Tag: ರಿಮೋಟ್

  • ಆಟವಾಡುತ್ತಾ ರಿಮೋಟ್ ಸೆಲ್ ನುಂಗಿ ಕಂದಮ್ಮ ಸಾವು

    ಆಟವಾಡುತ್ತಾ ರಿಮೋಟ್ ಸೆಲ್ ನುಂಗಿ ಕಂದಮ್ಮ ಸಾವು

    ಮೈಸೂರು: ರಿಮೋಟ್‍ಗೆ ಬಳಸುವ ಸೆಲ್ ನುಂಗಿ ಒಂದೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ಇಟ್ಟಿಗೆಗೂಡಿನಲ್ಲಿ ನಡೆದಿದೆ.

    ಹೇಮಂತ್ ಸ್ಕಂದಮಣಿರಾಜ್ ಮೃತ ದುರ್ದೈವಿ ಮಗು. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಹೇಮಂತ್ ಸೆಲ್ ನುಂಗಿದ್ದಾನೆ. ಕೂಡಲೇ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಜೊತೆಗಿನ ತನ್ನ ವಿಡಿಯೋ ಪೋರ್ನ್ ತಾಣದಲ್ಲಿ ನೋಡಿ ಬೆಚ್ಚಿಬಿದ್ದ

    ಪತ್ನಿ ಜೊತೆಗಿನ ತನ್ನ ವಿಡಿಯೋ ಪೋರ್ನ್ ತಾಣದಲ್ಲಿ ನೋಡಿ ಬೆಚ್ಚಿಬಿದ್ದ

    ನವದೆಹಲಿ: ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವಾಗ ತನ್ನ ಹೆಂಡತಿಯೊಂದಿಗೆ ಕಳೆದ ಬೆಡ್‍ರೂಂ ವಿಡಿಯೋ ಕಾಣಿಸಿದ್ದನ್ನು ನೋಡಿ ವ್ಯಕ್ತಿಯೊಬ್ಬ ದಂಗಾಗಿದ್ದಾನೆ.

    ಸೂರತ್ ಮೂಲದ ಮಹೇಶ್ ಬೆಡ್‍ರೂಂನ ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಒಂದು ದಿನ ತನ್ನ ಟಿವಿ ಆನ್ ಮಾಡಿ ನೋಡುತ್ತ ಕುಳಿತ್ತಿದ್ದಾನೆ. ಈ ವೇಳೆ ವಿಡಿಯೋಗಳನ್ನು ಸರ್ಚ್ ಮಾಡುತ್ತಿದ್ದಾಗ ವೆಬ್‍ಸೈಟ್ ಒಂದರಲ್ಲಿ ತಾನು ತನ್ನ ಹೆಂಡತಿಯೊಂದಿಗೆ ಕಳೆದ ಖಾಸಗಿ ವಿಡಿಯೋವನ್ನು ನೋಡಿ ದಂಗಾಗಿದ್ದಾನೆ.

    ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಈ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಆಗಿದ್ದು ಹೇಗೆ ಎಂದು ತಿಳಿದು ಚಿಂತಕ್ರಾಂತನಾಗಿದ್ದಾನೆ. ಪೊಲೀಸರಿಗೆ ದೂರು ನೀಡಿದರೆ ನಮ್ಮ ಕುಟುಂಬಕ್ಕೆ ಅವಮಾನವಾಗಬಹುದು ಎಂಬುದನ್ನು ತಿಳಿದು ಸೈಬರ್ ಸೆಕ್ಯೂರಿಟಿ ಹಾಗೂ ಸೈಬರ್ ಅಪರಾಧಗಳ ಕುರಿತು ಉತ್ತಮ ಜ್ಞಾನ ಹೊಂದಿರುವ ಕೆಲವು ಸೈಬರ್ ತಜ್ಞರನ್ನು ಸಂಪರ್ಕಿಸಿದ್ದಾನೆ.

    ಆಗ ಸೈಬರ್ ತಜ್ಞರು ಈ ವಿಡಿಯೋ ಸೆರೆ ಆಗಿದ್ದು ಹೇಗೆ ಎಂದು ತಿಳಿಯಲು ಬೆಡ್ ರೂಂನಲ್ಲಿ ಯಾರಾದರೂ ಹಿಡನ್ ಕ್ಯಾಮೆರಾಗಳನ್ನು ಇಟ್ಟಿದ್ದಾರೋ ಎನ್ನುವುದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹಿಡನ್ ಕ್ಯಾಮೆರಾ ಪತ್ತೆಯಾಗಿರಲಿಲ್ಲ. ಯಾವುದೇ ಕ್ಯಾಮೆರಾ ಇಲ್ಲದೇ ವಿಡಿಯೋ ಅಪ್ಲೋಡ್ ಆಗಿದ್ದು ಹೇಗೆ ಎನ್ನುವುದನ್ನು ತಿಳಿಯಲು ಸೈಬರ್ ತಜ್ಞರು ತುಂಬ ತಲೆಕೆಡಿಸಿಕೊಂಡಿದ್ದಾರೆ. ಕೊನೆಗೆ ಸೈಬರ್ ಸೆಕ್ಯೂರಿಟಿ ತಜ್ಞರು ಸ್ಮಾರ್ಟ್ ಟಿವಿಯನ್ನು ಪರಿಶೀಲಿಸಿದ್ದಾಗ ಟಿವಿಯನ್ನು ಹ್ಯಾಕ್ ಮಾಡಿದ ವಿಚಾರ ಗೊತ್ತಾಗಿದೆ.

    ಅಪ್ಲೋಡ್ ಆಗಿದ್ದು ಹೇಗೆ?
    ಸ್ಮಾರ್ಟ್ ಟಿವಿ ಪರಿಶೀಲಿಸಿದಾಗ ಮಹೇಶ್ ಪೋರ್ನ್ ತಾಣಗಳಿಗೆ ಭೇಟಿ ನೀಡುತ್ತಿದ್ದ ವಿಚಾರ ಗೊತ್ತಾಗಿದೆ. ಈ ವೇಳೆ ಒಂದು ತಾಣಕ್ಕೆ ಭೇಟಿ ನೀಡಿದಾಗ ಹ್ಯಾಕರ್‍ಗಳು ಟಿವಿಯನ್ನು ಹ್ಯಾಕ್ ಪ್ರವೇಶಿಸಿ ದೂರದಿಂದಲೇ ಅದರಲ್ಲಿರುವ ಬಿಲ್ಟ್ ಇನ್ ಕ್ಯಾಮೆರಾವನ್ನು ನಿಯಂತ್ರಿಸತೊಡಗಿದ್ದಾರೆ. ನಂತರ ಈ ಕ್ಯಾಮೆರಾದ ಮೂಲಕ ಬೆಡ್ ರೂಂ ಲೈವ್ ಫೀಡ್ ಪಡೆಯಲು ಆರಂಭಿಸಿದ್ದಾರೆ.

    ಟಿವಿಯಲ್ಲಿ ವೈಫೈ ಸೌಲಭ್ಯವಿದ್ದ ಕಾರಣ ರೆಕಾರ್ಡ್ ಆದ ದೃಶ್ಯ ಅಟೋಮ್ಯಾಟಿಕ್ ಆಗಿ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಆಗುತಿತ್ತು. ಆನ್‍ಲೈನ್ ನಲ್ಲಿ ಅಪ್ಲೋಡ್ ಆಗುತ್ತಿರುವ ವಿಚಾರ ಮಹೇಶ್ ಹಾಗೂ ಪತ್ನಿಯ ಗಮನಕ್ಕೆ ಬಾರದ ಕಾರಣ ವಿಡಿಯೋ ಪೋರ್ನ್ ತಾಣದಲ್ಲಿ ಅಪ್ಲೋಡ್ ಆಗಿತ್ತು.

    ರಾಜೇಶ್ ಸೆಕ್ಯೂರಿಟಿ ತಜ್ಞರ ಸಹಾಯದಿಂದ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಆಗಿದ್ದ ವಿಡಿಯೋವನ್ನು ತೆಗೆದು ಹಾಕಿದ್ದಾನೆ. ಆದರೂ ಈ ದೃಶ್ಯ ಈಗಾಗಲೇ ಹಲವು ತಾಣಗಳಲ್ಲಿ ಅಪ್ಲೋಡ್ ಆಗಿದೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

  • ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ.

    ಏನಿದು ಘಟನೆ?:
    ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ ಕುಳಿತು ಟಿವಿ ನೋಡುತ್ತಿದ್ದಳು. ಸ್ವಲ್ಪ ಹೊತ್ತು ಟಿವಿ ನೋಡಿದ ಅಣ್ಣ ಬಳಿಕ ಓದಲೆಂದು ತನ್ನ ಕೋಣೆಗೆ ತೆರಳಿದ್ದಾನೆ. ತಮ್ಮ ಟಿವಿ ನೋಡುತ್ತಾ ಅಪ್ಪ- ಅಮ್ಮನ ಬರುವಿಕೆಯನ್ನು ಕಾಯುತ್ತಿದ್ದನು.

    ಸಂಜೆ ಸುಮಾರು 5.5ರ ಸುಮಾರಿಗೆ ಬಾಲಕಿಯ ನೆಚ್ಚಿನ ಶೋ ಒಂದನ್ನು ನೋಡಲು ತಮ್ಮನ ಬಳಿ ರಿಮೋಟ್ ಕೇಳಿದ್ದಾಳೆ. ಆದ್ರೆ ಬಾಲಕ ರಿಮೋಟ್ ಕೊಡಲು ನಿರಾಕರಿಸಿದ್ದಾನೆ. ಶೋ 6 ಗಂಟೆಗೆ ಆರಂಭವಾಗುತ್ತದೆ ಎಂದಾಗ ಆಕೆ ಮತ್ತೆ ರಿಮೋಟ್ ಕೊಡುವಂತೆ ಕೇಳಿದ್ದಾಳೆ. ಆದ್ರೆ ಈ ವೇಳೆಯೂ ಆತ ತಾನು ಕೊಡಲ್ಲ ಅಂತ ಹೇಳಿ ತನ್ನ ಪಾಡಿಗೆ ತಾನು ಟಿವಿ ನೋಡುತ್ತಾ ಕುಳಿತಿದ್ದನು.

    ಇದರಿಂದ ಸಿಟ್ಟುಗೊಂಡ ಬಾಲಕಿ ತಮ್ಮನಿಗೆ ಸರಿಯಾಗಿ ಥಳಿಸಿ ನಂತರ ಬೆಡ್ ರೂಮಿಗೆ ತೆರಳಿ ಗಟ್ಟಿಯಾಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಅಕ್ಕ ತನಗೆ ಹೊಡೆದಿದ್ದನ್ನು ಲೆಕ್ಕಿಸದೆ ಕೂಡಲೇ ತಮ್ಮ ಅಲ್ಲಿಗೆ ತೆರಳಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾನೆ. ಹೀಗೆ ಸುಮಾರು ಹೊತ್ತು ಡೋರ್ ಓಪನ್ ಮಾಡುವಂತೆ ಕೇಳಿಕೊಂಡರೂ ಆಕೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದರಿಂದ ಗಾಬರಿಗೊಂಡ ತಮ್ಮ ನೇರವಾಗಿ ಅಣ್ಣನ ಬಳಿ ಹೋಗಿ ವಿಷಯ ತಿಳಿಸಿದ್ದಾನೆ.

    ತಕ್ಷಣವೇ ರೂಮಿನ ಬಳಿ ಬಂದ ಅಣ್ಣ ಬಾಗಿಲು ಒಡೆದಿದ್ದಾನೆ. ಈ ವೇಳೆ ತಂಗಿ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಳು. ಇದರಿಂದ ಗಾಬರಿಗೊಂಡ ಅಣ್ಣ ಹಾಗೂ ತಮ್ಮ ಸೇರಿ ಬಾಲಕಿಯನ್ನು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಇತ್ತ ನಡೆದ ಘಟನೆಯನ್ನು ಹೆತ್ತವರಿಗೂ ತಿಳಿಸಿದ್ದಾರೆ.

    ಆದ್ರೆ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv