Tag: ರಿಯಾ

  • ಅಭಿನಂದನೆಗಳು ಭಾರತ, ನನ್ನ ಮಗನನ್ನ ಬಂಧಿಸಿದ್ದೀರಿ – ರಿಯಾ ತಂದೆಯ ನೋವಿನ ಮಾತು

    ಅಭಿನಂದನೆಗಳು ಭಾರತ, ನನ್ನ ಮಗನನ್ನ ಬಂಧಿಸಿದ್ದೀರಿ – ರಿಯಾ ತಂದೆಯ ನೋವಿನ ಮಾತು

    – ಮುಂದೆ ನನ್ನ ಮಗಳನ್ನ ಬಂಧಿಸುತ್ತೀರಿ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸಹೋದರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ, ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಕ್ಕ ರಿಯಾಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ: ಎನ್‍ಸಿಬಿ ಮುಂದೆ ಶೌವಿಕ್ ಹೇಳಿಕೆ

    “ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ, ಮುಂದೆ ನನ್ನ ಮಗಳನ್ನು ಬಂಧಿಸುತ್ತೀರಿ ಎಂಬುದು ನನಗೆ ಖಾತ್ರಿಯಿದೆ. ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ನೀವು ಮಧ್ಯಮ ವರ್ಗದ ಕುಟುಂಬವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೀರಿ. ಆದರೆ ನ್ಯಾಯಕ್ಕಾಗಿ ಎಲ್ಲವೂ ಸಮರ್ಥನೆಯಾಗಿದೆ. ಜೈ ಹಿಂದ್” ಎಂದು ಹೇಳುವ ಮೂಲಕ ಮಗನ ಬಂಧನವನ್ನು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿರುವ ರಿಯಾ ತಂದೆ ಟೀಕಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಕೇಸ್- ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟ್

    ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು ಎನ್‍ಸಿಬಿ ಶುಕ್ರವಾರ ಬಂಧಿಸಿದೆ. ಶೋವಿಕ್ ಜೊತೆಗೆ ಸುಶಾಂತ್ ಸಿಂಗ್ ಅವರ ಹೌಸ್ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂಡಾನನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧ ಮಾದಕ ವಸ್ತು ವಿರೋಧಿ ಕಾನೂನಿನ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ಬುಧವಾರದವರೆಗೆ ಎನ್‍ಸಿಬಿ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದೆ.

    ಶೋವಿಕ್ ಚಕ್ರವರ್ತಿ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಎನ್‍ಸಿಬಿ ಅಬ್ಬಾಸ್ ಲಖಾನಿ ಮತ್ತು ಕರಣ್ ಅರೋರಾ ಎಂಬವರಿಂದ 59 ಗ್ರಾಂ ಗಾಂಜಾವನ್ನು ಪತ್ತೆಹಚ್ಚಿದೆ. ಅಲ್ಲದೇ ಸುಶಾಂತ್ ಸಿಂಗ್‍ಗೆ ಹತ್ತಿರ ಇರುವವರೊಂದಿಗೆ ಅವರು ಹೊಂದಿದ್ದ ಸಂಪರ್ಕದ ಬಗ್ಗೆ ತಿಳಿದುಬಂದಿದೆ. ಹೀಗಾಗಿ ಎನ್‍ಸಿಬಿ ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದೆ.

  • ಒಂದೇ ದಿನ ಇಬ್ಬರ ಬರ್ತ್ ಡೇ- ಖುಷಿಯಲ್ಲಿ ರಾಧಿಕಾ ಪಂಡಿತ್

    ಒಂದೇ ದಿನ ಇಬ್ಬರ ಬರ್ತ್ ಡೇ- ಖುಷಿಯಲ್ಲಿ ರಾಧಿಕಾ ಪಂಡಿತ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ತಮ್ಮ ತಾಯಿ ಮತ್ತು ಸಹೋದರನ ಮಗಳ ಹುಟ್ಟುಹಬ್ಬವು ಈ ವರ್ಷ ಒಂದೇ ದಿನ ಆಚರಿಸಿದ್ದು, ವಿಶೇಷವಾಗಿತ್ತು ಎಂದು ರಾಧಿಕಾ ಅವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ನಟಿ ರಾಧಿಕಾ ಪಂಡಿತ್ ಅವರ ತಾಯಿ ಹುಟ್ಟುಹಬ್ಬ ಮಂಗಳವಾರ ಇತ್ತು. ಇದೇ ದಿನ ಅವರ ಅಣ್ಣ ಗೌರವ್ ಪಂಡಿತ್ ಮಗಳು ರಿಯಾ ಬರ್ತ್ ಡೇ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಫೋಟೋ ಹಾಕಿ ಶುಭಾಶಯವನ್ನು ತಿಳಿಸಿದ್ದಾರೆ.

    ರಾಧಿಕಾ ಅವರು, “ಇಂದು ವಿಶೇಷವಾದ ದಿನವಾಗಿದೆ. ಯಾಕೆಂದೆರೆ ಈ ವರ್ಷ ಇಬ್ಬರ ಹುಟ್ಟುಹಬ್ಬವನ್ನು ಒಂದೇ ದಿನ ಆಚರಿಸುತ್ತಿದ್ದೇವೆ. ನಮ್ಮ ಅಮ್ಮ ಮತ್ತು ರಿಯಾ ಇಬ್ಬರ ಬರ್ತ್ ಡೇಯನ್ನು ಆಚರಿಸಿದ್ದೇವೆ. ಇಂದಿಗೆ ರಿಯಾಗೆ ಒಂದು ವರ್ಷವಾಗಿದೆ. ಅಮ್ಮ ನೀವೇ ನನಗೆ ಪ್ರಪಂಚ, ನಾನು ನಿಮ್ಮಂತೇ ಉತ್ತಮ ತಾಯಿ ಎಂದು ಭಾವಿಸುತ್ತೇವೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಹ್ಯಾಪಿ ಬರ್ತ್ ಡೇ ಅಮ್ಮ” ಎಂದು ಬರೆದು ವಿಶ್ ಮಾಡಿದ್ದಾರೆ.

    ಜೊತೆಗೆ ರಾಧಿಕಾ ಅವರು ಸೀಮಂತಾ ಕಾರ್ಯಕ್ರಮದಲ್ಲಿ ಅಮ್ಮನ ಜೊತೆಗೆ ತೆಗೆಸಿಕೊಂಡಿದ್ದ ಹಾಗೂ ಅಮ್ಮ ರಿಯಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಟಿ ರಾಧಿಕಾ ಸಹೋದರ ಗೌರವ್ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದು, ಅವರ ಪತ್ನಿಗೆ ಕಳೆದ ವರ್ಷ ಫೆಬ್ರವರಿಯಲ್ಲಿ ರಿಯಾ ಹುಟ್ಟಿದ್ದಳು.

    https://www.instagram.com/p/Btg52dHBLxF/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv