Tag: ರಿಲಾಕ್ಸ್

  • ವಿಮಾನ ನಿಲ್ದಾಣದಲ್ಲೇ ಹಾಯಾಗಿ ಮಲಗಿ ರಿಲ್ಯಾಕ್ಸ್ ಮಾಡಿದ್ರು ಧೋನಿ

    ವಿಮಾನ ನಿಲ್ದಾಣದಲ್ಲೇ ಹಾಯಾಗಿ ಮಲಗಿ ರಿಲ್ಯಾಕ್ಸ್ ಮಾಡಿದ್ರು ಧೋನಿ

    ಚೆನ್ನೈ: ವಿಶ್ವ ಕ್ರಿಕೆಟ್‍ನ ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ತಮ್ಮ ಸರಳ ನಡವಳಿಕೆಯಿಂದ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.

    ಚೆನ್ನೈನಿಂದ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ಕಾಯಬೇಕಾಯಿತು. ಈ ಸಮಯದಲ್ಲಿ ಎಲ್ಲಾ ಆಟಗಾರರು ಹರಟೆ ಹೋಡಿಯುತ್ತಾ ಕಾಲಕಳೆದರೆ, ಧೋನಿ ಮಾತ್ರ ವಿಮಾನ ನಿಲ್ದಾಣ ನೆಲದ ಮೇಲೆಯೇ ಮಲಗಿ ರಿಲ್ಯಾಕ್ಸ್ ಮಾಡಿದ್ದಾರೆ.

    ಧೋನಿ ನೆಲದ ಮೇಲೆ ಮಲಗಿ ರಿಲ್ಯಾಕ್ಸ್ ಮಾಡುತ್ತಿರುವ ಫೋಟೋಗಳನ್ನು ಬಿಬಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ಫೋಟೋಗಳನ್ನು ಕಂಡ ಅಭಿಮಾನಿಗಳು ಧೋನಿಯವರ ಸರಳತೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

    ಈ ಫೋಟೋಗಳಲ್ಲಿ ಭಾರತದ ಮಾಜಿ ನಾಯಕ ಧೋನಿ ಸೇರಿದಂತೆ, ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮುಂತಾದವರನ್ನ ಕಾಣಬಹುದು.

    ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಜಯಗಳಿಸಿ ಸರಣಿಯಲ್ಲಿ 1-0 ಅಂತರದಲ್ಲಿ ಟೀಮ್ ಇಂಡಿಯಾ ಮುನ್ನಡೆ ಕಾಯ್ದುಕೊಂಡಿದೆ. ಸರಣಿಯ ಎರಡನೇ ಪಂದ್ಯಕ್ಕಾಗಿ ಕೋಲ್ಕತ್ತಾಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ತಂಡ ಆಗಮಿಸಿತ್ತು.

    ಎಲ್ಲರೂ ವಿಮಾನ ನಿಲ್ದಾಣದಲ್ಲಿ ಕುಳಿತು ಸಮಯ ಕಳೆಯುತ್ತಿದ್ದಾರೆ, ಲೆಜೆಂಡ್ ಆಟಗಾರ ಮಾತ್ರ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಂತಹ ಆಟಗಾರ ಬೇರೆಲ್ಲೂ ಇಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ

    ಧೋನಿ ಯಾವಾಗಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ಳತ್ತಾರೆ. ಧೋನಿ ಅವರ ಸರಳತೆಗೆ ಇದುವೆ ಸಾಕ್ಷಿ, ಅವರು ಮತ್ತೆ ನೆಲದ ಮೇಲೆ ಮಲಗಿದ್ದಾರೆ. ಧೋನಿ ಎಂದು ತಮ್ಮ ಸಾಮರ್ಥ್ಯವನ್ನು ವ್ಯರ್ಥ ಮಾಡುವುದಿಲ್ಲ ಎಂದು ಅಭಿಮಾನಿಗಳು ಧೋನಿಯ ಸರಳತೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

    ಲಂಕಾ ಪ್ರವಾಸದ ವೇಳೆ ಪಂದ್ಯದಲ್ಲೂ ಧೋನಿ ಮೈದಾನದಲ್ಲೇ ಮಲಗಿ ರಿಲ್ಯಾಕ್ಸ್ ಮಾಡಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

    https://twitter.com/KalamWalaBae/status/909673919115755520