Tag: ರಿಯಾಸಿ

  • ರಿಯಾಸಿ ಭಯೋತ್ಪಾದಕ ದಾಳಿ – ಉಗ್ರರ ಮೇಲೆ ಹದ್ದಿನ ಕಣ್ಣು, ರಜೌರಿಯ ಹಲವೆಡೆ NIA ರೇಡ್‌

    ರಿಯಾಸಿ ಭಯೋತ್ಪಾದಕ ದಾಳಿ – ಉಗ್ರರ ಮೇಲೆ ಹದ್ದಿನ ಕಣ್ಣು, ರಜೌರಿಯ ಹಲವೆಡೆ NIA ರೇಡ್‌

    ಶ್ರೀನಗರ: ಕಳೆದ ಮೂರು ವಾರಗಳ ಹಿಂದೆಯಷ್ಟೇ ರಿಯಾಸಿ ಭಯೋತ್ಪಾದಕ ದಾಳಿಗೆ (Reasi Terror Attack) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಾನುವಾರ (ಇಂದು) ಜಮ್ಮು ಮತ್ತು ಕಾಶ್ಮೀರದ ರಜೌರಿ (Rajouri) ಜಿಲ್ಲೆಯ ಅನೇಕ ಕಡೆದ ದಾಳಿ ನಡೆಸಿದೆ.

    ಇದೇ ತಿಂಗಳ ಜೂನ್‌ 9ರಂದು ರಿಯಾಸಿ ಜಿಲ್ಲೆಯ ಪೌನಿ ಪ್ರದೇಶದಲ್ಲಿ ಭಯೋತ್ಪಾದಕರು ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಬಸ್‌ ಕಮರಿಗೆ ಬಿದ್ದು, 10 ಮಂದಿ ಸಾವನ್ನಪ್ಪಿದ್ದರು 33 ಮಂದಿ ಗಾಯಗೊಂಡಿದ್ದರು. ಆದ್ರೆ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎನ್‌ಐಎ ಜೂನ್‌ 15ರಂದು ಪ್ರಕರಣ ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಹಲವೆಡೆ ದಾಳಿ ನಡೆಸಿದೆ.

    ರಿಯಾಸಿ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಜೂನ್ 19 ರಂದು ಬಂಧಿಸಲಾದ ಶಂಕಿತ ಉಗ್ರ ಹಕಮ್ ಖಾನ್ ಅಕಾ ಹಕಿನ್ ದಿನ್ ನೀಡಿದ ಸುಳಿವು ಆಧರಿಸಿ ರಾಜೌರಿಯಲ್ಲಿ ದಾಳಿ ನಡೆಸಲಾಗಿದೆ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಿಯಾಸಿ ಬಸ್‌ ಮೇಲೆ ದಾಳಿ – ಉಗ್ರರಿಗೆ ಸಹಕಾರ ನೀಡಿದ್ದ ಓರ್ವ ವ್ಯಕ್ತಿ ಅರೆಸ್ಟ್‌

    ಪ್ರಾಥಮಿಕ ಮಾಹಿತಿ ಪ್ರಕಾರ ಬಂಧಿತನು ಭಯೋತ್ಪಾದಕರಿಗೆ ವ್ಯವಸ್ಥಿತವಾಗಿ ಬೆಂಬಲ ನೀಡುತ್ತಿದ್ದ ಜೊತೆಗೆ ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದ. ಉಗ್ರರ ದಾಳಿಗೆ ನೆರವಾಗುವ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಿದ್ದ, ಅನ್ನೋದು ತಿಳಿದುಬಂದಿದೆ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಮೋಹಿತಾ ಶರ್ಮಾ ಹೇಳಿದ್ದಾರೆ.

    ಅಲ್ಲದೇ ವಿಚಾರಣೆ ವೇಳೆ ತನ್ನ ಮನೆಯಲ್ಲಿ ಮೂವರು ಉಗ್ರರು ತಂಗಿದ್ದರು. ಅದಕ್ಕಾಗಿ ತನಗೆ 6,000 ರೂ. ನೀಡಿದ್ದರು ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ವಿಶ್ವಕಪ್‌ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದೀರಿ: ಟೀಂ ಇಂಡಿಯಾಕ್ಕೆ ಮೋದಿ ಅಭಿನಂದನೆ

  • ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

    ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

    – ಹಿಂದೂಗಳಿದ್ದ ಬಸ್ಸನ್ನು ಹೊಂಚು ಹಾಕಿ ಸುತ್ತುವರಿದು ಗುಂಡಿನ ದಾಳಿ
    – 9 ಮಂದಿ ಬಲಿ, 33 ಮಂದಿಗೆ ಗಾಯ

    ಶ್ರೀನಗರ: ಬಸ್ಸು ಕಂದಕಕ್ಕೆ ಬಿದ್ದ ಮೇಲೂ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ರಿಯಾಸಿಯಲ್ಲಿ (Reasi) ಬದುಕಿಳಿದ ವೈಷ್ಣೋದೇವಿ ಯಾತ್ರಾರ್ಥಿಗಳು (Vaishno Devi Temple) ತಿಳಿಸಿದ್ದಾರೆ.

    ರಸ್ತೆ ಬದಿಯಲ್ಲಿ ಅವಿತ್ತಿದ್ದ ಉಗ್ರರು ಹಿಂದೂಗಳು ತೆರಳುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದ್ದಾರೆ. ಮೊದಲು ರಸ್ತೆ ಬದಿಯಿಂದ ದಾಳಿ ನಡೆಸಿದ್ದ ಉಗ್ರರು ಕಂದಕಕ್ಕೆ ಬಿದ್ದ ನಂತರ ಬಸ್ಸು ಬಳಿ ಬಂದು ಹಲವು ನಿಮಿಷ ಗುಂಡಿನ ದಾಳಿ ನಡೆಸಿದ್ದಾರೆ.

    ತಂಡದಲ್ಲಿ 6-7 ಮಂದಿ ಇದ್ದರು. ಎಲ್ಲ ಉಗ್ರರು ಮುಖಕ್ಕೆ ಮಾಸ್ಕ್‌ ಹಾಕಿದ್ದರು. ಆರಂಭದಲ್ಲಿ ಬಸ್ಸನ್ನು ಸುತ್ತುವರಿದು ಎಲ್ಲಾ ಕಡೆಯಿಂದ ದಾಳಿ ನಡೆಸಿದ್ದಾರೆ. ಕೆಳಕ್ಕೆ ಉರಳಿದ ನಂತರವೂ ಬಸ್‌ ಬಳಿ ಬಂದು 20 ನಿಮಿಷ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ದಾಳಿ ವೇಳೆ ನಾವೆಲ್ಲ ಮೌನಕ್ಕೆ ಶರಣಾಗಿದ್ದೆವು. ಯಾವುದೇ ಧ್ವನಿ ಹೊರಬಾರದೇ ಇರುವುದನ್ನು ನೋಡಿದ ಉಗ್ರರು ಎಲ್ಲಾ ಪ್ರಯಾಣಿಕರು ಮೃತಪಟ್ಟಿರಬಹುದು ಎಂದು ಭಾವಿಸಿ ತೆರಳಿದ್ದಾರೆ ಎಂದು ಯಾತ್ರಾರ್ಥಿಯೊಬ್ಬರು ಹೇಳಿದ್ದಾರೆ. ದಾಳಿಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು 33 ಮಂದಿ ಗಾಯಗೊಂಡಿದ್ದಾರೆ.

    ದಾಳಿ ಹೇಗಾಯ್ತು?
    ಜಮ್ಮು ಮತ್ತು ಕಾಶ್ಮೀರದ (Jammu and Kashmir Bus Attack) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಸಂಜೆ 6:10ರ ವೇಳೆಗೆ ಈ ಘಟನೆ ನಡೆದಿದೆ. ಶಿವಖೋಡಿಯ ಗುಹಾ ದೇವಾಲಯದಿಂದ ವೈಷ್ಣೋದೇವಿಯ ಕ್ಷೇತ್ರವಾದ ಕಟ್ರಾಗೆ ಹಿಂದೂಗಳು ಬಸ್ಸಿನಲ್ಲಿ ತೆರಳುತ್ತಿದ್ದರು.  ಇದನ್ನೂ ಓದಿ:ಮೋದಿ ಸಂಪುಟದಲ್ಲಿ ನಡ್ಡಾಗೆ ಸ್ಥಾನ – ಯಾರಾಗ್ತಾರೆ ಬಿಜೆಪಿ ಮುಂದಿನ ಅಧ್ಯಕ್ಷ?

    ರಸ್ತೆಯ ಪಕ್ಕದ ಅರಣ್ಯದಲ್ಲಿ ಅವಿತಿದ್ದ ಉಗ್ರರು ಬಸ್ಸಿನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಬಸ್ಸಿನ ಚಾಲಕನಿಗೆ ಬುಲೆಟ್ ತಗುಲಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ಸು ಕಂದಕಕ್ಕೆ ಬಿದ್ದಿದೆ.


    ಶೋಧ ಆರಂಭ:
    ಈ ಪ್ರದೇಶ ಅರಣ್ಯವನ್ನು ಹೊಂದಿದ್ದು, ಈ ಜಾಗದಲ್ಲಿ ಅಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ತಿಂಗಳಿನಿಂದ ರಾಜೌರಿ ಮತ್ತು ಪೂಂಚ್‌ನಲ್ಲಿ ಇತರ ದಾಳಿಗಳನ್ನು ನಡೆಸಿಸಿದ ಉಗ್ರರು ಗುಂಪಿನ ಸದಸ್ಯರೇ ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಭಯೋತ್ಪಾದಕರು ದಟ್ಟವಾದ ಕಾಡಿನಲ್ಲಿ ಅಡಗಿ ಬಸ್ಸು ಬರುವುದನ್ನೇ ಕಾಯುತ್ತಿದ್ದರು. ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಪೊಲೀಸರು ರಾತ್ರಿ 8:10ರ ವೇಳೆಗೆ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕಮರಿಗೆ ಉರುಳಿದ ಬಸ್ – 10 ಯಾತ್ರಾರ್ಥಿಗಳ ಸಾವು, 33 ಮಂದಿಗೆ ಗಾಯ

    ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕಮರಿಗೆ ಉರುಳಿದ ಬಸ್ – 10 ಯಾತ್ರಾರ್ಥಿಗಳ ಸಾವು, 33 ಮಂದಿಗೆ ಗಾಯ

    ಶ್ರೀನಗರ: ಭಯೋತ್ಪಾದಕರು (Terrorists) ನಡೆಸಿದ ಗುಂಡಿನ ದಾಳಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ (Bus) ಕಮರಿಗೆ ಉರುಳಿದ ಪರಿಣಾಮ 10 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 33 ಮಂದಿ ಗಂಭೀರ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಿಯಾಸಿಯಲ್ಲಿ (Reasi) ನಡೆದಿದೆ.

    ಬಸ್ ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – 28 ಪ್ರಯಾಣಿಕರಿಗೆ ಗಾಯ

    ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಾತ್ರಿ 8:10ರ ವೇಳೆಗೆ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹತ್ತು ಸಾವುಗಳು ದೃಢಪಟ್ಟಿವೆ. 33 ಗಾಯಾಳುಗಳನ್ನು ರಿಯಾಸಿ, ತ್ರೇಯತ್ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಗುಂಡಿಕ್ಕಿ ನಾಲ್ವರ ಹತ್ಯೆಗೈದಿದ್ದ ಪ್ರಕರಣ – ಆರೋಪಿಯನ್ನು ಬಂಧಿಸಿದ ಎನ್‍ಐಎ

    ಗುಂಡಿನ ದಾಳಿಯಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ಬಸ್ ಕಮರಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಿಯಾಸಿ ಮೋಹಿತಾ ಶರ್ಮಾ ಹೇಳಿದ್ದಾರೆ. ಪ್ರಯಾಣಿಕರು ಯಾರೂ ಸ್ಥಳೀಯರಲ್ಲ ಮತ್ತು ಅವರ ಗುರುತನ್ನು ಇನ್ನೂ ದೃಢೀಕರಿಸಲಾಗಿಲ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಹಾವೇರಿಯಲ್ಲಿ 7.91 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ನಾಲ್ವರು ಆರೋಪಿಗಳು ಅರೆಸ್ಟ್

    ಮೂಲಗಳ ಪ್ರಕಾರ, ಭಯೋತ್ಪಾದಕರು ರಾಜೌರಿ, ಪೂಂಚ್ ಮತ್ತು ರಿಯಾಸಿಯ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಉಗ್ರರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಮಹಿಳೆಯನ್ನು ತುಂಡಾಗಿ ಕತ್ತರಿಸಿ ರೈಲಿನಲ್ಲಿಟ್ಟ ದುಷ್ಕರ್ಮಿಗಳು

    ಘಟನೆಯ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ನಾಯಕರು ಸಂತಾಪ ಸೂಚಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಹೊಸದಾಗಿ ರಚನೆಯಾದ ಎನ್‌ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

  • ಅವರನ್ನು ಸೆರೆಹಿಡಿಯಲು ಬೆಳಗ್ಗೆಯವರೆಗೂ ಕಾದು ಕುಳಿತಿದ್ದೆವು – ಉಗ್ರರನ್ನು ಗ್ರಾಮಸ್ಥರು ಬಂಧಿಸಿದ ಕಥೆ ಓದಿ

    ಅವರನ್ನು ಸೆರೆಹಿಡಿಯಲು ಬೆಳಗ್ಗೆಯವರೆಗೂ ಕಾದು ಕುಳಿತಿದ್ದೆವು – ಉಗ್ರರನ್ನು ಗ್ರಾಮಸ್ಥರು ಬಂಧಿಸಿದ ಕಥೆ ಓದಿ

    ಶ್ರೀನಗರ: ಭಾನುವಾರ ಎಲ್‌ಇಟಿಯ ಇಬ್ಬರು ಭಯೋತ್ಪಾದಕರನ್ನು ಗ್ರಾಮಸ್ಥರೇ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಹಿಂದೆಲ್ಲಾ ಜಮ್ಮು ಹಾಗೂ ಕಾಶ್ಮೀರದಲ್ಲಿ ಸೈನಿಕರಷ್ಟೇ ಉಗ್ರರನ್ನು ಬಂಧಿಸಲು ಸಾಧ್ಯವಾಗುತ್ತಿತ್ತು. ಇದೀಗ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ತಮ್ಮಿಂದ ಉಗ್ರರನ್ನು ಬಂಧಿಸಲು ಹೇಗೆ ಸಾಧ್ಯವಾಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗ್ರಾಮಸ್ಥನೊಬ್ಬ, ನನಗೆ ನನ್ನ ಅಣ್ಣನಿಂದ ಕರೆ ಬಂದಿತ್ತು. ಇಬ್ಬರು ಉಗ್ರರು ತನ್ನನ್ನು ಕೊಲ್ಲಲು ಬರುತ್ತಿರುವುದಾಗಿ ತಿಳಿಸಿದ್ದ. ತಕ್ಷಣ ಆತ ಹೇಳಿದ ಪ್ರದೇಶಕ್ಕೆ ನಾನು ನನ್ನ ಸೋದರ ಸಂಬಂಧಿಗಳೊಂದಿಗೆ ಧಾವಿಸಿದೆ. ಆ ಸಂದರ್ಭ ಅಲ್ಲಿ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಮಲಗಿರುವುದು ಕಂಡುಬಂತು. ನಾವೆಲ್ಲಾ ಸೇರಿ ಅವರಿಬ್ಬರನ್ನು ಸೆರೆ ಹಿಡಿಯಲು ಬೆಳಗ್ಗೆಯವರೆಗೂ ಕಾದು ಕುಳಿತಿದ್ದೆವು ಎಂದು ವಿವರಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬದಲಾಗುತ್ತಿದೆ ವಾತಾವರಣ- ಉಗ್ರರನ್ನು ಸದೆಬಡೆದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಅವರು ಮಲಗಿದ್ದ ವೇಳೆ ಅವರ ಶಸ್ತ್ರಾಸ್ತ್ರಗಳಿದ್ದ ಬ್ಯಾಗ್ ಅನ್ನು ನಾವು ಹೊರತೆಗೆದೆವು. ಈ ವೇಳೆ ಅವರಲ್ಲಿ ಒಬ್ಬ ಎಚ್ಚರಗೊಂಡು ಓಡಿ ಹೋಗಲು ಪ್ರಯತ್ನಿಸಿದ್ದ. ಆದರೆ ನಾವು ಅವನನ್ನು ಹಿಡಿದು, ಹಗ್ಗಗಳಿಂದ ಕಟ್ಟಿ ಹಾಕಿದೆವು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆವು. ಕೆಲವೇ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಬಂದು, ಉಗ್ರರನ್ನು ಅವರ ಕೈಗೆ ಒಪ್ಪಿಸಿದೆವು ಎಂದು ತಿಳಿಸಿದರು.

    ಹಿಂದೆಲ್ಲಾ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಬದುಕಲು ಹೆದರುವಂತಹ ಪರಿಸ್ಥಿತಿ ಇತ್ತು. ಇದೀಗ ಅದಕ್ಕೆಲ್ಲಾ ವ್ಯತಿರಿಕ್ತ ಎನ್ನುವಂತೆ ರಿಯಾಸಿ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್‌ನನ್ನು ಗ್ರಾಮಸ್ಥರೇ ಸದೆಬಡೆದು ನಂತರ ಟುಕ್ಸಾನ್‌ನಲ್ಲಿ ಭದ್ರತಾ ಪಡೆಗಳಿಗೆ ಒಪ್ಪಿಸಿದ್ದಾರೆ. ಈತನ ಜೊತೆಗೆ ಮತ್ತೊಬ್ಬ ಉಗ್ರ ಫೈಝುಲ್ ಅಹಮದ್ ದಾರ್‌ನನ್ನು ಗ್ರಾಮಸ್ಥರು ಬಂಧಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ ಸಲಿಂಗಕಾಮಿ ಸ್ನೇಹಿತನನ್ನು ಕೊಂದು ಚೀಲದಲ್ಲಿ ಸುತ್ತಿ ಎಸೆದ ಸ್ನೇಹಿತರು

    ಉಗ್ರರ ಬಳಿ ಇದ್ದ 2 ಎಕೆ-47 ರೈಫಲ್‌ಗಳು, 7 ಗ್ರೆನೇಡ್‌ಗಳು, ಹಾಗೂ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಗ್ರಾಮಸ್ಥರ ಧೈರ್ಯ, ಸಾಹಸವನ್ನು ಶ್ಲಾಘಿಸಿ, 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]