Tag: ರಿಲೀಸ್ ಡೇಟ್

  • ‘ಗೌರಿ’ ರಿಲೀಸ್ ಡೇಟ್ ಅನೌನ್ಸ್: ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ

    ‘ಗೌರಿ’ ರಿಲೀಸ್ ಡೇಟ್ ಅನೌನ್ಸ್: ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ

    ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ ಗೌರಿ.  ಸ್ವಾತಂತ್ರ್ಯಾ ದಿನಾಚರಣೆಗೆ ತೆರೆಗೆ ಬರುತ್ತಿದೆ ಸಮರ್ಜಿತ್ ಲಂಕೇಶ್ ಮೊದಲ ಸಿನಿಮಾ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಇವಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಚಿತ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದರೀಗ ಆ ಕುತುಹಲಕ್ಕೆ ತೆರೆ ಬಿದ್ದಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಅವರ ಪುತ್ರ ಸಮರ್ಜಿತ್ ಮತ್ತು ನಟಿ ಸಾನಿಯಾ ಅಭಿನಯದ ಮೊದಲ ಸಿನಿಮಾವಿದು. ಇಂದಿ ಸಿನಿಮಾ ತಂಡ  ಮಾಧ್ಯಮದ ಮುಂದೆ ಹಾಜರಾಗುವ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಗೌರಿ ಸಿನಿಮಾ ವಿಶೇಷ ದಿನದಂದು ತೆರೆಗೆ ಬರಲಿದೆ ಎಂದು ಹೇಳಿದರು.

    ಹೌದು ‘ಗೌರಿ’ (Gowri) ಸಿನಿಮಾ ಆಗಸ್ಟ್ 15 ಸ್ವಾತಂತ್ರ್ಯಾ ದಿನಾಚರಣೆಗೆ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಗೌರಿ ತಂಡ ಇಂದು ಕಾಲೇಜಿನಲ್ಲಿ ಕಾರ್ಯಕ್ರಮ ಮಾಡುವ‌ ಮೂಲಕ ಅದ್ದೂರಿಯಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಬೆಂಗಳೂರಿನ MES ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾತಂಡ ‘ಗೌರಿ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕುಣಿದು ಕುಪ್ಪಳಿಸಿದ್ದ ಸಿನಿಮಾ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಕನ್ನಡದ ಯುವ ಪ್ರತಿಭೆಗಳನ್ನು ಬೆಳಸಿ. ಆಗಸ್ಟ್ 15 ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಇದು. ಎಲ್ಲಾ ಸಿನಿಮಾಗಳು ಕನ್ನಡ ಸಿನಿಮಾಗಳೇ ಪ್ರೋತ್ಸಾಹಿಸಬೇಕು’ಎಂದರು. ಕನಸು ನನಸಾದ ಸಮಯಚಿದು. ನನ್ನ ಮೊದಲ ಸಿನಿಮಾವನ್ನು ಎಲ್ಲರೂ ನೋಡಿ ಎಂದರು.

    ಈಗಾಗಲೇ ಸಿನಿಮಾದಿಂದ ವೈರಲ್ ಆಗಿರುವ ‘ಟೈಮ್ ಬರುತ್ತೆ…’ ಮತ್ತು ಧೂಳ್ ಎಬ್ಬಿಸಾವ…ಹಾಡಿಗೆ ವಿದ್ಯಾರ್ಥಿಗಳ ಜೊತೆ ಸಮರ್ಥಿಜ್ ಲಂಕೇಶ್ ಮತ್ತು ನಾಯಕಿ ಸಾನ್ಯಾ ಅಯ್ಯರ್ ಡಾನ್ಸ್ ಮಾಡಿ ಸಂಭ್ರಮಿಸಿದರು.  ನಿಮ್ಮ ತಂಡದ ಖುಷಿಗೆ ಮತ್ತಷ್ಟು ಜೊಷ್ ತುಂಬಿದರು ವಿದ್ಯಾರ್ಥಿಗಳು.

  • ‘ಸಲಾರ್’ ರಿಲೀಸ್ ಯಾವಾಗ? ಗೊಂದಲದಲ್ಲಿ ಪ್ರಭಾಸ್ ಫ್ಯಾನ್ಸ್

    ‘ಸಲಾರ್’ ರಿಲೀಸ್ ಯಾವಾಗ? ಗೊಂದಲದಲ್ಲಿ ಪ್ರಭಾಸ್ ಫ್ಯಾನ್ಸ್

    ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಸಲಾರ್’ (Salaar) ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ ಎಂದು ಸ್ವತಃ ಚಿತ್ರತಂಡವೇ ಹೇಳಿಕೊಂಡಿತ್ತು. ಬಿಡುಗಡೆಯ ದಿನಾಂಕವನ್ನು (Release Date) ನಿಗದಿ ಮಾಡಿಕೊಂಡು ಕೆಲಸ ಆರಂಭಿಸಿತ್ತು. ಆದರೆ, ಇದೀಗ ಬಿಡುಗಡೆ ಕುರಿತು ನಾನಾ ಸುದ್ದಿಗಳೂ ಹೊರ ಬೀಳುತ್ತಿವೆ. ಅಂದುಕೊಂಡ ದಿನಾಂಕದಂದು ಸಲಾರ್ ರಿಲೀಸ್ ಆಗುತ್ತಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.

    ಪ್ರಭಾಸ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್ ವಿಳಂಬವಾಗಿದೆ ಎಂದು ಹೇಳಲಾಗುತ್ತಿದ್ದು, ನಿಗದಿತ ಹಂತಗಳಲ್ಲಿ ಚಿತ್ರೀಕರಣ ಆಗಿಲ್ಲವಂತೆ. ಹಾಗಾಗಿ ಅಂದುಕೊಂಡ ದಿನಾಂಕದಂದು ಚಿತ್ರ ಬಿಡುಗಡೆ ಆಗುತ್ತಿಲ್ಲ ಎನ್ನುವುದು ಒಂದು ವಾದ. ಬಾಲಿವುಡ್ ನ ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ಜಗತ್ತಿನಾದ್ಯಂತ ರಿಲೀಸ್ ಆಗುತ್ತಿರುವುದರಿಂದ ಮತ್ತು ಆ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿರುವುದರಿಂದ ಸಲಾರ್ ಚಿತ್ರದ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವುದು ಮತ್ತೊಂದು ವಾದ.  ಇದನ್ನೂ ಓದಿ:ನಟ ವಿಜಯ ರಾಘವೇಂದ್ರ ಮನೆಗೆ ಸುದೀಪ್ ದಂಪತಿ ಭೇಟಿ

    ಸಲಾರ್ ಬಿಡುಗಡೆಯ ದಿನಾಂಕದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪ್ರಭಾಸ್ ಅಭಿಮಾನಿಗಳು ಈ ಕುರಿತಂತೆ ಗೊಂದಲದಲ್ಲಿದ್ದಾರೆ. ಆದರೂ, ಈವರೆಗೂ ಚಿತ್ರತಂಡ ಇದರ ಕುರಿತು ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ. ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಬಹುಶಃ ದಿನಾಂಕ ಮುಂದೆ ಹೋಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

     

    ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಲಾರ್ ಕೂಡ ಮತ್ತೊಂದು ಹಂತದ ಚಿತ್ರವೆಂದು ಬಣ್ಣಿಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ಷಿತ್ ಶೆಟ್ಟಿ  ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ

    ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ

    ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಥಿಯೇಟರ್ ಗೆ ಬಂದು, ಅದರ ಫಲಿತಾಂಶ ಇಷ್ಟೊತ್ತಿಗೆ ಹೊರ ಬಿದ್ದಿರುತ್ತಿತ್ತು. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕ ಘೋಷಣೆ ಮುಂದೂಡುತ್ತಲೇ ಸಾಗಿತು. ಶುರುವಿನಿಂದ ಈವರೆಗೂ ಒಂದಿಲ್ಲೊಂದು ಬದಲಾವಣೆ ಕಾಣುತ್ತಲೇ ಬಂದಿರುವ ಈ ಸಿನಿಮಾ, ಬಿಡುಗಡೆ ವಿಷಯದಲ್ಲೂ ಅದನ್ನೇ ಪಾಲಿಸಿಕೊಂಡು ಬಂತು. ಇದೀಗ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಎನ್ನುವ ಮಾಹಿತಿ ಚಿತ್ರತಂಡದಿಂದ ಬಂದಿದೆ. ಚಾರ್ಲಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವುದನ್ನು ಸದ್ಯದಲ್ಲೇ ತಿಳಿಸುತ್ತಾರಂತೆ ನಿರ್ದೇಶಕ ಕಿರಣ್ ರಾಜ್. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

    ಮಾ.17ಕ್ಕೆ ಪುನೀತ್ ಅವರ ಹುಟ್ಟು ಹಬ್ಬ. ಅಂದೇ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಹೇಳಿದ್ದಾರೆ ನಿರ್ದೇಶಕರು. ಕನ್ನಡವಷ್ಟೇ ಅಲ್ಲದೇ ಹಿಂದಿಯಲ್ಲೂ ಈ ಸಿನಿಮಾ ರೆಡಿಯಾಗಿದ್ದು, ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗುವ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯನ ಸಂಬಂಧವನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಹಾಗಾಗಿ ಮಕ್ಕಳಿಂದ ದೊಡ್ಡವರ ತನಕ ಈ ಸಿನಿಮಾವನ್ನು ವೀಕ್ಷಿಸಬಹುದಂತೆ.  ದಿನಾಂಕ ಘೋಷಣೆ ಆದ ತಕ್ಷಣವೇ, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.

  • ಮುಂದಿನ ತಿಂಗಳು ತೆರೆ ಕಾಣಲಿದ್ದಾನೆ ಮಿಸ್ಸಿಂಗ್ ಬಾಯ್!

    ಮುಂದಿನ ತಿಂಗಳು ತೆರೆ ಕಾಣಲಿದ್ದಾನೆ ಮಿಸ್ಸಿಂಗ್ ಬಾಯ್!

    ಬೆಂಗಳೂರು: ತೊಂಭತ್ತರ ದಶಕದಲ್ಲಿ ನಡೆದಿದ್ದ ಮನಮಿಡಿಯುವ ಸತ್ಯಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಈ ಸಿನಿಮಾವನ್ನು ರಘುರಾಮ್ ನಿರ್ದೇಶನ ಮಾಡಿದ್ದಾರೆ. ಎಲ್ಲರೂ ಕಾತರದಿಂದ ಕಾಯುತ್ತಿರೋ ಮಿಸ್ಸಿಂಗ್ ಬಾಯ್ ಬಿಡುಗಡೆಯ ದಿನಾಂಕವೀಗ ಪಕ್ಕಾ ಡಿಫರೆಂಟಾಗಿಯೇ ಜಾಹೀರಾಗಿದೆ.

    ಮಿಸ್ಸಿಂಗ್ ಬಾಯ್ ಚಿತ್ರೀಕರಣ ಶುರುವಾದಂದಿನಿಂದಲೂ ಅದನ್ನು ಪ್ರೇಕ್ಷಕರ ಕುತೂಹಲದ ಕೇಂದ್ರದಿಂದ ಕದಲದಿರುವಂತೆ ನೋಡಿಕೊಂಡು ಬಂದವರು ರಘುರಾಮ್. ಇದೀಗ ಅವರು ಸಿದ್ಧಸೂತ್ರಗಳನ್ನು ಮೀರಿಕೊಂಡು ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಜಾಹೀರು ಮಾಡಿದ್ದಾರೆ.

    ಪ್ರೆಸ್ ಮೀಟ್ ಮಾಡಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರಗಳ ರಿಲೀಸ್ ಡೇಟ್ ಅನೌನ್ಸ್ ಮಾಡೋದು ಮಾಮೂಲಿ. ಆದರೆ ರಘುರಾಮ್ ಅವರು ಕರ್ನಾಟಕವೂ ಸೇರಿದಂತೆ ವಿದೇಶಗಳಲ್ಲಿಯೂ ಇರುವ ಶ್ರೀಸಾಮಾನ್ಯರಿಂದಲೇ ಮಿಸ್ಸಿಂಗ್ ಬಾಯ್ ಬಿಡುಗಡೆ ದಿನಾಂಕ ಘೋಷಿಸಿರುವ ವೀಡಿಯೋವೊಂದನ್ನು ಅನಾವರಣಗೊಳಿಸಿದ್ದಾರೆ.

    ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಬೆಳಗಾವಿ ಸೇರಿದಂತೆ, ದುಬೈ, ಜರ್ಮನಿ ಮುಂತಾದ ಪ್ರದೇಶಗಳಿಂಣದ ಮಾತಾಡಿರೋ ಜನಸಾಮಾನ್ಯರು ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿ ಬಿಡುಗಡೆ ದಿನಾಂಕ ಅನಾವರಣಗೊಳಿಸಿದ್ದಾರೆ. ಈ ಕೆಲಸ ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ತೀರಾ ಹೊಸತಾಗಿದೆ.

    ಜನಸಾಮಾನ್ಯರೇ ಘೋಷಣೆ ಮಾಡಿರೋ ಪ್ರಕಾರ ಹೇಳೋದಾದರೆ ಇದೇ ಮಾರ್ಚ್ 22ರಂದು ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ತೆರೆ ಕಾಣಲಿದೆ. ಮನ ಮಿಡಿಯುವ ಸತ್ಯ ಘಟನೆಯಾಧಾರಿತವಾದ ಈ ಚಿತ್ರ ನೋಡಲು ಎಲ್ಲ ವರ್ಗದ ಪ್ರೇಕ್ಷಕರೂ ಕಾತರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv