Tag: ರಿಲೇಶನ್ ಶಿಪ್

  • ಪವಿತ್ರಾ ಲೋಕೇಶ್ ಗೆ ಪ್ರೀತಿಯಿಂದ ‘ಅಮ್ಮು’ ಎಂದು ಕರೆಯುತ್ತೇನೆ : ನಟ ನರೇಶ್

    ಪವಿತ್ರಾ ಲೋಕೇಶ್ ಗೆ ಪ್ರೀತಿಯಿಂದ ‘ಅಮ್ಮು’ ಎಂದು ಕರೆಯುತ್ತೇನೆ : ನಟ ನರೇಶ್

    ನ್ನಡದ ಹೆಸರಾಂತ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ತಮ್ಮ ರಿಲೇಷನ್ ಶಿಪ್ (Relationship) ಬಗ್ಗೆ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಸಿಕ್ಸ್ತ್ ಸೆನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ‘ಆಕಾಶ ಬಿದ್ದರೂ, ಭೂಮಿ ಬಾಯ್ತೆರೆದರೂ ಒಟ್ಟಿಗೆ ಇರ್ತೆವೆ’ ಎಂದು ಹೇಳಿಕೊಂಡಿದ್ದಾರೆ. ಪ್ರೀತಿಯಿಂದ ಪವಿತ್ರಾ ಲೋಕೇಶ್ ಅವರನ್ನು ತಾವು ‘ಅಮ್ಮು’ ಎಂದು ಕರೆಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಾವು ಇಬ್ಬರೂ ರಿಲೇಶನ್ ಶಿಪ್ ನಲ್ಲಿ ಇರುವುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.

    ಈ ಹಿಂದೆ ಪವಿತ್ರಾ ಲೋಕೇಶ್ (Pavitra Lokesh) ಜೊತೆಗಿನ ಸ್ನೇಹಕ್ಕೆ ತಮ್ಮದೇ ಆದಂತಹ ವ್ಯಾಖ್ಯಾನ ನೀಡಿದ್ದರು ನಟ ನರೇಶ್ (Naresh). ತಮ್ಮ ಲವ್ ಸ್ಟೋರಿ ಆಧರಿಸಿದ ‘ಮತ್ತೆ ಮದುವೆ’ (Matte Maduve)ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ನರೇಶ್, ‘ಎರಡು ಹೃದಯಗಳು ಒಂದಾಗುವುದೇ ಮದುವೆ’ ಎಂದು ಹೇಳಿದ್ದರು. ಮದುವೆ ವ್ಯವಸ್ಥೆ ಹಾಳಾಗಿ ಹೋಗಿದೆ. ಫ್ಯಾಮಿಲಿ ಕೋರ್ಟ್ ಸಂಖ್ಯೆ ಹೆಚ್ಚಾಗಿವೆ ಎಂದರೆ ಮದುವೆ (marriage) ಕುರಿತು ಯೋಚಿಸಬೇಕಿದೆ ಎಂದಿದ್ದರು ನರೇಶ್.

    ಇಂತಹ ಮಾತುಗಳನ್ನು ಆಡುವ ಮೂಲಕ ಪವಿತ್ರಾ ಲೋಕೇಶ್ ಜೊತೆಗಿನ ಬಾಂಧವ್ಯವನ್ನು ಒಪ್ಪಿಕೊಂಡಿದ್ದರು. ಮದುವೆ ಅಂದರೆ, ತಾಳಿ ಕಟ್ಟಲೇಬೇಕು ಅಂತೇನೂ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಎರಡು ಹೃದಯಗಳು ಬೆರತ ಮೇಲೆ ಅದುವೇ ಮದುವೆ ಎಂದು ಹೇಳುವ ಮೂಲಕ ಪವಿತ್ರಾ ಲೋಕೇಶ್ ಮತ್ತು ತಮ್ಮದು ಯಾವ ರೀತಿಯ ಸಂಬಂಧವೆಂದು ಅವರು ವಿವರಿಸಿದ್ದರು. ಇದನ್ನೂ ಓದಿ:ಎರಡೂವರೆ ದಶಕದ ಬಳಿಕ ಬಾಲಿವುಡ್ ಗೆ ಮರಳಿದ ಜ್ಯೋತಿಕಾ

    ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ತಮ್ಮ ರಿಯಲ್ ಲೈಫ್ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿರುವುದು ಟ್ರೈಲರ್ ನಲ್ಲಿ ಗೊತ್ತಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಮೊದಲ ನೋಟ ಸಂಚಲನ ಸೃಷ್ಟಿಸಿದೆ.

    ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ್ದೇಗೆ? ಆ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯೇ ವಿಲನ್ ಆಗಿ ನಿಂತಿರುವುದು. ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು. ಮೈಸೂರು ಹೋಟೆಲ್ ನಲ್ಲಿ ನಡೆದ ಹೈಡ್ರಾಮಾ ಕಹಾನಿ. ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳೋದು. ಜನ ಹೀಯಾಳಿಸೋದು. ಹೀಗೆ ನಾನಾ ವಿಷಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.

    ನರೇಶ್ ಲೈಫ್ ಸ್ಟೋರಿಯಲ್ಲಿ ಮೂರನೇ ಪತ್ನಿ ರಮ್ಯಾ ಅವರೇ ವಿಲನ್ ಆಗಿ ಕಾಣಿಸಿಕೊಂಡಿದ್ದರೆ, ಪವಿತ್ರಾ ಲೋಕೇಶ್ ಹಿನ್ನೆಲೆಯ ಕಥೆಯಲ್ಲಿ ವಿಲನ್ ಆಗಿ ನಿಂತವರು ಪತಿ ಸುಚೇಂದ್ರ ಪ್ರಸಾದ್ ಎನ್ನುವಂತೆ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾಗೆ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ಹಿನ್ನೆಲೆಯ ಪಾತ್ರಗಳೇ ಖಳನಾಯಕರಾ? ಟ್ರೈಲರ್ ನೋಡಿದ ಮೇಲೆ ಇಂಥದ್ದೊಂದು ಪ್ರಶ್ನೆಯು ಮೂಡದೇ ಇರದು. ನೈಜ ಪಾತ್ರಗಳನ್ನು ಹೋಲುವಂತೆಯೇ ದೃಶ್ಯಗಳನ್ನು ಕಟ್ಟಿರುವುದರಿಂದ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ನೆನೆಪಾಗುವುದು ಸುಳ್ಳಲ್ಲ.

  • ಬಾಯ್ ಫ್ರೆಂಡ್  ಜೊತೆಗಿನ ‘ಆ’ ಫೋಟೋ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ

    ಬಾಯ್ ಫ್ರೆಂಡ್ ಜೊತೆಗಿನ ‘ಆ’ ಫೋಟೋ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ

    ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಹಾಗೂ ನಟಿಯೂ ಆಗಿರುವ ಶ್ರುತಿ ಹಾಸನ್ (Shruti Haasan) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಖಾಸಗಿ ಕ್ಷಣದ ಆ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ, ಇಂಥ ಫೋಟೊ ಹಂಚಿಕೊಳ್ಳಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಹಲವು ವರ್ಷಗಳಿಂದ ಶ್ರುತಿ ಹಾಸನ್, ಶಾಂತನು (Shantanu) ಜೊತೆ ರಿಲೇಷನ್ ಶಿಪ್ ನಲ್ಲಿ (Relationship) ಇದ್ದಾರೆ. ಅಲ್ಲದೇ, ಮುಂಬೈನಲ್ಲಿ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ. ಶಾಂತನು ಜೊತೆಗಿನ ಸಂಬಂಧಕ್ಕಾಗಿ ಸಾಕಷ್ಟು ಸುದ್ದಿ ಕೂಡ ಮಾಡಿದ್ದಾರೆ. ಶಾಂತನು ಕುರಿತಾಗಿ ಆಗಾಗ್ಗೆ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಬೆಡ್ ರೂಮ್ ನಲ್ಲಿರುವ ಫೋಟೋ ಹಂಚಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

    ಇಬ್ಬರೂ ಅರೆನಗ್ನರಂತೆ ಕಾಣುವ ಫೋಟೋವೊಂದನ್ನು ಶೇರ್ ಮಾಡಿರುವ ಶ್ರುತಿ ಹಾಸನ್, ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶಾಂತನು ಮೇಲಿನ ಪ್ರೀತಿಯನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.

    ಶಾಂತನು ಮತ್ತು ಶ್ರುತಿ ಹಾಸನ್ ಹಲವು ವರ್ಷಗಳಿಂದ ಸಹಜೀವನ ನಡೆಸುತ್ತಿರುವುದು ಗುಟ್ಟಿನ ಸಂಗತಿ ಏನೂ ಅಲ್ಲ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ಪ್ರವಾಸಗಳನ್ನು ಒಟ್ಟಿಗೆ ಮಾಡಿದ್ದಾರೆ. ಹಾಗಾಗಿ ಈ ಫೋಟೋಗಳು ಸಹಜ ಎನ್ನುವ ಕಾಮೆಂಟ್ ಕೂಡ ಹರಿದಾಡುತ್ತಿವೆ.

  • ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ಬಿಗ್ ಬಾಸ್ (Bigg Boss Season 9) ಮನೆಯೊಳಗೆ ಯಾರೆಲ್ಲ ಪ್ರವೇಶ ಮಾಡ್ತಾರೆ ಎಂದು ಪಟ್ಟಿ ಬಿಡುಗಡೆ ಆದಾಗ ಅಚ್ಚರಿ ಮೂಡಿಸಿದ ಹೆಸರು ನಟಿ ಮಯೂರಿ (Mayuri) ಅವರದ್ದು. ಮದುವೆ ನಂತರ ಸಿನಿಮಾ ರಂಗದಿಂದಲೇ ದೂರವಿದ್ದ, ಪುಟಾಣಿ ಮಗುವಿನ ಜೊತೆ ಆಟವಾಡ್ಕೊಂಡಿರೊ ಈ ನಟಿ, ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೂ, ಬಿಗ್ ಬಾಸ್ ಮನೆಗೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ ಮಯೂರಿ.

    ಸಿನಿಮಾ ರಂಗದಲ್ಲೂ ಅಷ್ಟೇ, ಕ್ಲೀನ್ ಇಮೇಜ್. ಕಾಂಟ್ರವರ್ಸಿ ಮಾಡ್ಕೊಂಡಿಲ್ಲ. ರಿಲೇಷನ್ ಶಿಪ್ ಇಟ್ಕೊಂಡಿಲ್ಲ, ತಡರಾತ್ರಿ ಪಾರ್ಟಿಯಿಂದಾನೂ ದೂರ ದೂರ. ಇಂತಿಪ್ಪ ಈ ನಟಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದೇ ವಿಚಿತ್ರ, ವಿಶೇಷ. ಹೀಗಾಗಿಯೇ ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಕಣ್ಣೀರಿಟ್ಟಿದ್ದಾರೆ. ನಾನು ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಈ ಮನೆಗೆ ಬಂದಿಲ್ಲ ಎಂದು ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಬಿಗ್ ಬಾಸ್ ಮನೇಲಿ ಪರಸ್ಪರ ಇಷ್ಟ ಪಡೋದು, ರಿಲೇಶನ್ ಶಿಪ್ (Relationship) ಮೆಂಟೇನ್ ಮಾಡೋದು, ಬಿಗ್ ಬಾಸ್ ಮನೆಯಿಂದ ಆಚೆ ಬಂದ್ಮೇಲೂ ಅದನ್ನ ಕಂಟಿನ್ಯೂ ಮಾಡೋದು ಕಾಮನ್. ಕೆಲ ಜೋಡಿಗಳು ಮದುವೆ ಕೂಡ ಆಗಿವೆ. ಆದರೆ, ಮಯೂರಿ ಮದುವೆ ಆಗಿದ್ದಾರೆ, ಒಂದ್ ಮಗು ಕೂಡ ಇದೆ. ಬಿಗ್ ಬಾಸ್ ಮನೆಗೆ ಇದೆಲ್ಲವನ್ನೂ ಅವರು ಬಿಟ್ಟು ಬಂದಿದ್ದು, ಕೇವಲ ಆಟ ಆಡುವುದಕ್ಕಾಗಿ ಮಾತ್ರವಂತೆ. ಅದರ ಹೊರತಾಗಿ ಬೇರೆ ಯೋಚಿಸಲ್ಲ ಅಂತಾರೆ ಮಯೂರಿ.

    ಊಟದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಯೂರಿ ಅತ್ತಿದ್ದಾರೆ. (Tears) ಮಗುವನ್ನು ನೆನಪಿಸಿಕೊಂಡಿದ್ದಾರೆ. ನೇಹಾ ಗೌಡ ಆಡಿದ ಮಾತಿಗೆ ನೊಂದುಕೊಂಡಿದ್ದಾರೆ. ಇದೆಲ್ಲದರ ಪರಿಣಾಮಾನೇ ‘ನಾನು ಈ ಮನೆಗೆ ಬಂದಿದ್ದು ಆಟ ಆಡೋಕೆ, ರಿಲೇಶನ್ ಶಿಪ್ ಇಟ್ಜೊಳ್ಳೋಕೆ ಅಲ್ಲ’ ಎನ್ನುವ ಮಾತುಗಳನ್ನು ಅವರಿಂದ ಆಡಿಸಿದೆ. ಈ ವಿಚಾರವಾಗಿ ನೇಹಾ ಗೌಡ (Neha Gowda) ಕ್ಷಮೆ ಕೂಡ ಕೇಳಿದ್ದಾರೆ.  ಮಯೂರಿ ಮಾತ್ರ ತಮಗಾದ ನೋವಿನಿಂದ ಇನ್ನೂ ಆಚೆ ಬಂದಿಲ್ಲ. ಆದಷ್ಟು ಬೇಗ ಎಲ್ಲವನ್ನೂ ಮರೆತು, ಮತ್ತೆ ಮಯೂರಿ ಆಟವಾಡಲಿ ಎನ್ನೊದೇ ಅಭಿಮಾನಿಗಳ ಆಸೆ.

    Live Tv
    [brid partner=56869869 player=32851 video=960834 autoplay=true]