Tag: ರಿತೇಶ್ ದೇಶಮುಖ್

  • ಅದ್ಭುತ ಭಾರತೀಯ ಚಿತ್ರ, ಅಭಿನಯವು ಪೀಳಿಗೆಗೆ ಸ್ಫೂರ್ತಿ: ರಿಷಬ್‌ ನಟನೆಗೆ ರಿತೇಶ್ ದೇಶಮುಖ್ ಚಪ್ಪಾಳೆ

    ಅದ್ಭುತ ಭಾರತೀಯ ಚಿತ್ರ, ಅಭಿನಯವು ಪೀಳಿಗೆಗೆ ಸ್ಫೂರ್ತಿ: ರಿಷಬ್‌ ನಟನೆಗೆ ರಿತೇಶ್ ದೇಶಮುಖ್ ಚಪ್ಪಾಳೆ

    ಕಾಂತಾರ: ಚಾಪ್ಟರ್‌ 1 (Kantara: Chapter 1) ಚಿತ್ರವನ್ನು ಬಾಲಿವುಡ್‌ (Bollywood) ಮಂದಿ ಒಪ್ಪಿ ಅಪ್ಪಿಕೊಂಡಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆಯಾಗಿ ರಿತೇಶ್ ದೇಶಮುಖ್ (Riteish Deshmukh) ರಿಷಬ್‌ ಶೆಟ್ಟಿ ಅವರನ್ನು ಈಗ ಹಾಡಿ ಹೊಗಳಿದ್ದಾರೆ.

    IMAX ನಲ್ಲಿ ರಿತೇಶ್ ದೇಶಮುಖ್ ಸಿನಿಮಾ ವೀಕ್ಷಿಸಿ ಕಾಂತಾರಕ್ಕೆ ಮೆಚ್ಚುಗೆ ಚಪ್ಪಾಳೆ ತಟ್ಟಿ ಸಿನಿಮಾ ತಂಡವನ್ನು ಅಭಿನಂದಿಸಿದ್ದಾರೆ.  ಇದನ್ನೂ ಓದಿ:  ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

    ರಿತೇಶ್‌ ಹೇಳಿದ್ದೇನು?
    ಕಾಂತಾರವನ್ನು IMAX ನಲ್ಲಿ ನೋಡಿದ್ದು ನಿಜಕ್ಕೂ ಒಂದು ಅದ್ಭುತ ಭಾರತೀಯ ಚಲನಚಿತ್ರ ವೀಕ್ಷಣೆಯ ಅನುಭವವಾಗಿತ್ತು. ನಟ, ಬರಹಗಾರ ಮತ್ತು ನಿರ್ದೇಶಕರಾಗಿರುವ ರಿಷಬ್‌ (Rishab Shetty) ನೀವೊಬ್ಬ ಅದ್ಭುತ ವ್ಯಕ್ತಿ. ನಿಮ್ಮ ಅಭಿನಯವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಉನ್ನತ ದರ್ಜೆಯ vfx, ಆಕ್ಷನ್, ಅತ್ಯುತ್ತಮ ಛಾಯಾಗ್ರಹಣ, ರೋಮಾಂಚಕ BGM, ಧ್ವನಿ ವಿನ್ಯಾಸ, ನಿರ್ಮಾಣ ಎಲ್ಲವೂ ಅತ್ಯುತ್ತಮವಾಗಿದೆ.

    ರುಕ್ಮಿಣಿ ವಸಂತ್‌ ಉತ್ತಮ ನಟಿ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಗುಲ್ಶನ್‌ ದೇವಯ್ಯ ನಿಮ್ಮ ದುಷ್ಟ ವ್ಯಕ್ತಿತ್ವದ ಅಭಿನಯ ಅಮಲೇರಿಸುವಷ್ಟು ಅದ್ಭುತವಾಗಿತ್ತು. ಈ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಕಾರಣರಾದ ಹೊಂಬಾಳೆ ಫಿಲ್ಮ್‌ನವರಿಗೆ ಅಭಿನಂದನೆಗಳು. ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದು ಶ್ಲಾಘಿಸಿದ್ದಾರೆ.

  • ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಅಕ್ಷಯ್ ಕುಮಾರ್ (Akshay Kumar), ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಬಾಲಿವುಡ್‌ ಹಲವು ತಾರೆಯರನ್ನೊಳಗೊಂಡ ʻಹೌಸ್‌ಫುಲ್‌-5ʼ (Housefull 5) ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಜೂನ್‌ 6ರಂದು ತೆರೆ ಕಂಡ ಈ ಚಿತ್ರ 8 ದಿನಗಳಲ್ಲೇ ನೂರು ಕೋಟಿಯ ಕ್ಲಬ್‌ ಸೇರಿದೆ.

    ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ (Riteish Deshmukh) ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಜೂನ್‌ 6ರಂದು ತೆರೆ ಕಂಡಿತ್ತು. ಮೊದಲ ದಿನವೇ 24 ಕೋಟಿ ಗಳಿಕೆಯೊಂದಿಗೆ ಕುಂಟುತ್ತಾ ಸಾಗಿರುವ ʻಹೌಸ್‌ಫುಲ್‌ 5ʼ ಚಿತ್ರ ಕೊನೆಗೂ ನೂರು ಕೋಟಿ ಕ್ಲಬ್‌ ಸೇರಿದೆ. 8ನೇ ದಿನ 6 ಕೋಟಿ ಗಳಿಕೆಯೊಂದಿಗೆ ವಿಶ್ವಾದ್ಯಂತ ಒಟ್ಟು 200 ಕೋಟಿ ರೂ. ಗಳಿಸಿದೆ.

    8ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ
    ಈ ಹಿಂದೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದ್ರೆ.. ಹಣೆಬರಹಕ್ಕೆ ಹೊಣೆ ಯಾರು? ಅನ್ನುವಂತೆ ಕೆಲ ವರ್ಷಗಳಿಂದ ಅದೃಷ್ಟ ಕೈ ಕೊಟ್ಟಿದೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದ್ರೂ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.

    ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್‌ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಆದ್ರೆ ಭಾರೀ ನಿರೀಕ್ಷೆ ಮೂಡಿಸಿದ್ದ ಹೌಸ್‌ಫುಲ್ ಚಿತ್ರದ ಕಲೆಕ್ಷನ್‌ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮೊದಲ ವಾರದಲ್ಲಿ 127.25 ಕೋಟಿ ಗಳಿಸಿದ್ದ ʻಹೌಸ್‌ಫುಲ್‌ 5ʼ 2ನೇ ವಾರದ ಮೊದಲ ಕೇವಲ 6.07 ಕೋಟಿ ರೂ. ಗಳಿಸಿ ಭಾರೀ ನಿರಾಸೆ ಮೂಡಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಗೆ 133.32 ಕೋಟಿಗೆ ತಲುಪಿದೆ.

    ʻಹೌಸ್‌ಫುಲ್‌ 5ʼ ಯಾವ ದಿನ ಎಷ್ಟು ಕಲೆಕ್ಷನ್‌?
    – ಮೊದಲ ದಿನ – 24 ಕೋಟಿ ರೂ.
    – ಎರಡನೇ ದಿನ – 31 ಕೋಟಿ ರೂ.
    – ಮೂರನೇ ದಿನ – 32.5 ಕೋಟಿ ರೂ.
    – ನಾಲ್ಕನೇ ದಿನ – 13 ಕೋಟಿ ರೂ.
    – ಐದನೇ ದಿನ – 11.25 ಕೋಟಿ ರೂ.
    – ಆರನೇ ದಿನ – 8.5 ಕೋಟಿ ರೂ.
    – ಏಳನೇ ದಿನ – 7 ಕೋಟಿ ರೂ.
    – ಎಂಟನೇ ದಿನ – 6 ಕೋಟಿ ರೂ.
    ಒಟ್ಟು – 133.25 ಕೋಟಿ

    ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಆದರೀಗ ಕುಂಟುತ್ತಾ ಸಾಗಿರುವ 5ನೇ ಸರಣಿ 2ನೇ ವಾರದಲ್ಲಾದರೂ ಹಿಟ್‌ ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

  • ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್

    ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್

    ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ (Housefull 5) ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಅಕ್ಷಯ್ ಕುಮಾರ್, ರಿತೇಶ್, ಅಭಿಷೇಕ್ ಬಚ್ಚನ್ ಕಾಮಿಡಿ ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ‘ಹೌಸ್‌ಫುಲ್ 5’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್‌ ಫೋಟೋ ಹಂಚಿಕೊಂಡ ಮೇಘನಾ

    ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಈಗ ‘ಹೌಸ್‌ಫುಲ್ 5’ ಚಿತ್ರದ ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಮಲ್ಟಿ ಸ್ಟಾರ್‌ಗಳು ಸಿನಿಮಾದಲ್ಲಿ ನಟಿಸಿದ್ದು, ಟೀಸರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್

    ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಜಾಕ್ವೆಲಿನ್, ಸೋನಮ್ ಬಾಜ್ವಾ, ಫರ್ಧಿನ್ ಖಾನ್, ಶ್ರೇಯಸ್ ತಲ್ಪಡೆ, ಚಂಪಿ ಪಾಂಡೆ, ಜಾನಿ ಲಿವರ್, ಸಂಜಯ್ ದತ್, ಜಾಕಿ ಶ್ರಾಫ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೌಟುಂಬಿಕ ಸಿನಿಮಾ ಇದಾಗಿದ್ದು, ಕಾಮಿಡಿ ಜೊತೆ ಕ್ರೈಮ್‌ ಕಥೆಯು ಒಳಗೊಂಡಿದೆ. ಜೂನ್ 6ರಂದು ಸಿನಿಮಾ ರಿಲೀಸ್ ಆಗಲಿದೆ. ತರುಣ್ ಮನ್ಸುಖಾನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಅಂದಹಾಗೆ, 2010ರಲ್ಲಿ ‘ಹೌಸ್‌ಫುಲ್‌ 1’ ಮೊದಲ ಸರಣಿ ರಿಲೀಸ್‌ ಆಗಿತ್ತು. 5 ಸಿರೀಸ್‌ಗಳಲ್ಲಿ ಈ ಚಿತ್ರ ಬರುವ ಮೂಲಕ 15 ವರ್ಷಗಳಿಂದ ಚಿತ್ರತಂಡ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಾಗಾದ್ರೆ ಈ ಬಾರಿಯೂ ‘ಹೌಸ್‌ಫುಲ್‌ 5’ ಚಿತ್ರ ಸಕ್ಸಸ್‌ ಕಾಣುತ್ತಾ? ಎಂದು ಕಾದುನೋಡಬೇಕಿದೆ.

  • ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ಅನೇಕ ಸ್ಟಾರ್ ನಟರಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಕರಣ್ ಜೋಹಾರ್ (Karan Johar) ಅವರದ್ದು. ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಹುತೇಕ ನಟರಿಗೆ ಕರಣ್ ಸಿನಿಮಾ ಮಾಡಿದ್ದಾರೆ. ಅದರಲ್ಲೂ ಕರಣ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬಾರದೇ ಇರುವ  ನಟ ನಟಿಯರೇ ಇಲ್ಲ. ಬಾಲಿವುಡ್ ಬಗ್ಗೆ ಆಳ ಅಗಲ ಗೊತ್ತಿರುವ ಕರಣ್, ಇಡೀ ಬಾಲಿವುಡ್ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಆ ಹೇಳಿಕೆ ಇದೀಗ ಬಾಲಿವುಡ್ ನಲ್ಲಿ ಬೆಂಕಿ ಹಚ್ಚಿದೆ.

    ಖಾಸಗಿ ವಾಹಿನಿಯೊಂದರ ಟಾಕ್ ಶೋನಲ್ಲಿ ಮಾತನಾಡಿರುವ ಕರಣ್ ಜೋಹಾರ್, ಬಾಲಿವುಡ್ (Bollywood,) ನಲ್ಲಿ ಹೇಳಿಕೊಳ್ಳುವಂತಹ ಮತ್ತು ಟ್ಯಾಲೆಂಟ್ (Talent) ಇರುವಂತಹ ನಟ ಯಾರೂ ಇಲ್ಲ ಎಂದು ಹೇಳುವ ಮೂಲಕ ಸ್ವತಃ ನಿರೂಪಕರನ್ನೇ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕ ದಕ್ಷಿಣದ ತಾರೆಯರನ್ನು ಪರೋಕ್ಷವಾಗಿ ಹೊಗಳಿದ್ದಾರೆ. ಅಲ್ಲಿಗೆ ಮತ್ತೊಂದು ಸುತ್ತಿನ ದಕ್ಷಿಣ ಮತ್ತು ಬಾಲಿವುಡ್ ತಾರೆಯರ ವಾರ್ ಶುರುವಾಗುತ್ತಾ ಕಾದು ನೋಡಬೇಕು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಆ ಶೋವನ್ನು ರಿತೇಶ್ ದೇಶಮುಖ (Riteish Deshmukh) ನಡೆಸಿಕೊಡುತ್ತಿದ್ದು, ಅತಿಥಿಯಾಗಿ ಕರಣ್ ಜೋಹಾರ್ ಬಂದಿದ್ದರು. ‘ನೀವು ನಟನನ್ನು ಆಯ್ಕೆ ಮಾಡಿಕೊಳ್ಳುವಾಗ ಲುಕ್‍ಗೆ ಆದ್ಯತೆ ಕೊಡುತ್ತೀರಾ? ಅಥವಾ ಮತ್ತೇನಾದರೂ ನೋಡುತ್ತೀರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಲುಕ್ ಜೊತೆ ಟ್ಯಾಲೆಂಟ್ ಕೂಡ ನೋಡುತ್ತೇನೆ. ಆದರೆ, ಈವರೆಗೂ ನನಗೆ ಟ್ಯಾಲೆಂಟ್ ಸಿಕ್ಕಿಲ್ಲ ಎಂದು ಉತ್ತರಿಸಿದ್ದಾರೆ. ಕರಣ್ ಅವರ ಈ ಉತ್ತರ ಇದೀಗ ಹಲವರ ಕಂಗೆಣ್ಣಿಗೆ ಗುರಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅವಘಡಕ್ಕೂ ಮುನ್ನ ಎದ್ದೇಳಿ – ಹೈದರಾಬಾದ್ ಏರ್ ಪೋರ್ಟ್ ವಿರುದ್ಧ ರಿತೇಶ್ ಆಕ್ರೋಶ

    ಅವಘಡಕ್ಕೂ ಮುನ್ನ ಎದ್ದೇಳಿ – ಹೈದರಾಬಾದ್ ಏರ್ ಪೋರ್ಟ್ ವಿರುದ್ಧ ರಿತೇಶ್ ಆಕ್ರೋಶ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಹೈದರಾಬಾದ್ ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿ ಅವಘಡಕ್ಕೂ ಮುನ್ನ ಎದ್ದೇಳಿ ಎಂದು ಟ್ವೀಟ್ ಮಾಡಿದ್ದಾರೆ.

    ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಾಂಜ್ ನ ಎಮೆರ್ಜಿನ್ಸಿ ಗೇಟ್ ಲಾಕ್ ಆಗಿರುವ ವಿಡಿಯೋವನ್ನು ರಿತೇಶ್ ದೇಶಮುಖ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಏರ್ ಪೋರ್ಟ್ ನಲ್ಲಿ ವೇಟಿಂಗ್ ಲಾಂಜ್ ಕೋಣೆಗೆ ಪ್ರವೇಶಿಲು ಮತ್ತು ನಿರ್ಗಮಿಸಲು ಎಲಿವೇಟರ್ ಒಂದೇ ಮಾರ್ಗವಾಗಿದೆ. ಪಕ್ಕದಲ್ಲಿರುವ ಎಮರ್ಜಿನ್ಸಿ ಗೇಟ್‍ಗೆ ಚೈನ್ ನಿಂದ ಲಾಕ್ ಮಾಡಲಾಗಿದೆ.

    ಟ್ವೀಟ್ ನಲ್ಲಿ ಏನಿದೆ?
    ನಾನು ಇದೀಗ ಹೈದರಾಬಾದ್ ಏರ್ ಪೋರ್ಟ್ ನ ವೇಟಿಂಗ್ ಲಾಂಜ್ ನಲ್ಲಿದ್ದೇನೆ. ಈ ನಿರೀಕ್ಷಣಾ ಕೊಠಡಿಗೆ ತೆರಳಲು ಮತ್ತು ನಿರ್ಗಮಿಸಲು ಒಂದೇ ಎಲಿವೇಟರ್ ಇದೆ. ದಿಢೀರ್ ಅಂತಾ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇರುವ ಒಂದು ಮಾರ್ಗ ಬಂದ್ ಆಗಿತ್ತು. ಎಮರ್ಜಿನ್ಸಿ ಗೇಟ್‍ನ್ನು ಚೈನ್ ನಿಂದ ಲಾಕ್ ಮಾಡಲಾಗಿದೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದ್ರೆ ಮುಂದೆ ನಡೆಯುವ ಅನಾಹುತಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

    ನಿರೀಕ್ಷಣಾ ಕೊಠಡಿಯ ಎಲಿವೇಟರ್ ನಿಂತಿದ್ದರಿಂದ ಪ್ರಯಾಣಿಕರು ತುರ್ತು ನಿರ್ಗಮನದ ಬಾಗಿಲು ತೆರೆಯುವಂತೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ವಿಮಾನ ಟೇಕ್ ಆಫ್ ಆಗುತ್ತಿದ್ದು, ಡೋರ್ ತೆರೆಯಿರಿ ಎಂದರೂ ಸಿಬ್ಬಂದಿ ಬಾಗಿಲು ತೆಗೆದಿಲ್ಲ. ಎಮರ್ಜಿನ್ಸಿ ವೇಳೆಯಲ್ಲಿ ಬಾಗಿಲು ತೆಗೆಯದೇ ಇದ್ದರೆ ಹೇಗೆ? ಅನಾಹುತಕ್ಕೂ ಮುನ್ನ ಹೈದರಾಬಾದ್ ಏರ್ ಪೋರ್ಟ್ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

    ರಿತೇಶ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ಏರ್ ಪೋರ್ಟ್, ಸೇವೆಯಲ್ಲಿ ತೊಂದರೆಯಾಗಿದ್ದಕ್ಕೆ ವಿಷಾದಿಸುತ್ತೇವೆ. ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಸಮಸ್ಯೆಯನ್ನ ಪರಿಹರಿಸಲಾಗಿದೆ. ನಮ್ಮ ಏರ್ ಪೋರ್ಟ್ ಟರ್ಮಿನಲ್ ಗಳು ಸುರಕ್ಷತೆಗೆ ಅನುಗುಣವಾಗಿರುತ್ತವೆ. ಒಂದು ವೇಳೆ ತುರ್ತು ಸಮಯದಲ್ಲಿ ಪ್ರಯಾಣಿಕರು ಗ್ಲಾಸ್ ಒಡೆದು ಹೊರಗೆ ಬರಬಹುದು. ನಾವು ಪ್ರಯಾಣಿಕರ ಸುರಕ್ಷತೆಗೆ ಮೊದಲ ಅದ್ಯತೆಯನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿ ಉತ್ತರಿಸಿದೆ.