Tag: ರಿಯಲ್ ಎಸ್ಟೇಟ್ ಎಕ್ಸ್ ಪೋ

  • ಎಕ್ಸ್ ಪೋಗೆ ಬಂದು ‘ನಮ್ಮ ಮನೆ’ ಕನಸು ನನಸು ಮಾಡಿಕೊಳ್ಳಿ

    ಎಕ್ಸ್ ಪೋಗೆ ಬಂದು ‘ನಮ್ಮ ಮನೆ’ ಕನಸು ನನಸು ಮಾಡಿಕೊಳ್ಳಿ

    – ಇಂದು ಲಾಸ್ಟ್ ಚಾನ್ಸ್, ಮಿಸ್ ಮಾಡದೇ ಭೇಟಿ ಕೊಡಿ

    ಬೆಂಗಳೂರು: ನಿಮ್ಮ ಮನೆ ಕನಸು ನನಸಾಗಬೇಕೆಂದರೆ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋಗೆ ಬಂದು ಬಿಡಿ ಎಂದು ಹೇಳಿದ್ದೇ ತಡ ಸಾವಿರಾರು ಜನ ಬಂದು ತಮ್ಮ ಡ್ರೀಮ್ ಹೌಸ್ ಖರೀದಿ ಮಾಡಿದ್ದಾರೆ. ಈ ಅವಕಾಶಕ್ಕೆ ಇಂದು ಲಾಸ್ಟ್ ಚಾನ್ಸ್, ಮಿಸ್ ಮಾಡದೇ ಭೇಟಿ ಕೊಡಿ.

    ಮನೆಕಟ್ಟಿ ನೋಡು ಮದುವೆ ಮಾಡಿ ನೋಡು ಅಂತಾರೆ. ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಸಿಲಿಕಾನ್ ಸಿಟಿಯಲ್ಲೊಂದು ಮನೆ, ಸೈಟ್ ಮಾಡಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಈ ಕನಸನ್ನು ನನಸಾಗಿಸಲು ನಿಮ್ಮ ಪಬ್ಲಿಕ್ ಟಿವಿ ಹಮ್ಮಿಕೊಂಡ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋಗೆ ಶನಿವಾರ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಗರದ ಮಲ್ಲೇಶ್ವರಂ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂಕೆಬಿ ಡೆವಲಪರರ್ಸ್ ಅಂಡ್ ಪ್ರೋಮೋಟರ್ಸ್ ಸಹ ಭಾಗಿತ್ವದಲ್ಲಿ ಇಂದ ಕೂಡ ಎಕ್ಸ್ ಪೋ ನಡೆಯುತ್ತಿದೆ.

    ಎಕ್ಸ್ ಪೋಗೆ ಶನಿವಾರ 9 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದು, ಇಂದು ಸಾಗರೋಪಾದಿಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಒಂದೇ ಸೂರಿನಡಿ ರಾಜ್ಯ ಹಾಗೂ ದೇಶದ ಪ್ರತಿಷ್ಟಿತ 32ಕ್ಕೂ ಹೆಚ್ಚು ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಇರುತ್ತಾರೆ. ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಆಫರ್ ಇದ್ದಾಗ ಮನೆ ಖರೀದಿ ಮಾಡಿ, ದುಡ್ಡಿನ ಟೆನ್ಷನ್ ನಮಗೆ ಬಿಟ್ಟು ಬಿಡಿ ಎಂದು ಕೆನರಾ ಬ್ಯಾಂಕ್ ನವರು ಲೋನ್ ಸಹ ಕೊಡತ್ತಿದ್ದಾರೆ. ಇದೆಲ್ಲದರ ಜೊತೆಗೆ ಪ್ರತಿ ಅರ್ಧ ಗಂಟೆಗೊಮ್ಮೆ ಗ್ರಾಹಕರಿಗೆ ಲಕ್ಕಿ ಡೀಪ್ ಮೂಲಕ ಬಹುಮಾನ ಸಹ ನೀಡಲಾಗುತ್ತಿದೆ. ಗ್ರಾಹಕರನ್ನು ರಂಜಿಸಲು ಇಂದು ಅನೇಕ ಎಂಟರ್ಟೈನ್ಮೆಂಟ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv