ಕ್ಲಿಯರೆನ್ಸ್ ಸಿಗದ ಕಾರಣ ಐಪಿಎಲ್ 2024ರ ತಂಡದಲ್ಲಿ ಪಂತ್ ಅವರನ್ನು ಹೆಸರಿಸಲಾಗಿರಲಿಲ್ಲ. ಇದೀಗ ಪಂತ್ ಅವರ ಫಿಟ್‍ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಸಿಕ್ಕಿದ್ದು ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಐತಿಹಾಸಿಕ ಸಾಧನೆ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ನ್ಯೂಸ್‌ – ವಾರ್ಷಿಕ ಸಂಬಳ ಹೊರತುಪಡಿಸಿ ವಿಶೇಷ ವೇತನ ಘೋಷಣೆ

    ಕಳೆದ ವರ್ಷ ಜ.1ರ ನಸುಕಿನ ವೇಳೆಯಲ್ಲಿ ಭೀಕರ ಕಾರು ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫಿಟ್‍ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆದುಕೊಂಡಿದ್ದಾರೆ.

    ಪಂತ್ 2023 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ವಂಚಿತರಾದರು. ಅವರ ಕಠಿಣ ಪರಿಶ್ರಮದಿಂದ ಕ್ರಿಕೆಟ್‍ಗೆ ಮರಳಲು ಇದೀಗ ಸಮರ್ಥರಾಗಿದ್ದಾರೆ. ಇದನ್ನೂ ಓದಿ: ಕೊನೇ 30 ಎಸೆತಗಳಲ್ಲಿ 72 ರನ್‌; ಹರ್ಮನ್‌ಪ್ರೀತ್‌ ಬೆಂಕಿ ಬ್ಯಾಟಿಂಗ್‌ – ಮುಂಬೈಗೆ 7 ವಿಕೆಟ್‌ಗಳ ಜಯ

  • IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    ಮುಂಬೈ: ಡಿಸೆಂಬರ್‌ನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೂ (IPL 2024 Auction) ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 11 ಆಟಗಾರರನ್ನ ಬಿಡುಗಡೆ ಮಾಡಿದ್ದು, 16 ಆಟಗಾರರನ್ನ ಉಳಿಸಿಕೊಂಡಿದೆ.

    ವಿಶೇಷವೆಂದರೆ ಕಳೆದ ಡಿಸೆಂಬರ್‌ 30 ರಂದು ಕಾರು ಅಪಘಾತದಲ್ಲಿ ಗಾಯಗೊಂಡು 2022ರ ಐಪಿಎಲ್‌ನಿಂದ (IPL 2022) ಹೊರಗುಳಿದಿದ್ದ ರಿಷಬ್‌ ಪಂತ್‌ 2024ರ ಐಪಿಎಲ್‌ನಲ್ಲಿ (IPL 2024) ಮತ್ತೆ ಪ್ಯಾಡ್‌ ಕಟ್ಟಲಿದ್ದಾರೆ. ರಿಷಬ್‌ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, 17ನೇ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

    ಇನ್ನೂ ಕನ್ನಡಿಗ ಮನಿಷ್‌ ಪಾಂಡೆ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ವಿವಾದಕ್ಕೆ ಗುರಿಯಾಗಿದ್ದ ಮಿಚೆಲ್‌ ಮಾರ್ಷ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದನ್ನೂ ಓದಿ: IPL 2024 Retention: ಮುಂಬೈ ಫ್ಯಾನ್ಸ್‌ಗೆ ಬಿಗ್ ಶಾಕ್ – ಟೈಟಾನ್ಸ್‌ನಲ್ಲೇ ಉಳಿದ ಪಾಂಡ್ಯ

    2023ರ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 14ರಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. -0.808 ರನ್‌ರೇಟ್‌ ಹಾಗೂ 10 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿದುಕೊಂಡಿತ್ತು.

    ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು:
    ರಿಷಬ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಅಭಿಷೇಕ್‌ ಪೊರೆಲ್‌, ಅಕ್ಷರ್‌ ಪಟೇಲ್‌, ಲಲಿತ್‌ ಯಾದವ್‌, ಯಶ್‌ ಧುಲ್‌, ಪ್ರವೀಣ್ ದುಬೆ, ವಿಕ್ಕಿ, ಅನ್ರಿಚ್ ನಾರ್ಟ್ಜೆ, ಕುಲ್ದೀಪ್‌ ಯಾದವ್‌, ಲುಂಗಿ ಎನ್‌ಗಿಡಿ, ಖಲೀಲ್ ಅಹಮದ್, ಇಶಾತ್‌ ಶರ್ಮಾ, ಮುಕೇಶ್‌ ಕುಮಾರ್‌. ಇದನ್ನೂ ಓದಿ: IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್‌

    ಡೆಲ್ಲಿ ಕ್ಯಾಪಿಟಲ್ಸ್‌ ಬಿಡುಗಡೆ ಮಾಡಿದ ಆಟಗಾರರು:
    ರಿಲೀ ರೊಸ್ಸೌ, ಚೇತನ್ ಸಕರಿಯಾ, ರೋವ್ಮನ್ ಪೊವೆಲ್, ಮನೀಷ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಅಮನ್ ಖಾನ್, ಪ್ರಿಯಮ್ ಗಾರ್ಗ್.

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಇದರಿಂದ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.