Tag: ರಿಯಾ ಕಪೂರ್

  • ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

    ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

    ಮುಂಬೈ: ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರು ತಾವು ತಮ್ಮ ಹೆಣ್ಣು ಮಕ್ಕಳನ್ನು ಫುಲ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ಅನಿಲ್ ಕಪೂರ್ ಪ್ರತಿದಿನ ತಮ್ಮ ಪುತ್ರಿಯರಾದ ಸೋನಂ ಮತ್ತು ರಿಯಾ ಕಪೂರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಇಂದು ಇನ್‍ಸ್ಟಾಗ್ರಾಮ್ ನಲ್ಲಿ, ನಾನು ನಿಮ್ಮನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಇಂದು ಸ್ವಲ್ಪ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಸೋನಂ ಸಹ ‘ಐ ಮಿಸ್ ಯೂ ಡ್ಯಾಡ್’ ಎಂದು ಕಾಮೆಂಟ್ ಮಾಡಿದ್ದಾರೆ.

    ಪ್ರಸ್ತುತ ಸೋನಂ ಕಪೂರ್ ತನ್ನ ಪತಿ ಆನಂದ್ ಅಹುಜಾ ಅವರೊಂದಿಗೆ ಲಂಡನ್‍ನಲ್ಲಿ ವಾಸಿಸುತ್ತಿದ್ದು, ರಿಯಾ ಕಪೂರ್ ತನ್ನ ಪತಿ ಕರಣ್ ಬೂಲಾನಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅನಿಲ್ ಕಪೂರ್ ಇಂದು ಬೆಳಗ್ಗೆ, ತಮ್ಮ ಹೆಣ್ಣುಮಕ್ಕಳು ಚಿಕ್ಕವರಾಗಿದ್ದ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಪುಟ್ಟ ಸೋನಂ ಬಿಳಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ರಿಯಾ ಗುಲಾಬಿ ಬಣ್ಣದ ಫ್ರಾಕ್‍ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಜಾಗೃತಿ ಅಭಿಯಾನಕ್ಕೆ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಬಂದಿದ್ದ ಅಪ್ಪು

     

    View this post on Instagram

     

    A post shared by anilskapoor (@anilskapoor)

    ಎರಡನೇ ಚಿತ್ರದಲ್ಲಿ ಸೋನಂ ಮತ್ತು ರಿಯಾ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದು, ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೂರನೆಯ ಚಿತ್ರದಲ್ಲಿ, ಇತ್ತೀಚಿಗೆ ಅನಿಲ್ ಕಪೂರ್ ಅವರ ಮಕ್ಕಳೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದು.

    ರಿಯಾ ಕಪೂರ್ ಈ ವರ್ಷದ ಆರಂಭದಲ್ಲಿ ತನ್ನ ಬಾಯ್‍ಫ್ರೆಂಡ್ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಬೂಲಾನಿ ಅವರನ್ನು ವಿವಾಹವಾದರು. ಕಳೆದ ತಿಂಗಳು ಕರಣ್ ಅವರ ಜನ್ಮದಿನದಂದು, ಅನಿಲ್ ಕಪೂರ್ ಇನ್‍ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಜನ್ಮದಿನದ ಶುಭಾಶಯಗಳು ಕರಣ್, ನೀವು ಯಾವಾಗಲೂ ನನ್ನ ಮಗನಂತೆ ಕುಟುಂಬದ ಭಾಗವಾಗಿದ್ದೀರಿ. ಅದು ಈ ವರ್ಷ ಅಧಿಕೃತವಾಗಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by anilskapoor (@anilskapoor)

    ಮಿಸ್ಟರ್ ಇಂಡಿಯಾ, ಪರಿಂದಾ, ನಾಯಕ್, ವಿರಾಸತ್ ಮತ್ತು ತೇಜಾಬ್ ಸಿನಿಮಾಗಲ್ಲಿ ಅನಿಲ್ ಕಪೂರ್ ಅವರು ಅದ್ಭುತವಾಗಿ ನಟಿಸಿದ್ದು, ಬಾಲಿವುಡ್ ನಲ್ಲಿ ಪ್ರತಿಭಾನ್ವಿತ ನಟರಾಗಿದ್ದಾರೆ. ಇವರು ಇತ್ತೀಚೆಗೆ ಓಟಿಟಿಯಲ್ಲಿ ತೆರೆಕಂಡ ಎಕೆ ವಸ್ರ್ಸ್ ಎಕೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರಕ್ಕೆ ವಿಕ್ರಮಾದಿತ್ಯ ಮೋಟ್ವಾನೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ಕೂಡ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಜಮೀನು ವಿವಾದ – ಕಾರಿಗೆ ಬೆಂಕಿ ಹಚ್ಚಿ, ಪರಸ್ಪರ ಕಲ್ಲು ತೂರಾಟ ಮಾಡಿ ಆಕ್ರೋಶ

  • ಮಗಳ ಮದುವೆಯಲ್ಲಿ ಅನಿಲ್ ಕಪೂರ್ ಡ್ಯಾನ್ಸ್- ವೀಡಿಯೋ ವೈರಲ್

    ಮಗಳ ಮದುವೆಯಲ್ಲಿ ಅನಿಲ್ ಕಪೂರ್ ಡ್ಯಾನ್ಸ್- ವೀಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಕೂಲೆಸ್ಟ್ ಡ್ಯಾಡಿ ಎಂದೇ ಹೇಳಬಹುದು. ಸದ್ಯ ತಮ್ಮ ಮಗಳು ರಿಯಾ ಮದುವೆ ಸಂಭ್ರಮದಲ್ಲಿರುವ ಅನಿಲ್ ಕಪೂರ್ ಆರತಕ್ಷತೆಯ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದ ಹರಿದಾಡುತ್ತಿದೆ.

    ಆರಕ್ಷತೆಯ ಸಮಾರಂಭಕ್ಕೆ ನೃತ್ಯ ನಿರ್ದೇಶಕಿ ಫರಾ ಖಾನ್ ಹಾಜರಾಗಿದ್ದು. ಸದ್ಯ ಈ ವೀಡಿಯೋವನ್ನು ಫರಾ ಖಾನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನಿಲ್ ಕಪೂರ್ ಹಾಗೂ ರಿಯಾ ಕಪೂರ್, ಸೋನಂ ಕಪೂರ್ ಅವರ ‘ಅಭಿ ತೋ ಪಾರ್ಟಿ ಸುರು ಹುಯಿ ಹೈ” ಹಾಡಿಗೆ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಇದನ್ನೂ ಓದಿ: BB ಮೀನಿ ಸೀಸನ್ ನಿರೂಪಣೆ ಮಾಡಲಿದ್ದಾರೆ ಕಿಚ್ಚ

    ವೀಡಿಯೋ ಜೊತೆಗೆ ಫರಾ ಖಾನ್ ಈ ಮನುಷ್ಯನನ್ನು ಪ್ರೀತಿಸುತ್ತೇನೆ. ಬೆಸ್ಟ್ ತಂದೆ ಅನಿಲ್ ಕಪೂರ್ ಹಾಗೂ ಮಗಳು ರಿಯಾ ಕಪೂರ್ ನೃತ್ಯ. ಇಂತಹ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ರಿಯಾ ಕಪೂರ್ ಹಾಗೂ ಕರಣ್ ಬುಲಾನಿ ಆರತಕ್ಷತೆ ಆಗಸ್ಟ್ 16ರಂದು ನಡೆದಿದ್ದು, ಸೋನಮ್ ಕಪೂರ್, ಆನಂದ್ ಅಹುಜಾ, ಅರ್ಜುನ್ ಕಪೂರ್, ಖುಷಿ ಕಪೂರ್, ಜಾನ್ವಿ ಕಪೂರ್, ಫರಾ ಖಾನ್, ಅಂಶುಲಾ ಕಪೂರ್, ಶನಾಯಾ ಕಪೂರ್, ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಮತ್ತಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದ ನಟಿ ಚೈತ್ರಾ ರೈ

     

    View this post on Instagram

     

    A post shared by Farah Khan Kunder (@farahkhankunder)

    ಆಗಸ್ಟ್ 14 ರಂದು ಅನಿಲ್ ಕಪೂರ್ ಅವರ ಜುಹು ನಿವಾಸದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ರಿಯಾ ಮತ್ತು ಕರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹ ಮೊದಲ ಫೋಟೋವನ್ನು ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

     

    View this post on Instagram

     

    A post shared by Rhea Kapoor (@rheakapoor)

  • ಮದುವೆಯ ಫೋಟೋ ಹಂಚಿಕೊಂಡ ರಿಯಾ ಕಪೂರ್, ಕರಣ್ ಬೂಲಾನಿ

    ಮದುವೆಯ ಫೋಟೋ ಹಂಚಿಕೊಂಡ ರಿಯಾ ಕಪೂರ್, ಕರಣ್ ಬೂಲಾನಿ

    ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ 2ನೇ ಪುತ್ರಿ, ನಿರ್ಮಾಪಕಿ, ಉದ್ಯಮಿ, ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ರಿಯಾ ಕಪೂರ್ ಹಂಚಿಕೊಂಡಿದ್ದಾರೆ.

    ಆಗಸ್ಟ್ 14 ರಂದು ನೆರವೇರಿದ ರಿಯಾ ಕಪೂರ್-ಕರಣ್ ಬೂಲಾನಿ ಮದುವೆ ಸಮಾರಂಭದ ಫೋಟೋ ಈವರೆಗೂ ಬಹಿರಂಗವಾಗಿರಲಿಲ್ಲ. ಇದೀಗ ತಮ್ಮ ವಿವಾಹದ ಫೋಟೋಗಳನ್ನು ಸ್ವತಃ ನವ ದಂಪತಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

     

    View this post on Instagram

     

    A post shared by Karan Boolani (@karanboolani)

    ನಿನ್ನೆ ನಮ್ಮ ಪ್ರೀತಿ ಅಧಿಕೃತವಾಯಿತು. ಆದರೆ ನಾನು ಮತ್ತು ನೀನು ಕಳೆದ ಒಂದು ದಶಕದಿಂದ ಪ್ರೀತಿಯಲ್ಲಿದ್ದೇವೆ. ಇದಕ್ಕಾಗಿ ನಾನು ನಾಲ್ವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಒಬ್ಬರು ಚಿತ್ರ ನಿರ್ಮಾಪಕಿ, ಎರಡನೇಯವರು ಫ್ಯಾಶನ್ ಸ್ಟೈಲಿಸ್ಟ್, ಮೂರನೇಯವರು ನನ್ನ ಮಗಳ ತಾಯಿ, ನಾಲ್ಕನೇಯವರು ಅದ್ಭುತವಾದ ಕುಕ್. ಅವರೆಲ್ಲರ ಹೆಸರೂ ರಿಯಾ ಕಪೂರ್. ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ರಿಯಾ ಕಪೂರ್ ಬಗ್ಗೆ ಕರಣ್ ಬೂಲಾನಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Rhea Kapoor (@rheakapoor)

    ಕಳೆದ 12 ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಇಬ್ಬರ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದ್ದು, ವಿವಾಹ ಮಹೋತ್ಸವ ಜರುಗಿದೆ ಎಂದು ಬರೆದುಕೊಂಡ ರಿಯಾ ಕಪೂರ್ ತಮ್ಮ ಮದುವೆಯ ಫೋಟೋವನ್ನು ಶೇರ್‍ಮಾಡಿಕೊಂಡಿದ್ದಾರೆ.

  • ಅನಿಲ್ ಕಪೂರ್ ಮನೆಯಲ್ಲಿ ಮದುವೆಯ ಸಂಭ್ರಮ

    ಅನಿಲ್ ಕಪೂರ್ ಮನೆಯಲ್ಲಿ ಮದುವೆಯ ಸಂಭ್ರಮ

    ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಕುಟುಂಬದಲ್ಲೀಗ ಮದುವೆಯ ಸಂಭ್ರಮ ಮನೆಮಾಡಿದೆ. ಎಷ್ಟೇ ವಯಸ್ಸಾದರೂ ಇಂದಿಗೂ ಯುವಕರಂತೆ ಕಾಣುವ ಅನಿಲ್ ಕಪೂರ್‌ರವರ ಎರಡನೇ ಪುತ್ರಿ ರಿಯಾ ಕಪೂರ್‍ಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

    ಆಗಸ್ಟ್ 14ರಂದು ಶನಿವಾರದಿಂದ ಎರಡ್ಮೂರು ದಿನಗಳ ಕಾಲ ರಿಯಾ ಕಪೂರ್ ವಿವಾಹ ಮಹೋತ್ಸವ ನಡೆಯಲಿದ್ದು. ರಿಯಾ ಕಪೂರ್ ತಮ್ಮ ಬಹುಕಾಲದ ಗೆಳೆಯ ಕರಣ್ ಬೂಲಾನಿ ಕೈ ಹಿಡಿಯಲಿದ್ದಾರೆ. ಈ ವಿವಾಹ ಸಮಾರಂಭವನ್ನು ಮುಂಬೈನ ಜುಹಾ ನಿವಾಸದಲ್ಲಿ ನೆರವೇರಿಸಲು ಗುರು-ಹಿರಿಯರು ನಿಶ್ಚಯಿಸಿದ್ದು, ಕೇವಲ ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

    ರಿಯಾ ಕಪೂರ್ ಹಾಗೂ ಕರಣ್ ಬೂಲಾನಿ ಮದುವೆಗೆ ಈಗಾಗಲೇ ಭರ್ಜರಿ ತಯಾರಿ ನಡೆಸಲಾಗಿದ್ದು, ಇಬ್ಬರ ಮನೆಯ ಮುಂದೆ ಕಲರ್ ಫುಲ್ ಆಗಿ ಲೈಟಿಂಗ್ಸ್ ಹಾಕಲಾಗಿದೆ. ಸದ್ಯ ಎರಡು ಕುಟುಂಬದಲ್ಲಿಯೂ ಹಬ್ಬದ ಸಂಭ್ರಮ ಮನೆಮಾಡಿದೆ. ಅಲ್ಲದೇ ಇತ್ತೀಚೆಗಷ್ಟೇ ಸೋನಂ ಕಪೂರ್ ಪತಿಯೊಂದಿಗೆ ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದರು. ಈ ವೇಳೆ ಅನಿಲ್ ಕಪೂರ್ ವಿಮಾನ ನಿಲ್ದಾಣಕ್ಕೆ ತೆರಳಿ ಪುತ್ರಿಗೆ ವೆಲ್‍ಕಮ್ ಮಾಡಿದ್ದರು. ಅಷ್ಟಕ್ಕೂ ಸೋನಂ ಮುಂಬೈಗೆ ಭೇಟಿ ನೀಡಿದ್ದು, ಸಹೋದರಿಯ ಮದುವೆಗಾಗಿ ಎಂದು ಇದೀಗ ಹೇಳಲಾಗುತ್ತಿದೆ.

    ರಿಯಾ ಕಪೂರ್ ಮತ್ತು ಕರಣ್ ಬುಲಾನಿ ಸುಮಾರು 13 ವರ್ಷಗಳಿಂದ ಸ್ನೇಹ ಹೊಂದಿದ್ದು, 2010ರಲ್ಲಿ ಬಿಡುಗಡೆಯಾದ ಆಯಿಶಾ ಸಿನಿಮಾಕ್ಕೆ ರಿಯಾ ಮೊದಲ ಬಾರಿಗೆ ಬಂಡವಾಳ ಹೂಡಿದ್ದರು ಮತ್ತು ಈ ಸಿನಿಮಾದಲ್ಲಿ ಕರಣ್ ಬುಲಾನಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾಕ್ಕಾಗಿ 15 ಕೆ.ಜಿ ತೂಕ ಇಳಿಸಿಕೊಂಡ ಕಾಲಿವುಡ್ ನಟ ಸಿಂಬು