Tag: ರಿಯಾಕ್ಷನ್

  • ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ವಾಷಿಂಗ್ಟನ್: ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆ ಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಲು ವಾಟ್ಸಪ್ ಅನುಮತಿ ನೀಡಿದೆ.

    ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹಾಗೂ ಧನ್ಯವಾದದ ಎಮೋಜಿಗಳನ್ನಷ್ಟೇ ರಿಯಾಕ್ಷನ್ ಆಗಿ ಕಳುಹಿಸಲು ಅವಕಾಶ ನೀಡಿತ್ತು. ಇದೀಗ ರಿಯಾಕ್ಷನ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಬಹುದಾಗಿದ್ದು, ಈ ಬಗ್ಗೆ ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ರೋಲ್‌ಔಟ್ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ಬೀಟಾ ಪರೀಕ್ಷಕರ ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಹಲವಾರು ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಬಳಕೆದಾರರು ವಾಟ್ಸಪ್ ಅನ್ನು ಇನ್ನೊಂದು ಹ್ಯಾಂಡ್‌ಸೆಟ್‌ನಿಂದ ಲಾಗ್‌ಇನ್ ಮಾಡಲು ಆಂಡ್ರಾಯ್ಡ್‌ಗಳಿಗಾಗಿ ಚ್ಯಾಟ್ ಸಿಂಕ್ ಫೀಚರ್, ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ಸಾಮರ್ಥ್ಯದಂತಹ ಫೀಚರ್‌ಗಳು ಟೆಸ್ಟಿಂಗ್‌ನಲ್ಲಿ ಒಳಗೊಂಡಿವೆ. ಇದನ್ನೂ ಓದಿ: ಹಿಂದೂ ಬಾಲಕಿಯ ಹೃದಯ ಮುಸ್ಲಿಂ ಯುವಕನಿಗೆ ಕಸಿ

    ಜೂನ್‌ನಲ್ಲಿ ವಾಟ್ಸಪ್ ಬಳಕೆದಾರರಿಗೆ ಗೌಪ್ಯತೆಯನ್ನು ನಿಯಂತ್ರಿಸುವ ಫೀಚರ್‌ಗಳನ್ನು ಹೊರತರಲು ಪ್ರಾರಂಭಿಸಿತು. ಅದರಲ್ಲಿ ಕೊನೆಯದಾಗಿ ಆನ್‌ಲೈನ್‌ನಲ್ಲಿದ್ದ ಸಮಯವನ್ನು ಮರೆಮಾಡುವುದು ಹಾಗೂ ಪ್ರೊಫೈಲ್ ಫೋಟೋವನ್ನು ಆಯ್ಕೆ ಮಾಡಿದವರಿಗಷ್ಟೇ ತೋರುವಂತೆ ಮಾಡುವಂತಹ ಅವಕಾಶವನ್ನು ನೀಡಿದೆ.

    ಜುಕರ್‌ಬರ್ಗ್ ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಿಂದ ಐಫೋನ್‌ಗೆ ತಮ್ಮ ವಾಟ್ಸಪ್ ಡೇಟಾವನ್ನು ಸುಲಭವಾಗಿ ವರ್ಗಾಯಿಸುವ ಸಾಮರ್ಥ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇದು ಇನ್ನೂ ಪರೀಕ್ಷೆಯಲ್ಲಿದೆ. ಇದನ್ನೂ ಓದಿ: ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    Live Tv
    [brid partner=56869869 player=32851 video=960834 autoplay=true]