ಅಂದುಕೊಂಡ ಆಗಿದ್ದರೆ ತಮಿಳಿನ ಖ್ಯಾತನಟ ಧನುಷ್ (Dhanush) ಅವರ ಅಸುರನ್ ಸಿನಿಮಾವನ್ನು ಶಿವರಾಜ್ ಕುಮಾರ್ (Shivraj Kumar) ಕನ್ನಡಕ್ಕೆ ಮಾಡಬೇಕಿತ್ತು. ಕನ್ನಡದಲ್ಲಿ ಅಸುರನ್ ರೀಮೇಕ್ ಆಗುತ್ತಿದೆ ಎನ್ನುವ ಸುದ್ದಿಯೂ ಹರಡಿತ್ತು. ಅದೆಲ್ಲವೂ ನಿಜವೂ ಆಗಿತ್ತು. ನಂತರ ಸಿನಿಮಾ ಆಗಲೇ ಇಲ್ಲ. ಕೋವಿಡ್ ಸೇರಿದಂತೆ ನಾನಾ ಕಾರಣದಿಂದಾಗಿ ಅಸುರನ್ ಕನ್ನಡಕ್ಕೆ ಬರಲಿಲ್ಲ. ಆದರೆ, ಶಿವರಾಜ್ ಕುಮಾರ್ ನಟನೆಯ ಟಗರು (Tagaru) ಸಿನಿಮಾ ತಮಿಳಿಗೆ ರಿಮೇಕ್ ಆಗತ್ತಾ? ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ.
ಶಿವರಾಜ್ ಕುಮಾರ್ ಮತ್ತು ಧನುಷ್ ಕಾಂಬಿನೇಷನ್ ನ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಹಾಗಾಗಿ ಶಿವರಾಜ್ ಕುಮಾರ್ ಅಲ್ಲಿನ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆವಾಗ ಅಸುರನ್ ಸಿನಿಮಾ ರಿಮೇಕ್ ಯಾಕೆ ಆಗಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಟಗರು ಸಿನಿಮಾವನ್ನು ಧನುಷ್ ರೀಮೇಕ್ ಮಾಡಿದರೆ, ಪಾತ್ರ ಅವರಿಗೆ ಒಪ್ಪುತ್ತದೆ ಎಂದಿದ್ದಾರೆ.
ಶಿವಣ್ಣ ಮತ್ತು ಧನುಷ್ ಕಾಂಬಿನೇಷನ್ ನ ಮಿಲ್ಲರ್ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಶಿವರಾಜ್ ಕುಮಾರ್ ಈ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಧನುಷ್ ಸಹೋದರನ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಏಳು ವರ್ಷಗಳ ಹಿಂದೆ ಕನ್ನಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಂಗಿತರಂಗ ಸಿನಿಮಾ ಇದೀಗ ಬಾಲಿವುಡ್ ಅಂಗಳ ತಲುಪಿದೆ. ನೂರು ಕೋಟಿಗೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾದ ಬಾಹುಬಲಿ ಸಿನಿಮಾದ ಜೊತೆ ಜೊತೆಯಾಗಿಯೇ ಬಿಡುಗಡೆಯಾದ ರಂಗಿತರಂಗ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಅನೂಪ್ ಭಂಡಾರಿ ನಿರ್ದೇಶಕನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ನಿರೂಪ್ ಭಂಡಾರಿ ಹೀರೋ ಆಗಿ ಲಾಂಚ್ ಆದರು. ಇದೀಗ ಈ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ.
ತನ್ನ ನಿರೂಪಣೆ ಮತ್ತು ಮೇಕಿಂಗ್ ಕಾರಣದಿಂದಾಗಿ ರಂಗಿತರಂಗಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಹೆಚ್ಚು ದುಡ್ಡು ಮಾಡಿತ್ತು. ಅಲ್ಲದೇ, ಹೊಸ ಪ್ರೇಕ್ಷಕರನ್ನು ಅದು ಹುಟ್ಟು ಹಾಕಿತ್ತು. ಈ ಸಿನಿಮಾದಿಂದ ಸ್ಯಾಂಡಲ್ ವುಡ್ ಗೆ ಪರಿಚಯವಾದ ಅನೂಪ್ ಭಂಡಾರಿ ಆನಂತರ ಹಲವು ಸಿನಿಮಾಗಳನ್ನು ಮಾಡಿದರು. ಇದೀಗ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರಕ್ಕೂ ಇವರೇ ನಿರ್ದೇಶಕರು. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್
ಈಗಾಗಲೇ ಮುಂಬೈನ ಕಾರ್ಪೊರೇಟ್ ಕಂಪನಿಯೊಂದಿ ರೀಮೇಕ್ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ನಿರೂಪ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳದೇ ಇದ್ದರೂ, ಹಿಂದಿ ರೈಟ್ಸ್ ವಿಚಾರವಾಗಿ ಅನೂಪ್ ಭಂಡಾರಿ ಖಚಿತತೆಯನ್ನು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಸಕ್ಸಸ್ ನಂತರ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಏನಾದರೂ ಹಿಂದಿಯಲ್ಲಿ ರಿಮೇಕ್ ಆದರೆ ನೀವು ನಟಿಸುತ್ತೀರಾ ಎಂಬ ಪ್ರಶ್ನೆಗೆ ನೋ ಎಂದಿದ್ದಾರೆ.
ನಾನು ಕಿರಿಕ್ ಪಾರ್ಟಿ ರಿಮೇಕ್‍ನಲ್ಲಿ ಖಂಡಿತಾ ನಟಿಸುವುದಿಲ್ಲ. ಒಂದು ಬಾರಿ ನಾನು ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಅನುಭವವನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದರಲ್ಲಿಯೇ ನಟಿಸಿದರೆ ಹೊಸತನ ನೀಡಲು ಸಾಧ್ಯವಿಲ್ಲ. ಹೊಸ ಕಥೆಗಳ ಮೂಲಕ ಹೊಸ ಅನುಭವ ಪಡೆಯುವ ಅವಕಾಶ ಇರುವಾಗ ಮತ್ತೆ ನಾನೇಕೆ ಹಳೇ ಪಾತ್ರದಲ್ಲಿ ನಟಿಸಲಿ. ಒಮ್ಮೆ ಆ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ನಾನು ಮುಂದುವರಿಯುತ್ತೇನೆ. ನಾನು ನನ್ನದೇ ಸಿನಿಮಾಗಳ ರಿಮೇಕ್‍ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್‍ನ ಪುಷ್ಪ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಮಜ್ನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ.
ಬೆಂಗಳೂರು: ತೆಲುಗಿನಿಂದ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಸಿನಿಮಾವೊಂದರಲ್ಲಿ ನಟಿ ಹರಿಪ್ರಿಯಾ ಮತ್ತು ನಟ ದೂತ್‍ಪೇಡ ದಿಗಂತ್ ನಟಿಸಲಿದ್ದಾರೆ.
ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ‘ಎವರು’ ಎಂಬ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದ್ದು, ಈ ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ದಿಗಂತ್ ಅವರು ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ.
ಈ ಸಿನಿಮಾ ತೆಲುಗಿನಲ್ಲಿ 2019ರಲ್ಲಿ ತೆರೆಕಂಡಿತ್ತು. ಅಲ್ಲಿ ನಟಿ ರೆಜಿನಾ ಕಸ್ಸಂದ್ರ ಮತ್ತು ನಟ ಅದ್ವಿ ಶೇಷ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಲು ಈ ಇಬ್ಬರ ಅಭಿನಯವೂ ಕಾರಣವಾಗಿತ್ತು. ಈ ಸಿನಿಮಾವನ್ನು ತೆಲುಗಿನಲ್ಲಿ ಮಧು ಮೋಹನ್ ಅವರು ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ರೆಜಿನಾ ಅವರ ಪಾತ್ರವನ್ನು ಹರಿಪ್ರಿಯಾ ಮಾಡಲಿದ್ದು, ಅದ್ವಿ ಶೇಷ್ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಅಶೋಕ್ ಅಲ್ಲೆ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
2020ರ ಆರಂಭದಲ್ಲೇ ಈ ಸಿನಿಮಾದ ಚಿತ್ರೀಕರಣ ಆರಂಭ ಮಾಡಲು ಸಿನಿಮಾ ತಂಡ ಯೋಜನೆ ರೂಪಿಸಿತ್ತು. ಆದರೆ ಅಷ್ಟರಲ್ಲಿ ಕೊರೊನಾ ಲಾಕ್‍ಡೌನ್ ಆದ ಕಾರಣ ಚಿತ್ರೀಕರಣ ಮಾಡುವ ಪ್ಲಾನ್ ಅನ್ನು ಕೈಬಿಡಲಾಗಿತ್ತು. ಈಗ ಮತ್ತೆ ಶೂಟಿಂಗ್ ಆರಂಭವಾಗಿದ್ದು, ಈಗಾಗಲೇ ಚಿತ್ರತಂಡ ಹೈದರಾಬಾದಿನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಅಲ್ಲೇ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದೆ.
ಇಂಗ್ಲಿಷ್ ರಿಮೇಕ್ ಎವರು
ಎವರು ಸಿನಿಮಾ ಕೂಡ ಇಂಗ್ಲಿಷಿನ ‘ದಿ ಇನ್ವಿಸಿಬಲ್ ಗೆಸ್ಟ್’ ಎಂಬ ಸಿನಿಮಾದ ರಿಮೇಕ್ ಆಗಿದೆ. ಆದರೆ ಇದೇ ಸಿನಿಮಾದ ಕಥೆಯನ್ನು ನಿರ್ದೇಶಕ ಮಧು ಮೋಹನ್ ಅವರು ತೆಲಗು ಚಿತ್ರರಂಗಕ್ಕೆ ಇಲ್ಲಿನ ಪ್ರೇಕ್ಷಕರಿಗೆ ಬೇಕಾಗುವ ರೀತಿಯಲ್ಲಿ ಮಾರ್ಪಡು ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಥೆ ಬಹಳ ಸಸ್ಪೆನ್ಸ್ ಕ್ರಿಯೇಟ್ ಮಾಡುತ್ತೆ. ತಂದೆಯನ್ನು ಕೊಂದವರನ್ನು ಓರ್ವ ರೋಗಿಷ್ಟ ಮಗ ಕಂಡು ಹಿಡಿಯುವುದೇ ಈ ಸಿನಿಮಾದ ಮುಖ್ಯ ಕಥೆಯಾಗಿದೆ.
ಬೆಂಗಳೂರು: ನನಗೆ ಆ ಪಾತ್ರವನ್ನು ಮಾಡಲು ಆಗಲ್ಲ ಎಂದು ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಆಫರ್‍ವೊಂದನ್ನು ತಿರಸ್ಕರಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು, ತೆಲುಗಿನ ಜೆರ್ಸಿ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ಅಭಿನಯಿಸಲಿದ್ದಾರೆ. ಈ ಮೂಲಕ ಕೊಡಗಿನ ಬೆಡಗಿ ಬಾಲಿವುಡ್‍ಗೆ ಹಾರಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದರ ಜೊತೆಗೆ ಬಾಲಿವುಡ್‍ಗೆ ಹೋಗಲು ರಶ್ಮಿಕಾ ಸೌತ್ ಸಿನಿಮಾರಂಗದ ಹಲವಾರು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಕೂಡ ಹೇಳಲಾಗಿತ್ತು.
ಈಗ ಹಿಂದಿಗೆ ರಿಮೇಕ್ ಆಗುತ್ತಿರುವ ಜೆರ್ಸಿ ಸಿನಿಮಾದ ಕಲಾವಿದರ ಮತ್ತು ತಂತ್ರಜ್ಞರ ಹೆಸರನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆದರೆ ಚಿತ್ರತಂಡ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಕಂಡುಬಂದಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಂದಣ್ಣ, ಆ ಸಿನಿಮಾದಿಂದ ಅವರು ನನ್ನನ್ನು ಕೈಬಿಡಲಿಲ್ಲ. ನಾನೇ ಆ ಪಾತ್ರ ಮಾಡಲು ಆಗಲ್ಲ ಎಂದು ಹಿಂದೆ ಸರಿದೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ, ಜೆರ್ಸಿಯಂತಹ ಸಿನಿಮಾದ ರಿಮೇಕ್‍ನಲ್ಲಿ ಅಭಿನಯಿಸುವುದು ಸುಲಭವಲ್ಲ. ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇವೆ ಎಂದರೆ, ಆ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ನನ್ನಿಂದ ಆ ಪಾತ್ರಕ್ಕೆ ಜೀವ ತುಂಬಲು ಆಗುವುದಿಲ್ಲ ಅಂದರೆ ನಾನು ಆ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಬ್ಯುಸಿ ಇರುವ ರಶ್ಮಿಕಾ, ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲು ಆಗಲ್ಲ ಎಂದು ಹೇಳಿರುವುದು ವಿಶೇಷವಾಗಿದೆ. ಜೊತೆಗೆ ಜೆರ್ಸಿ ಹಿಂದಿ ರಿಮೇಕ್‍ನಲ್ಲಿ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರು ಅಭಿನಯಿಸುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ರಶ್ಮಿಕಾ ಆ ಪಾತ್ರಕ್ಕಾಗಿ ಎನರ್ಜಿ ತುಂಬುವ ಉತ್ತಮ ನಟಿಯನ್ನು ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.
2019ರಲ್ಲಿ ಬಿಡುಗಡೆಯಾದ ತೆಲುಗಿನ ಜೆರ್ಸಿ ಸಿನಿಮಾದಲ್ಲಿ ನಾನಿ ಮತ್ತು ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಅಭಿನಯಿಸಿದ್ದರು. 2019ರ ಏಪ್ರಿಲ್‍ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರ 10 ವರ್ಷದ ನಂತರ ಬ್ಯಾಟ್ ಹಿಡಿದು ತನ್ನ ಮಗನಿಗಾಗಿ ಇಂಡಿಯಾ ಕ್ರಿಕೆಟ್‍ಗೆ ಆಯ್ಕೆಯಾಗುವುದೇ ಸಿನಿಮಾ ಮುಖ್ಯ ಕಥೆ. ಇದರ ಜೊತೆ ಪ್ರೀತಿ, ವೈಫಲ್ಯಗಳ ಮಧ್ಯೆ ಜೀವನದಲ್ಲಿ ಗೆಲ್ಲುವುದಕ್ಕೆ ಸ್ಫೂರ್ತಿ ಯಾವುದು ಎಂಬದನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಲಾಗಿತ್ತು.
ಬೆಂಗಳೂರು: ಪೊಗರು ಸಿನಿಮಾದಲ್ಲಿ ನಿರತರಾಗಿರುವ ಧ್ರುವ ಸರ್ಜಾ ಅವರು, ಈ ಸಿನಿಮಾದ ನಂತರ ರಿಮೇಕ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಹೌದು ಧ್ರುವ ಸರ್ಜಾ ಅವರು ಸದ್ಯ ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿಸಿ ಮುಂದಿನ ತಿಂಗಳು ಅಂದರೆ ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಮಧ್ಯದಲ್ಲಿ ಧ್ರುವ ಅವರ ಮುಂದಿನ ಸಿನಿಮಾದ ತಯಾರಿ ಜೋರಾಗಿ ನಡೆಯುತ್ತಿದೆ.
ಧ್ರುವ ಸರ್ಜಾ ಅವರು ಇಲ್ಲಿಯವರೆಗೂ ಅಭಿನಯಿಸಿದ ನಾಲ್ಕು ಸಿನಿಮಾಗಳು ಕೂಡ ಸ್ವಮೇಕ್ ಸಿನಿಮಾಗಳಾಗಿದ್ದವು. ಆದರೆ ಧ್ರುವ ಅವರು ತಮ್ಮ ಮುಂದಿನ ಸಿನಿಮಾವನ್ನು ತೆಲುಗಿನ ಕನ್ನಡ ರಿಮೇಕ್ ನಲ್ಲಿ ಅಭಿನಯಿಸಿಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಕೂಡ ನಂದ ಕಿಶೋರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಆಗದಿದ್ದರೂ ಚಿತ್ರದ ಮಾತುಕತೆ ಈಗಾಗಲೇ ಮುಗಿದಿದೆ ಎನ್ನಲಾಗಿದೆ.
ಈ ಚಿತ್ರವನ್ನು ಕನ್ನಡದಲ್ಲಿ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ನಿರ್ಮಾಣ ಮಾಡಿದ್ದ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ, ಧ್ರುವ ಅವರ ಮುಂದಿನ ರೀಮೇಕ್ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ತೆಲುಗಿನಲ್ಲಿ ‘ನಿನ್ನು ಕೋರಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಈ ಚಿತ್ರ ಅಲ್ಲಿ ಹಿಟ್ ಆಗಿತ್ತು. ಈ ಸಿನಿಮಾವನ್ನೇ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದರಾ? ಎಂಬ ಪ್ರಶ್ನೆ ಕೂಡ ಮೂಡಿದೆ.
ಅಭಿನಯಿಸಿದ ನಾಲ್ಕೇ ಚಿತ್ರದಲ್ಲಿ ದೊಡ್ಡ ಸೂಪರ್ ಸ್ಟಾರ್ ಆದ ಧ್ರುವ ತನ್ನದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇತ್ತೀಚೆಗೆ ಮದುವೆಯಾಗಿದ್ದ ಧ್ರುವ ಅವರು ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಬಿಗ್‍ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಬೆಂಗಳೂರು: ಕನ್ನಡ ಕಂಪಿನ ಅಚ್ಚಕನ್ನಡದ ‘ರಾಜು ಕನ್ನಡ ಮೀಡಿಯಂ’ ಸಿನಿಮಾ ಈಗ ಬಾಲಿವುಡ್ ಬೆಳ್ಳಿಪರದೆಗೆ ರಿಮೇಕ್ ಆಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಹಿಂದಿ ವರ್ಷನ್‍ನಲ್ಲಿ ಬಿಟೌನ್ ದಂಗಲ್ ಸ್ಟಾರ್ ಅಮೀರ್ ಖಾನ್ ಬಣ್ಣಹಚ್ಚೋ ಸಾಧ್ಯತೆಗಳಿವೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.
ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್‍ನಲ್ಲಿ ಸಿನಿಮಾ ಮಾಡಿದ್ರೆ ಹಾಕಿದ ಬಂಡವಾಳ ವಾಪಸ್ ಬರಲ್ಲ ಎಂಬ ಮಾತುಗಳಿಗೆ ಕನ್ನಡದ ರಾಜು ಉತ್ತರ ಕೊಟ್ಟಿದ್ದಾನೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡದ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಬರೆಯುತ್ತಿವೆ. ದಾಖಲೆ ಬರೆಯುವುದರ ಜೊತೆಗೆ ಪರಭಾಷೆಯ ಫಿಲ್ಮ್ ಮೇಕರ್ಸ್ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತಿವೆ.
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಕನ್ನಡಿಗರನ್ನು ಮಾತ್ರವಲ್ಲ ತೆಲುಗು, ತಮಿಳು ಮೂವಿ ಮೇಕರ್ಸ್ ಮೆಚ್ಚುವಂತೆ ಮೂಡಿಬಂದಿತ್ತು. ಶುಕ್ರವಾರ ಭರ್ಜರಿ ಓಪನಿಂಗ್ ಪಡೆದುಕೊಂಡ ನರೇಶ್ ಸಾರಥ್ಯದ ರಾಜು ಕನ್ನಡ ಮೀಡಿಯಂ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ರಾಜು ಕಥೆ ಸಕ್ಸಸ್ ಆಯ್ತು ಅನ್ನೋ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಬಿಟೌನ್‍ನ ಅಮೀರ್ ಖಾನ್ ನಿರ್ಮಾಣ ಸಂಸ್ಥೆಯ ಸದಸ್ಯರು ರಾಜು ಕನ್ನಡ ಮೀಡಿಯಂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಈಗಾಗಲೇ ಅಮೀರ್ ಖಾನ್ ಚಿತ್ರ ಸಂಸ್ಥೆ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ ಎನ್ನಲಾಗಿದೆ. ಅಮೀರ್ ಆಪ್ತ ಸಲಹೆಗಾರ ವರುಣ್ ಓಕೆ ಮಾಡಿದ್ರೆ ರಾಜು ಬಾಲಿವುಡ್‍ಗೆ ಹಾರೋದು ಕನ್ಫರ್ಮ್ ಆಗಲಿದೆ. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಮಾಡಿರೋ ಪಾತ್ರವನ್ನ ಅಮೀರ್ ಖಾನ್ ಮಾಡ್ತಾರೆ ಅನ್ನೋ ಸುಳಿವು ಕೂಡ ಸಿಕ್ಕಿದೆ.